ಜ್ಯೂವೆಲರಿ ಮತ್ತು ಡ್ರೆಸ್‌ನ ಫ್ಯಾಷನ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದರಲ್ಲೂ ಮುಖ್ಯವಗಿ ವೆಡ್ಡಿಂಗ್ ಜ್ಯೂವೆಲರಿ ಮತ್ತು ಡ್ರೆಸ್ ಕುರಿತಾಗಿ ಹೇಳುವಾಗ, ಡಿಸೈನರ್ಸ್ ದಿನೆ ದಿನೇ ಹೊಸ ಹೊಸ ಡಿಸೈನ್ಸ್ ಪ್ರಸ್ತುತ ಪಡಿಸುತ್ತಾರೆ. ಫ್ಯಾಷನ್ ಡಿಸೈನರ್ ಅನಿತಾ ಡೋಂಗ್ರೆ ಹೇಳುತ್ತಾರೆ, ನಾನು ಸಾಂಪ್ರದಾಯಿಕ, ಅತ್ಯಾಧುನಿಕ ಮತ್ತು ಎಲಿಗೆಂಟ್ ಡ್ರೆಸೆಸ್ ಡಿಸೈನ್ ಮಾಡುತ್ತೇನೆ. ಇದರಲ್ಲಿ ಮುಖ್ಯವಾಗಿ ಎಂಬ್ರಾಯಿಡರಿ ಮತ್ತು ಗೋಟಾ ಪತ್ತಿ ಕಸೂತಿ ಇರುತ್ತವೆ. ಈ ಉಡುಗೆಗಳು ಟೈಲೆಂಸ್ ಎನಿಸಿವೆ. ಹೀಗಾಗಿ ಮದುವೆಯ ನಂತರ ಹುಡುಗಿಯರು ಅದನ್ನು ಧರಿಸಬಹುದು.
ಆದರೆ ಇಂಥ ಟೈಲೆಂಸ್ ಉಡುಗೆಗಳ ಜೊತೆ ಜ್ಯೂವೆಲರಿ ಹೇಗಿರಬೇಕು ಎಂದರೆ, ಅದರ ಫ್ಯಾಷನ್ ಸದಾ ಎವರ್ ಗ್ರೀನ್ ಆಗಿರಬೇಕು. ಹೀಗಾಗಿ ಅನಿತಾ ಹೇಳುತ್ತಾರೆ, ಮದುವೆ ಸಮಯದಲ್ಲಿ ಆಭರಣಗಳು ಪ್ರಧಾನ ಪಾತ್ರ ವಹಿಸುತ್ತವೆ. ಏಕೆಂದರೆ ಇವು ವಧುವನ್ನು ಸಿಂಗರಿಸುವುದು ಮಾತ್ರವಲ್ಲ, ಅದು ಆಶೀರ್ವಾದದ ರೂಪದಲ್ಲಿ ತಾಯಿತಂದೆಯರಿಂದ ದೊರಕುನ ವಸ್ತ್ರೋಧನ ಆಗಿದೆ.
ಹೀಗಾಗಿ ಈ ಸಂದರ್ಭದಲ್ಲಿ ಪ್ಲ್ಯಾಟಿನಮ್ ಇವಾರಾಗಿಂತ ಬೇರಾ ಆಪ್ಶನ್ಸ್ ಬೆಟರ್ ಎನಿಸದು. ಬ್ಯೂಟಿಫುಲ್ ವಜ್ರ ಖಚಿತ ಪ್ಲ್ಯಾಟಿನಮ್ ಇವಾರಾ ನೆಕ್‌ಲೇಸ್, ಇಯರ್ ರಿಂಗ್ ಸೆಟ್ಸ್, ಬ್ಯಾಂಗಲ್ಸ್ ಮತ್ತು ಬ್ರೇಸ್ ಲೆಟ್ಸ್ ಇತ್ಯಾದಿಗಳನ್ನು ಮದುವೆಯ ಬೇರೆ ಬೇರೆ ಸಂದರ್ಭಗಳಾದ ಎಂಗೇಜ್‌ಮೆಂಟ್, ಮೆಹಂದಿ, ಸಂಗೀತ್ ಮುಂತಾದವುಗಳಲ್ಲಿ ತನ್ನ ನೆಚ್ಚಿನ ಉಡುಗೆಯೊಂದಿಗೆ ನವ ವಧು ಧರಿಸಬಹುದು.
ಅನಿತಾ ಹೇಳುತ್ತಾರೆ, ಇಂದಿನ ನವ ವಧು ಉಡುಗೆ ಮುದುರಿಕೊಂಡು ಒಂದೆಡೆ ಕೂರುವವಳಲ್ಲ. ಅವಳಿಗೆ ಮದುವೆ ಮಂಟಪದಲ್ಲಿ ತನ್ನ ಅತ್ತೆಮನೆಯವರೊಂದಿಗೂ ಸಮಯ ಕಳೆಯಬೇಕಾಗುತ್ತದೆ. ಹೀಗಾಗಿ ಭಾರಿ ಭಾರಿ ಡ್ರೆಸ್ ಧರಿಸುವುದು ಅವಳಿಗೆ ನಿಜಕ್ಕೂ ಕಷ್ಟಕರ. ಆದ್ದರಿಂದ ಹ್ಯಾಂಡ್‌ಮೇಡ್ ಸಿಲ್ಕ್ ನ ಬನಾರಸ್ ಸೀರೆ ಅಥವಾ ಲೈಟ್ ವೇಟ್ ಲಹಂಗಾಗಳು ಈ ಸಂದರ್ಭಕ್ಕೆ ಬಲು ಸೂಕ್ತ. ಆದರೆ ಡ್ರೆಸ್‌ಗೆ ಹೊಂದುವಂಥ ಪರ್ಫೆಕ್ಟ್ ಜ್ಯೂವೆಲರಿ ಇರಬೇಕಾದುದೂ ಅತ್ಯಗತ್ಯ. ಪ್ರತಿ ಸಣ್ಣಪುಟ್ಟ ಚೇಂಜಸ್‌ಗೂ ನವ ವಧು ಜ್ಯೂವೆಲರಿ ಬದಲಾಯಿಸುವ ಹಾಗಾಗಬಾರದು.
ಇಲ್ಲಿ ಅನಿತಾ ಹೇಳುವುದೆಂದರೆ, ಭಾರಿ ಭಾರಿ ಜ್ಯೂವೆಲರಿ ಖಂಡಿತಾ ಈ ಸಂದರ್ಭಕ್ಕೆ ಚೆನ್ನಾಗಿದೆ ಎನಿಸಬಹುದು, ಆದರೆ ಅವನ್ನು ಧರಿಸುವುದು ಮಾತ್ರ ಕಷ್ಟ. ಆದ್ದರಿಂದ ಎಂಥ ಜ್ಯೂವೆಲರಿ ಆರಿಸಬೇಕೆಂದರೆ, ಅವು ಮಾಡರ್ನ್ ಲುಕ್ಸ್ ಹೊಂದಿರುವುದರ ಜೊತೆ ಈ ಸಂದರ್ಭಕ್ಕಾಗಿಯೇ ವಿಶೇಷವಾಗಿ ತಯಾರಿಸಿದ್ದಾಗಿರಬೇಕು. ಪ್ಲ್ಯಾಟಿನಮ್ ಇವಾರಾ ಬ್ರೈಡಲ್ ಜ್ಯೂವೆಲರಿ ರೇಂಜ್ ಇಂಥದೇ ಆಗಿದೆ.
ಆಧುನಿಕತೆಯಲ್ಲಿ ಸಾಂಪ್ರದಾಯಿಕತೆಯ ವೈಶಿಷ್ಟ್ಯ ಮೆರೆಯುವ ಪ್ಲ್ಯಾಟಿನಮ್ ಇವಾರಾ ಜ್ಯೂವೆಲರಿ ರೇಂಜ್, ತಾಯಿತಂದೆಯರ ಎಂದೂ ಮಾಸದ ಹೊಳಪಿನ ಆಶೀರ್ವಾದದ ತರಹ ಇದೆ. ಆದ್ದರಿಂದ ಇದನ್ನು ತಿಜೋರಿಯಲ್ಲಿ ಭದ್ರವಾಗಿ ಎತ್ತಿಡುವ ಬದಲು, ನವ ವಧು ಪ್ರತಿದಿನ ಧರಿಸಬಹುದಾಗಿದೆ ಹಾಗೂ ತನ್ನ ತಾಯಿತಂದೆಯರ ಆಶೀರ್ವಾದವನ್ನು ಆಸ್ವಾದಿಸಬಹುದಾಗಿದೆ.
ಇವೆಲ್ಲದರ ಹೊರತಾಗಿ, ಇತ್ತೀಚೆಗೆ ನವ ವಧು ಆಗುತ್ತಿರುವ ಪ್ರತಿ ಹುಡುಗಿಯೂ ವರ್ಕಿಂಗ್ ಸಹ ಆಗಿರುತ್ತಾಳೆ. ಮದುವೆ ನಂತರ ಅವಳು ಎಂದಿನಂತೆ ತನ್ನ ಆಫೀಸ್‌ಗೆ ಹೋಗಬೇಕಾಗಿರುತ್ತದೆ. ಅದಕ್ಕಾಗಿ ಆಕೆ ಸಾಂಪ್ರದಾಯಿಕ ಬಣ್ಣ ಮತ್ತು ಫ್ಯಾಬ್ರಿಕ್ಸ್ ಬಿಟ್ಟು ತುಸು ವಿಭಿನ್ನವಾದ ಆರಾಮದಾಯಕ ಹೊಸ ಡ್ರೆಸ್ ಆರಿಸಿಕೊಳ್ಳುತ್ತಾಳೆ. ಜೊತೆಗೆ ಅವಳು ಡ್ರೆಸ್ ಜೊತೆಗೆ ತನ್ನ ಜ್ಯೂವೆಲರಿ ಸಹ ಆರಾಮವಾಗಿ ಕ್ಯಾರಿ ಮಾಡುವ ಹಾಗಿರಬೇಕು ಎಂಬ ವಿಷಯವನ್ನು ಗಮನದಲ್ಲಿಟ್ಟಿರುತ್ತಾಳೆ.
ಪ್ಲ್ಯಾಟಿನಮ್ ಇವಾರಾದ ಬ್ರೈಡಲ್
ಜ್ಯೂವೆಲರಿ ರೇಂಜ್, ಮದುವೆಯ ಯಾವುದೇ ಸಂದರ್ಭಕ್ಕೂ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇದರ ಬಣ್ಣ ಎಂದೂ ಮಾಸದು ಎಂಬುದೇ ಇದರ ಪ್ರಧಾನ ವೈಶಿಷ್ಟ್ಯ ಪ್ಲ್ಯಾಟಿನಮ್ ಇವಾರಾದ ಬ್ರೈಡಲ್ ರೇಂಜ್, ಸಂಬಂಧಗಳ ಬಾಂಧವ್ಯದಂತೆಯೇ ಅತ್ಯಮೂಲ್ಯ ಹಾಗೂ ತಾಯಿತಂದೆಯರ ಆಶೀರ್ವಾದವಾಗಿ ಸದಾ ವಧುವಿನ ಜೊತೆ ಉಳಿಯುತ್ತದೆ.