ಹೆಂಗಸರು ತಮ್ಮ ಉಡುಗೆ ತೊಡುಗೆ, ಸ್ಯಾಂಡಲ್ಸ್ ಗಾಗಿ ಸಾಕಷ್ಟು ಖರ್ಚು ಮಾಡುತ್ತಿರುತ್ತಾರೆ, ಆದರೆ ಇನ್ನರ್‌ ವೇರ್‌ ಯಾ ಲಾಂಜರಿಯತ್ತ ಹೆಚ್ಚು ಗಮನ ಹರಿಸುವುದಿಲ್ಲ. ಇದರಿಂದ ಎಷ್ಟೋ ಸಲ ಅವರು ಹಲಲಾರು ತೊಂದರೆಗಳನ್ನು  ಎದುರಿಸಬೇಕಾಗುತ್ತದೆ. ಸಮರ್ಪಕ ಲಾಂಜರಿ ಅನಿವಾರ್ಯ, ಆಗ ಮಾತ್ರ ನೀವು ಫಿಟ್‌ ಆಗಿ ಕಾಣಿಸುವಿರಿ.

ಈ ಕುರಿತು ಎಕ್ಸ್ ಪರ್ಟ್ಸ್ ಸಲಹೆ ಎಂದರೆ, ವರ್ಕ್‌ಔಟ್‌ ಸಮಯದಲ್ಲಿ ಸಮರ್ಪಕ ಲಾಂಜರಿ ಇಲ್ಲದಿದ್ದರೆ ಬ್ಯಾಕ್‌ ಪೇನ್‌ ಕಾಡುತ್ತದೆ. ಏಕೆಂದರೆ ಸತತ ವರ್ಕ್‌ಔಟ್‌ನಿಂದ ಬ್ರೆಸ್ಟ್ ಟಿಶ್ಯು ಹಾಳಾಗುವ ಸಾಧ್ಯತೆಗಳಿವೆ. ಆಗ ಅವು ಜೋತು ಬೀಳುತ್ತವೆ. ದೇಹಕ್ಕೆ ಸಪೋರ್ಟ್‌ ಸಿಸ್ಟಂ ಸರಿಯಾಗಿರಬೇಕಾದುದು ಅತ್ಯಗತ್ಯ.

workout bra

ಸರಿಯಾದ ಬ್ರಾ ಆರಿಸಿ

ಟೀನೇಜ್‌ ಹುಡುಗಿಯರಿಂದ ಪ್ರೌಢ ಮಹಿಳೆಯರವರೆಗೂ, ಎಲ್ಲರೂ ತಂತಮ್ಮ ಬ್ರೆಸ್ಟ್ ಸೈಜ್‌ಗೆ ತಕ್ಕಂತೆ ಸರಿಯಾದ ಬ್ರಾ ಧರಿಸಬೇಕು. ಆದರೆ ವರ್ಕ್‌ಔಟ್‌ನ ಎಫೆಕ್ಟ್ ಇಡೀ ದೇಹದ ಮೇಲಾಗುತ್ತದೆ. ವ್ಯಾಯಾಮಗಳಂತೂ ಹಲವು ಬಗೆಯದಾಗಿವೆ. ಇದರಲ್ಲಿ ರನ್ನಿಂಗ್‌, ಏರೋಬಿಕ್ಸ್, ಜುಂಬಾ ಇತ್ಯಾದಿ ಎಲ್ಲದರ ಎಫೆಕ್ಟ್ ದೇಹದ ಮೇಲಾಗುತ್ತದೆ. ಇತ್ತೀಚೆಗೆ ಎಲ್ಲಾ ಬಗೆಯ ಬ್ರಾ ಮಾರ್ಕೆಟ್‌ನಲ್ಲಿ ಲಭ್ಯ.

ವ್ಯಾಯಾಮ ಮಾಡುವಾಗ ಕಾಟನ್‌ ಬದಲು ಲೈಕ್ರಾ ಬ್ರಾ ಧರಿಸಿರಿ.

ನೀವು ಮೆಡಿಟೇಶನ್‌ ಮಾಡುವವರಾಗಿದ್ದರೆ, ಲೈಟ್‌ ಸಪೋರ್ಟ್‌ ಬ್ರಾ ಧರಿಸಿರಿ, ಏಕೆಂದರೆ ಇದರಲ್ಲಿ ಹೆಚ್ಚಿನ ಮೂಮೆಂಟ್ಸ್ ಇರುವುದಿಲ್ಲ.

ವಾಕಿಂಗ್‌ ಹೋಗುವಾಗ ಮೀಡಿಯಂ ಸಪೋರ್ಟ್‌ವುಳ್ಳ ಬ್ರಾ ಧರಿಸಿರಿ.

ತುಂಬಾ ಸ್ಟ್ರಾಂಗ್‌ ವರ್ಕ್‌ಔಟ್‌ ಮಾಡುವ ಹಾಗಿದ್ದರೆ ಫುಲ್ ಸಪೋರ್ಟ್‌ ಬ್ರಾ ಧರಿಸಬೇಕು.

ವ್ಯಾಯಾಮ ಮಾಡುವಾಗ ಸ್ಪೋರ್ಟ್ಸ್ ಬ್ರಾ ಧರಿಸುವುದು ಎಲ್ಲಕ್ಕೂ ಉತ್ತಮ. ಇದು ಬ್ರೆಸ್ಟ್ ಶೇಪ್‌ನ್ನು ಎತ್ತಿಹಿಡಿಯುತ್ತದೆ. ಬಹಳ ಹೆಚ್ಚಿನ ಮೂಮೆಂಟ್ಸ್ ನಿಂದ ಬ್ರೆಸ್ಟ್ ನ ಸುತ್ತಲೂ ಇರು ಲಿಗಮೆಂಟ್ಸ್ ಎಳೆದಂತಾಗುತ್ತದೆ. ಇದರಿಂದ ಬ್ರೆಸ್ಟ್ ಜೋತಾಡಬಹುದು. ಈ ಸ್ಥಿತಿಯನ್ನು ಸರಿಪಡಿಸಲು ಸ್ಪೋರ್ಟ್ಸ್ ಬ್ರಾ ಉತ್ತಮ ಆಯ್ಕೆ ಎನ್ನಬಹುದು.

ನಿಮ್ಮ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಬಗೆಯ ಬ್ರಾಗಳು ಮಾರ್ಕೆಟ್‌ನಲ್ಲಿ ಲಭ್ಯ :

 

ಯೋಗ ಬ್ರಾ :  ಈ ಬ್ರಾ ಪ್ಲಿಟ್ಸ್  ಮೆಡಿಟೇಶನ್‌ಗೆ ಹೆಚ್ಚು ಸೂಕ್ತ. ಇದು ಸಾಫ್ಟ್ ಮೆಟೀರಿಯಲ್ ನಿಂದ ರೂಪುಗೊಂಡಿದೆ. ಟೀ ಶೇಪ್‌ನ ಈ ಬ್ರಾ ಧರಿಸಲು ಬಲು ಆರಾಮದಾಯಕ.

ಹೈಪರ್ಕ್ಲಾಸಿಕ್ಪ್ಯಾಡೆಡ್ಸ್ಪೋರ್ಟ್ಸ್ ಬ್ರಾ : ಇದು ಬಲು ಕಂಫರ್ಟ್‌ ಬ್ರಾ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇದರ ಪ್ಯಾಡ್‌ ಸಹ ತೆಗೆದುಬಿಡಬಹುದು. ವ್ಯಾಯಾಮ ಮಾಡುವಾಗ ಈ ಬ್ರಾ ಇಡೀ ಬ್ರೆಸ್ಟ್ ನ್ನು ಫಿಟ್‌ ಆಗಿಡುತ್ತದೆ. ಕಾರ್ಡಿಯೋ ಸಮಯದಲ್ಲಿ ಇದನ್ನು ಧರಿಸುವುದು ಹಿತಕರ.

recer-padded-bra

ರಾಪ್ಅಪ್ಬ್ರಾ : ಈ ಬ್ರಾ ಸಹ ವ್ಯಾಯಾಮ ಮತ್ತು  ಪ್ಲಿಟ್ಸ್ ಗೆ ಪೂರಕವಾಗಿರುತ್ತದೆ. ಹೈನೆಕ್‌ ಲೈನ್‌ಡಬಲ್ ಲೇಯರ್‌ ಬಟ್ಟೆಯಿಂದ ತಯಾರಾದ ಈ ಕ್ರಾಪ್‌ ಟಾಪ್‌ ಬ್ರಾ, ಬ್ರೆಸ್ಟ್ ನ್ನು ಇಡಿಯಾಗಿ ಕವರ್‌ ಮಾಡುತ್ತದೆ. ಹೆವಿ ಬ್ರೆಸ್ಟ್ ವುಳ್ಳ ಸ್ಥೂಲ ಮಹಿಳೆಯರಿಗೆ ಇದು ಆರಾಮದಾಯಕ.

ಹೈಪರ್ಸ್ಟ್ರಾಪ್ಡಬ್ಲೇಯರ್ಬ್ರಾ : ಇದು ಸೂಪರ್‌ ಸಾಫ್ಟ್ ಸ್ಲೀವ್ಸ್, ಲೈಟ್‌ ವೆಯ್ಟ್ ಹಾಗೂ ಬೆವರು ಹೀರಿಕೊಳ್ಳುವ ಬ್ರಾ ಆಗಿದೆ. ಎರಡೂ ಬದಿಯಿಂದ ಕೀ ಹೋಲ್ ನಂತೆ ಆಗಿರುವ ಕಾರಣದಿಂದ, ಇದರಲ್ಲಿ ವ್ಯಾಯಾಮದ ಸಮಯದಲ್ಲಿ ಉಸಿರಾಟ ಈಝಿ ಎನಿಸುತ್ತದೆ. ಈ ಬ್ರಾ ಧರಿಸಿ ನೀವು ಆರಾಮವಾಗಿ ಜಾಗಿಂಗ್‌ ಹೊರಡಬಹುದು.

wrap-bra

ಟೆಕ್ಲೇಯರ್ಬ್ರಾ ಟಾಪ್‌ : ಸ್ಮೂತ್‌ಫ್ಲಾಟರಿಂಗ್‌ ಫಿಟ್‌ವುಳ್ಳ ಈ ಬ್ರಾ ಲೋ ಟು ಮೀಡಿಯಂ ವರ್ಕ್‌ಔಟ್‌ಗೆ ಸರಿಯಾಗಿರುತ್ತದೆ. ಇದೂ ಸಹ ಬೆವರು ಹೀರಿಕೊಂಡು ದೇಹವನ್ನು ತಂಪಾಗಿಡುತ್ತದೆ.

ರೇಸರ್ಸ್ಪೋರ್ಟ್ಸ್ ಬ್ರಾ : ಇದನ್ನು ಧರಿಸಿ ಜಾಗಿಂಗ್‌ ಹೊರಟರೆ ಹೆಚ್ಚು ಮಜಾ ಎನಿಸುತ್ತದೆ. ಇದರ ಸಾಫ್ಟ್ ಪಟ್ಟಿ ಮತ್ತು ಮೆಟೀರಿಯಲ್ ಎಷ್ಟು ಹಗುರ ಎಂದರೆ, ಧರಿಸಿದ 2 ನಿಮಿಷಗಳಲ್ಲೇ ಏನೂ ಧರಿಸಿಲ್ಲ ಎಂಬಂತೆ ನಿಮ್ಮ ವ್ಯಾಯಾಮ ಮುಂದುವರಿಸಬಹುದು.

comfy-confirmer-bra

ಅಂಡರ್ಆರ್ಮ್ ಎಕ್ಲಿಪ್ಸ್ ಸ್ಪೋರ್ಟ್ಸ್ ಬ್ರಾ : ಈ ಬ್ರಾ ಕಾರ್ಡಿಯೋ ಸ್ಟ್ರಾಂಗ್‌ ವರ್ಕ್‌ಔಟ್ಸ್ ಗೆ ಹೆಚ್ಚು ಲಾಭದಾಯಕ ಎನಿಸಿದೆ. ಸಿಲ್ಕ್, ಸ್ಕಿನ್‌ ಫಿಟ್‌ ಹಾಗೂ ಮೀಡಿಯಂ ಇಂಪ್ಯಾಕ್ಟ್ ಬ್ರಾ, ಬ್ರೆಸ್ಟ್ ನ್ನು ಇಡಿಯಾಗಿ ಹೋಲ್ಡ್ ಮಾಡುತ್ತದೆ. ಯಾವುದೇ ಬಗೆಯ ಮೂಮೆಂಟ್‌ಗೂ ಈ ಬ್ರಾ ಹೆಚ್ಚು ಸಹಕಾರಿ ಎಂದು ಸಾಬೀತಾಗಿದೆ.

ನ್ಯೂ ಬ್ಯಾಲೆನ್ಸ್ ಕಾಮ್ಛಿ ಕನ್ಫರ್ಮರ್ಬ್ರಾ : ಇದು ಬ್ರೆಸ್ಟ್ ಗೆ ಹೆಚ್ಚಿನ ಹೈ ಕರೇಜ್‌ ನೀಡುತ್ತದೆ ಮತ್ತು ಇದನ್ನು ಧರಿಸುವುದರಿಂದ ಯಾವುದೇ ಸ್ಟ್ರಾಂಗ್‌ ಮೂಮೆಂಟ್‌ ಕಷ್ಟಕರ ಎನಿಸುವುದಿಲ್ಲ. ಇದನ್ನು 0 ಬೌನ್ಸ್ ನ ಬ್ರಾ ಎಂದೂ ಹೇಳುತ್ತಾರೆ. ಸ್ಕಿನ್‌ ಫಿಟ್‌ ಆಗಿರುವ ಈ ಬ್ರಾ ಧರಿಸಿ ಹೆಂಗಸರು ಯಾವುದೇ ತರಹದ ವ್ಯಾಯಾಮಗಳನ್ನು ಹಾಯಾಗಿ ಮಾಡಬಹುದು.

ಕೆ. ಸುಜಾತಾ

ಒಂದಿಷ್ಟು ಸಲಹೆಗಳು

ನೀವು ವ್ಯಾಯಾಮ ಮಾಡುವಾಗ, ಶೋಕಿಗಾಗಿ ಬ್ಯಾಂಡ್‌ ಕಟ್ಟಿಕೊಳ್ಳಬೇಡಿ. ಇದರಿಂದ ಆ ಭಾಗದ ನರ ಉಬ್ಬಿ ಹಿಂಸೆ ಎನಿಸುತ್ತದೆ.

ಬ್ರಾದ ಸ್ಟ್ರಾಪ್ಸ್ ಬಲು ಬಿಗಿ ಅಥವಾ ತೀರಾ ಸಡಿಲ ಇರಬಾರದು.

ಕಪ್‌ನಲ್ಲಿ ರಿಂಕಲ್ಸ್ ಗ್ಯಾಪ್‌ ಇರಬಾರದು.

ಸದಾ ಬ್ರಾಂಡೆಡ್‌ ಬ್ರಾ ಮಾತ್ರ ಖರೀದಿಸಿ.

ಪ್ರತಿ ವ್ಯಾಯಾಮದ ನಂತರ ಬ್ರಾ ಒಗೆಯಲು ಹಾಕಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ