ದೇಹ ನನ್ನದು ಹಕ್ಕು ನನ್ನದು!

ಮಹಿಳೆಯ ದೇಹ ಅವಳದೇ ಆಸ್ತಿ. ಅದನ್ನು ಅವಳು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ಈ ನೈಸರ್ಗಿಕ ನಿಯಮವನ್ನು ಧರ್ಮ ಬಹಳ ಮೊದಲಿನಿಂದಲೇ ನಿರಾಕರಿಸುತ್ತ ಬಂದಿದೆ. ಅದು ರಾಜರಿಗೆ ಹಾಗೂ ಪ್ರಜಾಪ್ರಭುತ್ವದ ಸರ್ಕಾರಗಳಿಗೆ ಎಷ್ಟು ಸಾಧ್ಯವೋ ಅಷ್ಟು ನಿರ್ಬಂಧಗಳನ್ನು ಹೇರಲು ಆದೇಶಿಸಿತು.

ಹಲವು ಸಮಾಜಗಳಲ್ಲಿ ಮದುವೆಯಿಲ್ಲದೆ ದೈಹಿಕ ಸಂಬಂಧ ಮಹಿಳೆಯರಿಗೆ ಅಪರಾಧವೆಂದೇ ಪರಿಗಣಿಸಲ್ಪಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕಾನೂನನ್ನು ಪಾಲಿಸುವುದು ಕಡಿಮೆಯಾಗಿದೆ. ಬಹಳಷ್ಟು ದೇಶಗಳ ಕಾನೂನಿನ ಪುಸ್ತಕದಲ್ಲಿ ಈ ಕಾನೂನು ಒಂದು ಮೂಲೆಯಲ್ಲಿ ಬಿದ್ದುಕೊಂಡಿರುವುದು ಕಂಡುಬರುತ್ತದೆ.

ಗರ್ಭಪಾತದ ಕಾನೂನಿನ ಸ್ಥಿತಿಯೂ ಹೀಗೆಯೇ ಆಗಿದೆ. ಹೆಚ್ಚಿನ ದೇಶಗಳು ಗರ್ಭಪಾತವನ್ನು ಮಹಿಳೆಯ ಮೌಲಿಕ ಹಾಗೂ ನೈಸರ್ಗಿಕ ಹಕ್ಕು ಎಂದು ಪರಿಗಣಿಸುವುದೇ ಇಲ್ಲ. ಏಕೆಂದರೆ ಧರ್ಮ ಗರ್ಭಪಾತವನ್ನು ವಿರೋಧಿಸುತ್ತದೆ. ಧರ್ಮಕ್ಕೆ ದೇವರ ಭಕ್ತಿ ಹಾಗೂ ನೈವೇದ್ಯ ಬೇಕು. ಆದರೂ ಅದು ಅನಗತ್ಯ, ವಿವಾಹಪೂರ್ವ, ವಿವಾಹ ಬಳಿಕದ ಗಂಡ ಅಥವಾ ಬೇರೆ ಪುರುಷರ ಲೈಂಗಿಕ ಸಂಬಂಧವನ್ನು ತಡೆಯಲು ಗರ್ಭಪಾತವನ್ನು ಕಾನೂನು ಬಾಹಿರ ಅಥವಾ ಅದನ್ನು ನಿಯಂತ್ರಿಸಲು ಏಕೆ ಪ್ರಯತ್ನಿಸುತ್ತದೆ? ಆದರೆ ಬಹಳಷ್ಟು ಸರ್ಕಾರಗಳು ಧರ್ಮದ ಮುಂದೆ ಮಂಡಿ ಊರುತ್ತಿವೆ.

ಇತ್ತೀಚೆಗೆ ಮುಂಬೈನ ಓರ್ವ ಮಹಿಳೆಗೆ 25ನೇ ವಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಗರ್ಭಪಾತಕ್ಕೆ ಅವಕಾಶ ದೊರೆಯಿತು. ಈ ಅನುಮತಿಯ ಒಂದು ವಿಶೇಷತೆಯೆಂದರೆ ಆಕೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಅವಳಿ ಭ್ರೂಣಗಳಲ್ಲಿ ಒಂದನ್ನು ಗರ್ಭಪಾತ ಮಾಡಿಸಿಕೊಂಡಳು. ಅದಕ್ಕೆ ಬಹುಶಃ  ಡೌನ್‌ ಸಿಂಡ್ರೋಮ್ ಇತ್ತು. ವಾಸ್ತವದಲ್ಲಿ ಈ ನಿರ್ಧಾರವನ್ನು ವೈದ್ಯರೇ ತೆಗೆದುಕೊಳ್ಳಬಹುದಾಗಿತ್ತು. ಅದರ ಮೇಲೆ ಸರ್ಕಾರದ್ದಾಗಲಿ, ಕಾನೂನಿದ್ದಾಗಲಿ, ಧರ್ಮದ್ದಾಗಲಿ, ಪೂಜಾರಿ ಪುರೋಹಿತರದ್ದಾಗಲಿ, ಅತ್ತೆಯದ್ದಾಗಲಿ, ಗಂಡನದ್ದಾಗಲಿ ಯಾವುದೇ ಹಕ್ಕು ಇಲ್ಲ. ದೇಹ ಯಾರದ್ದಾಗಿದೆ ಆ ಮಹಿಳೆ ಹಾಗೂ ಗರ್ಭಪಾತ ಮಾಡುವ ವೈದ್ಯ ಇದರ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಬೇಕು.

`ಮೆಡಿಕಲ್ ಟರ್ಮಿನೇಶನ್‌ ಆಫ್‌ ಪ್ರೆಗ್ನೆನ್ಸಿ ಆ್ಯಕ್ಟ್ 1971’ರ ಪ್ರಕಾರ ಕೂಡ ಈ ಸ್ವಾತಂತ್ರ್ಯ ಮಹಿಳೆಗಿಲ್ಲ. ಆ ಅಧಿಕಾರ ವೈದ್ಯರಿಗೆ ಇದೆ. ಅವರು ಗರ್ಭಪಾತ ಮಾಡಬಹುದು. ಈ ಕಾನೂನಿನ ವಿಧಿ 3ರಲ್ಲಿ ಎಷ್ಟೊಂದು ಷರತ್ತುಗಳು ಇವೆಯೆಂದರೆ, ಜನರು ಅನುಮತಿಗಾಗಿ ಹೈಕೋರ್ಟ್‌ ಇಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾಗುತ್ತದೆ.

18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಹುಡುಗಿಗೆ ತಂದೆ ಅಥವಾ ತಾಯಿಯ ಅನುಮತಿ ಪಡೆಯಬೇಕಾಗುತ್ತದೆ. ಗರ್ಭ ನಿಲ್ಲಲು ಯಾರದೇ ಅನುಮತಿ ಬೇಕಿಲ್ಲ ಅಂದಾಗ ಗರ್ಭ ತೆಗೆದುಹಾಕಲು ಅನುಮತಿ ಏಕೆ ಬೇಕು?

ರೋಗಗ್ರಸ್ತ ಭ್ರೂಣದಿಂದ ಗರ್ಭಿಣಿಗೆ ಸಮಸ್ಯೆ ಆಗುತ್ತದೆ ಎಂದಾದರೆ ಅದನ್ನು ತೆಗೆದು ಹಾಕಬಹುದು ಎನ್ನುವುದು ಈ ಕಾನೂನಿನ ಭಾವನೆಯಾಗಿದೆ. ಯಾವುದೇ ವೈದ್ಯಕೀಯ ಕಾರಣವಿಲ್ಲದೆ ಗರ್ಭಪಾತ ಮಾಡಲು ಇಚ್ಛಿಸಿದರೆ ಅವರಿಗೆ ಸುಳ್ಳು ಹೇಳಬೇಕಾಗಿ ಬರುತ್ತದೆ.

ಇದು ತಪ್ಪು. ಧರ್ಮಶಾಸ್ತ್ರಗಳ ಆದೇಶವನ್ನು ಈಗಲೂ ಒಪ್ಪಲಾಗುತ್ತದೆ. ಧರ್ಮದ ಗುತ್ತಿಗೆದಾರರು ಮಹಿಳೆಯ ಲೈಂಗಿಕಾಂಗದ ಮೇಲೆ ತಮ್ಮ ಹಕ್ಕು ಹೊಂದಲು ಇಚ್ಛಿಸುತ್ತಾರೆ. ಅವರು ಬಗೆಬಗೆಯ ನಿಯಮಗಳನ್ನು ರೂಪಿಸಲು ಇಚ್ಛಿಸುತ್ತಾರೆ. ಒಂದೆಡೆ ಅವಳ ಪೂಜೆ ಮಾಡುತ್ತಾರೆ. ಅವಳ ಶುದ್ಧತೆಗೆ ಚಾರಿತ್ರ್ಯದ ಪ್ರಮಾಣವೆಂದು ಭಾವಿಸುತ್ತಾರೆ. ಪುರುಷನ ಹೊರತಾಗಿ ಒಪ್ಪಿಗೆ ಅಥವಾ ಒಪ್ಪಿಗೆಯಿಲ್ಲದೆ ಸಂಬಂಧ ಹೊಂದಿದಾಗ ಯಾವ ಗೊಂದಲ ಗಲಾಟೆ ಎಬ್ಬಿಸಲಾಗುತ್ತದೋ ಅದನ್ನು ಪುರುಷನ ಮೇಲೆ ಏಕೆ ಅನ್ವಯಿಸಲಾಗುವುದಿಲ್ಲ?

ವಾಸ್ತವದಲ್ಲಿ ಗರ್ಭಪಾತದ ಕಾನೂನನ್ನು ಮಹಿಳೆಗೆ ಶಿಕ್ಷೆ ನೀಡಲು ರೂಪಿಸಲಾಗಿದೆ. ಎಲ್ಲಿ ಗರ್ಭಪಾತಕ್ಕೆ ಅವಕಾಶವಿದೆಯೋ, ಅಲ್ಲೂ ದಂಡ ಹಾಕಲಾಗುತ್ತದೆ. ಎಲ್ಲಿ ಗರ್ಭಪಾತಕ್ಕೆ ಅಕಾಶವಿದೆಯೋ ಅಲ್ಲೂ ಕೂಡ ಷರತ್ತುಗಳಿವೆ. ಅವು ಒಂದು ರೀತಿಯಲ್ಲಿ ಅಪರಾಧದಂತೆ ಭಾಸವಾಗುತ್ತದೆ.

ಇದರ ಹೊರತಾಗಿಯೂ ಪ್ರತಿ ವರ್ಷ ಸುಮಾರು 6 ಕೋಟಿಯಷ್ಟು ಗರ್ಭಪಾತಗಳು ಜಗತ್ತಿನಲ್ಲಿ ನಡೆಯುತ್ತವೆ. ಇವುಗಳಲ್ಲಿ ಶೇ.45ರಷ್ಟು ಗರ್ಭಪಾತಗಳು ಅಸುರಕ್ಷಿತವಾಗಿರುತ್ತವೆ. ಅತ್ಯಾಚಾರದಂತಹ ಘಟನೆಗಳಲ್ಲಿ ಗರ್ಭಪಾತದ ಬಗ್ಗೆ ಬೇಡಿಕೆ ಇಟ್ಟಾಗ ವೈದ್ಯರು ನೂರಾರು ಪ್ರಶ್ನೆ ಕೇಳುತ್ತಾರೆ. ಹೀಗಾಗಿ ಜಗತ್ತಿನಾದ್ಯಂತ ಈಗಲೂ ಕದ್ದುಮುಚ್ಚಿ ಅನೇಕ ಗರ್ಭಪಾತಗಳು ನಡೆಯುತ್ತಿರುತ್ತವೆ.

ಗರ್ಭ ಧರಿಸುವುದು ಹಾಗೂ ಗರ್ಭಪಾತ ಇವೆರಡೂ ಮಹಿಳೆಯ ಮೌಲಿಕ ಮತ್ತು ನೈಸರ್ಗಿಕ ಹಕ್ಕುಗಳಾಗಬೇಕು. ಪುರುಷರಿಗೆ ಇದರಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ. ದೇಹ ಮಹಿಳೆಯದ್ದು. ಅದನ್ನು ಅವಳು ಹೇಗಾದರೂ ಬಳಸಿಕೊಳ್ಳಬಹುದು. ಅಂದಹಾಗೆ, ಅವಳ ಜೊತೆಗೂ ಒತ್ತಡ ಉಂಟಾಗಬಹುದು. ಅದೇ ರೀತಿ ಪುರುಷನ ಮೇಲೆ ಒತ್ತಡ ಬರಬಹುದು. ಅದರ ಬಗ್ಗೆ ಪುರುಷರು ತಮ್ಮ ನಿರ್ಧಾರ ತಾವೇ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಮಹಿಳೆಯರು ಕೂಡ ನಿರ್ಧಾರ ಕೈಗೊಳ್ಳಬೇಕು.

ಕೆಲಸ ಮಾಡುವಾಗ ಹರಿತವಾದ ಆಯುಧದಿಂದ ಕೈಗೆ ಗಾಯವಾದರೆ ಪುರುಷನಿಗೆ ವೈದ್ಯರ ಸಲಹೆ ಒಪ್ಪಬೇಕಾಗುತ್ತದೆ, ಜೊತೆಗೆ ತನ್ನ ಅನುಮತಿಯನ್ನು ಕೂಡ ಕೊಡಬೇಕಿರುತ್ತದೆ. ಇದರಲ್ಲಿ ಧರ್ಮವಾಗಲಿ, ಕಾನೂನಾಗಲಿ ಮಧ್ಯೆ  ಬರುವುದಿಲ್ಲ. ಗರ್ಭದ ದೃಷ್ಟಿಯಲ್ಲೂ ಹೀಗೆಯೇ ಆಗಬೇಕು. ಲೈಂಗಿಕ ಸಂಬಂಧ ಬೇಕಿದ್ದೋ, ಬೇಕಿಲ್ಲದೊ ಆಗಿರಲಿ ಗರ್ಭ ನಿಂತರೆ ಅದನ್ನು ತೆಗೆದು ಹಾಕಲು ಸಾಧ್ಯವಾಗಬೇಕು. ಅಪಾಯ ಮಹಿಳೆಗೇ ಇದೆ. ದೇಹ ಅವಳದ್ದು. ಧರ್ಮ ಹಾಗೂ ಪುರುಷರ ಕಾನೂನು ತಮ್ಮ ಇತಿಮಿತಿಯಲ್ಲಿರಬೇಕು.

vihangam-hindu-mob-lyinching-2

ಜನತೆಗೆ ಹೊರೆಯಾದ ಆಟ

2000ನೇ ಇಸ್ವಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವೆ ಕ್ರಿಕೆಟ್‌ ಪಂದ್ಯ ನಡೆದಿತ್ತು. 5ನೇ ದಿನದಂದು ಲಂಚ್‌ ಟೈಮ್ ನಲ್ಲಿ ಪಂದ್ಯ ಡ್ರಾ ಡಿಕ್ಲೇರ್‌ ಮಾಡಿಕೊಂಡಿತ್ತು. ಇಂಗ್ಲೆಂಡ್‌ ಉಳಿದ ಸಮಯದಲ್ಲಿ 2 ವಿಕೆಟ್‌ನಿಂದ ಗೆದ್ದುಕೊಂಡಿತ್ತು. ಆ ಸಮಯದಲ್ಲಿ ಇದನ್ನು ಕ್ರೀಡೆಯ ಭಾವನೆಯಿಂದ ತಿಳಿಯಲಾಗಿತ್ತು. ಹ್ಯಾನ್ಸಿ ಕ್ರೋನಿಯ 5 ದಿನಗಳ ಆಟದಲ್ಲಿ ಮಳೆಯಿಂದ ಕಳೆದುಹೋದ 2 ದಿನಗಳ ಆಟದ ಬಳಿಕ ಕೊನೆಯ ಗಳಿಗೆಯಲ್ಲಿ ಆಟಕ್ಕೆ ಜೀವ ಕೊಟ್ಟಿದ್ದರು.

ಆ ಬಳಿಕ ಗೊತ್ತಾದದ್ದೇನೆಂದರೆ, ಕ್ರೀಡಾಭಾವನೆ ಎನ್ನುವುದು ಕೇವಲ ತೋರಿಕೆಯದ್ದಾಗಿತ್ತು. ವಾಸ್ತವದಲ್ಲಿ ಅದು ಮ್ಯಾಚ್‌ ಫಿಕ್ಸಿಂಗ್ ಆಗಿತ್ತು. ಅದರಲ್ಲಿ ಭಾರತೀಯ ಮೂಲದ ಸಂಜೀವ್ ‌ಚಾವ್ಸಾರ ಹಸ್ತಕ್ಷೇಪವಿತ್ತು. ದೆಹಲಿ ಪೊಲೀಸರಿಗೆ ಕೊಟ್ಟ ಹೇಳಿಕೆಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಪಂದ್ಯ ಫಿಕ್ಸ್ ಆಗಿರುತ್ತದೆ. ಅವರ ಪ್ರಕಾರ, ಆಟಗಾರ ನಟನೊಬ್ಬನ ಹಾಗೆ. ನಿರ್ದೇಶಕ ಹೇಳಿದಂತೆ ಚೆಂಡು ಎಸೆಯುತ್ತಾರೆ, ಬ್ಯಾಟ್‌ ಬೀಸುತ್ತಾರೆ, ಫೀಲ್ಡಿಂಗ್‌ ಮಾಡುತ್ತಾರೆ.

ಕ್ರಿಕೆಟ್‌ ರೋಮಾಂಚಕ ಆಟವೊಂದು ಅಲ್ಲಿ ಹಣ ಇಲ್ಲ. ಅದು ಜೂಜಾಟದಾರರ ಕೃಪೆಯ ಹಣ. ಅವರು ಕೋಟಿ ಕೋಟಿ ಹಣ ತೊಡಗಿಸುತ್ತಾರೆ, ಏಕೆಂದರೆ ತಮ್ಮ ಸೂಚನೆಯ ಮೇರೆಗೆ ಆಟ ಆಡಬೇಕು ಎನ್ನುವುದು ಅವರ ಅಭಿಪ್ರಾಯವಾಗಿರುತ್ತದೆ. ಜನರು ಆಟ ನೋಡಲೆಂದು ಅಥವಾ ಅವರೊಂದಿಗಿರುವ ಜಾಹೀರಾತುಗಳ ಮೇಲೂ ಅಷ್ಟೊಂದು ಖರ್ಚು ಮಾಡುವುದಿಲ್ಲ. ಅದಕ್ಕೂ ಹೆಚ್ಚು ಹಣವನ್ನು ಅವರು ಜೂಜಿಗೆ ಖರ್ಚು ಮಾಡುತ್ತಾರೆ. ಅದರ ಬಹುದೊಡ್ಡ ಪಾಲು ಗುಪ್ತ ಕೈಗಳಿಗೆ ಹೋಗುತ್ತದೆ. ಒಂದಿಷ್ಟು ಪಾಲು ಕೆಲವು ಸಾಮಾನ್ಯ ಆಟಗಾರರಿಗೆ ದೊರಕುತ್ತದೆ.

ಹೌದು, ಎಷ್ಟು ಹಣ ಒಬ್ಬ ಸಾಮಾನ್ಯ ಆಟಗಾರನಿಗೆ ದೊರಕುತ್ತದೆ? ಅಷ್ಟು ಹಣ ಅವನಿಗೆ ಸಾಕಷ್ಟು ಆಗುತ್ತದೆ. ಅದರಲ್ಲಿ ಅವನು ಐಷಾರಾಮಿ ಜೀವನ ನಡೆಸಬಹುದು.

ಇಲ್ಲಿ ಏಳುವ ಪ್ರಶ್ನೆಯೆಂದರೆ, ರತನ್‌ ಖತ್ರಿಯ ಮಟ್ಕಾ ಆಟದಂತಿರುವ ಈ ಕ್ರೀಡೆಗೆ ರಾಷ್ಟ್ರಪತಿ ಹಾಗೂ ಪ್ರಧಾನಿಗಳು ಏಕೆ ಚಪ್ಪಾಳೆ ತಟ್ಟುತ್ತಾರೆ? ಅವರನ್ನು ಸರ್ಕಾರಿ ಭೋಜನ ಕೂಟಕ್ಕೆ ಏಕೆ ಆಹ್ವಾನಿಸಲಾಗುತ್ತದೆ? ಅವರಿಗೆ ಪುರಸ್ಕಾರ ಏಕೆ ನೀಡಲಾಗುತ್ತದೆ?

ಪ್ರತಿವರ್ಷ ಹಲವು ಕ್ರಿಕೆಟಿಗರಿಗೆ ಪದ್ಮ ಪುರಸ್ಕಾರಗಳನ್ನೂ ನೀಡಲಾಗುತ್ತದೆ. ಅರ್ಜುನ ಪ್ರಶಸ್ತಿ ಕೂಡ ಅವರ ತೆಕ್ಕೆಗೆ ಬೀಳುತ್ತದೆ. ಕ್ರಿಕೆಟ್‌ನಲ್ಲಿ ಅಪಾರ ಪ್ರಮಾಣದ ಅನಧಿಕೃತ, ಅಪರಾಧ ಲೋಕದ ಹಣ ಇದ್ದಾಗ್ಯೂ ಕೂಡ ಸರ್ಕಾರಗಳು ಕ್ರಿಕೆಟ್‌ಗೆ ಬಗೆಬಗೆಯ ರಿಯಾಯ್ತಿ ನೀಡುತ್ತವೆ. ಇದು ಒಂದು ರೀತಿಯಲ್ಲಿ ಅಪರಾಧಿ ಆಟಕ್ಕೆ ಕುಮ್ಮಕ್ಕು ಕೊಟ್ಟಂತೆ. ರಾಜಕೀಯ ಪುಢಾರಿ ಕ್ರಿಕೆಟ್‌ ಬೋರ್ಡ್‌ನಲ್ಲಿ ಇರುವುದು ಈ ಅಪರಾಧಕ್ಕೆ ಸಂರಕ್ಷಣೆ ಕೊಟ್ಟ ಹಾಗೆ. ಬೋರ್ಡಿನ ಕೆಲಸ ಕಾರ್ಯಗಳಲ್ಲಿ ಸುಪ್ರೀಂ ಕೋರ್ಟ್‌

ತನ್ನ ಸಮಯ ವಿನಿಯೋಗಿಸುವುದು ಕ್ರಿಕೆಟ್‌ ಮಾಫಿಯಾದ ಕೆಲಸಗಳಲ್ಲಿ ವಿವಾದಗಳನ್ನು ಬಗೆಹರಿಸುವುದು ಮಾತ್ರ ಆಗಿದೆ.

ಕ್ರಿಕೆಟ್‌ ಜನರಿಗೆ ಹೊರೆಯಷ್ಟೇ ಅಲ್ಲ, ಅದು ಜಾತಿ ಜಾತಿಗಳ ನಡುವೆ ತಾರತಮ್ಯ ಕೂಡ ಉಂಟು ಮಾಡುತ್ತಿದೆ. ಸಾಹೇಬರುಗಳ ಈ ಆಟ ಭಾರತೀಯರಿಗೆ ತಕ್ಕ ಆಟ ಅಲ್ಲ. ಇದು ಒಂದು ರೀತಿಯ ಜೂಜಾಟ, ಅದು ಮೈದಾನದಲ್ಲಲ್ಲ. ಜೂಜಾಟದ ಅಡ್ಡೆಗಳಲ್ಲಿ ಆಡಲಾಗುತ್ತದೆ. ಅದನ್ನು ಬ್ಯಾನ್‌ ಮಾಡಬಾರದು. ಆದರೆ ಜನರು ಅದಕ್ಕೆ ಒಪ್ಪಿಗೆಯ ಮುದ್ರೆ ಒತ್ತಬಾರದು.

ಮುಂದೇನಾಗಬಹುದು?

ಭಾರತದಲ್ಲಷ್ಟೇ ಅಲ್ಲ, ಅಮೆರಿಕಾದಲ್ಲೂ ಒಂದು ಪ್ರಶ್ನೆ ಏಳುತ್ತಿದೆ. ಅದೇನೆಂದರೆ ಮನೆ ಮನೆಗಳಲ್ಲಿ ಪಾರ್ಟ್‌ ಟೈಮ್ ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೆಲಸಕ್ಕೆ ಬರಲು ಹೇಗೆ ಅವಕಾಶ ಕೊಡಬೇಕು ಎನ್ನುವುದೇ ಆ ಪ್ರಶ್ನೆಯಾಗಿದೆ. ದೇಶಾದ್ಯಂತದ ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟ್‌ ಟೈಮ್ ಕೆಲಸಗಾರರಿಗೆ ಬರಲು ಅವಕಾಶ ಕೊಡಲಾಗುತ್ತಿಲ್ಲ. ಲಾಕ್‌ ಡೌನ್‌ನಲ್ಲಿ ಎಲ್ಲರೂ ಮನೆಯಲ್ಲಿದ್ದರು. ಆಗ ಕೆಲಸ ಹೇಗೊ ಸಾಗಿತು. ಆಗ ಮನೆಗೆ ಯಾರೊಬ್ಬರೂ ಅತಿಥಿಗಳು ಬರುತ್ತಿರಲಿಲ್ಲ ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿದರು.

ಇನ್ನು ಮುಂದೆ ಹೇಗೆ? ಅಮೆರಿಕಾದಲ್ಲೂ ಕ್ಲೀನಿಂಗ್‌ ಸ್ಟಾಫ್‌ ಹಲವು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಕೆಲಸಗಾರರು ವಾಸಿಸುವ ದಟ್ಟಣೆಯ ಪ್ರದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿಗೆ ಇವೆ. ಅವರಿಲ್ಲದೆ ಮನೆಯ ಸ್ವಚ್ಛತೆ ಕೆಲಸ ಆಗುವುದಿಲ್ಲ. ಮನೆಯ ಎಲ್ಲ ಕೆಲಸಗಳನ್ನು ಮಾಡಿಕೊಂಡು, ಕೆಲಸಕ್ಕೂ ಹೋಗುವುದು ಕಷ್ಟವೇ ಹೌದು. ಇದು ತುಂಬಿದ ಕುಟುಂಬಕ್ಕಷ್ಟೇ ಅಲ್ಲ, ಏಕಾಂಗಿಯಾಗಿರುವವರಿಗೂ ಸಮಸ್ಯೆಯೇ ಹೌದು.

ಕೆಲಸಗಾರರ ಸಮಸ್ಯೆಗಿಂತ ಕೆಲಸ ಮಾಡುವವರ ಸಮಸ್ಯೆಯೇ ಹೆಚ್ಚು. ಒಂದು ವೇಳೆ ಮನೆ ಹಾಗೂ ಮಕ್ಕಳು ಈ ಎರಡರ ಜವಾಬ್ದಾರಿ ಸಂಭಾಳಿಸುವುದು ಸವಾಲಿನ ಸಮಸ್ಯೆಯೇ ಹೌದು.

ಕೆಲಸಗಾರರ ಸಮಸ್ಯೆಗಿಂತ ಕೆಲಸ ಮಾಡುರ ಸಮಸ್ಯೆಯೇ ಹೆಚ್ಚು. ಒಂದು ವೇಳೆ ಮನೆ ಹಾಗೂ ಮಕ್ಕಳು ಈ ಎರಡರ ಜವಾಬ್ದಾರಿ ಸಂಭಾಳಿಸುವುದು ಸವಾಲಿನ ಸಮಸ್ಯೆಯೇ ಹೌದು.

ಅಮೆರಿಕಾದಲ್ಲಿ ಮಕ್ಕಳನ್ನು ಆಯಾಗಳ ಬಳಿ ಫುಲ್ ಟೈಮ್ ಬಿಡದೆ, ಡೇ ಕೇರ್‌ ಸೆಂಟರ್‌ಗಳಲ್ಲಿ ಬಿಡಲಾಗುತ್ತದೆ. ನಮ್ಮಲ್ಲಿ ಕ್ರೀಚ್‌ಗಳಲ್ಲಿ ಬಿಟ್ಟು ಬರುವ ಹಾಗೆ. ಆದರೆ ಅಲ್ಲಿ ಕೆಲಸ ಮಾಡುವವರು ಕೋವಿಡ್‌ ಪ್ರೂಫ್‌ ಹೇಗೆ ಇರುತ್ತಾರೆ ಎಂಬ ಸಮಸ್ಯೆ ಎದ್ದಿದೆ.

ಉನ್ನತ ಶಿಕ್ಷಣ ಪಡೆದು ಮಹಿಳೆಯರು ಯಾವ ಒಂದು ನೌಕರಿಯಲ್ಲಿ ಸೆಟಲ ಆಗಿರುತ್ತಾರೊ, ಅದು ಸಾಧ್ಯವಾದದ್ದು ಮನೆಗೆಲಸದವರ ಸಮರ್ಪಣೆ ಭಾವನೆಯಿಂದ. ಅವರು ಬಂದು ಕೆಲಸ ಮಾಡುತ್ತಿದ್ದರೆ ಕೆಲಸಕ್ಕೆ ಹೋಗುವುದು ಕಷ್ಟವೇನೂ ಆಗುವುದಿಲ್ಲ. ಇಲ್ಲದ್ದಿದರೆ ಮಕ್ಕಳನ್ನು ನೋಡಿಕೊಳ್ಳಲು 1-2 ವರ್ಷಗಳ ಕಾಲ ರಜೆ ತೆಗೆದುಕೊಳ್ಳಬೇಕಾಗುತ್ತದೆ.

ಅವರೇನೊ ಇದ್ದಾರೆ, ಆದರೆ ಅವರನ್ನು ಮನೆಗೆ ಕರೆಸುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಅವರು ಎಲ್ಲೆಲ್ಲಿ ಸುತ್ತಾಡಿ, ಯಾರು ಯಾರನ್ನು ಭೇಟಿಯಾಗಿ ಬರುತ್ತಾರೊ ಹೇಳಲಾಗದು.

ಕೋವಿಡ್‌ ಈವರೆಗೆ ಶ್ರೀಮಂತರಲ್ಲಷ್ಟೇ ಹೆಚ್ಚು ಕಂಡು ಬಂದಿದೆ. ಬಡ ಜನರಿಗೆ ಸೋಂಕು ಎದುರಿಸುವ ಶಕ್ತಿ ಬಲವಾಗಿರುತ್ತದೆ. ಆದಾಗ್ಯೂ ಅವರಿಗೆ ಆ ಭಯ ಇದ್ದೇ ಇರುತ್ತದೆ. ತಮ್ಮ ಮಕ್ಕಳಿಗೆ ಎಲ್ಲಿ ಆ ರೋಗ ತಗುಲಿಬಿಡುತ್ತೋ ಎಂಬ ಹೆದರಿಕೆ ಅವರನ್ನು ಕಾಡುತ್ತಿರುತ್ತದೆ. ಮಕ್ಕಳ ಮೂಲಕ ಅದು ತಾಯಿಗೂ ಸುಲಭವಾಗಿ ತಗುಲುತ್ತದೆ.

ವರ್ಕ್‌ ಪ್ಲೇಸ್‌ನ್ನು ಬದಲಿಸಲು ಕೊರೋನಾ ಒಂದು ಗೇಮ್ ಚೇಂಜರ್‌ ಆಗುತ್ತದೆ. ಈಗ ಜನರು ಸಾಮೂಹಿಕವಾಗಿ ಕುಳಿತುಕೊಳ್ಳಲು ಬೆರೆಯಲು ಇಷ್ಟಪಡುವುದಿಲ್ಲ. ಆದರೆ ಯಾರಿಗೆ ಸವಾಲನ್ನು ಸ್ವೀಕರಿಸುವ ಧೈರ್ಯ ಇರುವುದಿಲ್ಲವೋ, ಅವರಿಂದ ಶ್ರೀಮಂತ ಹಾಗೂ ವಿಶೇಷ ಜನರು ಹೇಗೆ ಬಚಾವಾಗಿ ಉಳಿಯುತ್ತಾರೆ? ಈ ಪ್ರಶ್ನೆಯಂತೂ ಹಾಗೆಯೇ ಇರುತ್ತದೆ. ಮೊದಲ ಹೊಡೆತ ಮಕ್ಕಳಿರುವ ಮಹಿಳೆಯರಿಗೆ ಹಾಗೂ ಎರಡನೇ ಹೊಡೆತ ಅವರ ಪತಿಯಂದಿರಿಗೆ ಬೀಳುತ್ತದೆ. ಏಕೆಂದರೆ ಅವರಿಗೆ ನೆರವಾಗಬೇಕಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ