ಮನೆಯ ಲೈಟಿಂಗ್‌ ವ್ಯವಸ್ಥೆ ಹೇಗಿರಬೇಕೆಂದರೆ ವಿಶಿಷ್ಟ ಲುಕ್ಸ್ ದೊರಕುವುದರ ಜೊತೆ ಜೊತೆಗೆ ಮನೆಯ ಪ್ರತಿ ಮೂಲೆ ಮೂಲೆಯೂ ಝಗಮಗಿಸಬೇಕು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲೈಟಿಂಗ್‌ನ ಎಷ್ಟೊಂದು ಪರ್ಯಾಯ ಉಪಾಯಗಳು ಲಭ್ಯವಿವೆ ಎಂದರೆ, ನೀವು ನಿಮ್ಮ ಒಂದಿಷ್ಟು ಕ್ರಿಯೆಟಿವಿಟಿಯನ್ನು ಬಳಸಿಕೊಂಡು ನಿಮ್ಮ ಮನೆಯನ್ನು ಬೆಳಕಿನ ಸೊಬಗಿನಿಂದ ತುಂಬಿಸಬಹುದು.

ಈಗ ಎಲ್ಇಡಿ ಲೈಟ್‌ಗಳ ಟ್ರೆಂಡ್‌ ಇದೆ. ಅದರ ಜೊತೆಗೆ ಟ್ರೆಡಿಶನಲ್ ಲೈಟ್‌ಗಳ ಫ್ಯಾಷನ್‌ ಕೂಡ ಇದೆ. ಆ ಕಾರಣದಿಂದ ಇಂಡೋವೆಸ್ಟರ್ನ್‌ ಟಚ್‌ ನೋಡಲು ಸಿಗುತ್ತದೆ. ದೀಪಗಳ ಹೊಸ ವೆರೈಟಿಯನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಕ್ಯಾಂಡಲ್‌ಗಳ ವೆರೈಟಿ ಇದೆಯೆಂದರೆ, ಅವುಗಳಿಂದ ನಿಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ಹೊಸ ಶೈಲಿಯಲ್ಲಿ ಡೆಕೊರೇಟ್‌ಮಾಡಬಹುದು.

ದೀಪಗಳು, ಕ್ಯಾಂಡಲ್‌ಗಳು ಹಾಗೂ ವಿದ್ಯುದ್ದೀಪಗಳು ಇವುಗಳಿಂದ ಮನೆಯಲ್ಲಿ ಯಾವುದನ್ನಾದರೂ ಬೆಳಗಿಸಿ, ಅ ಕ್ಲಾಸೀ ಆಗಿರಬೇಕು. ಅ ಹೆವಿ ಶೇಡ್ಸ್ ಇರುವಂಥ ಆಗಿರಬಾರದು. ಅವುಗಳ ಬೆಳಕು ಕಣ್ಣಿಗೆ ಅತ್ಯಂತ ಪ್ರಖರ ಎನಿಸುವಂತಿರಬಾರದು. ಕಣ್ಣಿಗೆ ರಾಚದಂತಹ, ಮನೆಯನ್ನು ಬೆಳಗಿಸುವಂತಹ ವಿದ್ಯುದ್ದೀಪಗಳು ಯಾವಾಗಲೂ ಹಿತಕರ ಎನಿಸುತ್ತವೆ. ಮನೆಯ ವಿಶಿಷ್ಟ ಮೂಲೆಯೊಂದನ್ನು ಹೈಲೈಟ್‌ ಮಾಡಲು ಟ್ರಿಕ್‌ ಲೈಟ್‌ ಹಾಗೂ ಸ್ಟೈಲಿಶ್‌ ಲುಕ್ಸ್ ಗೆ ಫೇರಿ ಲೈಟ್‌ನ ಪರ್ಯಾಯ ಆಯ್ಕೆ ಮಾಡಿಕೊಳ್ಳಬಹುದು.

ವಿಶಿಷ್ಟ ಲುಕ್ಸ್ ಗೆ ಎಲ್ಇಡಿ ಲೈಟ್‌ ಎಲ್ಇಡಿ ಲೈಟ್ಸ್ ನಲ್ಲಿ 2 ಕಲರ್‌ ಕಾಂಬಿನೇಶನ್‌ ನೋಡಲು ಸಿಗುತ್ತದೆ. ನಿಮ್ಮ ಮನೆಯ ಡ್ರಾಯಿಂಗ್‌ ರೂಮ್ ನ ಗೋಡೆಯ ಬಣ್ಣಗಳಿಗೆ ಹೊಂದುವಂಥದ್ದು ಅಥವಾ ಕಾಂಟ್ರಾಸ್ಟ್ ಪ್ರಕಾರ, ನೀವು ಇದರ ಕಲರ್‌ಕಾಂಬಿನೇಶನ್‌ ಆಯ್ಕೆ ಮಾಡಿಕೊಳ್ಳಬಹುದು. ಅಂದಹಾಗೆ ಹಳದಿ ಮತ್ತು ಹಸಿರು ವರ್ಣ ಗೋಡೆಗಳು ದೀಪಾವಳಿಗೆ ಬಹಳ ಸೊಗಸಾಗಿ ಕಾಣುತ್ತದೆ. ಅದೇ ರೀತಿ ಕೆಂಪು ಹಾಗೂ ಕಿತ್ತಳೆ ಬಣ್ಣದ್ದು ಕೂಡ. ಅವುಗಳ ಹೊರತಾಗಿ ಬೇರೆಯವು ಸಪ್ಪೆ ಎನಿಸುತ್ತವೆ.

3-4 ಅಡಿ ಉದ್ದದ ಮ್ಯೂಸಿಕ್‌ ಲೈಟ್‌ ಟ್ರೀ ನಿಮ್ಮ ಲಿವಿಂಗ್‌ ರೂಮಿನಲ್ಲಿ ಹಾಕಿ. ಇವುಗಳಲ್ಲಿ ಎಲ್ಇಡಿಯ ಚಿಕ್ಕ ಬಲ್ಬ್ ಗಳನ್ನು ಹಾಕಲಾಗಿರುತ್ತದೆ. ಅವುಗಳನ್ನು ಸಾಮಾನ್ಯವಾಗಿ ಕೃತಕ ಹೂ ಮತ್ತು ಎಲೆಗಳಿಂದ ಅಲಂಕರಿಸಲಾಗಿರುತ್ತದೆ. ಎಲೆಕ್ಟ್ರಿಕ್‌ ಕಲರ್‌ ಲೈಟ್ಸ್ ಅಂದರೆ ಕಲರ್‌ನ ಬಗೆ ಬಗೆಯ ಲೈಟ್ಸ್ ಹಾಕುವುದರಿಂದ ಟ್ರೆಡಿಶನಲ್ ಲುಕ್ಸ್ ನ್ನು ಕ್ರಿಯೇಟ್‌ ಮಾಡಬಹುದು. ಹಲವು ವರ್ಣಗಳಲ್ಲಿ ಈ ಲೈಟ್‌ಗಳನ್ನು ನೀವು ಮನೆಯ ಮುಖ್ಯದ್ವಾರ ಅಥವಾ ಕಿಟಕಿಯ ಮೇಲೂ ಅಳವಡಿಸಬಹುದು. 2 ಮೀಟರ್‌ಉದ್ದವಾಗಿರುವ ಕಾರಣದಿಂದ ಇವು ಬಹಳಷ್ಟು ಜಾಗ ವ್ಯಾಪಿಸಿಕೊಳ್ಳುತ್ತವೆ.

ಇಕೊ ಫ್ರೆಂಡ್ಲಿ ಎಲ್ಇಡಿ ಲೈಟ್ಸ್ ಕೂಡ ದೀಪಾವಳಿಗೆ ಸೂಕ್ತ. ಸಿಂಗಲ್ ಕಲರ್‌ ಎಲ್ಇಡಿ ಲೈಟ್ಸ್ ನಿಂದ ಹಿಡಿದು ಮಲ್ಟಿ ಕಲರ್ ಹಾಗೂ ಡಿಸೈನರ್‌ ಲೈಟ್‌ ತನಕ ಎಲ್ಲ ಬಗೆಗಳಲ್ಲಿ ಲಭ್ಯ. ದ್ರಾಕ್ಷಿ, ನೇರಳೆ, ಲೀಚಿ ಹಣ್ಣಿನ ಆಕಾರದ ಹೊರತಾಗಿ ಹೂ, ಬಳ್ಳಿ, ಕ್ಯಾಂಡಲ್ ಆಕಾರದ ಕಲರ್‌ ಫುಲ್ ಲೈಟ್‌ಗಳನ್ನು ಕೂಡ ಖರೀದಿಸಬಹುದು.

ಡಿಜೆ ಲೇಸರ್‌ ಲೈಟ್ಸ್ ಈ ದೀಪಾವಳಿಗೆ ನಿಮ್ಮ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಒಂದು ಲೇಸರ್‌ ಪ್ಯಾನೆಲ್‌‌ನಿಂದ ಯಾವ ಪ್ಯಾಟರ್ನ್‌ ಹೊರಹೊಮುತ್ತದೋ, ಅದರ ಕವರೇಜ್‌ ಏರಿಯಾ 100-200 ಮೀಟರ್‌ ತನಕ ಆಗಿರುತ್ತದೆ. ಕೆಲವು ಪ್ಯಾನ್‌ಗಳಿಂದ ಲೇಸರ್‌ನ ಒಂದೇ ಪ್ಯಾಟರ್ನ್‌ ಹೊರಹೊಮ್ಮುತ್ತದೆ. ಮತ್ತೆ ಬೇರೆ ಪ್ಯಾನ್‌ಗಳಿಂದ ಬೇರೆ ಬೇರೆ ಪ್ಯಾಟರ್ನ್ಸ್. ಇದರ ಒಂದು ವಿಶೇಷತೆಯೆಂದರೆ ಈ ಲೇಸರ್‌ ಲೈಟ್‌ಗಳ ವೇಗವನ್ನು ನಿಮ್ಮದೇ ಆದ ಲೆಕ್ಕಾಚಾರದಲ್ಲಿ ಸೆಟ್‌ ಮಾಡಬಹುದು.

ನವರತ್ನ ಹಾಗೂ ಮಲ್ಟಿಕಲರ್‌ ಹ್ಯಾಂಗಿಂಗ್‌ ಸೆಟ್‌ಗಳಿಗೂ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಈ ವರ್ಷ ಅಂತಹ ಸೆಟ್‌ಗಳಲ್ಲಿ ಹಲವು ಪರ್ಯಾಯಗಳು ನೋಡಲು ಸಿಗುತ್ತಿವೆ. ಎಲ್ಇಡಿ ಲೈಟ್ಸ್ ಇರುವ ನವರತ್ನ ಹ್ಯಾಂಗಿಂಗ್ಸ್ ಸೆಟ್‌ಗಳು ಬಹಳ ಆಕರ್ಷಕ ಎನಿಸುತ್ತವೆ. ಬಣ್ಣಬಣ್ಣದ ಬೆಳಕು ನೀಡುವ ಈ ಸೆಟ್‌ಗಳು ಹೆಚ್ಚಿನ ಬೆಳಕನ್ನು ನೀಡುತ್ತವೆ. ಅದರ ಹೊರತಾಗಿ ಟ್ರೆಡಿಶನಲ್ ಹ್ಯಾಂಗಿಂಗ್‌ಗಳಲ್ಲಿ ದೊಡ್ಡ ಬಲ್ಬ್ ಗಳ ಪರ್ಯಾಯ ಇದೆ. ಮನೆಗಳಿಗೆ ರೆಡಿಮೇಡ್‌ ಫಿಟ್ಟೆಡ್‌ ಹ್ಯಾಂಗಿಂಗ್‌ ಸೆಟ್‌ಗಳು ಕೂಡ ಲಭಿಸುತ್ತವೆ.

ಕಂದೀಲುಗಳ ಅಲಂಕಾರ

Traditional_Aakash_Kandil

ದೀಪಾವಳಿಯ ಸಂದರ್ಭದಲ್ಲಿ ಹೆಚ್ಚಿನ ಮನೆಗಳಲ್ಲಿ ಕಂದೀಲುಗಳನ್ನು ಹಚ್ಚಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನೀವು ವಿಶಿಷ್ಟ ಸ್ಟೈಲ್‌‌ನ ಕಂದೀಲುಗಳ ಮುಖಾಂತರ ಅಲಂಕಾರ ಮಾಡಿದರೆ, ಮನೆಯಲ್ಲಿನ ಬೆಳಕಿನ ಸೊಗಸನ್ನು ನೋಡಿ ಅತಿಥಿಗಳು ನಿಮ್ಮನ್ನು ಹೊಗಳದೆ ಇರಲಾರರು. ಕಲರ್‌ಫುಲ್ ಪೇಪರ್‌ ಬ್ಯಾಗ್‌ನ್ನು ಬಳಸಿ ನೀವು ಪೇಪರ್‌ ಕಂದೀಲು ತಯಾರಿಸಿ. ಬ್ಯಾಗ್‌ನ ಮೇಲ್ಭಾಗವನ್ನು ಕೆಳಕ್ಕೆ ಮಾಡಿ ಅದನ್ನು ತಂತಿಯಿಂದ ಕಟ್ಟಿ. ಬ್ಯಾಗ್‌ನ ಹ್ಯಾಂಡಲ್‌ನ್ನು ತೆಗೆದು ಹಾಕಿ, ರಿಬ್ಬನ್‌ ಅಳವಡಿಸಿ. ಮೇಲ್ಭಾಗದಲ್ಲಿ ಒಂದು ರಂಧ್ರ ಮಾಡಿ, ಒಳಭಾಗದಲ್ಲಿ ಬಲ್ಬ್ ಹಾಕಿ ಉರಿಸಿ. ಜೊತೆಗೆ ಪಾರಂಪರಿಕ ಕಾಗದದ ಲಾಂಧ್ರದ ಬದಲಿಗೆ ನೀವು ಗ್ಲಾಸ್‌ವುಳ್ಳ ಕಂದೀಲಿನ ಮುಖಾಂತರ ಮನೆಯನ್ನು ಅಲಂಕರಿಸಬಹುದು.

ನೀವೇ ಲೈಟ್ಸ್ ಸಿದ್ಧಪಡಿಸಬಹುದು

Lead2

 

ಹಳೆಯ ಗಾಜಿನ ಜಾರ್‌ ಮೇಲೆ ನಿಮ್ಮ ಮೆಚ್ಚಿನ ಬಣ್ಣವನ್ನು ಸೆಲ್‌ಪ್ರೀ ಮಾಡಿ. ಆ ಬಳಿಕ ಮೇಲೆ ಹಾಗೂ ಕೆಳಗೆ ಬಂಗಾರದ ಬಣ್ಣದಿಂದ ವಿಭಿನ್ನ ಡಿಸೈನ್‌ ಮೂಲಕ ಸೆಲ್‌ಪ್ರೀ ಮಾಡಿ. ಈಗ ಈ ಪೇಂಟ್‌ ಮಾಡಿದ ಜಾರಿನಲ್ಲಿ ಎಲ್ಇಡಿ ಲೈಟ್‌ ಅಥವಾ ಕ್ಯಾಂಡಲ್ ಇಡಿ. ಅದರಿಂದ ನಿಮ್ಮ ಮನೆ ವಿಶಿಷ್ಟ ಬೆಳಕಿನಿಂದ ಕಂಗೊಳಿಸುತ್ತದೆ. ನೀವು ಕಪ್‌ ಕೇಕ್‌ನ ಸೆಟ್‌ನಿಂದಲೂ ಫ್ಯಾನ್ಸಿ ಲೈಟ್ಸ್ ಸಿದ್ಧಪಡಿಸಬಹುದು. ಒಂದು ಉದ್ದನೆಯ ವೈರ್‌ ತೆಗೆದುಕೊಂಡು, ಅದರಲ್ಲಿ ಕಪ್‌ ಕೇಕ್‌ನ ಸೆಟ್‌ನ್ನು ಜೋಡಿಸಿ ಹಾಗೂ ಒಳಭಾಗದಲ್ಲಿ ಒಂದು ಚಿಕ್ಕ ಬಲ್ಪನ್ನು ಅಳವಡಿಸಿ ಡ್ರಾಯಿಂಗ್‌ ರೂಮಿನ ಕೋಣೆಯಲ್ಲಿ ಇಡಿ.

ಕೋಲ್ಡ್ ಡ್ರಿಂಕ್ಸ್ ನ ಪ್ಲಾಸ್ಟಿಕ್‌ ಬಾಟಲ್‌ನ್ನು ನಟ್ಟ ನಡುವೆ ಕತ್ತರಿಯಿಂದ ಕತ್ತರಿಸಿಕೊಳ್ಳಿ. ಬಾಟಲ್‌ನ ಮೇಲ್ಭಾಗವನ್ನು ಮುಚ್ಚಳ ಸಹಿತವಾಗಿ ಬಳಸಿಕೊಳ್ಳಿ. ಕತ್ತರಿಯಿಂದ ಪ್ಲಾಸ್ಟಿಕ್‌ನ ಬಾಟಲ್‌ನಲ್ಲಿ ಉದ್ದವಾಗಿ ಕತ್ತರಿಸಿ ಹಾಗೂ ಅದನ್ನು ಹೊರಭಾಗದತ್ತ ತಿರುಗಿಸಿಕೊಂಡು ಅದಕ್ಕೆ ಹೂವಿನ ಶೇಪ್‌ ಕೊಡಿ. ಆ ಬಳಿಕ ಪ್ಲಾಸ್ಟಿಕ್‌ಗೆ ಹೂ ಮತ್ತು ಎಲೆಯ ಆಕಾರ ಕೊಡಿ. ಲೈಟ್‌ಗಾಗಿ ನಡುವೆ ಮೇಣದಬತ್ತಿ ಉರಿಸಿ ಹಾಗೂ ಮನೆಯ ಲಾಬಿ ಅಥವಾ ಬಾಲ್ಕನಿಯಲ್ಲಿ ಅಲಂಕರಿಸಿ.

ಕೆಲವು ಗಾಜಿನ ಬಾಟಲ್‌ಗಳನ್ನು ಒಗ್ಗೂಡಿಸಿ. ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಣ್ಣ ಬಣ್ಣದ ಟ್ರಾನ್ಸ್ ಪರೆಂಟ್‌ ಶೀಟ್‌ಗಳನ್ನು ಬಾಟಲ್‌ಗಳ ಮೇಲೆ ಜೋಡಿಸಿ. ಅದಕ್ಕೂ ಮುಂಚೆ ಅತ್ಯಂತ ತೆಳ್ಳನೆಯ ಎಲ್ಇಡಿ ಲೈಟ್ಸ್ ಗಳನ್ನು ಹಾಕಿಕೊಳ್ಳಿ. ಎಲ್ಲ ಬಾಟಲ್‌ಗಳಲ್ಲಿ ಹಳದಿ ಬಣ್ಣದ ಲೈಟ್‌ಗಳನ್ನು ಹಾಕಿಕೊಳ್ಳುವುದರಿಂದ ವಿಶಿಷ್ಟ ಪರಿಣಾಮ ಕಂಡುಬರುತ್ತದೆ.

ಛಿದ್ರಗಳುಳ್ಳ ಅಲಂಕೃತ ಬ್ರಾಸ್‌ ಲ್ಯಾಂಪ್ಸ್ ಬೆಳಕಿಗೆ ಒಂದು ಹೊಸ ಆಯಾಮವನ್ನು ಕೊಡುತ್ತವೆ. ಈ ಲ್ಯಾಂಪ್ಸ್ ನಲ್ಲಿ ಅಲಂಕೃತ ಪ್ಯಾಟರ್ನ್‌ನಲ್ಲಿ ಇರುವ ಛಿದ್ರಗಳಿಂದ ನಾಲ್ಕೂ ಬದಿ ಸೂಗಸಾದ ಬೆಳಕು ಹೊರಹೊಮ್ಮಿ ವಾತಾವರಣಕ್ಕೆ ಹೊಸ ಮೆರುಗು ಕೊಡುತ್ತದೆ. ಜೊತೆಗೆ ಈ ತೆರನಾದ ಕೆಲವು ವಿಶಿಷ್ಟ ಲ್ಯಾಂಪ್ಸ್ ನಿಂದ ಗೋಡೆಯ ಮೇಲೆ ಹೂಗಳು ಅಥವಾ ಇತರೆ ಬಗೆಯ ಸುಂದರ ಆಕೃತಿಗಳು ರೂಪುಗೊಳ್ಳುತ್ತವೆ. ಅವು ಮನೆಗೆ ಹಬ್ಬದ ಕಳೆ ನೀಡುತ್ತವೆ.

ರೆಡ್‌ ಕಲರ್‌ ಕ್ರ್ಯಾಡ್‌ ಗ್ಲಾಸ್‌ ಯಾ ಟರ್ನ್‌ ಗಾಜಿನಂತಹ ಪರಿಣಾಮವನ್ನು ನೀಡುತ್ತದೆ. ಅದರೊಳಗೆ ಕ್ಯಾಂಡಲ್ ಅಥವಾ ದೀಪವಿಡಿ. ಈ ಕಂದೀಲಿನ ಮಂದ ಬೆಳಕು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.

ಸುಂದರ ಹೂಗಳು ಮತ್ತು ಇತರ ಆಕೃತಿಗಳುಳ್ಳ ಟೀ ಲೈಟ್ಸ್ ಕೂಡ ಬೆಳಕಿನ ವಿಶಿಷ್ಟ ಮೆರುಗು ನೀಡುತ್ತವೆ. ಈ ಚಿಕ್ಕ ಚಿಕ್ಕ ಲೈಟ್‌ಗಳಿಂದ ಚಿಮ್ಮುವ ಬೆಳಕು ಮನೆಗೆ ವಿಶಿಷ್ಟ ಲುಕ್ಸ್ ಕೊಡುತ್ತದೆ. ಅವನ್ನು ಆಕರ್ಷಕ ಟೀ ಲೈಟ್‌ ಹೋಲ್ಡರ್‌ನಲ್ಲಿಟ್ಟು ಮನೆಯ ಪ್ರತಿ ಮೂಲೆಗೂ ಆಕರ್ಷಕವಾದ ರೀತಿಯಲ್ಲಿ ಬೆಳಕು ಮೂಡಿಸಬಹುದು.

ಕ್ಯಾಂಡಲ್‌ಗಳ ಚಮತ್ಕಾರ

light-glowing-night-warm-restaurant-red-1345475-pxhere.com

ಸಾಮಾನ್ಯ ಕ್ಯಾಂಡಲ್‌ಗಳು ಬಣ್ಣ ಬಣ್ಣಗಳಲ್ಲಿ ಲಭಿಸುತ್ತವೆ. ಅವನ್ನೇ ಸಾಲುಸಾಲಾಗಿ ನಿಲ್ಲಿಸಿದರೆ ಕೋಣೆಯ ಎಲ್ಲ ಬದಿಗೂ ಬೆಳಕು ಸೊಗಸಾಗಿ ಪಸರಿಸುತ್ತದೆ. ಕ್ಯಾಂಡಲ್‌ಗಳು ಯಾವುದೇ ಸೈಜ್‌ನಲ್ಲಾದರೂ ಯಾವುದೇ ಶೇಪ್‌ನಲ್ಲಾದರೂ ದೊರೆಯುತ್ತವೆ. ಕ್ಯಾಂಡಲ್‌ಗಳನ್ನು ಡೆಕೊರೇಟಿವ್ ವ‌ಸ್ತುಗಳ ಜೊತೆಗೆ ಇಡಬಹುದು. ಅವುಗಳಿಗೆ ಗೋಲಾಕಾರದ ಶೇಪ್‌ ಕೊಟ್ಟು ಕೋಣೆಯಲ್ಲಿ ಅಲಂಕರಿಸಿ. ಅವುಗಳ ಮಿಣುಕು ಬೆಳಕು ದೀಪಾವಳಿಗೆ ಬಹಳ ಸೊಗಸೆನಿಸುತ್ತದೆ. ಪ್ಲೇಟಿಂಗ್‌ ಕ್ಯಾಂಡಲ್‌ಗಳು ಕೂಡ ವಿಶಿಷ್ಟ ಹಾಗೂ ಸುಂದರ ಪರ್ಯಾಯಗಳಾಗಿವೆ. ಮಣ್ಣಿನ ಅಥವಾ ಲೋಹದ ಬೌಲ್‌‌ನಲ್ಲಿ ನೀರು ತುಂಬಿ, ಪ್ಲೇಟಿಂಗ್‌ ಕ್ಯಾಂಡಲ್‌ಗಳನ್ನು ಅದರಲ್ಲಿ ಬಿಡಿ. ನೀರಿನಲ್ಲಿ ತೇಲುವ ದೀಪಗಳು ಬಹಳ ಸುಂದರ ಎನಿಸುತ್ತವೆ. ಅದೇ ನೀರಿನಲ್ಲಿ ಗುಲಾಬಿ ದಳಗಳು ಹಾಗೂ ಎಲೆಗಳನ್ನು ಹರಡಿ ಬೆಳಕಿನ ಜೊತೆಗೆ ಸುಂದರ ಹೊಂದಾಣಿಕೆ ತರಬಹುದು.

ಇದರ ಹೊರತಾಗಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಎಲ್ಇಡಿ ಕ್ಯಾಂಡಲ್‌ಗಳು ಕೂಡ ಬಂದಿದ್ದು, ಯಾವುದೇ ಕಿರಿಕಿರಿಯಿಲ್ಲದೆ ಇವು ಹಬ್ಬದ ದಿನಗಳಲ್ಲಿ ಮನೆಯನ್ನು ಬೆಳಗಿಸಲು ಅತ್ಯುತ್ತಮ ಎನಿಸುತ್ತವೆ. ಪಿಲ್ಲರ್‌ ಕ್ಯಾಂಡಲ್ಸ್, ವಿಶಿಷ್ಟ ಆಕಾರದ ಅಲಂಕಾರಿಕ ಕ್ಯಾಂಡಲ್ಸ್, ಪ್ರಿಂಟೆಡ್‌ ಮೋಟಿಫ್ಸ್ ಕ್ಯಾಂಡಲ್ಸ್ ಕೂಡ ಮನೆಯನ್ನು ಸುಂದರವಾಗಿ ಬೆಳಗಿಸುತ್ತವೆ. ಕಲರ್‌ ಬೇಜಿಂಗ್‌ ಕ್ಯಾಂಡಲ್‌ಗಳು ಕೂಡ ಹೆಚ್ಚು ಚರ್ಚೆಯಲ್ಲಿವೆ. ಏಕೆಂದರೆ ಅವು ರಿಮೋಟ್‌ ಕಂಟ್ರೋಲ್‌ನಿಂದ ನಿಯಂತ್ರಿಸಲ್ಪಡುತ್ತವೆ. ಈ ಕಾರಣದಿಂದ ನೀವು 1-2 ಪರ್ಯಾಯಗಳಿಂದ ಯಾವುದಾದರೂ 3 ವರ್ಣಗಳನ್ನು ಏಕಕಾಲಕ್ಕೆ ಪ್ರದರ್ಶಿತಗೊಳಿಸಬಹುದು. ಇವುಗಳ ಸುವಾಸನೆ ಹಾಗೂ ವರ್ಣ ಬದಲಾಯಿಸುವ ಸ್ಟೈಲ್‌‌ಗಳು ನಿಮ್ಮ ಮನೆಗೆ ಹೊಸ ರೂಪ ಕೊಡುತ್ತವೆ.

ಮೂಲೆ ಮೂಲೆಗೂ ದೀಪಗಳ ಬೆಳಕು

Lead1

ಪಾರಂಪರಿಕ ಮಣ್ಣಿನ ದೀಪಗಳ ಟ್ರೆಂಡ್‌ ಎಂದೂ ಕೊನೆಗೊಳ್ಳುವುದಿಲ್ಲ. ಹಾಗೆಂದೇ ಅವುಗಳಿಗೆ ಪ್ರತಿ ವರ್ಷ ಹೊಸ ಹೊಸ ರೂಪ ಕೊಡಲಾಗುತ್ತಿದೆ. ಪ್ರತಿ ಕೋಣೆಯ ಅಲಂಕಾರವನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಪೇಂಟ್‌ ಮಾಡುವುದರ ಜೊತೆ ಜೊತೆಗೆ ಡೆಕೋರೇಶನ್‌ ಮಾಡಲಾಗುತ್ತದೆ. ದೀಪಗಳನ್ನು ನಾವು ಮನೆಯ ಯಾವುದೇ ಮೂಲೆಯಲ್ಲಾದರೂ ಇಡಬಹುದು. ಅವುಗಳ ಸುತ್ತ ತಾಜಾ ಹೂಗಳ ಎಸಳುಗಳನ್ನು ಕಲಾತ್ಮಕ ರೀತಿಯಲ್ಲಿ ಅಲಂಕರಿಸಬಹುದು.

ಪ್ರತಿ ಆಕಾರ ಇನ್ನೋವೇಟಿವ್ ‌ಡಿಸೈನುಗಳಲ್ಲಿ ಲಭ್ಯವಿರುವ ದೀಪಗಳು ಪೇಂಟಿಂಗ್‌ ಮಾಡಿದ ರೀತಿಯಲ್ಲೂ ದೊರಕುತ್ತವೆ. ಡ್ರಾಯಿಂಗ್‌ ರೂಮಿನ ಗೋಡೆಗಳ ಜೊತೆ ಜೊತೆಗೆ ಇವನ್ನು ಸಾಲಾಗಿ ಪೇರಿಸಿಡಿ. ಏಕಕಾಲಕ್ಕೆ ಹೊರಹೊಮ್ಮುವ ಬೆಳಕು ವಿಶಿಷ್ಟತೆಯ ಮೆರುಗು ನೀಡುತ್ತವೆ. ಇವನ್ನು ಮೇಜಿನ ಮೇಲೂ ಅಲಂಕರಿಸಿ ಇಡಬಹುದು.

ಇತ್ತೀಚೆಗೆ ಎಲೆಕ್ಟ್ರಿಕಲ್ ದೀಪಗಳ ಹೊಸ ಟ್ರೆಂಡ್‌ ನೋಡಲು ಸಿಗುತ್ತಿದೆ. 20ಕ್ಕಿಂತ ಹೆಚ್ಚು ದೀಪಗಳುಳ್ಳ ಇವುಗಳ ಸೀರಿಯಲ್ ಸೆಟ್‌ನ್ನು ನೀವು ಯಾವುದೇ ಕೋಣೆಯಲ್ಲಾದರೂ ಹಾಕಬಹುದು. ಬಾಗಿಲುಗಳ ಮೇಲೂ ಹಾಕಬಹುದು. ಇದರ ಹೊರತಾಗಿ ಹ್ಯಾಂಗಿಂಗ್ ದೀಪಗಳು ಹಾಗೂ ಟವರ್‌ನಂತಹ ತಿರುಗುವ ದೀಪಗಳು ನಿಮ್ಮ ಮನೆಯ ಅಲಂಕಾರಕ್ಕೆ ಮೆರುಗು ನೀಡುತ್ತವೆ.

ಬ್ಯಾಟರಿಯ ದೀಪಗಳಿಂದಲೂ ಮನೆಗೆ ಫ್ಯಾನ್ಸಿ ಲುಕ್ಸ್ ನೀಡಬಹುದು. ಮಾರುಕಟ್ಟೆಯಲ್ಲಿ 30-40 ರೂ.ಗಳಿಗೆ ಬ್ಯಾಟರಿ ಚಾಲಿತ ದೀಪ ದೊರಕುತ್ತದೆ.

ಬ್ಯಾಟರಿ ಚಾಲಿತ ಗೋಲಾಕಾರದ ಸಿಲ್ವರ್‌ ಎಲ್ಇಡಿ ಲೈಟ್ಸ್ ನ ಬಳಕೆಯನ್ನು ಮನೆಯ ಯಾವುದೇ ಭಾಗದಲ್ಲಾದರೂ ಮಾಡಬಹುದು. ರೈಸ್‌ ಲೈಟ್ಸ್ ಕೂಡ ಒಂದು ಒಳ್ಳೆಯ ಪರ್ಯಾಯವಾಗಿದೆ. ಈ ಲೈಟ್‌ಗಳಲ್ಲಿರುವ 20 ಲ್ಯಾಂಟರ್ನ್‌ ಎರಡೂ ಬದಿಯಿಂದ ವಿಭಿನ್ನ ವರ್ಣದಲ್ಲಿ ಕಂಡುಬರುತ್ತದೆ. ಇದರಲ್ಲಿ ಸಾಮಾನ್ಯವಾಗಿ 38 ಬಲ್ಬ್ ಗಳು ಇರುತ್ತವೆ. ಅವನ್ನು ಕಿಟಕಿಯಲ್ಲಿ ಅಳವಡಿಸಬಹುದು. ಸಂಪೂರ್ಣ ಕಿಟಕಿ ಅದರಿಂದ ಝಗಮಗ ಎನ್ನುತ್ತದೆ.

– ಸುಮಾ ಸುರೇಶ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ