ನಾವು ಯಾರಿಗೇನೂ ಕಡಿಮೆ ಅಲ್ಲ! : ಜಿಂಬಾಬ್ವೆ ದೇಶದಲ್ಲಿ ಆನೆಗಳ ಸಂಪೂರ್ಣ ರಕ್ಷಣೆಯ ಜವಾಬ್ದಾರಿ ಈಗ ಮಹಿಳಾ ಸೈನಿಕರದ್ದು. ಅಕಾಶಿಂಗಾ ಎಂಬ ಹೆಸರಿನ ಈ ವೀರವನಿತೆ ಆನೆಗಳನ್ನು ಇತರ ಹಿಂಸಕಾರಕ ಪ್ರಾಣಿಗಳು ಹಾಗೂ ದಂತಚೋರರ ದೃಷ್ಟಿಯಿಂದ ಕಾಪಾಡುತ್ತಾಳೆ. ಹೆಣ್ಣು ಎಂದರೆ ಅಬಲೆ, ಶಕ್ತಿಹೀನಳು, ಗಂಡಿನ ಸಹಾಯ ಅತ್ಯಗತ್ಯ ಎಂಬುದು ಭ್ರಮೆ. ಎಂಥ ಎಂಟೆದೆಯ ಭಂಟನಿಗೂ ಈಕೆ ಮೂಳೆ ಮುರಿಯಬಲ್ಲಳು.

FCT-DIASPORA-FOCAL-POINT-OFFICER-1

 

ಪರಿಸರ ಸಂಧಾನಗಳಿಗೆ ಗೌರವಾದರ ಸಲ್ಲಬೇಕು : ಕೊರೋನಾ ಕ್ಲೈಮೇಟ್‌ ಕಂಟ್ರೋಲ್‌ನ್ನು ಮರೆತಿಲ್ಲ, ಇನ್ನಷ್ಟು ಮಹತ್ವಪೂರ್ಣ ಆಗಿಸಿದೆ, ಏಕೆಂದರೆ ಚೀನಾದ ಹಾನ್‌ನಿಂದ ಶುರುವಾದ ಈ ಮಹಾಮಾರಿಯ ಪ್ರಭಾವದಲ್ಲಿ ಬಾವಲಿಗಳ ಕೈವಾಡ ಇದೆಯೇ ಎಂದರೆ, ಆದಷ್ಟೂ ಕಾಡಿನ ನಾಶ ಮಾಡಬಾರದೆಂಬುದು. ಸರ್ಕಾರಗಳು ಜನರ ಪ್ರಾಣರಕ್ಷಣೆಗೆ ಹೋರಾಡುತ್ತಿವೆ. ಆದರೆ ವಿಶ್ವದಲ್ಲಿ ಎಲ್ಲೆಡೆ ಕಾಡು, ನೀರು, ಬೆಟ್ಟ, ನಗರ, ನದಿಗಳನ್ನು ಕಾಪಾಡಿಕೊಳ್ಳದಿದ್ದರೆ ಕೊರೋನಾದಂಥ ಮಹಾಮಾರಿಗಳು ಮತ್ತಷ್ಟು ಹೆಚ್ಚಾಗುತ್ತವೆ. 10 ವರ್ಷಗಳ ರೇನ್‌ ಪ್ಯಾಲೇಜ್‌, ಬ್ರಿಟಿಷ್‌ ಪಾರ್ಲಿಮೆಂಟ್‌ನ ಸಾಂಸದೆ ಕೆರೋಲೀನ್‌ ಲುಕಾಸ್‌ಗೆ ಇಂಗ್ಲೆಂಡಿನ ಕಿಶೋರರ ವತಿಯಿಂದ ಒಂದು ಪತ್ರ ನೀಡಿ, ಅವರು ಅಂತಾರಾಷ್ಟ್ರೀಯ ಪರಿಸರ ಸಂಧಾನಗಳ ಸಮರ್ಥನೆ ಮಾಡಬೇಕೆಂದು ಕೇಳಿಕೊಂಡರು. ಆಗ ಮಾತ್ರ ಮುಂದಿನ ಪೀಳಿಗೆ ಸುರಕ್ಷಿತವಾಗಿರಲು ಸಾಧ್ಯ. ಈಗ ನಿರ್ಧಾರ ತಳೆಯುತ್ತಿರುವವರು ಮುಂದಿನ 10-15 ವರ್ಷಗಳ ನಂತರ ಬದುಕಿರುವುದಿಲ್ಲ, ಯಾರು ಬದುಕಿರುತ್ತಾರೋ ಅವರ ಮಾತನ್ನು ಕೇಳುವವರೇ ಇಲ್ಲ.

6DGTP6EUSFGRLIDCB6UPNJXZ5I

ಚುನಾವಣೆಯ ಸಲುವಾಗಿ : ಇತ್ತೀಚೆಗೆ ಅಮೆರಿಕಾದ ರಾಜಕೀಯಕ್ಕೆ ಬಲು ಬಿಸಿ ಏರುತ್ತಿದೆ. ಏಕೆಂದರೆ ನವೆಂಬರ್‌ 3 ರಂದು  ನಡೆಯಲಿರುವ ಚುನಾವಣೆ ಪ್ರಚಾರ ಈಗ ತಾರಕಕ್ಕೇರಿದೆ. ಇದರಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಡೆಮೋಕ್ರೆಟಿಕ್ ಪಾರ್ಟಿಯ ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಆಗಿದ್ದಾರೆ. ಅವರ ಕಡೆಯ ಲೇಕ್‌ ವ್ಯೂ ಎಂಬ ಮೆಡಿಕಲ್

ನ್ನು ಸಂಗ್ರಹಿಸಿ, ಅಗತ್ಯವಿರುವ ಬಡಬಗ್ಗರಿಗೆ ಹಂಚುವಲ್ಲಿ ಬಿಝಿ ಆಗಿದ್ದಾರೆ. ಚರ್ಚು, ದೇವಾಲಯಗಳಿಗೆ ಹೋಗುವ ಬದಲು ಹೀಗೆ ಜನರ ಸೇವೆ ಮಾಡಿ.

samachar-darshan

ಯಾವ ವಸ್ತುವೂ ಸುಲಭವಾಗಿ ಸಿಕ್ಕದು : ಮ್ಯೂಸಿಕಲ್ ಕನ್ಸರ್ಟ್‌ ಎಂಬುದು ಕೊರೋನಾ ಮಹಾಮಾರಿಯಿಂದ ನಿಂತೇಹೋಗಿದೆ. ಆದರೆ ಆನ್‌ಲೈನ್‌ ಡ್ಯಾನ್ಸ್ ಪರ್ಫಾರ್ಮೆನ್ಸ್ ಹೆಚ್ಚು ಜನಪ್ರಿಯವಾಗುತ್ತಿದೆ. ಜನ ಟಿವಿ ನೋಡಿ ಬೇಸತ್ತಾಗ, ಕಂಪ್ಯೂಟರ್‌ ಸ್ಕ್ರೀನ್ ಮೇಲೆ ಪೇಮೆಂಟ್‌ ಮಾಡಿ ಲಿಂಕ್‌ ಪಡೆಯುತ್ತಾರೆ ಹಾಗೂ ಮನೆಯಲ್ಲಿ ಕುಳಿತೇ ಡ್ಯಾನ್ಸ್ ಪ್ರೋಗ್ರಾಂ ನೋಡಿ ಎಂಜಾಯ್ ಮಾಡುತ್ತಾರೆ. ಆದರೆ ಡ್ಯಾನ್ಸರ್ಸ್‌ ತುಸು ರಿಸ್ಕ್ ತೆಗೆದುಕೊಳ್ಳಬೇಕಿದೆ, ಅವರು ಮಾಸ್ಕ್ ರಹಿತರಾಗಿ ವೇದಿಕೆ ಏರಬೇಕಾಗುತ್ತದೆ. ಏನು ಮಾಡುವುದು…. ಉದರ ನಿಮಿತ್ತಂ ಬಹುಕೃತ ವೇಷಂ!

02b8093b-fce3-4a54-88cb-6049c09caad7

ತಮ್ಮವರನ್ನು ನೋಡಿಕೊಳ್ಳುವ ಸಲುವಾಗಿ : ಭಾರತೀಯರು ವಿಶ್ವದೆಲ್ಲೆಡೆ ಹರಡಿರುವಂತೆಯೇ ನೈಜೀರಿಯನ್ನರು ಕೂಡ ಹರಡಿದ್ದಾರೆ. ಆಫ್ರಿಕಾದ ಪಶ್ಚಿಮ ತಟದ ಈ ಮಂದಿ ಇದೀಗ ಅಮೆರಿಕಾದ ಉನ್ನತ ಹುದ್ದೆಗಳಿಗೇರುತ್ತಿದ್ದಾರೆ, ವ್ಯಾಪಾರಗಳಲ್ಲೂ ಅತಿ ಮುಂದು. ಹೀಗಾಗಿ ನೈಜೀರಿಯನ್‌ ಸರ್ಕಾರ ತಮ್ಮವರಿಗಾಗಿ ವಿಶೇಷ ಸಚಿವಾಲಯ ಸಹ ಸ್ಥಾಪಿಸಿದೆ, ಅದರ ಮಂತ್ರಿ ದೇಶ ವಿದೇಶ ತಿರುಗಿ ತಮ್ಮವರ ಹಿತಚಿಂತನೆಗೆ ತೊಡಗುತ್ತಾರೆ. ನಮ್ಮವರು ವಿದೇಶಗಳಲ್ಲಿ ನೆಮ್ಮದಿಯಾಗಿದ್ದಾರಾ? ಹೆಚ್ಚು ಚಿಂತೆ ಬೇಡ, ಅವರು ಇತರ ವಿದೇಶಿಯರಿಗಿಂತ ಎಷ್ಟೋ ಸ್ಮಾರ್ಟ್‌ ಆಗಿ ನೆಲೆ ಕಾಣುತ್ತಿದ್ದಾರೆ.

Akashinga_AKA_NG-019-scaled

ಈ ಪರಿಯ ವಿಶಿಷ್ಟ ವಿರೋಧ : ಪೊಲೀಸರ ಅತಿ ದೌರ್ಜನ್ಯದ ಕಥೆಗಳು ಕೇವಲ ನಮ್ಮ ಉ. ಪ್ರದೇಶ ಮಾತ್ರವಲ್ಲ, ಅಮೆರಿಕಾದಲ್ಲೂ ಧಂಡಿಯಾಗಿ ಕೇಳಿಬರುತ್ತಿ. ಅಲ್ಲಿ ಕರಿಯರನ್ನು ಹೀನಾಯವಾಗಿ ಬರ್ಬರ ರೀತಿಯಲ್ಲಿ ಕೊಲ್ಲಲಾಗುತ್ತದೆ, ಇಲ್ಲಿನ ದಲಿತರನ್ನು ಗೋಳುಗುಟ್ಟಿಸುವಂತೆ. ವ್ಯತ್ಯಾಸ ಇಷ್ಟೆ, ಅಲ್ಲಿ ವಿದ್ಯಾವಂತರು ರಸ್ತೆ ಎಂದೂ ನೋಡದೆ ಅಲ್ಲಿಯೇ ಮಲಗಿ ವಿರೋಧಿಸಿದರೆ, ನಮ್ಮಲ್ಲಿ ವಿದ್ಯಾವಂತರು ಮೂಢನಂಬಿಕೆಯ ಬೆಂಬಲಿಗರಾಗಿದ್ದಾರೆ.

pr201643d

ಲಾಕ್‌ ಡೌನ್‌ನಿಂದ ಲಾಭ : ಇತ್ತೀಚಿನ ಲಾಕ್‌ ಡೌನ್‌ ಲಾಭವನ್ನು, ವಿಶ್ವದೆಲ್ಲೆಡೆ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಟ್ಟಡಗಳ ನಿರ್ಮಾಣ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇಂಗ್ಲೆಂಡಿನ ಸೇಂಟ್‌ ಲೂಸಿಯಾ ಹೈಸ್ಕೂಲಿನಲ್ಲಿ ಮಲ್ಟಿಪರ್ಪಸ್‌ ಹಾಲ್ ಕಟ್ಟಿಸಲಾಗುತ್ತಿದೆ. ಅಲ್ಲಿನ ಮಂತ್ರಿ ಸಾಹೇಬರೂ ಈ ಮುಚ್ಚಲ್ಪಟ್ಟ ಶಾಲೆಯ ಲಾಭಕ್ಕಾಗಿ ಓಡಿಬಂದರು. ವಿಲೌನಿಂದ ದಂಪತಿಗಳಿಗೆ ಪುರಸತ್ತಿನ ಸಾಮೀಪ್ಯ ಸಿಗುತ್ತಿದೆ. ಮುಂದಿನ ವರ್ಷದಲ್ಲಿ ಜನಸಂಖ್ಯೆ ಎಷ್ಟು ಹೆಚ್ಚಲಿದೆ ಎಂಬುದನ್ನು ಗಮನಿಸಬೇಕಷ್ಟೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ