ಒಮ್ಮೊಮ್ಮೆ ಆಫೀಸಿನಲ್ಲಿ ಕೆಲಸ ಮಾಡುವಾಗ ಮೂಡ್‌ ಆಫ್‌ ಆಗುತ್ತದೆ. ಇಲ್ಲವೇ ಮನೆಯಲ್ಲಿದ್ದಾಗ ಹಳೆಯ ಹೊಸ ನೆನಪುಗಳು ಉಕ್ಕಿ ಬಂದು ಮನಸ್ಸು ವಿಚಲಿತವಾಗುತ್ತದೆ.

ಇಂತಹ ಲಕ್ಷಣಗಳು ಕಂಡು ಬಂದರೆ ನೀವು ಎಚ್ಚರಗೊಳ್ಳುವುದು ಒಳ್ಳೆಯದು. ನಿಮ್ಮ ದೈನಂದಿನ ದಿನಚರಿಯಲ್ಲಿ ಅಡ್ಡಿಯುಂಟಾಗುತ್ತದೆ ಎಂದೆನಿಸಿದಾಗಲೇ ನೀವು ಜಾಗೃತರಾಗುವುದು ಒಳ್ಳೆಯದು.

ನೀವು ಒಂದು ನಿರ್ದಿಷ್ಟ ಕೆಲಸವನ್ನು ನಿಗದಿತ ವೇಳೆಯಲ್ಲಿ ಮುಗಿಸಲು ಆಗುತ್ತಿಲ್ಲ ಎನಿಸಿದರೆ, ನಿಮಗೆ ಹಸಿ ಕಡಿಮೆ ಅಥವಾ ಹೆಚ್ಚು ಆಗುತ್ತಿರಬಹುದು. ನಿಮಗೆ ಗಂಡ, ಮಕ್ಕಳ ಮೇವೆ ಮೊದಲಿನಂತೆ ಗಮನ ಕೊಡಲು ಆಗುತ್ತಿಲ್ಲ. ಮಾತು ಮಾತಿಗೂ ಸಿಡಿಮಿಡಿತನ, ಕೋಪ ಅಥವಾ ಖಿನ್ನತೆ ಉಂಟಾಗುತ್ತಿರಬಹುದು. ಇದರರ್ಥ ನೀವು ನಿಮ್ಮ ಮೆದುಳಿನ ಜೀವಕೋಶಗಳನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದರ ಕಾರಣವನ್ನು ಯಾರೂ ಕಂಡುಕೊಳ್ಳಲು ಆಗುವುದಿಲ್ಲ. ಆದರೆ ಬಹಳಷ್ಟು ಜನರು ಈ ತೊಂದರೆಗೆ ಸಿಲುಕುತ್ತಿದ್ದಾರೆ.

ಮೇಲ್ಕಂಡ ಲಕ್ಷಣಗಳಲ್ಲಿ ನಿಮಗೆ ಯಾವುದಾದರೊಂದು ಕಂಡುಬಂದರೂ, ನಿಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿಯಾಗುತ್ತಿದೆ ಎಂದರ್ಥ. ಆದರೆ ಮಾಹಿತಿಯ ಕೊರತೆಯಿಂದ ಅದರ ಅನುಭವ ನಿಮಗೆ ಆಗದೇ ಹೋಗಬಹುದು. ಆದರೆ ಅವೆಲ್ಲ ಸಾಮಾನ್ಯ ಲಕ್ಷಣಗಳು. ಸಕಾಲಕ್ಕೆ ಅಭ್ಯಾಸಗಳನ್ನು ಬದಲಿಸಿಕೊಂಡರೆ ಎಲ್ಲವೂ ಸರಿ ಹೋಗುತ್ತದೆ ಹಾಗೂ ನಿಮ್ಮ ನಿಯಂತ್ರಣಕ್ಕೆ ಸಿಗುತ್ತದೆ.

ಏನಿದು ಬ್ರೇನ್ಸೆಲ್ಸ್?

ಹಾನಿ ಯಾವುದೇ ಕಾರಣದಿಂದ ಆಗುತ್ತಿರಬಹುದು. ಅದನ್ನು ವೈಜ್ಞಾನಿಕ ಅಥವಾ ತಾಂತ್ರಿಕವಾಗಿ ಕಂಡುಕೊಂಡರೂ, ಹಾನಿಯಿಂದ ಪಾರಾಗುವ ಉಪಾಯಗಳನ್ನು ಕಂಡುಕೊಳ್ಳಲು ಕಷ್ಟ ಆಗಲಾರದು. ಬ್ರೇನ್‌ ಸೆಲ್ಸ್ ಅಂದರೆ ಮೆದುಳಿನ ಜೀವಕೋಶಗಳ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಅವು ನಮ್ಮ ದೇಹದ ಮಹತ್ವದ ಭಾಗಗಳಷ್ಟೇ ಅಲ್ಲ, ಅವು ನಮಗೆ ಪ್ರತಿಯೊಂದು ಬಗೆಯ ಭಾವನೆಗಳ ತೀವ್ರತೆಯನ್ನು ತಿಳಿಸಿಕೊಡುತ್ತವೆ. ಜೊತೆಗೆ ಅವುಗಳಿಂದ ಎಚ್ಚರದಿಂದಿರಲು ಕೂಡ ಕಲಿಸಿಕೊಡುತ್ತವೆ.

ಮನೋವಿಜ್ಞಾನದ ಕ್ಲಿಷ್ಟಕರ ಭಾಷೆಯನ್ನು ಮನೋಚಿಕಿತ್ಸಕ ವಿನಯ್‌ ಸರಳ ರೀತಿಯಲ್ಲಿ ಹೀಗೆ ಹೇಳುತ್ತಾರೆ. ಬ್ರೇನ್‌ ಸೆಲ್ಸ್ ಎರಡು ಪ್ರಕಾರದ್ದಾಗಿವೆ. ಮೊದಲನೆಯ ಬ್ರೇನ್‌ ಸೆಲ್ಸ್ ನ್ನು `ರಿಸೆಪ್ಟರ್‌’ ಎಂದು ಹೇಳಲಾಗುತ್ತದೆ. ಅವುಗಳ ಕೆಲಸ `ರಿಸೀವ್‌’ ಮಾಡುವುದಾಗಿದೆ. ಎರಡನೆಯ ಪ್ರಕಾರದ ಜೀವಕೋಶ `ಎಫೆಕ್ಟರ್‌.’ ಅದು ಮೆದುಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಅದನ್ನು ಕೂಡ ಸರಳವಾಗಿ ಈ ಉದಾಹರಣೆ ಮೂಲಕ ತಿಳಿದುಕೊಳ್ಳಬಹುದು. ನಾವು ಯಾವುದಾದರೂ ಬಿಸಿ ಪದಾರ್ಥದ ಮೇಲೆ ಕೈ ಇಟ್ಟಾಗ ರಿಸೆಪ್ಟೆರ್‌ ಬಿಸಿತನದ ಅನುಭವ ಮಾಡಿಕೊಳ್ಳುತ್ತದೆ. ಎಫೆಕ್ಟರ್‌ ನಮಗೆ ಆ ಬಿಸಿ ವಸ್ತುವಿನ ಮೇಲಿಂದ ಕೈ ತೆಗೆಯಲು ಸೂಚಿಸುತ್ತದೆ. ವೈಜ್ಞಾನಿಕವಾಗಿ ಇದನ್ನು `ರಿಫ್ಲೆಕ್ಸ್ ಆ್ಯಕ್ಷನ್‌’ ಎನ್ನುತ್ತಾರೆ.

ಹಾನಿಕಾರಕ ಅಭ್ಯಾಸಗಳು

ನಮ್ಮ ಅಭ್ಯಾಸಗಳು ನಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತಿಯೆ? ಇದಕ್ಕೆ ಉತ್ತರ ಹೌದು ಎಂದಾಗಿದೆ. ಅದರಲ್ಲೂ ಕೆಟ್ಟ ಅಭ್ಯಾಸಗಳು ನಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟು ಮಾಡಿ ನಮ್ಮನ್ನು ಗೊಂದಲಕ್ಕೆ ಕೆಡತ್ತವೆ. ಆ ಹಾನಿಕಾರಕ ಅಭ್ಯಾಸಗಳನ್ನು ನಾವು ಸಕಾಲಕ್ಕೆ ಅರಿತುಕೊಂಡರೆ ಜೀವನ ಬಹಳಷ್ಟು ಸುಲಭವಾಗುತ್ತದೆ.

ಎಷ್ಟೋ ಸಲ ನಾವು ಒತ್ತಡವನ್ನು ಮೈಗೂಡಿಸಿಕೊಂಡು ಬಿಡುತ್ತೇವೆ. ಒಮ್ಮೊಮ್ಮೆ ಅದು ಪರಿಸ್ಥಿತಿ ವಶಾತ್‌ ಬಂದುಬಿಡುತ್ತದೆ. ಧಾವಂತದ ಜೀವನದಲ್ಲಿ ಒತ್ತಡದ ಜೀವನದಿಂದ ಬಚಾವಾಗುವುದು ಕಷ್ಟ. ಆದರೆ ಅದನ್ನು ಅಭ್ಯಾಸ ಮಾಡಿಕೊಂಡರೆ, ಮೆದುಳಿನ ಜೀವಕೋಶಗಳ ಸಮತೋಲನ ಬಿಗಡಲಾಯಿಸಲಾರಂಭಿಸುತ್ತದೆ. ಒತ್ತಡದ ಸ್ಥಿತಿಯಲ್ಲಿ ನಮ್ಮ ದೇಹದಲ್ಲಿ ಕಾರ್ಟಿಸೋಲ್ ‌ಎಂಬ ರಾಸಾಯನಿಕ ಸ್ರಾವವಾಗುತ್ತದೆ. ಅದೇ ಮೆದುಳಿನ ಜೀವಕೋಶಗಳಿಗೆ ಸಾಕಷ್ಟು ಹಾನಿಯುಂಟು ಮಾಡುತ್ತದೆ.

ಒತ್ತಡದಿಂದ ಪಾರಾಗುವ ಉಪಾಯವೆಂದರೆ, ನಾವು ಸದಾ ಒತ್ತಡದಿಂದ ದೂರಾಗುವ ಪ್ರಯತ್ನ ಮಾಡಬೇಕೇ ಹೊರತು, ಅದನ್ನು ಹೆಚ್ಚಿಸುವಂತಹ ಪ್ರಯತ್ನ ಮಾಡಬಾರದು. ಒಂದು ಚಿಕ್ಕ ಉದಾಹರಣೆಯಿಂದ ಅದನ್ನು ಹೀಗೆ ತಿಳಿಯಬಹುದು. ಮಗುವಿನ ಶಾಲೆ ಬಸ್‌ ಸಮಯಕ್ಕೆ ಸರಿಯಾಗಿ ಬರದೇ ಇದ್ದಾಗ, ನಿಮಗೆ ಆತಂಕ ಉಂಟಾಗುತ್ತದೆ. ಏಕೆ ತಡವಾಗುತ್ತಿರಬಹುದು, ಅಪಘಾತ ಏನಾದರೂ ಸಂಭವಿಸಿರಬಹುದೆ ಅಥವಾ ಟ್ರಾಫಿಕ್‌ ಜಾಮ್ ನಿಂದ ನಿಲ್ಲದೆ ಹಾಗೆಯೇ ಹೋಗಿರಬಹುದು. ಮಗು ಇಳಿಯದೆ ಇದ್ದಿರಬಹುದು. ಹೀಗೆ ಏನೆಲ್ಲ ಕಲ್ಪನೆ ಮಾಡಿಕೊಳ್ಳುತ್ತೀರಿ.

ಈ ತೆರನಾದ ಹಲವು ಆತಂಕಗಳು ಬಹಳ ಕಡಿಮೆ ಸಮಯದಲ್ಲಿ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತವೆ. ಇಂತಹ ಸಮಯದಲ್ಲಿ ನೀವು ಧೈರ್ಯದಿಂದ ಕಾರ್ಯ ಪ್ರವೃತ್ತರಾಗಬೇಕು. ಏಕೆಂದರೆ ಮಗು ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಬಂದುಬಿಟ್ಟರೆ, ಕೆಲವೇ ನಿಮಿಷಗಳ ಮೊದಲಿನ ಗಾಬರಿ ಅಥವಾ ಒತ್ತಡವನ್ನು ನೀವು ಮರೆತುಬಿಡುತ್ತೀರಿ.

ಒತ್ತಡ ಮುಕ್ತರಾಗುತ್ತಿದ್ದಂತೆಯೇ ಮೆದುಳಿನ ಜೀವಕೋಶಗಳು ಸಮತೋಲಿತಗೊಳ್ಳುತ್ತವೆ. ಹೀಗಾಗಿ ಒತ್ತಡವನ್ನು ಅಭ್ಯಾಸವಾಗಿಸಿಕೊಳ್ಳಬೇಡಿ.

ಎರಡನೇ ಮುಖ್ಯ ಕಾರಣವೆಂದರೆ, ನೀವು ಸಕಾಲಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು. ತಡವಾಗಿ ಮಲಗುವ ಅಭ್ಯಾಸದಿಂದ ಮೆದುಳಿನ ಜೀವಕೋಶಗಳು ಅಸ್ತವ್ಯಸ್ತಗೊಳ್ಳುತ್ತವೆ. ಹೀಗಾಗಿ ತಡರಾತ್ರಿಯತನಕ ಎಚ್ಚರದಿಂದಿರಬೇಡಿ. 7 ಗಂಟೆಗಳ ಗುಣಮಟ್ಟದ ನಿದ್ರೆ ಅತ್ಯವಶ್ಯಕ. ಇದರಿಂದ ಮೆದುಳಿನ ಜೀವಕೋಶಗಳಿಗೆ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಒಳ್ಳೆಯ ಅವಕಾಶ ದೊರಕುತ್ತದೆ.

ಏನು ಮಾಡಬೇಕು? ಏನು ಮಾಡಬಾರದು?

ಡಯೆಟ್ಬಗ್ಗೆ ಗಮನ ಕೊಡಿ : ಜಂಕ್‌ ಹಾಗೂ ಫಾಸ್ಟ್ ಫುಡ್‌ಗಳು, ಮಸಾಲೆಯುಕ್ತ ಆಹಾರ ಹಾಗೂ ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ ಮೆದುಳಿನ ಜೀವಕೋಶಗಳ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ. ಹೆಚ್ಚಿನ ಫಾಸ್ಟ್ ಫುಡ್‌ಗಳು ಮತ್ತು ಪ್ರಿಸರ್ವೇಟಿವ್ಸ್ ಆಹಾರ ಮೆದುಳಿನ ಜೀವಕೋಶಗಳ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತವೆ. ಏಕೆಂದರೆ ಅದರಲ್ಲಿರುವ ಎಕ್ಸೊಟಾಕಿವ್ ‌ಬ್ರೇನ್‌ ಸೆಲ್ಸ್ ನ್ನು ಬ್ಲಾಕ್‌ ಮಾಡುತ್ತದೆ. ಹೀಗಾಗಿ ಆಹಾರ ಪೇಯಗಳ ಅಭ್ಯಾಸವನ್ನು ಸರಿಯಾಗಿಟ್ಟುಕೊಳ್ಳಿ.

ಆಲಸ್ಯತನ : ಇದು ಎಂತಹ ಒಂದು ಅಭ್ಯಾಸ ಅಥವಾ ಅವಸ್ಥೆಯೆಂದರೆ, ಅದರಿಂದ ಬ್ರೇನ್‌ ಸೆಲ್ಸ್ ಕೂಡ ನಿಷ್ಕ್ರಿಯಗೊಂಡು, ಸ್ವಭಾವ ಅಥವಾ ಮೂಡ್‌ ಮೇಲೆ ತಮ್ಮ ಪ್ರಭಾವ ಅವಶ್ಯವಾಗಿ ತೋರಿಸುತ್ತವೆ. ವ್ಯಾಯಾಮ ಮಾಡುವುದರಿಂದ ಒತ್ತಡದ ಮಟ್ಟ ಕಡಿಮೆಯಾಗುತ್ತದೆ ಹಾಗೂ ಮಾಡದೇ ಇದ್ದರೆ ಹೆಚ್ಚುತ್ತದೆ. ಬ್ರೇನ್‌ ಸೆಲ್ಸ್ ಗಳು ಸಕ್ರಿಯವಾಗಿರಲು ನಿಯಮಿತವಾಗಿ ವ್ಯಾಯಾಮ ಮಾಡಿ. ಇದರಿಂದ ಮೆದುಳಿನ ರಕ್ತ ಸಂಚಾರ ಹೆಚ್ಚುತ್ತದೆ. ಬ್ರೇನ್‌ ಸೆಲ್ಸ್ ಸರಿಯಾಗಿ ಕೆಲಸ ಮಾಡಲು ತಜ್ಞರು ಹೇಳುವ ವ್ಯಾಯಾಮವೆಂದರೆ ಅದು ನಡಿಗೆ. ಪ್ರತಿದಿನ 3-4 ಕಿ.ಮೀ. ನಡೆಯುವುದರಿಂದ ಬ್ರೇನ್‌ ಸೆಲ್ಸ್ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ.

ಉದ್ವೇಗ ಯಾವುದೇ ರೀತಿಯಲ್ಲಿ ಆಗಬಹುದು. ನೀವು ಮಾತು ಮಾತಿಗೆ ಉದ್ವೇಗಕ್ಕೊಳಗಾಗುವ ಅಭ್ಯಾಸ ಮಾಡಿಕೊಂಡಿದ್ದಲ್ಲಿ, ನೀವು ತಕ್ಷಣವೇ ಎಚ್ಚರಗೊಳ್ಳಿ. ಏಕೆಂದರೆ ಅದರಿಂದಲೂ ಮೆದುಳಿನ ಜೀವಕೋಶಗಳು ಅಸ್ತವ್ಯಸ್ತಗೊಳ್ಳುತ್ತವೆ.

ಕಡಿಮೆ ನೀರು ಕುಡಿಯುವ ಅಭ್ಯಾಸ ಕೂಡ ಮೆದುಳಿಗೆ ಬಾಧೆಯುಂಟು ಮಾಡುತ್ತದೆ. ಹೀಗಾಗಿ ಪ್ರತಿದಿನ ಕನಿಷ್ಠ 8 ಗ್ಲಾಸ್‌ ನೀರನ್ನು ಅವಶ್ಯವಾಗಿ ಕುಡಿಯಿರಿ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಹಿಳೆಯರು ನೀರನ್ನೇ ಕುಡಿಯುವುದಿಲ್ಲ. ಏಕೆಂದರೆ ಪದೇಪದೇ ಮೂತ್ರ ವಿಸರ್ಜನೆಗೆ ಹೋಗುವಂತೆ ಆಗಬಾರದು ಎನ್ನುವುದು ಅವರ ಆತಂಕವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಅಷ್ಟು ದೊಡ್ಡ ಸಮಸ್ಯೆಯಲ್ಲ. ಟಾಯ್ಲೆಟ್‌ಗಳು ಎಲ್ಲೆದರಲ್ಲಿ ಇವೆ. ಉದ್ದೇಶಪೂರ್ಕವಾಗಿ ನೀರನ್ನು ಕುಡಿಯದೇ ಇರುವುದರಿಂದ ಬ್ರೇನ್‌ ಸೆಲ್ಸ್ ಬೇರೆ ಯಾವುದೇ ಕಾರಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಹು ಬೇಗ ನಿಷ್ಕ್ರಿಯವಾಗುತ್ತವೆ.

ಇದನ್ನು ಕೂಡ ಗಮನದಲ್ಲಿಡಿ

ಇವು ಎಂತಹ ಹಾನಿಕಾರಕ ಅಭ್ಯಾಸಗಳು ಅಥವಾ ಸ್ಥಿತಿಯೆಂದರೆ, ಅವುಗಳಿಗೆ ನೀವೇ ಸ್ವತಃ ಜವಾಬ್ದಾರರು. ಅವುಗಳಿಂದ ಯಾವ ಯಾವ ರೀತಿಯ ಹಾನಿಯಾಗಬಹುದು ಎಂಬುದು ನಿಮಗೆ ಗೊತ್ತೇ ಆಗುವುದಿಲ್ಲ. ಅದು ನಿಮ್ಮ ಅರಿವಿಗೆ ಬಂದರೆ ಹಲವು ತೊಂದರೆ ತಾಪತ್ರಯಗಳಿಂದ ದೂರ ಇರಬಹುದು.

ಬ್ರೇನ್‌ ಸೆಲ್ಸ್ ನ ಕ್ರಿಯಾಶೀಲತೆ ಹೆಚ್ಚಿಸಲು ಪೌಷ್ಟಿಕ ಆಹಾರ ಸೇವನೆ ಅತ್ಯವಶ್ಯ. ಜಂಕ್‌ ಫುಡ್‌ ಹಾಗೂ ಫಾಸ್ಟ್ ಫುಡ್‌ಗಳ ಬದಲಿಗೆ ಹಣ್ಣುಗಳು ಮತ್ತು ಡ್ರೈಫ್ರೂಟ್ಸ್ ಸೇವನೆ ಲಾಭಕರ. ಹಸಿರು ತರಕಾರಿಗಳು ಮೆದುಳಿನ ಮಿತ್ರರಾಗಿವೆ. ದಿನಕ್ಕೆ 2-3 ಸಲ ಚಹಾ ಕುಡಿಯುವುದು ಕೂಡ ಮೆದುಳಿಗೆ ಉಪಯುಕ್ತ.

ಮಧುಮೇಹ, ರಕ್ತದೊತ್ತಡ ಹಾಗೂ ಹೃದ್ರೋಗಿಗಳಂತೂ ಹೆಚ್ಚಿನ ಕಾಳಜಿ ವಹಿಸುತ್ತ ಹಾನಿಕಾರಕ ಅಭ್ಯಾಸಗಳಿಂದ ದೂರ ಇರಬೇಕು. ಉಪಯುಕ್ತ ಅಭ್ಯಾಸಗಳನ್ನು ಮೈಗೂಡಿಸಿಕೊಂಡು ಹಾನಿಕಾರಕ ಅಭ್ಯಾಸಗಳನ್ನು ನಿಮ್ಮಿಂದ ದೂರ ಇಡಬೇಕು. ಪರಿಪೂರ್ಣ ನಿದ್ರೆ, ಪೌಷ್ಟಿಕ ಆಹಾರ, ವ್ಯವಸ್ಥಿತ ದಿನಚರಿ, ವ್ಯಾಯಾಮ ಮತ್ತು ನೀರು ಕುಡಿಯುವುದು ಒಳ್ಳೆಯ ಅಭ್ಯಾಸಗಳಾಗಿವೆ.

ಗೀತಾ ಭರತ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ