ಒಮ್ಮೊಮ್ಮೆ ಆಫೀಸಿನಲ್ಲಿ ಕೆಲಸ ಮಾಡುವಾಗ ಮೂಡ್‌ ಆಫ್‌ ಆಗುತ್ತದೆ. ಇಲ್ಲವೇ ಮನೆಯಲ್ಲಿದ್ದಾಗ ಹಳೆಯ ಹೊಸ ನೆನಪುಗಳು ಉಕ್ಕಿ ಬಂದು ಮನಸ್ಸು ವಿಚಲಿತವಾಗುತ್ತದೆ.

ಇಂತಹ ಲಕ್ಷಣಗಳು ಕಂಡು ಬಂದರೆ ನೀವು ಎಚ್ಚರಗೊಳ್ಳುವುದು ಒಳ್ಳೆಯದು. ನಿಮ್ಮ ದೈನಂದಿನ ದಿನಚರಿಯಲ್ಲಿ ಅಡ್ಡಿಯುಂಟಾಗುತ್ತದೆ ಎಂದೆನಿಸಿದಾಗಲೇ ನೀವು ಜಾಗೃತರಾಗುವುದು ಒಳ್ಳೆಯದು.

ನೀವು ಒಂದು ನಿರ್ದಿಷ್ಟ ಕೆಲಸವನ್ನು ನಿಗದಿತ ವೇಳೆಯಲ್ಲಿ ಮುಗಿಸಲು ಆಗುತ್ತಿಲ್ಲ ಎನಿಸಿದರೆ, ನಿಮಗೆ ಹಸಿ ಕಡಿಮೆ ಅಥವಾ ಹೆಚ್ಚು ಆಗುತ್ತಿರಬಹುದು. ನಿಮಗೆ ಗಂಡ, ಮಕ್ಕಳ ಮೇವೆ ಮೊದಲಿನಂತೆ ಗಮನ ಕೊಡಲು ಆಗುತ್ತಿಲ್ಲ. ಮಾತು ಮಾತಿಗೂ ಸಿಡಿಮಿಡಿತನ, ಕೋಪ ಅಥವಾ ಖಿನ್ನತೆ ಉಂಟಾಗುತ್ತಿರಬಹುದು. ಇದರರ್ಥ ನೀವು ನಿಮ್ಮ ಮೆದುಳಿನ ಜೀವಕೋಶಗಳನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದರ ಕಾರಣವನ್ನು ಯಾರೂ ಕಂಡುಕೊಳ್ಳಲು ಆಗುವುದಿಲ್ಲ. ಆದರೆ ಬಹಳಷ್ಟು ಜನರು ಈ ತೊಂದರೆಗೆ ಸಿಲುಕುತ್ತಿದ್ದಾರೆ.

ಮೇಲ್ಕಂಡ ಲಕ್ಷಣಗಳಲ್ಲಿ ನಿಮಗೆ ಯಾವುದಾದರೊಂದು ಕಂಡುಬಂದರೂ, ನಿಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿಯಾಗುತ್ತಿದೆ ಎಂದರ್ಥ. ಆದರೆ ಮಾಹಿತಿಯ ಕೊರತೆಯಿಂದ ಅದರ ಅನುಭವ ನಿಮಗೆ ಆಗದೇ ಹೋಗಬಹುದು. ಆದರೆ ಅವೆಲ್ಲ ಸಾಮಾನ್ಯ ಲಕ್ಷಣಗಳು. ಸಕಾಲಕ್ಕೆ ಅಭ್ಯಾಸಗಳನ್ನು ಬದಲಿಸಿಕೊಂಡರೆ ಎಲ್ಲವೂ ಸರಿ ಹೋಗುತ್ತದೆ ಹಾಗೂ ನಿಮ್ಮ ನಿಯಂತ್ರಣಕ್ಕೆ ಸಿಗುತ್ತದೆ.

ಏನಿದು ಬ್ರೇನ್ಸೆಲ್ಸ್?

ಹಾನಿ ಯಾವುದೇ ಕಾರಣದಿಂದ ಆಗುತ್ತಿರಬಹುದು. ಅದನ್ನು ವೈಜ್ಞಾನಿಕ ಅಥವಾ ತಾಂತ್ರಿಕವಾಗಿ ಕಂಡುಕೊಂಡರೂ, ಹಾನಿಯಿಂದ ಪಾರಾಗುವ ಉಪಾಯಗಳನ್ನು ಕಂಡುಕೊಳ್ಳಲು ಕಷ್ಟ ಆಗಲಾರದು. ಬ್ರೇನ್‌ ಸೆಲ್ಸ್ ಅಂದರೆ ಮೆದುಳಿನ ಜೀವಕೋಶಗಳ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಅವು ನಮ್ಮ ದೇಹದ ಮಹತ್ವದ ಭಾಗಗಳಷ್ಟೇ ಅಲ್ಲ, ಅವು ನಮಗೆ ಪ್ರತಿಯೊಂದು ಬಗೆಯ ಭಾವನೆಗಳ ತೀವ್ರತೆಯನ್ನು ತಿಳಿಸಿಕೊಡುತ್ತವೆ. ಜೊತೆಗೆ ಅವುಗಳಿಂದ ಎಚ್ಚರದಿಂದಿರಲು ಕೂಡ ಕಲಿಸಿಕೊಡುತ್ತವೆ.

ಮನೋವಿಜ್ಞಾನದ ಕ್ಲಿಷ್ಟಕರ ಭಾಷೆಯನ್ನು ಮನೋಚಿಕಿತ್ಸಕ ವಿನಯ್‌ ಸರಳ ರೀತಿಯಲ್ಲಿ ಹೀಗೆ ಹೇಳುತ್ತಾರೆ. ಬ್ರೇನ್‌ ಸೆಲ್ಸ್ ಎರಡು ಪ್ರಕಾರದ್ದಾಗಿವೆ. ಮೊದಲನೆಯ ಬ್ರೇನ್‌ ಸೆಲ್ಸ್ ನ್ನು `ರಿಸೆಪ್ಟರ್‌' ಎಂದು ಹೇಳಲಾಗುತ್ತದೆ. ಅವುಗಳ ಕೆಲಸ `ರಿಸೀವ್‌' ಮಾಡುವುದಾಗಿದೆ. ಎರಡನೆಯ ಪ್ರಕಾರದ ಜೀವಕೋಶ `ಎಫೆಕ್ಟರ್‌.' ಅದು ಮೆದುಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಅದನ್ನು ಕೂಡ ಸರಳವಾಗಿ ಈ ಉದಾಹರಣೆ ಮೂಲಕ ತಿಳಿದುಕೊಳ್ಳಬಹುದು. ನಾವು ಯಾವುದಾದರೂ ಬಿಸಿ ಪದಾರ್ಥದ ಮೇಲೆ ಕೈ ಇಟ್ಟಾಗ ರಿಸೆಪ್ಟೆರ್‌ ಬಿಸಿತನದ ಅನುಭವ ಮಾಡಿಕೊಳ್ಳುತ್ತದೆ. ಎಫೆಕ್ಟರ್‌ ನಮಗೆ ಆ ಬಿಸಿ ವಸ್ತುವಿನ ಮೇಲಿಂದ ಕೈ ತೆಗೆಯಲು ಸೂಚಿಸುತ್ತದೆ. ವೈಜ್ಞಾನಿಕವಾಗಿ ಇದನ್ನು `ರಿಫ್ಲೆಕ್ಸ್ ಆ್ಯಕ್ಷನ್‌' ಎನ್ನುತ್ತಾರೆ.

ಹಾನಿಕಾರಕ ಅಭ್ಯಾಸಗಳು

ನಮ್ಮ ಅಭ್ಯಾಸಗಳು ನಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತಿಯೆ? ಇದಕ್ಕೆ ಉತ್ತರ ಹೌದು ಎಂದಾಗಿದೆ. ಅದರಲ್ಲೂ ಕೆಟ್ಟ ಅಭ್ಯಾಸಗಳು ನಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟು ಮಾಡಿ ನಮ್ಮನ್ನು ಗೊಂದಲಕ್ಕೆ ಕೆಡತ್ತವೆ. ಆ ಹಾನಿಕಾರಕ ಅಭ್ಯಾಸಗಳನ್ನು ನಾವು ಸಕಾಲಕ್ಕೆ ಅರಿತುಕೊಂಡರೆ ಜೀವನ ಬಹಳಷ್ಟು ಸುಲಭವಾಗುತ್ತದೆ.

ಎಷ್ಟೋ ಸಲ ನಾವು ಒತ್ತಡವನ್ನು ಮೈಗೂಡಿಸಿಕೊಂಡು ಬಿಡುತ್ತೇವೆ. ಒಮ್ಮೊಮ್ಮೆ ಅದು ಪರಿಸ್ಥಿತಿ ವಶಾತ್‌ ಬಂದುಬಿಡುತ್ತದೆ. ಧಾವಂತದ ಜೀವನದಲ್ಲಿ ಒತ್ತಡದ ಜೀವನದಿಂದ ಬಚಾವಾಗುವುದು ಕಷ್ಟ. ಆದರೆ ಅದನ್ನು ಅಭ್ಯಾಸ ಮಾಡಿಕೊಂಡರೆ, ಮೆದುಳಿನ ಜೀವಕೋಶಗಳ ಸಮತೋಲನ ಬಿಗಡಲಾಯಿಸಲಾರಂಭಿಸುತ್ತದೆ. ಒತ್ತಡದ ಸ್ಥಿತಿಯಲ್ಲಿ ನಮ್ಮ ದೇಹದಲ್ಲಿ ಕಾರ್ಟಿಸೋಲ್ ‌ಎಂಬ ರಾಸಾಯನಿಕ ಸ್ರಾವವಾಗುತ್ತದೆ. ಅದೇ ಮೆದುಳಿನ ಜೀವಕೋಶಗಳಿಗೆ ಸಾಕಷ್ಟು ಹಾನಿಯುಂಟು ಮಾಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ