ಬಡವರ ಪ್ರವೇಶಕ್ಕೆ ಅನುಮತಿ ಇಲ್ಲ

ಆಂಧ್ರಪ್ರದೇಶದ ಆಟೋಮೆಕ್ಯಾನಿಕಲ್‌ನ ಪುತ್ರಿ ಐಶ್ವರ್ಯಾ ರೆಡ್ಡಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಎರಡು ವರ್ಷಗಳ ಮುಂಚೆ ಮ್ಯಾಛ್ಸ್ ಆನರ್ಸ್‌ನಲ್ಲಿ ತನ್ನ ಅರ್ಹತೆಗೆ ಅನುಗುಣವಾಗಿ ಪ್ರವೇಶ ಪಡೆದಿದ್ದಳು.

ಆದರೆ ಹಾಸ್ಟೆಲ್‌‌ನಲ್ಲಿ ವಾಸಿಸುವುದು, ದೈನಂದಿನ ಖರ್ಚು ನಿಭಾಯಿಸುವುದು ಅವಳಿಗೆ ದುಬಾರಿಯಾಗಿ ಪರಿಣಮಿಸಿತು. ಅವಳು ಅದನ್ನು ಹೇಗ್ಹೇಗೊ ನಿಭಾಯಿಸಿದಳು. ಕಾಲೇಜು ಮಾತ್ರ ಅವಳಿಗೆ ಹಾಸ್ಟೆಲ್ ‌ಬಿಟ್ಟು ಬೇರೆ ಕಡೆ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿತು.

ಓದಿಗಾಗಿ ಲ್ಯಾಪ್‌ ಟಾಪ್‌ ವ್ಯವಸ್ಥೆ ಕೂಡ ಮಾಡಿಕೊಳ್ಳಬೇಕು ಎಂದು ಅವಳಿಗೆ ತಿಳಿಸಿತು. ಮನೆಯವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಅವಳು ಆತ್ಮಹತ್ಯೆ ಮಾಡಿಕೊಂಡಳು.

ದೇಶದಲ್ಲಿ ಬಡವರು, ಹಿಂದುಳಿದವರು, ದಲಿತರು ಕ್ರಮೇಣ ಮುಂದೆ ಬರುತ್ತಿದ್ದು, ಅವರನ್ನು ತಪ್ಪು ದಾರಿಗೆಳೆಯಲಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಇದು ಕಮ್ಯುನಿಸ್ಟ್ ರೀತಿಯ ಪ್ರಚಾರ. ದೇಶದಲ್ಲಿ ಈಗಲೂ ಬಡವ ಶ್ರೀಮಂತರ ಭೇದಭಾವ ಅಷ್ಟೇ ಅಲ್ಲ ಜಾತಿ, ಧರ್ಮ, ಕ್ಷೇತ್ರ, ಭಾಷೆಯ ಆಧಾರದಲ್ಲಿ ಇಬ್ಭಾಗ ಮಾಡಲಾಗುತ್ತಿದೆ. ಯಾರಾದರೂ ಈ ವ್ಯಾಪ್ತಿ ಉಲ್ಲಂಘಿಸಲು ಪ್ರಯತ್ನಿಸಿದರೆ ಕಂದಾಚಾರಗ್ರಸ್ತ ಸಮಾಜ ಅವರ ಮೇಲೆ ಮುಗಿಬೀಳುತ್ತದೆ.

ಆ ದಾಳಿ ಯಾವುದೇ ರೀತಿಯಲ್ಲಾಗಬಹುದು. ಕಮೆಂಟ್‌ ಮೂಲಕ ಆಗಿರಬಹುದು, ವೇಷಭೂಷಣದಲ್ಲಿ, ಆಹಾರದಲ್ಲಿ ಹೀಗೆ ಯಾವುದರ ಬಗೆಗಾದರೂ ಆಗಿರಬಹುದು. ಹಣದ ಕೊರತೆಯ ಮೂಲಕ ಗೇಲಿ ಮಾಡಲಾಗುತ್ತದೆ. ಶುಲ್ಕವನ್ನು ದಿಢೀರನೇ ಹೆಚ್ಚಿಸಬಹುದು. ಏಕೆಂದರೆ ಕಡಿಮೆ ಹಣವುಳ್ಳವರು ಅಲ್ಲಿ ಇಣುಕಿ ಕೂಡ ನೋಡಬಾರದು ಎನ್ನುವುದಾಗಿರುತ್ತದೆ.

ಐಶ್ವರ್ಯಾ ರೆಡ್ಡಿ ಕೇವಲ ಬಡತನದಿಂದಷ್ಟೇ ತೊಂದರೆಗೊಳಗಾಗಿದ್ದಳು ಎಂದೇನಲ್ಲ, ಆ ವರ್ಗ ಬಡತನದ ಬಗ್ಗೆ ಪರಿಪೂರ್ಣ ಜಾಗರೂಕತೆಯಿಂದಿರುತ್ತದೆ ಮತ್ತು ಕಡಿಮೆ ಖರ್ಚಿನಲ್ಲಿಯೇ ಎಲ್ಲವನ್ನು ನಿಭಾಯಿಸಲು ಕಲಿತುಕೊಳ್ಳುತ್ತದೆ.

ಇವರಿಗೆ ಏನೂ ಗೊತ್ತಿರದಿದ್ದರೆ ಇವರು ಹೇಗೆ ತಾನೇ ಶ್ರೀಮಂತರೊಂದಿಗೆ ಬೆರೆಯಲು ಸಾಧ್ಯ? ಉನ್ನತ ವರ್ಗದ ಮಹಿಳೆಯರು ಹಾಗೂ ಅವರ ಪುತ್ರಿಯರು ಯಾರ ಬಗೆಗಾದರೂ ಮೊದಲ ಭೇಟಿಯಲ್ಲೇ ಅವರ ಜಾತಕವನ್ನೇ ಅರಿತುಬಿಡುತ್ತಾರೆ. ಅವರು ತಮ್ಮಂತೆ ಇರದೇ ಇದ್ದರೆ ಅವರನ್ನು ಅತ್ಯಂತ ಕೀಳಾಗಿ ಕಾಣುತ್ತಾರೆ.

ದೇಶದ ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ಕಥನಗಳು ಕೂಡ ಪ್ರತಿದಿನದ ಭಾಷಣ, ಪ್ರವಚನದಲ್ಲಿ ಇವನ್ನೇ ಒತ್ತಿ ಒತ್ತಿ ಹೇಳುತ್ತಿವೆ. ಯಾರು ಕೆಳ ಮಟ್ಟದಲ್ಲಿದ್ದಾರೊ, ಅವರು ಅಲ್ಲಿಯೇ ಇರುವಂತೆ ಸರ್ಕಾರದಿಂದ ದಯೆಯ ಭಿಕ್ಷೆ ಬೇಡುವಂತೆ ಮಾಡಲಾಗುತ್ತಿದೆ.

ಆಧಾರ್‌, ಪ್ಯಾನ್‌ ಕಾರ್ಡ್‌ನಂತಹ ಪರಿಚಯ ಪತ್ರಗಳಲ್ಲಿ ಯಾರು, ಎಲ್ಲಿಯವರು ಎನ್ನುವುದು ವಿಳಾಸದಿಂದ, ಮುಖದಿಂದ ಗೊತ್ತಾಗುತ್ತದೆ.

ಲೇಡಿ ಶ್ರೀರಾಮ್ ಕಾಲೇಜು ಮೊದಲಿನಿಂದಲೇ ಆಗರ್ಭ ಶ್ರೀಮಂತರ ಪುತ್ರಿಯರ ಕಾಲೇಜಾಗಿ ಉಳಿದಿದೆ. ದೆಹಲಿಯ ಹೆಸರಾಂತ ಉದ್ಯಮಿ, ಬಟ್ಟೆ ಮಿಲ್‌‌ಗಳ ಮಾಲೀಕ ಶ್ರೀರಾಮ್ ಸ್ಥಾಪಿಸಿದ ಕಾಲೇಜಿಗೆ ಜಾಗ ದೊರೆತದ್ದು ಲಜಪತ್‌ ನಗರದಲ್ಲಿ. ದಕ್ಷಿಣ ದೆಹಲಿಯಲ್ಲಿರುವ ಇಲ್ಲಿ ದೇಶದ ಚುಕ್ಕಾಣಿ ಹಿಡಿದವರ ವರ್ಗವೇ ಇದೆ. ಇವರಿಗೆ ಕೆಳವರ್ಗದವರ, ಬಡವರ ಹಸ್ತಕ್ಷೇಪ ಖಂಡಿತ ಇಷ್ಟವಾಗುವುದಿಲ್ಲ.

ಒಂದು ವೇಳೆ ಆಂಗ್ಲ ಮಾಧ್ಯಮವೆಂಬ ಚೀನಾ ಗೋಡೆಯನ್ನು ಯಾರಾದರೂ ದಾಟಿ ಬಂದರೆ, ಅವರನ್ನು ಪರಕೀಯರು ಎಂದು ತಿಳಿಯಲಾಗುತ್ತದೆ. ಅವರನ್ನು ತಿರಸ್ಕರಿಸಲಾಗುತ್ತದೆ. ಅಂತಹ ಹುಡುಗಿಯರು ಯಾವಾಗಲೂ ಹೆದರಿಕೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಆರ್ಥಿಕ ಹೊಡೆತ ಸಹಿಸದೆ ಮನೆಗೆ ಮರಳಿದ ಆಂಧ್ರದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು. ತಾಯಿ ತಂದೆ ಪ್ರತಿನಿತ್ಯ ತನ್ನ ಇಳಿಬಿದ್ದ ಮುಖ ನೋಡದಿರಲಿ, ಹತಾಶೆ ಗಮನಿಸದಿರಲಿ ಎನ್ನುವುದೇ ಅವಳ ಇಚ್ಛೆಯಾಗಿತ್ತು.

ಈ ಸಮಸ್ಯೆ ಕೇವಲ ಹಣದ್ದಲ್ಲ, ಆ ಮೇಧಾವಿಗೆ ಎಲ್ಲಿಂದಾದರೂ ಹಣದ ವ್ಯವಸ್ಥೆ ಆಗಬಹುದಿತ್ತು. ಆ ಸಮಸ್ಯೆ ಜಾತಿ, ವರ್ಗ, ಧರ್ಮದ್ದಾಗಿದೆ. ಆ ಅಡುಗೆಯನ್ನೇ ಈಗ ನೂರಾರು ಮನೆಗಳಲ್ಲಿ ಸಿದ್ಧಪಡಿಸಲಾಗುತ್ತಿದೆ. ಉಳಿದವರು ಅದನ್ನು ಯಥೇಚ್ಛವಾಗಿ ಸೇವಿಸಲಿ ಎಂಬುದು ಅವರ ಇರಾದೆಯಾಗಿರುತ್ತದೆ. ಉಳಿದವರು ಕೈಯೊಡ್ಡಿ ಬೇಡುತ್ತಿರಬೇಕು ಎನ್ನುವುದು ಕೂಡ ಅಪೇಕ್ಷೆಯಾಗಿರುತ್ತದೆ.

ಒಂದು ವಿಶಿಷ್ಟ ಸಂದೇಶ

ಅಮೆರಿಕಾದ ಚುನಾವಣೆ ಜಗತ್ತಿನ ಇತರೆ ದೇಶಗಳಿಗೆ ಅದೆಷ್ಟು ತಮಾಷೆಯದ್ದು ಅನಿಸಬಹುದು. ಅಲ್ಲಿ ಎಷ್ಟೇ ಭೇದಭಾವ, ಮೇಲು ಕೀಳು ಇದ್ದಿರಬಹುದು. ಆದರೆ ಮಹಿಳೆಯೊಬ್ಬಳು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಉಪಾರಾಷ್ಟ್ರಪತಿ ಹುದ್ದೆಯ ತನಕ ತಲುಪುವುದು ಮಾತ್ರ ಹುಬ್ಬೇರಿಸುವ ಸಂಗತಿಯಾಗಿದೆ.

ಭಾರತದಲ್ಲಿ ಇಂದಿರಾ ಗಾಂಧಿ ಅಧಿಕಾರ ನಡೆಸಿದರು. ಅದೂ ಬಹಳ ವರ್ಷಗಳ ಕಾಲ. ಆದರೆ ಅವರು ಜವಾಹರಲಾಲ್ ‌ನೆಹರು ಪುತ್ರಿ ಎನ್ನುವುದು ಅಲ್ಲಿ ಎದ್ದು ಕಾಣುವ ಸಂಗತಿಯಾಗಿತ್ತು. 50 ವರ್ಷಗಳ ಕಾಲ ಅವರು ರಾಜಕೀಯದಲ್ಲಿ ಪ್ರಭಾವ ಬೀರಿದ್ದರು.

unchi-neechi-jati-2

ದಕ್ಷಿಣ ಭಾರತೀಯರಾದ ಅಮ್ಮ ಶ್ಯಾಮಲಾ ಗೋಪಾಲನ್‌ರವರ ಪುತ್ರಿ ಕಮಲಾ ಹ್ಯಾರೀಸ್‌ರ ಬಳಿ ಅಂತಹ ಯಾವುದೇ ಹಿನ್ನೆಲೆ ಇರಲಿಲ್ಲ. ಅವರ ಗಂಡ ಅಥವಾ ಮಾವ ರಾಜಕೀಯದಲ್ಲಿ ಇರಲೇ ಇಲ್ಲ.

ಅಮೆರಿಕಾ ಹಾಗೂ ಭಾರತದ ಪ್ರಜಾಪ್ರಭುತ್ವ ಈ ಡೋಲಾಯಮಾನ ಸ್ಥಿತಿಯಲ್ಲಿದೆ. ವೈಚಾರಿಕ ಸ್ವಾತಂತ್ರ್ಯ, ನೈತಿಕತೆ, ಸಮಾನತೆ, ಮಹಿಳೆಯರಿಗೆ ಹಕ್ಕು ಒದಗಿಸುವಿಕೆ ಇವೆಲ್ಲ ಅಪಾಯದಲ್ಲಿವೆ. ಇವೆಲ್ಲವುಗಳ ಮೇಲೆ ಧರ್ಮದ ಹಸ್ತಕ್ಷೇಪ ಹೆಚ್ಚುತ್ತಾ ಹೊರಟಿದೆ. ಇಂತಹದರಲ್ಲಿ ಮಹಿಳೆಯೊಬ್ಬರು ಅದರಲ್ಲೂ ಭಾರತ ಹಾಗೂ ನೀಗ್ರೊ ರಕ್ತಸಂಬಂಧ ಹೊಂದಿದವರು ಹೊಸ ರಾಷ್ಟ್ರಪತಿ ಬೈಡೆನ್‌ ಹೆಗಲಿಗೆ ಹೆಗಲು ಕೊಟ್ಟು ಚುನಾವಣೆ ಗೆದ್ದಿರುವುದು ಒಂದು ಆಶ್ಚರ್ಯವೇ ಸರಿ.

ಹಿಂದಿನ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅಮೆರಿಕವನ್ನು ಇನ್ನೂ ಹಿಂದಿನ ಕಾಲಕ್ಕೆ ನೂಕುವ ಪ್ರಯತ್ನ ಮಾಡಿದರು. ಅವರು ಮಹಿಳೆಯರನ್ನು ತೋರಿಕೆಯ ಹಾಗೂ ಮನರಂಜನೆಯ ವಸ್ತು ಎಂಬಂತೆ ಭಾವಿಸುತ್ತಿದ್ದರು.

ಟ್ರಂಪ್‌ ಅಮೆರಿಕದ ಬಿಳಿಯರನ್ನು ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಂಡರು. ಕಪ್ಪು ಜನಾಂಗದವರು, ಲ್ಯಾಟಿನ್‌ ಅಮೆರಿಕದವರನ್ನು ಏಷ್ಯಾ ಖಂಡದವರೊಂದಿಗೆ ಸಂಘರ್ಷ ಮಾಡಲು ತಯಾರುಗೊಳಿಸಿದ್ದರು. ಅಮೆರಿಕ ಹಾಗೂ ಮೆಕ್ಸಿಕೊ ಗಡಿಯಲ್ಲಿ ಒಂದು ಗೋಡೆ ನಿರ್ಮಿಸಲು ಹೊರಟಿದ್ದರು. ಏಕೆಂದರೆ ಮೆಕ್ಸಿಕನ್‌ ಹಾಗೂ ದಕ್ಷಿಣ ಅಮೆರಿಕದ ಬಿಳಿಯರು, ಕರಿಯರು ಹಾಗೂ ಆ ಭಾಗದ ಮೂಲ ನಿವಾಸಿಗಳ ಸಮ್ಮಿಶ್ರ ರಕ್ತದ ಕಮಲಾ ಹ್ಯಾರಿಸ್‌ರ ಗೆಲುವು ಹಾಗೂ ರಾಷ್ಟ್ರಪತಿ ಆಗುವ ಸಾಧ್ಯತೆಗಳು ಒಂದು ಆಶ್ಚರ್ಯದ ವಿಷಯವ ಸರಿ.

ಎಲ್ಲಕ್ಕೂ ವಿಶೇಷ ಸಂಗತಿಯೆಂದರೆ ಶ್ಯಾಮಲಾ ಗೋಪಾಲನ್‌ ಹಾಗೂ ಕಮಲಾ ತಮ್ಮನ್ನು ತಾವು ಕೀಳು ಎಂದು ಭಾವಿಸಲಿಲ್ಲ ಹಾಗೂ ಒಂದೊಂದಾಗಿ ಹೆಜ್ಜೆ ಇಟ್ಟರು. ಅವರು ತಮ್ಮ ಅಮ್ಮನ ವಿಚ್ಛೇದನವನ್ನು ಸಹಿಸಿಕೊಳ್ಳಬೇಕಾಯಿತು. ಬಳಿಕ ತಾವೇ ವಿಚ್ಛೇದಿತರೊಬ್ಬರನ್ನು ಮದುವೆಯಾದರು. ಅವರ ಮಕ್ಕಳನ್ನೇ ತಮ್ಮ ಮಕ್ಕಳೆಂದು ಭಾವಿಸಿದರು. ಅದರಲ್ಲಿ ಯಾರೊಬ್ಬರು ಬಿಳಿಯರಿರಲಿಲ್ಲ.

ಆದರೂ ಅವರು ಎರಡನೇ ಸರ್ವೋಚ್ಚ ಹುದ್ದೆಯ ತನಕ ತಲುಪಿದರು.

ದೇಶದ ಮಹಿಳೆಯರಿಗೆ ಕಮಲಾ ಹ್ಯಾರಿಸ್‌ ಸದಾ ಒಬ್ಬ ಪ್ರೇರಣಾದಾಯಿ ವ್ಯಕ್ತಿಯಾಗಿರುತ್ತಾರೆ. ಮಹಿಳೆಯರು ಜಾತಿ, ಬಣ್ಣ, ಧರ್ಮ ಹಾಗೂ ಕೌಟುಂಬಿಕ ಹಿನ್ನೆಲೆಯಿಂದಲ್ಲ, ತಮ್ಮ ಸಾಮರ್ಥ್ಯ ಹಾಗೂ ಪರಿಶ್ರಮದ ಮೇಲೆ ನಂಬಿಕೆ ಇಡಬೇಕು. ಜಗತ್ತಿನಾದ್ಯಂತ ಮಹಿಳೆಯರು ಗ್ಲಾಸ್‌ ಸೀಲಿಂಗ್‌ನ ಕೆಳಗೆ ಇರುವುದು ಅನಿವಾರ್ಯವಾಗಿದೆ. ಉದಾಹರಣೆಗೆ ಭಾರತದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಅಸ್ತಿತ್ವವನ್ನು ಕೌಟುಂಬಿಕ ಹಿನ್ನೆಲೆಯಿಲ್ಲದೆಯೂ ರೂಪಿಸಿಕೊಂಡರು.

ಪ್ರತಿಯೊಬ್ಬ ಮಹಿಳೆಗೂ ಅಂತಹ ಅವಕಾಶಗಳು ತೆರೆದಿವೆ. ಹಾಗೆ ನೋಡಿದರೆ, ಮಮತಾ ಬಂದಿದ್ದು ಉನ್ನತ ವರ್ಗದಿಂದ. ಆದರೆ ಕಮಲಾ ಮಾತ್ರ ವರ್ಣ ವ್ಯವಸ್ಥೆ ಮೂಲಸ್ಥಾನದ ಅಡೆತಡೆಯನ್ನು ತೊಡೆದು ಹಾಕಿದರು.

ಅಮೆರಿಕ ಈಗ ಯಾರಿಗೂ ಆದರ್ಶ ಉದಾಹರಣೆಯಾಗಿ ಉಳಿದಿಲ್ಲ. ಆದರೂ ಅಲ್ಲಿನ ಚುನಾವಣೆ ಭಾರತೀಯ ಮಹಿಳೆಯರಿಗೆ ಒಂದು ವಿಶಿಷ್ಟ ಸಂದೇಶವೇ ಆಗಿದೆ.

ನಿಸರ್ಗದೊಂದಿಗೆ ಚೆಲ್ಲಾಟ ಸಲ್ಲದು

ಕೊರೋನಾದ ಲಸಿಕೆ ಹೆಚ್ಚು ಕಡಿಮೆ ಸಿದ್ಧವಾಗಿದೆ. ಕೊನೆಯಲ್ಲಿ ಏನೂ ಸಮಸ್ಯೆಯಾಗದಿದ್ದರೆ, ಅದು ಜಗತ್ತಿನಾದ್ಯಂತ ವಿತರಣೆಯಾಗಬಹುದು. ಇದರರ್ಥ ನಾವು ಕೊರೋನಾರಹಿತ ಯುಗಕ್ಕೆ ಮರಳಲು ಸೂಟ್‌ಕೇಸ್‌ ಹಿಡಿದುಕೊಳ್ಳಬೇಕೆಂದು ಅಲ್ಲ. ಕೊರೋನಾ ಲಸಿಕೆಯನ್ನು 7 ಶತಕೋಟಿ ಜನರಿಗೆ ತಲುಪಿಸಲು ಸಾಕಷ್ಟು ತಡವಾಗಬಹುದು. ಹೀಗಾಗಿ ಅಲ್ಲಲ್ಲಿ ಮರು ಹಾವಳಿ ಕಂಡುಬರಲೂಬಹುದು.

ಕೊರೋನೋತ್ತರ ಯುಗದಲ್ಲಿ ಒಂದು ವಿಶೇಷ ಮಜವಿದೆ. ಜನರು ಏಕಾಂತ ವಾಸವನ್ನಂತೂ ಅನುಭವಿಸಬೇಕಾಗಿ ಬರುತ್ತಿದೆ. ಜೊತೆಗೆ ಅನವಶ್ಯಕ ಖರ್ಚುಗಳಿಗೂ ಕಡಿವಾಣ ಬಿದ್ದಿದೆ. ಪಾರ್ಟಿಗಳು, ಜನದಟ್ಟಣೆ ಹಾಗೂ ಸಾರ್ವಜನಿಕ ಸಾಗಣೆಯ ಮೇಲಿನ ಒತ್ತಡ ಕಡಿಮೆಯಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಬಣಗುಟ್ಟುತ್ತಿವೆ. ಜನರು ಸುಮ್ಮನೇ ಸುತ್ತಾಡುವುದನ್ನು ನಿಲ್ಲಿಸಿದ್ದಾರೆ. ಇಡುವುದು ಒಳ್ಳೆಯದೇ. ನಾವೆಲ್ಲ ಅನಗತ್ಯವಾಗಿ ಹೆಚ್ಚೆಚ್ಚು ಸುತ್ತಾಡಿ, ನಿಸರ್ಗದ ಸಾಧನಗಳನ್ನು ದುರ್ಬಳಕೆ ಮಾಡಿಕೊಂಡೆವು. ಅದರ ಪರಿಣಾಮವೆಂಬಂತೆ ಜಗತ್ತಿನಾದ್ಯಂತ ಮಾಲಿನ್ಯ ವಿಪರೀತವಾಯಿತು. ಅದಕ್ಕೆ ತುತ್ತಾದವರ ಎಣಿಕೆ ಅಸಾಧ್ಯ ಎನಿಸಿತು.

ತಮ್ಮಿಂದಾಗಿ ಈ ಮಾಲಿನ್ಯ ಉಂಟಾಗುತ್ತಿದೆ ಎಂಬುದನ್ನು ದೇಶಗಳು ಒಪ್ಪಲು ತಯಾರಿಲ್ಲ. ಅಮೆರಿಕಾ ಈ ನಿಟ್ಟಿನಲ್ಲಿ ಅತಿ ದೊಡ್ಡ ಖಳನಾಯಕನಾಗಿ ಪರಿಣಮಿಸಿತು. ಹಿಂದಿನ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸಮಸ್ಯೆ ಬಗೆಹರಿಸುವ ಬದಲು ಭಾರತ ಚೀನಾಗಳನ್ನೇ ದೂಷಿಸತೊಡಗಿದ್ದರು.

ನಾವು ನಮ್ಮ ದೇಶವನ್ನು ಸಮರ್ಥವಾಗಿ ನಿರ್ವಹಿಸಲು ಆಗುತ್ತಿರಲಿಲ್ಲ. ಕೊರೋನಾದ ಕಾರಣದಿಂದಾಗಿ ಹೊರಗಿನ ಕಸ, ಪ್ಲಾಸ್ಟಿಕ್ ಎಸೆಯುವಿಕೆ ಕಡಿಮೆಯಾಯಿತು.

ಕಡಿಮೆ ಉತ್ಪಾದನೆಯಿಂದ ಕಡಿಮೆ ಆದಾಯ ಬಂದಿತು. ಆದರೆ ನದಿಗಳು ಸ್ವಚ್ಛವಾದವು. ಜನರು ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಿದರು. ಅದರಿಂದ ನಗರಗಳ ಮಾಲಿನ್ಯ ಕಡಿಮೆಯಾಯಿತು.

ಮನೆಗಳಲ್ಲಿ ಪಾರ್ಟಿಗಳು ಕಡಿಮೆಯಾದವು. ಅದರಿಂದಾಗಿ ಆಹಾರ ಹಾಳಾಗುವ ಪ್ರಮಾಣ ಕಡಿಮೆಯಾಯಿತು. ತಾವೇ ಮಾಡಿಕೊಂಡ ಆಹಾರ ಸೇವನೆ ಮಾಡಿದ್ದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಯಿತು. ಹಬ್ಬಗಳನ್ನು ಅಬ್ಬರದಿಂದ ಆಚರಿಸಿದರೂ ಕಡಿಮೆ ಪೋಲಾಯಿತು. ಆದಾಯ ಕಡಿಮೆ, ಹೀಗಾಗಿ ಖರ್ಚು ಕಡಿಮೆಯಾಯಿತು. ಜನರು ಕೋವಿಡ್‌ನಿಂದಾಗಿ ಸತ್ತುಹೋದರು. ಆದರೆ ಬೇಸರಗೊಂಡು ಅಥವಾ ಮನೆಯಲ್ಲಿ ಇದ್ದೂ ಇದ್ದು ಉಸಿರುಗಟ್ಟಿದ ವಾತಾವರಣದಿಂದ ಯಾರೂ ಸಾಯಲಿಲ್ಲ.

ಕೊರೋನೋತ್ತರ ಯುಗದಲ್ಲಿ ಹೀಗೆ ನಡೆಯುತ್ತಿದ್ದರೆ ಒಳ್ಳೆಯದೇ. ಅನವಶ್ಯಕ ಸಾಮಾಜೀಕರಣ ಜೀವನದಲ್ಲಿ ರಂಗು ತುಂಬುತ್ತದೆ ಎನ್ನುವುದು ನಿಜವಾದರೂ ಅದರ ಅತಿಯಾದ ಬಣ್ಣಗಳು ಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ.

ಈ ಮಹಾಮಾರಿ ಯಾವಾಗ ನಮ್ಮನ್ನು ಅಳಿಸುತ್ತದೊ ಹೇಳಲಾಗದು. ಜೊತೆಗೆ ನಮ್ಮೊಳಗೆ ಹುದುಗುವ ಅವಕಾಶವನ್ನೂ ಕೊಡುತ್ತದೆ. ಅದು ಜನರಿಗೆ ಫೋನ್‌, ವಾಟ್ಸ್ಆ್ಯಪ್‌, ಝೂಮ್ ಮುಂತಾದವನ್ನು ವ್ಯಾಪಕವಾಗಿ ಬಳಸಲು ಅವಕಾಶ ನೀಡಿತು. ಈಗ ನಾವು ಪುನಃ  ಪ್ರಿ ಕೊರೋನಾ ಯುಗಕ್ಕೆ ಮರಳಲು ಯೋಚಿಸತ್ತಿದ್ದೇವೆ. ಆದರೆ ಕೆಲವು ಪಾಠಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಸರ್ಗದೊಂದಿಗೆ ಅತಿಯಾದ ಚೆಲ್ಲಾಟ ದುಬಾರಿಯಾಗಿ ಪರಿಣಮಿಸುತ್ತದೆ. ಅದು ನಮಗೆ ಒಂದು ಪಾಠ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ