ಸುರೇಶನ ಮನೆಯಲ್ಲಿ ಕಳೆದ 5 ವರ್ಷಗಳಿಂದ ಗೆದ್ದಲು ಹುಳುವಿನ ಸಮಸ್ಯೆ ಇತ್ತು. ಅವನ ಹೆಂಡತಿ ಸೀಮಾ ಚಳಿಗಾಲ ಬರುವ ಮುಂಚೆ ಉಣ್ಣೆಯ ಬಟ್ಟೆಗಳನ್ನು ಕಪಾಟಿನಿಂದ ತೆಗೆಯಲು ಹೋದಾಗ ಗೆದ್ದಲು ಹುಳುಗಳು ಅವನ್ನೆಲ್ಲ ಮನಬಂದಂತೆ ತಿಂದುಹಾಕಿದ್ದವು.
ಸೀಮಾ ಗೆದ್ದಲು ಹುಳುಗಳ ಸಮಸ್ಯೆ ನಿವಾರಿಸಲು ಸೀಮೆಎಣ್ಣೆ ಸಿಂಪಡಿಸಿದಳು. ಆದರೂ ಗೆದ್ದಲಿನ ಸಮಸ್ಯೆ ನಿವಾರಣೆಯಾಗಲಿಲ್ಲ. ಆ ಬಳಿಕ ಪೆಸ್ಟ್ ಕಂಟ್ರೋಲ್ ಮಾಡಿದಾಗಲೇ ಗೆದ್ದಲು ಹುಳುವಿನ ಸಮಸ್ಯೆ ಬಗೆಹರಿಯಿತು.
ಇಂತಹದೇ ಸಮಸ್ಯೆ ಹಲವು ಮನೆಗಳಲ್ಲಿ ಉಂಟಾಗುತ್ತದೆ. ಆದರೆ ಬಹಳಷ್ಟು ಜನರಿಗೆ ಗೆದ್ದಲು ಹಿಡಿದಿರುವ ಕಲ್ಪನೆಯೇ ಬಾರದು. ಹೀಗಾಗಿ ಅಮೂಲ್ಯ ಫರ್ನೀಚರ್‌ಗಳು ಹಾಳಾಗುತ್ತವೆ. ಈ ಕುರಿತಂತೆ ಪಿಡಿಲೈಟ್ ಇಂಡಸ್ಟ್ರೀಸ್ ಲಿ.ನ ಫೆವಿಕಾಲ್ ಡಿವಿಜನ್ನಿನ ಮುಖ್ಯಸ್ಥ ವಿಶಾಲ್ ಈ ಕುರಿತಂತೆ ಹೀಗೆ ಹೇಳುತ್ತಾರೆ, ಗೆದ್ದಲು ಹುಳುವಿನ ಅಸ್ತಿತ್ವ 250 ಮಿಲಿಯನ್ ವರ್ಷಗಳಷ್ಟು ಹಳೆಯದು. ಇದು ಒಣ ಗಿಡಮರಗಳನ್ನು ತನ್ನ ಆಹಾರವಾಗಿ ಬಳಸಿಕೊಳ್ಳುತ್ತದೆ.
ಹೆಚ್ಚು ಹಾನಿಕಾರಕ ಗೆದ್ದಲನ್ನು 3 ಭಾಗಗಳಲ್ಲಿ ವಿಂಗಡಿಸಬಹುದು. ಡ್ಯಾಂಪ್‌ಡ್ ಗೆದ್ದಲು, ಡ್ರೈಡ್ ಗೆದ್ದಲು ಹಾಗೂ ಭೂಮಿಗತ ಗೆದ್ದಲು. ಈ ಮೂರೂ ಪ್ರಕಾರದ ಗೆದ್ದಲು ಹುಳುಗಳಲ್ಲಿ ಭೂಮಿಗತ ಗೆದ್ದಲು ಹುಳು ಅತಿಹೆಚ್ಚು ಹಾನಿಯನ್ನುಂಟು ಮಾಡುವಂಥದ್ದಾಗಿರುತ್ತವೆ. ಅದು ಒಂದು ಮನೆಯ ಮರವನ್ನು ಮೂರು ತಿಂಗಳಲ್ಲಿಯೇ ಮುಗಿಸಿಬಿಡುತ್ತದೆ. ಭೂಮಿಯೊಳಗೇ ಮನೆ ಮಾಡಿಕೊಂಡಿರುವ ಅದು ಸುರಂಗದ ಮುಖಾಂತರ ಆಹಾರ ಹುಡುಕುತ್ತಿರುತ್ತದೆ. ಆಹಾರ ಇದೆಯೆಂದು ಗೊತ್ತಾದ ತಕ್ಷಣ ಅದು ಹೊರಬಂದು ಭಾರಿ ಹಾನಿಯನ್ನುಂಟು ಮಾಡುತ್ತದೆ.
ಗೆದ್ದಲು ಬಿಸಿ, ತೇವಯುಕ್ತ ಹಾಗೂ ಕತ್ತಲಿನ ವಾತಾವರಣದಲ್ಲಿ ವಾಸಿಸುತ್ತದೆ. ಮಳೆಗಾಲದ ದಿನಗಳಲ್ಲಿ ನೀವು ಇದನ್ನು ಕಿಟಕಿಯ ಆಸುಪಾಸು ಕಾಣಬಹುದು. ಇದು ಸಂಘಟಿತ ರೀತಿಯಲ್ಲಿ ಬೇರೆ ಬೇರೆ ಜಾಗಗಳ ಮೇಲೆ ಆಕ್ರಮಣ ಮಾಡುತ್ತದೆ.
ಕೆಳಕಂಡ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವ ಮೂಲಕ ಗೆದ್ದಲಿನ ಸಮಸ್ಯೆಯಿಂದ ಮುಕ್ತರಾಗಬಹುದು :
ಯಾವುದೇ ಪೈಪ್‌ನಲ್ಲಿ ಉಂಟಾಗುವ ಲೀಕೇಜ್‌ನ್ನು ತಕ್ಷಣವೇ ಸರಿಪಡಿಸಿ. ಏಕೆಂದರೆ ಆ ಜಾಗದ ತೇವವನ್ನು ಸರಿಪಡಿಸಲು ಸಾಧ್ಯವಾಗಬೇಕು.
ಚರಂಡಿಯ ನಿಯಮಿತ ಸ್ವಚ್ಛತೆ ಹಾಗೂ ಅದರ ಮೇಲ್ವಿಚಾರಣೆಯಿಂದ ನೀರನ್ನು ಮನೆಯ ಅಡಿಪಾಯದಿಂದ ದೂರ ಇಡಲು ಸಹಾಯವಾಗುತ್ತದೆ.
ಮನೆ ಮೇಲ್ಛಾವಣಿ ಮೇಲೆ ನೀರು ಜಮೆಗೊಳ್ಳದಂತೆ ಎಚ್ಚರ ವಹಿಸಿ.
ಮನೆಯ ಒಳಭಾಗದಲ್ಲಿ ಕಾಗದ ಹಾಗೂ ಕಟ್ಟಿಗೆ ತುಂಡುಗಳು ಜಮೆಗೊಳ್ಳದಂತೆ ನೋಡಿಕೊಳ್ಳಿ.
ಗೆದ್ದಲಿಗೆ ಅತ್ಯಂತ ಸೂಕ್ತ ಜಾಗವೆಂದರೆ, ಗೋಡೆಗೆ ತಗುಲಿಸಿ ಇಟ್ಟಿರುವ ಫರ್ನೀಚರ್, ಅದರ ಆಸುಪಾಸಿನಲ್ಲಿ ನೀವು ದಿನ ಸ್ವಚ್ಛಗೊಳಿಸದೇ ಇದ್ದರೆ, ಅದಕ್ಕೆ ಇನ್ನಷ್ಟು ಅನುಕೂಲ. ಗೋಡೆಯ ಆಸುಪಾಸು ಕಪಾಟು, ಕ್ಯಾಬಿನೆಟ್, ಬಾಗಿಲುಗಳ ವುಡನ್ ಫ್ರೇಮ್ಸ್ ಕಪಾಟಿನ ಕೆಳಭಾಗ ಮುಂತಾದವು. ಈ ಸ್ಥಳಗಳಲ್ಲಿನ ಗೆದ್ದಲನ್ನು ಕೊನೆಗೊಳಿಸಲು ಪರಿಣಾಮಕಾರಿ ದ್ರಾವಣ `ಟರ್ಮಿನೇಟರ್’ನ ಬಳಕೆ ಸೂಕ್ತವಾದುದಾಗಿರುತ್ತದೆ. ಅದು ಪರಿಸರ ಸ್ನೇಹಿಯೂ ಆಗಿರುತ್ತದೆ.
ನೀವು ಮಡ್ ಟನ್‌ನಲ್ಲಿ ಉಂಟಾದ ರಂಧ್ರ ಅಥವಾ ಗೋಡೆಯ ಬಿರುಕನ್ನು ಟರ್ಮಿನೇಟರ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಸೂಕ್ತ. ಅದು ಗೆದ್ದಲಿನ ಆಕ್ರಮಣದಿಂದ ರಕ್ಷಿಸುತ್ತದೆ.
ನಿಮಗೆ ಗೆದ್ದಲು ಹಿಡಿದಿರುವುದು ಗೊತ್ತಾದರೆ, ಅದನ್ನು ನೀವಾಗಿಯೇ ತೆಗೆಯಲು ಪ್ರಯತ್ನಿಸಬೇಡಿ. ಏಕೆಂದರೆ ಗೆದ್ದಲು ಅಲ್ಲಿಂದ ಇನ್ನೊಂದು ಕಡೆ ತನ್ನ ಜಾಗ ಬದಲಿಸಿಕೊಳ್ಳುತ್ತದೆ. ಹೀಗಾಗಿ ಯಾವುದಾದರೂ ಪೆಸ್ಟ್ ಕಂಟ್ರೋಲರ್‌ನ ಸಂಪರ್ಕ ಮಾಡಿ.
ಗೆದ್ದಲಿನಿಂದ ಮನೆಯನ್ನು ಸುರಕ್ಷಿತವಾಗಿಡಲು ಪೆಸ್ಟ್ ಕಂಟ್ರೋಲ್ ಮಾಡಿದ ಬಳಿಕ ಕೆಳಕಂಡ ಸಂಗತಿಗಳ ಬಗೆಗೂ ಅವಶ್ಯ ಗಮನ ಕೊಡಿ.
ಯಾವುದೋ ಒಂದು ಜಾಗದಲ್ಲಿ ಗೆದ್ದಲಿನ ಸಮಸ್ಯೆ ಅಧಿಕವಾಗಿದ್ದರೆ, ಅಲ್ಲಿ 2-3 ಸಲ ಆ್ಯಂಟಿ ಟರ್ಮೈಟ್ ದ್ರಾವಣವನ್ನು ಬಳಸಿ.
ಔಷಧಿ ಬಳಕೆಯ ಬಳಿಕ ಆ ಜಾಗ 7-8 ಗಂಟೆಗಳ ಕಾಲ ಒಣಗಲು ಬಿಡಿ. ಆ ಬಳಿಕವೇ ಪಾಲಿಶ್ ಅಥವಾ ಪೇಂಟ್ ಮಾಡಿ.
ಒಂದು ವೇಳೆ ಫರ್ನೀಚರ್‌ನಿಂದ ಪೌಡರ್ ಉದುರುತ್ತಿದ್ದರೆ ಕಟ್ಟಿಗೆಯಲ್ಲಿ ರಂಧ್ರವನ್ನುಂಟು ಮಾಡಿ ಸೂಜಿಯಿಂದ ಆ್ಯಂಟಿ ಟರ್ಮೈಟ್ ದ್ರಾವಣ ಹಾಕಿ.
ಗೆದ್ದಲು ನಿರೋಧಕ ಔಷಧಿ ಮಾನವರಿಗೆ ಹಾಗೂ ವಾತಾವರಣಕ್ಕೆ ಹಾನಿಕಾರಕವಾಗಿರುತ್ತದೆ. ಗೆದ್ದಲು ನಿರೋಧಕ ಔಷಧಿ ಸಿಂಪರಣೆ ಮಾಡುವ ಸಮಯದಲ್ಲಿ ಮಕ್ಕಳು, ಪ್ರಾಣಿಗಳು ಪಕ್ಷಿಗಳು ಸಾಕಷ್ಟು ದೂರ ಇರುವಂತೆ ನೋಡಿಕೊಳ್ಳಿ. ಆಹಾರವನ್ನು ಕೂಡ ದೂರ ಇಡಿ.
ಗೆದ್ದಲು ನಿರೋಧಕ ದ್ರಾವಣವನ್ನು ಉಪಯೋಗಿಸುವಾಗ ಬ್ರಶ್ ಹಾಗೂ ಸ್ಪ್ರೇ ಮುಖಾಂತರವೇ ಮಾಡಿ.
ಎಲ್ಲಿ ನೀವು ಸ್ಪ್ರೇ ಮಾಡಿರುತ್ತೀರೊ, ಅಲ್ಲಿ ಬಾಗಿಲು ಹಾಗೂ ಕಿಟಕಿಗಳನ್ನು ಮುಕ್ತವಾಗಿಡಿ.
ಗೆದ್ದಲು ನಿರೋಧಕ ದ್ರಾವಣವನ್ನು ಬೇರಾವುದೊ ಪದಾರ್ಥದ ಜೊತೆಗೆ ಮಿಶ್ರಣ ಮಾಡಬೇಡಿ. ಏಕೆಂದರೆ ಅದರ ಸಾಮರ್ಥ್ಯ ಕಡಿಮೆಯಾಗುತ್ತದೆ.
– ಸುಮನಾ ಮೂರ್ತಿ