ವಿಶ್ವದ 80ಕ್ಕೂ ಹೆಚ್ಚು ದೇಶಗಳಲ್ಲಿ ಕಾಫಿ ಬೆಳೆಯಲ್ಪಡುತ್ತದೆ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಳಸಲ್ಪಡುತ್ತದೆ. ಇದು 2000ಕ್ಕೂ ಹೆಚ್ಚಿನ ಬ್ರ್ಯಾಂಡ್‌ಗಳಲ್ಲಿ ವಿಶ್ವಾದ್ಯಂತ ಹರಡಿದೆ. ಲಂಡನ್ನಿನ ಇಂಟರ್‌ ನ್ಯಾಷನಲ್ ಕಾಫಿ ಆರ್ಗನೈಝೇಷನ್‌ ಕಾಫಿ ಬೆಳೆಯುವ ಗ್ರಾಹಕ ರಾಷ್ಟ್ರಗಳ ನಡುವಣ ಸೇತುವೆಯಾಗಿದೆ.

ಭಾರತಕ್ಕೆ ಕಾಫಿ ಬಂದದ್ದು 16ನೇ ಶತಮಾನದಲ್ಲಿ. ಪಶ್ಚಿಮ ಘಟ್ಟಗಳಲ್ಲಿ 1820ರ ಹೊತ್ತಿಗೆ ಬ್ರಿಟಿಷರು ಕಮರ್ಷಿಯಲ್ ಸ್ಕೇಲ್ ಪ್ಲಾಂಟೇಷನ್‌ ಅಣಿಗೊಳಿಸಿದರು. ಇದು ಸುಮಾರು 4.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ, ವಾರ್ಷಿಕ 3.2 ಲಕ್ಷ ಟನ್‌ ಲೆಕ್ಕದಲ್ಲಿ ಬೆಳೆಯಲ್ಪಡುತ್ತದೆ. ನಮ್ಮ ದೇಶದ ಅಭಿವೃದ್ಧಿಗೊಳ್ಳದ ಪ್ರದೇಶಗಳಲ್ಲಿ ಕಾಫಿ ಸಾಮಾಜಿಕ ಆರ್ಥಿಕ ಅಭಿೃದ್ಧಿಯ ವಾಣಿಜ್ಯ ಬೆಳೆಯಾಗಿದೆ.

ಆಯ್ದ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಕಾಫಿ ಬೀಜ ಬೆಳೆಯಲಾಗುತ್ತದೆ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ 16ನೇ ಶತಮಾನದಿಂದಲೇ ಇದನ್ನು ಬೆಳೆಯಲಾಗುತ್ತಿತ್ತು. ಆದರೆ ಸ್ವಾತಂತ್ರ್ಯದ ನಂತರ ಆಂಧ್ರ, ಒರಿಸ್ಸಾ, ಈಶಾನ್ಯ ರಾಜ್ಯಗಳಲ್ಲಿ ಇದರ ಬೆಳವಣಿಗೆ ಆಯಿತು. 1970ರ ನಂತರ ಆಂಧ್ರಪ್ರದೇಶದ ಪೂರ್ವ ಭಾಗ ಹಾಗೂ ದಕ್ಷಿಣ ಒರಿಸ್ಸಾದ ಕೊರಪುಟ ಜಿಲ್ಲೆಗಳಲ್ಲಿ (ಒಟ್ಟಾರೆ ಪೂರ್ವ ಘಟ್ಟದ ವಲಯ) ಇದು ಪ್ರಮುಖ ಬೆಳೆಯಾಯ್ತು.

1947ರ ನಂತರ ಈ ಬೆಳೆ ಗಣನೀಯವಾಗಿ ಹೆಚ್ಚಿದೆ. ವಾರ್ಷಿಕ 18,893 ಟನ್‌ ಇದ್ದದ್ದು 2001ರ ಹೊತ್ತಿಗೆ 3,18,200 ಟನ್‌ಗೆ ಏರಿದೆ.

ಪೂರ್ಪ ಪಶ್ಚಿಮ ಘಟ್ಟಗಳಲ್ಲಿ ಮರಗಳ ನೆರಳಿನಲ್ಲಿ ಕಾಫಿ ಬೆಳೆಯಲ್ಪಡುತ್ತದೆ. ಇಳುವರಿಯ ನಂತರ ಇದು ಇಂಧನ ಮೂಲವಾಗಿಯೂ ಪ್ರಧಾನವಾಗಿ ಗುರುತಿಸಲ್ಪಟ್ಟಿದೆ. ಉಪಬೆಳೆಯಾಗಿ ಮರಗಳಿಗೆ ಮೆಣಸು ಬಳ್ಳಿ ಹಬ್ಬಿಸಲಾಗುತ್ತದೆ. ಜೊತೆಗೆ ಕಿತ್ತಳೆ, ಅಡಕೆ, ವೆನಿಲಾ, ಬಾಳೆ, ನಿಂಬೆ ಇತ್ಯಾದಿಗಳನ್ನೂ ಸಾಕಷ್ಟು ಬೆಳೆಯುತ್ತಾರೆ. ಒಟ್ಟಾರೆ ಈ ಕಾಫಿ ಉದ್ಯಮ ಅರ್ಧ ಮಿಲಿಯನ್‌ಗೂ ಹೆಚ್ಚಿನ ಮಂದಿಗೆ ಪ್ಲಾಂಟೇಷನ್‌ ಎಸ್ಟೇಟ್‌ಗಳಲ್ಲಿ ಉದ್ಯೋಗ ಕಲ್ಪಿಸಿದರೆ, ಉಳಿದರ್ಧ ಮಿಲಿಯನ್‌ ಮಂದಿ ಕಾಫಿಯ ಸಂಸ್ಕರಣ, ವ್ಯಾಪಾರದಲ್ಲಿ ಉದ್ಯೋಗ ಕಂಡುಕೊಳ್ಳುವಂತಾಗಿದೆ.

ಭಾರತದಲ್ಲಿ ಕಾಫಿ ಬೆಳೆ ಪರಿಪೂರ್ಣವಾಗಿ ಯಾಂತ್ರಿಕ ನೆರವಿಲ್ಲದೆ ಕೀಳಲ್ಪಟ್ಟು, ಒಣಗಿಸಿ, ಎಲ್ಲಾ ಹಂತಗಳಲ್ಲೂ ಶಿಸ್ತಿನ ಗುಣಮಟ್ಟ ನಿಯಂತ್ರಣ ಕಾಯ್ದುಕೊಂಡು ಅಚ್ಚುಕಟ್ಟಾಗಿ ರಫ್ತಾಗುತ್ತದೆ. 13 ವಿಭಿನ್ನ ಭೌಗೋಳಿಕ ಪ್ರಾಂತ್ಯಗಳಲ್ಲಿ ಬೆಳೆಯಲ್ಪಡುವ ಕಾಫಿ ಅರೇಬಿಕಾ, ರೊಬೋಸ್ಟಾ, ರಾಯ್‌, ಮೈಸೂರು ನಗೆಟ್ಸ್, ಎಕ್ಸ್ ಟ್ರಾ ಬೋಲ್ಡ್, ಮಾನ್‌ ಸೂನ್‌ ಮಲಬಾರ್‌ ಮುಂತಾದ ಬ್ರ್ಯಾಂಡ್ ಗಳಿಂದ ಜನಪ್ರಿಯವಾಗಿದೆ. ಪ್ರಾರಂಭಿಕ ಹಂತದಿಂದಲೇ ಪ್ರಧಾನ ವಾಣಿಜ್ಯ ಬೆಳೆಯಾಗಿ ಅತ್ಯಧಿಕ ಪ್ರಮಾಣದಲ್ಲಿ ರಫ್ತಾಗಿ, ವಿದೇಶೀ ವಿನಿಮಯದಲ್ಲಿ ಸಿಂಹಪಾಲು ಗಳಿಸಿದೆ. ವಿಶ್ವಾದ್ಯಂತ ಭಾರತದ ಕಾಫಿ ತನ್ನ ವಿಶೇಷತೆಯಿಂದಾಗಿ ಹೆಚ್ಚು ಜನಪ್ರಿಯ ಎನಿಸಿದೆ. ವಿಶ್ವ ಮಾರುಕಟ್ಟೆಯಲ್ಲಿ ವಾಶ್ಡ್ ರೊಬೋಸ್ಟಾ ಹಾಗೂ ಮಾನ್‌ ಸೂನ್‌ ಮಲಬಾರ್‌ ಪ್ರಧಾನ ಎಸ್‌ ಪ್ರೆಸೋ ಬ್ಲೆಂಡ್ಸ್ ಎನಿಸಿವೆ.

ಭಾರತ ವಿಶ್ವ ಕಾಫಿ ಬೆಳೆಯಲ್ಲಿ ಬ್ರೆಝಿಲ್, ವಿಯೆಟ್ನಾಮ್, ಕೊಲಂಬಿಯಾ, ಇಂಡೋನೇಷ್ಯಾ ಹಾಗೂ ಇಥಿಯೋಪಿಯಾಗಳ ನಂತರ 6ನೇ ಸ್ಥಾನದಲ್ಲಿದೆ. ಅರೇಬಿಕಾ ಮತ್ತು ರೋಬೋಸ್ಟಾವನ್ನು 32:68 ಅನುಪಾತದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕ ರಾಜ್ಯ ಮಾತ್ರ ಭಾರತದ ಶೇ.72ರಷ್ಟು ಕಾಫಿಯನ್ನು ಒದಗಿಸುತ್ತದೆ. ಕೊಡಗು, ಚಿಕ್ಕಮಗಳೂರು, ಹಾಸನ ಈ ನಿಟ್ಟಿನಲ್ಲಿ ಕಾಫಿ ಇಳುವರಿ ನೀಡುವಲ್ಲಿ ಮುಂಚೂಣಿಯಲ್ಲಿವೆ.

ಭಾರತದ ಕಾಫಿ ಅಪ್ಪಟ ರಪ್ತ ಗುಣಮಟ್ಟದ ಬೆಳೆ. ಕಳೆದ ಕೆಲವು ದಶಕಗಳಿಂದ ಇಲ್ಲಿ ಬೆಳೆದ ಶೇ.80ಕ್ಕೂ ಹಿಚ್ಚು ಕಾಫಿ ರಫ್ತಾಗಿದೆ. ಇದೀಗ ಮುಖ್ಯವಾಗಿ ಅಮೆರಿಕಾ, ಜಪಾನ್‌, ಆಸ್ಟ್ರೇಲಿಯಾ, ನ್ಯೂಝಿಲೆಂಡ್‌ ಹಾಗೂ ಇತರ ಐರೋಪ್ಯ ದೇಶಗಳಿಗೆ ನಮ್ಮ 70-75% ಕಾಫಿ ರಫ್ತಾಗುತ್ತಿದೆ. 2011-12 ಸಾಲಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕಾಫಿ ರಫ್ತು ಮಾಡುವ ದೇಶಗಳ ಪೈಕಿ 6ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ. ದ. ಕೊರಿಯಾ, ಸ್ಕ್ಯಾಂಡೇವಿಯನ್‌ ರಾಷ್ಟ್ರಗಳವರೆಗೂ ನಮ್ಮ ಅಂತಾರಾಷ್ಟ್ರೀಯ ರಫ್ಚು ಮಾರುಕಟ್ಟೆ ವಿಸ್ತರಿಸಿದೆ ಎಂದರೆ ಭಾರತೀಯ ಕಾಫಿಗಿರುವ ಪ್ರಾಮುಖ್ಯತೆ ತಿಳಿಯುತ್ತದೆ.

ಭಾರತದಲ್ಲಿ ಅಪ್ಪಟ ದಕ್ಷಿಣ ಭಾರತೀಯ ಸಾಂಪ್ರದಾಯಿಕ ಪದ್ಧತಿ ಅನುಸರಿಸಿ ಫಿಲ್ಟರ್‌ ಕಾಫಿ ತಯಾರಿಸಲಾಗುತ್ತದೆ. ಈ ಸಾಂಪ್ರದಾಯಿಕ ಪೇಯ ಇದೀಗ ಯುವಜನತೆಯ ಟ್ರೆಂಡಿ ಬೀರೇಜ್‌ ಎನಿಸಿದೆ, ಹಲವಾರು ಅತ್ಯಾಧುನಿಕ ರೂಪಗಳನ್ನು ಹೊಂದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ದಿನೇದಿನೇ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಹಲವು ವಿನೂತನ ಸೃಜನಶೀಲ ಉದ್ಯೋಗಾವಕಾಶಗಳು ಹೆಚ್ಚಿವೆ. ಉತ್ಪಾದಕ, ತಯಾರಕ, ಪ್ರೊಸೆಸರ್‌, ಡೀಲರ್‌, ರೀಟೇಲರ್‌, ಕಾಫಿ ಚೇನ್‌ ಓವರ್‌….. ಹೀಗೆ ಎಲ್ಲರಿಗೂ ಲಾಭ ಗಳಿಸಲು ವಿಪುಲ ಅವಕಾಶಗಳಿವೆ. ಹೀಗಾಗಿಯೇ ಇಂದು ಮಹಾನಗರಗಳು ಮಾತ್ರವಲ್ಲದೆ, ತಾಲ್ಲೂಕು ಮಟ್ಟದಲ್ಲೂ ಎಲ್ಲೆಲ್ಲೂ ಕೆಫೆ ಕಾಫಿ ಡೇ, ಲಾರ ಸ್ಟಾರ್‌ ಲಕ್ಸ್, ಕೋಸ್ಟಾ ಕಾಫಿ, ಗ್ಲೋರಿಯಾ ಜೀನ್ಸ್, ಓ ಬೋ ಪೇ, ಡಂಕಿನ್‌ ಡೋನಟ್ಸ್, ಇತ್ಯಾದಿ ಕಾಫಿ ಕಿಯೋಸ್ಕ್ ಗಳು ರಾರಾಜಿಸುತ್ತಿವೆ.

ಪ್ರತಿದಿನ ವಿಶ್ವಾದ್ಯಂತ ಮಿಲಿಯನ್‌ ಗಟ್ಟಲೆ ಜನ ತಮ್ಮ ದಿನವನ್ನು ಬಿಸಿ ಬಿಸಿ ಕಾಫಿಯೊಂದಿಗೆ ಆರಂಭಿಸುತ್ತಾರೆ. ಸಾಮಾಜಿಕ ಸಂಬಂಧಗಳು ಸುಭದ್ರಗೊಳ್ಳಲು, ಸುದೀರ್ಘ ಸಂಭಾಷಣೆಗೆ ತೊಡಗಲು, ಯಾವುದೇ ವಾಣಿಜ್ಯ ಡೀಲಿಂಗ್ಸ್ ಕುದುರಲು ಕಾಫಿ ನೆನಪಾಗುತ್ತದೆ. ಈ ನಿಟ್ಟಿನಲ್ಲಿ ಕಾಫಿ ಬೋರ್ಡ್‌ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಟ್ರೇಡ್‌ ಫೇರ್ಸ್‌. ಎಗ್ಝಿಬಿಷನ್ಸ್ ಏರ್ಪಡಿಸಿ, ಕಾಫಿ ಸೇವನೆಯ ಲಾಭದ ಕುರಿತಾಗಿ ಮೀಡಿಯಾದಲ್ಲಿ ಮಾಹಿತಿ ಇತ್ಯಾದಿ ನೀಡುತ್ತಿರುತ್ತದೆ. ಜೊತೆಗೆ ಬೋರ್ಡ್‌ ಇದರಲ್ಲಿ ತೊಡಗಿಕೊಳ್ಳುವ ಉದ್ಯಮಿಗಳಿಗಾಗಿ ಕಾಫಿ ರೋಸ್ಟಿಂಗ್‌ಬ್ರೂಯಿಂಗ್‌ನ ತರಬೇತಿ ನೀಡುತ್ತದೆ ಕಾಫಿ ಶಾಸ್ತ್ರ ಟ್ರೇನಿಂಗ್‌ ಪ್ರೋಗ್ರಾಂ, ಪಿ.ಜಿ. ಡಿಪ್ಲೊಮಾ ಇನ್‌ ಕಾಫಿ ಕ್ವಾಲಿಟಿ ಇತ್ಯಾದಿಗಳ ಮೂಲಕ. ಕಾಫಿ ಬೋರ್ಡ್‌ ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌ (ಪಿ) ಬಳಿ `ಸೆಂಟರ್‌ ಫಾರ್‌ ಇನೋವೇಷನ್‌ಎಂಟರ್‌ ಪ್ರಿನರ್‌ ಶಿಪ್‌ ಫಾರ್‌ಕಾಫಿ’ ಯನ್ನು ತೆರೆದಿದೆ. ಇದರ ಮೂಲಕ `ಪ್ರೊಫೆಷನ್‌ ಸರ್ಟಿಫಿಕೇಟ್‌ ಪ್ರೋಗ್ರಾಂ ಇನ್‌ ಕಾಫಿ ಎಂಟರ್‌ ಪ್ರಿನರ್‌ ಶಿಪ್‌’ ಲಾಂಚ್‌ಗೊಳಿಸಿದೆ. ಕಾಫಿ ರೋಸ್ಟಿಂಗ್‌, ಗ್ರೈಂಡಿಂಗ್‌, ಪ್ಯಾಕೇಜಿಂಗ್‌ ಘಟಕಗಳಿಗಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ನೆರವು ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಯಂತ್ರೋಪಕರಣಗಳು ಈ ಕಾರಣದಿಂದ ಭಾರತೀಯ ಕಾಫಿ ಮಾರುಕಟ್ಟೆಗೆ ಪ್ರವೇಶ ಪಡೆದಿವೆ.

1942ರಲ್ಲಿ ಸ್ಥಾಪಿತಗೊಂಡ ಕಾಫಿ ಬೋರ್ಡ್‌, ಕಾಫಿ ಬೆಳೆಗಾರರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿ, ಕಳೆದ 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಉದ್ಯಮ ತನ್ನ ವಹಿವಾಟು ತಾನೇ ನೋಡಿಕೊಳ್ಳುವಂತಾದಾಗ 1995-96 ನಂತರ ಬೋರ್ಡ್‌ಮಾರ್ಕೆಟಿಂಗ್‌ ಆಪರೇಷನ್ಸ್ ನಿಲ್ಲಿಸಿತು. ಇದು ಕಾಫಿಗೆ ಸಂಬಂಧಿಸಿದಂತೆ ಸಂಶೋಧನೆ, ಅಭಿವೃದ್ಧಿ, ವಿಸ್ತರಣೆ, ಗುಣಮಟ್ಟ, ಮಾರುಕಟ್ಟೆಯ ಪದೋನ್ನತಿ ಇತ್ಯಾದಿ ಬಗ್ಗೆ ಗಮನಹರಿಸುತ್ತದೆ. ಅದು ಭಾರತೀಯ ಕಾಫಿ ಉದ್ಯಮಕ್ಕೆ ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಿ ಆಗಿದೆ. ಕಾಫಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೂ ಭಾರತ ಸರಕಾರಕ್ಕೆ ಸಲಹೆ ನೀಡುತ್ತದೆ. ಕಾಫಿ ಬೆಳೆಗಾರರಿಗೆ ತಾಂತ್ರಿಕ ನೆರವು ನೀಡುವುದರ ಜೊತೆ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಿದೆ. 12ನೇ ಪಂಚ ವಾರ್ಷಿಕ ಯೋಜನೆಯಡಿ ಕಾಫಿ ಬೆಳೆಗಾರರಿಗೆ ಹೆಚ್ಚಿನ ಸಹಾಯ ಒದಗಿಸುತ್ತಿದೆ. ಕಾಫಿ ಉದ್ಯಮದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನೂ ಎದುರಿಸಲು ಅದು ಕಟಿಬದ್ಧವಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಕಾಫಿ ಬೋರ್ಡ್‌, ಭಾರತ ಸರಕಾರ, ವಾಣಿಜ್ಯ ಹಾಗೂ ಉದ್ಯಮಗಳ ಸಚಿವಾಲಯ, ನಂ.1, ಡಾ. ಬಿ.ಆರ್‌. ಅಂಬೇಡ್ಕರ್‌ ವೀಧಿ, ಬೆಂಗಳೂರು-560 001.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ