ಅಭಿವೃದ್ಧಿಯ ವ್ಯಾಖ್ಯೆ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಸಾಕಷ್ಟು ಚರ್ಚೆಯಲ್ಲಿದೆ. ಪ್ರತಿಯೊಂದು ಪಕ್ಷ ತನ್ನದೇ ಆದ ರೀತಿಯಲ್ಲಿ ಅಭಿವೃದ್ಧಿಯ ಲೇಬಲ್‌ನ್ನು ತನ್ನ ಮೇಲೆ ಅಂಟಿಸಿಕೊಳ್ಳುತ್ತಿದೆ. ರಕ್ಷಾ ಬೋಡಿಯಾ ರಾಜಕೋಟ್‌ ಮುನಿಸಿಪಲ್ ಕಾರ್ಪೊರೇಷನ್ನಿನ ಮೇಯರ್‌ ಆಗಿದ್ದಾರೆ. ಸದಾ ಹಸನ್ಮುಖಿಯಾಗಿರುವ ಅವರು ಚರಾಹಾ (ಮೂಲಧಾರಿ) ಸಮಾಜದವರು. ಆದರೆ ಅವರ ಕುಟುಂಬದಲ್ಲಿ ವಿದ್ಯೆಗೆ ಅಪಾರ ಮಹತ್ವವಿದೆ. ಇದೇ ಕಾರಣದಿಂದ 6 ಜನ ಸೋದರ ಸೋದರಿಯರಿರುವ ಆ ಕುಟುಂಬದ ಎಲ್ಲರೂ ಉನ್ನತ ಶಿಕ್ಷಣ ಪಡೆದಿದ್ದಾರೆ.

ರಕ್ಷಾ ಅವರ ತಂದೆ ಡಾ. ಕುಂರ್‌ ಭಾಯಿ ಲಕ್ಷಣ ಭಾಯಿ ಜಾಧವ್ ಕೃಷಿ ತಜ್ಞರಾಗಿರುವುದರ ಜೊತೆ ಜೊತೆಗೆ ಕೃಷಿ ಇಲಾಖೆಯಲ್ಲಿ ಕೂಡ ಕೆಲಸ ಮಾಡುತ್ತಿದ್ದರು.

ರಕ್ಷಾ ಅರ್ಥಶಾಸ್ತ್ರದಲ್ಲಿ ಬಿಎ ಹಾಗೂ ಎಲ್ಎಲ್‌ಬಿ (ಪಾರ್ಟ್‌) ತನಕ ಓದಿದರು. ಬಳಿಕ ರಘುಭಾಯಿ ಬೋಡಿಯಾ ಜೊತೆಗೆ ವಿವಾಹವಾದರು. ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾನೆ.

“ನೀವು ರಾಜಕೀಯಕ್ಕೆ ಏಕೆ ಬಂದಿರಿ?” ಎಂದು ಅವರನ್ನು ಪ್ರಶ್ನಿಸಿದಾಗ ಅವರು ತಾಳ್ಮೆಯಿಂದಲೇ ಉತ್ತರಿಸಿದರು.

“ನನಗೆ ಅದೊಂದು ಸುವರ್ಣಾವಕಾಶ. ನಾನು ಅದನ್ನು ನನ್ನ ಕೈಯಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡಲಿಲ್ಲ.

“ಅಂದಹಾಗೆ ಚಿಕ್ಕವಳಿದ್ದಾಗ ನನ್ನ ತಂದೆಯವರ ಬಳಿ ಲಾಲ್‌ಕೃಷ್ಣ ಅಡ್ವಾಣಿ, ರಾಜನಾಥ್‌ ಸಿಂಗ್‌ರಂಥ ಗಣ್ಯಾತಿಗಣ್ಯರು ಬರುತ್ತಿದ್ದರು. ಮನೆಯಲ್ಲಿ ರಾಜಕೀಯ ವಾತಾವರಣ ತುಂಬಿತ್ತು. ಮದುವೆಯ ಬಳಿಕ ಪತಿ ರಾಜಕೋಟ್‌ನಲ್ಲಿ ಕಾರ್ಪೊರೇಟರ್ ಆಗಿದ್ದರು. ಅವರು ರಾಜಕೀಯದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ರಾಜಕೀಯದಲ್ಲಿ ಆಸಕ್ತಿಯಿದ್ದ ಕಾರಣದಿಂದ ನನಗೆ ಅದು ಕಷ್ಟ ಎನಿಸಲಿಲ್ಲ. 2010ರಲ್ಲಿ ನಾನು ಎರಡು ವರ್ಷದ ಮಟ್ಟಿಗೆ ಮಾಧ್ಯಮಿಕ ಶಿಕ್ಷಣ ಮಂಡಳಿಯ ಚೇರ್‌ಮನ್‌ ಕೂಡ ಆಗಿದ್ದೆ.

“2013ರಲ್ಲಿ ರಾಜಕೋಟ್‌ ಮಹಾನಗರ ಪಾಲಿಕೆಗೆ ಚುನಾವಣೆಗಳು ಘೋಷಣೆಯಾದಾಗ ನನಗೆ ಸ್ಪರ್ಧಿಸಲು ಅವಕಾಶ ದೊರಕಿತಲ್ಲದೆ, ನಾನು ಗೆದ್ದು ಬಂದೆ.’

“ಮತ್ತೊಂದು ಸಂಗತಿ, ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಎಲ್ಲ ಸಮಸ್ಯೆಗಳು ಒಮ್ಮೆಲೆ ಬಗೆಹರಿಯುತ್ತವೆಯೇ? ನಾನು ಅಧಿಕಾರ ಕೈಗೆ ಹಿಡಿಯುತ್ತಿದ್ದಂತೆಯೇ ರಸ್ತೆ ಮೇಲೆ ಓಡಾಡುತ್ತಿದ್ದ ಎಮ್ಮೆ, ಹಸುಗಳನ್ನು ನಿಯಂತ್ರಣದಲ್ಲಿಡಲು ಕಾರ್ಯಪ್ರವೃತ್ತಳಾದೆ. ಏಕೆಂದರೆ ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಲಿತ್ತು.

ಪತಿಯ ಸಹಕಾರ

“ನಿಮ್ಮ ಈ ಹುದ್ದೆಯಿಂದಾಗಿ ಮನೆಯಲ್ಲಿ ಪತಿಯ ಜೊತೆ ಅಹಂನ ತಾಕಲಾಟ ಉಂಟಾಗುತ್ತದೆಯೇ?” ಎಂದು ಕೇಳಿದ ಪ್ರಶ್ನೆಗೆ ಅವರು, “ಹಾಗೇನೂ ಇಲ್ಲ. ಏಕೆಂದರೆ ಇದು ಸಮ್ಮತಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ. ನನ್ನ ಪತಿ ನನ್ನ ಯಾವುದೇ ಕೆಲಸದಲ್ಲಿ ಸ್ವಲ್ಪ ಹಸ್ತಕ್ಷೇಪ ಮಾಡುವುದಿಲ್ಲ. ಅವರೂ ಸಕ್ರಿಯ ಕಾರ್ಯಕರ್ತರು. ಹೀಗಾಗಿ ಯಾವಾಗ, ಹೇಗೆ ಕೆಲಸ ಮಾಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ನನಗೆ ಅವರು ಆಗಾಗ ಸಲಹೆ ಮಾತ್ರ ಕೊಡುತ್ತಿರುತ್ತಾರೆ.”

ಮಹಿಳೆಯರ ಜೊತೆಗೆ ನಡೆಯುತ್ತಿರುವ ದುರ್ವರ್ತನೆಯ ಬಗ್ಗೆ ರಕ್ಷಾ ಹೀಗೆ ಹೇಳುತ್ತಾರೆ?

“ಈಗ ಸ್ತ್ರೀಯರ ಕುರಿತಂತೆ ಜನರ ದೃಷ್ಟಿಕೋನ ಬಹಳ ಬದಲಾಗಿದೆ. ಇಂದಿನ ಯುವಕರಲ್ಲಿ ವಿಕೃತಿ ಅತಿಯಾಗಿಬಿಟ್ಟಿದೆ. ಹಿಂದೆ ಸೋದರ ಸೋದರಿ ಬಾಂಧವ್ಯ ಇರುತ್ತಿತ್ತು. ದೊಡ್ಡವರು ಹೆಣ್ಣುಮಕ್ಕಳನ್ನು ಪುತ್ರಿಯರ ಹಾಗೆ ಕಾಣುತ್ತಿದ್ದರು. ಈಗ ಆ ಭಾವನೆ ಇಲ್ಲ.

“ಇಂದು ತಂತ್ರಜ್ಞಾನದ ಬಳಕೆ ಹೆಚ್ಚಿದೆ. ಇಂದಿನ ಮಕ್ಕಳಿಗೆ ಕಂಪ್ಯೂಟರ್‌ ಹಾಗೂ ಮೊಬೈಲ್‌ನ ಗೀಳು ತಗುಲಿಬಿಟ್ಟಿದೆ. ಹೀಗಾಗಿ ಪೋಷಕರು ಸದಾ ಜಾಗ್ರತೆಯಿಂದ ಇರಬೇಕಾಗುತ್ತದೆ. ಮಗ ಅಥವಾ ಮಗಳು ಎಲ್ಲಿಗೆ ಹೋಗುತ್ತಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.”

ಮೇಯರ್‌ ಹುದ್ದೆಗೆ ಏರಿದ ಬಳಿಕ ಅವರಿಂದ ಜಾತಿಗತ ಅಪೇಕ್ಷೆಗಳು ಹೆಚ್ಚಿದವು. ಆದರೆ ಅವರು ಅದಕ್ಕೆ ಗಾಬರಿಗೊಳ್ಳದೆ ಕಾರ್ಯಪ್ರವೃತ್ತರಾಗಿದ್ದಾರೆ. ಹೀಗಾಗಿ ಅವರು `ಡವ್ ವುಮನ್‌ ಆಫ್‌ ಇಯರ್‌’ ಆಗಿದ್ದಾರೆ.

– ಗೀತಾ ಕಪೂರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ