ಶ್ಯಾಮಲ ವರ್ಣಕ್ಕೆ ಮೆರುಗು ನೀಡಲು ನೂರಾರು ಉಪಾಯಗಳು ದೊರೆಯುತ್ತವೆ. ಆದರೆ ಯಾವ ಚಹರೆಗೆ ಯಾವ ಉಪಾಯ ಹೊಂದುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ. ನಿಮಗೆ ಇದರ ಬಗ್ಗೆ ತಿಳಿದಿರದಿದ್ದರೆ ನೀವು ಆತಂಕಪಡುವ ಅಗತ್ಯವಿಲ್ಲ, ನಾವೇ ನಿಮಗೆ ಅದರ ಬಗ್ಗೆ ತಿಳಿಸುತ್ತಿದ್ದೇವೆ.

ನೀವು ಟ್ಯಾನ್‌ ನಿವಾರಿಸಲು ಪ್ರಯತ್ನಿಸುತ್ತಿದ್ದಲ್ಲಿ ಕೆಳಕಂಡ ಉಪಾಯಗಳನ್ನು ಅನುಸರಿಸಿ :

ಪರಂಗಿ ಅಥವಾ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಟ್ಯಾನ್‌ ಇರುವ ಜಾಗಕ್ಕೆ ಲೇಪಿಸಿ. ಶುಷ್ಕ ತ್ವಚೆಗೆ ಇದು ಒಳ್ಳೆಯ ಸ್ಕಿನ್‌ ವೈಟ್‌ನಿಂಗ್‌ ಆಗಿದೆ.

ನಿಮಗೆ ಟ್ಯಾನ್‌ ಜೊತೆ ಜೊತೆಗೆ ಮೊಡವೆಗಳು ಕೂಡ ಇದ್ದರೆ ಆಲೂಗೆಡ್ಡೆ ರಸ ಹಾಗೂ ಟೊಮೇಟೊ ರಸ ಮಿಶ್ರಣಗೊಳಿಸಿ ಲೇಪಿಸಿ. ರಾತ್ರಿ ಅಥವಾ ಮುಂಜಾನೆ ಈ ರಸವನ್ನು ಲೇಪಿಸಬೇಕು. ಶುಷ್ಕ ತ್ವಚೆಯವರು ಈ ರಸವನ್ನು ಲೇಪಿಸಬಾರದು. ಏಕೆಂದರೆ ಶುಷ್ಕತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಉಂಟು.

ಆಕ್ಸಿಜನ್‌ಯುಕ್ತ ವೈಟ್‌ನಿಂಗ್‌ ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದು ಬಹುಬೇಗ ಶ್ಯಾಮಲ ವರ್ಣವನ್ನು ನಿವಾರಿಸುತ್ತದೆ. ಇದು ಶುಷ್ಕ ಮತ್ತು ಎಣ್ಣೆ ಚರ್ಮದವರಿಗೆ ಉಪಯುಕ್ತ.

surat-sawali-2

ಒಂದು ಚಮಚ ಹಾಲು, 1 ಚಮಚ ಬೆಣ್ಣೆ ಮತ್ತು 1 ಚಮಚ ಓಟ್ಸ್ ಪೌಡರ್‌ನ್ನು ಮಿಶ್ರ ಮಾಡಿಕೊಂಡು ಮುಖಕ್ಕೆ ಗೋಲಾಕಾರವಾಗಿ ನಿಧಾನವಾಗಿ ಲೇಪಿಸಿ. ಅದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ತೈಲ ತ್ವಚೆಯವರು ಮೊಸರನ್ನು ಉಪಯೋಗಿಸಬೇಕು. ಇದರಿಂದ ಟ್ಯಾನ್‌ ಕಡಿಮೆಯಾಗುವುದಷ್ಟೇ ಅಲ್ಲ, ಮುಖಕ್ಕೆ ಒಳ್ಳೆಯ ಎಕ್ಸ್ ಪೋಲಿಯೇಶನ್‌ ಕೂಡ ದೊರೆಯುತ್ತದೆ.

ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ಈ ಎಲ್ಲ ಉಪಾಯಗಳಿಂದ ನಿಮ್ಮ ತ್ವಚೆಗೆ ಮೆರುಗಷ್ಟೇ ಬರುತ್ತದೆ, ಬಣ್ಣ ಬದಲಾಗುವುದಿಲ್ಲ.

ಮೊಡವೆಗಳಿಂದಾಗಿ ನಿಮ್ಮ ಆತ್ಮವಿಶ್ವಾಸ ಎಷ್ಟರ ಮಟ್ಟಿಗೆ ಕುಗ್ಗುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಸಾಮಾನ್ಯವಾಗಿ ಮೊಡವೆಗಳು ಕಲೆ ಇಲ್ಲದೆ ಸುಮಾರು ತಿಂಗಳುಗಳ ತನಕ ಹಾಗೆಯೇ ಉಳಿದುಬಿಡುತ್ತವೆ. ನಿಮ್ಮ ನೈರ್ಮಲ್ಯ, ಆಹಾರ, ಜೀವನಶೈಲಿಯ ವಿಧಾನಗಳಿಂದಲೂ ನಿಮಗೆ ಮೊಡವೆಗಳು ಕಾಣಿಸಿಕೊಳ್ಳಬಹುದು. ಕಾರಣಗಳು ಏನೇ ಇರಲಿ, ಮೊಡವೆಗಳನ್ನು ತಕ್ಷಣ ಹೋಗಲಾಡಿಸಲು ಈ ಉಪಾಯಗಳನ್ನು ಅನುಸರಿಸಿ :

ರಾತ್ರಿ ಹೊತ್ತು ಮೊಡವೆಗಳ ಮೇಲೆ ಬಿಳಿ ಬಣ್ಣದ ಟೂಥ್‌ ಪೇಸ್ಟ್ ಲೇಪಿಸಿ.

ಸ್ಯಾಲಿಸಿಲಿಕ್‌ ಆ್ಯಸಿಡ್‌ಯುಕ್ತ ಪಿಂಪಲ್ಸ್ ಅಥವಾ ಆ್ಯಕ್ನೆ ಕ್ರೀಮ್ ಲೇಪಿಸಿ. ಇದರಿಂದ ಗುಳ್ಳೆಗಳುಳ್ಳ ಮೊಡವೆಗಳ ತೊಂದರೆ ಕಡಿಮೆ ಮಾಡಲು ನೆರವು ಸಿಗುತ್ತದೆ. ಇದರಿಂದ ಕೆಂಪಾಗುವುದು ಸಹ ಕಡಿಮೆಯಾಗುತ್ತದೆ. ಟೀ ಟ್ರೀ ತೈಲ ಕೂಡ ಮೊಡವೆ ಹೋಗಲಾಡಿಸಲು ನೆರವಾಗುತ್ತದೆ.

Oatmeal1a

ದೇಹದಲ್ಲಿನ ಅತ್ಯಧಿಕ ಉಷ್ಣತೆಯ ಕಾರಣದಿಂದಲೂ ಮೊಡವೆಗಳುಂಟಾಗುತ್ತವೆ. ಇಂತಹ ಮೊಡವೆಗಳಿಗಾಗಿ ಫಾಯಿಲ್ ‌ಪೇಪರ್ ನಲ್ಲಿ ಮಂಜುಗಡ್ಡೆ ಇಟ್ಟು ಚೆನ್ನಾಗಿ ಸುತ್ತಿ. ನಂತರ ಅದನ್ನು ಪ್ಲಾಸ್ಟಿಕ್‌ ಪೇಪರ್‌ನಲ್ಲಿ ಹಾಕಿಟ್ಟು ಚೆನ್ನಾಗಿ ಸೀಲ್ ‌ಮಾಡಿ. ಬಳಿಕ ಈ ಮಂಜುಗಡ್ಡೆಯ ಚೀಲವನ್ನು 15-20 ನಿಮಿಷಗಳ ಕಾಲ ಮೊಡವೆಗಳ ಮೇಲೆ ಇಡಿ. ಇದು ಗುಳ್ಳೆಗಳುಳ್ಳ ಮೊಡವೆಗಳನ್ನು ಸಮತಟ್ಟುಗೊಳಿಸಲು ನೆರವಾಗುತ್ತದೆ.

ನೀವು ಮುಖಕ್ಕೆ ಬಗೆಬಗೆಯ ಫೇಶಿಯಲ್‌ಗಳನ್ನು ತಯಾರಿಸಿಕೊಳ್ಳುತ್ತೀರಿ. ಆದರೆ ಕೈಕಾಲುಗಳ ಕಡೆ ಗಮನ ಕೊಡಲು ಹೋಗುವುದೇ ಇಲ್ಲ. ಅವುಗಳ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಅವಶ್ಯಕ. ಮಹಿಳೆಯರ ಕೈಗಳು ಹಾಗೂ ಹಿಮ್ಮಡಿಗಳು ಸದಾ ನೀರಿನ ಸಂಪರ್ಕಕ್ಕೆ ಬರುವುದರಿಂದ ಅವು ಶುಷ್ಕಗೊಳ್ಳುತ್ತವೆ. ಈ ಕಾರಣದಿಂದ ಅವುಗಳಲ್ಲಿ ಬಿರುಕುಂಟಾಗುತ್ತವೆ. ನೀವು ಮೇಲಿಂದ ಮೇಲೆ ಪೆಡಿಕ್ಯೂರ್‌, ಮೆನಿಕ್ಯೂರ್‌ನಂತೂ ಮಾಡಿಸಲಾಗುವುದಿಲ್ಲ. ಹಾಗಾದರೆ ಈ ಮನೆ ಮದ್ದನ್ನು ಅನುಸರಿಸಿ.

Manicure-at-Studio-M-Salon-and-Spa

ಹಾಲು ಕುದಿಸುವಾಗ ಮೇಲೆ ಬರುವ ಕೆನೆಯನ್ನು ತೆಗೆದುಕೊಂಡು ಕೈ ಹಾಗೂ ಕಾಲುಗಳ ಮೇಲೆ ಸವರಿ 10-15 ನಿಮಿಷ ಬಿಟ್ಟು ತೊಳೆಯಿರಿ. ಕೆನೆಯ ಜೊತೆಗೆ ಸ್ವಲ್ಪ ಸಕ್ಕರೆ ಹಾಗೂ ನಿಂಬೆ ಸಿಪ್ಪೆಯನ್ನು ಕೈ ಹಾಗೂ ಕಾಲುಗಳ ಮೇಲೆ ಉಜ್ಜಿ. ಇದರಿಂದ ತ್ವಚೆಯ ಮೇಲ್ಭಾಗದ ಶುಷ್ಕ ಭಾಗದಲ್ಲಿ ಹೊಳಪು ಬರುತ್ತದೆ. ಕೈ ಕಾಲುಗಳು ಮೃದುವಾಗುತ್ತವೆ. ಇದನ್ನು ನೀವು ಮೊಣಕಾಲಿನ ಮೇಲೂ ಹಚ್ಚಬಹುದು. ಏಕೆಂದರೆ ಮೊಣಕಾಲುಗಳ ಬಣ್ಣ ಕೂಡ ಸಮಾನ ಎನಿಸಬೇಕು.

ನಿಮ್ಮ ಕೈ ಹಾಗೂ ಕಾಲುಗಳು ಬಹಳ ಶುಷ್ಕವಾಗಿದ್ದರೆ ರಾತ್ರಿ ಮಲಗುವ ಮುನ್ನ ವ್ಯಾಸಲೀನ್‌ (ಪೆಟ್ರೊಲಿಯಂ ಜೆಲ್ಲಿ)ನ್ನು ಚೆನ್ನಾಗಿ ಲೇಪಿಸಿ.

image96818

ನಿಮ್ಮ ಕೈ ಹಾಗೂ ಕಾಲುಗಳ ಮೇಲೆ ಸುಕ್ಕುಗಳು ಹೆಚ್ಚಾಗಿದ್ದರೆ ನೀವು 3 ಪಟ್ಟು ಹೆಚ್ಚು ವಯಸ್ಸಾದವರಂತೆ ಕಂಡುಬರುತ್ತೀರಿ. ಅದಕ್ಕಾಗಿ ನೀವು ರಿಂಕ್‌ ಫಿಲರ್ಸ್ ಉಪಯೋಗಿಸಬಹುದು. ಕ್ರೀಮ್ ಇರುವ ಫಿಲರ್ಸ್ ಮುಖದ ಬಳಕೆಗೆಂದೇ ಮಾರಾಟ ಮಾಡಲಾಗುತ್ತದೆ. ಅದನ್ನು ನಿಮ್ಮ ಕೈಗಳಿಗೂ ಲೇಪಿಸಿಕೊಳ್ಳಿ. ಅವು ಕೂಡ ನಿಮ್ಮ ದೇಹದ ಅಂಗಗಳೇ…. ಅದರಲ್ಲಿ ಜಿಪುಣತ ತೋರಿಸಬೇಡಿ.

ನೀವು ತೆರೆದ ಅಂಗಗಳಾದ ಮುಖ, ಕೈ ಕಾಲುಗಳಿಗೆ ಎಷ್ಟು ಮಹತ್ವ ಕೊಡುತ್ತೀರೋ, ದೇಹದ ಮುಚ್ಚಿದ ಅಂಗಗಳ ಬಗೆಗೂ ಅಷ್ಟೇ ಗಮನಕೊಡುವ ಅಗತ್ಯವಿದೆ. ಸುಸ್ತು, ದೇಹದಲ್ಲಿ ಕಾರಣವಿಲ್ಲದೆ ನೋವು, ಸಿಡಿಮಿಡಿತನ ನೀವು ನಿಮ್ಮ ಆಂತರಿಕ ಅಂಗದ ಬಗ್ಗೆ ಗಮನ ಕೊಡದೇ ಇರುವ ಪರಿಣಾಮವಾಗಿದೆ. ಈಚೆಗೆ ಪಾರ್ಲರ್‌ಗಳಲ್ಲಿ ಮಸಾಜ್‌ ಮುಂತಾದ ಅದೆಷ್ಟು ದುಬಾರಿಯಾಗಿವೆಯೆಂದರೆ, ನೀವು ಇಷ್ಟಪಟ್ಟೂ ಕೂಡ ಮೇಲಿಂದ ಮೇಲೆ ಹೋಗಲಾಗದು. ಇಂತಹ ಸ್ಥಿತಿಯಲ್ಲಿ ನೀವು ಹೀಗೆ ಮಾಡಬಹುದು.

ನೀವು ದ್ರಾಕ್ಷಾರಸ ತಯಾರಿಸುತ್ತಿದ್ದರೆ, ರಸ ತೆಗೆದು ಉಳಿದ ಸಿಪ್ಪೆ ಭಾಗವನ್ನು ಎಸಿಯಬೇಡಿ. ಅದರಲ್ಲಿ ಸಕ್ಕರೆ ಮತ್ತು ಆಲಿವ್ ‌ಎಣ್ಣೆ ಅಥವಾ ಬಾದಾಮಿ ಎಣ್ಣೆ ಹಾಕಿ. ಅದನ್ನು ಸ್ನಾನಕ್ಕಿಂತ 15 ನಿಮಿಷ ಮುಂಚೆ ದೇಹದ ಮೇಲೆ ಗೋಲಾಕಾರದಲ್ಲಿ ಲೇಪಿಸಿ. ನಂತರ ಸ್ನಾನ ಮಾಡುವಾಗ ಮಾಯಿಶ್ಚರ್‌ಯುಕ್ತ ಸೋಪ್‌ನಿಂದ ಸ್ವಚ್ಛಗೊಳಿಸಿ.

coffee-1

ನೀವು ಕಾಫಿ ಕುಡಿಯುವ ಹವ್ಯಾಸವುಳ್ಳವರಾಗಿದ್ದರೆ ಸೋಸಿದ ಬಳಿಕ ಉಳಿಯುವ ಕಾಫಿ ಚರಟವನ್ನು ಎಸೆಯಬೇಡಿ. ಅದರಲ್ಲಿ ಜೇನುತುಪ್ಪ ಬೆರೆಸಿ ಸ್ನಾನಕ್ಕಿಂತ 15 ನಿಮಿಷ ಮುಂಚೆ ಲೇಪಿಸಿ. ಇದನ್ನು ಮೇಲಿಂದ ಮೇಲೆ ಉಪಯೋಗಿಸುವುದರಿಂದ ಸೆಲ್ಯುಲೈಟ್‌ ಕಡಿಮೆಗೊಳಿಸಲು ನೆರವಾಗುತ್ತದೆ.

ಈ ಎರಡೂ ಸ್ಕ್ರಬ್‌ಗಳು ದೇಹದಲ್ಲಿ ತಕ್ಷಣ ಚುರುಕುತನ ನೀಡುತ್ತವೆ. ಇದರ ಹೊರತಾಗಿ ನಿಮ್ಮ ತ್ವಚೆಯಲ್ಲೂ ಸಾಕಷ್ಟು ಮೆರುಗು ಬರುತ್ತದೆ.

ಅನುರಾಧಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ