ವಿಚಿತ್ರ ದೋಣಿಯ ಬೊಂಬಾಟ್ ಸವಾರಿ : ದೋಣಿಯಲ್ಲಿ ಸವಾರಿ ಮಾಡಲು ಹೊರಟಿರುವಿರಿ ಎಂದ ಮೇಲೆ ಸಂಕೋಚವೇಕೆ? ಅದು ಏಕೆಂದರೆ, ಈ ದೋಣಿ ಮನೆಗಳಲ್ಲಿ ತಯಾರಿಸಲ್ಪಟ್ಟಿದ್ದು ಹಾಗೂ ಇವುಗಳಲ್ಲಿ ಪ್ರಯಾಣಿಸಿದರೆ, ಮುಳುಗಿಹೋದರೆ ಎಂಬ ಕಾರಣದಿಂದ. ಮುಳುಗಿದರೆ ಸಾವಿನ ಭಯವಿಲ್ಲ, ನೀರಿಗೆ ಬಿದ್ದು ಒದ್ದೆಮುದ್ದೆಯಾಗಬಹುದಷ್ಟೆ. ಇದು ಕಿರ್ಗಿಸ್ತಾನದ ರಾಜಧಾನಿ ಬಿಶ್‌ಕೇಕ್‌ನ ಒಂದು ದೊಡ್ಡ ಸರೋವರದಲ್ಲಿ ಸ್ಪರ್ಧೆ ಏರ್ಪಡಿಸಿದ್ದಾಗ ತಿಳಿದುಬಂದದ್ದು, ಭಾರತಕ್ಕಿಂತಲೂ ಹೆಚ್ಚಿನ ತಾಪಮಾನವಿದ್ದ ಕಾರಣ, ಜನ ಬೇಕೆಂದೇ ನೀರಲ್ಲಿ ಬೀಳುವ ಮಜಾ ಪಡೆದರಂತೆ!
ಇದೆಂಥ ಭಾರಿ ಮೆರವಣಿಗೆ! : ಇಷ್ಟೊಂದು ಜನ, ಸರಕಾರ ಉರುಳಿಸಬೇಕಿದೆಯೇ? ಅದಲ್ಲ…. ಸಲಿಂಗ ಸಂಬಂಧ ವ್ಯಕ್ತಿಯ ವೈಯಕ್ತಿಕ ಹಕ್ಕಿನ ಆಯ್ಕೆಯೇ ಹೊರತು ದಯಾಭಿಕ್ಷೆಯಲ್ಲ ಎಂದು ಸಮಾಜಕ್ಕೆ ನಿರೂಪಿಸಲು ಈ ಮೆರವಣಿಗೆ. ಮತ್ತೆ ಇದು ನಡೆದಿದ್ದು ಎಲ್ಲಿ? ಇಸ್ಲಾಮಿ ದೇಶ ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಲ್ಲಿ. ಎಷ್ಟೋ ವರ್ಷಗಳಿಂದ ಟರ್ಕಿ ಪಾಶ್ಚಾತ್ಯ ದೇಶಗಳಂತೆ ಉನ್ಮುಕ್ತ ದೇಶವಾಗಿ ಹೊರಹೊಮ್ಮಲು ಬಯಸಿದರೂ ಅದು ಇಸ್ಲಾಮಿ ಏಷ್ಯಾಯಿ ದೇಶವಾಗಿಯೇ ಉಳಿದಿದೆ, ಏಕೆಂದರೆ ಈ ದೇಶ ಎರಡೂ ಮಹಾದ್ವೀಪಗಳಲ್ಲಿ ಹರಡಿದೆ.
ಹ್ಯಾಟ್‌ಗಳ ಮೋಡಿ : ಲಂಡನ್‌ನ ಬರ್ಕ್‌ಶೈರ್‌ನಲ್ಲಿ ನಡೆಯುವ ರೇಸುಗಳಲ್ಲಿ ಕುದುರೆಗಳಿಗಿಂತ ಹೆಚ್ಚಾಗಿ, ಅವನ್ನು ನೋಡಲು ಬಂದ ಯುವತಿಯರ ಹ್ಯಾಟ್‌ಗಳ ಗ್ಲಾಮರಸ್ ಮೋಡಿ ಅದ್ಭುತವಾದದ್ದು! ಬಂದಿದ್ದ ಜನ ಕುದುರೆ ನೋಡಿದರೋ ಬಿಟ್ಟರೋ, ಹ್ಯಾಟ್ ಧಾರಿಣಿಯರನ್ನು ನೋಡಿದ್ದೂ ನೋಡಿದ್ದೇ!
ಹಾಲಿವುಡ್‌ನ ಸೂಪರ್ ಹೀರೋಯಿನ್ : ಏಂಜಲೀನಾ ಜೋಲಿ ಹಾಲಿವುಡ್‌ನ ನಂ.1 ಹಾಟೆಸ್ಟ್ ಸ್ಟಾರ್. ಅಂಥ ಆಕರ್ಷಕ ನಟಿಯ ಗ್ಲಾಮರ್ ದಿನೇ ದಿನೇ ಮಿಂಚುತ್ತಿದೆ. ಅವಳ ಚಿತ್ರಗಳಿಗಂತೂ ಕೋಟ್ಯಂತರ ಡಾಲರ್ ಸುರಿಯಲು ನಿರ್ಮಾಪಕರು ಮುಗಿಬೀಳುತ್ತಾರೆ. ಇತ್ತೀಚಿನ `ಮ್ಯಾಲಾಫಿಸೆಂಟ್’ ಅತ್ಯಂತ ಯಶಸ್ವೀಚಿತ್ರ ಎನಿಸಿ, ಆಕೆ ಪ್ರಚಾರಕ್ಕಾಗಿ ಟೋಕಿಯೋಗೆ ಬಂದಿದ್ದಾಗ, ಮುಗಿಬಿದ್ದ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿದ್ದು ಹೀಗೆ!
ನಮಗೂ ಹಕ್ಕಿದೆ : ಇದೇನು ಗಂಡಸೋ ಹೆಂಗಸೋ ಎಂದು ಕೇಳಬೇಡಿ. ಆದರೆ ಹೆಂಗಸರ ಉಡುಗೆ ಧರಿಸಿ ಥಳುಕುಬಳುಕಾಗಿ ಓಡಾಡುವ ಇವರಲ್ಲಿ ಪ್ರೇಕ್ಷಕರಿಗೆ ಆಸಕ್ತಿ ಹೆಚ್ಚು. ಇತ್ತೀಚೆಗೆ ಬರ್ಲಿನ್, ಜರ್ಮನಿಗಳಲ್ಲಿ ಇವರು ದೊಡ್ಡ ಸಮಾರಂಭ ನಡೆಸಿದರು. ಭಾರತದ ಸುಪ್ರೀಂಕೋರ್ಟ್ ಸಹ ಇತ್ತೀಚೆಗೆ ಹಿಜಿಡಾಗಳಿಗೆ ಸಾಂವಿಧಾನಿಕ ಹಕ್ಕು ನೀಡಿ, ಇವರು ಕಳೆದುಕೊಂಡಿದ್ದ ಹಕ್ಕನ್ನು ವಾಪಸ್ಸು ನೀಡಿತ್ತು.
ಇದೆಂಥ ಹುಚ್ಚುಖೋಡಿತನ : ಅಮೆರಿಕಾದಲ್ಲಿ ತಲೆಕೆಟ್ಟ ಗನ್ ಮ್ಯಾನ್‌ಗಳ ಆತಂಕ ಮತ್ತೆ ಶುರುವಾಗಿದೆ. ಅಲ್ಲಿನ ಸಂವಿಧಾನ ಪ್ರತಿಯೊಬ್ಬ ನಾಗರಿಕರೂ ಬಂದೂಕು ಇರಿಸಿಕೊಳ್ಳಬಹುದೆಂಬ ಹಕ್ಕು ನೀಡಿದೆ. ಆದರೆ ಇದರ ಸದುಪಯೋಗಕ್ಕಿಂತಲೂ ದುರುಪಯೋಗವೇ ಹೆಚ್ಚಾಗುತ್ತಿದೆ. ಇದನ್ನು ಹೊಂದಿದ ತಲೆಕೆಟ್ಟ ಯುವಜನತೆ ಅಮಾಯಕ, ಮುಗ್ಧ ನಿರ್ದೋಷಿಗಳನ್ನು ಗುಂಡಿಟ್ಟು ಚಿಂದಿ ಉಡಾಯಿಸುತ್ತಿದೆ. ಹೊಸ ಕೇಸ್ ಪ್ರಕಾರ, ಇತ್ತೀಚೆಗೆ 22 ವರ್ಷದ ಇಲಿಯಟ್ ರೋಝರ್ ಕಂಡಕಂಡವರನ್ನು ಕೊಂದುಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ. ಅವನ ಹೆಣದ ಬಳಿ 3 ಬಂದೂಕು, ಇನ್ನಿತರ ಸಾಕ್ಷಿಗಳು ದೊರಕಿದವು. ಅವನಿಂದ ಕಾರಣವಿಲ್ಲದೆ ಹತ್ಯೆಗೊಳಗಾದ ನಿರಪರಾಧಿಗಳು ಹಾಗೂ ಅವರಿಗಾಗಿ ಅಳುತ್ತಿರುವ ಮನೆಯವರ ಗೋಳು ಕೇಳುವರಾರು?
ಇಂದಿಗೂ ಉಳಿದ ಆಕರ್ಷಣೆ : ಇಟಲಿಯ ರಾಜಧಾನಿ ರೋಮ್ ನ ಐತಿಹಾಸಿಕ ಆಕರ್ಷಣೆ ಇನ್ನೂ ಹಾಗೇ ಉಳಿದಿದೆ. ಕ್ರಿಸ್ತಪೂರ್ವ ಕಾಲದ ಈ ವಿಶಾಲ ಸ್ಟೇಡಿಯಂ, ಕೊಲೋಸಿಯಂ ನೋಡದೆ ಪ್ರವಾಸಿಗರು ಹಿಂತಿರುಗುವುದಿಲ್ಲ. ಹೀಗಾಗಿಯೇ ಇಂಗ್ಲೆಂಡ್‌ನ ರಾಜಮನೆತನದ ಪ್ರಿನ್ಸ್ ಹ್ಯಾರಿ ಒಬ್ಬ ಗೈಡ್‌ಳನ್ನು ಹಿಡಿದು, ಇಲ್ಲಿ ನಡೆಯಲಿರುವ ರೇಸ್ ಕುಸ್ತಿಗಳನ್ನು ವೀಕ್ಷಿಸಲು ಆಗಮಿಸಿದ್ದಾನೆ.
ಸಾಮೂಹಿಕ ವಿವಾಹಗಳು : ದುಬಾರಿ ಖರ್ಚುಗಳ ಅಗತ್ಯವಿಲ್ಲದ, ಬಡವರ ಭಾಗ್ಯನಿಧಿ ಎನಿಸಿರುವ ಧರ್ಮಸ್ಥಳದಂಥ ಕಡೆ ಹೆಚ್ಚಾಗಿ ನಡೆಯುವ ಸಾಮೂಹಿಕ ವಿವಾಹಗಳು ಬಡಜನತೆಯ ಬಾಳು ಬೆಳಗಿಸುತ್ತವೆ. ಇಂಥದೇ ಒಂದು ಸಾಮೂಹಿಕ ವಿವಾಹ ಮಹೋತ್ಸವ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ವಿಶೇಷ ಎಂದರೆ ಇಲ್ಲಿ ಎಲ್ಲಾ ಧರ್ಮದ ವಧೂವರರು ಭಾಗವಹಿಸಿದ್ದು, ಸಾರ್ವತ್ರಿಕವಾಗಿ ಎಲ್ಲರೆದುರು ನಡೆಯುವ ಈ ಮದುವೆಗಳಲ್ಲಿ ಇನ್ನಿದಕ್ಕಿಂತ ಸರಳತೆ ಇರಲು ಸಾಧ್ಯವೇ?