ಬಹುರಾಷ್ಟ್ರೀಯ ಕಂಪನಿಗಳ ಕಾರ್ಪೋರೇಟ್‌ ಮಹಿಳೆಯರಿಂದ ಹಿಡಿದು ಸಿನಿಮಾ ತಾರೆಯರ, ಮಾಡೆಲ್‌ಗಳ ತನಕ ಅವರ ವ್ಯಕ್ತಿತ್ವದ ಒಂದು ವಿಶೇಷತೆಯೆಂದರೆ, ವ್ಯಕ್ತಿತ್ವದ ಬಗ್ಗೆ ಕೂಲಂಕಷ ಗಮನ ಕೊಡದೇ ಇದ್ದರೆ ಅದು ಅವರಿಗೆ ತೊಂದರೆಯಾಗಿ ಪರಿಣಮಿಸಬಹುದು.

ಬೇರೆಯವರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುವ ಆ ಮಾಯದ ಕೋಲು ಯಾವುದು ಗೊತ್ತೇ, ಅದೇ ಗ್ರೂಮಿಂಗ್.

`ಗ್ರೂಮಿಂಗ್‌’ ಎನ್ನುವುದು ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಕೆಲಸ ಮಾಡುತ್ತದೆ. ಮಾತನಾಡುವುದು, ಕುಳಿತುಕೊಳ್ಳುವುದು, ಏಳುವುದು, ನಡೆಯುವುದರಿಂದ ಹಿಡಿದು ಊಟ ತಿಂಡಿಯ ವಿಧಿ ವಿಧಾನ, ವಿಶೇಷ ಬಗೆಯ ಬಾಡಿ ಲ್ಯಾಂಗ್ವೇಜ್‌ಗೆ `ಗ್ರೂಮಿಂಗ್‌’ ಎಂದು ಹೇಳಲಾಗುತ್ತದೆ. ಅದರ ಬಗ್ಗೆ ಈಚೆಗೆ ತರಬೇತಿ ಕೂಡ ನೀಡಲಾಗುತ್ತದೆ.

ಇದು ಪ್ರೆಸೆಂಟೇಶನ್‌ ಯುಗ. ಯಾವುದೇ ಒಂದು ವೃತ್ತಿಗೆ ಕೇವಲ ಅಕಾಡೆಮಿಕ್‌ ಶಿಕ್ಷಣ ಪಡೆಯುವುದಷ್ಟೇ ಮುಖ್ಯವಲ್ಲ. ಯಾವಾಗಲೂ ಪ್ರೆಸೆಂಟೆಬಲ್ ಆಗಿರುವುದು ಮುಖ್ಯ. ಅದರಲ್ಲಿ ಗ್ರೂಮಿಂಗ್‌ ಪ್ರಮುಖ ಪಾತ್ರ ವಹಿಸುತ್ತದೆ.

ಈ ಕುರಿತಂತೆ ಗ್ರೂಮಿಂಗ್‌ ತಜ್ಞರು ಏನು ಹೇಳುತ್ತಾರೆ ಕೇಳೋಣ ಬನ್ನಿ. ಸೌಂದರ್ಯ ಸ್ಪರ್ಧೆಗಾಗಿ ಕೊರಿಯಾ ಗ್ರಾಫರ್‌ ಆಗಿ ಕೆಲಸ ಮಾಡುವ ಸುಕನ್ಯಾ ಹೀಗೆ ಹೇಳುತ್ತಾರೆ, ಆಂಗ್ಲದಲ್ಲೊಂದು ಗಾದೆ ಮಾತಿದೆ, `ಫಸ್ಟ್ ಅಪಿಯರೆನ್ಸ್ ಈಸ್‌ ದಿ ಲಾಸ್ಟ್ ಅಪಿಯರೆನ್ಸ್’ ಅಂದರೆ ನಿಮ್ಮ ಮೊದಲ ಪ್ರಭಾವ ಅಂತಿಮ ಪ್ರಭವೇ ಆಗಿರುತ್ತದೆ.

ಈ ಪ್ರಭಾವ ಒಳ್ಳೆಯದಾಗಿರಲು ಗ್ರೂಮಿಂಗ್‌ ಅತ್ಯವಶ್ಯ. ಅದರ ಹೊರತಾಗಿ ಸಾಮರ್ಥ್ಯ ಎನ್ನುವುದು ಇದ್ದಲ್ಲೇ ಉಳಿದುಬಿಡುತ್ತದೆ. ಆಟ ಶುರುವಾಗುವ ಮುಂಚೆಯೇ ಮುಗಿದುಹೋಗಬಹುದು.

ವೃತ್ತಿಯ ಬಗ್ಗೆ ಬಿಟ್ಟುಬಿಡಿ. ಯಾವುದೇ ಪಾರ್ಟಿಗೆ ಹೋಗಲು ದುಬಾರಿ ಬಟ್ಟೆಗಳು, ಮ್ಯಾಚಿಂಗ್‌ ಚಪ್ಪಲಿಗಳು ಮತ್ತು ಆ್ಯಕ್ಸೆಸರೀಸ್ ಧರಿಸುವುದಷ್ಟೇ ಮುಖ್ಯವಲ್ಲ, ಬೇರೆ ಕೆಲವು ಸಂಗತಿಗಳು ಇವೆ. ಅವುಗಳ ಹೊರತಾಗಿ ವ್ಯಕ್ತಿತ್ವ ನೀರಸ ಎನಿಸುತ್ತದೆ.

ಮುಂಬೈ ಗೋವಾದಲ್ಲಿ ಮಾಡೆಲ್ ‌ಆಗಿ ಹೆಸರು ಮಾಡಿ ಈಗ ಬೆಂಗಳೂರಿನಲ್ಲಿ ಗ್ರೂಮಿಂಗ್‌ ಕನ್ಸಲ್ಟೆಂಟ್‌ ಆಗಿರುವ ಜೆಸ್ಸಿಕಾ ಅವರು ಹೀಗೆ ಹೇಳುತ್ತಾರೆ, ಇಂದು ಯಶಸ್ಸು ಗಳಿಸುವ ಮೊದಲ ಷರತ್ತು ಗ್ರೂಮಿಂಗ್‌ ಆಗಿದೆ. ಗ್ರೂಮಿಂಗ್‌ನಲ್ಲಿ 3 ಪ್ರಕಾರಗಳಿವೆ.

ಪ್ರೊಫೆಶನಲ್, ಮಾಡೆಲ್ ‌ಮತ್ತು ಸೋಶಿಯಲ್ ಗ್ರೂಮಿಂಗ್‌.ಯಾವುದೊ ಬಹುರಾಷ್ಟ್ರೀಯ ಕಂಪನಿಯೊಂದರಿಂದ ನಿಮಗೆ ಇಂಟರ್‌ ವ್ಯೂ ಕಾಲ್ ‌ಬಂದಿದೆ ಎಂದಿಟ್ಟುಕೊಳ್ಳಿ. ಆಗ ನೀವು ಹಿಂದೆ ಮುಂದೆ ಯೋಚಿಸದೆ, ಯೋಚನೆ ಮಾಡದೆ, ನಿಮಗೆ ಇಷ್ಟವಾಗುವ ಯಾವುದೊ ಸೀರೆ ಅಥವಾ ಗಾಢವರ್ಣದ ಸಲ್ವಾರ್‌ ಸೂಟ್‌ ಅಥವಾ ವೆಸ್ಟರ್ನ್‌ ಪೋಷಾಕು ಧರಿಸಿ ಇಂಟರ್‌ ವ್ಯೂಗೆ ಹಾಜರಾಗಿಬಿಟ್ಟರೆ ನಿಮ್ಮ ಪರಿಶ್ರಮ ಹೊಳೆಯಲ್ಲಿ ಹುಣಿಸೇ ಹಣ್ಣು ಕಿವುಚಿದಂತೆ ಆಗುತ್ತದೆ. ಆ ಡ್ರೆಸ್‌ ನಿಮ್ಮ ವ್ಯಕ್ತಿತ್ವವನ್ನು ಹಾಳುಗೆಡುಹಿಬಿಡಬಹುದು. ಸಾಧಾರಣ ರೀತಿಯಲ್ಲಿ ನೀವು ಮಾಡಿಕೊಂಡು ಹೋದ ಡ್ರೆಸ್‌ನ ಕಂಪನಿಯ ಎಗ್ಸಿಕ್ಯೂಟಿವ್‌ಗಳು ನಿಮ್ಮಿಂದ ದೂರ ಸರಿಯುವಂತೆ ಮಾಡಬಹುದು.

ಅದೇ ಒಂದು ಒಳ್ಳೆಯ ಗ್ರೂಮಿಂಗ್‌ ನಿಮ್ಮನ್ನು ಮೆಚ್ಚುಗೆಗೆ ಪಾತ್ರರನ್ನಾಗಿ ಮಾಡಬಹುದು. ಇದರ ಮುಖಾಂತರ ನೀವು ನಿಮ್ಮೆಲ್ಲರ ಲೋಪಗಳನ್ನು ಬದಿಗೊತ್ತಬಹುದು. ಒಟ್ಟಾರೆ ಹೇಳಬೇಕೆಂದರೆ, ಆಕರ್ಷಕ ವ್ಯಕ್ತಿತ್ವದಿಂದ ನೀವು ಅರ್ಧ ಯುದ್ಧವನ್ನು ಗೆಲ್ಲಬಹುದು. ಉಳಿದ ಹೋರಾಟಕ್ಕೆ ವೃತ್ತಿ ವಿಶೇಷ ಜ್ಞಾನ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ಸಾಕು.ಪ್ರೊಫೆಶನಲ್ ಗ್ರೂಮಿಂಗ್‌ ಈ ಕುರಿತಂತೆ ಬೆಂಗಳೂರಿನವರೇ ಆದ ಗ್ರೂಮಿಂಗ್‌ ಕನ್ಸಲ್ಟೆಂಟ್‌ ಶುಭಾ ಅವರು ಹೇಳುವುದೇನೆಂದರೆ, ಪ್ರೊಫೆಶನಲ್ ಗ್ರೂಮಿಂಗ್‌ನಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡೇಟಾ, ಇಂಟರ್‌ ವ್ಯೂಗಾಗಿ ಸಿದ್ಧತೆ ಹಾಗೂ ಧರಿಸುವ ಪೋಷಾಕು ಮುಖ್ಯವಾಗಿರುತ್ತದೆ.

ಜೆಸ್ಸಿಕಾ ಹೇಳುವಂತೆ, ಇಂಟರ್‌ ವ್ಯೂಗಾಗಿ ಸಿದ್ಧತೆ ನಡೆಸುವುದು ಸುಲಭದ ಕೆಲಸವಲ್ಲ. ಯಾವುದಾದರೊಂದು ವೃತ್ತಿಗಾಗಿ ನೂರಾರು ಅಭ್ಯರ್ಥಿಗಳು ಬರುತ್ತಾರೆ. ಅವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಆಯ್ಕೆಯಾಗುತ್ತಾರೆ. ಇಂಟರ್‌ ವ್ಯೂ ಮಾಡಲು ಕುಳಿತ ಕಂಪನಿಯ ಎಗ್ಸಿಕ್ಯೂಟಿವ್‌ಗಳನ್ನು  ಯಾರು ಇಂಪ್ರೆಸ್‌ ಮಾಡುತ್ತಾರೋ, ಅವರೇ ಆಯ್ಕೆಯಾಗುತ್ತಾರೆ. ಈ ಕಾರ್ಯಕ್ಕಾಗಿ ಅಭ್ಯರ್ಥಿ ಎಲ್ಲ ನಿಟ್ಟಿನಲ್ಲೂ ಪರ್ಫೆಕ್ಟ್ಟ ಆಗಿದ್ದರೆ ಮಾತ್ರ ಅವಕಾಶ ದೊರೆಯುತ್ತದೆ.

ಮೊದಲ ಮೆಟ್ಟಿಲು

ಪ್ರೊಫೆಶನಲ್ ಗ್ರೂಮಿಂಗ್‌ನ ಮೊದಲ ಮೆಟ್ಟಿಲು ನಿಮ್ಮ ಅರ್ಜಿ ಅಥವಾ ಬಯೋಡೇಟಾ. ನಿಮ್ಮ ಬಯೋಡೇಟಾದಲ್ಲಿ ಯಾವುದೇ ರೀತಿಯ ತಪ್ಪುಗಳಿರಬಾರದು. ಅದರ ಫಾರ್ಮ್ಯಾಟ್‌, ಭಾಷೆ ಅಥವಾ ವ್ಯಾಕರಣಕ್ಕೆ ಸಂಬಂಧಪಟ್ಟ ತಪ್ಪು ಅಥವಾ ಬಯೋಡೇಟಾ ಕಳಿಸುವ ಪದ್ಧತಿಯಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಿ. ಯಾವುದೇ ಕಂಪನಿಗೆ ಅರ್ಜಿ ಕಳಿಸಬೇಕು ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಬಯೋಡೇಟಾ ರೂಪದಲ್ಲಿ ಅಥವಾ ಸಿವಿ ಇಲ್ಲಿ ಪ್ರೊಫೈಲ್ ‌ರೂಪದಲ್ಲಿ. ನೀವು ನಿಮ್ಮ ಅವಶ್ಯಕತೆಗನುಸಾರ ಯಾವುದಾದರೂ ಫಾರ್ಮ್ಯಾಟ್‌ನ್ನು ಆಯ್ದುಕೊಳ್ಳಬೇಕು.

ಹೀಗಾಗಿ ಈ 3 ಫಾರ್ಮ್ಯಾಟ್‌ಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ. ಅತ್ಯಂತ ಕಡಿಮೆ ಸಂಖ್ಯೆಯ ಜನರಿಗೆ ಮಾತ್ರ ಇವು ಮೂರು ಬೇರೆ ಬೇರೆಯೆಂದು ಗೊತ್ತಿದೆ. ಅಗತ್ಯಕ್ಕನುಗುಣವಾಗಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಈ ಮೂರರ ಬಗ್ಗೆ ಸೂಕ್ಷ್ಮವಾಗಿ ಚರ್ಚೆ ಮಾಡುತ್ತಾ ಸಂಧ್ಯಾ ಅವರು ಹೀಗೆ ಹೇಳುತ್ತಾರೆ, ಯಾರಾದರೂ ಫ್ರೆಶರ್ಸ್ ಅಂದರೆ ಏನೇನೂ ಅನುಭವವಿಲ್ಲದ ಮೊದಲ ಬಾರಿಗೆ ಅಪ್ಲಿಕೇಷನ್‌ ಹಾಕುವರು. ಬಯೋಡೇಟಾ ಅಂದರೆ ಸಂಕ್ಷಿಪ್ತ ಪರಿಚಯವಾದ ವಿವರ ಕೊಡಬೇಕು. ಇದು `ಟು ದಿ ಪಾಯಿಂಟ್‌’ ಆಗಿರಬೇಕು. ಸಿವಿ ಅಂದರೆ ಕರಿ ಕುಲಮ್ ವೀಟೆ 2-3 ವರ್ಷಗಳ ಅನುಭವ ಇರುವವರು ಇದನ್ನು ಕಳಿಸಬೇಕು. ಸಿ.ವಿ.ಯಲ್ಲಿ ಕೆಲಸಕ್ಕೆ ಸಂಬಂಧಪಟ್ಟ ಸಮಗ್ರ ವಿವರಗಳೂ ಇರಬೇಕು. ಪ್ರೊಫೈಲ್‌‌ನಲ್ಲಿ ಸಿ.ವಿ. ರೀತಿಯಲ್ಲಿಯೇ ಎಲ್ಲ ಸಂಗತಿಗಳನ್ನು ವಿಸ್ತಾರವಾಗಿ ನಮೂದಿಸಲಾಗಿರುತ್ತದೆ. ಈ ಎಲ್ಲ ಸೂಕ್ಷ್ಮ ಸಂಗತಿಗಳು ಪ್ರೊಫೆಶನಲ್ ಗ್ರೂಮಿಂಗ್‌ನಲ್ಲಿ ಕಂಡುಬರುತ್ತವೆ.

ಡ್ರೆಸ್‌ ಅಪ್‌ ಆಗುವುದು

anagha_021

ಜೆಸ್ಸಿಕಾ ಅವರು ಇಂಟರ್‌ ವ್ಯೂಗೆ ವಿಶೇಷ ರೀತಿಯಲ್ಲಿ ಡ್ರೆಸ್‌ ಅಪ್‌ ಮಾಡಿಕೊಳ್ಳುವುದು ಅತ್ಯವಶ್ಯ ಎಂದು ಹೇಳುತ್ತಾರೆ. ಏಕೆಂದರೆ ಬಾಯಿ ತೆರೆಯುವ ಮುಂಚೆ ಪೋಷಾಕಿನಲ್ಲಿಯೇ ನಿಮ್ಮ ಸಮಗ್ರ ವ್ಯಕ್ತಿತ್ವ ಗೋಚರಿಸುವಂತಾಗಬೇಕು. ಯುವತಿ ಇಲ್ಲವೇ ಯುವಕ ಇಬ್ಬರಿಗೂ ಒಂದು ಸಂಗತಿ ಅನ್ವಯಿಸುತ್ತದೆ. ನೀವು ಧರಿಸುವ ಪೋಷಾಕು ಅತ್ಯಂತ ಪ್ರಖರ ವರ್ಣದ್ದಾಗಿರಬಾರದು. ತಿಳಿವರ್ಣದ್ದಾಗಿರಬೇಕು. ಸಿಂಪಲ್ ಆಗಿರಬೇಕು. ಫಾರ್ಮಲ್ ಟ್ರೌಷರ್‌ ಧರಿಸಬೇಕೆಂದಿದ್ದರೆ, ಅದರ ಜೊತೆಗೆ ಫಾರ್ಮಲ್ ಶರ್ಟ್ ಧರಿಸಬೇಕು. ಯುವತಿಯರಿಗೆ ಸೀರೆ ಅಥವಾ ಸಲ್ವಾರ್‌ ಕುರ್ತಾದ ಪರ್ಯಾಯವಿದೆ. ಆದರೆ ಒಂದು ಸಂಗತಿ ಗಮನದಲ್ಲಿರಲಿ, ಸೀರೆಯ ಜೊತೆಗೆ ಧರಿಸುವ ಬ್ಲೌಸ್‌ ಸ್ಟೈಲಿಶ್‌ ಅಥವಾ ಡಿಸೈನರ್‌ ಆಗಿರಬಾರದು.

ಸಿದ್ಧತೆ ಮತ್ತು ಬಾಡಿ ಲ್ಯಾಂಗ್ವೇಜ್

ಸಂದರ್ಶನಕ್ಕಾಗಿ ಪರಿಪೂರ್ಣ ಆತ್ಮವಿಶ್ವಾಸದೊಂದಿಗೆ ಕೋಣೆಯನ್ನು ಪ್ರವೇಶಿಸಬೇಕು. ಇಂಟರ್‌ ವ್ಯೂ ನಡೆಯುತ್ತಿರುವ ಕೋಣೆಗೆ ಗಾಬರಿಯ ಮುಖದಿಂದ ಹೋಗಬಾರದು. ಆತ್ಮವಿಶ್ವಾಸದಿಂದ ಸ್ಮಾರ್ಟ್‌ನೆಸ್‌ ಜೊತೆಗೇ ಕೋಣೆಯ ಬಾಗಿಲನ್ನು ತೆರೆದು ಒಳ ಪ್ರವೇಶಿಸಬೇಕು. ಒಳಗೆ ಕಾಲಿಡುತ್ತಿದ್ದಂತೆಯೇ ಅಲ್ಲಿ ಕುಳಿತ ಎಲ್ಲ ಎಕ್ಸಿಕ್ಯೂಟಿವ್‌ಗಳಿಗೆ ವಿಷ್‌ ಮಾಡಿ. ಕುಳಿತಾಗ ಬೆನ್ನು ನೇರವಾಗಿರಬೇಕು. ಸಾಮಾನ್ಯವಾಗಿ ಹುಡುಗಿಯರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾರೆ. ಎರಡೂ ಕಾಲುಗಳನ್ನು ಸರಿಯಾಗಿ ಇಟ್ಟುಕೊಂಡು ಕುಳಿತುಕೊಳ್ಳಬೇಕು. ಪ್ರಶ್ನೆಗೆ ಉತ್ತರ ಕೊಡುವಾಗ ಕಣ್ಣಲ್ಲಿ ಕಣ್ಣಿಟ್ಟು ಅಂದರೆ ನೇರವಾಗಿ ದೃಷ್ಟಿ ಇಟ್ಟು ಉತ್ತರಿಸಬೇಕು. ಇದು ನಿಮ್ಮ ಆತ್ಮವಿಶ್ವಾಸವನ್ನು ಬಿಂಬಿಸುತ್ತದೆ.

ಈ ಸಂಗತಿಗಳ ಹೊರತಾಗಿ ಇಂಟರ್‌ ವ್ಯೂಗೆ ವಿಶೇಷ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಬೇಕು. ಒಂದು ಮಹತ್ವದ ಸಂಗತಿಯೆಂದರೆ, ಅಭ್ಯರ್ಥಿ ಯಾವ ಕಂಪನಿ ಅಥವಾ ಸಂಸ್ಥೆಯ ಇಂಟರ್‌ ವ್ಯೂಗೆ ಹೋಗುತ್ತಿದ್ದಾನೊ, ಅದರ ಬಗ್ಗೆ ತಿಳಿದುಕೊಂಡಿರಬೇಕು. ಅಂದರೆ ಅಪ್‌ ಡೇಟ್‌ ಆಗಿರುವುದು ಅತ್ಯವಶ್ಯ. ಇಂಟರ್‌ ವ್ಯೂನಲ್ಲಿ ವಿಷಯಕ್ಕೆ ಸಂಬಂಧಪಡದ ಯಾವುದೇ ಪ್ರಶ್ನೆ ಕೇಳಿದರೂ ಗಾಬರಿಗೊಳಗಾಗುವ ಅವಶ್ಯಕತೆಯಿಲ್ಲ. ನೀವು ಸ್ಪಷ್ಟ ಶಬ್ದಗಳಲ್ಲಿ `ನನಗೆ ಇದರ ಬಗ್ಗೆ ಮಾಹಿತಿ ಇಲ್ಲ,’ ಎಂದು ಹೇಳಿ.

ಪ್ರೆಸೆಂಟೇಶನ್‌ ಸ್ಕಿಲ್

IMG_2561-1

ಇತ್ತೀಚಿಗೆ ದೊಡ್ಡ ದೊಡ್ಡ ಕಂಪನಿಗಳು ಅಭ್ಯರ್ಥಿಗಳಲ್ಲಿ ಪ್ರೆಸೆಂಟೇಶನ್‌ ಸ್ಕಿಲ್‌‌ನ್ನೇ ಗಮನಿಸುತ್ತವೆ. ಏಕೆಂದರೆ ಕಂಪನಿಗಳಿಗೆ ಲಾಭ ಇದೇ ಸಂಗತಿಯನ್ನು ಅವಲಂಬಿಸಿರುತ್ತದೆ. ತಮ್ಮ ಕಂಪನಿಯನ್ನು ಕ್ಲೈಂಟ್‌ ಎದುರು ಸಮರ್ಥವಾಗಿ ಪ್ರೆಸೆಂಟ್‌ ಮಾಡುವುದೇ ಪ್ರೆಸೆಂಟೇಶನ್‌ ಸ್ಕಿಲ್ ‌ಎಂದು ಕರೆಯಿಸಿಕೊಳ್ಳುತ್ತದೆ. ಇದರಲ್ಲಿ ಯಾವುದೇ ಕ್ಲೈಂಟ್‌ಗಾಗಿ ಕಂಪನಿಯ ಪ್ರಾಜೆಕ್ಟ್ ಸಿದ್ಧಪಡಿಸಿ ಕೊಡುವುದರಿಂದ ಹಿಡಿದು ಅವರ ಮುಂದೆ ಕಂಪನಿಯನ್ನು ಪ್ರೆಸೆಂಟ್‌ ಮಾಡುವ ತನಕ ಸೇರಿರುತ್ತದೆ. ಪ್ರೆಸೆಂಟೇಶನ್‌ಗಿಂತ ಮುಂಚೆ ಕಂಪನಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವುದು ಅತ್ಯವಶ್ಯ.

ಮಾಡೆಲ್ ‌ಗ್ರೂಮಿಂಗ್‌

ಮಾಡೆಲ್ ‌ಗ್ರೂಮಿಂಗ್‌ ಬಗ್ಗೆ ಹೆಸರಾಂತ ಗ್ರೂಮಿಂಗ್‌ ಬ್ಯೂಟಿ ಎಕ್ಸ್ ಪರ್ಟ್‌ ಗೀತಾ ಅವರು ಹೇಳುವುದೇನೆಂದರೆ, ಮಾಡೆಲಿಂಗ್ ಹಲವು ರೀತಿಯದ್ದಾಗಿದೆ. ಟಿ.ವಿ. ಮಾಡೆಲಿಂಗ್‌, ಆ್ಯಡ್‌ ಮಾಡೆಲಿಂಗ್‌, ಕ್ಯಾಟ್‌ಲಾಗ್‌ ಮಾಡೆಲಿಂಗ್‌, ಪ್ರಿಂಟ್‌ ಮಾಡೆಲಿಂಗ್‌ ಮತ್ತು ಪ್ರಮೋಶನ್‌ ಮಾಡೆಲಿಂಗ್‌ ಮುಂತಾದ.ಮಾಡೆಲಿಂಗ್‌ಗಾಗಿ ಸಾಕಷ್ಟು ಎತ್ತರ ಇರಬೇಕಾದುದು ಅತ್ಯವಶ್ಯ ಎನ್ನುವುದು ತಪ್ಪುಕಲ್ಪನೆ. ರಾಂಪ್‌ ಮೇಲೆ ನಡೆಯಲು ಸಾಕಷ್ಟು ಎತ್ತರ ಇದ್ದರೇನೇ ಒಳ್ಳೆಯದು. ಆದರೆ ಮಾಡೆಲಿಂಗ್‌ ಎಂದರೆ ಕೇವಲ ರಾಂಪ್‌ ಮೇಲೆ ನಡೆಯುವುದಲ್ಲ. ಕಾಲುಗಳ ಕ್ರೀಮ್ ನ ಜಾಹೀರಾತು ಇದ್ದು, ಅದು ಮುದ್ರಣ ಮಾಧ್ಯಮದಲ್ಲಿ ಬರಲಿದ್ದರೆ ಕೇವಲ ಕಾಲು ಮತ್ತು ಮುಖದ ಮೇಲೆ ಮಾತ್ರ ಫೋಕಸ್‌ ಮಾಡಲಾಗಿರುತ್ತದೆ. ಇಲ್ಲಿ ಎತ್ತರದ ಪ್ರಶ್ನೆಯೇ ಉದ್ಭವಿಸದು. ಯಾವುದಾದರೂ ಸ್ಲಿಮಿಂಗ್‌ ಸೆಂಟರಿನ ಜಾಹೀರಾತು ಇದ್ದರೆ ಅದರಲ್ಲಿ ಬೊಜ್ಜು ಅಥವಾ ತೆಳ್ಳನೆಯ ಕಾಯದವರು ಕೂಡ ಮಾಡೆಲ್ ಆಗಬಹುದು.

ಚಂದ್ರಿಕಾ ಅವರ ಪ್ರಕಾರ, ಮಾಡೆಲ್ ‌ಗ್ರೂಮಿಂಗ್‌ನ ಒಂದು ಮುಖ್ಯ ಭಾಗವೆಂದರೆ ಕೊರಿಯಾಗ್ರಫಿ. ಅದು 2 ಪ್ರಕಾರದ್ದಾಗಿರುತ್ತದೆ. ಮಾಡ್‌ ಕೊರಿಯಾಗ್ರಫಿ, ಡ್ಯಾನ್ಸ್ಸ ಕೊರಿಯಾಗ್ರಫಿ ಮತ್ತು ಮಾಡೆಲ್ ಕೊರಿಯಾಗ್ರಫಿಯಲ್ಲಿ ರಾಂಪ್‌ ಮೇಲೆ ನಡೆಯುವಾಗ ಎಷ್ಟು ದೂರ ನಡೆಯಬೇಕು. ಎಲ್ಲಿ ಬಂದು ನಿಲ್ಲಬೇಕು ಮತ್ತು ಎಲ್ಲಿಂದ ಟರ್ನ್‌ ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿ ಕೊಡಲಾಗುತ್ತದೆ.

ಡ್ಯಾನ್ಸ್ ಕೊರಿಯಾಗ್ರಫಿಯಲ್ಲಿ ಡ್ಯಾನ್ಸ್ ಮೇಲೆ ಫೋಕಸ್‌ ಮಾಡಲಾಗುತ್ತದೆ. ಒಂದು ಹಂತದ ತನಕ ಆ್ಯಕ್ಟಿಂಗ್‌ ಕೂಡ ಮಾಡೆಲ್ ಗ್ರೂಮಿಂಗ್‌ನ ಭಾಗವೇ ಆಗಿದೆ. ಆ್ಯಕ್ಟಿಂಗ್‌ ಹೊರತಾಗಿ ಮಾಡಲಿಂಗ್‌ ಪೂರ್ತಿಗೊಳ್ಳುವುದಿಲ್ಲ. ಇದರ ಜೊತೆ ಜೊತೆಗೆ ಬಾಡಿ ಲ್ಯಾಂಗ್ವೇಜ್‌ ಕೂಡ ಗ್ರೂಮಿಂಗ್‌ ಮುಖ್ಯ ಭಾಗವಾಗಿದೆ. ಇದರಲ್ಲಿ ಮುಖ್ಯವಾಗಿ ಮುಖದ ಭಾವಭಂಗಿ, ವೈಯ್ಯಾರದ ನಡಿಗೆ ಹಾಗೂ ಪ್ರೇಕ್ಷಕರತ್ತ ನೋಡುವುದು ಮತ್ತು ರಾಂಪ್‌ನಲ್ಲಿ ನಡೆಯುತ್ತ ಮುಖದಲ್ಲಿ ಆತ್ಮವಿಶ್ವಾಸ ಮಿನುಗುವುದು. ಇವೆಲ್ಲ ಬಾಡಿ ಲ್ಯಾಂಗ್ವೇಜ್ ನಲ್ಲಿ ಸೇರಿವೆ. ಕ್ಯಾಮೆರಾ ಮುಂದೆ ಪೋಸ್‌ ಕೊಡುವಾಗ ಹಿಂಜರಿತ ನಿಮ್ಮ ವೃತ್ತಿಯಲ್ಲಿ ನಿಮಗೆ ಹಿನ್ನಡೆಯನ್ನುಂಟು ಮಾಡಬಹುದು.

ಮಾಡೆಲ್ ‌ಗ್ರೂಮಿಂಗ್‌ನಲ್ಲಿ ಕ್ಯಾಮೆರಾ ಫ್ರೀ ಮತ್ತು ಫ್ರೆಂಡ್ಲಿ ಆಗಿರುವುದರ ಪಾಠ ಹೇಳಿಕೊಡಲಾಗುತ್ತದೆ.

ಸೋಶಿಯಲ್ ಗ್ರೂಮಿಂಗ್

ಸೋಶಿಯಲ್ ಗ್ರೂಮಿಂಗ್‌ ಕುರಿತಂತೆ ಸ್ನೇಹಾ ಅವರು ಹೀಗೆ ಹೇಳುತ್ತಾರೆ, “ಸಮಾಜದಲ್ಲಿ ಪ್ರತಿಯೊಂದು ಬಗೆಯ ಜನರೊಂದಿಗೆ ಬೆರೆಯವುದು ಅತ್ಯವಶ್ಯ. ಇದು ಒಂದು ಸಾಮಾನ್ಯ ನಿಯಮ. ಉದ್ಯೋಗ ಮತ್ತು ಮಾಡೆಲಿಂಗ್‌ ವೃತ್ತಿಯಲ್ಲಿನ ಸವಾಲು ಎಂದರೆ, ಇಲ್ಲಿ ನಿಮ್ಮ ವೈಯಕ್ತಿಕ ಆಸಕ್ತಿ ಅನಾಸಕ್ತಿಗಳು ಗೌಣವಾಗಿಬಿಡುತ್ತವೆ. ಪ್ರತಿದಿನ ನಾವು ಹೊಸ ಹೊಸ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರುತ್ತದೆ. ವಿಭಿನ್ನ ಬಗೆಯ ಅನುಭವಗಳಾಗುತ್ತವೆ. ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ನಮಗೆ ಹಲವರು ಇಷ್ಟವಾದರೆ, ಇನ್ನು ಕೆಲವರಿಂದ ಕಹಿ ಅನುಭವಗಳಾಗುತ್ತವೆ.

ಆದರೆ ನಮ್ಮ ಮನಸ್ಸಿನಿಂದ ಇಂತಹ ಭಾವನೆಗಳನ್ನು ಹೊರಹೊಮ್ಮಿಸಬಾರದು.

ಯಾವುದೇ ಒಂದು ವೃತ್ತಿಯಲ್ಲಿ ವ್ಯಕ್ತಿತ್ವ ಎನ್ನುವುದು ಮುಖ್ಯವಾಗಿರುತ್ತದೆ. ಆದರೆ ವ್ಯಕ್ತಿತ್ವದ ಅರ್ಥ ಗಂಭೀರತೆಯಲ್ಲ. ಯಾವಾಗಲೂ ಹಸನ್ಮುಖಿಯಾಗಿರಬೇಕು. ಆತ್ಮವಿಶ್ವಾಸದಿಂದ ಕೂಡಿರಬೇಕು. ಮುಖದಲ್ಲಿ ಸೌಮ್ಯ ಮುಗುಳ್ನಗೆ ಮಿನುಗುತ್ತಿರಲಿ.”

ಟೇಬಲ್ ಮ್ಯಾನರ್ಸ್

ಜೆಸ್ಸಿಕಾ ಅವರ ಪ್ರಕಾರ, ಯಾವುದೇ ಒಂದು ವೃತ್ತಿಯಲ್ಲಿ ಟೇಬಲ್ ಮ್ಯಾನರ್ಸ್‌ ಬಹುಮುಖ್ಯ ಪಾತ್ರ ವಹಿಸುತ್ತದೆ. ಟೇಬಲ್ ಮೇಲೆ ಕುಳಿತುಕೊಳ್ಳುವ ಪ್ರಮುಖ ನಿಯವೆಂದರೆ, ಟೇಬಲ್ ಮೇಲೆ ಮೊಣಕೈ ಊರಿ ಕುಳಿತುಕೊಳ್ಳಬಾರದು.

ಡೈನಿಂಗ್‌ ಟೇಬಲ್ ಮೇಲೆ ನ್ಯಾಪ್‌ಕಿನ್‌ನ್ನು ಸೂಕ್ತ ರೀತಿಯಲ್ಲಿ ತೆರೆಯಬೇಕು. ಅದನ್ನು ನಿಮ್ಮ ಕಾಲಿನ ಮೇಲೆ ಚೆನ್ನಾಗಿ ಹರಡಿಕೊಳ್ಳಬೇಕು. ಊಟ ಮಾಡುವಾಗ ನಡುವೆಯೇ ಬಾಯಿ ಒರೆಸಿಕೊಳ್ಳುವುದು ಅನಿವಾರ್ಯವಾದರೆ ನ್ಯಾಪ್‌ಕಿನ್‌ ಬದಲು ಟಿಶ್ಶೂ ಪೇಪರ್‌ ಉಪಯೋಗಿಸಿ. ಸೂಪ್‌ ಕುಡಿಯಲು ಕೂಡ ಒಂದು ಪದ್ಧತಿ ಇರುತ್ತದೆ. ಸೂಪ್‌ನ ಬೌಲ್‌ನ್ನು ಬಾಯಿಯ ತನಕ ತಂದು ಕುಡಿಯಬಾರದು. ಚಮಚಗಳಿಂದ ಇನ್ನೊಬ್ಬರಿಗೆ ಶಬ್ದ ಕೇಳಿಸುವಷ್ಟರ ಮಟ್ಟಿಗೆ ಸದ್ದು ಮಾಡಬಾರದು. ಗ್ರೂಮಿಂಗ್‌ನ ಸಂದರ್ಭದಲ್ಲಿ ಟೇಬಲ್‌ಗೆ ಸಂಬಂಧಪಟ್ಟಂತೆ ಶಿಷ್ಟಾಚಾರಗಳನ್ನು ಕಲಿಸಿಕೊಡಲಾಗುತ್ತದೆ.

ಆತಿಥ್ಯ ನೀಡುವ ಪದ್ಧತಿ ಕೂಡ ಗ್ರೂಮಿಂಗ್‌ನ ಒಂದು ಮಹತ್ವದ ಭಾಗವಾಗಿದೆ. ಕ್ಲಬ್‌ ಅಥವಾ ಮನೆಯಲ್ಲಿ ಊಟದ ಪಾರ್ಟಿ, ಡಿನ್ನರ್‌ ಅಥವಾ ಗೆಟ್‌ ಟು ಗೆದರ್‌. ಅದಕ್ಕಾಗಿ ಆತಿಥ್ಯದ ಕೆಲವು ಶಿಷ್ಟಾಚಾರಗಳಿವೆ. ಅವನ್ನು ಅನುಸರಿಸುವುದು ಅತ್ಯವಶ್ಯಕ. ಮನೆಯಲ್ಲಿ ಗೆಟ್‌ ಟು ಗೆದರ್‌ ಇದ್ದರೆ ಅತಿಥಿಗಳನ್ನು ಪರಸ್ಪರ ಪರಿಚಯ ಮಾಡಿಕೊಡಬೇಕು. ಅತಿಥಿಗಳು ಮನೆಯಿಂದ ಹೊರಗೆ ಹೋಗುವಾಗ `ನಮ್ಮ ಆಮಂತ್ರಣಕ್ಕೆ ಮನ್ನಣೆ ಕೊಟ್ಟು ಬಂದಿದ್ದಕ್ಕೆ ಧನ್ಯವಾದ’ ಎಂದು ಹೇಳಲು ಮರೆಯಬಾರದು.

– ಸಾಧನಾ ಶರ್ಮ

ಮೀಟಿಂಗ್‌ಗೆ ಹೋಗಬೇಕೆಂದಿದ್ದರೆ

GettyImages_sb10062621ii-011

ಯಾವುದಾದರೂ ಮೀಟಿಂಗ್‌ಗೆ ಹೋಗುವ ಕುರಿತಂತೆ ಜೆಸ್ಸಿಕಾ ಅವರು ಹೀಗೆ ಹೇಳುತ್ತಾರೆ, “ಕ್ಲೈಂಟ್‌ ಜೊತೆಗೆ ಮೀಟಿಂಗ್‌ನಲ್ಲಿ ಡ್ರೆಸ್‌ ಕೋಡ್‌ ನಿಯಮ ಪಾಲಿಸುವುದು ಅತ್ಯವಶ್ಯ. ಫಾರ್ಮಲ್ ಡ್ರೆಸ್‌ಗಳ ಜೊತೆಗೆ ಶರ್ಟ್‌ಪೇಸ್ಟ್‌ ಕಲರಿನದ್ದಾಗಿರಲಿ ಮತ್ತು ಟೈ ಸರಳ ಗಾಂಭೀರ್ಯತೆ ಪ್ರದರ್ಶಿಸುವಂತಿರಲಿ. ಟ್ರೌಷರ್‌ ಬಗ್ಗೆ ಹೇಳಬೇಕೆಂದರೆ, ಬ್ಲ್ಯಾಕ್‌ ಕಲರ್‌ನಿಂದ ಹಿಡಿದು ನೇವಿ ಬ್ಲ್ಯೂತನಕ ಯಾವುದು ಬೇಕಾದರೂ ಆಗಬಹುದು. ಜ್ಯೂವೆಲರಿಗಳಲ್ಲಿ ಕಿವಿಯಲ್ಲಿ ಪುಟ್ಟ ಟಾಪ್ಸ್ ಮತ್ತು ಕೊರಳಿನಲ್ಲಿ ಚೇನ್‌ ಮತ್ತು ಪೆಂಡೆಂಟ್ ಬಳಸಬಹುದು. ಮುತ್ತಿನ ಹಗುರವಾದ ಸೆಟ್‌ ಧರಿಸಬಹುದು.

ಕೂದಲನ್ನು ಚೆನ್ನಾಗಿ ಸೆಟ್‌ ಮಾಡಿಕೊಂಡಿರಬೇಕು. ಅವು ಶುಷ್ಕ ಮತ್ತು ಕೆದರಿಕೊಂಡಂತೆ ಇರಬಾರದು. ಮೀಟಿಂಗ್‌ಗಾಗಿ ಕೋಣೆಯೊಳಗಡೆ ಕಾಲಿಡುತ್ತಿದ್ದಂತೆಯೇ ಕೈ ಮಿಲಾಯಿಸಿ ನಿಮ್ಮ ಪರಿಚಯ ಕೊಡಬೇಕು. ಆ ಬಳಿಕವೇ ವಿಷಯಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸಬೇಕು.

ಯಾವುದೇ ವೃತ್ತಿಯಲ್ಲಿ ವ್ಯಕ್ತಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ವ್ಯಕ್ತಿತ್ವದ ಅರ್ಥ ಗಂಭೀರತೆಯಿಂದ ಇರುವುದಲ್ಲ. ಸದಾ ಹಸನ್ಮುಖಿಯಾಗಿರಬೇಕು, ಆತ್ಮವಿಶ್ವಾಸದಿಂದ ಕೂಡಿರಬೇಕು.

ಪೋಷಾಕಿನ ರೀತಿನೀತಿ

ಸೋಶಿಯಲ್ ಗ್ರೂಮಿಂಗ್‌ನ ಒಂದು ಪ್ರಮುಖ ಭಾಗವೆಂದರೆ ಪೋಷಾಕು. ಸುಚಿತ್ರಾ ಈ ಕುರಿತು ಹೇಳುವುದೇನೆಂದರೆ, ಸಮಯ ಹಾಗೂ ಸ್ಥಳ ನೋಡಿ ಪೋಷಾಕಿನ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಸೀರೆ ಧರಿಸಬೇಕೆಂದಿದ್ದರೆ, ಸೀರೆಯ ಸೆರಗಿಗೆ ಪಿನ್ ಹಾಕುದನ್ನು ಮರೆಯಬಾರದು. ಬ್ಲೌಸ್‌ ಜೊತೆಗೆ ಬ್ರಾದ ಫಿಟಿಂಗ್‌ನ ಬಗೆಗೂ ಕೂಡ ಗಮನವಿರಲಿ. ಪ್ರತಿಯೊಂದೂ ಪೋಷಾಕಿಗೆ ತಕ್ಕಂತೆ ಬ್ರಾ ಧರಿಸಿ. ಹೆಚ್ಚು ಎತ್ತರವಾಗಿರುವವರು ವರ್ಟಿಕಲ್ ಸ್ಟ್ರೈಪ್ಸ್ ಧರಿಸುವುದು ಜಾಣತನದ ಲಕ್ಷಣವಲ್ಲ. ಪೋಷಾಕು ಧರಿಸುವ ಈ ನಿಯಮ ಶರ್ಟ್‌, ಸೀರೆ, ಸಲ್ವಾರ್‌ ಹೀಗೆ ಎಲ್ಲದಕ್ಕೂ ಅನ್ವಯಿಸುತ್ತದೆ. ಎತ್ತರದ ಕಾಯದವರಿಗೆ ಗಾಢ ವರ್ಣ ಹೆಚ್ಚು ಒಪ್ಪುತ್ತದೆ. ಕಡಿಮೆ ಎತ್ತರ ಇರುವವರಿಗೆ ಲೈಟ್‌ ಕಲರ್‌ ಬಟ್ಟೆಗಳು ಒಪ್ಪುತ್ತವೆ. ಸ್ಥೂಲ ಕಾಯದವರಿಗೆ ದೊಡ್ಡ ಫ್ಲೋರ್‌ ಪ್ರಿಂಟ್ ಪೋಷಾಕು ಧರಿಸಿದರೆ ಅವರು ಬೊಜ್ಜು ಕಾಯವನ್ನು ಮತ್ತಷ್ಟು ಎದ್ದು ಕಾಣುವಂತೆ ಮಾಡುತ್ತದೆ. ಚಿಕ್ಕ ಫ್ಲೋರ್‌ಪ್ರಿಂಟ್‌ ಅವರಿಗೆ ಒಪ್ಪುತ್ತದೆ. ಗೌರವರ್ಣದವರು ಕಪ್ಪು ಬಣ್ಣದ ಬಟ್ಟೆಗಳಿಂದ ದೂರವಿರಬೇಕು. ಗೋದಿವರ್ಣದವರು ಗಾಢ ಹಳದಿ ಅಥವಾ ಪ್ಲೇವರ್ ಹಸಿರು ವರ್ಣದ ಬಟ್ಟೆಗಳನ್ನು ಧರಿಸಬಾರದು.

ಒಟ್ಟಾರೆ ಹೇಳಬೇಕೆಂದರೆ, ನಿಮ್ಮ ಎತ್ತರಕ್ಕೆ ಹೊಂದುವಂತಹ ಪೋಷಾಕುಗಳನ್ನು ಧರಿಸುವ ದೃಷ್ಟಿಕೋನ ಸೋಶಿಯಲ್ ಗ್ರೂಮಿಂಗ್‌ನ ಪ್ರಮುಖ ಭಾಗಗಳಾಗಿವೆ.

ಮೊಬೈಲ್ ‌ಮತ್ತು ಶಿಷ್ಟಾಚಾರ

ಮೊಬೈಲ್ ಶಿಷ್ಟಾಚಾರ ಕೂಡ ಸೋಶಿಯಲ್ ಗ್ರೂಮಿಂಗ್‌ನ ಒಂದು ಪ್ರಮುಖ ಭಾಗವಾಗಿದೆ. ನಿಮ್ಮ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಬಿಂಬಿಸಲು ಮೊಬೈಲ್ ಫೋನ್‌ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಯಾವುದೇ ಸಮೂಹದಲ್ಲಿ ಇದ್ದುಕೊಂಡು ಅಥವಾ ಮನೆಯ ಸದಸ್ಯರನ್ನು ನಿರ್ಲಕ್ಷಿಸಿ ಫೋನ್‌ ಮಾತುಕತೆಯಲ್ಲಿಯೇ ಮಗ್ನವಾಗಿರುವುದು ಶಿಷ್ಟಾಚಾರದ ಲಕ್ಷಣವಲ್ಲ.

ಪಾರ್ಟಿ ಮತ್ತು ಮೀಟಿಂಗ್‌ ಸಂದರ್ಭದಲ್ಲಿ ಫೋನ್‌ನ್ನು ಸ್ವಿಚ್‌ ಆಫ್‌ ಮಾಡಿ ಇಲ್ಲವೇ ಸೈಲೆಂಟ್‌ ಮೋಡ್‌ನಲ್ಲಿ ಇಡಿ. ಅತ್ಯಂತ ಅಗತ್ಯ ಇರುವ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿರುವ ಜನರ ಕ್ಷಮೆ ಯಾಚಿಸಿ ಸ್ವಲ್ಪ ದೂರ ಹೋಗಿ ಸಂಕ್ಷಿಪ್ತವಾಗಿ ಮಾತು ಮುಗಿಸಿ ನಿಧಾನವಾಗಿ ಬಂದು ಸ್ವಸ್ಥಾನದಲ್ಲಿ ಕುಳಿತುಕೊಳ್ಳಬೇಕು. ವೃತ್ತಿಪರರೊಂದಿಗೆ ಮಾತನಾಡುವಾಗ ಅಥವಾ ಅವರ ಫೋನ್‌ನ್ನು ರಿಸೀವ್‌ ಮಾಡುವ ಸಂದರ್ಭದಲ್ಲಿ ವಿಷ್‌ ಹೇಳಿ. ಅದೇ ರೀತಿ ಫೋನ್‌ ಇಡುವ ಸಂದರ್ಭದಲ್ಲಿ `ಬೈ’ ಅಥವಾ `ಗುಡ್‌ ನೈಟ್‌’ ಹೇಳಲು ಮರೆಯಬೇಡಿ.

ಬಿಸ್‌ನೆಸ್‌ ವುಮೆನ್‌ ಅಥವಾ ವೃತ್ತಿಪರರೊಂದಿಗೆ ಮಾತನಾಡುವಾಗ ಅವರನ್ನು ಹೇಗೆ ಸಂಭೋದಿಸುತ್ತೀರಿ ಎನ್ನುವುದು ಕೂಡ ಮುಖ್ಯ. ಅವರ ಹೆಸರಿನೊಂದಿಗೆ ಕೇವಲ ಮಿಸ್ಟರ್‌/ಮಿಸ್‌ ಎಂದು ಹೇಳುವ ಬದಲು ಸರ್‌ ನೇಮ್ ಅಥವಾ ಹುದ್ದೆ ಸೇರಿಸುವುದು ಬಿಸ್‌ನೆಸ್‌ ಎಟಿಕೇಟ್ಸ್ ನಲ್ಲಿ ಬರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ