ಬಹುರಾಷ್ಟ್ರೀಯ ಕಂಪನಿಗಳ ಕಾರ್ಪೋರೇಟ್‌ ಮಹಿಳೆಯರಿಂದ ಹಿಡಿದು ಸಿನಿಮಾ ತಾರೆಯರ, ಮಾಡೆಲ್‌ಗಳ ತನಕ ಅವರ ವ್ಯಕ್ತಿತ್ವದ ಒಂದು ವಿಶೇಷತೆಯೆಂದರೆ, ವ್ಯಕ್ತಿತ್ವದ ಬಗ್ಗೆ ಕೂಲಂಕಷ ಗಮನ ಕೊಡದೇ ಇದ್ದರೆ ಅದು ಅವರಿಗೆ ತೊಂದರೆಯಾಗಿ ಪರಿಣಮಿಸಬಹುದು.

ಬೇರೆಯವರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುವ ಆ ಮಾಯದ ಕೋಲು ಯಾವುದು ಗೊತ್ತೇ, ಅದೇ ಗ್ರೂಮಿಂಗ್.

`ಗ್ರೂಮಿಂಗ್‌' ಎನ್ನುವುದು ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಕೆಲಸ ಮಾಡುತ್ತದೆ. ಮಾತನಾಡುವುದು, ಕುಳಿತುಕೊಳ್ಳುವುದು, ಏಳುವುದು, ನಡೆಯುವುದರಿಂದ ಹಿಡಿದು ಊಟ ತಿಂಡಿಯ ವಿಧಿ ವಿಧಾನ, ವಿಶೇಷ ಬಗೆಯ ಬಾಡಿ ಲ್ಯಾಂಗ್ವೇಜ್‌ಗೆ `ಗ್ರೂಮಿಂಗ್‌' ಎಂದು ಹೇಳಲಾಗುತ್ತದೆ. ಅದರ ಬಗ್ಗೆ ಈಚೆಗೆ ತರಬೇತಿ ಕೂಡ ನೀಡಲಾಗುತ್ತದೆ.

ಇದು ಪ್ರೆಸೆಂಟೇಶನ್‌ ಯುಗ. ಯಾವುದೇ ಒಂದು ವೃತ್ತಿಗೆ ಕೇವಲ ಅಕಾಡೆಮಿಕ್‌ ಶಿಕ್ಷಣ ಪಡೆಯುವುದಷ್ಟೇ ಮುಖ್ಯವಲ್ಲ. ಯಾವಾಗಲೂ ಪ್ರೆಸೆಂಟೆಬಲ್ ಆಗಿರುವುದು ಮುಖ್ಯ. ಅದರಲ್ಲಿ ಗ್ರೂಮಿಂಗ್‌ ಪ್ರಮುಖ ಪಾತ್ರ ವಹಿಸುತ್ತದೆ.

ಈ ಕುರಿತಂತೆ ಗ್ರೂಮಿಂಗ್‌ ತಜ್ಞರು ಏನು ಹೇಳುತ್ತಾರೆ ಕೇಳೋಣ ಬನ್ನಿ. ಸೌಂದರ್ಯ ಸ್ಪರ್ಧೆಗಾಗಿ ಕೊರಿಯಾ ಗ್ರಾಫರ್‌ ಆಗಿ ಕೆಲಸ ಮಾಡುವ ಸುಕನ್ಯಾ ಹೀಗೆ ಹೇಳುತ್ತಾರೆ, ಆಂಗ್ಲದಲ್ಲೊಂದು ಗಾದೆ ಮಾತಿದೆ, `ಫಸ್ಟ್ ಅಪಿಯರೆನ್ಸ್ ಈಸ್‌ ದಿ ಲಾಸ್ಟ್ ಅಪಿಯರೆನ್ಸ್' ಅಂದರೆ ನಿಮ್ಮ ಮೊದಲ ಪ್ರಭಾವ ಅಂತಿಮ ಪ್ರಭವೇ ಆಗಿರುತ್ತದೆ.

ಈ ಪ್ರಭಾವ ಒಳ್ಳೆಯದಾಗಿರಲು ಗ್ರೂಮಿಂಗ್‌ ಅತ್ಯವಶ್ಯ. ಅದರ ಹೊರತಾಗಿ ಸಾಮರ್ಥ್ಯ ಎನ್ನುವುದು ಇದ್ದಲ್ಲೇ ಉಳಿದುಬಿಡುತ್ತದೆ. ಆಟ ಶುರುವಾಗುವ ಮುಂಚೆಯೇ ಮುಗಿದುಹೋಗಬಹುದು.

ವೃತ್ತಿಯ ಬಗ್ಗೆ ಬಿಟ್ಟುಬಿಡಿ. ಯಾವುದೇ ಪಾರ್ಟಿಗೆ ಹೋಗಲು ದುಬಾರಿ ಬಟ್ಟೆಗಳು, ಮ್ಯಾಚಿಂಗ್‌ ಚಪ್ಪಲಿಗಳು ಮತ್ತು ಆ್ಯಕ್ಸೆಸರೀಸ್ ಧರಿಸುವುದಷ್ಟೇ ಮುಖ್ಯವಲ್ಲ, ಬೇರೆ ಕೆಲವು ಸಂಗತಿಗಳು ಇವೆ. ಅವುಗಳ ಹೊರತಾಗಿ ವ್ಯಕ್ತಿತ್ವ ನೀರಸ ಎನಿಸುತ್ತದೆ.

ಮುಂಬೈ ಗೋವಾದಲ್ಲಿ ಮಾಡೆಲ್ ‌ಆಗಿ ಹೆಸರು ಮಾಡಿ ಈಗ ಬೆಂಗಳೂರಿನಲ್ಲಿ ಗ್ರೂಮಿಂಗ್‌ ಕನ್ಸಲ್ಟೆಂಟ್‌ ಆಗಿರುವ ಜೆಸ್ಸಿಕಾ ಅವರು ಹೀಗೆ ಹೇಳುತ್ತಾರೆ, ಇಂದು ಯಶಸ್ಸು ಗಳಿಸುವ ಮೊದಲ ಷರತ್ತು ಗ್ರೂಮಿಂಗ್‌ ಆಗಿದೆ. ಗ್ರೂಮಿಂಗ್‌ನಲ್ಲಿ 3 ಪ್ರಕಾರಗಳಿವೆ.

ಪ್ರೊಫೆಶನಲ್, ಮಾಡೆಲ್ ‌ಮತ್ತು ಸೋಶಿಯಲ್ ಗ್ರೂಮಿಂಗ್‌.ಯಾವುದೊ ಬಹುರಾಷ್ಟ್ರೀಯ ಕಂಪನಿಯೊಂದರಿಂದ ನಿಮಗೆ ಇಂಟರ್‌ ವ್ಯೂ ಕಾಲ್ ‌ಬಂದಿದೆ ಎಂದಿಟ್ಟುಕೊಳ್ಳಿ. ಆಗ ನೀವು ಹಿಂದೆ ಮುಂದೆ ಯೋಚಿಸದೆ, ಯೋಚನೆ ಮಾಡದೆ, ನಿಮಗೆ ಇಷ್ಟವಾಗುವ ಯಾವುದೊ ಸೀರೆ ಅಥವಾ ಗಾಢವರ್ಣದ ಸಲ್ವಾರ್‌ ಸೂಟ್‌ ಅಥವಾ ವೆಸ್ಟರ್ನ್‌ ಪೋಷಾಕು ಧರಿಸಿ ಇಂಟರ್‌ ವ್ಯೂಗೆ ಹಾಜರಾಗಿಬಿಟ್ಟರೆ ನಿಮ್ಮ ಪರಿಶ್ರಮ ಹೊಳೆಯಲ್ಲಿ ಹುಣಿಸೇ ಹಣ್ಣು ಕಿವುಚಿದಂತೆ ಆಗುತ್ತದೆ. ಆ ಡ್ರೆಸ್‌ ನಿಮ್ಮ ವ್ಯಕ್ತಿತ್ವವನ್ನು ಹಾಳುಗೆಡುಹಿಬಿಡಬಹುದು. ಸಾಧಾರಣ ರೀತಿಯಲ್ಲಿ ನೀವು ಮಾಡಿಕೊಂಡು ಹೋದ ಡ್ರೆಸ್‌ನ ಕಂಪನಿಯ ಎಗ್ಸಿಕ್ಯೂಟಿವ್‌ಗಳು ನಿಮ್ಮಿಂದ ದೂರ ಸರಿಯುವಂತೆ ಮಾಡಬಹುದು.

ಅದೇ ಒಂದು ಒಳ್ಳೆಯ ಗ್ರೂಮಿಂಗ್‌ ನಿಮ್ಮನ್ನು ಮೆಚ್ಚುಗೆಗೆ ಪಾತ್ರರನ್ನಾಗಿ ಮಾಡಬಹುದು. ಇದರ ಮುಖಾಂತರ ನೀವು ನಿಮ್ಮೆಲ್ಲರ ಲೋಪಗಳನ್ನು ಬದಿಗೊತ್ತಬಹುದು. ಒಟ್ಟಾರೆ ಹೇಳಬೇಕೆಂದರೆ, ಆಕರ್ಷಕ ವ್ಯಕ್ತಿತ್ವದಿಂದ ನೀವು ಅರ್ಧ ಯುದ್ಧವನ್ನು ಗೆಲ್ಲಬಹುದು. ಉಳಿದ ಹೋರಾಟಕ್ಕೆ ವೃತ್ತಿ ವಿಶೇಷ ಜ್ಞಾನ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ಸಾಕು.ಪ್ರೊಫೆಶನಲ್ ಗ್ರೂಮಿಂಗ್‌ ಈ ಕುರಿತಂತೆ ಬೆಂಗಳೂರಿನವರೇ ಆದ ಗ್ರೂಮಿಂಗ್‌ ಕನ್ಸಲ್ಟೆಂಟ್‌ ಶುಭಾ ಅವರು ಹೇಳುವುದೇನೆಂದರೆ, ಪ್ರೊಫೆಶನಲ್ ಗ್ರೂಮಿಂಗ್‌ನಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡೇಟಾ, ಇಂಟರ್‌ ವ್ಯೂಗಾಗಿ ಸಿದ್ಧತೆ ಹಾಗೂ ಧರಿಸುವ ಪೋಷಾಕು ಮುಖ್ಯವಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ