ಭಾರತೀಯ ಮಸಾಲೆಗಳು ಕೇವಲ ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ. ಆರೋಗ್ಯಕ್ಕೂ ಕೂಡ ಅವು ಉಪಯುಕ್ತವಾಗಿವೆ. ಆದರೆ ಇವುಗಳಿಂದ ಆಹಾರದ ಗುಣಮಟ್ಟ ಹೆಚ್ಚಾಗುತ್ತದೆ. ಇನ್ನೊಂದೆಡೆ, ಎಣ್ಣೆ ಮಸಾಲೆಗಳ ಆಹಾರ ಸಿದ್ಧಪಡಿಸುವ ಸಮಯದಲ್ಲಿ ಸಾಕಷ್ಟು ಹೊಗೆ ಕೂಡ ಉತ್ಪನ್ನವಾಗುತ್ತದೆ, ಅದು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತದೆ. ಮಹಿಳೆಯರ ಹೆಚ್ಚಿನ ಸಮಯ ಅಡುಗೆಮನೆಯಲ್ಲಿಯೇ ಕಳೆಯುತ್ತದೆ.

ಅಡುಗೆಮನೆಯಲ್ಲಿ ಉಂಟಾದ ಹೊಗೆಯನ್ನು ಸ್ವಲ್ಪ ಹೊತ್ತಿನಲ್ಲಿಯೇ ಹೊರ ಹಾಕಿ ಅಡುಗೆಮನೆಯನ್ನು ಮಾಲಿನ್ಯಮುಕ್ತಗೊಳಿಸುವ ಸಾಧನವೆಂದರೆ ಅದು ಚಿಮಣಿ.

ಭಾರತೀಯ ಅಡುಗೆಮನೆಗಳು ಮೊದಲು ಬಹಳ ದೊಡ್ಡದಾಗಿರುತ್ತಿದ್ದವು. ಜೊತೆಗೆ ಅವು ಮುಕ್ತ ವಾತಾವರಣದಲ್ಲಿ ಇರುತ್ತಿದ್ದವು. ಏಕೆಂದರೆ ಹೊಗೆ ಮನೆಯಲ್ಲಿ ಪಸರಿಸಬಾರದು ಎನ್ನುವುದು ಅವರ ಉದ್ದೇಶವಾಗಿರುತ್ತಿತ್ತು. ಆದರೆ ಜನಸಂಖ್ಯೆ ಹೆಚ್ಚುತ್ತಾ ಹೋದಂತೆ, ಒಂದೇ ಅಡುಗೆಮನೆ ಇರುತ್ತಿದ್ದ ಮನೆಯಲ್ಲಿ ಗಾಳಿ ಹಾಗೂ ಬೆಳಕಿನ ಕೊರತೆ ಉಂಟಾಗತೊಡಗಿತು. ಈ ಕಾರಣದಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಾಡತೊಡಗಿದವು. ಅದರಿಂದ ಪಾರಾಗಲು ಸೂಕ್ತ ವಾತಾಯನದ ವ್ಯವಸ್ಥೆಯ ಜೊತೆ, ಸೂಕ್ತ ರೀತಿಯಲ್ಲಿ ಎಲೆಕ್ಟ್ರಿಕ್‌ ಉಪಕರಣಗಳನ್ನು ಸ್ವಚ್ಛಗೊಳಿಸುವುದು ಕೂಡ ಅತ್ಯಗತ್ಯ

ಏಕೆಂದರೆ ಮನೆಯೊಳಗೆ ಮಾಲಿನ್ಯ ಪಸರಿಸಬಾರದು. ಅಡುಗೆಮನೆಯಲ್ಲಿ ಮಾಲಿನ್ಯಕ್ಕೆ ಕಾರಣ ಈಗ ಅಡುಗೆಮನೆಯಲ್ಲಿ ಗ್ಯಾಸ್ ಒಂದೇ ಸೀಮಿತವಾಗಿಲ್ಲ. ಹಳೆಯ ಅಡುಗೆಮನೆ ಈಗ ಮಾಡ್ಯುಲರ್‌ ಕಿಚನ್‌ನಲ್ಲಿ ಬದಲಾವಣೆಗೊಂಡಿದೆ. ಅಲ್ಲೀಗ ಟೋಸ್ಟರ್‌, ಮೈಕ್ರೋವೇವ್‌, ಓವನ್‌ನಂತಹ ಇತರೆ ಸಲಕರಣೆಗಳು ಇಡಲ್ಪಡುತ್ತವೆ. ಈ ಎಲೆಕ್ಟ್ರಾನಿಕ್‌ ಉಪಕರಣಗಳು ಸಮಯವನ್ನೇನೋ ಉಳಿಸುತ್ತವೆ. ಆದರೆ ಅವು ಹೊರಸೂಸುವ ಮಾಲಿನ್ಯ, ಬಾಹ್ಯ ಮಾಲಿನ್ಯಕ್ಕಿಂತ ಅಪಾಯಕಾರಿಯಾಗಿರುತ್ತದೆ. ಈ ಕುರಿತಂತೆ ಒಂದಿಷ್ಟು ತಿಳಿದುಕೊಳ್ಳುವುದು ಸೂಕ್ತ.

ಟೋಸ್ಟರ್‌ : ಎಲ್ಲ ಎಲೆಕ್ಟಾನಿಕ್‌ ಬರ್ನರ್‌ಗಳು ಹಬೆಯಿಂದ ಉತ್ಪನ್ನವಾಗುವ ಧೂಳಿನ ಸೂಕ್ಷ್ಮಕಣಗಳನ್ನು ಸೃಷ್ಟಿಸುತ್ತವೆ. ಅವೇ ಮಾಲಿನ್ಯಕ್ಕೆ ಕಾರಣವಾಗುತ್ತದೆ. ನಾವು ಬಹಳ ದಿನಗಳ ಬಳಿಕ ಟೋಸ್ಟರ್‌ಗಳನ್ನು ಉಪಯೋಗಿಸಿದರೆ, ಅದರಲ್ಲಿರುವ ಕೊಳೆ, ಹಬೆಯ ರೂಪದಲ್ಲಿ ಸೂಕ್ಷ್ಮ ಕಣಗಳಲ್ಲಿ ಬದಲಾಗಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಅದರಿಂದಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.

ಮೈಕ್ರೋವೇವ್ ‌: ಇಂಗ್ಲೆಂಡಿನ ಮಾಂಚೆಸ್ಟರ್‌ ಯೂನಿವರ್ಸಿಟಿಯ ಸಂಶೋಧಕರ ಪ್ರಕಾರ ಮೈಕ್ರೋವೇವ್‌ ಕಾರ್ಬನ್‌ ಡೈಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. ಅದು ಕಾರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಹರಡುವ ಕೆಲಸ ಮಾಡುತ್ತದೆ.

ರೋಟಿ ಮೇಕರ್‌ : ಇದು ಬಹು ಬೇಗ ರೊಟ್ಟಿಗಳನ್ನು ಬಿಸಿ ಬಿಸಿಯಾಗಿ ಕೊಡಬಹುದು. ಆದರೆ ಇದು ಮನೆಯನ್ನು ಎಷ್ಟರ ಮಟ್ಟಿಗೆ ಮಾಲಿನ್ಯಯುಕ್ತಗೊಳಿಸುತ್ತದೆ ಎನ್ನುವುದು ನಿಮಗೆ ಗೊತ್ತೆ? ಒಂದು ವೇಳೆ ನಿಮ್ಮ ಮನೆಯಲ್ಲಿ ಹೊಗೆ ಹೊರಗೆ ಹೋಗುವ ಪರ್ಯಾಯ ವ್ಯವಸ್ಥೆ ಇರದೇಹೋದರೆ, ಅದನ್ನು ಬಹಳ ಎಚ್ಚರಿಕೆಯಿಂದ ಬಳಸಿ.

ರಕ್ಷಣೆ ಹೇಗೆ?

ಹೊಗೆ ಹಾಗೂ ಕೊಳೆಯನ್ನು ಅಡುಗೆಮನೆಯಿಂದ ಹೊರಹಾಕಲು ಮನೆಯಲ್ಲಿ ಸರಿಯಾದ ವೆಂಟಿಲೇಶನ್‌ ಇರುವುದರ ಜೊತೆ, ಚಿಮಣಿಯ ವ್ಯವಸ್ಥೆಯನ್ನು ಕೂಡ ಮಾಡಿ. ಏಕೆಂದರೆ ಮಾಲಿನ್ಯಕ್ಕೆ ಬ್ರೇಕ್‌ ಬೀಳಬೇಕು.

ಚಿಮಣಿಯಲ್ಲಿ ಸೇರಿಕೊಂಡ ಕೊಳೆಯನ್ನು ನಿವಾರಿಸಲು ಫಿಲ್ಟರ್ಸ್ ಮತ್ತು ಅದರ ಫ್ರೇಮ್ಸ್ ನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸುತ್ತಾ ಇರಿ.

ನೀವು ಯಾವಾಗಲಾದರೂ ಟೋಸ್ಟರ್‌, ಮೈಕ್ರೋವೇವ್‌ನ ಬಳಿಕ, ಕಾಫಿ ಅಥವಾ ಟೀ ಮೇಕರ್‌ನ್ನು ಉಪಯೋಗಿಸುತ್ತಿದ್ದರೆ, ಅದರ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಏಕೆಂದರೆ ಈ ಉಪಕರಣಗಳ ಮೇಲೆ ಕೊಳೆ ಜಮೆಗೊಂಡರೆ, ಮಾಲಿನ್ಯದ ಅಪಾಯ ಉಂಟಾಗುತ್ತದೆ.

ಒಂದು ಸಲಕ್ಕೆ ಒಂದೇ ಎಲೆಕ್ಟ್ರಾನಿಕ್‌ ಉಪಕರಣ ಬಳಸಲು ಪ್ರಯತ್ನಿಸಿ. ಮನೆಯಲ್ಲಿ ಮೂರುಪಟ್ಟು ಮಾಲಿನ್ಯ

`ನಾನು ಮನೆಯಲ್ಲಿ ಇದ್ದೇನೆ, ಹೀಗಾಗಿ ಮಾಲಿನ್ಯದಿಂದ ದೂರ ಇದ್ದೇನೆ,’ ಎಂದು ನೀವು ಯೋಚಿಸುತ್ತಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಲಂಡನ್ನಿನ ರೋಫೀಲ್ಡ್ ಯೂನಿವರ್ಸಿಟಿಯ ಸಂಶೋಧಕರ ಪ್ರಕಾರ, ಅಡುಗೆಮನೆಯಲ್ಲಿ ಹೊಗೆ ಹೋಗಲು ಸೂಕ್ತ ವ್ಯವಸ್ಥೆ ಇರದೇ ಇದ್ದರೆ, ನಿಮ್ಮ ಮನೆಯಲ್ಲಿ ಹೊರಗಡೆಗಿಂತ 3 ಪಟ್ಟು ಹೆಚ್ಚು ಮಾಲಿನ್ಯ ಇರುತ್ತದೆ. ಎಲೆಕ್ಟ್ರಾನಿಕ್‌ ಬರ್ನರ್‌ನಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಅದರಿಂದಾಗಿ ಗಂಟಲಿನಲ್ಲಿ ಕೆರೆತ, ಗಂಟಲು ಕಟ್ಟಿಕೊಂಡಂತಾಗುವುದು, ತಲೆನೋವು, ತಲೆಸುತ್ತುವಿಕೆ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ.

– ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ