ಭಾರತದಲ್ಲಿ ಒಂದೆಡೆ ಹಿಂದೂ ಮತಾಂಧರ ದುಷ್ಪ್ರಚಾರದ ಕಾರಣ ಜನಸಂಖ್ಯೆ ನಿಯಂತ್ರಣ ಕಾನೂನನ್ನು ತವರು ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಅದರಿಂದ ಮುಸ್ಲಿಮರ ಜನಸಂಖ್ಯೆ ಹೆಚ್ಚುವುದು ನಿಲ್ಲುತ್ತದೆ ಎಂಬುದು ಅವರ ವಿಚಾರ. ಇನ್ನೊಂದೆಡೆ ಜಗತ್ತಿನ ಬಲಾಢ್ಯ ರಾಷ್ಟ್ರಗಳು ಜನಸಂಖ್ಯೆಯಲ್ಲಿನ ಭಾರಿ ಇಳಿಕೆಯಿಂದ ಕಂಗಾಲಾಗಿವೆ.

ಜಪಾನಿನಲ್ಲಿ 2020ರಲ್ಲಿ 8,40,232 ಮಕ್ಕಳು ಹುಟ್ಟಿದವು. 2019ರಲ್ಲಿ 8,65,259 ಮಕ್ಕಳು ಜನಿಸಿದ್ದವು. 1899ರ ಬಳಿಕ ಜನಗಣತಿ ಆರಂಭವಾದಾಗಿನಿಂದ ಜಪಾನಿನಲ್ಲಿ 1 ವರ್ಷದಲ್ಲಿ ಹುಟ್ಟಿದ ಮಕ್ಕಳ ಸಂಖ್ಯೆಯಲ್ಲಿ ಇದೇ ಅತ್ಯಂತ ಕಡಿಮೆ.ಅಷ್ಟೇ ಅಲ್ಲ, 2019ರಲ್ಲಿ 5,99,007 ಮದುವೆ ನಡೆದಿದ್ದವು. ಕಡಿಮೆ ಮದುವೆ, ಕಡಿಮೆ ಮಕ್ಕಳು. 2021ರಲ್ಲಿ ಮಕ್ಕಳ ಜನನ ಪ್ರಮಾಣ 10% ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತಿ ವರ್ಷ 7 ಲಕ್ಷ ಮಕ್ಕಳು ಹುಟ್ಟಬಹುದು. ಇದು 2031ರತನಕ ಹೀಗೆಯೇ ಮುಂದುವರಿಯಬಹುದೇ ಎನ್ನುವುದು ಸರ್ಕಾರದ ಅಂದಾಜಾಗಿತ್ತು. ಆದರೆ ಅದು 10 ವರ್ಷಗಳ ಮುಂಚೆಯೇ ಆಗಿದೆ.

ಈಗ ವಿಚ್ಛೇದನಗಳ ಪ್ರಮಾಣ ಕುಗ್ಗಿದೆ. ಆದರೂ 1,93,251 ವಿಚ್ಛೇದನ ಆಗಿವೆ. ಜಪಾನಿನ ಈ ಅಂಕಿಅಂಶಗಳು ವಾಸ್ತವದಲ್ಲಿ ಯೂರೋಪ್‌, ಚೀನಾ, ಅಮೆರಿಕಾದ ಹಾಗೆಯೇ ಇವೆ. ಇದು ಕೊರೋನಾದಿಂದಲ್ಲ, ಜಾಗತಿಕ ತಾಪಮಾನದಿಂದಲ್ಲ, ಮಹಿಳೆಯರ ತಮ್ಮಿಚ್ಛೆಯ ಕಾರಣದಿಂದ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ.

ವರ್ಕ್‌ ಫ್ರಂ ಹೋಂ, ಮೆಟರ್ನಿಟಿ, ಪಿಟರ್ನಿಟಿ ಲೀವ್ ‌ಎಷ್ಟೇ ಸೌಲಭ್ಯಗಳಿದ್ದರೂ, ಪ್ರತಿಯೊಂದು ಮಗು ತನ್ನ ತಾಯಿಗೆ ಹೊರೆಯೇ ಆಗಿರುತ್ತದೆ. ಆಕೆ ಅನಗತ್ಯ ಹೊರೆ ಹೊರಲು ಸಿದ್ಧಳಿರುವುದಿಲ್ಲ.

ಶತಶತಮಾನಗಳಿಂದ ಪುರುಷ ಮಕ್ಕಳನ್ನು ಹೆರಲು ಮಹಿಳೆಯರನ್ನು ಮದುವೆಯಾಗಿ ಅವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾವೆ. ಸಮಾಜದ ವ್ಯವಸ್ಥೆ ಕೂಡ ಹಾಗೆಯೇ ಆಗಿಬಿಟ್ಟಿತು. ಮಹಿಳೆಯರು ತಮ್ಮ ಅಸ್ತಿತ್ವವನ್ನು ಮಕ್ಕಳಲ್ಲಿಯೇ ಕಂಡುಕೊಳ್ಳತೊಡಗಿದರು.

ಭಾರತದಲ್ಲಷ್ಟೇ ಅಲ್ಲ, ಪಾಶ್ಚಿಮಾತ್ಯ ದೇಶಗಳಲ್ಲೂ ಕೂಡ ಧರ್ಮ ಮಕ್ಕಳ ಬಗ್ಗೆ ಒತ್ತುಕೊಟ್ಟಿತು. ಆ ಬಳಿಕ ಆ ಮಕ್ಕಳನ್ನು ಧರ್ಮದ ರಕ್ಷಣೆಗಾಗಿ, ಇಲ್ಲಿ ಸಾಯಲು ಬಳಸುವುದಾಗಿರಬಹುದು, ಧರ್ಮ ಎಂದೂ ಮಹಿಳೆಯರಿಗೆ ಮಕ್ಕಳ ಪ್ರಯುಕ್ತ ಒಂದಿಷ್ಟೂ ರಿಯಾಯಿತಿ ತೆಗೆದುಕೊಳ್ಳಲು ಅವಕಾಶ ಕೊಡಲಿಲ್ಲ. ಆದರೆ ಮಕ್ಕಳಾಗದಿದ್ದಾಗ ನೂರಾರು ಬಗೆಯ ಆರೋಪ ಹೊರೆಸುತ್ತದೆ.

ಇಂದಿನ ಸಾಕ್ಷರ ಮಹಿಳೆ ಈ ಸಂಚನ್ನು ತೊಡೆದು ಹಾಕಿ, ಮಗುವನ್ನು ಹೆರುವ ಹೊರೆಯನ್ನು ತಂದುಕೊಳ್ಳದೆ ದತ್ತು ತೆಗೆದುಕೊಳ್ಳುತ್ತಿದ್ದಾಳೆ. ಕೆಲವು ನೌಕರಿಗಳಲ್ಲಿ ಮಹಿಳೆಯರಿಗೆ ಎಷ್ಟೊಂದು ವೇತನ ಹಾಗೂ ಸೌಲಭ್ಯಗಳು ದೊರಕುತ್ತವೆಯೆಂದರೆ, ಯಾರಾದರೂ ಹೆಲ್ಪರ್‌ ಗಳನ್ನು ಇಟ್ಟುಕೊಳ್ಳಲು ಅನುಕೂಲವಾಗುತ್ತದೆ. ಬಹಳಷ್ಟು ಮಹಿಳೆಯರು ಮಕ್ಕಳ ಕಾರಣದಿಂದ ಎರಡನೇ ದರ್ಜೆಯ ನೌಕರಿಗಳಲ್ಲಿಯೇ ಸಿಲುಕಬೇಕಾಗಿ ಬರುತ್ತದೆ.

ಫ್ಯಾಕ್ಟರಿ ಹಾಗೂ ಆಫೀಸ್‌ಗಳು ಎಷ್ಟು ದೂರ ಇವೆಯೆಂದರೆ, ಅಲ್ಲಿ ತಲುಪಲು 2 ಗಂಟೆ ತಗಲುತ್ತದೆ. 12-14 ಗಂಟೆ ದೂರ ಇದ್ದು ಮಹಿಳೆಯರು ಮಕ್ಕಳನ್ನು ಪೋಷಿಸುವುದು ಹಾಗೂ ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರಿಗೆ ಮದುವೆಯೂ ಬೇಡ, ಮಕ್ಕಳ ಹೊರೆಯೂ ಬೇಡವಾಗಿದೆ.

ಮಕ್ಕಳಿಲ್ಲದೆ ಮದುವೆಯಾದರೆ ಅದೊಂದು ರೀತಿಯ ಸ್ವಾತಂತ್ರ್ಯ ಇರುತ್ತೆ. ಯಾವಾಗಬೇಕಾದರೂ ಸಂಗಾತಿಯನ್ನು ಬದಲಿಸಬಹುದು. ಸಂಗಾತಿಯನ್ನು ಬದಲಿಸದಿದ್ದರೂ, ಯಾರ ಜೊತೆಗೆ ಸರಿ ಎನಿಸುತ್ತೋ ಅವರ ಜೊತೆಗೆ ಖುಷಿ ಪಡಬಹುದು. ಪುರುಷರು ಅನಾದಿಕಾಲದಿಂದ ಅದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಹಾಗೆಂದೇ ಜಗತ್ತಿನಲ್ಲಿ ಮಹಿಳೆಯರೇ ವೇಶ್ಯೆಯಾಗಿದ್ದಾರೆ, ಪುರುಷರಲ್ಲ. ಮನೆಯಲ್ಲಿ ಹೆಂಡತಿಯೇ ಮಕ್ಕಳನ್ನು ಸಂಭಾಳಿಸಬೇಕು.

3 ನಿಮಿಷದ ಸುಖ ಮತ್ತು ಇನ್ನೇನು…..

ಸ್ಮಾರ್ಟ್‌ ಹಾಗೂ ಚುರುಕಿನಿಂದ ಕೆಲಸ ಮಾಡಲು ಸಮರ್ಥರಾಗಿರುವ ಹುಡುಗಿಯರ ಅತ್ಯಾಚಾರ ಆರೋಪವನ್ನು ಬ್ಲ್ಯಾಕ್‌ ಮೇಲ್ ನಂತೆ ಬಳಸುವ ಒಂದು ಪ್ರಯತ್ನವನ್ನು ಸುಪ್ರೀಂ ಕೋರ್ಟ್‌ ಆ್ಯಂಕರ್‌ ವರುಣಾ ಹಿರಾಮಥ್‌ಗೆ ನೀಡಿದ್ದ ಜಾಮೀನಿನ ನಿರಾಳತೆಯನ್ನು ರದ್ದುಗೊಳಿಸಿ ಫೇಲ್ ಮಾಡಿತು.

ಈ ಪ್ರಕರಣದಲ್ಲಿ ದೂರುದಾರರು ತಮ್ಮ ದೂರಿನಲ್ಲಿ ಒಂದು ವಿಷಯವನ್ನಂತೂ ಒಪ್ಪಿಕೊಂಡಿದ್ದರು, ತಾನು ಹಾಗೂ ಆರೋಪಿ ಒಂದೇ ರೂಮಿನಲ್ಲಿ ಒಪ್ಪಿಗೆಯ ಮೇರೆಗೆ ಇದ್ದೆ. ಅವನು ಬಟ್ಟೆಯನ್ನು ಕಳಚಿದ್ದ ಹಾಗೂ ತಾನು ಸೆಕ್ಸ್ ಸಂಬಂಧಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಒಂದು ವೇಳೆ ಸೆಕ್ಸ್ ಆಗಿದ್ದರೆ ಅದು ಬಲಾತ್ಕಾರವೇ ಹೌದು ಎಂದು.

ಸ್ತ್ರೀ-ಪುರುಷ ಒಂದೇ ಕೋಣೆಯಲ್ಲಿ ಒಪ್ಪಿಗೆಯಿಂದ ಇದ್ದರೆ, ಪುರುಷ ಹೇಳಿದಂತೆ ಸ್ತ್ರೀ ಕೇಳುತ್ತಿದ್ದರೆ ಅದು ಬಲಾತ್ಕಾರ ಎನ್ನಿಸದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಫೆಬ್ರವರಿ 2020ರಲ್ಲಿ ದೆಹಲಿಯ ಹೋಟೆಲ್ ‌ಒಂದರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಟ್ಟೆ ಕಳಚಲು ಒಪ್ಪಿಗೆ ಕೊಡಲಾಗಿತ್ತೆಂದರೆ, ಅದನ್ನು ಸೆಕ್ಸ್ ಸಂಬಂಧಕ್ಕೆ ಒಪ್ಪಿಗೆ ಎಂದು ಭಾವಿಸಲಾಗದು ಎಂದು ಕಾನೂನು ಹೇಳುತ್ತದೆ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಳು. ಸುಪ್ರೀಂ ಕೋರ್ಟ್‌ ಅದಕ್ಕೆ ಸಮ್ಮತಿ ಸೂಚಿಸಲಿಲ್ಲ ಹಾಗೂ ವರುಣ್‌ ಹಿರಾಮಥ್‌ಗೆ ನೀಡಿದ್ದ ಜಾಮೀನನ್ನು ಮುಂದುವರಿಸಿತ್ತು.

ಓದು ಬರಹ ಬಲ್ಲ, ಜೊತೆಗೆ ಕೆಲಸ ಮಾಡುವ ಹುಡುಗಿಯರ ಜೊತೆ ಸಂಬಂಧ ಬೆಳೆಸುವುದು ಈಗ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಉನ್ನತ ವಿಚಾರದ ಹುಡುಗಿ ಸೆಕ್ಸ್ ಬಾಬತ್ತಿನಲ್ಲೂ ಉದಾರಳಾಗಿರುತ್ತಾಳೆ ಎಂದು ಪುರುಷರು ಭಾವಿಸುತ್ತಾರೆ. ಆದರೆ ಯಾವಾಗಲೂ ಹೀಗೆ ನಡೆಯುವುದಿಲ್ಲ. ಪುರುಷರು ಮಾತಿನ ಅಥವಾ ಸಂಪರ್ಕ ಕಲೆಯನ್ನು ಬಳಸುವಂತೆ, ಹುಡುಗಿಯರು ತಮ್ಮ ವ್ಯಕ್ತಿತ್ವವನ್ನು ಬಳಸುತ್ತಾರೆ.

population-2

ತಮ್ಮ ದೇಹವನ್ನು ತೋರಿಸಲು ಸಂಕೋಚ ತೋರದಿರುವ ಪ್ರತಿಯೊಬ್ಬ ಹುಡುಗಿ ತನ್ನ ಇಚ್ಛೆಗೆ ವಿರುದ್ಧವಾಗಿ ಇನ್ನೊಬ್ಬರ ಜೊತೆಗೆ ಸಮಾಗಮ ನಡೆಸಲು ಸಿದ್ಧಳಾಗುತ್ತಾಳೆಂದು ತಿಳಿಯುವುದು ತಪ್ಪು. ಕೆಲಸದ ನಿಮಿತ್ತ ತನ್ನ ಬಳಿ ಬರುವ ಯಾವುದೇ ಮಹಿಳೆಯನ್ನು ತಾನು ಒಪ್ಪಿಸಿಬಿಡುತ್ತೇನೆಂದು ಪ್ರತಿಯೊಬ್ಬ ಪುರುಷ ಭಾವಿಸುತ್ತಾನೆ. ಯಾರು ತನಗೆ ಇಷ್ಟವಾಗುತ್ತಾರೋ, ಅಂಥವರ ಜೊತೆಗೆ ಮಾತ್ರ ಮಹಿಳೆ ಸಮಾಗಮಕ್ಕಾಗಿ ಸಿದ್ಧಳಾಗುತ್ತಾಳೆ ಹಾಗೂ ಆತನ ಬಗ್ಗೆ ನಿಷ್ಠೆಯಿಂದ ಇರುತ್ತಾಳೆ. ಈ ಇಷ್ಟದ ವ್ಯಕ್ತಿಗಳಲ್ಲಿ ಪತಿ ಇಲ್ಲದೆ ಇರಬಹುದು. ಒಂದು ವೇಳೆ ಗಂಡನ ಜೊತೆ ಇರಲಾಗದಿದ್ದರೆ, ಪ್ರೀತಿ ಉಳಿಯದೇ ಇದ್ದರೆ ಸೆಕ್ಸ್  ಸಂಬಂಧ ಕಾನೂನು ಸಮ್ಮತ ಅತ್ಯಾಚಾರವಾಗುತ್ತದೆ.

ತನ್ನೊಂದಿಗೆ ತಿಂಡಿ ತಿಂದಳು, ಊಟ ಮಾಡಿದಳು, ತನ್ನೊಂದಿಗೆ ಸೆಕ್ಸ್ ಸಂಬಂಧಕ್ಕೆ ಹುಕ್ಕುಂ ಸಿಕ್ಕಂತಾಯ್ತು ಎಂದು ಪುರುಷ ಭಾವಿಸುತ್ತಾನೆ. ಆ ಹಕ್ಕು ಪುರುಷನಿಗೂ ಇಲ್ಲ ಮಹಿಳೆಗೂ ಇಲ್ಲ. ತನ್ನ ದೇಹದ ಆಕರ್ಷಣೆ ತೋರಿಸಿ, ಪುರುಷನನ್ನು ಉತ್ತೇಜಿತಗೊಳಿಸಿ ಸಂಬಂಧ ಹೊಂದುವುದು ಅತ್ಯಾಚಾರ ಎನಿಸುವುದಿಲ್ಲ. ಆದರೆ ಹೀಗಾದರೆ ಅದು ಬಹುದೊಡ್ಡ ವಿಷಯವೇನಲ್ಲ.

ಸುಪ್ರೀಂ ಕೋರ್ಟ್‌ ಸಾಮಾನ್ಯವಾಗಿ ಲೈಂಗಿಕ ಸಂಬಂಧದ ಪ್ರಕರಣಗಳಲ್ಲಿ ಮಹಿಳೆಯರ ಸರಿತಪ್ಪು ಎಲ್ಲ ಸಂಗತಿಗಳನ್ನು ಒಪ್ಪಿಕೊಳ್ಳುತ್ತದೆ. ಆದರೆ ಈ ಪ್ರಕರಣದಲ್ಲಿ ಭಿನ್ನ ಆದೇಶ ನೀಡಿರುವುದು ಒಳ್ಳೆಯ ಸಂಗತಿಯೇ.

ಧರ್ಮದ ವಕ್ರದೃಷ್ಟಿ ಬೀಳಲೇ ಬೇಕಿತ್ತು……

ಜನರ ಲೈಂಗಿಕ ಆಯ್ಕೆ ಏನಾಗಿರಬೇಕೆಂದು ನಿರ್ಧರಿಸುವುದು ಸಮಾಜ, ಪೊಲೀಸ್‌ ಹಾಗೂ ಪೋಷಕರದ್ದಾಗಿತ್ತು. ಆದರೆ ಖಂಡಿತ ಧರ್ಮದ್ದಾಗಿರಲಿಲ್ಲ. ಸಂವಿಧಾನದ ಪರಿಚ್ಛೇದ 21 ಎಲ್ಲರಿಗೂ ತಮ್ಮಿಚ್ಛೆಯಂತೆ ಜೀವಿಸುವ ಹಕ್ಕು ನೀಡುತ್ತದೆ. ಇದರಲ್ಲಿ ಭಿನ್ನ ಲೈಂಗಿಕ ಆಸಕ್ತಿ ಹೊಂದಿರುವವರು ಅಂದರೆ ಹೋಮೋ ಸೆಕ್ಷುವಲ್ ‌ಹಾಗೂ ಲೆಸ್ಬಿಯನ್‌ಗಳೂ ಸೇರಿದ್ದಾರೆ. ಇವರಿಗೆ ಯಾರ ಹಸ್ತಕ್ಷೇಪ ಇಲ್ಲದೆ ಜೀವನ ನಡೆಸುವ ಹಕ್ಕು ಇದೆ.

ನ್ಯಾಯಾಧೀಶ ಎನ್‌.  ಆನಂದ್‌ ವೆಂಕಟೇಶ್‌

ಎಂತಹದೊಂದು ಪ್ರಕರಣದಲ್ಲಿ ತೀರ್ಪು ನೀಡುತ್ತಿದ್ದರೆಂದರೆ, ತಮ್ಮ ಲೈಂಗಿಕ ಆಸಕ್ತಿ ಕಾರಣದಿಂದ ಮನೆಯಿಂದ ಓಡಿಹೋಗಿದ್ದ ಇಬ್ಬರು ಯುವಕರನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಿದ್ದರು.

ತಾಯಿ ತಂದೆ, ಪೊಲೀಸ್‌ ಅಧಿಕಾರಿ ಹಾಗೂ ಡಾಕ್ಟರ್‌ ಒಂದುವೇಳೆ ಯುವಕರು ಅಥವಾ ಯಾರೊಬ್ಬರ ಆಸಕ್ತಿಯನ್ನೂ ಗಮನಿಸದೇ ಇದ್ದರೆ, ಇದು ಅವರಿಗೆ ಏನಾದರೂ ತಪ್ಪು ಮಾಡುವ ಹಕ್ಕು ನೀಡುವುದಿಲ್ಲ. ಹೋಮೋ ಸೆಕ್ಷುವಲ್ ‌ಹಾಗೂ ಲೆಸ್ಬಿಯನ್‌ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿರದೆ, ಕೇವಲ ಜೊತೆ ಜೊತೆಗಿರುವ ಸ್ವಾತಂತ್ರ್ಯವಾಗಿದೆ. ಬೇರೆಯವರಿಗೆ ಯಾವ ಮಾನ್ಯತೆ ಇದೆಯೋ, ಅವರಿಗೂ ಅದೇ ಮಾನ್ಯತೆ ಇದೆ ಎಂದು ನ್ಯಾಯಾಧೀಶರು ಹೇಳಿದರು.

ಪೊಲೀಸರು ಆ ಯುವಕರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಅವರಿಗೆ ಟ್ರೀಟ್‌ ಮೆಂಟ್‌ ಕೊಡಿಸುವ ಪ್ರಯತ್ನ ಅಸಂವಿಧಾನಿಕ ಕೃತ್ಯ. ಅವರ ಖಾಸಗಿ ಹಕ್ಕನ್ನು ಗೌರವಿಸಬೇಕೆಂದು ಉಚ್ಚ ನ್ಯಾಯಾಲಯ ಹೇಳಿತು.

ಪೊಲೀಸರು ಹೇಗೆ ಕೆಲಸ ಮಾಡುತ್ತಾರೊ ಹಾಗೆಯೇ ಮಾಡುತ್ತಾರೆ. ಯಾವುದಾದರೂ ಎಫ್‌ಐಆರ್‌ ದಾಖಲಾಗಿದ್ದರೆ, ಪೊಲೀಸರು ಸರಿಯಾಗಿ ಗುರುತಿಸದೆಯೇ ಠಾಣೆಗೆ 3-4 ದಿನಗಳ ಕಾಲ ಅವರ ವಿರುದ್ಧ ವಿಚಾರಣೆ ನಡೆಸುತ್ತಾರೆ. ಹೈಕೋರ್ಟ್‌ ಆದೇಶ ಕಾಗದದಲ್ಲಿಯೇ ಉಳಿಯುತ್ತದೆ. ಪೊಲೀಸರು ಏನು ಮಾಡುತ್ತಾರೊ ಅದನ್ನು ತಮ್ಮ ಇಚ್ಛೆಯಿಂದ ಮಾಡುತ್ತಾರೆ.

ವಾಸ್ತವದಲ್ಲಿ ಸಲಿಂಗಿಗಳು ಶತಶತಮಾನಗಳಿಂದ ಸಮಾಜದಲ್ಲಿರಬಹುದು. ಆದರೆ ಅದು ಧರ್ಮಕ್ಕೆ ಇಷ್ಟವಾಗಲಿಲ್ಲ. ಆದರೆ ಈ ಕುರಿತು ಧರ್ಮದ ಗುತ್ತಿಗೆದಾರರಿಗೆ ಯಾವುದೇ ಲಾಭ ಆಗುವುದಿಲ್ಲ. ಯಾವುದೇ ಸಮಾರಂಭಗಳಿಗೆ ಕರೆಸುವುದಿಲ್ಲ. ಜಾತಕ ತೋರಿಸಲು ಬರುವುದಿಲ್ಲ. ಹಬ್ಬ ಹರಿದಿನಗಳಂತೂ ಇರುವುದಿಲ್ಲ. ಯಾವುದೇ ದಾನ ದಕ್ಷಿಣೆ ಸಿಗುವುದಿಲ್ಲ.

ಧರ್ಮದ ಗುತ್ತಿಗೆದಾರರ ಹೇಳಿಕೆ ಮೇರೆಗೆ ಈ ಜೋಡಿಗಳನ್ನು ತಿರಸ್ಕಾರದ ದೃಷ್ಟಿಯಿಂದ ನೋಡಲಾಗುತ್ತದೆ. ಸಲಿಂಗಿಗಳಿಗೆ ಕಲ್ಲು ಸಹ ತೂರಲಾಗುತ್ತದೆ. ಎಷ್ಟು ಸೆಕ್ಸ್ ಸಂಬಂಧಗಳು ಸ್ತ್ರೀಪುರುಷರ ನಡುವೆ ನಡೆಯುತ್ತವೆ ಅದರ ಕಾಲುಭಾಗ ಸ್ತ್ರಿ-ಸ್ತ್ರಿ ಹಾಗೂ ಪುರುಷ-ಪುರುಷರ ನಡುವೆ ನಡೆಯುತ್ತವೆಂದರೆ, ಅದು ಆಶ್ಚರ್ಯದ ಸಂಗತಿಯೇನಲ್ಲ. ಆದರೆ ಈ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುವುದಿಲ್ಲ.

ಯಾವಾಗ ಏಡ್ಸ್ ಹರಡಲು ಶುರುವಾಯಿತೊ, ಆಗ ಎಣಿಕೆ ಶುರು ಮಾಡಿದರು. ಸರ್ಕಾರಗಳು ಹೋಮೋ ಸೆಕ್ಷುಯಾಲಿಟಿ ಹಾಗೂ ಲೆಸ್ಬಿಯನ್‌ಗಳನ್ನು ಸ್ವೀಕರಿಸಲು ಶುರು ಮಾಡಿದರು. ಅವರು ಸಮಾಜದಿಂದ ಪ್ರತ್ಯೇಕವಾಗಿರಬಹುದು. ಆದರೆ ಅವರು ಸಮಾಜಕ್ಕೆ ಹಾನಿ ಉಂಟು ಮಾಡುತ್ತಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಧರ್ಮದ ಗುತ್ತಿಗೆದಾರರು ಅವರು ಮತ್ತು ನಮ್ಮ ನಡುವೆ ಯುದ್ಧದ ವಾತಾವರಣ ಸೃಷ್ಟಿಸಿ ದೊಡ್ಡ ದುರ್ಗಂಧ ಪಸರಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ