ಸಾರಾ ನೀಡಿದ ಥೀಮ್ ಪಾರ್ಟಿ
ನಾವು ಹೇಳುತ್ತಿರುವುದು ಸಾರಾ ಅಲಿ ಖಾನ್ ಕುರಿತು. ಅವಳು ತನ್ನ 26ನೇ ಬರ್ತ್ ಡೇ ಅಂದು ಅದ್ಧೂರಿ ಪಾರ್ಟಿ ಏರ್ಪಡಿಸಿದ್ದಳು. ಇಂಥ ಆಡಂಬರ ಯಾಕಿರಬಾರದು? ತನ್ನ ಅಷ್ಟು ಸಣ್ಣ ವಯಸ್ಸಿನಲ್ಲೇ ಅವಳು ಘಟಾನುಘಟಿ ಸೆಲೆಬ್ರಿಟೀಸ್ ಜೊತೆ ನಟಿಸಿದ್ದಾಳೆ. ಹೀಗಾಗಿ ಇವಳ ಅಣ್ಣ ಇಬ್ರಾಹಿಂ ಅಲಿಖಾನ್ ಬೀಗುತ್ತಿದ್ದಾನೆ. ಅವನು ತಂಗಿಯ ಪ್ರಿಯವಾದ ಪಿಂಕ್ ಕಲರ್‌ನ್ನೇ ಪಾರ್ಟಿ ಥೀಮ್ ಆಗಿಸಿದ್ದ.
ಸನಿಯ ಬಂಗಲೆಯ ಬೊಂಬಾಟ್ ವೈಭವ
ಸನಿ ಡಿಯೋಲ್, ತನ್ನ ಭಾರಿ ಭರ್ಜರಿ ಫೈಟಿಂಗ್ ಸಾಹಸಗಳಿಂದ ಬಾಲಿವುಡ್ ನಲ್ಲಿ ಇಂದಿಗೂ ಚರ್ಚೆಯಲ್ಲಿರುವ ನಟ. ಅವನ ಸೂಪರ್ ಹಿಟ್ ಡೈಲಾಗ್ ಗಳು ಇಂದಿಗೂ ಅಭಿಮಾನಿಗಳ ನಾಲಿಗೆ ತುದಿಯಲ್ಲಿವೆ. ಆತ ಇತ್ತೀಚೆಗೆ ಬೆಳ್ಳಿ ಪರದೆಯಲ್ಲಿ ಮಿಂಚದಿದ್ದರೂ, ಅಭಿಮಾನಿಗಳ ಅಭಿಮಾನಕ್ಕೇನೂ ಕೊರತೆ ಇಲ್ಲ. ಈತನ ಪ್ರತಿ ಮಾತನ್ನೂ ಆಲಿಸಲು ಫ್ಯಾನ್ಸ್ ಕಾದಿರುತ್ತಾರೆ. ಬನ್ನಿ, ಈತನ ಮುಂಬೈನ ಜುಹೂ ಬೀಚ್ ನಲ್ಲಿರುವ ಭರ್ಜರಿ ಬಂಗಲೆಯ ಬಗ್ಗೆ ತಿಳಿಯೋಣ. ಅವನ ಇಡೀ ಬಂಗಲೆ ಗಾಜಿನಿಂದ ಆವೃತವಾಗಿದೆ, ಸೂರ್ಯ ಕಿರಣ ಅದರ ಮೇಲೆ ಬೀಳುತ್ತಿದ್ದಂತೆ ಜಾಗಿಂಗ್ ಗೆ ರೆಡಿಯಾಗುತ್ತಾನೆ. ಹೊರ ಅಂಗಳದಲ್ಲಿ ಭವ್ಯ ಗಾರ್ಡನ್, ಭಾರಿ ಸ್ವಿಮಿಂಗ್ ಪೂಲ್, ಜಿಮ್, ಹೋಂ ಥಿಯೇಟರ್ ಸಹ ಉಂಟು! 40-50 ಜನ ಒಟ್ಟೊಟ್ಟಿಗೆ ಇಲ್ಲಿ ಪಾರ್ಟಿ ಮಾಡಬಹುದು.
ಆಮೀರನಿಗೂ ಚಿಂತೆಯೇ?
ಕೊರೋನಾ ಕಾಟದಿಂದಾಗಿ ಸಿನಿಮಾ ಥಿಯೇಟರ್ ಹಾಳುಬಿದ್ದಿವೆ. ಈ ಕಾರಣ ನಿರ್ಮಾಪಕರು OTT ಮೂಲಕ ಚಿತ್ರ ರಿಲೀಸ್ ಮಾಡದೆ ಬೇರೆ ದಾರಿ ಇಲ್ಲ. ಹೀಗಾಗಿ ಈ ವಿಷಯbನ್ನೇ ದೊಡ್ಡದಾಗಿಸಿ ಪ್ರೆಸ್ ಮೀಟ್ ಮಾಡಿದ ಆಮೀರ್ ತನ್ನ ಚಿಂತೆ ಹಂಚಿಕೊಂಡ. ಈ ಸ್ಥಿತಿಯನ್ನು ಸುಧಾರಿಸಲು ನಾವೆಲ್ಲ ಒಟ್ಟಿಗೆ ದುಡಿಯಬೇಕು ಎಂದ. ಎಲ್ಲೆಲ್ಲೂ ಸಿನಿಮಾ ಫ್ಲಾಪ್ ಆಗುತ್ತಿರುವಾಗ ಸ್ಟಾರ್ಸ್ ಆದರೂ ನಮಗೇನು ಚಿಂತೆ ಕಾಡದೇ ಎನ್ನುತ್ತಾನೆ.
ವಿದ್ಯಾ ಬಾಲನ್ ತಳೆದ ನಿಲುವು
ಬೆಹೆನ್ ಜೀ ಟೈಪಿಗೆ ಒಗ್ಗಿಹೋಗಿರುವ ವಿದ್ಯಾ, ಯಾರಾದರೂ ತನ್ನ ಬಗ್ಗೆ ಹಾಗೆ ವ್ಯಂಗ್ಯವಾಗಿ ಕುಟುಕಿದರೆ ತಲೆ ಕೆಡಿಸಿಕೊಳ್ಳದೇ, ತಾನು ಹೇಗಿದ್ದೇನೋ ಅದೇ ಸರಿ ಎನ್ನುತ್ತಾಳೆ. ಮೀಡಿಯಾ ಫೋಟೋಗಳಲ್ಲೂ ಗಂಗಮ್ಮ ಗೌರಮ್ಮನಾಗಿಯೇ ನಿಲ್ಲುತ್ತಾಳೆ. ನೋ ಗಿಲ್ಟ್ ಫೀಲಿಂಗ್. ಆಕೆ ಒಂದು ಸಂದರ್ಶನದಲ್ಲಿ ಅವಾಸ್ತವಿಕ ಸೌಂದರ್ಯದ ವಿರುದ್ಧ ಸಿಡಿದು ಮಾತಾಡಿದಳು. ಮೀಡಿಯಾಗೆ ಪೋಸ್ ನೀಡಬೇಕೆಂದು, FBಗಾಗಿ ಬಿಚ್ಚಮ್ಮನ ಪೋಸ್ ನೀಡುವ ದುರ್ಗತಿ ತನಗಿಲ್ಲ, ನಾನು ದಪ್ಪಗಿದ್ದರೆ ಇರಲಿ, ನನ್ನ ನಟನೆ ನೋಡಿ ಎನ್ನುತ್ತಾಳೆ.
ಸರಿಯಾಗಿ ಸಿಕ್ಕಿಬಿದ್ದ ಶರ್ಲಿನ್ ಚೋಪ್ರಾ
ತಾನಾಗಿ ಮಾಡಿಕೊಂಡ ಹಗರಣದಿಂದಾಗಿ ಶಿಲ್ಪಾ ಶೆಟ್ಟಿಯ ಪತಿ ಜೇಲಿನ ಅತಿಥಿಯಾಗಿದ್ದರೆ, ಅದನ್ನು ಖಂಡಿಸಿ ಹಲವಾರು ಮಾಡೆಲ್, ನಟಿಯರು ಆತನ ಪರವಾಗಿ ಮಾತನಾಡುತ್ತಿದ್ದಾರೆ. ಅವರಲ್ಲಿ ಪ್ರಮುಖಳು ನಟಿ ಶರ್ಲಿನ್ ಚೋಪ್ರಾ. ಆಕೆ ತಾನಾಗಿ ಮುಂದೆ ಬಂದು ಪೊಲೀಸರಿಗೆ ಆತನ ಪರ ಹೇಳಿಕೆ ಕೊಟ್ಟಿದ್ದಲ್ಲದೆ, FBನಲ್ಲಿ ರಾಜ್ ಕುಂದ್ರಾ ಜೊತೆಗಿನ ತನ್ನ ಫೋಟೋ ಹಂಚಿಕೊಂಡಾಗ, ಎಲ್ಲರ ಮುಂದೆ ಛೀ ಥೂ ಎಂದು ಉಗಿಸಿಕೊಂಡಳು. ಏಕೆಂದರೆ FB ಯೂಸರ್ಸ್, ಇದರಲ್ಲಿ ಈಕೆ ಬೇಕೆಂದೇ ಪಬ್ಲಿಸಿಟಿ ಸ್ಟಂಟ್ ಗಾಗಿ ತನ್ನ ಗ್ಲಾಮರಸ್ ಫೋಟೋ ಎಡಿಟ್ ಮಾಡಿ ಹಾಕಿಕೊಂಡಿದ್ದಾಳೆಯೇ ಹೊರತು ಆತನ ಕಾಳಜಿಗಾಗಿ ಅಲ್ಲ ಎಂದು ಸತತ ಟ್ರೋಲ್ ಮಾಡುತ್ತಿದ್ದಾರೆ. ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳಬೇಕೇ?
ಮಲೈಕಾಳಿಗೆ ಈಗ ಬೇಕಿರುವುದು ಒಬ್ಬ ಮಗಳು!
ಮಲೈಕಾ ಅರೋರಾ (ಶ್ರೀದೇವಿಯ ಮಲಮಗನ ಖಾಸಾ ಗರ್ಲ್ ಫ್ರೆಂಡ್, ಸಲ್ಮಾನ್‌ನ ಮಾಜಿ ಅತ್ತಿಗೆ) ಈಗಾಗಲೇ ಒಬ್ಬ ಗಂಡು ಮಗನ ತಾಯಿ. ಈಗ ಅವಳಿಗೆ ಒಂದು ಹೆಣ್ಣು ಮಗಳು ಬೇಕಂತೆ, ಹೆಂಗರುಳಿಗಿರುವ ಮಹತ್ವ ಗಂಡು ಮಕ್ಕಳಿಗಿಲ್ಲ ಎನ್ನುತ್ತಾಳೆ. ಈಗ ಜಡ್ಜ್ ಆಗಿ ಸೂಪರ್ ಡ್ಯಾನ್ಸರ್ ಚಾಪ್ಟರ್ ಶೋಗೆ ಹೋಗಿದ್ದಾಗ, ಅಲ್ಲಿನ ಅಭ್ಯರ್ಥಿ ಫ್ಲೋರಿನಾಳ ಡ್ಯಾನ್ಸ್ ನೋಡಿ, ಅಶ್ರುಪೂರಿತಳಾಗಿ ತನ್ನ ಮನದ ಮಾತನ್ನು ಹೀಗೆ ಹೊರ ಚೆಲ್ಲಿದಳು. ಇಂಥ ಹೆಣ್ಣು ಮಕ್ಕಳು ಯಾರಿಗೆ ತಾನೇ ಬೇಡ?
ಚಹರೆ ಚಿತ್ರ ರಿಲೀಸ್ ಆಯ್ತು
ಬಿಗ್ ಬಿ ಅಮಿತಾಬ್ ರ `ಚಹರೆ’ ಚಿತ್ರ ರಿಲೀಸ್ ಅಂತೂ ಇಂತೂ ಆಯ್ತು. ಇದು ಆಗಸ್ಟ್ 27 ರಂದು ಸಿನಿಮಾ ಥಿಯೇಟರಿನಲ್ಲಿ ಬಿಡುಗಡೆ ಕಂಡಿದ್ದರೆ, OTTನಲ್ಲೂ ಅಂದೇ ಹೊರಬಿತ್ತು. ಇದರ ಕುರಿತಾಗಿ ಇಡೀ ಚಿತ್ರತಂಡ ಬಹಳ ಎಗ್ಸೈಟ್ ಆಗಿರುವಂತೆ ವೀಕ್ಷಕರೂ ಸಹ ಬಹುಕಾಲದಿಂದ ಕಾಯುತ್ತಿದ್ದರು. ಇದರಲ್ಲಿ ಬಚ್ಚನ್ ಜೊತೆ ಇಮ್ರಾನ್ ಹಾಶ್ಮಿ, ರಿಯಾ ಚಕ್ರವರ್ತಿ, ಅನು ಕಪೂರ್ ರಂಥ ಘಟಾನುಘಟಿ ಸ್ಟಾರ್ಸ್ ಇದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇದರ ಹಣೆಬರಹ ತಿಳಿಯಲಿದೆ!
ನವ್ಯಾಳಿಗೆ ಏಕೆ ಇಷ್ಟು ಕೋಪ?
ಅಮಿತಾಬ್ ರ ಮೊಮ್ಮಗಳು ಈ ನವ್ಯಾ. ಇದುವರೆಗೂ ಬೆಳ್ಳಿ ತೆರೆಯಲ್ಲಿ ಕಾಣಿಸದಿದ್ದರೂ, ಈಕೆಯ ಫ್ಯಾನ್ ಫಾಲೋಯರ್ಸ್ ಮಾತ್ರ ಯಾವ ಸೆಲೆಬ್ರಿಟಿಗೂ ಏನೂ ಕಡಿಮೆ ಇಲ್ಲ. ಇದನ್ನು ಈಕೆ ಅಜ್ಜಿ ತಾತರ ಖ್ಯಾತಿಯಿಂದಲ್ಲ, ಬಾಯಿಗೆ ಬಂದಂತೆ ದಬಾಯಿಸುವ ತನ್ನ ವಾಚಾಳಿತನದಿಂದ ಪಡೆದಿದ್ದಾಳೆ. ಇವಳ ತಾಯಿ (ಅಮಿತಾಬ್ ರ ಮಗಳು) ಕುರಿತಾಗಿ ಯಾರೋ ವ್ಯಂಗ್ಯವಾಗಿ ಟ್ರೋಲ್ ಮಾಡಿದಾಗ, ಕೆಂಡಾಮಂಡಲ ಕೋಪದಿಂದ ಇವಳು ಅವರನ್ನು ಬಗ್ಗು ಬಡಿದಳು, ಟ್ರೋಲಿಗರು ತೆಪ್ಪಗಾದರು. ತಕ್ಕ ಶಾಸ್ತಿ ಮಾಡುವುದೆಂದರೆ ಇದೇ ಅಲ್ಲವೇ?
ನೇಹಾ ಕಕ್ಕಡ್ ಳ ಹೊಸ ಅವತಾರ
ನೇಹಾ ಕಕ್ಕಡ್ ತನ್ನ ಕ್ಯೂಟ್‌ನೆಸ್ ಕಾರಣ ಮಾತ್ರವಲ್ಲದೆ, ತನ್ನ ಹಾಡುಗಾರಿಕೆಯಿಂದಲೂ ಸದಾ ಚರ್ಚೆಯಲ್ಲಿರುತ್ತಾಳೆ. ತನ್ನ ಹುಡುಗಾಟಿಕೆಯ ಸ್ವಭಾವದಿಂದ ಜನ ಸದಾ ತನ್ನನ್ನು FBನಲ್ಲಿ ಫಾಲೋ ಮಾಡುತ್ತಿರುವಂತೆ ನೋಡಿಕೊಳ್ಳುತ್ತಾಳೆ. ಇತ್ತೀಚೆಗೆ ಇವಳು ನೀಟಾಗಿದ್ದ ತನ್ನ 2 ಜಡೆ ಕತ್ತರಿಸಿ ಹಾಕಿ, ಹೊಸ ಹೇರ್ ಸ್ಟೈಲಿನಲ್ಲಿ ಈ ಅವತಾರದಲ್ಲಿ ಎಲ್ಲೆಲ್ಲೂ ಕಾಣಿಸಿದಳು. ಅವಳ ಈ ವಿಡಿಯೋ ಬಹು ಬೇಗ ವೈರಲ್ ಆಗಿ ಚರ್ಚೆಗೆ ಗ್ರಾಸವಾಯಿತು. ಇವಳ ಫ್ಯಾನ್ಸ್ ಈ ಹೊಸ ಲುಕ್ ನ್ನು ಬಹಳ ಮೆಚ್ಚಿದರು. ಇದು ಇವಳ ಹುಡುಗಾಟಿಕೆಯೋ ಅಥವಾ ಪಬ್ಲಿಸಿಟಿ ಸ್ಟಂಟೋ ಎಂಬುದು ಅವಳಿಗೇ ಗೊತ್ತು!
ಸೋನು ಸೂದ್ ನ ವಿಡಿಯೋ ವೈರಲ್
ಆ್ಯಕ್ಟಿಂಗ್ ದೃಷ್ಟಿಯಲ್ಲಿ ಸೋನು ಸೂದ್ ಸದಾ ಮುಂದು. ಕೊರೋನಾ ಕಾಲದಲ್ಲಿ ಅಸಹಾಯಕರ ಗಾಡ್ ಫಾದರ್ ಎನಿಸಿ ಇಡೀ ದೇಶ ನೆನಪಿಡುವಂತೆ ಮಾಡಿದ. ಈತನ ವಿಡಿಯೋಸ್ FBನಲ್ಲಿ ಬಲು ಜನಪ್ರಿಯ. ಆದರೆ ಈತ ಅನುಷ್ಕಾಳ ಜೊತೆಗಿದ್ದ ಮಸ್ತಿ ಮೋಜಿನ ವಿಡಿಯೋ ವೈರಲ್ ಆಗುತ್ತದೆಂದು ಯಾರೂ ಊಹಿಸಿರಲಿಲ್ಲ. ಅಸಲಿಗೆ ಈತ `ಖತರೋಂಕಿ ಕೇ ಖಿಲಾಡಿ ಸ್ಟಂಟ್ ಶೋ ಸೀಸನ್-11′ ಶೋದ ಅಭ್ಯರ್ಥಿ ಅನುಷ್ಕಾ ಸೇನ್ ಳನ್ನು ಛೇಡಿಸಲು ಕೆಲವು ಗೂಂಡಾಗಳು ಮುಂದಾದಾಗ ಈತ ಬಂದು ಅವರ ಬೆಂಡೆತ್ತುತ್ತಾನೆ. ಅಯ್ಯೋ…… ಇದು ರಿಯಲ್ ಅಲ್ಲ, ಕೇಲ ರೀಲ್ ಅಷ್ಟೇ.