ಅಂದಹಾಗೆ ನೀವು ಹಲವು ಬಗೆಯ ಆಹಾರಗಳ ಬಗ್ಗೆ ಕೇಳಿರಬಹುದು. ಚೈನೀಸ್ ಫುಡ್, ಮೊಘಲಾಯ್ ಫುಡ್, ಇಟಾಲಿಯನ್ ಫುಡ್, ಥಾಯ್ ಫುಡ್ ಹೀಗೆ ಅನೇಕ ಪ್ರಕಾರಗಳಿವೆ. ಆದರೆ ನೀವು `ಲವ್ ಫುಡ್’ ಬಗ್ಗೆ ಕೇಳಿದ್ದೀರಾ? ಇಲ್ಲವೆಂದರೆ ಅಂತಹ ಕೆಲವು ರೆಸಿಪೀಸ್, ಲವ್ ಫ್ರೂಟ್ಸ್ ಮತ್ತು ಡ್ರಿಂಕ್ಸ್ ಬಗ್ಗೆ ತಿಳಿದುಕೊಳ್ಳಿ.
ಆಯ್ ಸ್ಟರ್ ಡ್ರಮ್ ಸ್ಟಿಕ್ ಕರಿ : ಡ್ರಮ್ ಸ್ಟಿಕ್ ಅಂದರೆ ನುಗ್ಗೆಕಾಯಿಯಲ್ಲಿ ಲವ್ ಫೀಲಿಂಗ್ಸ್ ಹೆಚ್ಚಿಸುವ ಕೆಲವು ವಿಶೇಷತೆಗಳಿವೆ ಮತ್ತು ಆಯ್ ಸ್ಟರ್ (ಸೀ ಫುಡ್ಸ್) ಜೊತೆ ಡ್ರಮ್ ಸ್ಟಿಕ್ ರೊಮ್ಯಾಂಟಿಕ್ ಫೀಲಿಂಗ್ಸ್ ನ್ನು ದ್ವಿಗುಣಗೊಳಿಸುತ್ತದೆ.
ಚೀಸ್ ಕೇಕ್ ವಿತ್ ಸ್ಟ್ರಾಬೆರಿ : ಸ್ಟ್ರಾಬೆರಿಯನ್ನು ಚೀಸ್ ಜೊತೆ ಸೇರಿಸಿ ರೊಮ್ಯಾಂಟಿಕ್ ಫುಡ್ ರೂಪದಲ್ಲಿ ಸರ್ವ್ ಮಾಡಲಾಗುತ್ತದೆ.
ಹಲ್ವಾ : ರವೆ ಅಥವಾ ಕಡಲೆಹಿಟ್ಟು ಮತ್ತು ಡ್ರೈ ಫ್ರೂಟ್ಸ್ ನಿಂದ ತಯಾರಿಸಿದ ಈ ಸಿಹಿ ಪದಾರ್ಥದಲ್ಲಿ ಲವ್ ಹಾರ್ಮೋನ್ ಉತ್ಪತ್ತಿಯಾಗಲು ನೆರವಾಗುತ್ತದೆ ಮತ್ತು ರೊಮ್ಯಾಂಟಿಕ್ ಫೀಲಿಂಗ್ ಹೆಚ್ಚಿಸುತ್ತದೆ.
ಖೀರು :
ಹಾಲು ಮತ್ತು ಡ್ರೈ ಫ್ರೂಟ್ಸ್ ನಿಂದ ತಯಾರಾದ ಈ ಸ್ವೀಟ್ ಡಿಶ್ ನಿಮ್ಮ ಮೂಡ್ ನ್ನು ಉತ್ತೇಜಿಸುತ್ತದೆ. ಡ್ರೈ ಫ್ರೂಟ್ಸ್ ನ ಕಾಮೋತ್ತೇಜಕ ಗುಣ ಹಾಲಿನ ಜೊತೆಗೆ ಸೇರಿ ಲವ್ ಫೀಲಿಂಗ್ಸ್ ನ್ನು ಹೆಚ್ಚಿಸುತ್ತದೆ.
ಐಸ್ ಕ್ರೀಮ್ ವಿತ್ ನಟ್ಸ್ : ಐಸ್ ಕ್ರೀಮ್ ನಲ್ಲಿ ಬೆರೆತ ನಟ್ಸ್, ಬಾದಾಮಿ, ಅಖರೋಟ್ ಮುಂತಾದ ರೊಮ್ಯಾಂಟಿಕ್ ಫೀಲಿಂಗ್ ಹೆಚ್ಚಿಸುತ್ತವೆ.
ಸ್ಟ್ರಾಬೆರಿ ವಿತ್ ಚಾಕ್ಲೆಟ್ :
ಸ್ಟ್ರಾಬೆರಿ ಜೊತೆಗೆ ಚಾಕ್ಲೆಟ್ ಮಿಶ್ರಣ ಮಾಡಿ ತಿನ್ನುವುದನ್ನು ಎಲ್ಲಕ್ಕೂ ಹೆಚ್ಚು ರೊಮ್ಯಾಂಟಿಕ್ ಎಂದು ಭಾವಿಸಲಾಗುತ್ತದೆ. ಚಾಕ್ಲೆಟ್ ಮನುಷ್ಯನ ಮೂಡ್ ನ್ನು ಹಗುರ ಹಾಗೂ ನಿರಾಳಗೊಳಿಸುತ್ತದೆ. ಸ್ಟ್ರಾಬೆರಿ ಉತ್ತೇಜನ ಹೆಚ್ಚಿಸುತ್ತದೆ.
ಚಾಕ್ಲೆಟ್ :
ಇದು ಮನುಷ್ಯನ ಮೂಡ್ ನ್ನು ಫ್ರೆಶ್ ಹಾಗೂ ಖುಷಿಯುಕ್ತಗೊಳಿಸುತ್ತದೆ. ಜೊತೆಗೆ ಲವ್ ಕೆಮಿಕಲ್ಸ್ ಕೂಡ ಬಿಡುಗಡೆಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಇದನ್ನು ಮೂಡ್ ಚೇಂಜಿಂಗ್ ಫುಡ್ ಎಂದು ಕರೆಯುತ್ತಾರೆ. ಇದರಿಂದ ವ್ಯಕ್ತಿಯೊಬ್ಬನಲ್ಲಿ ರೊಮ್ಯಾಂಟಿಕ್ ಫೀಲಿಂಗ್ಸ್ ಹೆಚ್ಚುತ್ತವೆ.
ಸ್ಟ್ರಾಬೆರಿ :
ಇದರಲ್ಲಿ ವಿಟಮಿನ್ `ಸಿ’ ಇರುತ್ತದೆ. ಇದು ಆ್ಯಂಟಿ ಆಕ್ಸಿಡೆಂಟ್ ನ ಕೆಲಸ ಮಾಡುತ್ತದೆ. ದೇಹದ ಮಾಂಸಖಂಡಗಳಿಗೆ, ಸ್ನಾಯುಗಳಿಗೆ ಅತ್ಯಗತ್ಯ.
ಅವಾಕಾಡೊ : ಇದರ ಆಕಾರದ ಕಾರಣದಿಂದ ಇದನ್ನು `ಲವ್ ಫುಡ್’ ಎಂದು ಹೇಳುತ್ತಾರೆ. ಇದರಲ್ಲಿ ವಿಟಮಿನ್ `ಇ’ ಮತ್ತು `ಬಿ6′ ಇರುತ್ತದೆ. ಇದು ರೊಮ್ಯಾಂಟಿಕ್ ಫೀಲಿಂಗ್ಸ್ ಮತ್ತು ಎನರ್ಜಿಗೆ ಅತ್ಯವಶ್ಯ.
ಅಂಜೂರ : ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು ಇರುತ್ತವೆ. ಇವು ಆರೋಗ್ಯಕರ ದೇಹ ಮತ್ತು ಲವ್ ಫೀಲಿಂಗ್ಸ್ ಗೆ ಅತ್ಯವಶ್ಯ.
ರಾಸ್ಬೆರಿ :
ಗುಲಾಬಿ ಕುಟುಂಬಕ್ಕೆ ಸೇರಿದ ಕಾರಣದಿಂದ ಇದನ್ನು `ಫ್ರೂಟ್ ಆಫ್ ಲವ್’ ಎಂದು ಕರೆಯಲಾಗುತ್ತದೆ. ಇದರಲ್ಲಿ ನಾರಿನಂಶ, ವಿಟಮಿನ್ `ಸಿ’ ಮತ್ತು ಮ್ಯಾಂಗನೀಸ್ ಇರುತ್ತದೆ. ಇದು ದೇಹವನ್ನು ಆರೋಗ್ಯದಿಂದಿಡಲು ರೊಮ್ಯಾಂಟಿಕ್ ಫೀಲಿಂಗ್ ಹೆಚ್ಚಿಸಲು ನೆರವಾಗುತ್ತದೆ. ಇದನ್ನು ಕೇಕ್ ಹಾಗೂ ಐಸ್ ಕ್ರೀಮ್ ಗಳಲ್ಲಿ ಬಳಸಲಾಗುತ್ತದೆ.
ಬಾಳೆಹಣ್ಣು :
ಇದರಲ್ಲಿ ಪೊಟ್ಯಾಶಿಯಂ ಹಾಗೂ ವಿಟಮಿನ್ `ಬಿ’ ಇರುತ್ತದೆ. ಅವು ಸೆಕ್ಸ್ ಹಾರ್ಮೋನ್ ಉತ್ಪತ್ತಿಗೆ ನೆರವಾಗುತ್ತದೆ.
ದಾಳಿಂಬೆ : ಇದನ್ನು ಸಂತಾನದ ಪ್ರತೀಕ ಎಂದು ಹೇಳಲಾಗುತ್ತದೆ. ಇದನ್ನು ಕಸ್ಟರ್ಡ್ ಮತ್ತು ಮಿಲ್ಕ್ ಶೇಕ್ ಗಾಗಿ ಬಳಸಲಾಗುತ್ತದೆ. ಇದರಲ್ಲಿ ಕಬ್ಬಿಣಾಂಶ ಹೇರಳ ಪ್ರಮಾಣದಲ್ಲಿದ್ದು, ಪುರುಷ ಹಾರ್ಮೋನ್ ಗಾಗಿ ಉಪಯುಕ್ತವಾಗಿದೆ.
ಗೆಣಸು : ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿರುತ್ತದೆ. ಅದು ರೊಮ್ಯಾಂಟಿಕ್ ಫೀಲಿಂಗ್ ಹೆಚ್ಚಿಸಲು ನೆರವಾಗುತ್ತದೆ. ಇದನ್ನು ಹೆಚ್ಚಿನ ಪ್ರಮಾಣದ ಉಪ್ಪಿನೊಂದಿಗೆ ಸೇವಿಸಬಾರದು. ಏಕೆಂದರೆ ಇದು ಅದರ ಪರಿಣಾಮವನ್ನು ಕಡಿಮೆಗೊಳಿಸುತ್ತದೆ.
ರೊಮ್ಯಾಂಟಿಕ್ ಫುಡ್ ಗಳ ಜೊತೆ ಜೊತೆಗೆ ಡ್ರಿಂಕ್ಸ್ ನ ಪ್ರಯೋಗ ಕೂಡ ಲವ್ ಫೀಲಿಂಗ್ಸ್ ನ್ನು ಹೆಚ್ಚಿಸುತ್ತದೆ. ಹೆಚ್ಚಿನ ಜನರು ಸ್ಟ್ರಾಬೆರಿ ಶೇಕ್ ಇಷ್ಟಪಡುತ್ತಾರೆ. ಇನ್ನು ಕೆಲವರು ವೆನಿಲಾ ಕಾಫಿ ಕುಡಿಯುತ್ತಾರೆ. ಜೇನುತುಪ್ಪವನ್ನು `ಫುಡ್ ಆಫ್ ಹನಿಮೂನ್’ ಎಂದು ಹೇಳಲಾಗುತ್ತದೆ.
– ಪುಷ್ಪಾ ಭಟ್