30 ವರ್ಷದ ಅನಿಲ್ ‌ಕಂಪನಿಯೊಂದರಲ್ಲಿ ಪ್ರಾಡಕ್ಟ್ ಮ್ಯಾನೇಜರ್‌ ಆಗಿದ್ದಾರೆ. ತಮ್ಮ ಮೊದಲ ಕ್ರಶ್‌ ಭಾವನೆಯ ಬಗ್ಗೆ ಹೀಗೆ ಹೇಳುತ್ತಾರೆ, “ನಾನಾಗ 10ನೇ ತರಗತಿಯಲ್ಲಿದ್ದೆ. ಅವಳು ನನಗಿಂತ 1 ವರ್ಷ ಚಿಕ್ಕವಳು. ಅವಳು ಹೈಸ್ಕೂಲಿನ ಹುಡುಗಿಯರಲ್ಲಿಯೇ ಜನಪ್ರಿಯಳಾಗಿದ್ದಳು. ನಾನೂ ಕೂಡ ಅವಳನ್ನು ಸಾಕಷ್ಟು ಹೊಗಳುತ್ತಿದ್ದೆ. ನಾನು ಅವಳ ಬಗ್ಗೆ ಎಷ್ಟೊಂದು ಆಕರ್ಷಿತನಾಗಿದ್ದೆನೆಂದರೆ, ಅವಳ ಮುಖ ನೋಡದೆ ಇರಲು ನನಗೆ ಆಗುತ್ತಿರಲಿಲ್ಲ. ಅವಳಿಂದಾಗಿ ನಾನು ದಿನ ಬೇಗನೇ ಶಾಲೆಗೆ ಬರುತ್ತಿದ್ದೆ. ಅವಳೊಂದಿಗೆ ಡ್ಯಾನ್ಸ್ ಮಾಡಲು ನನಗೆ ಅವಕಾಶ ಸಿಕ್ಕಿತ್ತು. ಅದು ನನ್ನ ಮೊದಲ ಪ್ರೀತಿಯ ಆರಂಭವಾಗಿತ್ತು. ಆ ವಯಸ್ಸಿನ ಪ್ರೀತಿ ನಿಲ್ಲುವುದಿಲ್ಲ ಎನ್ನುತ್ತಾರೆ.

“ನನ್ನ ಜೀವನದಲ್ಲೂ ಹಾಗೆಯೇ ಆಯಿತು. ಅವಳನ್ನು ನಾನು ಬಹಳ ಪ್ರೀತಿಸುತ್ತೇನೆ ಎಂದುಕೊಂಡಿದ್ದೆ. ಆದರೆ ತಿಂಗಳಾಗುವಷ್ಟರಲ್ಲಿ ನನ್ನ ಹೃದಯದಿಂದ ಅವಳ ನೆನಪು ಹೊರಟುಹೋಯಿತು. ಆಗ ನನಗೆ ಇದು ಇನಾಫ್ಯಾಚ್ಯುಯೇಶನ್‌ಅಂದರೆ ಕೇವಲ ಆಸಕ್ತಿ, ಆಕರ್ಷಣೆ ಎಂದು ಗೊತ್ತಾಯಿತು.”

ತಜ್ಞರ ಪ್ರಕಾರ, ಇನ್‌ ಫ್ಯಾಚ್ಯುಯೇಶನ್‌ ತೀವ್ರತೆ ಪಡೆದುಕೊಂಡು ಸ್ವಲ್ಪ ಸಮಯದ ಮಟ್ಟಿಗೆ ಪ್ರಶಂಸೆಯ ಭಾವನೆ ಹೊಂದಿರುತ್ತದೆ. ಅದನ್ನು `ಕ್ರಶ್‌’ ಎಂದೂ ಹೇಳಲಾಗುತ್ತದೆ.

ಮನೋತಜ್ಞೆ ಹಾಗೂ ಕೌನ್ಸಿಲರ್‌ ಅಂಕಿತಾ  ಹೀಗೆ ಹೇಳುತ್ತಾರೆ, “ನಿಮಗೆ ಆ ವ್ಯಕ್ತಿಯ ಜೊತೆ ಇರಲು ತೀವ್ರ ಇಚ್ಛೆ ಉಂಟಾಗುತ್ತದೆ. ಆ ವ್ಯಕ್ತಿ ನಿಮ್ಮ ವಿಚಾರ ನಿಮ್ಮ ನಿದ್ರೆ, ದಿನಚರಿ ಹಾಗೂ ಊಟತಿಂಡಿಯ ಅಭ್ಯಾಸಗಳನ್ನು ಕೂಡ ಪ್ರಭಾವಿತಗೊಳಿಸಬಹುದು.”

ಇನ್‌ ಫ್ಯಾಚ್ಯುಯೇಶನ್‌ ಎನ್ನುವುದು ಬ್ರೇನ್‌ ಕೆಮಿಸ್ಟ್ರಿ ಮೇಲೆ ಪ್ರಭಾವ ಬೀರುತ್ತದೆ. ಒಂದೆಡೆ ಪುರುಷ ತೆಳ್ಳಗೆ, ಸ್ಮಾರ್ಟ್‌ ಆಗಿರುವ ಮಹಿಳೆಯ ಬಗ್ಗೆ ಆಕರ್ಷಿತನಾಗಬಹುದು. ಆಧುನಿಕ ಸಂಬಂಧದಲ್ಲಿ ಹಲವು ಬದಲಾವಣೆಗಳಾಗಿವೆ. ಅಂಕಿತಾ ಈ ಬಗ್ಗೆ ಹೇಳುವುದು ಹೀಗೆ, “ಇನ್‌ ಫ್ಯಾಚ್ಯುಯೇಶನ್‌ ನಲ್ಲಿ ನನಗೆ ಒಮ್ಮೊಮ್ಮೆ ಪ್ರೀತಿಯಾಗಿದೆ ಎನಿಸುತ್ತದೆ. ಆದರೆ ಹಾಗೇನೂ ಅಲ್ಲ. ಅದು ಯಾವಾಗಲಾದರೂ ಅಂತ್ಯಗೊಳ್ಳಬಹುದು.”

ಗುರುತಿಸುವುದು ಹೇಗೆ?

ವಿಶೇಷಜ್ಞರು ಇನ್‌ ಫ್ಯಾಚ್ಯುಯೇಶನ್‌ ನ್ನು ಗುರುತಿಸುವುದು ಹಾಗೂ ಅದರಿಂದ ಹೇಗೆ ಹೊರಬರಬೇಕು ಎನ್ನುವುದರ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ. 27 ವರ್ಷದ ದೀಪಿಕಾ ಹೀಗೆ ಹೇಳುತ್ತಾರೆ, “ಕಾಲೇಜಿನಲ್ಲಿ ನನಗೆ ಓರ್ವ ಪ್ರತಿಭಾವಂತ, ಕ್ರಿಯೇಟಿವ್‌, ವ್ಯಕ್ತಿ ಬಗ್ಗೆ ಆಸಕ್ತಿ ಹುಟ್ಟಿತು. ಅವನ ಜೊತೆ ಸಂಬಂಧ ಇಟ್ಟುಕೊಳ್ಳಲು ನಾನು ಬಯಸಿದ್ದೆ. ಆದರೆ ಅವನು ನನ್ನ ಮೇಲೆ ಡಾಮಿನೇಟ್‌ ಮಾಡಲು ಶುರು ಮಾಡಿದೆ. ಅವನೊಂದಿಗೆ ಮಾತುಕತೆ ನಡೆಸಿದಾಗ ನಾನು  ಅಂದುಕೊಂಡಂತೆ ಅವನಲ್ಲಿ ಅಂತಹ ವಿಶೇಷತೆ ಏನಿಲ್ಲ ಎಂದು ಮನವರಿಕೆಯಾಯಿತು. ಹೀಗಾಗಿ ನಾನು ಕ್ರಮೇಣ ಅವನಿಂದ ದೂರವಾಗುತ್ತ ಬಂದೆ, ಅವನು ನನ್ನನ್ನು ಸಂಪರ್ಕಿಸಲು ಅದೆಷ್ಟೋ ಸಲ ಪ್ರಯತ್ನ ಮಾಡಿದ. ಆದರೆ ನನಗೆ ಅವನ ಬಗ್ಗೆ ಆಸಕ್ತಿ ಸಂಪೂರ್ಣ ಹೊರಟು ಹೋಗಿತ್ತು.”

ಕನ್ಸಲ್ಟೆಂಟ್‌ ಹಾಗೂ ಮನೋತಜ್ಞ ರವಿ ಹೀಗೆ ಹೇಳುತ್ತಾರೆ, “ನಮ್ಮ ಮೆದುಳಿನಲ್ಲಿ ಕೆವಲ ಪ್ಲೇಜರ್‌ ಸೆಂಟರ್ಸ್‌ ನಿಂದ ಡೋಪಾಮೈನ್‌ ಹೆಚ್ಚಾಗಿ ಉತ್ಪತ್ತಿಯಾಗುವುದರಿಂದ ತಮ್ಮ ಕ್ರಶ್‌ ಬಗ್ಗೆ ಅತೀ ಪ್ರೀತಿ ಹುಟ್ಟಲಾರಂಭಿಸುತ್ತದೆ. ಅದೇ ಸಮಯದಲ್ಲಿ ಸೆರೋಟೋನಿನ್‌ ನ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ. ಅದು ಫೀಲ್ ಗುಡ್‌ ಹಾರ್ಮೋನ್‌. ಅದರ ಪರಿಣಾಮ ಎಂಬಂತೆ ನಮ್ಮ ಭಾವನೆಗಳಲ್ಲಿ ಏರಿಳಿತ ಉಂಟಾಗುತ್ತದೆ. ಕ್ರಶ್‌ ನಲ್ಲಿ ಯಾವ ಪ್ರತಿಕ್ರಿಯೆ ಹೊರಹೊಮ್ಮುತ್ತಿರುತ್ತೊ ಅದೇ ರೀತಿ ನಮ್ಮ ಮೂಡ್‌ ಇರುತ್ತದೆ.”

ಏನು ಮಾಡಬೇಕು?

ನಿಮಗೆ ಯಾರ ಬಗೆಗಾದರೂ ಇನ್‌ ಫ್ಯಾಚ್ಯುಯೇಶನ್‌ ಉಂಟಾದರೆ, ನೀವು ಆ ವ್ಯಕ್ತಿಯ ವ್ಯಕ್ತಿತ್ವದ ಒಂದಷ್ಟು ಭಾಗ ಮಾತ್ರ ನೋಡುತ್ತಿದ್ದೀರಿ ಅನಿಸುತ್ತಿವೆ. ವಾಸ್ತವದಲ್ಲಿ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ನೀವು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ.

ಡಾ. ರವಿ ಹೇಳುವುದೇನೆಂದರೆ, “ಇನ್‌ ಫ್ಯಾಚ್ಯುಯೇಶನ್‌ ಗೆ ಕುಮ್ಮಕ್ಕು ಕೊಡಬೇಡಿ. ನೀವು ಕ್ರಶ್‌ ನಿಂದ ಸ್ವಲ್ಪ ಬ್ರೇಕ್‌ ತಗೊಳ್ಳಿ. ಆಗ ನಿಮಗೆ ವಾಸ್ತವ ಸ್ಥಿತಿ ಅರಿವಿಗೆ ಬರುತ್ತದೆ.”

ಕ್ರಶ್‌ ನ ನಕಾರಾತ್ಮಕ ಸಂಗತಿಗಳ ಮೇಲೂ ಗಮನಕೊಡಿ. ಅದರ ಕೊರತೆಗಳ ಬಗ್ಗೆ ಯೋಚಿಸಿ. ಈವೆಂಟ್‌ ಮ್ಯಾನೇಜರ್ ಜಯಂತ್‌ ಹೇಳುತ್ತಾರೆ, “ಶಾಲೆಯಲ್ಲಿ ನಾನು ಕ್ಲಾಸಿನ ಅತ್ಯಂತ ಸುಂದರ ಹುಡುಗಿಯ ಬಗ್ಗೆ ಆಕರ್ಷಿತಳಾಗಿದ್ದೆ. ಅವಳು ಕುಳಿತುಕೊಳ್ಳುತ್ತಿದ್ದ ಸವಾಲಿನಲ್ಲಿಯೇ ಕೆಲವು ದಿನಗಳ ಕಾಲ ಕುಳಿತುಕೊಳ್ಳುತ್ತಿದ್ದೆ. ಅವಳೊಂದಿಗೆ ಮಾತನಾಡುವ ಧೈರ್ಯ ನನಗಿರಲಿಲ್ಲ. ಆದರೆ ಅವಳೊಂದಿಗಿನ ನನ್ನ ಕ್ರಶ್‌ ಹೆಚ್ಚುತ್ತಲಿತ್ತು.

“ಅದೊಂದು ದಿನ ಅವಳಿಗೆ ನಾನು ನನ್ನ ಮನಸ್ಸಿನ ಮಾತನ್ನು ಹೇಳಿಬಿಟ್ಟೆ. ಆಗ ನನಗೆ ಅವಳು ಮತ್ತೊಬ್ಬ ಹುಡುಗನನ್ನು ಇಷ್ಟಪಡುತ್ತಿರುವ ವಿಷಯ ತಿಳಿಯಿತು. ಆ ಘಟನೆಯಿಂದ ನಾನೊಂದು ಪಾಠ ಕಲಿತೆ. ಆ ಕ್ರಶ್‌ ನಿಂದ ಹೊರಬರಲು ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಎಷ್ಟು ಸಮ ಕಳೆಯಲು ಸಾಧ್ಯವೋ ಅಷ್ಟು ಹೆಚ್ಚು ಸಮಯ ಕಳೆಯಬೇಕೆಂದು ನಿರ್ಧರಿಸಿದೆ. ಹೀಗಾಗಿ ನಿಮಗೆ ನಿಮ್ಮ  ಕ್ರಶ್‌ ಬಗ್ಗೆ ಯೋಚಿಸಲು ಅಥವಾ ಅದರ ಬಗ್ಗೆ ನೆನಪಿಸಿಕೊಳ್ಳಲು ಸಮಯ ದೊರೆಯುವುದಿಲ್ಲ.”

ಡಾ. ಅಖಿಲ್ ‌ಹೀಗೆ ಹೇಳುತ್ತಾರೆ, “ನಿಮ್ಮ ಮೆದುಳಿನಲ್ಲಿರುವ ಸೆರೋಟೋನಿನ್‌ ನ ಹೆಚ್ಚಿದ ಮಟ್ಟ ನಿಮ್ಮ ಮೂಡ್‌ ಸ್ವಿಂಗ್ಸ್ ನ್ನು ನಿಯಂತ್ರಣ ಮಾಡುವಲ್ಲಿ ನೆರವಾಗುತ್ತದೆ. ಅದಕ್ಕಾಗಿ ಸಾಕಷ್ಟು ವ್ಯಾಯಾಮ ಮಾಡಿ. ನಮಗೆ ಯಾರ ಮೇಲಾದರೂ ಇನ್ ಫ್ಯಾಚ್ಯುಯೇಶನ್‌ ಉಂಟಾದರೆ, ನಾವು ನಮ್ಮ ಕ್ರಶ್‌ ನ ಪ್ರತಿಕ್ರಿಯೆ ಮತ್ತು ಶಬ್ದಗಳ ಮೇಲೆ ಬಹಳ ಗಮನ ಕೊಡುತ್ತೇವೆ. ಅವರ ಸೋಶಿಯಲ್ ಮೀಡಿಯಾ ಪ್ರೊಫೈಲ್ಸ್ ನ್ನು ಮೇಲಿಂದ ಮೇಲೆ ಗಮನಿಸುತ್ತೇನೆ.” ಮನೋಚಿಕಿತ್ಸಕ ಡಾ. ಪವನ್‌ ಹೇಳುವುದು ಹೀಗೆ, “ಇಂತಹದರಲ್ಲಿ ಆ ವ್ಯಕ್ತಿಯಿಂದ ದೈಹಿಕವಾಗಿ ಮತ್ತು ವರ್ಚುವಲ್ ‌ಆಗಿ ಅಂತರ ಕಾಪಾಡಿಕೊಳ್ಳಿ. ಆ ವ್ಯಕ್ತಿಯಿಂದ ನಿಮ್ಮನ್ನು ನೀವು ದೂರ ಇಟ್ಟುಕೊಳ್ಳುವುದು ಅವಶ್ಯ.”

40 ವರ್ಷದ ಸ್ವಾತಿ ಶೇಖರ್‌ ತಮ್ಮ ಅನುಭವ ಹಂಚಿಕೊಳ್ಳುತ್ತ ಹೀಗೆ ಹೇಳುತ್ತಾರೆ, “ಆಗ ನನಗೆ 28 ವರ್ಷ. ನಾನು ಸಹೋದ್ಯೋಗಿಯೊಬ್ಬರ ಬಗ್ಗೆ ಅದೆಷ್ಟು ಆಕರ್ಷಿತಳಾಗಿದ್ದೆ ಎಂದರೆ, ನನ್ನ ಗಮನವನ್ನು ಅವನಿಂದ ಬೇರೆಡೆಗೆ ಹರಿಸಲು ಆಗುತ್ತಿರಲಿಲ್ಲ. ಅದೊಂದು ದಿನ ಆತ ವಿವಾಹಿತ ಎನ್ನುವುದು ನನ್ನ ಗಮನಕ್ಕೆ ಬಂತು. ಆಗ ನನ್ನ ಹೃದಯ ಚೂರುಚೂರಾದ ಹಾಗೆ ಅನಿಸಿತು. ಈ ಪ್ರಕರಣದಲ್ಲಿ ನಾನೊಬ್ಬಳೇ ಅವನ ಬಗ್ಗೆ ಆಕರ್ಷಿತಳಾಗಿದ್ದೆ ಎನ್ನುವುದು ತಿಳಿದುಬಂತು.”

ತಜ್ಞರ ಪ್ರಕಾರ, ನಿಮ್ಮ ಕ್ರಶ್‌ ಕೂಡ ನಿಮ್ಮ ಹಾಗೆಯೇ ಭಾವನೆಗಳನ್ನು ಪ್ರಸ್ತುತಪಡಿಸಬಹುದು. ಆದರೆ ಅವುಗಳ ಬಗ್ಗೆ ಪ್ರಾಮಾಣಿಕತೆ ತೋರಿಸಬೇಕು. ಇಬ್ಬರೂ ಈ ಸಂಬಂಧದಲ್ಲಿ ಪರಸ್ಪರರ ಕೊರತೆಗಳನ್ನು ಹಾಗೂ ವಿಶೇಷತೆಗಳನ್ನು ಅರ್ಥ ಮಾಡಿಕೊಳ್ಳಬೇಕು.

ಡಾ. ಪವನ್‌ ಪ್ರಕಾರ, “ನಿಮ್ಮ ಆತ್ಮಗೌರವದ ಬಗ್ಗೆ ಗಮನ ಕೊಡಬೇಕು. ನಿಮ್ಮ ಬಗ್ಗೆ ಒಳ್ಳೆ ಭಾವನೆ ತೋರಿಸಲು ಬೇರೆಯವರನ್ನು ಅವಲಂಬಿಸಲು ಹೋಗಬೇಡಿ.”

ಮನೋತಜ್ಞೆ ಡಾ. ಪ್ರಜ್ವಲಾ ಹೇಳುವುದು ಹೀಗೆ, “ಒಂದು ವೇಳೆ ನೀವು ಇತರರ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚಿಸುತ್ತಿದ್ದರೆ, ಅದರ ಮೇಲೆ ನಿಯಂತ್ರಣ ಹೊಂದಲು ಅಸಮರ್ಥರಾಗಿದ್ದರೆ, ನೀವು ನಿಮ್ಮ ವಿಚಾರಗಳ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಿ. ಒಂದು ನೋಟ್‌ ಬುಕ್‌ ನಲ್ಲಿ ನೀವು ನಿಮ್ಮ ಉದ್ದೇಶಗಳನ್ನು ಸ್ಪಷ್ಟವಾಗಿ ಬರೆಯಿರಿ. ನೀವು ನಿಮ್ಮ ರೊಟೀನ್‌ ಹೇಗೆ ರೂಪಿಸಿಕೊಳ್ಳಬೇಕೆಂದರೆ, ಅದರ ಬಗ್ಗೆ ಯೋಚಿಸಲು ನಿಮಗೆ ಸ್ವಲ್ಪ ಸಮಯ ಸಿಗಬಾರದು.”

ಜೀವನದಲ್ಲಿ ಖುಷಿಯಿಂದಿರಲು ಮತ್ತು ಮುಂದೆ ಸಾಗಲು ಕೆಲವು ಸಂಗತಿಗಳ ಮೋಹ ತೊರೆಯುವುದು ಒಳ್ಳೆಯದು ಪ್ರೀತಿಯ ಹಿಂದೆ ಧಾವಿಸಬೇಡಿ. ನಿಮ್ಮ ವಿಶೇಷತೆಗಳಿಂದ ಜನ ನಿಮ್ಮ ಹಿಂದೆ ಬರಬೇಕು.

ಸಿ.ಎಸ್‌. ಚಂದ್ರಕಲಾ

ಒಂದು ವೇಳೆ ನೀವು ಯಾರ ಬಗೆಗಾದರೂ ಹೀಗೆಯೇ ಸದಾ ಪರಧ್ಯಾನದಲ್ಲಿದ್ದರೆ, ನೀವು ಇನ್‌ ಫ್ಯಾಚ್ಯುಯೇಶನ್‌ ನ ಜಾಲದಲ್ಲಿ ಸಿಲುಕಿದ್ದೀರಿ ಎಂದರ್ಥ.

ನೀವು ಅದರ ಬಗ್ಗೆಯೇ ಯೋಚಿಸುತ್ತ ಇರುತ್ತೀರಿ. ಕೆಲಸದ ಬಗ್ಗೆ ಗಮನ ಕೊಡುವುದು ನಿಮಗೆ ಕಷ್ಟವಾಗುತ್ತದೆ.

ಅದು ವಾಟ್ಸ್ ಆ್ಯಪ್‌, ಇಮೇಲ್ ‌ಆಗಿರಬಹುದು. ಆ ವ್ಯಕ್ತಿ ಸಂಪರ್ಕಕ್ಕೆ ಬರುತ್ತಿದ್ದಂತೆ ನೀವು ಉತ್ಸಾಹಿತರಾಗಬಹುದು, ಉತ್ತೇಜಿತರಾಗಬಹುದು.

ನಿಮ್ಮ ಎನರ್ಜಿ ಲೆವೆಲ್ ‌ತುಂಬಾ ಉನ್ನತ ಮಟ್ಟದ್ದಾಗಿರಬಹುದು. ನಿಮಗೆ ಊಟದ್ದಾಗಲಿ, ನಿದ್ದೆಯದ್ದಾಗಲಿ ಅವಶ್ಯಕತೆ ಇಲ್ಲ ಅನಿಸಬಹುದು.

ಆ ವ್ಯಕ್ತಿ ನಿಮಗೆ ಅತ್ಯಂತ ಪರ್ಫೆಕ್ಟ್ ಅನಿಸಬಹುದು. ಆ ವ್ಯಕ್ತಿಯಲ್ಲಿ ಯಾವುದೇ ಕೊರತೆ ಕಾಣದಿರಬಹುದು.

ಆ ವ್ಯಕ್ತಿಯ ನಿಕಟವರ್ತಿಗಳ ಬಗ್ಗೆ ನಿಮಗೆ ಅಸೂಯೆ ಎನಿಸಬಹುದು.

ನೀವು ಯಾವ ರೀತಿ ಅಪೇಕ್ಷಿಸುತ್ತೀರೋ, ಆ ರೀತಿಯ ಸ್ಪಂದನೆ ದೊರೆಯದಿದ್ದಾಗ ನಿಮಗೆ ಅಸುರಕ್ಷಿತತೆ ಎನಿಸಬಹುದು. ಚಿಂತೆಯಾಗಬಹುದು.

ನಿಮಗೆ ಗಲಿಬಿಲಿ ಆಗಬಹುದು. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ