ಹೊಸ ಹೊಸ ಫ್ಯಾಷನ್ ಫಾಲೋ ಮಾಡುವುದು ಇತ್ತೀಚಿನ ಹೊಸ ಟ್ರೆಂಡ್ ಆಗಿಹೋಗಿದೆ. ಹೀಗಾಗಿ ಫ್ಯಾಷನ್ ಡಿಸೈನರ್ಸ್ ಸಹ ಇದಕ್ಕಾಗಿ ವಿಭಿನ್ನ ರೀತಿಯ ಪ್ರಯೋಗಳಿಗೆ ಮುಂದಾಗಿದ್ದಾರೆ. ಇಯರ್ ರಿಂಗ್ಸ್ ಇರಲಿ ಅಥವಾ ಸೀರೆಗಳು, ಇವುಗಳಲ್ಲಿ ಟ್ರೈಬಲ್ ಲುಕ್ಸ್ ಸಾಕಷ್ಟು ಜನಪ್ರಿಯ. ಇತ್ತೀಚೆಗಂತೂ ಟ್ರೈಬಲ್ ಪ್ರಿಂಟ್ಸ್ ಎಲ್ಲಾ ರೀತಿಯ ಪೋಷಾಕುಗಳಲ್ಲೂ ಕಂಡುಬರುತ್ತಿವೆ. ಆದಿವಾಸಿಗಳು ಪ್ರಕೃತಿ ಮತ್ತು ಕಾಡು ಪ್ರಾಣಿಗಳೊಂದಿಗೆ ಹೆಚ್ಚು ನಿಕಟವಾಗಿರುತ್ತಾರೆ. ಹೀಗಾಗಿ ಡ್ರೆಸ್ ಮೆಟೀರಿಯಲ್ ನಲ್ಲೂ ನ್ಯಾಚುರಲ್ ಪ್ರಿಂಟ್ಸ್ ಕಲರ್ ನ ಬಳಕೆ ಹೆಚ್ಚುತ್ತಿದೆ. ಟ್ರೈಬಲ್ ಪ್ರಿಂಟ್ಸ್ ವುಳ್ಳ ವೆಸ್ಟರ್ನ್ ಡ್ರೆಸೆಸ್ ಸಹ ಸಾಕಷ್ಟು ಜನಪ್ರಿಯ. ಈ ಡ್ರೆಸೆಸ್ ಒಂದು ಫ್ಯೂಷನ್ ಲುಕ್ ನೀಡುತ್ತವೆ, ಜೊತೆಗೆ ಪ್ರಿಂಟ್ಸ್ ಸಹ ಸಾಕಷ್ಟು ಟ್ರೆಂಡಿ ಎನಿಸುತ್ತವೆ. ಟ್ರೈಬಲ್ ಲುಕ್ ನ ಸೀರೆಗಳೂ ಸಹ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿವೆ. ಅದರಲ್ಲೂ ವಿಶೇಷವಾಗಿ ಕಾಟನ್‌ಹ್ಯಾಂಡ್ ಲೂಮ್ ನ ಟ್ರೈಬಲ್ ಪ್ರಿಂಟ್ಸ್ ನ ಈ ಸೀರೆಗಳು ಕ್ಲಾಸಿಕ್‌ಎಲಿಗೆಂಟ್ ಲುಕ್ಸ್ ನೀಡುತ್ತವೆ. ಐಶ್ವರ್ಯಾ ರೈಳಿಂದ ಹಿಡಿದು ಜೆನೆಲಿಯಾ, ಬಿಪಾಶಾವರೆಗೂ ಈ ತರಹದ ಸೀರೆಗಳನ್ನು ಉಟ್ಟು ಸಿನಿಮಾಗಳಲ್ಲಿ ಮಿಂಚಿರುವುದನ್ನು ಗಮನಿಸಬಹುದು.
ಆಫ್ರಿಕನ್ ಪ್ರಿಂಟ್ಸ್ ಸಹ ಟ್ರೈಬಲ್ ಲುಕ್ಸ್ ನಲ್ಲಿ ತಮ್ಮದೇ ಆದ ಪಟ್ಟಭದ್ರ ಸ್ಥಾನ ಹೊಂದಿವೆ. ಆಫ್ರಿಕನ್ ಪ್ರಿಂಟ್ ನ ಸ್ಕಾರ್ಫ್ ನಿಂದ ಹಿಡಿದು ಬೆಡ್ ಶೀಟ್ಸ್, ಕುಶನ್ಸ್ ವರೆಗೂ ಎಲ್ಲೆಡೆ ಜನಪ್ರಿಯತೆ ಗಳಿಸಿವೆ. ಆಫ್ರಿಕನ್ ಪ್ರಿಂಟ್ಸ್ ನ ಸಲ್ವಾರ್ ಸೂಟ್ ನ ಟ್ರೆಂಡ್ ಸಹ ಹೆಚ್ಚುತ್ತಿದೆ. ಟ್ರೈಬಲ್ ಲುಕ್ಸ್ ನ್ನು ಟ್ರೆಡಿಷನಲ್ ಸೂಟ್, ಸೀರೆಗಳ ಜೊತೆ ಕೇಪ್ರಿ, ಪ್ಯಾಂಟ್, ಟ್ಯೂನಿಕ್ ನಿಂದ ಹಿಡಿದು ಮಿನೀಸ್ ವರೆಗೂ ಟ್ರೈ ಮಾಡಬಹುದು. ಟ್ರೈಬಲ್ ಪ್ರಿಂಟ್ಸ್ ಪ್ಯಾಂಟ್ ಗೆ ಕೂಲ್ ಲುಕ್ಸ್ ಕೊಡುತ್ತವೆ. ಇದನ್ನು ನೀವು ಬಾಯ್ ಫ್ರೆಂಡ್ ಶರ್ಟ್ ಜೊತೆ ಮ್ಯಾಚ್ ಮಾಡಿ ಧರಿಸಬಹುದು. ಟ್ರೈಬಲ್ ಪ್ರಿಂಟ್ಸ್ ನ ಪ್ಲಾಜೋ ಪ್ಯಾಂಟ್ ಸಹ ಧರಿಸಬಹುದು. ಇವನ್ನು ಟ್ಯಾಂಗ್/ಕ್ರಾಪ್ ಟಾಪ್ ಜೊತೆ ಕ್ಯಾರಿ ಮಾಡಬಹುದು.
ಸ್ಪೆಷಲ್ ಜ್ಯೂವೆಲರಿ
ಉಡುಗೆ ತೊಡುಗೆಗಳ ಜೊತೆ ಜ್ಯೂವೆಲರಿಯಲ್ಲೂ ಸಹ ಟ್ರೈಬಲ್ ಲುಕ್ಸ್ ನ್ನು ಗಮನಿಸಬಹುದು. ಟ್ರೈಬಲ್ ಇಯರ್ ರಿಂಗ್ಸ್ ತರುಣಿಯರಿಂದ ಹಿಡಿದು ಪ್ರೌಢ ಮಹಿಳೆಯವರೆಗೂ ಎಲ್ಲರಿಗೂ ಒಪ್ಪುತ್ತದೆ. ಇದರ ಮುಖ್ಯ ವೈಶಿಷ್ಟ್ಯವೆಂದರೆ ಇವು ಟ್ರೆಡಿಶನ್ ಯಾ ಟ್ರೆಂಡಿ, ಎಲ್ಲಾ ಬಗೆಯ ಲುಕ್ಸ್ ಜೊತೆಗೂ ಹೊಂದಿಕೊಳ್ಳುತ್ತವೆ. ಆದಿವಾಸಿ ಕ್ಷೇತ್ರಗಳಲ್ಲಿ ವಾಸಿಸುವ ಹೆಚ್ಚಿನ ಮಹಿಳೆಯರು ಬಲು ಹೆವಿ ಜ್ಯೂವೆಲರಿ ಧರಿಸುತ್ತಾರೆ. ಆದರೆ ಡಿಸೈನರ್ಸ್ ತಮ್ಮ ಡಿಸೈನ್ ಗಳನ್ನು ಸಾಕಷ್ಟು ಲೈಟ್ ವೆಯ್ಟ್ ಆಗಿಯೇ ಇರಿಸುತ್ತಾರೆ. ಅಷ್ಟಲೋಹ, ತಾಮ್ರದ ತಂತಿಯ ಜೊತೆ ಮಿಕ್ಸ್ಡ್ ಸಿಲ್ವರ್ ನಿಂದ ತಯಾರಾದ ಈ ಟ್ರೈಬಲ್ ಜ್ಯೂವೆಲರಿ, ಇಂಡೋವೆಸ್ಟರ್ನ್ ಔಟ್ ಫಿಟ್ಸ್ ಜೊತೆ ಅತ್ಯುತ್ತಮ ಎನಿಸುತ್ತದೆ. ಇದರಲ್ಲಿ ಅನಿಮಲ್ ಜ್ಯೂವೆಲರಿಯಂಥ ಟರ್ಟ್ ರಿಂಗ್ಸ್, ಔಟ್ ಚೇನ್, ಪ್ಯಾರೆಟ್ ಇಯರ್ ರಿಂಗ್ಸ್, ಲೀಫ್ ಸೆಟ್ ಇತ್ಯಾದಿ ಇತ್ತೀಚೆಗೆ ಬಹಳ ಚಾಲ್ತಿಯಲ್ಲಿವೆ.
ಈಚೀಚೆಗೆ ಮಾರ್ಕೆಟ್ ನಲ್ಲಿ ಬೆಳ್ಳಿ ಜೊತೆ ವೈಟ್/ಬ್ಲ್ಯಾಕ್ ಮೆಟಲ್ ನಿಂದ ತಯಾರಾದ ಇಯರ್ ರಿಂಗ್ಸ್ ಸಹ ಜನಪ್ರಿಯಗೊಳ್ಳುತ್ತಿವೆ. ಟ್ರೈಬಲ್ ಬೋಹೋ ಬ್ಯಾಂಗಲ್ಸ್ ಸಹ ವಿಭಿನ್ನ ಲುಕ್ಸ್ ನೀಡುತ್ತವೆ. ಇವನ್ನು ವೆಸ್ಟರ್ನ್ ನಿಂದ ಹಿಡಿದು ಟ್ರೆಡಿಶನಲ್ ಉಡುಗೆಗಳವರೆಗೆ ಎಲ್ಲದರ ಜೊತೆ ಧರಿಸಬಹುದು. ಬೋಹೋ ಬಳೆಗಳನ್ನು ಕಡಗ ಅಥವಾ ಬ್ರೇಸ್ಲೆಟ್ ತರಹ ಧರಿಸಬಹುದು. ಟ್ರೈಬಲ್ ಪ್ರಿಂಟ್ಸ್ ನ ಸ್ಕಾರ್ಫ್ ಸಾಕಷ್ಟು ಸ್ಮಾರ್ಟ್ ಲುಕ್ ನೀಡುತ್ತವೆ. ಇವನ್ನು ಜೀನ್ಸ್ ಡ್ರೆಸ್ ಯಾ ಕುರ್ತಿ ಜೀನ್ಸ್ ಯಾವುದರ ಜೊತೆಯಾದರೂ ಧರಿಸಬಹುದು. ನೀವು ನಿಮ್ಮ ಫಾರ್ಮ್/ ಕ್ಯಾಶ್ಯುಯೆಲ್ ಟ್ರೈಬಲ್ ಸ್ಕಾರ್ಫ್ ನ್ನು ಎಲ್ಲಾ ಔಟ್ ಫಿಟ್‌ಗಳ ಜೊತೆ ಕ್ಯಾರಿ ಮಾಡಬಹುದಾಗಿದೆ. ನೀವು ಪ್ಲೇನ್ ಡ್ರೆಸ್ ಧರಿಸಿದ್ದರೆ ಅದರ ಜೊತೆ ಟ್ರೈಬಲ್ ಪ್ರಿಂಟ್ಸ್ ಸ್ಕಾರ್ಫ್ ಕ್ಯಾರಿ ಮಾಡಿ. ಇದು ನಿಮ್ಮ ಡ್ರೆಸ್ ನ್ನು ಇನ್ನಷ್ಟು ಆಕರ್ಷಕಗೊಳಿಸುತ್ತದೆ. ನೀವು ಬ್ರೋಚ್ ಧರಿಸುವರಾದರೆ, ಸೀರೆಯಲ್ಲಿ ಟ್ರೈಬಲ್ ಬ್ರೋಚ್ ಬಳಸಬಹುದಾಗಿದೆ.
ಮೇಕಪ್ ಮೇಲಿನ ಜಾದೂ
ಇಂದಿನ ಆಧುನಿಕ ಯುವತಿಯರಲ್ಲಿ ಟ್ರೈಬಲ್ ಲುಕ್ಸ್ ಮೇಕಪ್ ನ ಹೆಚ್ಚುತ್ತಿರುವ ಕ್ರೇಝ್ ನ್ನು ಕಾಣಬಹುದು. ಟ್ರೈಬಲ್ ಲುಕ್ಸ್ ನೀಡಲು ಕಂಗಳ ವಿಶೇಷ ಮೇಕಪ್ ಮಾಡಲಾಗುತ್ತದೆ. ಇದರಿಂದ ಕಂಗಳು ಬೋಲ್ಡ್ ಆಗುತ್ತವೆ. ಇದಕ್ಕಾಗಿ ಮೇಲೆ ಮತ್ತು ಕೆಳಗಿನ ಎರಡೂ ಐಲಿಡ್ಸ್ ನ್ನು ಉತ್ತಮ ರೀತಿಯಲ್ಲಿ ಹೈಲೈಟ್ ಮಾಡಲಾಗುತ್ತದೆ. ಕಂಗಳ ವಿಸ್ತಾರ ಹೆಚ್ಚಿಸಲು ಕಾಜಲ್ ದಟ್ಟವಾಗಿ ತೀಡಲ್ಪಡುತ್ತದೆ. ಇದಾದ ನಂತರ ಐ ಶ್ಯಾಡೋದಿಂದ ಕಂಗಳಿಗೆ ಬೋಲ್ಡ್ ಲುಕ್ ನೀಡಲಾಗುತ್ತದೆ. ನಂತರ ಮಸ್ಕರಾ ಹಚ್ಚಿ ಕೃತಕ ಲ್ಯಾಶೆಸ್ ಅಳವಡಿಸಬಹುದು.
ತುಟಿಗಳಿಗೆ ಟ್ರೈಬಲ್ ಲುಕ್ಸ್ ನೀಡಲು ಲಿಕ್ವಿಡ್ ಫೌಂಡೇಶನ್ ಹಾಗೂ ಬ್ರಾಂಝರ್ ಬಳಸುತ್ತಾರೆ. ಆದರೆ ಇದನ್ನು ಬಲು ಕನಿಷ್ಠ ಪ್ರಮಾಣದಲ್ಲಿ ಮಾತ್ರ ಬಳಸುತ್ತಾರೆ, ಲಿಪ್ ಸ್ಟಿಕ್ ಗಾಗಿ ಮ್ಯಾಟ್ ಕಲರ್ಸ್ ಆರಿಸಿ ಅಥವಾ ಕೆಂಪು ಕೆಂಪಾದ ಶೇಡ್ ನ ಲಿಪ್ ಸ್ಟಿಕ್ ಸಹ ಆದೀತು.
ಮುಂದೆ ಹೇರ್ ಸ್ಟೈಲ್ ವಿಷಯಕ್ಕೆ ಬಂದರೆ, ಈ ಲುಕ್ಸ್ ಗಾಗಿ ಕೂದಲನ್ನು ಓಪನ್ ಅಥವಾ ಸಡಿಲ ಬಿಡಿ. ಕೈ ಬೆರಳುಗಳಿಂದಲೇ ಕೂದಲನ್ನು ಬೇರ್ಪಡಿಸಿ. ಓಪನ್ ಆಗಿರುವ, ಸಾಧಾರಣ ಕರ್ಲ್ಡ್ ಹೇರ್ ಈ ಸ್ಟೈಲಿಗೆ ಉಪಯುಕ್ತ. ಆದಿವಾಸಿ ಮಹಿಳೆಯರು ತಮ್ಮ ಕೂದಲನ್ನು ಸಿಂಗರಿಸಲು ಬಗೆಬಗೆಯ ಭಾರಿ ಒಡವೆಗಳನ್ನು ಬಳಸುತ್ತಾರೆ. ಅವನ್ನೇ ಆಧಾರವಾಗಿಸಿಕೊಂಡು ಇತ್ತೀಚೆಗೆ ತಯಾರಾಗುತ್ತಿರುವ ಡಿಸೈನ್ ಗಳು, ಫ್ಯಾಷನ್ ಜ್ಯೂವೆಲರಿ ಎನಿಸುತ್ತವೆ.
– ಬಿ. ಸುಮನಾ