ಇಂದಿನ ಲೇಟೆಟ್ ಫ್ಯಾಷನ್‌ ನಲ್ಲಿ ಪೇಸ್ಟಲ್ ಕಲರ್‌ ಟ್ರೆಂಡ್‌ ನಲ್ಲಿದೆಯೇ ಅಥವಾ ನಿಯಾನ್‌? ಪ್ಲೇರ್‌ ಪ್ರಿಂಟ್ಸ್ ಚಾಲ್ತಿಯಲ್ಲಿದೆಯೇ ಅಥವಾ ಸ್ಟ್ರೈಪ್ಸ್? ಕಾಟನ್‌ ಹೆಚ್ಚು ಟ್ರೆಂಡಿಯೇ ಅಥವಾ ಶಿಫಾನ್‌…..? ನೋ….ನೋ….ನೋ….! ನೀವು ಇಷ್ಟೆಲ್ಲ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಬನ್ನಿ, ಈ ಕುರಿತಾಗಿ ನಮ್ಮ ಫ್ಯಾಷನ್‌ ಡಿಸೈನರ್ಸ್‌ ಏನು ಹೇಳುತ್ತಾರೆಂದು ವಿವರವಾಗಿ ನೋಡೋಣ……

ಫ್ಯಾಷನ್‌ಬ್ಯೂಟಿ ಒಂದನ್ನೊಂದು ಬಿಟ್ಟಿರಲಾಗದು. ನೀವು ಎಂತಹ ಉಡುಗೆ ಧರಿಸುತ್ತೀರಿ, ಹೇಗೆ ಬೇರೆಯವರ ಎದುರು ನಿಮ್ಮನ್ನು ನೀವು ಪ್ರಸ್ತುತಪಡಿಸುತ್ತೀರಿ, ನಿಮ್ಮ ಉಡುಗೆ ಎಷ್ಟು ಠಾಕುಠೀಕಾಗಿದೆ, ನಿಮ್ಮ ಗ್ಲಾಮರ್‌ ಕೋಶೆಂಟ್‌ ಎಷ್ಟು, ನೀವು ಎಲ್ಲಾ ವಿಧದಲ್ಲೂ ಅಪ್‌ ಟು ಡೇಟ್‌ ಆಗಿದ್ದೀರಾ….. ಇತ್ಯಾದಿ ಎಲ್ಲಾ ವಿಷಯಗಳೂ ನೀವು ಲೇಟೆಸ್ಟ್ ಫ್ಯಾಷನ್‌ ಕುರಿತು ಎಷ್ಟು ತಿಳಿದುಕೊಂಡಿದ್ದೀರಿ ಎನ್ನುವುದರನ್ನು ಅವಲಂಬಿಸಿದೆ.

ಆಕರ್ಷಕ ವ್ಯಕ್ತಿತ್ವ ಹೊಂದಲಿಕ್ಕಾಗಿ ಕೇವಲ ಸೌಂದರ್ಯ ಒಂದೇ ಮಾನದಂಡಲ್ಲ… ಕಾಲಕ್ಕೆ ತಕ್ಕಂತೆ ಫ್ಯಾಷನ್‌ ಜೊತೆ ಹೆಜ್ಜೆ ಹಾಕುವುದೂ ಅಷ್ಟೇ ಮುಖ್ಯ. ಬನ್ನಿ, ಆಧುನಿಕ ಲೇಟೆಸ್ಟ್ ಫ್ಯಾಷನ್‌ ಟ್ರೆಂಡ್‌ ಕುರಿತು ವಿವರವಾಗಿ ತಿಳಿದುಕೊಳ್ಳೋಣ?:

ಲ್ಯಾಗಿಂಗ್ಸ್ ಮತ್ತು ಕುರ್ತಿಗಳು :

ವಿವಿಧ ಡಿಸೈನಿನ ಬಗೆಬಗೆಯ ಕಲರ್‌ ಫುಲ್ ಕುರ್ತಿಗಳ ಜೊತೆ ಟೈಟ್‌ ಫಿಟೆಡ್‌ ಲ್ಯಾಗಿಂಗ್ಸ್ ಲೇಟೆಸ್ಟ್ ಫ್ಯಾಷನ್‌ ಟ್ರೆಂಡ್‌ ಎನಿಸಿದೆ. ಸಿಂಪಲ್ ಹಾಗೂ ಸ್ಟೈಲಿಶ್‌ ಆಗಿ ಕಂಡುಬರುವ ಈ ಉಡುಗೆ, ಪ್ರತಿಯೊಬ್ಬ ವಯಸ್ಸಿನವರು ಹಾಗೂ ಯಾವುದೇ ವಿಧದ ದೈಹಿಕ ರಚನೆಯುಳ್ಳವರಿಗೂ ಕಂಫರ್ಟೆಬಲ್ ಎನಿಸುತ್ತದೆ. ಮೈಕಟ್ಟು ಎಂಥದೇ ಇರಲಿ, ಅವರ ಗಾತ್ರ ಹೇಗೇ ಇರಲಿ, ಸ್ಟ್ರೆಚೆಬಲ್ ಆದಕಾರಣ ಲ್ಯಾಗಿಂಗ್ಸ್ ಎಲ್ಲ ಮಂದಿಗೂ ಫಿಟ್‌ ಆಗುತ್ತದೆ.

ಹೊಸ ಟ್ರೆಂಡ್‌ ನ ವಿಷಯದ ಕುರಿತು ಹೇಳುವಾಗ ಮೊದಲೆಲ್ಲ ಕುರ್ತಿ ಜೊತೆ ಮ್ಯಾಚಿಂಗ್‌ ಲ್ಯಾಗಿಂಗ್ಸ್ ನ ಟ್ರೆಂಡ್‌ ಇತ್ತು. ಆದರೆ ಈಗ ಕಾಂಟ್ರಾಸ್ಟ್ ಕಲರ್‌ ನ ಲ್ಯಾಗಿಂಗ್ಸ್ ಚಾಲ್ತಿಯಲ್ಲಿದೆ. ಇದೇ ತರಹ ಈಗ ಪಿಂಕ್‌, ಗ್ರೀನ್‌, ರೆಡ್‌ ಇತ್ಯಾದಿ ಮಲ್ಟಿ ಕಲರ್ಡ್ ಕುರ್ತಿಗಳಿಗೆ ಬದಲಾಗಿ ಕಾಂಟ್ರಾಸ್ಟ್ ಕಲರ್‌ ನ ಕುರ್ತಿಗಳು ಚಾಲ್ತಿಯಲ್ಲಿವೆ. ಹ್ಞಾಂ, ಕುರ್ತಿಗಳು ಬ್ರೈಟ್‌ ಕಲರ್‌ ನಲ್ಲಿದ್ದರೆ ಲ್ಯಾಗಿಂಗ್ಸ್ ಲೈಟ್‌ ಕಲರ್‌ ಇರಬೇಕು. ಅಕಸ್ಮಾತ್‌ ಕುರ್ತಿ ಬ್ಲ್ಯಾಕ್‌ವೈಟ್‌ ಆಗಿದ್ದರೆ, ನೀವು ಯಾವುದೇ ಯೋಚನೆಯಿಲ್ಲದೆ ಯೆಲ್ಲಾ ಲ್ಯಾಗಿಂಗ್ಸ್ ಧರಿಸಬಹುದು. ಸಡಿಲ ಕುರ್ತಿ ಜೊತೆ ಟೈಟ್‌ ಲ್ಯಾಗಿಂಗ್ಸ್ ಫ್ಯಾಷನ್‌ ಸ್ಟೇಟ್‌ ಮೆಂಟ್‌ ಆಗಿದೆ.

ಕೊಚ್ಚಿನ್‌ ಮೂಲದ ಫ್ಯಾಷನಿಸ್ಟ ಮಾಡೆಲ್ ನಯನಾ ನೆಲ್ಸನ್‌ ರ ಪ್ರಕಾರ, “ಭವಿಷ್ಯದಲ್ಲಿ ಒಂದು ಸ್ಪೆಷಲ್ ಡ್ರೆಸ್‌ ಫ್ಯಾಷನ್ ಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆಯಲಿದೆ. ಅದೆಂದರೆ ಲೂಸ್‌ ಬೆಲ್ ಪ್ಯಾಂಟ್‌ಕುರ್ತಾ. ಶಿಫಾನ್‌ ಮೆಟೀರಿಯಲ್ ನಲ್ಲಿ ಲಭ್ಯವಿರುವ ಈ ಡ್ರೆಸ್‌ನ ಲೆಂಥ್‌ ತುಸು ಕಡಿಮೆ ಇರುತ್ತದೆ.”

ಟಾಪ್ಸ್ : ಇತ್ತೀಚಿನ ದಿನಗಳಲ್ಲಿ ಫ್ಲೇಯರ್ಡ್‌ ಟಾಪ್‌ಶರ್ಟ್‌ ಟಾಪ್‌ ಟ್ರೆಂಡ್‌ನಲ್ಲಿವೆ. ಇದರ ಜೊತೆಯಲ್ಲೇ ಯೂಥ್‌ ಗೆ ಇಷ್ಟವಾಗುವಂಥ ಮತ್ತೊಂದು ಮಾಡ್‌ ಡ್ರೆಸ್‌ ಸಹ ಫ್ಯಾಷನ್‌ ಜಗತ್ತಿನಲ್ಲಿ ಭದ್ರ ನೆಲೆ ಕಾಣುತ್ತಿದೆ, ಅದುವೇ ಬೆಲೂನ್‌ ಟಾಪ್‌. ನೀವು ದಪ್ಪ ಅಥವಾ ಸಣ್ಣ ಇರಲಿ, ಪ್ರತಿಯೊಬ್ಬರಿಗೂ ಸೂಟ್‌ ಆಗುವ ಈ ಟಾಪ್‌ ಧರಿಸಲು ಕಂಫರ್ಟೆಬಲ್ ಹಾಗೂ ನೋಡಲು ಸ್ಮಾರ್ಟ್‌ ಎನಿಸುತ್ತದೆ. ಟಮಿ ಹೊರಗೆ ಇಣುಕಿದ್ದರೂ ಸಹ, ಬೆಲೂನ್‌ ಟಾಪ್‌ ನಿಂದ ಅದನ್ನು ಮುಚ್ಚಬಹುದಾಗಿದೆ. ಇದರಿಂದ ದಪ್ಪಗಿರುವವರು ತಮ್ಮನ್ನು ಸ್ಲಿಮ್ ಎಂಬಂತೆ ಸ್ಮಾರ್ಟಾಗಿ ತೋರಿಸಿಕೊಳ್ಳಬಹುದು.

ಜ್ಯಾಕೆಟ್ಶ್ರಗ್‌ : ಇತ್ತೀಚೆಗೆ ಜ್ಯಾಕೆಟ್‌ಶ್ರಗ್‌ ಸಹ ಫ್ಯಾಷನ್‌ ನಲ್ಲಿದೆ. ಇದು ನಿಮಗೆ ಸ್ಮಾರ್ಟ್‌ಎನರ್ಜೆಟಿಕ್‌ ಲುಕ್ಸ್ ನೀಡುತ್ತದೆ. ಫುಲ್ ಸ್ಲೀವ್ ‌ಶ್ರಗ್‌ ನಿಮ್ಮ ಬಾಹುಗಳನ್ನು ಬಿಸಿಲಿನ ಝಳದಿಂದ ರಕ್ಷಿಸಿದರೆ, ಅದುವೇ ಚಳಿ ಇರುವಾಗ ಬೆಚ್ಚಗೆ ಇಡುತ್ತದೆ. ಡೆನಿಮ್, ಕಾಟನ್‌ ಹಾಗೂ ಹೌಜರಿಗಳಲ್ಲಿ ಲಭ್ಯವಿರುವ ಡಿಫರೆಂಟ್‌ ಕಲರ್‌ನ ಶ್ರಗ್‌/ಜ್ಯಾಕೆಟ್‌ ಗಳ ಬೆಲೆ ರೂ.150 ರೂ. 2,000ರವರೆಗೆ ಇದೆ,  ನಿಮಗೆ ಬೇಕಾದ ರೇಂಜ್‌ ಆರಿಸಿಕೊಳ್ಳಿ.

ವೇಸ್ಟ್ ಕೋಟ್‌ :

 

ಹೌಜರಿ ಸ್ಟಫ್‌ ನಲ್ಲಿ ಬರುವ ವೇಸ್ಟ್ ಕೋಟ್‌ ಸಹ ಈಗೆಲ್ಲ ಜನಪ್ರಿಯವಾಗಿದೆ. ನಿಮ್ಮ ಕುರ್ತಾ ಗ್ರೀನ್‌ ಇದ್ದರೆ, ಕಾಂಟ್ರಾಸ್ಟ್ ಕಲರ್‌ ನ ವೇಸ್ಟ್ ಕೋಟ್‌ ಧರಿಸಿರಿ. ಚಂದೇರಿ ಸಿಲ್ಕ್ ಹಾಗೂ ಜೂಟ್‌ ಸಿಲ್ಕ್ ನ ವೇಸ್ಟ್ ಕೋಟ್‌ ಸಹ ಫ್ಯಾಷನ್ ನಲ್ಲಿವೆ.

ಸಲ್ವಾರ್‌/ ಚೂಡೀದಾರ್‌ : ಸಲ್ವಾರ್‌ ಸೂಟ್‌ ಗಳಲ್ಲಿ ಇತ್ತೀಚೆಗೆ ಅಂಬ್ರೆಲಾ ಕಟಿಂಗ್‌ ಟ್ರೆಂಡ್‌ ನಲ್ಲಿದೆ. ಇದರಿಂದ ಸಲ್ವಾರ್‌ ಸೂಟ್‌ ಸಹ ಪಾರ್ಟಿವೇರ್‌ ಲುಕ್‌ ನೀಡುತ್ತದೆ. ಯೋಕ್‌ ನಲ್ಲಿ ಬ್ರೋಕೇಡ್‌ ಲೇಸ್‌, ಬೀಡಿಂಗ್‌ ಇತ್ಯಾದಿಗಳಿಂದ ಸಿಂಗರಿಸಿ. ಫ್ಯಾಷನೆಬಲ್ ಲುಕ್ಸ್ ಒದಗಿಸಬಹುದಾಗಿದೆ. ಧೋತಿ ಸಲ್ವಾರ್‌ ಹಾಗೂ ಪ್ರಿಂಟೆಡ್‌ ಪಟಿಯಾಲಾ ಸಲ್ವಾರ್‌ ಸಹ ಫ್ಯಾಷನ್‌ ನಲ್ಲಿವೆ.

ನಯನಾ ನೆಲ್ಸನ್‌ ಹೇಳುತ್ತಾರೆ, ಬ್ರೋಕೇಡ್‌ ಔಟ್‌ ಆಫ್‌ ಫ್ಯಾಷನ್‌ ಆಗಿದೆ. ಲೇಸ್‌ ನಿಂದ ಸ್ಟೈಲ್ ‌ಹೆಚ್ಚಿಸುವುದು ಟ್ರೆಂಡ್‌ನಲ್ಲಿದೆ.

1 ಮೀ. ಲೇಸ್‌ ರೂ.30-200ರವರೆಗೆ ಸಿಗುತ್ತದೆ. ಸೀರೆ ಅಥವಾ ಚೂಡೀದಾರ್‌ ಇರಲಿ, ಅಂಚಿಗೆ ಲೇಸ್‌ ವರ್ಕ್‌ ಒದಗಿಸಿ ರಿಚ್‌ ಲುಕ್ಸ್ ನೀಡುವುದು ಟ್ರೆಂಡ್‌ ಆಗಿದೆ. ಬ್ರೋಕೇಡ್‌ ಲೇಸ್‌ ಗೆ ಬದಲಾಗಿ, ಸಿಲ್ಕ್ ಮತ್ತು ಉಲ್ಲನ್‌ ವರ್ಕ್‌ ಯುಕ್ತ ಲೇಸ್‌ ಸಹ ಚಾಲ್ತಿಯಲ್ಲಿದೆ. ಬಾರ್ಡರ್‌ ನಲ್ಲಿ ಬೀಡ್ಸ್ ವರ್ಕ್‌ ಅಟ್ಯಾಚ್‌ ನೀಡಿ ಡ್ರೆಸ್‌ ಗೆ ಹೊಸತನ ನೀಡಬಹುದಾಗಿದೆ. ಕ್ರೇಪ್‌ ಮೆಟೀರಿಯಲ್ ನಲ್ಲಿ ನೆಟ್‌ ಫ್ಲೇಯರ್ಡ್‌ ಚೂಡೀದಾರ್‌ ಸಹ ಚಾಲ್ತಿಯಲ್ಲಿದೆ.

ಅನಾರ್ಕಲಿ ಸೂಟ್‌ :

ಹುಡುಗಿಯರ ಮನದಲ್ಲಿ ಸಪ್ತವರ್ಣ ಮಿನುಗುವಂತೆ ಮಾಡುವ ಬ್ಯೂಟಿಫುಲ್ ಡ್ರೆಸ್‌ ಎಂದರೆ ಅನಾರ್ಕಲಿ ಚೂಡೀದಾರ್‌ ಸೂಟ್‌. ಫ್ಯಾಷನ್‌ ಲೋಕವನ್ನು ಹಲವಾರು ವರ್ಷಗಳಿಂದ ಆಳುತ್ತಿರುವ ಅನಾರ್ಕಲಿ ಸೂಟ್‌ ನ ಕ್ರೇಜ್‌ ಇಂದಿಗೂ ಜೀವಂತವಾಗಿದೆ. ಗ್ರೀನ್‌, ಪಿಂಕ್‌, ರೋಜ್‌, ಮೆಜೆಂತಾ, ಸ್ಕೈಬ್ಲೂ ಇತ್ಯಾದಿಗಳು ಇದರಲ್ಲಿ ಜನಪ್ರಿಯ.

ಕುರ್ತಿಗಳು : ಕುರ್ತಿಗಳು ಬೇರೆ ಬೇರೆ ಬಣ್ಣ ಹಾಗೂ ಫ್ಯಾಬ್ರಿಕ್ಸ್ ನಲ್ಲಿ ಲಭ್ಯ. ಚೂಡೀದಾರ್‌ ನಿಂದ ಹಿಡಿದು ಡೆನಿಮ್ ಮತ್ತು ಸ್ಕರ್ಟ್ ವರೆಗೂ ಇವನ್ನು ಯಾವುದರ ಮೇಲಾದರೂ ಧರಿಸಬಹುದಾಗಿದೆ. ಜಾರ್ಜೆಟ್‌, ಪ್ಲೇನ್‌ ಕಾಟನ್‌, ಕ್ರೇಪ್‌ ಫ್ಯಾಬ್ರಿಕ್‌ ನ ಸಿಂಪಲ್ ಅಥವಾ ಪ್ಲೇರ್‌ ಪ್ರಿಂಟೆಡ್‌ ನ್ನು ಸೀಕ್ವೆನ್ಸ್ ವರ್ಕ್‌, ರಿಚ್‌ ಮೋಟಿಫ್‌, ಕಲರ್‌ ಫುಲ್ ಎಂಬ್ರಾಯಿಡರಿ, ಬೀಡ್ಸ್ ವರ್ಕ್‌ ಹಾಗೂ ಲೇಸೆಸ್‌ ಇತ್ಯಾದಿಗಳಿಂದ ಸಜ್ಜುಗೊಳಿಸಲಾದ ಕುರ್ತಿಗಳು ಸಹ ಧಾರಾಳ ದೊರಕುತ್ತಿವೆ.

ಸೀರೆಗಳು : ಫ್ಯಾಷನ್‌ ಡಿಸೈನರ್‌ ಶ್ವೇತಾ ಸೂರಜ್‌ ಹೇಳುತ್ತಾರೆ, “ಇಂದಿನ ಆಧುನಿಕ ತರುಣಿಯರ ಅವಸರದ ಜೀವನಶೈಲಿಗೆ ಅಚ್ಚುಕಟ್ಟಾಗಿ ಸೀರೆಯುಟ್ಟು ಸಿದ್ಧರಾಗುವುದು ತುಸು ತ್ರಾಸದಾಯಕ ಎನಿಸಿದರೂ, ಸೀರೆಗಿರುವ ಕ್ರೇಜ್‌ ಎಂದೂ ಕಡಿಮೆ ಆಗುವಂಥದ್ದಲ್ಲ. ಈಗೆಲ್ಲ 5 ಮೀಟರ್‌ ನ ಸೀರೆಗಳನ್ನೂ ಯುವತಿಯರು ಇಷ್ಟಪಟ್ಟು ಆರಿಸಿಕೊಳ್ಳುತ್ತಾರೆ.”

ಇತ್ತೀಚೆಗೆ ಶಿಫಾನ್‌ ಕ್ರೇಪ್‌ ಮೆಟೀರಿಯಲ್ ಹೆಚ್ಚು ಫ್ಯಾಷನ್‌ ನಲ್ಲಿದೆ. ಇದರಲ್ಲಿ ಜ್ಯಾಮಿತೀಯ ರಂಗುರಂಗಿನ ಸೀರೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಸೀರೆಗಳಲ್ಲಿ ಡಿಸೈನ್‌ ಕಡಿಮೆ ಇದ್ದರೂ ಸರಿ, ಬ್ಲೌಸ್‌ ನಲ್ಲಿ ಮಾತ್ರ ಹೆವಿ ವರ್ಕ್‌ಇರಲೇಬೇಕೆಂಬ ಟ್ರೆಂಡ್ ಹೆಚ್ಚುತ್ತಿದೆ. ಸೀರೆಯ ಬಣ್ಣಗಳಲ್ಲಿ ಕಾಂಟ್ರಾಸ್ಟ್ ಕಲರ್‌ ನ ಬ್ಲೌಸ್‌ ಲೇಟೆಟ್ ಫ್ಯಾಷನ್‌ ಎನಿಸಿದೆ. ಬ್ರೋಕೇಡ್‌ ಬ್ಲೌಸ್‌ ಈಗ ಔಟ್‌ ಆಫ್‌ ಫ್ಯಾಷನ್‌ ಆಗಿದೆ. ಕೋಟಾ ಮೆಟೀರಿಯಲ್ ನಲ್ಲಿ ಸಿಲ್ಕ್ ಡಿಸೈನ್‌ ಬ್ಲೌಸ್‌ ಲೇಟೆಸ್ಟ್ ಫ್ಯಾಷನ್‌ ಆಗಿದೆ. ಇದರಲ್ಲಿ ಪ್ಲೇರ್‌, ಕ್ಲಾಸಿಕ್‌ ಮ್ಯಾಂಗೋ ಪ್ರಿಂಟ್ಸ್ ಜನಪ್ರಿಯ ಎನಿಸಿವೆ.

ಫ್ಯಾಷನ್‌ ಡಿಸೈನರ್‌ ಹಿಮಾಂಶು ಮಿತ್ತಲ್ ಹೇಳುತ್ತಾರೆ, “ಇತ್ತೀಚೆಗೆ ಪ್ರೀಸ್ಟಿಚ್ಡ್ ಸೀರೆಗಳು ಬಹಳ ಫ್ಯಾಷನ್‌ ನಲ್ಲಿವೆ. ಇವುಗಳಲ್ಲಿ ನೆರಿಗೆಗಳು ಮೊದಲೇ ರೆಡಿ ಇರುತ್ತವೆ, ಜಿಪ್‌ ಕೂಡ ಅಳವಡಿಸಲಾಗಿರುತ್ತದೆ. ಬೇರೆ ಉಡುಗೆಗಳ ತರಹ ಇನ್ನು ಈಗ ಧರಿಸಿದರೆ ಸಾಕು, ಉಡುವ ಗೊಡವೆಯೇ ಇಲ್ಲ! ಇದರಿಂದ ಉದ್ಯೊಗಸ್ಥ ವನಿತೆಯರಿಗೆ ಹೆಚ್ಚು ಸಮಯದ ಉಳಿತಾಯವಾಗುತ್ತದೆ.”

ಜೀನ್ಸ್ :

ಲೇಟೆಸ್ಟ್ ಫ್ಯಾಷನ್‌ ಟ್ರೆಂಡ್‌ ನಲ್ಲಿ ಜೀನ್ಸ್ ಜೊತೆ ಟಾಪ್‌ ಅಥವಾ ಕುರ್ತಿ, ನಿಮ್ಮನ್ನು ಫ್ಯಾಷನೆಬಲ್ ಜೊತೆಗೆ ಸ್ಮಾರ್ಟ್ ಲುಕ್ಸ್ ಹೊಂದುವಂತೆ ಮಾಡುತ್ತದೆ. ಇದರ ಜೊತೆಗೆ ಮೇಲ್ಭಾಗದಲ್ಲಿ ಮಲ್ಟಿ ಕಲರ್ಡ್‌ ಸ್ಟೋಲ್ ಹೊದೆಯುವುದು ಫ್ಯಾಷನ್‌ ನಲ್ಲಿದೆ. ಸ್ಟೋಲ್ ಸಹ ಇದೀಗ ಡಿಫರೆಂಟ್‌ ಪ್ಯಾಟರ್ನ್ಸ್ ಮತ್ತು ಡಿಸೈನ್‌ ಗಳಲ್ಲಿ ಲಭ್ಯವಿವೆ.

ಕಲರ್‌ : ಹಿಮಾಂಶು ಹೇಳುತ್ತಾರೆ, “ಇತ್ತೀಚೆಗೆ ಬ್ರೈಟ್‌ ಕಲರ್ಸ್ ಹೆಚ್ಚು ಟ್ರೆಂಡ್‌ ನಲ್ಲಿವೆ. ನಿಯಾನ್‌ ಕಲರ್ಸ್ ಹೆಚ್ಚು ಚಾಲ್ತಿಯಲ್ಲಿವೆ.”

ಸಾಮಾನ್ಯವಾಗಿ ಹೆಚ್ಚು ಜನ ಕೂಲ್‌ಪೇಸ್ಟಲ್ ಶೇಡ್ಸ್ ಗೆ ಬಹಳ ಪ್ರಾಧಾನ್ಯತೆ ಕೊಡುತ್ತಾರೆ. ಡೆಲಿಗೇಟ್‌ ಪೇಸ್ಟಲ್ಸ್ ಮತ್ತು ಬೋಲ್ಡ್ ನಿಯಾನ್‌ ಗಳ ನಡುವೆ ನೀವು ಬ್ರೈಟ್‌ಹ್ಯಾಪಿ ಶೇಡ್ಸ್ ಆರಿಸಿಕೊಳ್ಳಬಹುದು ಅಂದರೆ ನಿಂಬೆ, ಯೆಲ್ಲೋ, ಕೋಬಾಲ್ಟ್ ಬ್ಲೂ, ಫ್ಯೂಶಿಯಾ ಪಿಂಕ್‌, ಎಮರಾಲ್ಡ್ ಗ್ರೀನ್‌ ಇತ್ಯಾದಿಗಳನ್ನು ಟ್ರೈ ಮಾಡಬಹುದು. ಇವು ಸದಾ ಕಾಲ ಚಾಲ್ತಿಯಲ್ಲಿರುತ್ತವೆ. ಪರ್ಪಲ್ ವೈಟ್‌ ಮುಖ್ಯವಾಗಿ ಬೇಸಿಗೆಗೆ ಹೆಚ್ಚು ಸೂಕ್ತ.

ಡಿಸೈನ್‌  ಪ್ಯಾಟರ್ನ್‌ :

ಇತ್ತೀಚೆಗೆ ಮೇಲ್ಭಾಗದಲ್ಲಿ ಟೈಟ್‌ ಹಾಗೂ ಅಡಿಭಾಗದಲ್ಲಿ ಲೂಸ್‌ ಫಿಟ್ಟಿಂಗ್ಸ್ ಹೆಚ್ಚು ಚಾಲ್ತಿಯಲ್ಲಿವೆ. ಅಬ್ ಸ್ಟ್ರ್ಯಾಕ್ಟ್ ಡಿಸೈನ್‌ ಫ್ಯಾಷನ್‌ ಎನಿಸುತ್ತದೆ.

ಡ್ರೆಸ್‌ ಡಿಸೈನರ್‌ ಶ್ರೇಯಾ ಶರ್ಮಾರ ಪ್ರಕಾರ, “ಈಗ ಮೋನೋಕ್ರೋಮ್ ಸಹ ಫ್ಯಾಷನ್‌ ನಲ್ಲಿದೆ. ಬ್ಲ್ಯಾಕ್‌ವೈಟ್‌ ಪ್ಲೇನ್‌, ಸ್ಟ್ರೈಪ್ಸ್ ಅಥವಾ ಜ್ಯಾಮಿಟ್ರಿಕಲ್ ಪ್ಯಾಟರ್ನ್‌ ಇರುವಂಥ ಹಾಗೂ ಜಂಬೋ ಚೆಕ್ಸ್ ಡ್ರೆಸೆಸ್‌ ಸ್ಟೈಲಿಶ್‌ ಎನಿಸುವುದರ ಜೊತೆ ಜೊತೆಗೆ ಸ್ಮಾರ್ಟ್‌ ಲುಕ್ಸ್ ಸಹ ಕೊಡುತ್ತವೆ. ಇದರ ಹೊರತಾಗಿ ಲಾಂಗರ್‌ ಲೆಂಥ್‌ ವುಳ್ಳ ಡ್ರೆಸೆಸ್‌ ಮತ್ತೆ ಫ್ಯಾಷನ್‌ ನಲ್ಲಿದೆ. ಸ್ಕೈ ಬ್ಲೂ, ಆ್ಯಕ್ವಾ ಬ್ಲೂನಂಥ ಕಲರ್ಸ್‌ ಟ್ರೆಂಡ್‌ ನಲ್ಲಿವೆ.”

ಫ್ಯಾಷನ್‌ ಡಿಸೈನರ್‌ ಮಮತಾ ಠಾಕೂರ್‌ ಹೇಳುತ್ತಾರೆ, “ಇಂದಿನ ಫ್ಯಾಷನ್‌ ಗಾಗಿ ಸಿದ್ಧಗೊಳಿಸಲಾದ ಉಡುಗೆಗಳಲ್ಲಿ ಸ್ಟೈಲ್‌, ಬಣ್ಣ ಹಾಗೂ ಪ್ಯಾಟರ್ನ್‌ ಗಳು ಮಾತ್ರವಲ್ಲದೆ ಇನ್ನೊಂದು ವಿಶೇಷ ಉಂಟು! ಈ ಉಡುಗೆಗಳು ಯುವತಿಯರ ಮೂಡ್‌ಆ್ಯಟಿಟ್ಯೂಡ್‌ ಗಳನ್ನೂ ಆಧರಿಸಿ ತಯಾರಿಸಲಾಗಿದೆ.”

ಇತ್ತೀಚೆಗೆ ಹೆಚ್ಚುತ್ತಿರುವ ಬೇಡಿಕೆಗಳಲ್ಲಿ ಸಾಫ್ಟ್ ಪೇಸ್ಟ್‌ ಕಲರ್ಸ್‌ ಜೊತೆ ಜೊತೆಗೆ ಬಿಳಿ, ಕಪ್ಪು, ಕೆಂಪು, ಗುಲಾಬಿ, ನೀಲಿ, ಹಳದಿ ಬಣ್ಣಗಳೂ ಸೇರಿ ನಿಮ್ಮ ಕಣ್ಣಿಗೆ ತಂಪು ನೀಡುತ್ತವೆ. ಇನ್ನೊಂದು ವೈಶಿಷ್ಟ್ಯವೆಂದರೆ ಇದೇ ಬಣ್ಣಗಳಲ್ಲಿ ಮೇಳೈಸಿದ ರಾಶಿ ರಾಶಿ ಪ್ರಿಂಟ್ಸ್ ನಿಮಗೆ ಸ್ಟೈಲಿಶ್‌ ಟ್ರೆಂಡಿ ಲುಕ್ಸ್ ನೀಡುತ್ತವೆ.

ಡಸ್ಕಿ ಸ್ಕಿನ್‌ ಯುವತಿಯರು ಸಹ ಪೇಸ್ಟಲ್, ಬೇಬಿ ಬ್ಲೂ, ಮಿಂಟಿ ಗ್ರೀನ್‌, ಸಾಫ್ಟ್ ಪಿಂಕ್‌, ವೈಟ್‌ ಮತ್ತು ಪೇವ್ ‌ಯೆಲ್ಲೋ ಬಣ್ಣಗಳಲ್ಲಿ ತಮ್ಮನ್ನು ತಾವು ಸ್ಮಾರ್ಟ್‌ ಲುಕ್ಸ್ ಗಳಲ್ಲಿ ಪ್ರಸ್ತುತಪಡಿಸಬಹುದು.

ಹೆಚ್ಚು ಎತ್ತರವಲ್ಲದ ಯುವತಿಯರು ಮೊನೋಕ್ರೊಮ್ಯಾಟಿಕ್‌ ಕಲರ್ಸ್‌ ನ ಔಟ್‌ ಫಿಟ್‌ ಗಳಲ್ಲಿ ಸ್ಟೈಲಿಶ್‌ ಎನಿಸುತ್ತಾರೆ. ಇಂಥ ತರುಣಿಯರು ಹೆಚ್ಚಿನ ಲೇಯರ್‌ವುಳ್ಳ ಔಟ್‌ ಫಿಟ್ಸ್ ಗೆ ಬದಲಾಗಿ ಮ್ಯಾಕ್ಸಿ ಲೆಂಥ್‌ ನ ಔಟ್‌ ಫಿಟ್ಸ್ ಧರಿಸಬೇಕು. ಇದರಿಂದ ಅವರ ಎತ್ತರ ತುಸು ಹೆಚ್ಚಿದಂತೆ ಅನಿಸುತ್ತದೆ.

ವ್ಯಾಲೆಂಟೈನ್‌ ಡೇ ತುಸು ಸ್ಪೆಷಲ್ ಎನಿಸಲಿ ಎಂಬ ಉದ್ದೇಶಕ್ಕಾಗಿ, ನಿಮ್ಮ ಬಾಡಿ ಶೇಪ್‌ ನ್ನು ಗಮನದಲ್ಲಿಟ್ಟುಕೊಂಡು ನಿಮ್ಮನ್ನು ಹೆಚ್ಚು ಗ್ಲಾಮರಸ್‌ ಆಗಿ ತೋರಿಸುವಂಥ ಔಟ್‌ ಫಿಟ್ಸ್ ನ್ನೇ ಆರಿಸಿಕೊಳ್ಳಿ. ಬೋಲ್ಡ್ ಲುಕ್ಸ್ ಗಳಿಸಲಿಕ್ಕಾಗಿ ನಿಮ್ಮ ಔಟ್‌ ಫಿಟ್ಸ್ ನ ಕುತ್ತಿಗೆ ಬಳಿ ಅಗತ್ಯವಾಗಿ ಲೇಸೆಸ್‌ ಅವಳಡಿಸಿ. ಇನ್ನೊಂದು ವಿಷಯ ನೆನಪಿಡಿ, ನಿಮ್ಮ ಉಡುಗೆಗೆ ಹೊಂದುವಂಥ ಬ್ರೈಟ್‌ ಆ್ಯಕ್ಸೆಸರೀಸ್‌ ನ್ನೇ ಧರಿಸಿರಿ, ಇವು ನಿಮ್ಮ ಲುಕ್ಸ್ ನ್ನು ಇನ್ನಷ್ಟು ಸ್ಟೈಲಿಶ್‌ ಆಗಿಸುತ್ತವೆ.

– ಕೆ.ಜಿ. ಪ್ರೀತಿ.

ಫುಟ್ಪಾತ್ಶಾಪಿಂಗ್ ಮಜಾ!

ನಾವು ಎಷ್ಟೋ ಸಲ ಮಾಲ್ಸ್ ಮತ್ತು ಶೋ ರೂಮುಗಳಲ್ಲಿ, ಸುಮಾರು ದುಡ್ಡು ಖರ್ಚು ಮಾಡಿದ ಮೇಲೆಯೂ ನಮ್ಮ ಅಚ್ಚುಮೆಚ್ಚಿನ ಫ್ಯಾಷನೆಬಲ್ ಡ್ರೆಸೆಸ್‌ ನ್ನು ಕೊಳ್ಳಲಾಗಲಿಲ್ಲ ಎಂದು ಕೊರಗುತ್ತಿರುತ್ತೇವೆ. ಅದೇ ಬಹಳ ಕಡಿಮೆ ಬೆಲೆಯಲ್ಲಿ ಸ್ಟ್ರೀಟ್‌ ಮಾರ್ಕೆಟ್ ಗಳಲ್ಲಿ ಲೇಟೆಸ್ಟ್ ಫ್ಯಾಷನ್ನಿನ ಉಡುಗೆಗಳು ಸಿಗುತ್ತವೆ. ಇಂಥ ಉಡುಗೆಗಳ ಜೊತೆಯಲ್ಲೇ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಫುಟ್‌ ವೇರ್ಸ್‌ ಹಾಗೂ ಬ್ಯಾಗುಗಳೂ ಸಹ ದೊರಕುತ್ತವೆ. ಇದರಿಂದ ತಿಳಿದುಬರುವುದೆಂದರೆ, ಫ್ಯಾಷನೆಬಲ್ ಟ್ರೆಂಡಿ ಎನಿಸಲು ಹೆಚ್ಚು ಹಣ ಖರ್ಚು ಮಾಡಬೇಕೆಂದೇನಿಲ್ಲ. ಸ್ಮಾರ್ಟ್‌ ಶಾಪಿಂಗ್‌ ವಿಧಾನ ಗೊತ್ತಿದ್ದರೆ ಸಾಕು. ಸ್ಟ್ರೀಟ್‌ ಸ್ಮಾರ್ಟ್‌ ಆಗಿದ್ದು, ಫುಟ್‌ ಪಾತ್ ಗಳಲ್ಲಿ ಉತ್ತಮ ಚೌಕಾಸಿಯೊಂದಿಗೆ ಇಂಥ ಉಡುಗೆಗಳನ್ನು ಖರೀದಿಸಿದರೆ, ಫ್ಯಾಷನ್‌ ಜಗತ್ತಿನಲ್ಲಿ ನಿಮ್ಮದೇ ಛಾಪು ಮೂಡಿಸಬಹುದು.

ನೀವು ಈ ರೀತಿಯ ಶಾಪಿಂಗ್‌ ನ್ನು ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ತುಮಕೂರು, ಮಂಗಳೂರು, ಶಿವಮೊಗ್ಗ ಅಥವಾ ಮುಂಬೈ, ಚೆನ್ನೈ, ದೆಹಲಿ, ಹೈದರಾಬಾದ್‌ ಎಲ್ಲಾದರೂ ಪ್ರಮುಖ ಜಾಗಗಳಲ್ಲಿ ಮಾಡಿ. ಇಲ್ಲಿ ನಿಮಗೆ ಶೋರೂಮಿನ 1500/ ರೂ. ಬೆಲೆಯ ಡ್ರೆಸ್‌ ಕೇವಲ ರೂ.500/ಕ್ಕೆ ಸಿಗುತ್ತದೆ. ಅಗತ್ಯವಿರುವುದೆಲ್ಲ ಉತ್ತಮ ಚೌಕಾಸಿಯಲ್ಲಿ. ಇಲ್ಲಿ ಚೌಕಾಸಿ ನಡೆಯುತ್ತಲೇ ಇರುತ್ತದೆ, ವೈವಿಧ್ಯಮಯ ಡಿಸೈನ್‌ ಗಳೂ ಸಿಗುತ್ತವೆ.

100 ರೂ.ಗೆ ಟ್ರೆಂಡಿ ಫುಟ್‌ ವೇರ್‌,  150 ರೂ.ಗೆ ಉತ್ತಮ ಫ್ಯಾಷನೆಬಲ್ ಟಾಪ್‌, ರೂ.50ಕ್ಕೆ ಸ್ಟೈಲಿಶ್‌ ಸ್ಟೋಲ್‌, 15-20 ರೂ.ಗಳಿಗೆ ಫಂಕಿ ಜ್ಯೂವೆಲರಿ ಸಿಗುತ್ತವೆ. ಇಲ್ಲಿ ಖರೀದಿಸಲಾದ ಕಾಟನ್‌ ಟಾಪ್‌, ಒಂದು ಸೀಸನ್‌ ಪೂರ್ತಿ ಬಾಳಿಕೆ ಬಂದರೂ ನಿಮ್ಮ ಹಣಕ್ಕೆ ಮೋಸವಿಲ್ಲ ಎಂದೇ ಅರ್ಥ. ಇಲ್ಲಿ ನಿಮಗೆ ಬೇಕಾದಷ್ಟು ಮಿಕ್ಸ್ & ಮ್ಯಾಚ್‌ ಆಪ್ಶನ್‌ ಗಳೂ ಇವೆ.

ನೀವು ತುಸು ಸಹನೆ, ಸಂಯಮದಿಂದ ಉತ್ತಮ ವಸ್ತುಗಳಿಗಾಗಿ ಹುಡುಕಾಡಿ ಚೆನ್ನಾಗಿ ಚೌಕಾಸಿ ಮಾಡಿ ಲಾಭ ಪಡೆಯಬೇಕಷ್ಟೆ.

ಸಲಹೆಗಳತ್ತ ಗಮನ ಕೊಡಿ

ನೀವು ಸ್ಥೂಲ ಮಹಿಳೆ ಆಗಿದ್ದರೆ ಸ್ಲೀವ್ ಲೆ‌ಸ್‌ ಡ್ರೆಸ್‌ ಅವಾಯ್ಡ್ ಮಾಡಿ. ತೆಳು ಬಣ್ಣಗಳ ಉಡುಗೆಗಳ ಬದಲಾಗಿ ಡಾರ್ಕ್‌ ಕಲರ್ಸ್‌ಪ್ರಿಫರ್‌ ಮಾಡಿ. ಸ್ಮಾಲ್ ವರ್ಟಿಕಲ್ ಲೈನ್‌ ಪ್ರಿಂಟ್ಸ್ ಸ್ಲಿವ್‌ ಲುಕ್ಸ್ ನೀಡುತ್ತವೆ. ಕಾಟನ್‌ಕೋಟಾ ಸೀರೆಗಳ ಬದಲಾಗಿ ಶಿಫಾನ್‌, ಜಾರ್ಜೆಟ್‌ ಫ್ಯಾಬ್ರಿಕ್‌ ನ ಸೀರೆಗಳನ್ನೇ ಉಡಬೇಕು.

ತುಂಬಾ ಸಡಿಲ ಉಡುಗೆಗಳ ಬದಲಾಗಿ, ಫಿಟ್‌ & ಫೈನ್‌ ಉಡುಗೆಗಳಿಗೆ ಆದ್ಯತೆ ನೀಡಿ. ಇತ್ತೀಚೆಗಂತೂ ಫಿಟೆಡ್‌ ಡ್ರೆಸೆಸ್‌ ಟ್ರೆಂಡ್‌ನಲ್ಲಿವೆ.

ದೇಹದ ಕೆಳಭಾಗ ಅಗಲವಾಗಿದ್ದರೆ, `ಎ’ ಲೈನ್‌ ಸ್ಟೈಲ್ ‌ಡ್ರೆಸೆಸ್‌ ಟ್ರೈ ಮಾಡಿ.

ನೀವು ಅಗತ್ಯಕ್ಕಿಂತ ತೀರಾ ದಪ್ಪ ಅಥವಾ ತೆಳು ಇದ್ದರೆ, ದೊಡ್ಡ ಚೆಕ್ಸ್/ಹೂಬಳ್ಳಿಗಳ ಡಿಸೈನಿನ ಡ್ರೆಸ್‌ ಧರಿಸದಿರಿ. ಇತ್ತೀಚಿನ ಫ್ಯಾಷನ್‌ ನಲ್ಲಿ ಇವು ಖಂಡಿತಾ ಇಲ್ಲ.

ಡ್ರೆಸ್‌ ಜೊತೆ ಮ್ಯಾಚಿಂಗ್‌ಸ್ಟೈಲಿಶ್‌ ಆ್ಯಕ್ಸೆಸರೀಸ್‌, ಬ್ಯಾಗ್ಸ್ ಹಾಗೂ ಫುಟ್‌ ವೇರ್‌ ಗಳಿಂದ ನೀವು ಇನ್ನಷ್ಟು ಫ್ಯಾಷನೆಬಲ್ ಲುಕ್ಸ್ ಪಡೆಯುತ್ತೀರಿ.

ಲೈಟ್‌ ಯೆಲ್ಲೋ ಆಫ್‌ ವೈಟ್‌ ಕಲರ್‌ ನ ಸ್ಮಾರ್ಟ್‌ ಟ್ಯೂನಿಕ್‌ ಇನ್ನರ್‌ಶಾರ್ಟ್ಸ್ ಜೊತೆ ಸ್ಟೈಲಿಶ್‌ ಶ್ರಗ್‌ ಫುಲ್ ಸ್ಲೀವ್ಡ್ ಯೆಲ್ಲೋ ಡ್ರೆಸ್‌ ಡಾರ್ಕ್‌ ಪರ್ಪಲ್ ಬೆಲ್ಟ್ ಜೊತೆ ವೈಟ್‌ ಸ್ಲಿವ್‌ ಫಿಟ್‌ ಡೆನಿಮ್, ಟ್ಯೂನಿಕ್‌ ಮತ್ತು ಮಲ್ಟಿ ಫುಟ್‌ ವೇರ್‌ ಜೊತೆ ಸ್ವಿಂಗ್‌ ಜ್ಯಾಕೆಟ್‌ಹೆವಿ ಕಸೂತಿಯುಳ್ಳ ಸ್ಮಾರ್ಟ್‌ ಅನಾರ್ಕಲಿ ಸೂಟ್‌, ಮ್ಯಾಚಿಂಗ್‌ ಫುಟ್‌ ವೇರ್‌ ಜೊತೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ