ಪನೀರ್ಪೈನ್ಆ್ಯಪಲ್ ಸ್ಯಾಂಡ್ವಿಚ್

ಸಾಮಗ್ರಿ : 4-6 ಚಮಚ ಬೆಣ್ಣೆ, 4-5 ಚಮಚ ಪುದೀನಾ ಚಟ್ನಿ, 8 ದೊಡ್ಡ ಬ್ರೆಡ್‌ ಸ್ಲೈಸ್‌, 5-6 ಬಿಲ್ಲೆ ಸೌತೇಕಾಯಿ, ಟೊಮೇಟೊ, ಈರುಳ್ಳಿ, 200 ಗ್ರಾಂ ಪನೀರ್‌, 4-5 ಬಿಲ್ಲೆ ಅನಾನಸ್‌.

ವಿಧಾನ : ಅನಾನಸ್‌ ಮತ್ತು ಇತರ ತರಕಾರಿಗಳ ಬಿಲ್ಲೆಗಳು ತೆಳುವಾಗಿರಲಿ. ಪನೀರ್‌ ನ್ನು ಸಣ್ಣ ನಿಂಬೆಗಾತ್ರದ ಉಂಡೆಗಳಾಗಿಸಿ, ಚಪ್ಪಟೆ ಮಾಡಿ, ಉಪ್ಪು, ಖಾರ ಉದುರಿಸಿ ಶ್ಯಾಲೋ ಫ್ರೈ ಮಾಡಿಡಿ. ಬ್ರೆಡ್‌ ಸ್ಲೈಸ್‌ ಗಳ ಒಂದು ಬದಿಗೆ ಬೆಣ್ಣೆ ಸವರಿಕೊಂಡು, ಅದರ ಮೇಲೆ ಹಾಗೇ ಪುದೀನಾ ಚಟ್ನಿ ಸಹ ಸವರಿಕೊಳ್ಳಿ. 2 ಬ್ರೆಡ್‌ ಸ್ಲೈಸ್‌ ಗಳ ನಡುವೆ ಈರುಳ್ಳಿ, ಟೊಮೇಟೊ, ಸೌತೇಕಾಯಿ, ಪನೀರ್ ಹಾಗೂ ಅನಾನಸ್‌ ಬಿಲ್ಲೆ (ಚಿತ್ರ ನೋಡಿ) ಬರುವಂತೆ ಜೋಡಿಸಿಕೊಂಡು ಸ್ಯಾಂಡ್‌ ವಿಚ್‌ ಸಿದ್ಧಪಡಿಸಿ. ಕೊನೆಯಲ್ಲಿ ಎಲ್ಲಕ್ಕೂ ಮೇಲೆ ಇನ್ನಷ್ಟು ಬೆಣ್ಣೆ ಹಾಕಿ, ಅಗತ್ಯವೆನಿಸಿದರೆ ತ್ರಿಕೋನಾಕಾರವಾಗಿ ಕತ್ತರಿಸಿ ಸವಿಯಲು ಕೊಡಿ. ಜೊತೆಗೆ ಟೊಮೇಟೊ ಸಾಸ್‌ ಇರಲಿ.

ಗ್ರಿಲ್ಡ್ ಪನೀರ್ಪೈನ್ಆ್ಯಪಲ್ ಬರ್ಗರ್

ಸಾಮಗ್ರಿ : 4-6 ಚಮಚ ಬೆಣ್ಣೆ ಅಥವಾ ಮೆಯೋನೀಸ್‌, 4-5 ಚಮಚ ಟೊಮೇಟೊ, ಚಿಲೀ ಸಾಸ್‌, 4-5 ಬರ್ಗರ್‌ ಬನ್ಸ್, 50 ಗ್ರಾಂ ಲೆಟ್ಯೂಸ್‌ (ಸಲಾಡ್‌ ಎಲೆ), 50 ಗ್ರಾಂ ಪನೀರ್‌, 4-5 ಅನಾನಸ್‌ ಸ್ಲೈಸ್‌, ಅಗತ್ಯವಿದ್ದಷ್ಟು ಎಣ್ಣೆ, ಉಪ್ಪು, ಮೆಣಸು.

ವಿಧಾನ : ಬರ್ಗರ್‌ ಬನ್‌ ನ್ನು ಗುಂಡಗೆ ಕತ್ತರಿಸಿ. ಪನೀರ್‌ ನ್ನು ತೆಳು ಚೌಕಗಳಾಗಿ ಕತ್ತರಿಸಿ, ಉಪ್ಪು, ಮೆಣಸು ಬೆರೆಸಿದ ಎಣ್ಣೆಯಲ್ಲಿ ಮ್ಯಾರಿನೇಟ್‌ ಗೊಳಿಸಿ, ಹೊಂಬಣ್ಣ ಬರುವಂತೆ ಗ್ರಿಲ್ ‌ಮಾಡಿ. ಬರ್ಗರ್‌ ನ ಒಳಭಾಗಗಳಿಗೆ ಬೆಣ್ಣೆ ಅಥವಾ ಮೆಯೋನೀಸ್‌ ಸವರಬೇಕು, ಜೊತೆಗೆ ಟೊಮೇಟೊ, ಚಿಲೀ ಸಾಸ್‌ ಕೂಡ. ಆಮೇಲೆ ಒಂದರ ಮೇಲೆ ಒಂದರಂತೆ ಲೆಟ್ಯೂಸ್‌ ಎಲೆಗಳು, ಗ್ರಿಲ್ಡ್ ಪನೀರ್‌ ಹಾಗೂ ಅನಾನಸ್‌ ಬಿಲ್ಲೆ ಬರುವಂತೆ ಜೋಡಿಸಿಕೊಳ್ಳಿ. ಇನ್ನೊಂದು ಭಾಗವನ್ನೂ ಇದರ ಮೇಲೆ ಕವರ್‌ ಮಾಡಿ ಸವಿಯಲು ಕೊಡಿ.

ಫ್ರೂಟ್ ಟ್ರಿಫಲ್ಸ್

ಸಾಮಗ್ರಿ : 250 ಗ್ರಾ ಫ್ರೂಟ್‌ ಕಾಕ್‌ ಟೇಲ್ ‌(ಸಣ್ಣಗೆ ಹೋಳು ಮಾಡಿದ ಸೇಬು, ಪರಂಗಿಹಣ್ಣು, ಸಪೋಟ, ಮಾವು, ದ್ರಾಕ್ಷಿ ಇತ್ಯಾದಿಗಳ ಮಿಶ್ರಣ), 1 ಪ್ಯಾಕೆಟ್‌ ಗುಡ್‌ ಡೇ ಕ್ಯಾಶ್ಯೂ ಬಿಸ್ಕೆಟ್ಸ್,  50 ಗ್ರಾಂ ಫ್ರೆಶ್‌ ಕ್ರೀಂ, ಅಲಂಕರಿಸಲು ಒಂದಿಷ್ಟು ಚೆರ್ರಿ ಹಣ್ಣು.

ವಿಧಾನ : ಫ್ರೆಶ್‌ ಕ್ರೀಮನ್ನು ಚೆನ್ನಾಗಿ ಬೀಟ್‌ ಮಾಡಿಕೊಂಡು ಫ್ರಿಜ್‌ ನಲ್ಲಿರಿಸಿ ಚಿಲ್ ‌ಮಾಡಿ. ಚಿತ್ರದಲ್ಲಿರುವಂತೆ ಸಣ್ಣ ಡೆಸರ್ಟ್‌ ಕಪ್ ಗಳಿಗೆ ಮೊದಲು ಪುಡಿ ಮಾಡಿದ ಬಿಸ್ಕತ್ತು ಉದುರಿಸಿ, ಅದರ ಮೇಲೆ ಫ್ರೂಟ್‌ ಕಾಕ್‌ ಟೇಲ್‌, ನಂತರ ಕ್ರೀಂ ಹಾಕಿ, ಚೆರ್ರಿಯಿಂದ ಅಲಂಕರಿಸಿ ಸವಿಯಲು ಕೊಡಿ.

ಫ್ರೂಟ್ಪಂಚ್

ಸಾಮಗ್ರಿ : ಮಿಕ್ಸ್ಡ್ ಫ್ರೂಟ್‌ ಡ್ರಿಂಕ್‌, ಆರೆಂಜ್‌ ಫ್ರೂಟ್‌ ಡ್ರಿಂಕ್‌, ಅನಾನಸ್‌ ಫ್ರೂಟ್‌ ಡ್ರಿಂಕ್‌, ಸೋಡಾ ವಾಟರ್‌ (1-1 ಸೀಲ್ಡ್ ಕ್ಯಾನ್), 2 ಮಾಗಿದ ಸೇಬು, 1 ನಿಂಬೆಹಣ್ಣು, 1 ದೊಡ್ಡ ತುಂಡು ಶುಂಠಿ, ಅಗತ್ಯವಿದ್ದಷ್ಟು ಶುಗರ್‌ ಸಿರಪ್‌, ಐಸ್‌ ಕ್ಯೂಬ್ಸ್, ಹೆಚ್ಚಿದ ಕೊ.ಸೊಪ್ಪು, ಪುದೀನಾ.

ವಿಧಾನ : ಮೊದಲು ಸೇಬು, ಶುಂಠಿಯ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಳ್ಳಿ. ಇದಕ್ಕೆ ಹೆಚ್ಚಿದ ಪದಾರ್ಥ ಹಾಗೂ ಸೋಡಾ ಹೊರತುಪಡಿಸಿ ಉಳಿದೆಲ್ಲವನ್ನೂ ಒಂದು ಬಟ್ಟಲಲ್ಲಿ ಮಿಶ್ರಣ ಮಾಡಿಕೊಳ್ಳಿ. 5-6 ಗ್ಲಾಸುಗಳಿಗೆ ಸೋಡಾ ಬಗ್ಗಿಸಿ, ಅದರ ಮೇಲೆ ಈ ಮಿಶ್ರಣವನ್ನು ಸುರಿದು, ಕೊ.ಸೊಪ್ಪು, ಪುದೀನಾ ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಚಿಲೀ ಕಾರ್ನ್ಮಶ್ರೂಮ್

ಸಾಮಗ್ರಿ : 250 ಗ್ರಾಂ ಬಟನ್‌ ಮಶ್ರೂಮ್, ಅಷ್ಟೇ ಪ್ರಮಾಣದ ಬೆಂದ ಸ್ವೀಟ್‌ ಕಾರ್ನ್‌ ಕಾಳು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಸ್ಪ್ರಿಂಗ್‌ ಆನಿಯನ್ಸ್ ಹಸಿರು/ಕೆಂಪು ಕ್ಯಾಪ್ಸಿಕಂ, ಹಸಿಶುಂಠಿ, ಟೊಮೇಟೊ, ಕೊ.ಸೊಪ್ಪು, ಪುದೀನಾ, 1 ಚಮಚ ಮಶ್ರೂಮ್, ಸ್ಟಾಕ್‌ ಪೌಡರ್‌, ರುಚಿಗೆ ತಕ್ಕಷ್ಟು ಸೋಯಾ ಸಾಸ್‌, ಟೊಮೇಟೊ ಸಾಸ್‌, ವಿನಿಗರ್‌, ಉಪ್ಪು, ಮೆಣಸು, 2 ಚಮಚ ಕಾರ್ನ್‌ ಫ್ಲೋರ್‌ (ತುಸು ಬಿಸಿ ನೀರಿನಲ್ಲಿ ಕದಡಿಕೊಳ್ಳಿ), 4-5 ಚಮಚ ರೀಫೈಂಡ್‌ ಎಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಹಸಿ ಶುಂಠಿ, ಸ್ಪ್ರಿಂಗ್‌ ಆನಿಯನ್ಸ್, 2 ಬಗೆಯ ಕ್ಯಾಪ್ಸಿಕಂ, ಟೊಮೇಟೊ, ಅಣಬೆ, ಬೆಂದ ಸ್ವೀಟ್‌ ಕಾರ್ನ್‌ ಸೇರಿಸಿ ಚೆನ್ನಾಗಿ ಬಾಡಿಸಿ. ಕೊನೆಯಲ್ಲಿ ಮಶ್ರೂಮ್ ಸ್ಟಾಕ್‌ ಪೌಡರ್‌, ಉಪ್ಪು, ಮೆಣಸು ಹಾಕಿ ಕೆದಕಬೇಕು. ಆಮೇಲೆ ಕದಡಿಕೊಂಡ ಕಾರ್ನ್‌ ಫ್ಲೋರ್‌ ಬೆರೆಸಿ, ಗ್ರೇವಿ ಚೆನ್ನಾಗಿ ಕುದಿಯುವಂತೆ ಮಾಡಿ ಕೆಳಗಿಳಿಸಿ. ಇದನ್ನು ಬಿಸಿ ಬಿಸಿ ಅನ್ನ ಅಥವಾ ನೂಡಲ್ಸ್ ಜೊತೆ ಸವಿಯಲು ಕೊಡಿ.

ಫ್ರೂಟ್ನಟ್ಯೋಗರ್ಟ್

ಸಾಮಗ್ರಿ : 2 ಕಪ್‌ ಫ್ರೂಟ್‌ ಕಾಕ್‌ ಟೇಲ್‌, 2 ಕಪ್‌ ಸಿಹಿ ಮೊಸರು, 4 ಸ್ಕೂಪ್‌ ವೆನಿಲಾ ಐಸ್‌ ಕ್ರೀಂ, 4-5 ಚಮಚ (ಒಟ್ಟಾಗಿ) ತುಂಡರಿಸಿದ ಗೋಡಂಬಿ, ಪಿಸ್ತಾ, ಬಾದಾಮಿ ಚೂರು.

ವಿಧಾನ : ಕಡೆದ ಮೊಸರಿಗೆ ಫ್ರೂಟ್‌ ಕಾಕ್‌ ಟೇಲ್ ಮಿಶ್ರ ಮಾಡಿ, ಐಸ್‌ ಕ್ರೀಂ ಬೆರೆಸಿ ಬ್ಲೆಂಡ್‌ ಮಾಡಿ. ಇನ್ನು 2-3 ಗ್ಲಾಸುಗಳಿಗೆ ಬಗ್ಗಿಸಿ, ಮೇಲೆ ಗೋಡಂಬಿ, ಪಿಸ್ತಾ ಉದುರಿಸಿ, ಸವಿಯಲು ಕೊಡಿ.

ಬಾಳೆ ಅನಾನಸ್ರಸರಂಜಿನಿ

ಸಾಮಗ್ರಿ : 2 ಸೀಲ್ಡ್ ಕ್ಯಾನ್‌ ಅನಾನಸ್‌ ಜೂಸ್‌, 2-3 ಮಾಗಿದ ಬಾಳೆಹಣ್ಣು, ರುಚಿಗೆ ತಕ್ಕಷ್ಟು ಸಕ್ಕರೆ, ಜೇನುತುಪ್ಪ, ನಿಂಬೆರಸ, ಒಂದಿಷ್ಟು ಐಸ್‌ ಕ್ಯೂಬ್ಸ್.

ವಿಧಾನ : ಬಾಳೆಹಣ್ಣನ್ನು ಕಿವುಚಿ, ಮಿಕ್ಸಿಯಲ್ಲಿ ಎಲ್ಲವನ್ನೂ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಗ್ಲಾಸುಗಳಿಗೆ ಸುರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಬ್ಲ್ಯಾಕ್ಆಲಿವ್ ಟ್ಯಾಪನೇಡ್

ಸಾಮಗ್ರಿ : 2 ಕಪ್‌ ಬ್ಲ್ಯಾಕ್‌ ಆಲಿವ್‌, ಅರ್ಧ ಕಪ್‌ ಆಲಿವ್ ‌ಎಣ್ಣೆ, 4 ಚಮಚ ಇಟಲಿಯ ಕೇಪರ್‌ ಬಡ್ಸ್ (ಸೂಪರ್‌ ಬಜಾರ್‌ ಗಳಲ್ಲಿ ಲಭ್ಯ), 2 ಚಮಚ ಬೆಸಿಲ್ ‌ಲೀವ್ಸ್ (ಅಥವಾ ತುಳಸಿ ಎಲೆ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ ಸಣ್ಣಗೆ ಹೆಚ್ಚಿದ ಲೆಮನ್ ರಿಂಡ್‌ (ನಿಂಬೆ ಸಿಪ್ಪೆ).

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಮಿಕ್ಸಿಗೆ ಹಾಕಿಕೊಂಡು, ನೀಟಾಗಿ ಬ್ಲೆಂಡ್‌ ಮಾಡಿ. ಇದನ್ನು ಬಟ್ಟಲಿಗೆ ರವಾನಿಸಿ, ಚಿತ್ರದಲ್ಲಿರುವಂತೆ ಹೆಚ್ಚಿದ ಬ್ಲ್ಯಾಕ್‌ ಆಲಿವ್ ‌ಬೆಸಿಲ್ ಲೀವ್ಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.

ಪೀಚ್ವಿತ್ಐಸ್ಕ್ರೀಂ

ಸಾಮಗ್ರಿ : 5-6 ಮಾಗಿದ ಪೀಚ್‌ ಹಣ್ಣು, 1 ಕಪ್‌ ಫ್ರೆಶ್‌ ಕ್ರೀಂ, 1-2 ಚಮಚ ಬೆಣ್ಣೆ, ಅಗತ್ಯವಿದ್ದಷ್ಟು ಹೆಚ್ಚಿದ ಪುದೀನಾ, ಪುಡಿ ಸಕ್ಕರೆ ಚಾಕಲೇಟ್‌ ಪುಡಿ ಹಾಗೂ ವೆನಿಲಾ  ಐಸ್‌ ಕ್ರೀಂ.

ವಿಧಾನ : ಪೀಚ್‌ ಹಣ್ಣುಗಳನ್ನು ಉದ್ದನೆಯ ಹೋಳಾಗಿಸಿ. ಇವಕ್ಕೆ ಬೆಣ್ಣೆ ಸವರಿ ಮೈಕ್ರೋವೇವ್ ‌ನಲ್ಲಿ ಹದನಾಗಿ ಗ್ರಿಲ್ ‌ಮಾಡಿ. ನಂತರ ಹೊರತೆಗೆದು ಆರಲು ಬಿಡಿ. ಫ್ರೆಶ್‌ ಕ್ರೀಂ ಬೀಟ್‌ ಮಾಡಿಕೊಂಡು, ಅದಕ್ಕೆ ಪುದೀನಾ, ಪುಡಿಸಕ್ಕರೆ ಸೇರಿಸಿ ಬ್ಲೆಂಡ್‌ ಮಾಡಿ. ಈಗ ಡೆಸರ್ಟ್‌ ಕಪ್ಸ್ ಲನಲ್ಲಿ ಗ್ರಿಲ್ಡ್ ಪೀಚ್‌ ಜೊತೆ ವೆನಿಲಾ ಐಸ್‌ ಕ್ರೀಂ ಇರಿಸಿ, ಮೇಲೊಂದಿಷ್ಟು ಚಾಕಲೇಟ್‌ ಪುಡಿ ಉದುರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ