ಪನೀರ್ ಪೈನ್ ಆ್ಯಪಲ್ ಸ್ಯಾಂಡ್ ವಿಚ್
ಸಾಮಗ್ರಿ : 4-6 ಚಮಚ ಬೆಣ್ಣೆ, 4-5 ಚಮಚ ಪುದೀನಾ ಚಟ್ನಿ, 8 ದೊಡ್ಡ ಬ್ರೆಡ್ ಸ್ಲೈಸ್, 5-6 ಬಿಲ್ಲೆ ಸೌತೇಕಾಯಿ, ಟೊಮೇಟೊ, ಈರುಳ್ಳಿ, 200 ಗ್ರಾಂ ಪನೀರ್, 4-5 ಬಿಲ್ಲೆ ಅನಾನಸ್.
ವಿಧಾನ : ಅನಾನಸ್ ಮತ್ತು ಇತರ ತರಕಾರಿಗಳ ಬಿಲ್ಲೆಗಳು ತೆಳುವಾಗಿರಲಿ. ಪನೀರ್ ನ್ನು ಸಣ್ಣ ನಿಂಬೆಗಾತ್ರದ ಉಂಡೆಗಳಾಗಿಸಿ, ಚಪ್ಪಟೆ ಮಾಡಿ, ಉಪ್ಪು, ಖಾರ ಉದುರಿಸಿ ಶ್ಯಾಲೋ ಫ್ರೈ ಮಾಡಿಡಿ. ಬ್ರೆಡ್ ಸ್ಲೈಸ್ ಗಳ ಒಂದು ಬದಿಗೆ ಬೆಣ್ಣೆ ಸವರಿಕೊಂಡು, ಅದರ ಮೇಲೆ ಹಾಗೇ ಪುದೀನಾ ಚಟ್ನಿ ಸಹ ಸವರಿಕೊಳ್ಳಿ. 2 ಬ್ರೆಡ್ ಸ್ಲೈಸ್ ಗಳ ನಡುವೆ ಈರುಳ್ಳಿ, ಟೊಮೇಟೊ, ಸೌತೇಕಾಯಿ, ಪನೀರ್ ಹಾಗೂ ಅನಾನಸ್ ಬಿಲ್ಲೆ (ಚಿತ್ರ ನೋಡಿ) ಬರುವಂತೆ ಜೋಡಿಸಿಕೊಂಡು ಸ್ಯಾಂಡ್ ವಿಚ್ ಸಿದ್ಧಪಡಿಸಿ. ಕೊನೆಯಲ್ಲಿ ಎಲ್ಲಕ್ಕೂ ಮೇಲೆ ಇನ್ನಷ್ಟು ಬೆಣ್ಣೆ ಹಾಕಿ, ಅಗತ್ಯವೆನಿಸಿದರೆ ತ್ರಿಕೋನಾಕಾರವಾಗಿ ಕತ್ತರಿಸಿ ಸವಿಯಲು ಕೊಡಿ. ಜೊತೆಗೆ ಟೊಮೇಟೊ ಸಾಸ್ ಇರಲಿ.
ಗ್ರಿಲ್ಡ್ ಪನೀರ್ ಪೈನ್ ಆ್ಯಪಲ್ ಬರ್ಗರ್
ಸಾಮಗ್ರಿ : 4-6 ಚಮಚ ಬೆಣ್ಣೆ ಅಥವಾ ಮೆಯೋನೀಸ್, 4-5 ಚಮಚ ಟೊಮೇಟೊ, ಚಿಲೀ ಸಾಸ್, 4-5 ಬರ್ಗರ್ ಬನ್ಸ್, 50 ಗ್ರಾಂ ಲೆಟ್ಯೂಸ್ (ಸಲಾಡ್ ಎಲೆ), 50 ಗ್ರಾಂ ಪನೀರ್, 4-5 ಅನಾನಸ್ ಸ್ಲೈಸ್, ಅಗತ್ಯವಿದ್ದಷ್ಟು ಎಣ್ಣೆ, ಉಪ್ಪು, ಮೆಣಸು.
ವಿಧಾನ : ಬರ್ಗರ್ ಬನ್ ನ್ನು ಗುಂಡಗೆ ಕತ್ತರಿಸಿ. ಪನೀರ್ ನ್ನು ತೆಳು ಚೌಕಗಳಾಗಿ ಕತ್ತರಿಸಿ, ಉಪ್ಪು, ಮೆಣಸು ಬೆರೆಸಿದ ಎಣ್ಣೆಯಲ್ಲಿ ಮ್ಯಾರಿನೇಟ್ ಗೊಳಿಸಿ, ಹೊಂಬಣ್ಣ ಬರುವಂತೆ ಗ್ರಿಲ್ ಮಾಡಿ. ಬರ್ಗರ್ ನ ಒಳಭಾಗಗಳಿಗೆ ಬೆಣ್ಣೆ ಅಥವಾ ಮೆಯೋನೀಸ್ ಸವರಬೇಕು, ಜೊತೆಗೆ ಟೊಮೇಟೊ, ಚಿಲೀ ಸಾಸ್ ಕೂಡ. ಆಮೇಲೆ ಒಂದರ ಮೇಲೆ ಒಂದರಂತೆ ಲೆಟ್ಯೂಸ್ ಎಲೆಗಳು, ಗ್ರಿಲ್ಡ್ ಪನೀರ್ ಹಾಗೂ ಅನಾನಸ್ ಬಿಲ್ಲೆ ಬರುವಂತೆ ಜೋಡಿಸಿಕೊಳ್ಳಿ. ಇನ್ನೊಂದು ಭಾಗವನ್ನೂ ಇದರ ಮೇಲೆ ಕವರ್ ಮಾಡಿ ಸವಿಯಲು ಕೊಡಿ.
ಫ್ರೂಟ್ ಟ್ರಿಫಲ್ಸ್
ಸಾಮಗ್ರಿ : 250 ಗ್ರಾ ಫ್ರೂಟ್ ಕಾಕ್ ಟೇಲ್ (ಸಣ್ಣಗೆ ಹೋಳು ಮಾಡಿದ ಸೇಬು, ಪರಂಗಿಹಣ್ಣು, ಸಪೋಟ, ಮಾವು, ದ್ರಾಕ್ಷಿ ಇತ್ಯಾದಿಗಳ ಮಿಶ್ರಣ), 1 ಪ್ಯಾಕೆಟ್ ಗುಡ್ ಡೇ ಕ್ಯಾಶ್ಯೂ ಬಿಸ್ಕೆಟ್ಸ್, 50 ಗ್ರಾಂ ಫ್ರೆಶ್ ಕ್ರೀಂ, ಅಲಂಕರಿಸಲು ಒಂದಿಷ್ಟು ಚೆರ್ರಿ ಹಣ್ಣು.
ವಿಧಾನ : ಫ್ರೆಶ್ ಕ್ರೀಮನ್ನು ಚೆನ್ನಾಗಿ ಬೀಟ್ ಮಾಡಿಕೊಂಡು ಫ್ರಿಜ್ ನಲ್ಲಿರಿಸಿ ಚಿಲ್ ಮಾಡಿ. ಚಿತ್ರದಲ್ಲಿರುವಂತೆ ಸಣ್ಣ ಡೆಸರ್ಟ್ ಕಪ್ ಗಳಿಗೆ ಮೊದಲು ಪುಡಿ ಮಾಡಿದ ಬಿಸ್ಕತ್ತು ಉದುರಿಸಿ, ಅದರ ಮೇಲೆ ಫ್ರೂಟ್ ಕಾಕ್ ಟೇಲ್, ನಂತರ ಕ್ರೀಂ ಹಾಕಿ, ಚೆರ್ರಿಯಿಂದ ಅಲಂಕರಿಸಿ ಸವಿಯಲು ಕೊಡಿ.
ಫ್ರೂಟ್ ಪಂಚ್
ಸಾಮಗ್ರಿ : ಮಿಕ್ಸ್ಡ್ ಫ್ರೂಟ್ ಡ್ರಿಂಕ್, ಆರೆಂಜ್ ಫ್ರೂಟ್ ಡ್ರಿಂಕ್, ಅನಾನಸ್ ಫ್ರೂಟ್ ಡ್ರಿಂಕ್, ಸೋಡಾ ವಾಟರ್ (1-1 ಸೀಲ್ಡ್ ಕ್ಯಾನ್), 2 ಮಾಗಿದ ಸೇಬು, 1 ನಿಂಬೆಹಣ್ಣು, 1 ದೊಡ್ಡ ತುಂಡು ಶುಂಠಿ, ಅಗತ್ಯವಿದ್ದಷ್ಟು ಶುಗರ್ ಸಿರಪ್, ಐಸ್ ಕ್ಯೂಬ್ಸ್, ಹೆಚ್ಚಿದ ಕೊ.ಸೊಪ್ಪು, ಪುದೀನಾ.