ಸುಂದರ ನಿರ್ಮಾಪಕಿ

`ಅಭಿನೇತ್ರಿ’ ಪೂಜಾಗಾಂಧಿ ನಿರ್ಮಾಣದ ಹೊಸ ಚಿತ್ರ. ನಿರ್ಮಾಣದಲ್ಲಿ ಪಾರ್ಟ್‌ ನರ್‌ ಆಗಿರುವ ಮತ್ತೊಬ್ಬ ಯುವತಿ

ವೈಜಯಂತಿ ಕೂಡಾ ನಾಯಕಿಗಿರುವಷ್ಟೇ ಗ್ಲಾಮರ್‌ ಹೊಂದಿರುವಂಥ ಹುಡುಗಿ. ಮುಹೂರ್ತದ ದಿನವೇ ಎಲ್ಲರ ಗಮನ ಸೆಳೆಯುತ್ತಿದ್ದ ವೈಜಯಂತಿ ಹೊಸಪೇಟೆಯ ಶ್ರೀಮಂತ ಗಣಿ ದಣಿಯ ಪುತ್ರಿ. ಎಂಜಿನಿಯರಿಂಗ್‌ ವಿದ್ಯಾರ್ಥಿ, ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಆಕೆ ತಾಯಿಯ ಆಸೆಯಾಗಿತ್ತು. ಮಗಳಿಗೆ ಯಾವಾಗಲೂ ನೀನೊಂದು ಒಳ್ಳೆ ಕನ್ನಡ ಚಿತ್ರ ನಿರ್ಮಿಸಬೇಕು ಎಂದು ಹೇಳುತ್ತಿದ್ದರಂತೆ. ವೈಜಯಂತಿ ತಾಯಿ ಕನಸನ್ನು `ಅಭಿನೇತ್ರಿ’ ಚಿತ್ರ ನಿರ್ಮಿಸುವುದರ ಮೂಲಕ ನನಸು ಮಾಡಿದ್ದಾಳೆ. `ಅಭಿನೇತ್ರಿ’ ಚಿತ್ರದ ನಂತರ ಎಲ್ಲಾ ಭಾಷೆಗಳಲ್ಲೂ ಸಿನಿಮಾ ಮಾಡಬೇಕೆಂಬ ಯೋಜನೆ ಹಾಕಿಕೊಂಡಿರುವ ವೈಜಯಂತಿ ನೋಡಲು ಸುಂದರವಾಗಿದ್ದರೂ ನಟನೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳುತ್ತಾಳೆ.

ಮೋಹಕತಾರೆ ಈಗ ಕಿರಿಯ ಸಂಸದೆ

ಸ್ಯಾಂಡಲ್ ವುಡ್‌ ನ ರಾಣಿ ಮಹಾರಾಣಿ ರಮ್ಯಾ ಊರಿಗೊಬ್ಬಳೇ ಪದ್ಮಾವತಿ ಎಂದೇ ಜನಪ್ರಿಯ. ಕನ್ನಡದ ನಂ.ಒನ್ ನಾಯಕಿಯಾಗಿ ಮೆರೆಯುತ್ತಿರುವ ಈ ತಾರೆ ಇತ್ತೀಚೆಗಷ್ಟೇ ಮಂಡ್ಯದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯೆಯಾದರು. ದೇವರ ಹೆಸರಿನಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ರಮ್ಯಾ ತನ್ನನ್ನು ಹೆಚ್ಚು ಸಮಯ ರಾಜಕೀಯಕ್ಕಾಗಿ ಹಾಗೂ ಮಂಡ್ಯ ಜನರ ಸೇವೆಗಾಗಿ ಮೀಸಲಿಡುತ್ತಿದ್ದಾಳೆ. ಹಗಲು ರಾತ್ರಿ ಎನ್ನದೇ ಚುನಾವಣಾ ಪ್ರಚಾರದಲ್ಲಿ ತಿರುಗಿರುವುದರಿಂದ ರಮ್ಯಾ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ ವಿರಾಮ ಪಡೆಯುತ್ತಿದ್ದಾಳಂತೆ. ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿಕೊಡುವುದಾಗಿ ಹೇಳಿರುವ ರಮ್ಯಾ ಇನ್ನು ಶುರುವಾಗದೇ ಇವರು ಚಿತ್ರಗಳಿಂದ ಪಡೆದಿದ್ದ ಅಡ್ವಾನ್ಸ್ ಹಣವನ್ನು ಹಿಂತಿರುಗಿಸಿದ್ದಾಳೆ ಎಂಬುದು ಸುದ್ದಿ.

`ಬುಲ್ ಬುಲ್‌’ 100 ದಿನಗಳು

Chitrashobha-2

ದರ್ಶನ್‌ ಸಿನಿಮಾ ಅಂದ್ರೆ ಅದು ಗ್ಯಾರಂಟಿ ಹಿಟ್‌ ಎನ್ನುವಷ್ಟು ಈ ಚಾಲೆಂಜಿಂಗ್‌ ಸ್ಟಾರ್‌ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. `ಸಾರಥಿ’ ಚಿತ್ರದ ಯಶಸ್ಸಿನ ನಂತರ ಅವರ ತಾರಾ ವೃತ್ತಿಯೇ ಬದಲಾಯ್ತು. ಸಾಕಷ್ಟು ಕಹಿ ಪ್ರಸಂಗಗಳು ಜೀವನದಲ್ಲಿ ನಡೆದಿದ್ದರೂ ಅದೃಷ್ಟ ದೇವತೆ ದರ್ಶನ್‌ ಕೈ ಹಿಡಿದಳು. ಸಾರಥಿ ನಂತರ ಬಂದಂಥ `ಸಂಗೊಳ್ಳಿ ರಾಯಣ್ಣ’ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿತು. ಒಟ್ಟಿನಲ್ಲಿ ದರ್ಶನ್‌ ಗೆ ಶುಭಕಾಲ ಬಂದೈತೆ! ಇತ್ತೀಚೆಗೆ ಇವರು ನಟಿಸಿದ `ಬುಲ್ ‌ಬುಲ್‌’ ನೂರು ದಿನ ಆಚರಿಸಿತು. ತಾಂತ್ರಿಕ ವರ್ಗದವರೆಲ್ಲರೂ ಸೇರಿ ನಿರ್ಮಿಸಿದ್ದ `ಬುಲ್ ‌ಬುಲ್‌’ ಚಿತ್ರದಲ್ಲಿ ದರ್ಶನ್‌ ಒಂದು ಒಳ್ಳೆ ಉದ್ದೇಶವಿಟ್ಟುಕೊಂಡು ನಟಿಸಿದ್ದರು. ಬಂದ ಲಾಭದಲ್ಲಿ ನಿರ್ಮಾಪಕರು ಎಲ್ಲರಿಗೂ ಸಮಪಾಲು ಹಂಚಿದರು. ಅಂದರೆ ನಿರ್ದೇಶಕ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ, ಗೀತರಚನೆಕಾರ ಹೀಗೆ ಸಿನಿಮಾ ವಿಭಾಗದ ಎಲ್ಲರೂ ಸೇರಿ ಈ ಚಿತ್ರ ನಿರ್ಮಿಸಿದ್ದು ಅವರು ಕೂಡಾ ಲಾಭದ ಖುಷಿಯಲ್ಲಿದ್ದಾರೆ. `ಬುಲ್ ಬುಲ್‌’ ಚಿತ್ರದಲ್ಲಿ ನಟಿಸಿದ್ದ ಅಂಬರೀಷ್‌ ಇಂದು ಸಚಿವರಾಗಿದ್ದಾರೆ. ಅವರು ಕೂಡಾ ನೂರರ ಸಂಭ್ರಮದಲ್ಲಿ ಪಾಲ್ಗೊಂಡರು.

ವಿನ್ನಿಂಗ್ಸ್ಟಾರ್ಆದ ಶರಣ್

Chitrashobha-4

ಕಾಮಿಡಿ ಪಾತ್ರಗಳನ್ನು ಮಾಡಿಕೊಂಡು ಆಗಾಗ ಮನಸ್ಸಿಲ್ಲದಿದ್ದರೂ ಸಣ್ಣಪುಟ್ಟ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದ ಶರಣ್‌ ಅನೇಕ ಬಾರಿ ತಮ್ಮ ನೋವನ್ನು ಹೇಳಿಕೊಂಡಿದ್ದಿದೆ. ಎಷ್ಟೋ ಸಲ ಅವರು ಮಾಡುತ್ತಿದ್ದ ಕಾಮಿಡಿ ಅವರಿಗೇ ಸಿಲ್ಲಿ ಎನಿಸುತ್ತಿತ್ತು. ಜನರನ್ನು ನ್ಯಾಯವಾಗಿ ನಗಿಸಬೇಕು, ಕಲಬೆರಕೆ ಇರಬಾರದು ಎಂದು ಅವರು ಆಸೆಪಡುತ್ತಿದ್ದರು. ಇಷ್ಟಾದರೂ ಸಹ ಶರಣ್‌ ಯಾವುದೇ ಪಾತ್ರ ಮಾಡುತ್ತಿರಲಿ ಫುಲ್ ನ್ಯಾಯ ಒದಗಿಸುತ್ತಿದ್ದರು, ಜನರನ್ನು ನಗಿಸುತ್ತಿದ್ದರು. ಶರಣ್‌`ರಾಂಬೋ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದಾಗ ಹಾಸ್ಯನಟನೊಬ್ಬ ಹೀರೋ ಆಗುತ್ತಿದ್ದಾನೆ, ನೋಡೋಣ ಎಂದು ಜನ ಆಡಿಕೊಂಡರು. ಆದರೆ `ರಾಂಬೋ’ ಚಿತ್ರದಲ್ಲಿ ಶರಣ್‌ ನಾಯಕರಾಗಿ ಗೆದ್ದುಬಿಟ್ಟರು. ಹಾಡು, ಡ್ಯಾನ್ಸ್, ಅಭಿನಯ ಎಲ್ಲ ಕ್ಲಿಕ್‌ ಆಯ್ತು. ಒಳ್ಳೆ ಹೀರೋ ಆಗಿ ಯಶಸ್ವಿಯಾದ ಮೇಲೆ ಮತ್ತೆ ಕಾಮಿಡಿ ರೋಲ್ ಗಳತ್ತ ತಲೆ ಹಾಕುವಂತಿಲ್ಲ. ಆದರೆ ಶರಣ್‌ ಸ್ನೇಹದ ಸಲುವಾಗಿ `ಬುಲ್ ಬುಲ್‌’ ಚಿತ್ರದಲ್ಲಿ ನಟಿಸಿದರು. ಈಗ ಶರಣ್‌ ವಿನ್ನಿಂಗ್‌ ಸ್ಟಾರ್‌ ಎನಿಸಿಕೊಳ್ಳುವಷ್ಟು ಜನಪ್ರಿಯರಾಗಿಬಿಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ `ವಿಕ್ಟರಿ’ ಚಿತ್ರದಲ್ಲಿ ಶರಣ್‌ ಮತ್ತೊಮ್ಮೆ ಜಯ ಸಾಧಿಸಿದ್ದಾರೆ. ಈ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಒಳ್ಳೆ ಗಳಿಕೆಯಾಗುತ್ತಿದೆ. ಶರಣ್‌ ನಾಯಕನಾಗಿ ನಟಿಸಿದ ಎರಡು ಚಿತ್ರಗಳೂ ಹಿಟ್‌ ಆಗಿರೋದ್ರಿಂದ ಈತ ಸ್ಯಾಂಡಲ್ ವುಡ್‌ ನ ವಿನ್ನಿಂಗ್‌ ಸ್ಟಾರ್‌ ಆಗಿದ್ದಾರೆ.

ದಿಲ್ ವಾಲ

Chitrashobha-5

ಸುಮಂತ್‌ ಅನಿಲ್ ನಿರ್ದೇಶನದ ಶೈಲೇಂದ್ರಬಾಬು ನಿರ್ಮಾಣದ `ದಿಲ್ ವಾಲ’ ಚಿತ್ರದ ಹಾಡುಗಳನ್ನು ನೋಡಿದವರೆಲ್ಲರಿಗೂ ಚಿತ್ರದ ನಾಯಕ ಸುಮಂತ್‌ ಸಾಕಷ್ಟು ಬದಲಾಗಿದ್ದಾರೆ ಅನಿಸುತ್ತೆ. `ಆಟ’ ಮೊದಲ ಚಿತ್ರವಾಗಿತ್ತು. ಆಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸುಮಂತ್‌ ಅಂಬೆಗಾಲಿಡುತ್ತಿದ್ದರು. ಆದರೆ `ದಿಲ್ ವಾಲ’ ಚಿತ್ರದಲ್ಲಿ ಅವರ ಗೆಟಪ್‌, ಸ್ಟೈಲ್‌, ಡ್ಯಾನ್ಸ್ ಮಾಡುವ ರೀತಿ ಎಲ್ಲ ಹೊಸದಾಗಿದೆ. ಮೈಚಳಿ ಬಿಟ್ಟು ನಟಿಸಿದ್ದಾರೆ ಎಂದು ಹೇಳಬಹುದು. `ಎತ್ತಾಕ್ಕೊಂಡು ಹೋಗು…..’ ಹಾಡಂತೂ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ರಾಧಿಕಾ ಪಂಡಿತ್‌ ನಾಯಕಿಯಾಗಿದ್ದು ಸುಮಂತ್‌ ನಾಯಕನಾಗಿರುವ `ದಿಲ್ ವಾಲ’ ಚಿತ್ರದ ಬಗ್ಗೆ ನಿರ್ಮಾಪಕ ನಿರ್ದೇಶಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಪ್ರಮೋಷನ್ಸ್ ಕೂಡಾ ಗ್ರ್ಯಾಂಡಾಗಿ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಶೈಲೇಂದ್ರಬಾಬು ಹೆಸರು ಮಾಡಿರುವಂಥ ನಿರ್ಮಾಪಕರು, ವಿತರಕರು. ಅವರನ್ನೇ ಎಲ್ಲರೂ ಹೀರೋ ಎನ್ನುತ್ತಿದ್ದರು. ಈಗ ಮಗನನ್ನೇ ಹೀರೋ ಮಾಡಿ ಖುಷಿಪಡುತ್ತಿದ್ದಾರೆ.

ಸುದೀಪ್‌ 40 ಹುಟ್ಟುಹಬ್ಬದ ಸೀಸನ್

Chitrashobha-6

ತಾರೆಯರಲ್ಲಿ ಕೆಲವರದು ಸೆಪ್ಟೆಂಬರ್‌ ತಿಂಗಳಲ್ಲಿ ಸಾಲಾಗಿ ಬರ್ತ್‌ ಡೇಗಳು ಆಚರಣೆಯಾಗುತ್ತದೆ. ಸುದೀಪ್‌ ಸೆಪ್ಟೆಂಬರ್‌ 2 ರಂದು ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಯಲ್ಲಿ ಎಂದಿನಂತೆ ಆಚರಿಸಿಕೊಂಡರು. ಅವರ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಬೆಳಗ್ಗೆಯಿಂದಲೇ ಸೇರಿದ್ದರು. ಅವರಿಗಾಗಿ ಪ್ರತ್ಯೇಕ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಸುದೀಪ್‌ ಗಾಗಿ ಕೇಕ್‌ ಗಳು, ಹೂಗುಚ್ಛಗಳು, ಶುಭಾಶಯಗಳನ್ನು ನೀಡಲು ಅಭಿಮಾನಿಗಳು ಕ್ಯೂನಲ್ಲಿ ನಿಂತು ಸಂಜೆವರೆಗೂ ಸಡಗರದಿಂದ ಆಚರಿಸುತ್ತಿದ್ದರು. ಸುದೀಪ್‌ ಕುಟುಂಬದವರು ಅಭಿಮಾನಿಗಳ ಸಲುವಾಗಿ ಊಟದ ವ್ಯವಸ್ಥೆ ಕೂಡಾ ಮಾಡಿದ್ದರಂತೆ. ಸುದೀಪ್ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಜನಪ್ರಿಯತೆ ಕಂಡುಕೊಂಡಂಥ ಸ್ಟಾರ್‌. ಬಿಗ್‌ ಬಾಸ್‌ ರಿಯಾಲಿಟಿ ಶೋ ಮತ್ತು `ಈಗ’ ಚಿತ್ರದ ಯಶಸ್ಸು ಅವರನ್ನು ಇನ್ನೂ ಎತ್ತರಕ್ಕೆ ಕರೆದೊಯ್ದಿದೆ. ಸದ್ಯಕ್ಕೆ `ಮಿರ್ಚಿ’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಸುದೀಪ್‌ ಈ ಚಿತ್ರದಲ್ಲಿ ರವಿಚಂದ್ರನ್‌ ಅವರಿಗೆ ಪ್ರಮುಖ ಪಾತ್ರ ನೀಡಿ ನಿರ್ದೇಶಿಸುತ್ತಿರುವುದು ವಿಶೇಷ. ರವಿಚಂದ್ರನ್‌ ಸುದೀಪ್‌ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. `ಮಿರ್ಚಿ’ ತೆಲುಗಿನ ರೀಮೇಕಾಗಿದ್ದು, ಸುದೀಪ್‌ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ ಈ ವರ್ಷ ಅವರು ಒಟ್ಟು ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಹಿಂದಿ ಚಿತ್ರವೊಂದಕ್ಕೂ ಎಸ್‌ ಎಂದಿರುವ ಸುದೀಪ್‌ ಭಾರತೀಯ ಚಿತ್ರರಂಗದಲ್ಲಿ ಎಲ್ಲರ ಗಮನಸೆಳೆಯುವಂಥ ನಾಯಕ.

ರೂಪಿಕಾ ಬರ್ತ್ಡೇ

Chitrashobha-7

ಪುಟ್ಟ ಹುಡುಗಿಯಿಂದಲೇ ಕಲೆಯ ಹುಚ್ಚು. ಆವರು ವರ್ಷದಿಂದಲೇ ನೃತ್ಯಾಭ್ಯಾಸ. ಲೆಕ್ಕವಿಲ್ಲದಷ್ಟು ಕಾರ್ಯಕ್ರಮ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ನಟಿ ರೂಪಿಕಾ ಕನ್ನಡ ಚಿತ್ರ ರಂಗದಲ್ಲಿ ಈಗಷ್ಟೇ ಚಿಗುರುತ್ತಿರುವ ಪ್ರತಿಭೆ. ಇತ್ತೀಚೆಗೆ ರೂಪಿಕಾ ತನ್ನ ಹತ್ತೊಂಬತ್ತನೆ ವರ್ಷದ ಹುಟ್ಟುಹಬ್ಬವನ್ನು ಸಾಯಿ ಪಾರ್ಟಿ ಹಾಲ್ ‌ನಲ್ಲಿ ವಿಶೇಷ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡಳು. ಸಾಯಿಬಾಬಾ ಭಕ್ತೆಯಾಗಿರೋದ್ರಿಂದ ಅಂದು ಸಾಯಿ ಭಜನೆ ಏರ್ಪಾಡಾಗಿತ್ತು.  ಸಾಯಿ ಗೋಲ್ಡ್ ನ ಸರವಣನ್‌ ಅವರು ಕೂಡಾ ರೂಪಿಕಾ ಹುಟ್ಟುಹಬ್ಬಕ್ಕೆ ಆಗಮಿಸಿ ಶುಭಕೋರಿದರು. ಅಂದಿನ ವಿಶೇಷವೆಂದರೆ ರೂಪಿಕಾ ಅಂಧಮಕ್ಕಳ ಜೊತೆ ಸೇರಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದು, ಈ ರೀತಿ ಬರ್ತ್‌ ಡೇ ಆಚರಿಸಿಕೊಳ್ಳಬೇಕೆಂದು ಬಹಳ ವರ್ಷಗಳಿಂದ ಅಂದುಕೊಂಡಿದ್ದಳಂತೆ, “ನಾನು ದುಡ್ಡು ಸಂಪಾದನೆ ಮಾಡಲು ಶುರುಮಾಡಿದ ಮೇಲೆ ನನಗೆ ಸಿಗುವ ಸಂಭಾವನೆಯಲ್ಲಿ ಸ್ವಲ್ಪವಾದರೂ ಅಂಧಮಕ್ಕಳ ಶಾಲೆಗೆ ಡೊನೇಟ್‌ ಮಾಡಬೇಕೆಂದು ಈ ಬಾರಿ ಬರ್ತ್‌ ಡೇ ದಿನದಂದು ಅವರಿಗೆ ಹತ್ತು ಸಾವಿರ ರೂಪಾಯಿ ಚೆಕ್‌ ನೀಡಿದೆ. ನನ್ನದಿದು ಅಳಿಲು ಸೇವೆ, ಬಾಬಾ ನನಗೆ ಆಶೀರ್ವಾದ ಮಾಡಿದರೆ ಇನ್ನಷ್ಟು ಸಹಾಯ ಮಾಡ್ತೀನಿ,” ಎಂದು ರೂಪಿಕಾ ಹೇಳುತ್ತಿದ್ದಳು. ಈಕೆ `ಉಮೇಶ್‌ ರೆಡ್ಡಿ’ ಚಿತ್ರದಲ್ಲಿ ನಟಿಸಿದ್ದು ಬಿಡುಗಡೆಗೆ ರೆಡಿಯಾಗಿದೆ.

ಜಯಮ್ಮನ ಮಗ ಪಾರ್ಟ್ದುನಿಯಾ

Chitrashobha-8

ವಿಜಯ್‌ ಅವರ ಕನಸಿನ ಚಿತ್ರ `ಜಯಮ್ಮನ ಮಗ.’ ಈ ಚಿತ್ರವನ್ನು ಎಂಟು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರು. ಮೊದಲ ವಾರದಲ್ಲೇ ನಾಲ್ಕೂವರೆ ಕೋಟಿ ಗಳಿಸಿ ವಿಜಯ್‌ ಗೆದ್ದಿದ್ದಾರೆ. ಈ ಗೆಲುವು ಅವರಿಗೆ ಬೇಕಿತ್ತು. ನಿರ್ಮಾಪಕರಾಗಿ ಗೆದ್ದಿದ್ದಾರೆ, ಹಾಗೆಯೇ ನಟರಾಗಿಯೂ ಸೆಂಟಿಮೆಂಟ್‌ ಜೊತೆ ಮಾಟ ಮಂತ್ರ ಮೂಢನಂಬಿಕೆ ವಿರುದ್ಧ ಹೋರಾಡಿ ಗೆದ್ದರು. `ಜಯಮ್ಮನ ಮಗ’ ಚಿತ್ರಕ್ಕೆ ಮಹಿಳಾ ಪ್ರೇಕ್ಷಕರು ಹೆಚ್ಚಾಗಿರೋದು ವಿಜಯ್‌ ಗೆ ಹೆಚ್ಚು ಖುಷಿ ತಂದಿದೆ. `ದುನಿಯಾ’ ಚಿತ್ರ ಬಿಡುಗಡೆಯಾದಾಗಲೂ ಸಹ ಮಹಿಳಾ ಪ್ರೇಕ್ಷಕರು ಹೆಚ್ಚಾಗಿ ಈ ಚಿತ್ರ ನೋಡಿ ವಿಜಿ ಬೆನ್ನು ತಟ್ಟಿದ್ದರು. `ಜಯಮ್ಮನ ಮಗ’ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಜಯಭೇರಿ ಬಾರಿಸುತ್ತಿದೆ. ವಿಜಯ್‌ ಮತ್ತು ಅವರ ತಂಡ `ಜಯಮ್ಮನ ಮಗ ಪಾರ್ಟ್‌’ ಮಾಡು ಯೋಜನೆ ಹಾಕಿಕೊಳ್ಳುತ್ತಿದ್ದಾರಂತೆ. ಈ ಬಾರಿ ವಿಜಯ್‌ ಜಯಮ್ಮನ ಮಗನಾಗಿ ಯಾರ ವಿರುದ್ಧ ಹೋರಾಡುತ್ತಾರೆಂದು ಕಾದು ನೋಡೋಣ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ