ಮಹಾಕುಂಭಮೇಳದಲ್ಲಿ ತನ್ನ ನೀಲಿಗಣ್ಣಿನಿಂದಲೇ ನ್ಯಾಷನಲ್ ಕ್ರಶ್ ಆಗಿ ವೈರಲ್ ಆಗಿರುವ ಮಧ್ಯಪ್ರದೇಶದ ಮೊನಾಲಿಸಾ ಬೋಸ್ಲೆಗೆ ಬಿಗ್ ಆಫರ್ ಸಿಕ್ತಿದೆ. ಮಹಾಕುಂಭದ ಮೊನಾಲಿಸಾ ಅಂತಾನೇ ಖ್ಯಾತಿ ಗಳಿಸ್ತಿರುವ ಈ 16 ವರ್ಷದ ಹುಡುಗಿಗೆ ಬಾಲಿವುಡ್ ಮೂವಿಯಲ್ಲಿ ನಟಿಸೋಕೆ ಚಾನ್ಸ್ ಸಿಕ್ತಿದೆ. ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವ ಈ ಮೊನಾಲಿಸಾ ಇನ್ಮುಂದೆ ಬಾಲಿವುಡ್ನಲ್ಲಿ ಹೀರೋಯಿನ್ ಆಗೋ ಅವಕಾಶ ಬಂದೊದಗಿದೆ.
ಆಕರ್ಷಕ ಕಣ್ಣುಗಳ ಜೊತೆ ಮುಗ್ದ ನಗುವಿನ ಮೂಲಕ ಎಲ್ಲರ ಅಟ್ರಾಕ್ಷನ್ ಆಗಿರುವ ಮೊನಾಲಿಸಾಳಗೆ ಚಾನ್ಸ್ ಕೊಟ್ಟು ಒಂದು ಮೂವಿ ಮಾಡೋಣ ಅಂತಾ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಚರ್ಚೆ ಮಾಡುತ್ತಿದ್ದಾರೆ. ಸದ್ಯ ಸನೋಜ್ ಮಿಶ್ರಾ ನಿರ್ದೇಶಿಸುತ್ತಿರುವ ‘ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ಮೊನಾಲಿಸಾ ನಾಯಕಿ ಆಗೋದು ಬಹುತೇಕ ಖಚಿತವಾಗಿದೆ. ಈ ಸಿನಿಮಾದ ನಟನೆಗಾಗಿ ಮೊನಾಲಿಸಾಳ ಲುಕ್ ಟೆಸ್ಟ್ ಕೂಡ ನಡೆಸಲಾಗಿದೆ ಅಂತಾ ಬಿಟೌನ್ ವರದಿ ಮಾಡಿದೆ.
ಆದರೆ, ಅದಕ್ಕೂ ಮುನ್ನ ಮೊನಾಲಿಸಾಗೆ ಅಭಿನಯ ಕುರಿತಂತೆ ವೃತ್ತಪರತೆಯ ತರಬೇತಿ ಕೊಡಲಾಗುತ್ತದೆ. ಸಿನಿಮಾದ ಸಂಭಾಷಣೆ ಹೇಗಿರುತ್ತೆ..? ಯಾವ ಸೀನ್ಗೆ ಯಾವ ರೀತಿ ಮುಖಭಾವ ಹೊಂದಿರಬೇಕು..? ಧ್ವನಿಯನ್ನು ಹೇಗೆ ಪಾಲಿಶ್ ಮಾಡಿಕೊಳ್ಳಬೇಕು..? ನಡೆಯೋ ಸ್ಟೈಲ್ ಹೇಗಿರಬೇಕು..? ತಮ್ಮ ಬ್ಯೂಟಿಯನ್ನ ಹೇಗೆ ಕಾಪಾಡಿಕೊಳ್ಳಬೇಕು..? ಹೀಗೆ ಎಲ್ಲವನ್ನೂ ಮೊನಾಲಿಸಾಗೆ ಹೇಳಿಕೊಡಲಾಗುತ್ತದೆ. ಬಳಿಕ ಚಿತ್ರದಲ್ಲಿ ಆಕ್ಷನ್ ಕಟ್ ಹೇಳಲಾಗುತ್ತದೆ.
ಸದ್ಯ ಮೊನಾಲಿಸಾ ವೈರಲ್ ಆದ ನಂತರ ಆಕೆಗೆ ಮೇಕ್ಓವರ್ ಮಾಡ್ತಿರೋ ವಿಡಿಯೋ ಬುಝ್ ಕ್ರಿಯೇಟ್ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ವೈರಲ್ ಆಗಿ ಈಕೆಯ ಹೆಸರಿನಲ್ಲೇ ಹಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡುತ್ತಿದ್ದಾರೆ. ಬೇಸರದ ಸಂಗತಿಯೆಂದರೆ ಮಹಾಕುಂಭಮೇಳದಲ್ಲಿ ತಮ್ಮ ತಂದೆ, ತಂಗಿ ಜೊತೆ ರುದ್ರಾಕ್ಷಿ ಮಾರುತ್ತಿದ್ದ ಈ ಮೊನಾ ಬೋಸ್ಲೆಗೆ ಯೂಟ್ಯೂಬರ್ಸ್ ಕಾಟ ಜೋರಾಗಿತ್ತು.
ಈಕೆಯ ವಿಡಿಯೋಗಳು ವೈರಲ್ ಆಗ್ತಿದ್ದಂತೇ ಕೆಲವರಂತೂ ಈಕೆಯ ವಿಡಿಯೋ ಮಾಡೋಕೆ ಧಮಕಿ ಕೂಡ ಹಾಕ್ತಿದ್ದರಂತೆ. ಇದರಿಂದ ಈಕೆ ವ್ಯಾಪಾರ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಇವರ ತಂದೆ ಈಕೆಯನ್ನು ಊರಿಗೆ ಕಳಿಸಿದ್ದರು.
ಇದೀಗ ಈಕೆಗೆ ಬಾಲಿವುಡ್ನಿಂದ ಒಂದು ಆಫರ್ ಬಂದಿದ್ದು ಉತ್ತಮ ಭವಿಷ್ಯ ನಿರ್ಮಾಣದ ಮುನ್ಸೂಚನೆ ಸಿಕ್ಕಂತಾಗಿದೆ. ಆದ್ರೆ, ಹುಡುಗಿಯ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡು ಒಂದೆರಡು ಚಾನ್ಸ್ ಕೊಟ್ಟು ನಡುಬೀದಿಯಲ್ಲಿ ಕೈಬಿಡುವಂತಾಗಬಾರದು. ಈ ಹಿಂದೆನೂ ಕೂಡ ಬೀದಿಯಲ್ಲಿ ಹಾಡು ಹಾಡ್ತಿದ್ದ ರಾನು ಮಂಡಲ್ ರಾತ್ರೋರಾತ್ರಿ ಫೇಮಸ್ ಆಗಿದ್ದರು. ರಾನುಗೆ ಹಿಂದಿ ಆಲ್ಬಮ್ ಸಾಂಗ್ ಹಾಡೋ ಅವಕಾಶ ಕೊಡಲಾಗಿತ್ತು. ತೇರಿ ಮೇರಿ ಹಾಡು ರಾನು ಕಂಠದಲ್ಲಿ ಸೂಪರ್ ಹಿಟ್ ಆಗಿತ್ತು. ಬಳಿಕ ಆಕೆಯ ಸದ್ದೇ ಇಲ್ಲದಂತಾಯ್ತು. ಹೀಗಾಗಿ ರಾನು ಮಂಡಲ್ ಸ್ಥಿತಿ ಮೊನಾಲಿಸಾಗೆ ಆಗದೇ ಇರಲಿ ಅನ್ನೋದು ಸೋಷಿಯಲ್ ಮೀಡಿಯಾ ಮಂದಿಯ ಮನವಿ.