`ಅಮ್ಮನ ಮನೆಯಿಂದ ಅತ್ತೆಯ ಮನೆಗೋಗಿ ಮುತ್ತಂತೆ ಬಾಳು ನನ್ನ ತಂಗಿ,’ ಎಂಬ ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿತ್ತು. ಆ ಜನಪದ ಹಾಡಿಗೆ ಸಮೀಪದಲ್ಲಿಯೇ ಕೆಲವರು ಹೆಜ್ಜೆ ಹಾಕುತ್ತಿದ್ದರೆ, ಇತ್ತ ಪ್ರತೀಕ್ಷಾಳ ಹೃದಯದಲ್ಲಿ ಏನೋ ಒಂಥರದ ನೋವಿನ ಅನುಭವವಾಗುತ್ತಿತ್ತು. ಅಮ್ಮಅಪ್ಪ ಹಾಗೂ ಅಣ್ಣನ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು.

ಕೆಲವು ದಿನಗಳ ಹಿಂದಷ್ಟೇ ಪ್ರತೀಕ್ಷಾ ಅಣ್ಣನೆದುರು ಒಂದು ಸವಾಲು ಹಾಕಿದ್ದಳು. ಗಂಡನ ಮನೆಗೆ ಹೋಗುವಾಗ ಅತ್ತು ಕಣ್ಣೀರು ಸುರಿಸುವಷ್ಟು ದುರ್ಬಲಳಲ್ಲ ನಾನು. ಅಂದಹಾಗೆ ನಾನು ಅಳಬೇಕಾದ ಅವಶ್ಯಕತೆಯಾದರೂ ಏನಿದೆ? ನನಗಿಷ್ಟವಾದನ ಜೊತೆಗೇ ಅಮ್ಮ ಅಪ್ಪ ಮದುವೆಯಾಗಲು ಅವಕಾಶ ಕೊಟ್ಟಿದ್ದಾರೆ. ಅದೂ ಕೂಡ ಅಂತರ್ಜಾತೀಯ ಮದುವೆ. ಅವಳು ತನ್ನ ಅಣ್ಣನನ್ನು ಈ ಕುರಿತಂತೆ ಸಾಕಷ್ಟು ಛೇಡಿಸಿದ್ದಳು. ಆದರೆ ಇವತ್ತು ಎಲ್ಲರ ಕಣ್ಣುಗಳಲ್ಲಿ ಕಣ್ಣೀರು ಕಂಡು ಅವಳಿಗೂ ದುಃಖ ಒತ್ತಿ ಬಂದಿತ್ತು. ಅವಳೂ ಬಿಕ್ಕಿ ಬಿಕ್ಕಿ ಅಳುತ್ತಾ ಅಮ್ಮನನ್ನು ಬಾಚಿ ತಬ್ಬಿಕೊಂಡಿದ್ದಳು.

ಅಣ್ಣ ಅಲ್ಲಿಗೆ ಬಂದು ತನ್ನ ಮುಂದೆ ಹಾಕಿದ್ದ ಸವಾಲನ್ನು ನೆನಪಿಸುತ್ತಾ, ಅವಳನ್ನು ನಗಿಸಿದ್ದ. ಇಲ್ಲದಿದ್ದರೆ ಅವಳ ಕಾಲುಗಳಿಗೆ ಅತ್ತೆ ಮನೆಯ ಕಡೆ ಹೊರಟಿದ್ದ ಕಾರಿನತ್ತ ಹೋಗುತ್ತಲೇ ಇರಲಿಲ್ಲ. ಅವಳು ಎಲ್ಲರನ್ನೂ ಅಳಲು ಬಿಟ್ಟು ತಾನು ಕಾರಿನಲ್ಲಿ ಹೋಗಿ ಕುಳಿತಳು.

ಅತ್ತೆಮನೆಯಲ್ಲಿ ಅತ್ತೆ ಮಾವ ಕೂಡ ಅವಳ ಸ್ವಾಗತಕ್ಕೆ ಭವ್ಯ ವ್ಯವಸ್ಥೆ ಮಾಡಿದ್ದರು. ಈ ರೀತಿಯ ಭಾವಪೂರ್ಣ ಸ್ವಾಗತವನ್ನು ಅವಳು ಊಹೆ ಕೂಡ ಮಾಡಿರಲಿಲ್ಲ. ಎಲ್ಲ ಔಪಚಾರಿಕತೆಗಳನ್ನು ಮುಗಿಸಿ ನಾದಿನಿ ಅವಳನ್ನು ರೂಮಿಗೆ ಬಿಟ್ಟುಹೋದಳು. ಅಷ್ಟೊಂದು ದಣಿದಿದ್ದಾಗ್ಯೂ ಅವಳು ಮಂಚದ ಮೇಲೆ ಕುಳಿತು ಪ್ರೇಮಿಯಿಂದ ಪತಿಯಾದ ಅಭಿಷೇಕ್‌ ಗಾಗಿ ನಿರೀಕ್ಷಿಸುತ್ತಿದ್ದಳು. ಆಗ ನಗುತ್ತಲೇ ಅಭಿಷೇಕ್‌ ಒಳಗೆ ಪ್ರವೇಶಿಸಿ, “ಓಹೋ…. ಅಂತೂ ನೀನು ನನ್ನ ಮನದೊಡತಿಯಾದೆ. ನಾವಿಬ್ಬರೂ ಗಂಡ ಹೆಂಡತಿ ಆಗ್ತೀವೋ, ಇಲ್ಲವೋ ಎನ್ನುವ ನಂಬಿಕೆಯೇ ಇರಲಿಲ್ಲ. ನೀನು ನಿಜವಾಗಿಯೂ ನನ್ನ ಪ್ರತೀ… ತಾನೇ,” ಎಂದು ಹೇಳುತ್ತಾ ಅವಳನ್ನು ಎತ್ತಿಕೊಂಡು ಗರಗರ ತಿರುಗಿಸಿದ.

ಮರುದಿನವೇ ಅಭಿಯ ತಾಯಿ ತಂದೆ ಅವರಿಬ್ಬರ ಕೈಗೆ ಸಿಂಗಾಪೂರ್‌ ಏರ್‌ ಟಿಕೆಟ್‌ ನ ಕವರ್‌ ಕೊಡುತ್ತಾ, “ಇಬ್ಬರೂ, ನಿಮ್ಮ ಹನಿಮೂನ್‌ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಿ,” ಎಂದರು.ಅಂದಹಾಗೆ ಇಬ್ಬರಿಗೂ ಹನಿಮೂನ್‌ ಪ್ರವಾಸದ ಬಗ್ಗೆ ಗೊತ್ತೇ ಇರಲಿಲ್ಲ. ಅವರು ಆಶ್ಚರ್ಯಚಕಿತರಾಗಿ ಅಮ್ಮ ಅಪ್ಪನ ಕಡೆ ನೋಡತೊಡಗಿದರು. ಪ್ರತೀಕ್ಷಾಳಿಗಂತೂ ಆಕಾಶದಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಈವರೆಗೆ ಅವಳು ಕನಸಿನಲ್ಲಷ್ಟೇ ಸಿಂಗಾಪೂರ ಪ್ರವಾಸದ ಅನುಭವ ಪಡೆದಿದ್ದಳು. ಆದರೆ ಅದೀಗ ನಿಜವಾಗುತ್ತಿರುವುದು ಬಹಳ ಖುಷಿಯನ್ನು ಉಂಟು ಮಾಡಿತ್ತು. ಕಳೆದ ವರ್ಷವಷ್ಟೇ ಅವಳ ಆಪ್ತ ಗೆಳತಿ ಮೇಘಾ ಸಿಂಗಾಪೂರ್‌ ನಲ್ಲಿ ತನ್ನ ಹನಿಮೂನ್‌ ಟೂರ್‌ ಮುಗಿಸಿಕೊಂಡು ಬಂದಿದ್ದಳು. ತನಗೂ ಇಂತಹ ಅವಕಾಶ ಬಂದರೆ ಎಷ್ಟು ಚೆನ್ನಾಗಿರುತ್ತೆ ಎಂದು ಅವಳು ಯೋಚಿಸಿದ್ದಳಷ್ಟೇ. ಆದರೆ ಅದು ಈಗ ಅದೂ ಇಷ್ಟು ಬೇಗ ನಿಜ ಆಗಬಹುದು ಎಂದು ಅವಳು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.

ಅವಳು ಖುಷಿಯ ಅಲೆಯಲ್ಲಿ ತೇಲುತ್ತಿರುವಾಗವೇ ತವರಿನಿಂದ ಅಮ್ಮನ ಫೋನ್‌ ಬಂತು. ಸಿಂಗಾಪೂರ್‌ ಗೆ ಹನಿಮೂನ್‌ ಟೂರ್‌ ಗೆ ಹೋಗುವ ಬಗ್ಗೆ ಅಮ್ಮನಿಗೆ ವಿಷಯ ತಿಳಿಸುವಾಗ ಅವಳ ಒಂದೊಂದು ಮಾತಿನಲ್ಲೂ ಖುಷಿ ಚಿಮ್ಮುತ್ತಲಿತ್ತು.

“ಅಮ್ಮ, ನಾನು ಕನಸಿನಲ್ಲಿ ಏನು ಯೋಚಿಸಿದ್ದೆನೊ, ಅದೀಗ ನಿಜವಾಗುತ್ತಿದೆ. ಅಮ್ಮ, ಇಲ್ಲಿರುವ ಎಲ್ಲರೂ ಬಹಳ ಒಳ್ಳೆಯವರು. ನನ್ನ ಬಗ್ಗೆ ಬಹಳ ಗಮನ ಕೊಡುತ್ತಾರೆ,” ಎಂದು ಹೇಳುತ್ತಾ ಅವಳು ಫೋನ್‌ ಕಟ್‌ ಮಾಡಿದಳು.

ಸಿಂಗಾಪೂರ್‌ ಮರೀನ್‌ ಬೇನಲ್ಲಿ ಅವರಿಬ್ಬರೂ ಸಾಕಷ್ಟು ಫೋಟೋ ತೆಗೆಸಿಕೊಂಡರು. ರೋಮಾಂಚನದಿಂದ ಕೂಡಿದ ನೈಟ್ ಸಫಾರಿ ಅವರ ಹೃದಯ ಗೆದ್ದಿತು. ಜರೊಂಗ್‌ ಬರ್ಡ್‌ ಪಾರ್ಕ್‌, ಅಕ್ವೇರಿಯಂ ಹಾಗೂ ಸೆಂಟೋಸಾ ದ್ವೀಪದ ಸೌಂದರ್ಯ ಕಂಡು ಅವರು ಮೂಕವಿಸ್ಮಿತರಾದರು. ಅಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳು, ಸುಂದರ ಉದ್ಯಾನಗಳು ಹಾಗೂ ಕಣ್ಮನ ಸೆಳೆಯುವ ಸಮುದ್ರತೀರದಲ್ಲಿ ಅವರು ಪರಸ್ಪರರ ಕೈಯಲ್ಲಿ ಕೈ ಹಾಕಿಕೊಂಡು ಹೋಗುತ್ತಿದ್ದಾಗ, ಇಬ್ಬರಲ್ಲೂ ರೋಮಾಂಚನ ಹಾಗೂ ರೊಮ್ಯಾನ್ಸ್ ಉತ್ತುಂಗ ತಲುಪಿತ್ತು. ನವವಿವಾಹಿತರಿಗಂತೂ ಎಲ್ಲೆಲ್ಲೂ ಪ್ರೀತಿ ಕಂಡು ಬರುತ್ತದೆ. ಹಾಗಾಗಿ ಇಬ್ಬರೂ ಪರಸ್ಪರರ ಪ್ರೀತಿಯಲ್ಲಿ ಮುಳುಗಿ ಆನಂದಿತರಾಗಿದ್ದರು.

ಸಿಂಗಾಪೂರ್‌ ನ ಆ ಪಂಚತಾರ ಹೋಟೆಲ್ ನಲ್ಲಿ ಅವರಿಗೆ ಹನಿಮೂನ್‌ ನ ಪ್ರಥಮ ರಾತ್ರಿಯ ಸಿದ್ಧತೆಯಾಗಿತ್ತು. ಆ ಬಗ್ಗೆ ಯೋಚಿಸಿ ಪ್ರತಿ ಹುಡುಗಿ ಖುಷಿಗೊಳ್ಳುತ್ತಾಳೆ ಹಾಗೂ ಉತ್ತೇಜಿತಳಾಗುತ್ತಾಳೆ. ಕೆಂಬಣ್ಣದ ತೆಳ್ಳನೆಯ ನೈಟಿ ಧರಿಸಿದ್ದ ಅವಳು ಬರಲಿರುವ ಕ್ಷಣಗಳ ಬಗ್ಗೆ ಯೋಚಿಸಿಯೇ ರೋಮಾಂಚಿತಳಾಗಿದ್ದಳು.

ಹೊಟೇಲ್ ನ ರಿಸೆಪ್ಷನ್‌ ನವರಿಗೆ ಮೊದಲೇ ಸೂಚಿಸಿ, ಕೆಂಬಣ್ಣದ ಗುಲಾಬಿ, ಕೆಂಪು ಬಲೂನ್‌ ಹಾಗೂ ಕೆಂಪು ಕ್ಯಾಂಡಲ್ ಗಳ ಅಲಂಕಾರ ಮಾಡಿಸಲಾಗಿತ್ತು.

ಸ್ವಲ್ಪ ಹೊತ್ತಿನಲ್ಲಿಯೇ ಕೆಂಪು ಕುರ್ತಾ ಧರಿಸಿದ್ದ ಅಭಿಷೇಕ್‌ ಅಲ್ಲಿಗೆ ಬಂದ. “ವಾಹ್…ವಾಹ್…. ಎಂತಹ ಅದ್ಭುತ….. ಇಷ್ಟೊಂದು ಕ್ರಿಯೇಶನ್‌ ನನ್ನ ಪ್ರತೀಕ್ಷಾಳಲ್ಲಿ ಮಾತ್ರ ಇರಲು ಸಾಧ್ಯ…..” ಎಂದು ಹೇಳುತ್ತಾ ಅವನು ಪ್ರತೀಕ್ಷಾಳನ್ನು ಚುಂಬಿಸಿದ. ಜಗತ್ತಿನ ಪ್ರತಿ ನವಿವಾಹಿತೆಯ ಹಾಗೆ ಪ್ರತೀಕ್ಷಾಳ ಹೃದಯ ಮಿಡಿತ ಜೋರಾಗಿತ್ತು. ಆರಂಭಿಕ ರತಿಕ್ರಿಯೆಯ ಸಂದರ್ಭದಲ್ಲಿಯೇ ಅವಳು ಮುಂದಿನ ಕ್ಷಣಗಳ ಬಗ್ಗೆ ಯೋಚಿಸಿಯೇ ಅತಿಯಾಗಿ ರೋಮಾಂಚಿತಳಾದಳು. ಆದರೆ ಅವಳ ದೇಹದ ಮೇಲಿನ ಅಭಿಷೇಕ್‌ ನ ಹಿಡಿತ ನಿಧಾನವಾಗಿ ಸಡಿಲವಾಗುತ್ತಿರುವುದು ಅವಳ ಗಮನಕ್ಕೆ ಬಂತು.

ಇದೇನಿದು? ಹೀಗೇಕಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಅಭಿಷೇಕ್‌ ಅವಳಿಂದ ಬೇರ್ಪಟ್ಟ. ಬಳಿಕ ಅವಳ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, “ಪ್ರತೀ… ನಾನು ಬಯಸುವುದೆಂದರೆ, ದೈಹಿಕ ಸಂಬಂಧಕ್ಕಾಗಿ ನಾವಿಬ್ಬರೂ ಇನ್ನೂ ಸಾಕಷ್ಟು ಸಮಯ ಕೊಡಬೇಕು…” ಎಂದ.

ಅಭಿಷೇಕ್‌ ನ ಈ ಪ್ರತಿಕ್ರಿಯೆ ಪ್ರತೀಕ್ಷಾಳಿಗೆ ಅನಿರೀಕ್ಷಿತವಾಗಿತ್ತಾದರೂ ಸಾಮಾನ್ಯ ನವಯುವಕರ ಹಾಗೆ ಅಭಿಷೇಕ್‌ ದೈಹಿಕ ಸಮಾಗಮಕ್ಕಾಗಿ ಯಾವುದೇ ಆತುರ ತೋರಿಸಲಿಲ್ಲ ಎಂದು ಅವಳಿಗೆ ಖುಷಿಯಾಯಿತು.

ಈ ರೀತಿ ಇನ್ನೂ 2-3 ಅವಕಾಶಗಳು ಬಂದರೂ, ಅಭಿಷೇಕ್‌ ಏನಾದರೊಂದು ನೆಪ ಹೇಳಿ ಆ ಅವಕಾಶವನ್ನು ತಳ್ಳಿಹಾಕುತ್ತಿದ್ದ. ಹನಿಮೂನ್‌ ನ ಅಂತಿಮ ರಾತ್ರಿಯಂದು ಪ್ರತೀಕ್ಷಾಳ ತಾಳ್ಮೆಯ ಕಟ್ಟೆಯೊಡೆಯಿತು. ಅವಳು ಅಭಿಷೇಕ್‌ ಗೆ ಎಷ್ಟು ನಿಕಟವಾಗುತ್ತಾ ಹೊರಟಿದ್ದಳೋ, ಅಭಿಷೇಕ್‌ ಅವಳಿಂದ ದೂರಾಗಲು ಪ್ರಯತ್ನಿಸುತ್ತಿದ್ದ. ದೈಹಿಕ ಸಂಬಂಧದ ಪ್ರಸ್ತಾಪ ಬಂದಾಗ ಅವನು ಬೆವರಿನಿಂದ ತೊಯ್ದು ಹೋಗುತ್ತಿದ್ದ. ಕೋಣೆಯಿಂದ ಹೊರಗೆ ಹೋಗುತ್ತಾ ಪ್ರತೀಕ್ಷಾ ಸೂತ್ರ ಕಡಿದುಕೊಂಡ ಗಾಳಿಪಟದ ಹಾಗೆ ಬೆಡ್‌ ಮೇಲೆ ಬಿದ್ದುಕೊಂಡಳು.

ಸ್ವಲ್ಪ ಹೊತ್ತಿನಲ್ಲಿಯೇ ಅಭಿಷೇಕ್‌ ಕೋಣೆಯೊಳಗೆ ಬಂದು, “ಸಾರಿ….. ಸಾರಿ….” ಎಂದು ಹೇಳತೊಡಗಿದ, “ಪ್ರತೀಕ್ಷಾ…. ನನಗೆ ಆ ಸಮಯದಲ್ಲಿ ಏನಾಗುತ್ತೋ ಏನೋ, ಗೊತ್ತೇ ಆಗುವುದಿಲ್ಲ.”

“ಇರಲಿ ಅಭಿ, ತೊಂದರೆಯಿಲ್ಲ. ಎಂದಾದರೊಮ್ಮೆ ಹಾಗಾಗಬಹುದು. ಈಗ ನಿದ್ರೆ ಮಾಡೋಣ. ನಾಳೆ ಬೆಳಗ್ಗೆ ನಮ್ಮ ಫ್ಲೈಟ್‌ ಇದೆ. ಇವತ್ತು ಆಗದಿದ್ದರೆ, ಮತ್ತೆಂದಾದರೂ ಸರಿ….. ಇನ್ಮುಂದೆ ನಾವು ಜೀವನವಿಡೀ ಜೊತೆ ಜೊತೆಗೆ ಇರ್ತೀಲ್ಲ,” ಎಂದು ಹೇಳುತ್ತಾ ಅವಳು ಅವನಿಗೆ ಸಾಂತ್ವನ ಹೇಳಿದಳು. ಆದರೆ ಸ್ವತಃ ಅವಳಿಗೆ ಅಭಿಷೇಕ್‌ ನ ಈ ರೀತಿಯ ವರ್ತನೆ ಅರ್ಥ ಆಗುತ್ತಿರಲಿಲ್ಲ.

ಅವರದು ಪ್ರೀತಿಯ ಮದುವೆ. ಇಬ್ಬರೂ ಕಳೆದ 3 ವರ್ಷಗಳಿಂದ ಒಬ್ಬರನ್ನೊಬ್ಬರು ಅರಿತಿದ್ದರು. ಇಬ್ಬರೂ ಮೆಚ್ಯೂರ್ಡ್‌ ಹಾಗೂ ವೆಲ್ ‌ಸೆಟಲ್ಡ್ ಆಗಿದ್ದರು. ಪ್ರತೀಕ್ಷಾ ಹಿಂದೂ ಕುಟುಂಬದಲ್ಲಿ ಬೆಳೆದು ದೊಡ್ಡವಳಾಗಿದ್ದಳು. ಅವಳ ತಾಯಿ ತಂದೆ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದರು. ಅವಳಿಗೊಬ್ಬ ಅಣ್ಣನೂ ಇದ್ದ. ಇಬ್ಬರೂ ಉದಾರ ವಾತಾವರಣದಲ್ಲಿ ಬೆಳೆದಿದ್ದರು. ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸಿದ್ದ ಪ್ರತಿಕ್ಷಾ ಎಂಬಿಎ ಮುಗಿಸಿ ಬ್ಯಾಂಕಿನಲ್ಲಿ ನೌಕರಿ ಮಾಡುತ್ತಿದ್ದಳು.

ಕ್ರಮೇಣ ಇಬ್ಬರಲ್ಲಿ ನಿಕಟತೆ ಹೆಚ್ಚುತ್ತಾ ಹೋಯಿತು. 3 ವರ್ಷದ ಅಂತರದಲ್ಲಿ ಅವರ ನಿಕಟತೆ ಯಾವಾಗ ಪ್ರೀತಿಯ ರೂಪ ಪಡೆದುಕೊಂಡಿತೊ ಗೊತ್ತೇ ಆಗಲಿಲ್ಲ. ಎರಡೂ ಕುಟುಂಬದಲ್ಲಿ ಇಬ್ಬರ ಮದುವೆಯ ಮಾತುಕತೆಗಳು ಆರಂಭವಾದಾಗ, ಇಬ್ಬರೂ ಪರಸ್ಪರರಿಗೆ ಪ್ರಪೋಸ್‌ ಮಾಡಿದರು. ಇಬ್ಬರೂ ಬೇರೆ ಬೇರೆ ಜಾತಿಯರಾಗಿದ್ದೂ ಕೂಡ ಇಬ್ಬರು ಪೋಷಕರು ತಮ್ಮ ಮಕ್ಕಳ ಖುಷಿಗೆ ಆದ್ಯತೆ ಕೊಟ್ಟರು. ಈ ರೀತಿ ಯಾವುದೇ ಅಡೆತಡೆಯಿಲ್ಲದೆ ಅವರು ವಿವಾಹಬಂಧನದಲ್ಲಿ ಬಂಧಿಗಳಾದರು.

ಅವಳ ಚಿಕ್ಕಪುಟ್ಟ ಆಸೆ ಆಕಾಂಕ್ಷೆಗಳ ಬಗ್ಗೆ ಅಭಿಷೇಕ್‌ ಸಾಕಷ್ಟು ಗಮನ ಕೊಡುತ್ತಿದ್ದ. ಆಲಿಂಗನ, ಚುಂಬನದ ಮೂಲಕ ತನ್ನ ಪ್ರೀತಿ ತೋರ್ಪಡಿಸುತ್ತಿದ್ದ. ಆದರೆ ದೈಹಿಕ ಸಮಾಗಮದ ಸಂದರ್ಭದಲ್ಲಿ ಅವನ ಅನಿರೀಕ್ಷಿತ ವರ್ತನೆಯನ್ನು ಅವಳಿಗೆ ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ.

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು, ಕ್ಯಾಬ್‌ ನಲ್ಲಿ ಹತ್ತಿ ಮನೆ ತಲುಪಿದಾಗ, ಅಭಿಷೇಕ್‌ ನ ತಾಯಿ ತಂದೆ, ಪ್ರತೀಕ್ಷಾಳ ತಾಯಿ ತಂದೆಯರನ್ನು ಮಗಳು ಅಳಿಯನ ಸ್ವಾಗತಕ್ಕಾಗಿ ಕರೆಸಿಕೊಂಡಿದ್ದರು. ತನ್ನ ಮನೆಯಲ್ಲಿ ಎಲ್ಲರನ್ನೂ ಒಂದೇ ಬಾರಿಗೆ ನೋಡಿ ಪ್ರತೀಕ್ಷಾಳ ಕಣ್ಣುಗಳಿಂದ ಆನಂದಾಶ್ರಗಳು ಬಂದ.

ಡಿನ್ನರ್‌ ಬಳಿಕ ಎಲ್ಲರಿಗೂ ವಿದಾಯ ಹೇಳಿ ತನ್ನ ಕೋಣೆಗೆ ಬಂದಾಗ, ಅವಳಿಗೆ ತನ್ನನ್ನು ತಾನು ಅತ್ಯಂತ ರಿಲ್ಯಾಕ್ಸ್ ಎಂಬಂತೆ ಅನುಭವಾಯಿತು. ಮನೆಯ ಸ್ನೇಹ ಹಾಗೂ ಶಾಂತ ವಾತಾವರಣದಲ್ಲಿ ಅಭಿಷೇಕ್‌ ಸಾಮಾನ್ಯ ಸ್ಥಿತಿಗೆ ಬರಬಹುದೆಂಬ ನಂಬಿಕೆ ಅವಳಿಗಿತ್ತು. ಅವಳು ಬ್ಲೂಟೂಥ್‌ ನ ನೆರವಿನಿಂದ ಸ್ಪೀಕರ್‌ ನಲ್ಲಿ ಒಂದು ರೊಮ್ಯಾಂಟಿಕ್‌ ಹಾಡು ಹಾಕಿದಳು. ಅಭಿಷೇಕ್‌ ಬರುವ ಹೊತ್ತಿಗೆ ಅವಳು ಬಹಳ ಉತ್ಸಾಹ ಹಾಗೂ ಉತ್ತೇಜಿತಳಾಗಿದ್ದಳು. ಆದರೆ ಇಂದು ಪುನಃ ಅವಳ ನಂಬಿಕೆ ಹುಸಿಯಾಯಿತು. ದೈಹಿಕ ಸಂಬಂಧದ ಸಂದರ್ಭದಲ್ಲಿ ಅವನು ಬೆವರಿನಿಂದ ತೊಯ್ದು ಹೋದ.

ಪ್ರತೀಕ್ಷಾಳಿಗೆ ಏನೊಂದೂ ಅರ್ಥ ಆಗುತ್ತಿರಲಿಲ್ಲ. ತನ್ನೊಂದಿಗೇ ಹೀಗೇಕಾಗುತ್ತಿದೆ ಎಂಬ ಚಿಂತೆ ಅವಳನ್ನು ಕಾಡತೊಡಗಿತು. ಅಂತಹದ್ದೇನಾದರೂ ಸಮಸ್ಯೆಯಿದ್ದರೆ, ಅಭಿಷೇಕ್‌ ತನ್ನ ಮುಂದೆ ಅದನ್ನೇಕೆ ಹೇಳಲಿಲ್ಲ? ಅವಳು ತುಂಬಿದ ಕಣ್ಣುಗಳಿಂದ ಮಗ್ಗಲು ಬದಲಿಸಿ ಮಲಗಿದಳು. ಇಂದು ಅಭಿಷೇಕ್‌ ತನ್ನ ವತಿಯಿಂದ ಏನನ್ನು ಹೇಳಲಿಲ್ಲ. ಆದರೆ ಅವನು ತನ್ನನ್ನು ತಾನು ಅಪರಾಧಿ ಎಂಬಂತೆ ಭಾವಿಸುತ್ತಿದ್ದ. ಮರುದಿನವೇ ಬ್ಯಾಂಕ್‌ ಕೆಲಸಕ್ಕೆ ಜಾಯಿನ್‌ ಮಾಡಬೇಕಿದ್ದರಿಂದ ಇಬ್ಬರೂ ಮೌನವಾಗಿಯೇ ಮಲಗಿದರು.

ಮರುದಿನ ಬ್ಯಾಂಕ್‌ ಗೆ ಹೋದ ಇಬ್ಬರೂ ತಮ್ಮ ತಮ್ಮ ಕ್ಯಾಬಿನ್‌ ಗಳಲ್ಲಿ ತಮ್ಮ ತಮ್ಮ ಫೈಲ್ ಗಳ ನಿರ್ವಹಣೆ ಮಾಡತೊಡಗಿದರು. ಹನಿಮೂನ್‌ ನಿಂದ ವಾಪಸ್‌ ಬಂದಿದ್ದರಿಂದ ಪ್ರತೀಕ್ಷಾ ಸಹೋದ್ಯೋಗಿಗಳ ತಮಾಷೆಯನ್ನು ಕೇಳಿ ಒಮ್ಮೆ ಮುಗುಳ್ನಗುತ್ತಿದ್ದಳಾದರೂ ಮತ್ತೊಮ್ಮೆ ನಾಚಿಕೆಯಿಂದ ತಲೆ ತಗ್ಗಿಸುತ್ತಿದ್ದಳು.

ಮಧ್ಯಾಹ್ನದ ಊಟದ ಸಮಯದಲ್ಲಿ ಮೇಘಾ ಭೇಟಿಯಾದಾಗ, ಅವಳು ಪ್ರತೀಕ್ಷಾಳಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದಳು, “ಹೇಗಿತ್ತು ನಿನ್ನ ಹನಿಮೂನ್‌? ಎಲ್ಲೆಲ್ಲಿ ಸುತ್ತಾಡಿದಿರಿ? ಏನೇನು ನೋಡಿದಿರಿ? ನಿನ್ನ ಫಸ್ಟ್ ನೈಟ್‌ ನ ಎಕ್ಸ್ ಪೀರಿಯನ್ಸ್ ಹೇಗಿತ್ತು?”

“ಸರಿಯಾಗಿಯೇ ಇತ್ತು. ಮತ್ತೆ ನಿನ್ನದು ಹೇಗೆ ನಡೀತಿದೆ ಹೇಳು?” ಪ್ರತೀಕ್ಷಾ ಶಾಂತವಾಗಿ ಮಾತನ್ನು ಮರೆಸಲು ಪ್ರಯತ್ನಿಸಿದಳು.

“ಓಹ್‌ ಮೇಡಂ…… ಮಾತು ಮರೆಸಲು ಪ್ರಯತ್ನಿಸಬೇಡ. ನಾನು ಎಲ್ಲವನ್ನೂ ಕೇಳಿಯೇ ಕೇಳುತ್ತೇನೆ. ನನಗೆ 1 ವರ್ಷದ ವಿವಾಹ ಜೀವನದ ಎಕ್ಸ್ ಪೀರಿಯನ್ಸ್ ಇದೆ.”

“ಏನೂ ಆಗಿಯೇ ಇಲ್ಲವೆಂದರೆ, ಏನನ್ನು ತಾನೇ ಹೇಳಲಿ? ನನ್ನ ಎಕ್ಸ್ ಪೀರಿಯನ್ಸ್ ಹೋಲ್ಡರ್‌….”

“ಏನೂ ಆಗಿಯೇ ಇಲ್ಲವೆಂದರೆ…..? ನೀವು ಸಿಂಗಾಪೂರ್‌ ಟೂರ್‌ ಹೋಗಿದ್ದು ಮೀಟಿಂಗ್‌ ಮಾಡೋಕಾ?” ಮೇಘಾ ಅಚ್ಚರಿಯ ಧ್ವನಿಯಲ್ಲಿ ಕೇಳಿದಳು.

“ಹೌದು, ಹಾಗೆಯೇ ಎಂದು ಭಾವಿಸು…..” ಎಂದು ಹೇಳುತ್ತಾ ನಡೆದ ಘಟನೆಯನ್ನೇ ಮೇಘಾ ಎದುರು ವಿವರವಾಗಿ ಹೇಳಿದಳು.

“ಈಗ ನೀನು ಹೇಳು. ನಾನೇನು ಉತ್ತರ ಕೊಡಬೇಕೆಂದು? ಇಂತಹ ಸ್ಥಿತಿಯಲ್ಲಿ ನಾನೇನು ಮಾಡಬೇಕು, ಮಾಡಬಾರದು ಎಂದು ನನಗೆ ಗೊತ್ತಾಗುತ್ತಿಲ್ಲ. ಇದು ನನ್ನಿಷ್ಟದ ಮದುವೆ. ಹೀಗಾಗಿ ಅಮ್ಮ ಅಪ್ಪನನ್ನು ದೂರುವಂತಿಲ್ಲ. ಅವರಿಗೂ ಬಾಯಿಬಿಟ್ಟು ವಿಷಯ ಹೇಳುವ ಹಾಗಿಲ್ಲ,” ಪ್ರತೀಕ್ಷಾ ಹತಾಶಭರಿತ ಧ್ವನಿಯಲ್ಲಿ ಹೇಳಿದಳು.

“ಇದಂತೂ ಚಿಂತೆಯ ವಿಷಯ. ಯಾವುದೊ ಒಂದು ವಿಷಯ ನಿಮ್ಮಿಬ್ಬರ ನಡುವೆ ಅಡ್ಡ ಬರುತ್ತಿದೆ. ಅದೇನು ಅಂತಾ ನೀನು ಅಭಿಷೇಕ್‌ ನಿಂದ ಬಾಯಿ ಬಿಡಿಸಬೇಕು. ಅವನನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಷಯ ಹೊರತೆಗೆಸಬೇಕು. ಇಲ್ಲದಿದ್ದರೆ ನಿಮ್ಮಿಬ್ಬರ ವೈವಾಹಿಕ ಜೀವನ ಪಣಕ್ಕೊಡಲ್ಪಡುತ್ತದೆ,” ಎಂದು ಮೇಘಾ ಹೇಳಿದಳು.

“ಹೌದು ನನಗೂ ಇದು ಹಾಗೆಯೇ ಅನಿಸುತ್ತದೆ. ಅದೇನು ಅಂತ ಪ್ರಯತ್ನಿಸ್ತೀನಿ…..”

ಈ ಮಧ್ಯೆ ಊಟದ ವಿರಾಮ ಮುಗಿದಿದ್ದರಿಂದ ಇಬ್ಬರೂ ತಮ್ಮ ತಮ್ಮ ಕ್ಯಾಬಿನ್‌ ಗೆ ಹೊರಟು ಹೋದರು.

ಆಫೀಸ್‌ ನಿಂದ ಹೊರಬರುವಾಗ ಇಬ್ಬರೂ ತಮಾಷೆ ಮಾಡುತ್ತಾ ಮನೆಗೆ ಬಂದರು. ರಾತ್ರಿ ಅಭಿಷೇಕ್‌ ಬೆಡ್‌ ರೂಮಿಗೆ ಬಂದಾಗ, ಪ್ರತೀಕ್ಷಾ ಅಭಿಷೇಕ್‌ ನ ಕೈಯನ್ನು ತನ್ನ ಕೈಯಲ್ಲಿಟ್ಟುಕೊಂಡು, “ಅಭಿ, ಇವತ್ತು ನಮ್ಮ ಮದುವೆಯಾಗಿ 1 ತಿಂಗಳು ಹಾಗೂ ನಮ್ಮಿಬ್ಬರ ಪರಿಚಯವಾಗಿ 3 ವರ್ಷ ಕಳೆದಿದೆ. ಒಬ್ಬರು ಇನ್ನೊಬ್ಬರ ನಂಬಿಕೆ ಸಂಪಾದಿಸಲು ಇಷ್ಟು ಸಮಯ ಸಾಕಲ್ಲವೇ? ಮದುವೆಯ ಬಳಿಕ ಗಂಡ ಹೆಂಡತಿಯ ಸಂಬಂಧ ಜನ್ಮ ಜನ್ಮಾಂತರದ್ದು. ಅಂದರೆ ಅವರದ್ದು ಎಂತಹ ಸಂಬಂಧ ಆಗಿರುತ್ತದೆಂದರೆ ಅದರಲ್ಲಿ ಅಪನಂಬಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಲ್ವಾ…..?” ಎಂದು ಕೇಳಿದಳು.

“ಪ್ರತೀ…. ನೀನೆಂತಹ ಮಾತು ಆಡ್ತಿರುವೆ? ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ,” ಎಂದ.

“ಹಾಗಾದರೆ ಹೇಳು, ನಮ್ಮಿಬ್ಬರ ನಡುವೆ ಅಂತಹದ್ದೇನು ನಡೀತಿದೆ? ಒಂದು ತಿಂಗಳು ಕಳೆದರೂ ನಾವಿಬ್ಬರೂ ಸಮಾಗಮದಲ್ಲಿ ಒಂದಾಗಲು ಸಾಧ್ಯವಾಗುತ್ತಿಲ್ಲ ಏಕೆ? ಅದೇನು ವಿಷಯ ಅಂತ ತಿಳಿಸು. ಇಂದು ವಿಜ್ಞಾನ ಅದೆಷ್ಟು ಪ್ರಗತಿ ಸಾಧಿಸಿದೆ ಎಂದರೆ, ಯಾವುದೇ ಸಮಸ್ಯೆಗೂ ಪರಿಹಾರ ಇಲ್ಲವೆಂದಲ್ಲ. ಏನಿದೆಯೋ ಆ ಸಮಸ್ಯೆಗೆ ನಾವಿಬ್ಬರೂ ಸೇರಿಯೇ ಪರಿಹಾರ ಕಂಡುಕೊಳ್ಳೋಣ,” ಎಂದು ಪ್ರತೀಕ್ಷಾ ಪ್ರೀತಿಯಿಂದ ಹೇಳಿದಳು. ಆದರೆ ಅಭಿಷೇಕ್‌ ಮೌನವಾಗಿ ಕುಳಿತಿದ್ದ.

“ಅಭಿ, ನಿನ್ನ ಮೌನ ನನ್ನನ್ನು ಕಂಗೆಡಿಸುತ್ತಿದೆ. ಪ್ಲೀಸ್‌ ಹೀಗೆ ಕುಳಿತುಕೊಳ್ಳಬೇಡ. ನಿನ್ನ ತೊಂದರೆ ಏನೆಂದು ಹೇಳುವಷ್ಟರ ಮಟ್ಟಿಗೆ ನಾನು ನಿನ್ನವಳಾಗಿಲ್ಲವೇ….? ಎಂದು ಪ್ರತೀಕ್ಷಾ ಕಣ್ಣೀರು ಸುರಿಸುತ್ತಾ ಕೇಳಿದಳು.

“ಪ್ರತೀ…. ಪ್ಲೀಸ್‌ ಅಳಬೇಡ. ನಾನು ನಿನ್ನನ್ನು ಹೀಗೆ ಅಳುಮುಖದಲ್ಲಿ ನೋಡಲು ಆಗುವುದಿಲ್ಲ. ನಾನು ನಿನಗೆ ಯಾವ ವಿಷಯ ಹೇಳಲು ಹೊರಟಿರುವೆನೊ, ಅದಕ್ಕೆ ನೀನು ಹೇಗೆ ಪ್ರತಿಕ್ರಿಯಿಸುವೆಯೋ ಗೊತ್ತಿಲ್ಲ. ಆದರೆ ಈ ವಿಷಯ ನಿನಗೆ ತಿಳಿಸದೇ ನಾನು ಮತ್ತಾರಿಗೆ ತಿಳಿಸಲು ಸಾಧ್ಯ….? ನಾನಾಗ ಎಂಜಿನಿಯರಿಂಗ್‌ ಕಾಲೇಜಿನ ರಿಸ್ಟ್‌ ನ ನಿರೀಕ್ಷೆಯಲ್ಲಿದ್ದೆ. ಅಪ್ಪನ ಬ್ಯಾಂಕಿನಲ್ಲಿ ನವ ವಿವಾಹಿತ ಜೋಡಿಯೊಂದು ಜಾಯಿನ್‌ ಆಗಿತ್ತು. ಅವರ ಹೆಸರು ರವೀಶ್‌ ಮತ್ತು ರತ್ನಾ. ಇಬ್ಬರಿಗೂ ಇದು ಹೊಸ ಸ್ಥಳವಾಗಿತ್ತು.

“ಹಾಗಾಗಿ ಅಮ್ಮ ಅಪ್ಪ ಇಲ್ಲಿಯೇ ಸಮೀಪದ ಕಾಲೋನಿಯಲ್ಲಿ ಅವರಿಗೊಂದು ಬಾಡಿಗೆಗೆ ಮನೆ ಕೊಡಿಸಿದರು. ಅಷ್ಟಿಷ್ಟು ದೂರದಲ್ಲಿದ್ದರೂ ಎರಡೂ ಕುಟುಂಬಗಳಲ್ಲಿ ಸಾಕಷ್ಟು ಅನ್ಯೋನ್ಯತೆ ಇತ್ತು. ನಾನು ಅವರನ್ನು ಅಂಕಲ್ ಆಂಟಿ ಎನ್ನುತ್ತಿದ್ದೆ. ಈಗಲೂ ನಮ್ಮ ಮನೆಯಲ್ಲಿ ಅವರನ್ನು ನಮ್ಮ ಮನೆಯ ಸದಸ್ಯರೆಂಬಂತೆ ಕಾಣವಾಗುತ್ತದೆ. ಅವರು ಕೂಡ ನಮ್ಮ ಮನೆಯವರಿಗೆ ಅಷ್ಟೇ ಗೌರವ ಪ್ರೀತಿ ಕೊಡುತ್ತಾರೆ.”

“ನಾವಿಬ್ಬರೂ ಹನಿಮೂನ್‌ ನಿಂದ ವಾಪಸ್‌ ಬಂದಾಗ, ನಮ್ಮನ್ನು ಭೇಟಿಯಾಗಲು ಬಂದಿದ್ದರಲ್ಲ ಅವರೇನಾ ಅಂಕಲ್ ಆಂಟಿ…..” ಪ್ರತೀಕ್ಷಾ ಮಧ್ಯೆ ಪ್ರವೇಶಿಸಿ ಕೇಳಿದಳು.

“ಹೌದು…. ಹೌದು…. ಅವರೇ….. ಅವರು ಭೇಟಿಯಾಗಲು ಬಂದಿದ್ದು ನಮ್ಮಿಬ್ಬರನ್ನು ಅಲ್ಲ, ನನ್ನನ್ನು ಮಾತ್ರ……”

“ಅಂದರೆ…..?” ಪ್ರತೀಕ್ಷಾ ಆಶ್ಚರ್ಯದಿಂದ ಕೇಳಿದಳು.

“ಹೇಳ್ತೀನಿ….. ರವೀಶ್‌ ಅಂಕಲ್ ಬಹಳ ಸಾದಾ ಸೀದಾ ಮತ್ತು ಪ್ರಾಮಾಣಿಕ ಪ್ರವೃತ್ತಿಯರು. ಅದೇ ಆಂಟಿ ಮಾತ್ರ ಬಹಳ ವಿಚಿತ್ರ ಸ್ವಭಾವದವರು. ಅತಿಯಾದ ಫ್ಯಾಷನ್‌ ಮತ್ತು ಅತಿಯಾದ ಮಹಾತ್ವಾಕಾಂಕ್ಷಿ. ನೀನು ಅದನ್ನು ಗಮನಿಸಿರಬೇಕಲ್ಲವೇ….”

“ಹೌದು….ಹೌದು…. ಅದು ನನಗೆ ನೆನಪಿದೆ. ಅವರ ಡೀಪ್‌ ನೆಕ್‌ ನ ಬ್ಲೌಸ್‌, ಅತಿಯಾದ ಮೇಕಪ್‌, ಫ್ಯಾಷನ್‌ ಮೂಲಕ ತಮ್ಮನ್ನು ತಾವು ಕಡಿಮೆ ವಯಸ್ಸಿನವರೆಂದು ತೋರಿಸಿಕೊಳ್ಳುವ ಮಹಿಳೆ ಎಂದು ನನಗೆ ಅನಿಸುತ್ತಿತ್ತು.”

“ಹೌದು ಹಾಗೆಯೇ ಇದ್ದರೆ ಅವರ ವರ್ತನೆಯಲ್ಲಿ ಎಷ್ಟು ಉದಾರರೊ, ದೈಹಿಕ ಸಂಬಂಧದಲ್ಲೂ ಅಷ್ಟೆ. ನಾವು ಸಾಮಾನ್ಯವಾಗಿ ಅವರ ಮನೆಗೆ ಹೋಗುವುದು ಬರುವುದು ನಡೆಯುತ್ತಿತ್ತು. ಅದೊಂದು ದಿನ ಅಮ್ಮ ನನಗೆ ಕೆಲವು ಸಾಮಗ್ರಿಗಳನ್ನು ಕೊಟ್ಟು ಆಂಟಿಗೆ ಕೊಡಲು ಹೇಳಿದ್ದರು. ಆಗ ಆಂಟಿ ಮನೆಯಲ್ಲಿ ಒಬ್ಬರೇ ಇದ್ದರು. ಅವರ ಒಬ್ಬಳೇ ಮಗಳು ಟ್ಯೂಶನ್‌ ಗೆ ಹೋಗಿದ್ದಳು. ನಾನು ಅವರ ಕೈಗೆ ಸಾಮಗ್ರಿಗಳನ್ನು ತಲುಪಿಸಿ ಮನೆಗೆ ವಾಪಸ್‌ ಆಗುತ್ತಿದ್ದಾಗ, ಆಂಟಿ ನನಗೆ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಹೇಳಿದರು. ಕೆಲವೇ ನಿಮಿಷಗಳಲ್ಲಿ ಆಂಟಿ 2 ಕಪ್‌ ಕಾಫಿ ತಂದು, ನನ್ನ ಪಕ್ಕದಲ್ಲಿಯೇ ಕುಳಿತುಕೊಂಡು ನನ್ನ ಓದು ಮತ್ತಿತ್ತರ ವಿಷಯದ ಬಗ್ಗೆ ಕೇಳತೊಡಗಿದರು.

“ಔಪಚಾರಿಕ ಮಾತುಕತೆ ನಡೆಸುತ್ತಾ ಆಂಟಿ ನನ್ನ ಮೈಮೇಲೆಲ್ಲಾ ತಮ್ಮ ಕೈಯಿಂದ ಸವರತೊಡಗಿದರು. ಅವರು ಇದೇನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಮೊದಲೇ ಆಂಟಿ ನನ್ನ ಬಟ್ಟೆಗಳನ್ನು ಕಳಚಿ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದರು. ನಾನು ಆಗ 19-20 ವರ್ಷದ ಹುಡುಗ, ಅವರು 40-45 ವರ್ಷದ ಪರಿಪಕ್ವ ಮಹಿಳೆ. ಆಗಿನ ನನ್ನ ಮಾನಸಿಕತೆ ಹೇಗಿರಬಹುದು ಎಂದು ನೀನು ಊಹಿಸಬಹುದು. ಸ್ವಲ್ಪ ಹೊತ್ತಿನ ಬಳಿಕ ಆಂಟಿ ತಮ್ಮ ಬಟ್ಟೆಗಳನ್ನು ಸರಿಪಡಿಸಿಕೊಂಡು ನನ್ನ ತುಟಿಯನ್ನು ಚುಂಬಿಸಿ, `ನನ್ನ ಪ್ರೀತಿಯ ಹುಡುಗ. ಮನೆಗೆ ನಿಧಾನವಾಗಿ ಹೋಗು. ಈ ವಿಷಯವನ್ನು ಯಾರಿಗೂ ತಿಳಿಸಬೇಡ. ಮುಂದೆಯೂ ಹೀಗೆ ಕೂಡುತ್ತಿರೋಣ,’ ಎಂದರು.

“ನಾನು ತಲೆ ತಗ್ಗಿಸಿ ಮನೆಗೆ ಬಂದೆ. ಆ ದಿನ ಇಡೀ ರಾತ್ರಿ ನನಗೆ ಮಲಗಲು ಆಗಲಿಲ್ಲ. ಆಂಟಿಯ ಆ ರೂಪ ನನ್ನ ಕಣ್ಮುಂದೆ ಬರುತ್ತಿತ್ತು. ತಾಯಿ ತಂದೆ ಉದಾರವಾದ ಮನೋಭಾವದವರಾಗಿದ್ದರು ಎನ್ನುವುದು ನಿಜ. ಆದರೆ ನಾನು ಈ ವಿಷಯವನ್ನು ಅವರ ಬಳಿ ತಿಳಿಸಬಾರದಷ್ಟು ಅವರು ಸಂಕುಚಿತವಾದಿಗಳೇನೂ ಆಗಿರಲಿಲ್ಲ. ಕೆಲವು ದಿನ ಹೆದರಿಕೆಯ ಕಾರಣದಿಂದ ನಾನು ಅವರ ಮನೆಗೆ ಹೋಗದಿದ್ದಾಗ, ಆಂಟಿಯೇ ಅಂಕಲ್ ರನ್ನು ಕರೆದುಕೊಂಡು ನಮ್ಮ ಮನೆಗೆ ಬಂದರು.

“ರಾತ್ರಿಯ ಡಿನ್ನರ್‌ ನಮ್ಮ ಮನೆಯಲ್ಲಿಯೇ ಆಯಿತು. ಆಂಟಿ ತಮ್ಮ ಮನೆಗೆ ಹೋಗುವಾಗ ಅಮ್ಮನಿಗೆ, `ಅತ್ತಿಗೆ, ನಾಳೆ ಅಭಿಯನ್ನು ನಮ್ಮನೆಗೆ ಕಳಿಸಿ. ಒಂದಿಷ್ಟು ಕೆಲಸವಿದೆ,’ ಎಂದು ಹೇಳಿದರು.

“ಮರುದಿನ ಅಮ್ಮನಿಗೆ ನಾನು ಅದೆಷ್ಟೇ ಗೋಗರೆದರೂ, ಅಮ್ಮ ನನ್ನ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಅವರು ನನ್ನನ್ನು ಆಂಟಿಯ ಮನೆಗೆ ಕಳಿಸಿಕೊಟ್ಟರು. ನಾನು ಅವರ ಮನೆಗೆ ಹೋದಾಗ ಆಂಟಿ ಮನೆಯಲ್ಲಿ ಏಕಾಂಗಿಯಾಗಿದ್ದರು. ಅವರು ಮಗಳ ಪರೀಕ್ಷೆಗಾಗಿ ಬ್ಯಾಂಕ್‌ ನಿಂದ ರಜೆ ಪಡೆದಿದ್ದರು. ಅಂಕಲ್ ಬ್ಯಾಂಕಿಗೆ ಹಾಗೂ ಮಗಳು ತಮ್ಮ ಗೆಳತಿಯ ಮನೆಗೆ  ಹೋಗಿದ್ದರು.

“ನಾನು ಅವರ ಮನೆಗೆ ಹೋಗುತ್ತಿದ್ದಂತೆ ಆಂಟಿ ಹೇಳಿದರು, `ನೀನು ಆ ದಿನದ ಬಳಿಕ ಮತ್ತೆ ಮನೆಗೆ ಬರಲೇ ಇಲ್ಲ. ಬಾ ಇಬ್ಬರೂ ಸೇರಿ ಕಾಫಿ ಕುಡಿಯೋಣ,’ ಎಂದು ಹೇಳುತ್ತಾ ಅವರು ನನ್ನ ಕೈಗೆ ಕಾಫಿ ಕಪ್‌ ಕೊಟ್ಟರು. ಕೆಲವೇ ಕ್ಷಣಗಳಲ್ಲಿ ನನಗೆ ಪ್ರಜ್ಞೆ ತಪ್ಪಿದಂತೆ ಆಯಿತು. ಅಂದು ಪುನಃ ನಾನು ಆಂಟಿಯ ಕಾಮಪಿಪಾಸೆಗೆ ಬಲಿಯಾದೆ. ನನಗೆ ಪ್ರಜ್ಞೆ ಬಂದಾಗ ನನ್ನ ತಲೆ ಭಾರವಾದಂತೆ ಅನಿಸುತ್ತಿತ್ತು. ನಾನು ಮನೆಗೆ ಬಂದು ಏನೂ ತಿನ್ನದೇ ಹಾಗೆಯೇ ಮಲಗಿಕೊಂಡೆ.

“ಮರುದಿನ ನನ್ನ ಎಂಜಿನಿಯರಿಂಗ್‌ ರಿಸಲ್ಟ್ ಬಂತು. ನನಗೆ ಕಾನ್ಪುರ್‌ ಐಐಟಿಯಲ್ಲಿ ಪ್ರವೇಶ ಸಿಕ್ಕಿತು. ಅವತ್ತು ನಾನು ನನ್ನ ಯಶಸ್ಸಿನಿಂದಾಗಿ ಅಲ್ಲ ಆಂಟಿಯಿಂದ ಮುಕ್ತಿ ದೊರಕುತ್ತದೆಂದು ಯೋಚಿಸಿಯೇ ಖುಷಿಗೊಂಡಿದ್ದೆವು.

“ಕಾನ್ಪುರದಿಂದ ನಾನು ಊರಿಗೆ ಬಂದ ದಿನ ಆಂಟಿ ನನ್ನನ್ನು ಕರೆಸಿಕೊಂಡರು. ನಾನು ದೈಹಿಕ ಸಮಾಗಮಕ್ಕೆ ನಿರಾಕರಿಸಿದಾಗ, ತಮ್ಮ ಮೊಬೈಲ್ ‌ನಲ್ಲಿ ಸೇವ್ ‌ಮಾಡಿದ ವಿಡಿಯೋವನ್ನು ನನಗೆ ತೋರಿಸಿ, `ನಾನು ಕರೆದಾಗ ನೀನು ಬರದೇ ಇದ್ದರೆ ಈ ವಿಡಿಯೋವನ್ನು ಪೊಲೀಸರಿಗೆ ತೋರಿಸಿ ನಿನ್ನ ಮೇಲೆ ರೇಪ್‌ ಕೇಸ್‌ ಬುಕ್‌ ಮಾಡುವೆ. ರೇಪ್‌ ಮಾಡಿದ ಪುರುಷರಿಗೆ ಎಂತಹ ಸಜೆ ಕೊಡಲಾಗುತ್ತದೆಂದು ನಿನಗೆ ಗೊತ್ತಿರಲೇಬೇಕಲ್ಲ. ಹಾಗೆ ಮಾಡಿದರೆ ನಿನ್ನ ಜೀವನವೇ ಹಾಳಾಗುತ್ತದೆ ಹಾಗೂ ತಾಯಿ ತಂದೆಯ ಮರ್ಯಾದೆಯೂ ಮಣ್ಣುಪಾಲಾಗುತ್ತದೆ,’ ಎಂದರು.

“ಆಗ ನಾನೇನು ಮಾಡಲು ಸಾಧ್ಯವಿತ್ತು? ನಾನು ಕಾನ್ಪುರ್‌ ಗೆ ಹೊರಟುಹೋದ ಬಳಿಕ ಇವರು ಸುಮ್ಮನಾಗುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಈವರೆಗೂ ರತ್ನಾ ಆಂಟಿಯಿಂದ ನನಗೆ ಮುಕ್ತಿ ದೊರಕಿಲ್ಲ. ನಾನು ಕಾನ್ಪುರ್‌ ನಿಂದ ಊರಿಗೆ ಬಂದಾಗೆಲ್ಲ ಆಂಟಿ ನನಗೆ ಆ ವಿಡಿಯೋ ತೋರಿಸಿ ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದರು. ಆಗ ಅನಿವಾರ್ಯವಾಗಿ ನಾನು ಅವರು ಹೇಳಿದಂತೆಯೇ ಕೇಳುತ್ತಿದ್ದೆ. ನನ್ನ ಮದುವೆಯ ಬಗ್ಗೆ ವಿಷಯ ತಿಳಿದ ಅವರು ನನಗೆ ಫೋನ್‌ ಮಾಡಿ, `ನೋಡು ಅಭಿ, ನಿನ್ನಿಂದ ಸಿಗುವ ಸುಖ ನನಗೆ ನಿನ್ನ ಅಂಕಲ್ ನಿಂದ ಸಿಗ್ತಾ ಇಲ್ಲ. ಹಾಗಾಗಿ ನಿನಗೊಂದು ವಿಷಯ ತಿಳಿಸಬೇಕಿದೆ. ನೀನು ಮದುವೆ ಮಾಡಿಕೋ. ಹೇಗೂ ನಿನ್ನದು ಲವ್ ಮ್ಯಾರೇಜ್‌. ಹೆಂಡತಿಯನ್ನು ಎಷ್ಟು ಬೇಕೋ ಅಷ್ಟು ಪ್ರೀತಿಸು. ಆದರೆ ಹೆಂಡತಿಯ ಜೊತೆ ದೈಹಿಕ ಸಂಬಂಧ ಮಾತ್ರ ಬೆಳೆಸಬಾರದು. ಹಾಗೇನಾದರೂ ಮಾಡಿದರೆ ಈ ಎಲ್ಲ ವಿಡಿಯೋಗಳನ್ನು ನಿನ್ನ ಹೆಂಡತಿ, ಪೊಲೀಸರಿಗೆ, ಕುಟುಂಬದವರಿಗೆ ಫಾರ್ವರ್ಡ್ ಮಾಡಬೇಕಾಗುತ್ತದೆ. ನನ್ನ ಈ ಮಾತನ್ನು ಕೇವಲ ಬೆದರಿಕೆ ಎಂದು ಭಾವಿಸಬೇಡ. ಸೆಕ್ಸ್ ನಲ್ಲಿ ನನಗೆ ಯಾವುದೂ ಅಸಾಧ್ಯವಲ್ಲ.’ ಹನಿಮೂನ್‌ ಹೋಗುವ ಮೊದಲು ಅವರು ನನಗೆ ಇದೇ ರೀತಿಯ ಬೆದರಿಕೆ ಹಾಕಿದ್ದರು. ಹೀಗಾಗಿ ದೈಹಿಕ ಸಂಬಂಧದ ಸಂದರ್ಭದಲ್ಲಿ ನನಗೆ ಆಂಟಿಯ ಮುಖವೇ ಕಣ್ಮುಂದೆ ಬರುತ್ತದೆ ಮತ್ತು ನಾನು…….” ಎಂದು ಹೇಳುತ್ತಾ ಅಭಿಷೇಕ್‌ ಚಿಕ್ಕ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅಳತೊಡಗಿದ.

ಈವರೆಗೆ ಅತ್ಯಂತ ಶಾಂತ ಮನಸ್ಸಿನಿಂದ ಅಭಿಷೇಕನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಪ್ರತೀಕ್ಷಾ ಅವನನ್ನು ಬಾಚಿ ತಬ್ಬಿಕೊಂಡು, “ನೀನು ಇಷ್ಟು ವರ್ಷಗಳಿಂದ ಈ ಹಿಂಸೆ, ನೋವು ಅನುಭವಿಸುತ್ತಿರುವೆ. ನನಗೆ ಇದರ ಬಗ್ಗೆ ಬಹಳ ಆಶ್ಚರ್ಯವಾಗುತ್ತದೆ. ನಾನು ಈವರೆಗೆ ಮಹಿಳೆಯರಷ್ಟೇ ಅತ್ಯಾಚಾರಕ್ಕೆ ಬಲಿಯಾಗುತ್ತಾರೆ ಎಂದು ತಿಳಿದಿದ್ದೆ. ಆದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳು ತನಗಿಂತ ಅರ್ಧ ವಯಸ್ಸಿನ ಹುಡುಗನ ಮೇಲೆ ದೌರ್ಜನ್ಯ ಎಸಗಿರುವುದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಅದು ಅನೈತಿಕತೆಯ ಪರಮಾವಧಿ. ಆಕೆ ತನ್ನ ಪತಿಗೂ ಕೂಡ ಭಾರಿ ಮೋಸ ಮಾಡಿದ್ದಾಳೆ.

“ಮಹಿಳೆಯರ ಜೊತೆ ಆದ ಅತ್ಯಾಚಾರಗಳಿಗೆ ನಮ್ಮ ದೇಶದಲ್ಲಿ ಕಠಿಣ ಕಾನೂನುಗಳಿವೆ. ಆದರೆ ಪುರುಷನೊಬ್ಬ ಮಹಿಳೆಯ ಅತ್ಯಾಚಾರಕ್ಕೆ ಬಲಿಯಾದರೆ, ಅದಕ್ಕೆ ಯಾವುದೇ ಕಾಯ್ದೆಗಳಿಲ್ಲ. ಸರ್ಕಾರ ನಡೆಸಿದ ಕಾನೂನುಗಳ ದುರುಪಯೋಗವನ್ನು ಈ ರೀತಿ ಮಾಡಿಕೊಳ್ಳಲಾಗುತ್ತದೆ. ಸಮಾಜದ ಇಂತಹ ದುರಾಚಾರವನ್ನು ಬಯಲಿಗೆಳೆಯುವುದು ಅತ್ಯವಶ್ಯ. ಆದರೆ ಅಭಿ, ನೀನು ಪ್ರಥಮ ರಾತ್ರಿಯಂದೇ ಈ ವಿಷಯವನ್ನು ಏಕೆ ತಿಳಿಸಲಿಲ್ಲ?”

“ನಿನಗೆ ನಾನು ಈ ವಿಷಯವನ್ನು ಹೇಗೆ ತಿಳಿಸಬೇಕು? ಅದಕ್ಕೆ ನೀನು ಹೇಗೆ ಪ್ರತಿಕ್ರಿಯಿಸುತ್ತೇವೋ ಅನ್ನೋದರ ಬಗ್ಗೆ ಗೊಂದಲವಿತ್ತು.”

“ನೀನು ತಡವಾಗಿಯಾದರೂ ವಿಷಯ ತಿಳಿಸಿದೆಯಲ್ಲ….. ಈಗ ನಾವು ಈ ಸಮಸ್ಯೆಯನ್ನು ಇಬ್ಬರೂ ಸೇರಿಕೊಂಡು ಬಗೆಹರಿಸೋಣ. ನಾನು ಹೇಳಿದಂತೆ ನೀನು ಕೇಳ್ತಾ ಹೋಗು. ನಾಳೆ ಭಾನುವಾರ ನಾವಿಬ್ಬರೂ ನಿಮ್ಮ ಆಂಟಿಯ ಮನೆಗೆ ಹೋಗೋಣ.”

ಮರುದಿನ ಅಭಿಷೇಕ್‌ ರತ್ನಾ ಆಂಟಿಗೆ ಕಾಲ್ ಡಿದ, “ಆಂಟಿ, ಇವತ್ತು ರಾತ್ರಿ ನಾನು ನಿಮ್ಮ ಮನೆಗೆ ಬರುತ್ತಿದ್ದೇನೆ….”

“ಇವತ್ತು ರಾತ್ರಿ ಏಕೆ….. ಹೇಗೆ…..” ಆಂಟಿ ಅಭಿಷೇಕ್‌ ನಿಂದ ಬಂದ ಸ್ವಯಂ ಆಹ್ವಾನಕ್ಕೆ ಗಾಬರಿಯಾದರು. ಏಕೆಂದರೆ ಅವತ್ತು ರಜೆ ದಿನವಾದ್ದರಿಂದ ಅಂಕಲ್ ಮತ್ತು ಮಗಳು ಮನೆಯಲ್ಲಿಯೇ ಇದ್ದರು.

“ನಾಳೆ ಬಾ ಅಭಿ. ನಾನು ಹೇಗೂ ಮನೆಯಲ್ಲಿಯೇ ಇರ್ತೀನಿ,” ರತ್ನಾ ಆಂಟಿ ಆ ಕಡೆಯಿಂದ ಹೇಳಿದರು.

“ಇವತ್ತೇ ನನಗೆ ಮನಸ್ಸಾಗಿದೆ ಆಂಟಿ. ಸಂಜೆ ಬರ್ತೀನಿ,” ಎಂದು ಅಭಿ ಫೋನ್‌ ಕಟ್‌ ಮಾಡಿದ. ಅವನು ಫೋನ್‌ ನಲ್ಲಿ ಯಾವ ರೀತಿಯ ಅಭಿನಯ ಮಾಡಿದ್ದನೆಂದರೆ, ತಾನೇ ಸ್ವತಃ  ಭೇಟಿಯಾಗಲು ಉತ್ಸುಕನಾಗಿದ್ದಂತೆ.

ಸಂಜೆ ಅವರಿಬ್ಬರೂ ರತ್ನಾ ಹಾಗೂ ರವೀಶ್‌ ಅಂಕಲೇ ಮನೆಗೆ ಹೋದಾಗ, ಅಭಿಷೇಕ್‌ ನ ಜೊತೆಗೆ ಪ್ರತೀಕ್ಷಾಳನ್ನು ನೋಡಿ ರತ್ನಾ ಆಂಟಿಯ ಮುಖದ ಬಣ್ಣವೇ ಬದಲಾಗಿ ಹೋಯಿತು. ಅವರ ಮುಖದಲ್ಲಿದ್ದ ಅತೃಪ್ತಿ ಅಭಿ ಮತ್ತು ಪ್ರತೀಕ್ಷಾಳಿಗೆ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಚಹಾ ಉಪಾಹಾರದ ಬಳಿಕ ರವೀಶ್‌ ಅಂಕಲ್ ಇಬ್ಬರಿಗೂ ಊಟಕ್ಕೆ ಆಹ್ವಾನ ಕೊಟ್ಟರು. ಅದಕ್ಕೆ ಪ್ರತೀಕ್ಷಾ ಹಾಗೂ ಅಭಿಷೇಕ್‌ ಖುಷಿಯಿಂದ ಒಪ್ಪಿಕೊಂಡರು.

ಯಾವಾಗಲೂ ಮೇಕಪ್‌, ಫ್ಯಾಷನ್‌ ಮತ್ತು ದೈಹಿಕ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದ ರತ್ನಾ ಆಂಟಿಗೆ ಇಷ್ಟೊಂದು ಜನರಿಗೆ ಊಟದ ವ್ಯವಸ್ಥೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಅವರ ಕಷ್ಟವನ್ನು ಗಮನಿಸಿದ ಪ್ರತೀಕ್ಷಾ ಅಡುಗೆ ಮನೆಗೆ ಹೋಗಿ ಅವರಿಗೆ ನೆರವಾಗತೊಡಗಿದಳು. ಅವಳು ಹೇಗಾದರೂ ಮಾಡಿ ಆಂಟಿಯ ನಿಕಟತೆ ಬೆಳೆಸಿಕೊಳ್ಳಲು ಪ್ರಯತ್ನಿಸಿದಳು. ಡಿನ್ನರ್ ಸಿದ್ಧತೆ ಮಾಡುತ್ತಾ ಅವಳು ರತ್ನಾ ಆಂಟಿಯ ಆಸಕ್ತಿ, ಅಭಿರುಚಿ, ಹವ್ಯಾಸ ಹಾಗೂ ದಾಂಪತ್ಯ ಜೀವನದ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಳು. ಆ ಮಾತುಕತೆಯಿಂದ ಆಂಟಿಗೆ ಫ್ಯಾಷನ್‌ ಮತ್ತು ಶಾಪಿಂಗ್‌ ಬಗ್ಗೆ ಅತಿ ಹೆಚ್ಚಿನ ಆಸಕ್ತಿ ಇರುವುದು ಗೊತ್ತಾಯಿತು. ಅವಳು ಆಂಟಿಯ ಮೊಬೈಲ್ ‌ನಂಬರ್‌ ನ್ನು ತನ್ನ ಮೊಬೈಲ್ ‌ನಲ್ಲಿ ಸೇವ್‌ಮಾಡಿಕೊಂಡಳು. ಅಭಿ ಹಾಗೂ ಪ್ರತೀಕ್ಷಾ ರಾತ್ರಿ ತಮ್ಮ ಮನೆಗೆ ವಾಪಸ್ಸಾಗುವ ಹೊತ್ತಿಗೆ ರಾತ್ರಿ 12 ಗಂಟೆಯಾಯಿತು.

ಸೋಮವಾರದಂದು ಪ್ರತೀಕ್ಷಾ ರತ್ನಾ ಆಂಟಿಗೆ ಕಾಲ್ ‌ಮಾಡಿ, “ಆಂಟಿ ನಿಮ್ಮ ಆಯ್ಕೆ ಬಹಳ ಸೂಕ್ತ ಆಗಿರುತ್ತೆ. ನನಗೆ ಕೆಲವು ವೆಸ್ಟರ್ನ್‌ ಡ್ರೆಸೆಸ್‌ ಖರೀದಿಸಬೇಕಿದೆ. ನೀವು ನನ್ನ ಜೊತೆಗೆ ಬರ್ತೀರಾ?”

“ಹ್ಞಾಂ….. ಹ್ಞಾಂ….. ಖಂಡಿತಾ ಬರ್ತೀನಿ.”

“ನಾನು ಇವತ್ತೇ ಬ್ಯಾಂಕ್‌ ನಿಂದ ಬೇಗ ಹೊರಡುವೆ.”

“ನಾನು ನಿನ್ನ ಬ್ಯಾಂಕ್‌ ಬಳಿ ಬರ್ತೀನಿ. ಅಲ್ಲಿಂದ ಇಬ್ಬರೂ ಶಾಪಿಂಗ್‌ ಗೆ ಹೋಗೋಣ,”  ಎಂದರು ರತ್ನಾ ಆಂಟಿ.

ಪ್ರತೀಕ್ಷಾ ಆದಷ್ಟು ಬೇಗ ಈ ಪ್ರಕರಣ ಮುಗಿಸಲು ಇಚ್ಛಿಸುತ್ತಿದ್ದಳು.

ಸಂಜೆ ಇಬ್ಬರೂ ಸೇರಿ ಶಾಪಿಂಗ್‌ ಮಾಡಿದರು. ಪ್ರತೀಕ್ಷಾ ಪ್ರತಿಯೊಂದು ಡ್ರೆಸ್‌ ನ್ನು ಆಂಟಿಯ ಅಭಿಪ್ರಾಯ ಪಡೆದೇ ಖರೀದಿಸಿದಳು. ಹೀಗಾಗಿ ರತ್ನಾ ಆಂಟಿಗೆ ಅವಳ ಮೇಲೆ ಹೆಚ್ಚು ವಿಶ್ವಾಸ ಬಂದಿತು. ಪ್ರತೀಕ್ಷಾ ತಾನು ಯೋಚಿಸಿದಂತೆಯೇ ಎಲ್ಲ ನಡೆಯುತ್ತಿದೆ ಎನ್ನುವುದರ ಬಗ್ಗೆ ಖುಷಿಗೊಂಡಳು.

2 ದಿನಗಳ ಬಳಿಕ ಪ್ರತೀಕ್ಷಾ ಪುನಃ ಆಂಟಿಗೆ ಕಾಲ್ ‌ಮಾಡಿ, “ಆಂಟಿ, ನನ್ನ ತಂಗಿಯ ಮದುವೆಯಿದೆ. ನೀವು ನನ್ನ ತಂಗಿಗೂ ಕೆಲವು ಸೀರೆಗಳನ್ನು ಖರೀದಿಸಲು ನೆರವಾಗ್ತೀರಾ?”

ಶಾಪಿಂಗ್‌ ರತ್ನಾಳ ದೌರ್ಬಲ್ಯವಾಗಿತ್ತು. ಹೀಗಾಗಿ ಅವರು ಬಹುಬೇಗ ತಯಾರಾದರು. ಬ್ಯಾಂಕಿನ ಕೆಲಸ ಮುಗಿಸಿ ಅವರಿಬ್ಬರೂ ಸೀರೆಯ ಮಳಿಗೆಯೊಂದರಲ್ಲಿದ್ದರು. ಕೆಲವು ಸೀರೆಗಳನ್ನು ಖರೀದಿಸಿದ ಬಳಿಕ ರತ್ನಾ ಆಂಟಿ ಬಾಥ್‌ ರೂಮ್ ಗೆ ಹೋದಾಗ, ಪ್ರತೀಕ್ಷಾ ಅವರ ಬ್ಯಾಗ್‌ ನಿಂದ ಮೊಬೈಲ್‌ತೆಗೆದು ತನ್ನ ಪರ್ಸ್‌ ನಲ್ಲಿ ಇಟ್ಟುಕೊಂಡಳು ಹಾಗೂ ರತ್ನಾರ ಬ್ಯಾಗ್‌ ನ್ನು ತೆಗೆದುಕೊಂಡು ಅಂಗಡಿಯ ಗೇಟ್‌ ನಲ್ಲಿ ನಿಂತಳು.

ವಾಪಸ್‌ ಬಂದಾಗ ಪ್ರತೀಕ್ಷಾ ಗೇಟ್‌ ನಲ್ಲಿ ನಿಂತಿರುವುದನ್ನು ನೋಡಿ ರತ್ನಾರಿಗೆ ಆಶ್ಚರ್ಯವಾಯಿತು, “ಏನಾಯ್ತು ಪ್ರತೀಕ್ಷಾ ಹೀಗೆ ಆಕಸ್ಮಿಕವಾಗಿ…. ನಿನಗೆ ಸೀರೆಗಳು ಇಷ್ಟ ಆಗಲಿಲ್ಲವೇ?”

“ಇಲ್ಲ ಆಂಟಿ, ನನಗೆ ಹೊಟ್ಟೆಯಲ್ಲಿ ವಿಪರೀತ ನೋವು ಆಗ್ತಿದೆ. ಈಗ ನನಗೆ ನಿಲ್ಲಲು ಕೂಡ ಆಗ್ತಿಲ್ಲ…. ನೀವು ಬೇಗ ಮನೆಗೆ ಹೊರಡಿ.”

ಇಬ್ಬರೂ ಕಾರಿನಲ್ಲಿ ಕುಳಿತರು. ಕಾರು ರತ್ನಾರದ್ದೇ ಆಗಿದ್ದರಿಂದ ಅವರು ಡ್ರೈವರ್‌ ಸೀಟ್‌ ನಲ್ಲಿ ಆಸೀನರಾದರು.

“ನಿನಗೆ ಹೆಚ್ಚು ತೊಂದರೆ ಇದ್ದರೆ ನಾವು ಡಾಕ್ಟರ್‌ ಹತ್ತಿರ ಹೋಗೋಣ.”

“ಇಲ್ಲ…. ಇಲ್ಲ….. ಆಂಟಿ. ನನಗೆ ಪೀರಿಯಡ್ಸ್ ಸಮಯದಲ್ಲಿ ಸಾಕಷ್ಟು ತೊಂದರೆ ಆಗುತ್ತದೆ. ಮನೆಗೆ ಹೋಗಿ ಬಿಸಿ ಕಾವು ಮತ್ತು ವಿಶ್ರಾಂತಿ ಪಡೆದರೆ ರಿಲ್ಯಾಕ್ಸ್ ಆಗುತ್ತದೆ. ನೀವು ನನ್ನನ್ನು ಬಹುಬೇಗ ಮನೆಗೆ ತಲುಪಿಸಿ.” ಪ್ರತೀಕ್ಷಾ ಹೇಗೆ ಆ್ಯಕ್ಟಿಂಗ್ ಮಾಡುತ್ತಿದ್ದಳೆಂದರೆ, ನೋವಿನಿಂದ ಅತಿಯಾಗಿ ತೊಂದರೆ ಅನುಭವಿಸುತ್ತಿದ್ದೇನೆ ಎಂಬಂತೆ.ಸ್ವಲ್ಪ ಹೊತ್ತಿನಲ್ಲಿಯೇ ಪ್ರತೀಕ್ಷಾಳ  ಮನೆಯೆದುರು ಕಾರು ನಿಲ್ಲಿಸಿದ ರತ್ನಾ, “ನಾನೂ ಕೂಡ ನಿನ್ನ ಜೊತೆಗೆ ಬರಲೇ?”

“ಬೇಡ ಬೇಡ ಆಂಟಿ…. ನಿಮಗೇಕೆ ತೊಂದರೆ? ನೀವು ಹೋಗಿ ವಿಶ್ರಾಂತಿ ಪಡೆಯಿರಿ. ನಾನೂ ವಿಶ್ರಾಂತಿ, ಬಿಸಿ ಕಾವು ತೆಗೆದುಕೊಳ್ತೀನಿ. ಸ್ವಲ್ಪ ಹೊತ್ತಿನಲ್ಲಿಯೇ ಹುಷಾರಾಗ್ತೀನಿ,” ಪ್ರತೀಕ್ಷಾ ಹೇಗಾದರೂ ಮಾಡಿ ಅವರಿಂದ ಮುಕ್ತಿ ಪಡೆದುಕೊಳ್ಳುವ ಅಪೇಕ್ಷೆಯಿಂದ ಹಾಗೆ ಹೇಳಿದಳು. ನಂತರ ವೇಗವಾಗಿ ಹೆಜ್ಜೆ ಹಾಕುತ್ತಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು. ಬಳಿಕ ರತ್ನಾ ಆಂಟಿಯ ಮೊಬೈಲ್ ‌ಹೊರತೆಗೆದಳು. 2-3 ಸಲದ ಭೇಟಿಯ ಸಂದರ್ಭದಲ್ಲಿ ಅವಳು ರತ್ನಾ ಆಂಟಿ ಮೊಬೈಲ್ ‌ಪಾಸವರ್ಡ್‌ ಪ್ಯಾಟರ್ನ್‌ ಹಾಕುವುದನ್ನು ನೋಡಿಕೊಂಡಿದ್ದಳು. ಹೀಗಾಗಿ ಅವಳಿಗೆ ಮೊಬೈಲ್ ‌ಓಪನ್‌ ಮಾಡಲು ಯಾವುದೇ ತೊಂದರೆ ಆಗಲಿಲ್ಲ.

ಅಭಿಷೇಕ್‌ ಹಾಗೂ ರತ್ನಾ ಆಂಟಿಯ ಅದೆಷ್ಟೋ ಆಕ್ಷೇಪಾರ್ಹ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ಅವಳು ದಂಗಾಗಿಹೋದಳು. ಕೆಲವ ಫೋಟೋಗಳನ್ನು ರತ್ನಾ ಆಂಟಿ ಹೇಗೆ ತೆಗೆದುಕೊಂಡಿದ್ದರೆಂದರೆ, ಅದರಲ್ಲಿ ಅಭಿಷೇಕ್‌ ಅವಳ ಮೇಲೆ ಒತ್ತಡ ಹೇರುವಂತೆ ಭಾಸವಾಗುತ್ತಿತ್ತು. ಒಬ್ಬ ವ್ಯಕ್ತಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಹುದೇ? ಎಂದು ಅವಳು ಯೋಚಿಸುವಷ್ಟರಲ್ಲಿ ಅವಳ ಫೋನ್‌ ರಿಂಗಾಗತೊಡಗಿತು.

ಅತ್ತ ಕಡೆ ಲ್ಯಾಂಡ್‌ ಲೈನ್‌ ನಿಂದ ರತ್ನಾ ಆಂಟಿ ಗಾಬರಿಯ ಧ್ವನಿ ಕೇಳಿಸಿತು, “ಪ್ರತೀಕ್ಷಾ, ನನ್ನ ಮೊಬೈಲ್ ‌ಕಾಣಿಸುತ್ತಿಲ್ಲ. ಅದೇನಾದ್ರೂ ಅಂಗಡಿಯಲ್ಲಿಯೇ ಉಳಿದುಬಿಟ್ಟಿತಾ….?”

“ಬಹುಶಃ ಅಲ್ಲಿಯೇ ಉಳಿದಿರಬೇಕು. ಸಿಗಬಹುದು. ಈಗಂತೂ ರಾತ್ರಿಯಾಗಿದೆ. ನಾಳೆ ಹೋಗಿ ತೆಗೆದುಕೊಳ್ಳೋಣ,” ಪ್ರತೀಕ್ಷಾ ತನಗೆ ಏನೂ ಗೊತ್ತಿಲ್ಲ ಎಂಬಂತೆ ಹೇಳಿದಳು.

“ಇಲ್ಲ… ಇಲ್ಲ…. ನನಗೆ ಯಾವುದೇ ಪರಿಸ್ಥಿತಿಯಲ್ಲೂ ಆ ಮೊಬೈಲ್ ‌ಈಗಲೇ ಬೇಕು. ನಾನು ಈಗಲೇ ಆ ಶಾಪಿಂಗ್‌ ಮಾಲ್ ‌ಗೆ ಹೋಗ್ತೀನಿ,”  ಎಂದು ಹೇಳುತ್ತಾ ರತ್ನಾ ಆಂಟಿ ಫೋನ್‌ ಕಟ್‌ ಮಾಡಿದರು.

ಪ್ರತೀಕ್ಷಾ ಅದೇ ನಂಬರ್‌ ಗೆ ಪುನಃ ಡಯಲ್ ಮಾಡಿ, “ಆಂಟಿ ಆ ಮೊಬೈಲ್ ‌ನಲ್ಲಿ ಅಂತಹದ್ದೇನಿದೆ?” ಎಂದು ಕೇಳಿದಳು.

“ಅಂದರೆ ಏನರ್ಥ? ನೀನು ಏನು ಹೇಳ್ತಿದೀಯ ನನಗೆ ಅರ್ಥ ಆಗ್ತಿಲ್ಲ….” ರತ್ನಾ ಆಂಟಿ ಕೇಳಿದರು.

“ಅಷ್ಟೊಂದು ಮುಗ್ಧರಂತೆ ಮಾತನಾಡಬೇಡಿ ಆಂಟಿ. ನಿಮ್ಮ ಮೊಬೈಲ್ ‌ನನ್ನ ಬಳಿಯೇ ಇದೆ. ಏನ್ಮಾಡಬೇಕು ಹೇಳಿ. ನಿಮ್ಮನ್ನು ಗೌರವಪೂರ್ವಕವಾಗಿ ಆಂಟಿ ಎಂದು ಕರೆಯಲು ಕೂಡ ನನಗೆ ಅಸಹ್ಯ ಆಗುತ್ತಿದೆ.”

“ಏನೇನೊ ಮಾತಾಡ್ತಿದಿಯಲ್ಲ ಪ್ರತೀಕ್ಷಾ, ವಯಸ್ಸಿನಲ್ಲಿ ನಾನು ನಿನಗಿಂತ ಎಷ್ಟು ದೊಡ್ಡವಳು ಅಂತಾ ನಿನಗೆ ಗೊತ್ತಿರಬೇಕಲ್ಲ. ನೀನು ಯಾರ ಜೊತೆ ಮಾತಾಡ್ತೀದಿಯಾ ಅಂತಾ ನಿನಗೆ ಗೊತ್ತಿದೆಯಾ?” ತಮ್ಮ ಮುಖವಾಡ ಬಯಲಾಗುತ್ತಿರುವುದನ್ನು ಕಂಡು ಅವರು ಭಯಭೀತರಾಗಿ ಮಾತನಾಡುತ್ತಿದ್ದರು.

“ನಿಮಗೆ ಈಗ ನಿಮ್ಮ ಹಿರಿತನದ ನೆನಪು ಆಗುತ್ತಿದೆಯಾ? ನಿಮಗಿಂತ ಅರ್ಧ ವಯಸ್ಸಿನ ಹುಡುಗ ಅಂದರೆ ನನ್ನ ಪತಿಯನ್ನು ಬ್ಲ್ಯಾಕ್‌ ಮೇಲ್ ‌ಮಾಡಿ, ಸಂಬಂಧ ಹೊಂದುತ್ತಿದ್ದಾಗ ನಿಮಗೆ ಸಂಕೋಚ ಆಗುತ್ತಿರಲಿಲ್ಲವೇ…..?”

“ನಾನು ಹಾಗೇನೂ ಮಾಡಿಲ್ಲ…..” ರತ್ನಾ ಆಂಟಿ ನಾಚಿಕೆಯಿಲ್ಲದೆ ಹೇಳಿಕೊಂಡರು.

“ನೀವು ಯಾವ ಫೋಟೋ ಹಾಗೂ ವಿಡಿಯೋಗಳ ಆಧಾರದ ಮೇಲೆ ನನ್ನ ಗಂಡನನ್ನು ರೇಪ್‌ ಕೇಸ್‌ ನಲ್ಲಿ ಸಿಲುಕಿಸಲು ಪ್ರಯತ್ನ ಮಾಡುತ್ತಿದ್ದಿರೊ, ಅವೆಲ್ಲ ನಿಮ್ಮ ಮೊಬೈಲ್ ‌ನಲ್ಲಿ ಸೇವ್ ‌ಆಗಿವೆ. ನಿಮ್ಮಂತಹ ಮಹಿಳೆಯರು ಸಮಾಜಕ್ಕೆ ಒಂದು ರೀತಿಯ ಕಳಂಕ. ನೀವೇ ಸಂಸ್ಕಾರರಹಿತರಾಗಿರುವಾಗ, ಇನ್ನು ನೀವು ನಿಮ್ಮ ಮಗಳಿಗೇನು ಸಂಸ್ಕಾರ ಕೊಟ್ಟೀದ್ದೀರಾ ಹೇಳಿ…..? ನಿಮ್ಮ ಮೊಬೈಲ್ ‌ನನ್ನ ಬಳಿಯೇ ಇದೆ. ಅದು ನಿಮಗೆ ಇನ್ನೆಂದೂ ಸಿಗುವುದಿಲ್ಲ. ನಿಮ್ಮ ದುಷ್ಕೃತ್ಯಗಳು ಈಗ ಬಟಾಬಯಲಾಗಿವೆ,” ಎಂದು ಹೇಳುತ್ತಾ ಪ್ರತೀಕ್ಷಾ ರತ್ನಾ ಆಂಟಿಯ ಫೋನ್‌ ನ್ನು ಜೋರಾಗಿ ನೆಲದ ಮೇಲೆ ಎಸೆದಳು. ಅದು ಒಡೆದು ಚೂರು ಚೂರಾಯಿತು.

ಅಷ್ಟರಲ್ಲಿಯೇ ಅಭಿಷೇಕ್‌ ಕೋಣೆಯೊಳಗೆ ಪ್ರವೇಶಿಸಿ, “ಈ ಮೊಬೈಲ್‌ ನೆಲದ ಮೇಲೆ ಹೇಗೆ ಬಿತ್ತು…..? ಇಷ್ಟೊಂದು ಚೂರಾದದ್ದು ಹೇಗೆ?” ಎಂದು ಕೇಳಿದ.

“ಅದು ಬಿದ್ದು ಚೂರಾಗಿಲ್ಲ. ಒಡೆದು ಚೂರಾಗಿಸಿದ್ದೇನೆ. ಅಂದಹಾಗೆ ಅದು ಮೊಬೈಲ್ ‌ಅಲ್ಲ, ದುಷ್ಕೃತ್ಯಗಳ ಕೊಂಪೆ,” ಕ್ರೋಧಾವೇಶದಲ್ಲಿ ನಡುಗುತ್ತಾ ಹೇಳಿದಳು ಪ್ರತೀಕ್ಷಾ.

“ನೀನೇನು ಹೇಳ್ತಿದೀಯಾ ನನಗೇನೂ ಅರ್ಥ ಆಗ್ತಿಲ್ಲ,” ಅಭಿಷೇಕ್‌ ಅಚ್ಚರಿಯಿಂದ ಕೇಳಿದ.

“ಇದು ನಿಮ್ಮ ಆ ಆಂಟಿಯ ಫೋನ್‌. ಇವತ್ತು ಇದರ ರಹಸ್ಯ ಬಟಾಬಯಲಾಯ್ತು. ಇನ್ಮುಂದೆ ಆ ಕೆಟ್ಟ ಹೆಂಗಸು, ನಿಮಗೆ ತೊಂದರೆ ಕೊಡುವುದನ್ನು ನಿಲ್ಲಿಸುತ್ತಾಳೆ. ಈ ಮೊಬೈಲ್ ‌ಒಡೆದು ಹೋಗುವುದರ ಮೂಲಕ ಅದರಲ್ಲಿ ಫೋಟೋ ಹಾಗೂ ವಿಡಿಯೋಗಳು ಕೂಡ ಒಡೆದು ಚೆಲ್ಲಾಪಿಲ್ಲಿಯಾದವು. ಅವುಗಳ ಮುಖಾಂತರ ತಾನೇ ಆಕೆ ನಿನಗೆ ಬ್ಲ್ಯಾಕ್‌ ಮೇಲ್‌ಮಾಡುತ್ತಿದ್ದುದು…..”

“ಏನ್‌ ಹೇಳ್ತಿದ್ದೀಯಾ ನೀನು….. ಇದೆಲ್ಲವನ್ನು ನೀನು ಹೇಗೆ ಮಾಡಿದೆ….? ರತ್ನಾಳಂಥ ದುಷ್ಟ ಮಹಿಳೆಯನ್ನು ಹೇಗೆ ತಾನೇ ನಿನ್ನ ಬಲೆಗೆ ಸಿಲುಕಿಸಿದೆ….?” ಅಭಿಷೇಕ್‌ ಒಂದಾದ ಮೇಲೆ ಒಂದರಂತೆ ಪ್ರಶ್ನೆಗಳನ್ನು ಕೇಳತೊಡಗಿದ.

“ನೀನು ಫ್ರೆಶ್‌ ಆಗಿ ಬಾ. ಅಷ್ಟರಲ್ಲಿ ಅತ್ತೆ ಮಾವ ಕೂಡ ಬರ್ತಾರೆ. ಎಲ್ಲರೂ ಸೇರಿ ಟೀ ಕುಡಿಯೋಣ,” ಎಂದಳು.

ಕೆಲವೇ ನಿಮಿಷಗಳಲ್ಲಿ ಎಲ್ಲರೂ ಡೈನಿಂಗ್‌ ಟೇಬಲ್ ಬಳಿಯಿದ್ದರು. ಚಹಾ ಹೀರುತ್ತಾ ಪ್ರತೀಕ್ಷಾ ಅಭಿಷೇಕ್‌ ನ ತಾಯಿ ತಂದೆಯರಿಗೆ ರತ್ನಾ ಆಂಟಿಯ ದುಷ್ಟ ವರ್ತನೆಯ ಎಲ್ಲಾ ಕಾರ್ಯಗಳನ್ನು ಚಾಚೂ ತಪ್ಪದೇ ಹೇಳಿದಾಗ, ಅವರು ದಂಗಾಗಿ ಹೋದರಲ್ಲದೆ, ತಮ್ಮ ಮಗನ ಕಡೆ ನೋಡಿ, “ನಿನ್ನ ಮೇಲೆ ಆಕೆ ಇಷ್ಟೊಂದು ಅತ್ಯಾಚಾರ ಮಾಡಿ, ನಿನ್ನ ಸಂಸಾರವನ್ನೇ ಬುಡಮೇಲು ಮಾಡಲು ಹೊರಟಿದ್ದಳು. ಆದರೆ ನೀನೇಕೆ ನಮಗೆ ಈ ವಿಷಯ ತಿಳಿಸಲಿಲ್ಲ…..?” ಎಂದು ಕೇಳಿದರು.

“ಏನೂಂತ ಹೇಳಬೇಕಿತ್ತು? ಹೇಗೆ ಹೇಳಬೇಕಿತ್ತು? ನೀವು ನನ್ನ ಮಾತನ್ನು ನಂಬುತ್ತಿದ್ರಾ? ಈಗಲೂ ಅದೆಷ್ಟು ಕುಟುಂಬಗಳಲ್ಲಿ ಸೆಕ್ಸ್ ಬಗ್ಗೆ ಮಕ್ಕಳು ತಮ್ಮ ತಾಯಿ ತಂದೆಯರ ಮುಂದೆ ಹೇಳಿಕೊಳ್ಳುವಷ್ಟು ಉದಾರ ಧೋರಣೆಯಿದೆ? ಒಂದು ವೇಳೆ ಮಗುವೊಂದು ತನ್ನ ತಾಯಿ ತಂದೆಯ ಮುಂದೆ ಹೇಳಬೇಕೆಂದುಕೊಂಡರೆ ಅದನ್ನು ತಿಳಿವಳಿಕೆಯಿಲ್ಲದ್ದು, ಅಪರಿಪಕ್ವ ಎಂದೆಲ್ಲಾ ಹೇಳಿ ಅದರ ಮಾತುಗಳ ಬಗ್ಗೆ ಗಮನ ಕೊಡುವುದೇ ಇಲ್ಲ. ಅದರಂತೆ ನಾನೂ ಕೂಡ ನನಗಾದ ಅನ್ಯಾಯವನ್ನು ನಿಮ್ಮ ಮುಂದೆ ಹೇಳಲು ಧೈರ್ಯ ತೋರಲಿಲ್ಲ….” ಎಂದು ಅಭಿಷೇಕ್‌ ತನ್ನ ಮಾತನ್ನು ಮುಗಿಸಿದ.

ಆ ದಿನದ ಬಳಿಕ ಅಭಿಷೇಕ್‌ ನ ಕುಟುಂಬದವರು ರತ್ನಾಳ ಕುಟುಂಬದ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಅಂದು ರಾತ್ರಿ ಪ್ರತೀಕ್ಷಾ ಮತ್ತು ಅಭಿಷೇಕ್‌ ಪರಸ್ಪರ ನಿಕಟರಾದರು. ಆದರೆ ಅಂದು ಸಹ ಅಭಿಷೇಕ್‌ ನ ಸ್ಥಿತಿ ಹಾಗೆಯೇ ಇತ್ತು. ಪ್ರತೀಕ್ಷಾಳಿಗೆ ಮತ್ತೆ ಚಿಂತೆಯಾಯಿತು.

ಮರುದಿನ ಊಟದ ಸಮಯದಲ್ಲಿ ಅವಳು ಮೇಘಾಳ ಬಳಿ ನಡೆದ ಘಟನೆಯನ್ನೆಲ್ಲಾ ತಿಳಿಸಿದಾಗ ಅವಳು ಹೇಳಿದಳು, “ಗ್ರೇಟ್‌, ವೆಲ್ ‌ಡನ್‌ ಮೈ ಡಿಯರ್‌. ಇಂತಹ ಮಹಿಳೆಯರು ತಮ್ಮ ಗಂಡಂದಿರ ಮುಗ್ಧತನದ ದುರ್ಲಾಭ ಪಡೆದುಕೊಳ್ಳುತ್ತಾರೆ. ಆದರೆ ನೀನು ಚಿಂತೆ ಮಾಡಬೇಡ ನನಗೆ ಪರಿಚಯದ ಒಬ್ಬರು ಮನೋತಜ್ಞರಿದ್ದಾರೆ. ಅವರ ಬಳಿ ಅಭಿಷೇಕ್‌ ನನ್ನು ಕರೆದುಕೊಂಡು ಹೋಗು. ಅವರೇ ಎಲ್ಲವನ್ನು ಸರಿಪಡಿಸುತ್ತಾರೆ. ಅವನೊಳಗೆ ಕುಳಿತಿರುವ ರತ್ನಾಳ ಭೂತವನ್ನು ಹೊರಗೋಡಿಸುತ್ತಾರೆ,” ಎಂದಳು.

ಮರುದಿನ ಪ್ರತೀಕ್ಷಾ ಮನೋತಜ್ಞರ ಅಪಾಯಿಂಟ್‌ ಮೆಂಟ್‌ ಪಡೆದು, ಅಭಿಷೇಕ್‌ ನನ್ನು ಕರೆದುಕೊಂಡು ಹೋದಳು. ಹಲವು ದಿನಗಳ ತನಕ ದೀರ್ಘ ಸೆಶನ್ಸ್ ನಡೆದವು. ಕೆಲವು ದಿನಗಳ ಕಾಲ ನಡೆದ ವೈದ್ಯರ ಚಿಕಿತ್ಸಾ ಸರಣಿ ಯಶಸ್ವಿಯಾಯಿತು. ಅಭಿಷೇಕ್‌ ನ ಜೊತೆ ಜೊತೆಗೆ ಅವರ ಕುಟುಂಬದಲ್ಲಿ ಅದು ಹೊಸ ವಸಂತಾಗಮನವನ್ನೇ ತಂದಿತು. ಇಡೀ ಕುಟುಂಬ ಇದೀಗ ಹೊಸ ಅತಿಥಿಯ ನಿರೀಕ್ಷೆಯಲ್ಲಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ