ಸರಸ್ವತಿ ಜಾಗೀರ್ದಾರ್ *
ಇಲ್ಲಿ ಮಾತಾಡ್ತಿರೋದು ಉಗ್ರಾಣ ಬಗ್ಗೆ! ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಈಗಾಗಲೇ ಭಾರಿ ಕುತೂಹಲ ಮೂಡಿಸುತ್ತಿದೆ. ಹಾಗಾದರೆ, ಈ ಚಿತ್ರದಲ್ಲಿ ಏನಂಥ ವಿಶೇಷ ..
ಒನ್ ಮ್ಯಾನ್ ಶೋ…
ಉಗ್ರಾಣ ಚಿತ್ರದ ಸೃಜನಶೀಲತೆಯ ಹಿಂದೆ ಇರುವ ಪ್ರಮುಖ ಹೆಸರು ರಿಷಿಕೇಶ್. ಇವರು ಈ ಚಿತ್ರದ ನಿರ್ದೇಶನ, ಛಾಯಾಗ್ರಹಣ, ಸಂಕಲನ, ಕಥೆ, ಹಾಗೂ ಚಿತ್ರಕಥೆ – ಎಲ್ಲವನ್ನೂ ತಾವೇ ಮಾಡಿರುವುದು ಒಂದು ವಿಶೇಷ. ಒಬ್ಬನೇ ಬಹುತೇಕ ತಂತ್ರಜ್ಞಾನದ ಹೊಣೆ ಹೊತ್ತಿರೋದು ಸಿನಿಮಾಗೆ ಒಂದು ಹೊಸ ಆಯಾಮ ಕೊಟ್ಟಿದೆಯಂತೆ..
ನಿರ್ಮಾಪಕರ ಪಾತ್ರ
ಅನಿತಾ ಭಟ್ ಈ ಚಿತ್ರವನ್ನು ABC ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಪ್ರಾಮಾಣಿಕ ಕಥೆಯ ಜೊತೆಗೆ ಉತ್ತಮ ತಂತ್ರಜ್ಞಾನ ಬಳಸಿಕೊಂಡು ಈ ಚಿತ್ರವನ್ನು ಕಲಾತ್ಮಕವಾಗಿ ಮೂಡಿಬರಲು ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ.
ತಾರಾಗಣದಲ್ಲಿ..
ಚಿತ್ರದಲ್ಲಿ ಅನಿತಾ ಭಟ್, ಪವನ್ ಶೆಟ್ಟಿ, ಮತ್ತು ಹೈದರಾಬಾದ್‌ನ ಶಫಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಕನ್ನಡ ಮತ್ತು ತೆಲುಗು ಚಿತ್ರರಂಗದ ಅನುಭವಿ ಕಲಾವಿದರು ಸಹ ಭಾಗಿಯಾಗಿದ್ದಾರೆ. ಸಿದ್ದು ಮೂಲಿಮನೆ , ಮಿಮಿಕ್ರಿ ಗೋಪಿ ಜಯದೇವ್ ಮೋಹನ್, ಮತ್ತು ಕರಿ ಸುಬ್ಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಹೊಸತೊಂದು ಶೈಲಿಯ ಅಭಿನಯವನ್ನೇ ಕಾಣಬಹುದಂತೆ
ಸಂಗೀತ ಮತ್ತು ತಂತ್ರಜ್ಞಾನ
ಚಿತ್ರಕ್ಕೆ ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡಿದ್ದು, ಅದು ಸಿನಿಮಾದ ಭಾವನಾತ್ಮಕ ಕ್ಷಣಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಡಾಟ್ ಟಾಕೀಸ್ ಮತ್ತು ಕೃಷಿ ಸ್ಟುಡಿಯೋಸ್ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಮುಂಚೂಣಿಯಲ್ಲಿದ್ದು, ಥ್ರಿಲ್ಲರ್ ಚಿತ್ರದ ತೀವ್ರತೆಯನ್ನು ಹೆಚ್ಚಿಸೋಕೆ ಅದೊಂದು ಪ್ಲಸ್ ಪಾಯಿಂಟ್ ಆಗಲಿದೆ ಎನ್ನುತ್ತಾರೆ ಅನಿತಾ
ಉಗ್ರಾಣ – ನಿಮ್ಮ ಮುಂದೆ ಶೀಘ್ರದಲ್ಲೇ!
ಇಂಥಾ ವಿಭಿನ್ನ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ನೀವು ತಪ್ಪದೆ ನೋಡಬೇಕು ,ಚಿತ್ರಗಳಲ್ಲಿ ಥ್ರಿಲ್ಲಿಂಗ್ ಕಥೆ, ಪ್ರಬಲ ತಂತ್ರಜ್ಞಾನ, ತಾಜಾ ನಿರ್ವಹಣೆಯೊಂದಿಗೆ ಉಗ್ರಾಣ ಚಿತ್ರವನ್ನ ನೀವು ನಿರೀಕ್ಷಿಸಬಹುದು.
ಮಹಾಶಿವರಾತ್ರಿ ಆಚರಣೆಯೊಂದಿಗೆ
ಇಡೀ ತಂಡಕ್ಕೆ ಶುಭವಾಗಲಿ