ಮಿಲ್ಕಿಬ್ಯೂಟಿ ನಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ ಸದ್ಯದಲ್ಲೇ ಮದುವೆಯಾಗ್ತಾರೆ. ಸತಿ-ಪತಿಯಾಗಿ ಹೊಸ ಜೀವನಕ್ಕೆ ಕಾಲಿಡ್ತಾರೆ ಅನ್ನೋ ಸುದ್ದಿ ಗಲ್ಲಿ-ಗಲ್ಲಿಯೂ ಸುತ್ತಾಡಿತ್ತು. 2 ವರ್ಷ ಡೇಟಿಂಗ್, ಚಾಟಿಂಗ್, ಮೀಟಿಂಗ್ ಅಂತ ಲೈಫ್ ಎಂಜಾಯ್ ಮಾಡಿದ್ದ ಈ ಜೋಡಿ ಸೈಲೆಂಟ್ ಆಗಿಯೇ ಬ್ರೇಕಪ್ ಮಾಡಿಕೊಂಡಿದ್ಯಂತೆ. ಇಬ್ಬರು ಪರಸ್ಪರ ಒಪ್ಪಿಗೆ ಮೂಲಕ ದೂರವಾಗಿ, ಕ್ಲೋಸ್ ಫ್ರೆಂಡ್ಸ್ ಆಗಿರೋಣ ಅಂತ ಡಿಸೈಡ್ ಮಾಡಿದ್ದಾರಂತೆ. ಹಾಗಾದ್ರೆ ಈ ಬ್ಯೂಟಿಫುಲ್ ಕಪಲ್ ಬ್ರೇಕಪ್ ಕಾರಣವೇನು..?

vijay-varma-and-tamannaah-bhatia-1

ಹಾಲಿನಂತ ಬಿಳುಪು.. ವಜ್ರದಂತ ಹೊಳಪು.. ನೋಡ್ತಿದ್ರೆ ಮೈಮರೆಸೋ ಸೌಂದರ್ಯ ಈ ಮಿಲ್ಕಿ ಬ್ಯೂಟಿಯದ್ದು. ಈಕೆಯ ಅಂದ-ಚಂದಕ್ಕೆ ಮತ್ತೊಬ್ಬಾಕೆ ಸರಿಸಾಟಿನೇ ಇಲ್ಲ ಎನ್ನುವಂತಿದ್ದಾರೆ. ಮೋಸ್ಟ್ ಲಕ್ಕಿಯೆಸ್ಟ್ ಪರ್ಸನ್ ಆನ್ ಅರ್ಥ್ ಅಂತ ಸೋಷಿಯಲ್ ಮೀಡಿಯಾ ಮಂದಿ ತಮನ್ನಾ ಬಾಯ್​​ಫ್ರೆಂಡ್ ವಿಜಯ್​​ವರ್ಮಾಗೆ ಹೇಳ್ತಿದ್ರು. ಇಂತಹ ಬ್ಯೂಟಿನ ಮದುವೆಯಾಗಲಿರೋ ವಿಜಯ್​​ವರ್ಮಾ ನಿಜಕ್ಕೂ ಅದೃಷ್ಟವಂತ ಅಂತ ಹೇಳ್ತಿದ್ರು. ಆದರೆ, ಈ ಜೋಡಿ ಮೇಲೆ ಅದ್ಯಾರ್ ಕಣ್ ಬಿತ್ತೋ..? ಅದ್ಯಾವ್​ ದೃಷ್ಠಿ ಆಯ್ತೋ..? ಗೊತ್ತಿಲ್ಲ. ಮದುವೆ ಆಗ್ಬೇಕಾದವ್ರು ಬ್ರೇಕಪ್ ಮಾಡ್ಕೊಂಡಿದ್ದಾರೆ.

vijay-varma-and-tamannaah-bhatia

ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ ಬ್ರೇಕಪ್ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇಬ್ಬರು ಮಾತಾಡಿಕೊಂಡು, ಪರಸ್ಪರ ಒಪ್ಪಿಗೆಯಿಂದಲೇ ಕೆಲ ವಾರಗಳ ಹಿಂದೆಯೇ ದೂರ ಆಗಿದ್ದಾರಂತೆ. ಬ್ರೇಕಪ್​​​ಗೆ ಅಸಲಿ ಕಾರಣವೇನು ಅಂತ ಸರಿಯಾಗಿ ತಿಳಿದುಬಂದಿಲ್ಲ.

Tamanna (2)

ಬೆಂಕಿಯಿಲ್ಲದೆ ಹೊಗೆ ಆಡಲ್ಲ ಅನ್ನುವಂತೆ, ಈ ಜೋಡಿ ನಡುವೆ ಕೆಲ ತಿಂಗಳಿಂದ ಭಿನ್ನಾಭಿಪ್ರಾಯ ಇತ್ತಂತೆ. ಇಬ್ಬರಿಗೂ ತಾಳ-ಮೇಳವೂ ಸರಿಯಾಗಿ ಕೂಡಿ ಬರ್ತಾ ಇರ್ಲಿಲ್ವಂತೆ. ಈಗಲೇ ಹೀಗಿರುವಾಗ ಮದುವೆ ಅದ್ಮೇಲೆ ಇಬ್ಬರಿಗೂ ತೊಂದರೆ ಆಗುತ್ತೆ ಅಂತ ಇಬ್ಬರು ಡಿಸೈಡ್ ಮಾಡಿ ಬ್ರೇಕಪ್ ಮಾಡ್ಕೊಂಡಿದ್ದಾರೆ ಅಂತ ಹೇಳಲಾಗ್ತಿದೆ.

Tamanna (4)

ಸೌತ್ ಸುಂದರಿ ತಮನ್ನಾ ಭಾಟಿಯಾ ಹಾಗೂ ವಿಜಯ್‌‌‌ ವರ್ಮಾ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ನಟಿಸಿದ್ರು. 2023ರಿಂದ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಪ್ರೀತಿ ಚಿಗುರೊಡೆದ ಮೇಲೆ ತಮನ್ನಾ ಹಾಗೂ ವಿಜಯ್ ವರ್ಮಾ ಚಾಟಿಂಗ್, ಮೀಟಿಂಗ್, ಡೇಟಿಂಗ್ ಅಂತ ಶುರುಮಾಡಿಕೊಂಡಿದ್ರು.

Tamanna (3)

2 ವರ್ಷ ಡೇಟಿಂಗ್‌‌ನಲ್ಲಿದ್ದ ಈ ಬ್ಯೂಟಿಫುಲ್ ಕಪಲ್‌‌‌ನ ಗಂಡ-ಹೆಂಡ್ತಿಯಾಗಿ ನೋಡೋದಕ್ಕೆ ಅಭಿಮಾನಿಗಳು ಆಸೆ ಪಟ್ಟಿದ್ರು. ಆದರೆ ಆ ಅಭಿಮಾನಿಗಳಿಗೆ ಶಾಕ್ ಕೊಟ್ಟಿರೋ ಈ ಜೋಡಿ ಲವ್, ಮದುವೆ ಗಾಸಿಪ್‌‌‌ಗೆಲ್ಲಾ ಪುಲ್‌‌‌ಸ್ಟಾಪ್‌‌ ಇಟ್ಟಿದ್ದಾರೆ. ಇಬ್ಬರು ಒಳ್ಳೆಯ ಸ್ನೇಹಿತರಾಗಿರೋಕೆ ಡಿಸೈಡ್ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ