ರವಿ basrur ಅವರ ವೀರ ಚಂದ್ರಹಾಸ ಸಿನಿಮಾ ಏನೋ ಚೆನ್ನಾಗಿದೆ ನಮ್ಮೂರಿನ ಪ್ರತಿಭೆ ಎಂದು ಪ್ರೋತ್ಸಾಹ ನೀಡಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದರೆ ಮುಖ್ಯವಾಗಿ ಬೇಸರವಾದ ಸಂಗತಿ ಎಂದರೆ ಇಲ್ಲೂ ಕೂಡ ಬ್ರಾಹ್ಮಣರ ಅವಹೇಳನ ಮಾಡಿರುವುದು. ಬ್ರಾಹ್ಮಣರು ಭೋಜನಪ್ರಿಯರು ಎನ್ನುವ ಮಾತಿನಿಂದ ಶುರುವಾದ   ಸಿನಿಮಾ ಮುಂದೆ ನಿರಂತರ  ಬ್ರಾಹ್ಮಣರ ಬಗ್ಗೆ   ವ್ಯಂಗ್ಯವಾಗಿ ಕೀಳಾಗಿ, ಅವಹೇಳನ ಮಾಡುತ್ತಾ ಅವರ ಊಟ, ದಕ್ಷಿಣೆ ವಿಚಾರ, ನಡತೆ ಇತ್ಯಾದಿಗಳ ಬಗ್ಗೆ ವ್ಯಂಗ್ಯ ವಾಗಿ ತುಚ್ಚವಾಗಿ

ಚಿತ್ರಿಸುತ್ತಾರೆ.ಬ್ರಾಹ್ಮಣರ ಹೆಂಡತಿ ಕಪ್ಪಾಗಿದ್ದಾರೆ ಎಂದು ಒಂದು ಪಾತ್ರ ಹೇಳಿದಾಗ ದೇವಸ್ಥಾನಕ್ಕೆ ಕರೆದುಕೊಂಡು ಹೋದ ಆ ಹೆಂಗಸು ಹೆಂಡತಿಯಲ್ಲ ಬದಲಿಗೆ ಕೆಲಸದವಳು ಎಂದು ಪರೋಕ್ಷವಾಗಿ ಇಟ್ಟುಕೊಂಡವಳು ಎನ್ನುವ ಅರ್ಥದಲ್ಲಿ ಹೇಳುತ್ತಾ ಸಮಾಜದಲ್ಲಿ ತಪ್ಪು ಅಭಿಪ್ರಾಯ ಬರುವಂತೆ  ಕತೆ ಹೆಣೆಯಲಾಗಿದೆ.

ನಿರಂತರ ಸಿನಿಮಾ ದುದ್ದಕ್ಕೂ ಬ್ರಾಹ್ಮಣರ ಪಾತ್ರವನ್ನು  ಗಂಭೀರ ವಾಗಿ   ಗೌರವಯುತ ವಾಗಿ ನಡೆಸಿಕೊಳ್ಳದೆ ತಮಾಷೆಯ ವಸ್ತುವಾಗಿ ಬಳಸಿಕೊಂಡದ್ದು ಕಾಣಬಹುದು.

hasa

ಎಲ್ಲಕ್ಕಿಂತ ಮುಖ್ಯವಾಗಿ ಕಪ್ಪಾಗಿರುವ ಹೆಣ್ಣು ಬ್ರಾಹ್ಮಣನ ಹೆಂಡತಿಯಲ್ಲ ಅದು ಮತ್ತೊಂದು  ವ್ಯವಸ್ಥೆ ಎಂದು ದ್ವಂದ್ವಾರ್ಥ ಬರುವ ರೀತಿ ಕತೆ ಹೆಣೆದದ್ದು ಸರಿಯಲ್ಲ. ಇಲ್ಲಿ ಬೇರೆ ಯಾವುದೇ ಪಾತ್ರದ ಜಾತಿಯನ್ನು  ಉಲ್ಲೇಖಿಸಿಲ್ಲ. ಕತೆಗೆ ಬ್ರಾಹ್ಮಣರ ಅಥವಾ ಪೌರೋಹಿತರ ಪಾತ್ರ ಅಗತ್ಯವಾದರೆ ಅದನ್ನು ಗೌರವಯುತವಾಗಿ ಚಿತ್ರಿಸಲು ಸಾಧ್ಯವಿತ್ತು. ಋಣಾತ್ಮಕ ವಿಚಾರಗಳು ಎಲ್ಲಾ ಜಾತಿಯವರಲ್ಲೂ ಇವೆ, ಕೇವಲ ಬ್ರಾಹ್ಮಣರಲ್ಲಿ ಮಾತ್ರವಲ್ಲ..ಇಷ್ಟಕ್ಕೂ ಇವೆಲ್ಲ ಮೂಲ ಚಂದ್ರಹಾಸ ಕತೆಯಲ್ಲಿ ಇಲ್ಲಾ. ಇವರೇ ಮನಸಿಗೆ ಬಂದಂತೆ ಕತೆ ಹೆಣಿದು ಒಂದು ಜಾತಿಯನ್ನು ಕೀಳಾಗಿ ಚಿತ್ರಿಸಿದ್ದು ಸರಿಯಲ್ಲ

ಆದ್ದರಿಂದ ಚಿತ್ರವನ್ನು ಮೆಚ್ಚುವುದರ ಜೊತೆ ಜೊತೆಗೆ ಬ್ರಾಹ್ಮಣರ ಅವಹೇಳನ ಮಾಡಿದ್ದರ ಬಗ್ಗೆ  ಸಮಸ್ತ ಬ್ರಾಹ್ಮಣ ಸಮಾಜ ಪ್ರತಿಭಟಿಸಬೇಕು ಅಥವಾ ಒಂದು ಸಣ್ಣ ಎಚ್ಚರಿಕೆಯನ್ನಾದರೂ ನೀಡುವ ಕೆಲಸ ಬ್ರಾಹ್ಮಣ ಸಂಘಟನೆಗಳ ಮೂಲಕ ಆಗಬೇಕು ದಯವಿಟ್ಟು ಯೋಚಿಸಿ !!!!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ