ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದ ಭಯೋತ್ಪಾದಕರ ದಾಳಿಗೆ 26 ಮಂದಿ ಅಮಾಯಕರು ಬಲಿಯಾಗಿದ್ದಾರೆ. ಈ ಕುರಿತು ಹಲವು ನಟ, ನಟಿಯರು ಖಂಡಿಸಿದ್ದಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ವಿಜಯ್ ದೇವರಕೊಂಡ ಮಾತನಾಡಿ, ಕಾಶ್ಮೀರ ಎಂದಿಗೂ ಭಾರತಕ್ಕೆ ಸೇರಿದ್ದು, ಪಾಕ್ ಮೇಲೆ ದಾಳಿ ಮಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ಉಗ್ರರ ದಾಳಿಗೆ ಅಮಾಯಕರ ಪ್ರಾಣಪಕ್ಷಿ ಹಾರಿ ಹೋಗಿದೆ. ಮತ್ತೆ ಇಂಥಹ ಕೃತ್ಯ ಮರುಕಳಿಸಬಾರದು ಎಂದರೆ ಶತ್ರುಗಳ ಬಾಲ ಕಟ್ ಮಾಡಲೇಬೇಕು. ಅದಕ್ಕಾಗಿ ಭಾರತೀಯ ಸೈನ್ಯ ಉಗ್ರರನ್ನು ಪತ್ತೆ ಮಾಡುತ್ತಿದ್ದಾರೆ. ಕಾಶ್ಮೀರ ಎಂದೆಂದಿಗೂ ಭಾರತಕ್ಕೆ ಸೇರಿದ್ದು, ಭಾರತೀಯರಿಗೆ ಮಾತ್ರವೇ ಸೇರಿದ್ದು ಅನ್ನೋದು ಸತ್ಯ ಎಂದಿದ್ದಾರೆ.

ಭಯೋತ್ಪಾದಕರಿಗೆ ಶಿಕ್ಷಣವಿಲ್ಲ. ಅವರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲದ ಕಾರಣ ಅವರ ಸಮಸ್ಯೆಗಳನ್ನು ಅವರಿಗೆ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಿದ್ದರೂ ಕಾಶ್ಮೀರದ ಮೇಲೆ ಉದ್ಧಟತನ ಮಾಡುತ್ತಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುವ ಅವಶ್ಯಕತೆ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಅಲ್ಲಿನ ಜನರೇ ಅಲ್ಲಿನ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದಿದ್ದಾರೆ.

ನಾನು 2 ವರ್ಷಗಳ ಹಿಂದೆ ಕಾಶ್ಮೀರಕ್ಕೆ ‘ಖುಷಿ’ ಸಿನಿಮಾ ಚಿತ್ರೀಕರಣಕ್ಕಾಗಿ ಹೋಗಿದ್ದೆ, ತುಂಬಾ ಒಳ್ಳೆಯ ಸಮಯವನ್ನು ನಾನಲ್ಲಿ ಕಳೆದಿದ್ದೇನೆ ಎಂದು ವಿಜಯ್‌ ದೇವರಕೊಂಡ ನೆನಪಿಸಿಕೊಂಡಿದ್ದಾರೆ.

ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ‘ರೆಟ್ರೋ’ ತಮಿಳು ಚಿತ್ರ ಇದೇ ಮೇ 1 ರಂದು ರಿಲೀಸ್‌ಗೆ ಸಿದ್ಧವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ