ಮ್ಯಾಂಗೋ ಪುಡಿಂಗ್
ಸಾಮಗ್ರಿ : 1 ಕಪ್ ಕಾದಾರಿದ, ಕೆನೆಭರಿತ ಗಟ್ಟಿ ಹಾಲು, 4-4 ಚಮಚ ಮ್ಯಾಂಗೋ ಜ್ಯಾಂ, ಕಾರ್ನ್ ಫ್ಲೋರ್, ಫ್ರೆಶ್ ಕ್ರೀಂ, ಮ್ಯಾಂಗೋ ಪ್ಯೂರಿ, 1 ಪ್ಯಾಕೆಟ್ ಮ್ಯಾಂಗೋ ಜೆಲ್ಲಿ, 1 ಕಪ್ ಹೆಚ್ಚಿದ ಮಾಗಿದ ಮಾವು, ರುಚಿಗೆ ತಕ್ಕಷ್ಟು ಸಕ್ಕರೆ.
ವಿಧಾನ : ಹಾಲನ್ನು ಮತ್ತೆ ಬಿಸಿ ಮಾಡಿ, ಅದಕ್ಕೆ ಸಕ್ಕರೆ, ಜೆಲ್ಲಿ ಬೆರೆಸಿ ಗೊಟಾಯಿಸಿ. ಕಾರ್ನ್ ಫ್ಲೋರ್ ನ್ನು ತುಸು ಬಿಸಿ ಹಾಲಿನಲ್ಲಿ ಚೆನ್ನಾಗಿ ಕದಡಿಕೊಂಡು, ಅದನ್ನು ಈ ಮಿಶ್ರಣಕ್ಕೆ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ, ಕ್ರೀಂ ಬೆರೆಸಿ ಗೊಟಾಯಿಸಿ. ನಂತರ ಇದನ್ನು 2 ಸರ್ವಿಂಗ್ ಬೌಲ್ ಗೆ ಹಾಕಿ, ಸೆಟ್ ಆಗಲು ಫ್ರಿಜ್ ನಲ್ಲಿಡಿ. ಅರ್ಧ ಪ್ಯಾಕೆಟ್ ಮ್ಯಾಂಗೋ ಜೆಲ್ಲಿಯಿಂದ, ಜೆಲ್ಲಿ ಸೆಟ್ ಮಾಡಿ. ಇದು ಚೆನ್ನಾಗಿ ತಂಪಾದಾಗ, ಇದಕ್ಕೆ ಹೆಚ್ಚಿದ ಮಾವಿನ ಹೋಳು ಬೆರೆಸಿ, ಮತ್ತೆ ಫ್ರಿಜ್ ನಲ್ಲಿ 20 ನಿಮಿಷ ಇರಿಸಿ ಸೆಟ್ ಮಾಡಿ. ಇದನ್ನು ಮೊದಲೇ ಸೆಟ್ ಮಾಡಿದ್ದ ಮ್ಯಾಂಗೋ ಕ್ರೀಂ ಮೇಲೆ ಹಾಕಿರಿಸಿ, ಮತ್ತೆ ಸೆಟ್ ಮಾಡಿ. ನಂತರ ಪಾರ್ಟ್ ನರ್ ಜೊತೆ ಕೂಲ್ ಕೂಲ್‌ಆಗಿ ಸವಿಯಿರಿ.
ಬನಾನಾ ಶಾಟ್ಸ್
ಸಾಮಗ್ರಿ : ಮಾಗಿದ 2 ಬಾಳೆಹಣ್ಣು, 1 ಕಪ್ ರೆಡಿ ಇರುವ ವೆನಿಲಾ ಕಸ್ಟರ್ಡ್, 1 ಕಪ್ ಬೀಟ್ ಮಾಡಿದ ಕ್ರೀಂ, ಅಲಂಕರಿಸಲು ಬಣ್ಣ ಬಣ್ಣದ ಬನಾನಾ ಚಾಕೋ ಚಿಪ್ಸ್ (ಚಿತ್ರ ಗಮನಿಸಿ).
ವಿಧಾನ : ಬಾಳೆಹಣ್ಣನ್ನು ಕಿವುಚಿ 2 ಪುಡಿಂಗ್ ಗ್ಲಾಸುಗಳಿಗೆ ಹಾಕಿಡಿ. ಇದರ ಮೇಲೆ ವೆನಿಲಾ ಕಸ್ಟರ್ಡ್ ಹಾಕಿಡಿ. ಇದರ ಮೇಲೆ 1 ಪದರ ಬೀಟ್ ಮಾಡಿದ ಕ್ರೀಂ ಬರಲಿ. ಆಮೇಲೆ ಇದರ ಮೇಲೆ ಮತ್ತೊಂದು ಪದರ ಕಿವುಚಿದ ಹಣ್ಣು, ಅದರ ಮೇಲೆ ಕ್ರೀಂ ಪದರ ಬರಲಿ. ಕೊನೆಯಲ್ಲಿ ಚಿತ್ರದಲ್ಲಿರುವಂತೆ ಚಾಕೋ ಚಿಪ್ಸ್ ನಿಂದ ಅಲಂಕರಿಸಿ, ಸಂಗಾತಿ ಜೊತೆ ಸವಿಯಿರಿ.
ಲೇಯರ್ಡ್ ಪುಡ್ಡಿಂಗ್
ಸಾಮಗ್ರಿ : 1 ಕಪ್ ಚಾಕಲೇಟ್ ಕೇಕ್ ಕ್ರಂಬ್ಸ್, 4 ಚಮಚ ಟೂಟಿ ಫ್ರೂಟಿ, 1 ಕಪ್ ಕೆನೆಭರಿತ ಗಟ್ಟಿ ಹಾಲು, 3-4 ಚಮಚ ಪುಡಿ ಸಕ್ಕರೆ, 4-4 ಚಮಚ ವೆನಿಲಾ ಕಸ್ಟರ್ಡ್ ಪೌಡರ್, ಕ್ರೀಂ, ಮ್ಯಾಂಗೋ ಜ್ಯಾಂ, ಹೆಚ್ಚಿದ ಚೆರ್ರಿ ಹಣ್ಣು, ಚಾಕೋ ಚಿಪ್ಸ್, ಅರ್ಧ ಪ್ಯಾಕೆಟ್ ಸ್ಟ್ರಾಬೆರಿ ಜೆಲ್ಲಿ.
ವಿಧಾನ : ಒಂದು ಬಟ್ಟಲಿಗೆ ಕೇಕ್ ಕ್ರಂಬ್ಸ್ ಹರಡಿರಿ. ಇದರ ಮೇಲೆ ಟೂಟಿ ಫ್ರೂಟಿ ಉದುರಿಸಿ, 8-10 ನಿಮಿಷ ಫ್ರೀಝರಿನಲ್ಲಿಟ್ಟು ಸೆಟ್ ಮಾಡಿ. ಪುಡಿ ಸಕ್ಕರೆಯನ್ನು ಹಾಲಲ್ಲಿ ಕದಡಿಕೊಳ್ಳಿ. ಇದನ್ನು ಮಂದ ಉರಿಯಲ್ಲಿ ಒಲೆ ಮೇಲಿರಿಸಿ. ಇದರಿಂದ 4 ಚಮಚ ಹಾಲು ತೆಗೆದುಕೊಂಡು, ಅದಕ್ಕೆ ವೆನಿಲಾ ಕಸ್ಟರ್ಡ್ ಪೌಡರ್ ಬೆರೆಸಿ, ಚೆನ್ನಾಗಿ ಕದಡಿಕೊಳ್ಳಿ. ಹಾಗೆಯೇ ಜ್ಯಾಮಿಗೂ ಸಹ ಮಾಡಿ. ನಂತರ ಇದನ್ನು ಕೆಳಗಿಳಿಸಿ, ಚೆನ್ನಾಗಿ ತಣ್ಣಗಾಗಿಸಿ. ಆಮೇಲೆ ಕ್ರೀಂ ಹಾಕಿ ಗೊಟಾಯಿಸಿ. ಅರ್ಧ ಪ್ಯಾಕೆಟ್ ಜೆಲ್ಲಿಯನ್ನು ತುಸು ಬಿಸಿ ನೀರಲ್ಲಿ ಮರಳಿಸಿ, ಜೆಲ್ಲಿ ತಯಾರಿಸಿ, ತಣ್ಣಗಾಗಿಸಿ ಸೆಟ್ ಮಾಡಿ. ಕ್ರಂಬ್ಸ್ ಕೇಕ್ ಮೇಲೆ 1 ಪದರ ಕ್ರೀಂ ಹಾಲು, 1 ಪದರ ಜೆಲ್ಲಿ, ಈ ತರಹ ಬರುವಂತೆ 5-6 ಪದರ ಪೇರಿಸಿ. ನಂತರ ಫ್ರೀಝರ್ ನಲ್ಲಿರಿಸಿ 20-25 ನಿಮಿಷ ಸೆಟ್ ಮಾಡಿ. ನಂತರ ಚಿತ್ರದಲ್ಲಿರುವಂತೆ ಚೆರ್ರಿ, ಚಾಕಲೇಟ್ ಚಿಪ್ಸ್ ಬೆರೆಸಿ, ಚೆನ್ನಾಗಿ ಕೂಲ್ ಮಾಡಿ, ಸಂಗಾತಿ ಜೊತೆ ಸವಿಯಿರಿ.
ಫ್ರೂಟ್ ಪಂಚ್
ಸಾಮಗ್ರಿ : ಅರ್ಧ ಟಿನ್ ಸೀಲ್ಡ್ ಕಟ್ ಫ್ರೂಟ್ಸ್, ಅರ್ಧ ಕಪ್ ಸೀಸನ್ ಫ್ರೂಟ್ಸ್ (ಸೇಬು, ಬಾಳೆ, ದ್ರಾಕ್ಷಿ, ಕಿವೀ) ಹೋಳು, 1 ಕಪ್ ಫ್ರೆಶ್ ಕ್ರೀಂ, 3 ಚಮಚ ಸ್ಟ್ರಾಬೆರಿ ಕ್ರಶ್.
ವಿಧಾನ : 2 ಗ್ಲಾಸಿಗೆ ಮೊದಲು ಸ್ಟ್ರಾಬೆರಿ ಕ್ರಶ್ ಹಾಕಿಡಿ. ಇದರ ಮೇಲೆ ಬೀಟ್ ಮಾಡಿದ ಕ್ರೀಂ ಹಾಕಿಡಿ. ಇದರ ಮೇಲೆ ಎರಡೂ ಬಗೆಯ ಹಣ್ಣುಗಳ 1-1 ಪದರ ಬರಲಿ. ಇದರ ಮೇಲೆ ಮತ್ತೊಂದು ಪದರ ಕ್ರೀಂ ಬರಲಿ. ಅಗತ್ಯ ಎಸಿದರೆ ಇನ್ನೊಂದಷ್ಟು ಹಣ್ಣಿನ ಹೋಳಿನಿಂದ ಅಲಂಕರಿಸಿ, ಸಂಗಾತಿಯೊಡನೆ ಸವಿಯಿರಿ.
ಬನಾನಾ ಸಂಡೇ
ಸಾಮಗ್ರಿ : 2 ಕಳಿತ ಚುಕ್ಕೆ ಬಾಳೆಹಣ್ಣು, 1-1 ಸ್ಕೂಪ್ ವೆನಿಲಾ ಐಸ್ ಕ್ರೀಂ, ಚಾಕಲೇಟ್ ಐಸ್ ಕ್ರೀಂ, ಸ್ಟ್ರಾಬೆರಿ ಯಾ ಪಿಸ್ತಾ ಐಸ್ ಕ್ರೀಂ, 2-2 ಚಮಚ ಕ್ಯಾರಮೆಲ್ ಸಾಸ್, ಫ್ರೂಟಿ ಕ್ರೀಂ ಸಾಸ್, ಚಾಕಲೇಟ್ ಸಾಸ್, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು.
ವಿಧಾನ : ಒಂದು ಬೋಟ್ ಡಿಶ್ ನಲ್ಲಿ ಮೊದಲೇ ಉದ್ದಕ್ಕೆ ಕತ್ತರಿಸಿದ ಬಾಳೆಹಣ್ಣು ಇರಿಸಿ. ಇದರ ಮೇಲೆ ಮೊದಲು 1 ಪದರ ವೆನಿಲಾ ಐಸ್ ಕ್ರೀಂ, ಅದರ ಮೇಲೆ ಇನ್ನೊಂದು ಪದರ ಚಾಕಲೇಟ್ ಐಸ್ ಕ್ರೀಂ ಹಾಕಿಡಿ. ಇದರ ಮೇಲೆ ಸ್ಟ್ರಾಬೆರಿ ಐಸ್ ಕ್ರೀಂ ಬರಲಿ, ನಂತರ ಇದರ ಮೇಲೆ ಚಾಕಲೇಟ್ ಸಾಸ್, ಕ್ಯಾರಮೆಲ್ ಸಾಸ್, ಫ್ರೂಟಿ ಕ್ರೀಂ ಸಾಸ್ ಕ್ರಮವಾಗಿ ಬರಲಿ. ಇದರ ಮೇಲೆ ಗೋಡಂಬಿ ಚೂರು ಉದುರಿಸಿ, ಸ್ವಲ್ಪ ಹೊತ್ತು ಫ್ರಿಜ್ ನಲ್ಲಿರಿಸಿ ನಂತರ ಸಂಗಾತಿ ಜೊತೆ ಸವಿಯಿರಿ.
ನಟೀ ಬಟರ್ ಸ್ಕಾಚ್
ಸಾಮಗ್ರಿ : 1 ಕಪ್ ಬಟರ್ ಸ್ಕಾಚ್ ವಿತ್ ನಟ್ಸ್, 1 ಕಪ್ ಗಟ್ಟಿ ಕೆನೆಭರಿತ ಹಾಲು, ಅರ್ಧ ಸಣ್ಣ ಚಮಚ ವೆನಿಲಾ ಎಸೆನ್ಸ್, 4 ಚಮಚ ಚಾಕೋ ಚಿಪ್ಸ್ ಬಿಸ್ಕತ್ತಿನ ಚೂರು, 1 ಕಪ್ ವೆನಿಲಾ ಐಸ್ ಕ್ರೀಂ, ಅಲಂಕರಿಸಲು ಬೀಟ್ ಮಾಡಿದ ಕ್ರೀಂ, ಬಟರ್ ಸ್ಕಾಚ್ ಐಸ್ ಕ್ರೀಂ.
ವಿಧಾನ : ಹಾಲನ್ನು ಬಿಸಿ ಮಾಡಿ, ಮಂದ ಉರಿ ಇರಲಿ. ಇದಕ್ಕೆ ಬಟರ್ ಸ್ಕಾಚ್ ವಿತ್ ನಟ್ಸ್ ಬೆರೆಸಿ, ನಿಧಾನ ಕದಡುತ್ತಿರಿ. ನಂತರ ಇದಕ್ಕೆ ವೆನಿಲಾ ಎಸೆನ್ಸ್ ಬೆರೆಸಿ ಸಾಸ್ ರೆಡಿ ಮಾಡಿ. ಒಂದು ಪುಡಿಂಗ್ ಡಿಶ್ ತೆಗೆದುಕೊಂಡು ಮೊದಲು ಅದಕ್ಕೆ 1 ಪದರ ಬಿಸ್ಕತ್ತು ಹರಡಿರಿ. ಇದರ ಮೇಲೆ ವೆನಿಲಾ ಐಸ್ ಕ್ರೀಂ ಬರಲಿ. ಆಮೇಲೆ ಇದರ ಮೇಲೆ ಸಾಸ್ ಹರಡಿರಿ. ಇದರ ಮೇಲೆ ಕ್ರೀಂ ಬಟರ್ ಸ್ಕಾಚ್ ನಟ್ಸ್ ನಿಂದ ಅಲಂಕರಿಸಿ, ಸಂಗಾತಿ ಜೊತೆ ಸವಿಯಿರಿ.
ಕ್ಯಾರಾಮೆಲ್ ಡಿಲೈಟ್
ಸಾಮಗ್ರಿ : 50 ಗ್ರಾಂ ಪುಡಿ ಸಕ್ಕರೆ, 1 ಕಪ್‌ಗಟ್ಟಿ ಹಾಲು, 1 ಚಮಚ ಬೆಣ್ಣೆ, 1 ಕಪ್ ವೆನಿಲಾ ಐಸ್ ಕ್ರೀಂ, ಇದನ್ನು ಅಲಂಕರಿಸಲು ಬಟರ್ ಸ್ಕಾಚ್ ಕ್ರಂಚ್.
ವಿಧಾನ : ಮೊದಲು ಬಾಣಲೆಗೆ ಪುಡಿ ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕೆದಕುತ್ತಾ ಕರಗುವಂತೆ ಮಾಡಿ. ನಂತರ ಇದಕ್ಕೆ ಹಾಲು, ಬೆಣ್ಣೆ ಬೆರೆಸಿ, 1 ಕುದಿ ಬರಿಸಿ ಸಾಸ್ ರೆಡಿ ಮಾಡಿ. 2 ಪುಡಿಂಗ್ ಗ್ಲಾಸುಗಳಿಗೆ ಸ್ವಲ್ಪ ಸ್ವಲ್ಪ ಸಾಸ್ ಹಾಕಿಡಿ. ನಂತರ ಇದರ ಮೇಲೆ ವೆನಿಲಾ ಐಸ್ ಕ್ರೀಂ ಬರಲಿ. ಇದರ ಮೇಲೆ ಮತ್ತೊಂದು ಪದರ ಸಾಸ್ ಹರಡಿರಿ. ನಂತರ ಇದರ ಮೇಲೆ ಬಟರ್ ಸ್ಕಾಚ್ ಕ್ರಂಚ್ ನಿಂದ ಅಲಂಕರಿಸಿ, ಸಂಗಾತಿಯೊಂದಿಗೆ ವ್ಯಾಲೆಂಟೈನ್ಸ್ ಪಾರ್ಟಿಯಲ್ಲಿ ಸವಿಯಿರಿ.
ಕೂಲ್ ಪಿಂಕ್
ಸಾಮಗ್ರಿ : ಅರ್ಧರ್ಧ ಕಪ್ ಮಿಕ್ಸ್ಡ್ ಫ್ರೂಟ್ ಜ್ಯಾಂ, ಫ್ರೆಶ್ ಕ್ರೀಂ, ನೀರು, ಸ್ಟ್ರಾಬೆರಿ ಐಸ್ ಕ್ರೀಂ, ಅಲಂಕರಿಸಲು ಸ್ಟ್ರಾಬೆರಿ ಚಿಪ್ಸ್.
ವಿಧಾನ : ನೀರು ಬಿಸಿ ಮಾಡಿ. ಇದಕ್ಕೆ ಜ್ಯಾಂ, ಕ್ರೀಂ ಬೆರೆಸಿ ಮಂದ ಉರಿಯಲ್ಲಿ ಕದಡುತ್ತಾ ಸಾಸ್ ರೆಡಿ ಮಾಡಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ, ತಣ್ಣಗಾಗಿಸಿ 2 ಪುಡ್ಡಿಂಗ್ ಗ್ಲಾಸುಗಳಿಗೆ ಸಮನಾಗಿ ಸಾಸ್ ಹರಡಿರಿ. ಇದರ ಮೇಲೆ ಐಸ್ ಕ್ರೀಂ ಬರಲಿ. ಇದರ ಮೇಲೆ ಮತ್ತೆ ಸಾಸ್ ಬರಲಿ. ನಂತರ ಸ್ಟ್ರಾಬೆರಿ ಚಿಪ್ಸ್ ನಿಂದ ಅಲಂಕರಿಸಿ, ಸಂಗಾತಿಯೊಡನೆ ಸವಿಯಿರಿ.
ಚಾಕಲೇಟ್ ಮೂಸ್
ಸಾಮಗ್ರಿ : 1 ಕಪ್ ಗಟ್ಟಿ ಹಾಲು, 2 ಚಮಚ ಪುಡಿ ಸಕ್ಕರೆ, 1 ದೊಡ್ಡ ತುಂಡು ಕುಕಿಂಗ್ ಚಾಕಲೇಟ್, 4-4 ಚಮಚ ಕಾರ್ನ್ ಸ್ಟಾರ್ಚ್, ಕ್ರೀಂ, ಚಾಕಲೇಟ್ ಪೌಡರ್, ಅರ್ಧ ಚಮಚ ವೆನಿಲಾ ಎಸೆನ್ಸ್, ಅಲಂಕರಿಸಲು ಚಾಕಲೇಟ್, ತುಸು ಪುಡಿ ಉಪ್ಪು.
ವಿಧಾನ : ಕಾರ್ನ್ ಸ್ಟಾರ್ಚ್, ಸಕ್ಕರೆ, ಚಾಕಲೇಟ್ ಪೌಡರ್, ಹಾಲನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಇದನ್ನು ಮಂದ ಉರಿಯಲ್ಲಿ ಬಿಸಿ ಮಾಡಿ. ನಂತರ ಇದಕ್ಕೆ ಕುಕಿಂಗ್ ಚಾಕಲೇಟ್ ಬೆರೆಸಿ ಮತ್ತಷ್ಟು ಗಟ್ಟಿ ಆಗುವಂತೆ ಮಾಡಿ. ಒಲೆಯಿಂದ ಕೆಳಗಿಳಿಸಿ ಆರಲಿ ಬಿಡಿ. ನಂತರ ಇದಕ್ಕೆ ವೆನಿಲಾ ಎಸೆನ್ಸ್, ಕ್ರೀಂ, ಉಪ್ಪು ಬೆರೆಸಿ. ನಂತರ ಸರ್ವಿಂಗ್ ಬೌಲ್ ಗೆ ವರ್ಗಾಯಿಸಿ, ಚಾಕಲೇಟ್ ಉದುರಿಸಿ ತಣ್ಣಗೆ ಮಾಡಿ, ಸಂಗಾತಿ ಜೊತೆ ಸವಿಯಿರಿ.
ಚಾಕಲೇಟ್ ಫಡ್ಜ್
ಸಾಮಗ್ರಿ : 4-4 ಚಮಚ ಮೆಲ್ಟೆಡ್ ಚಾಕಲೇಟ್, ಕ್ರೀಂ, ಅರ್ಧ ಕಪ್ ಹಾಲು, 3-4 ಹನಿ ವೆನಿಲಾ ಎಸೆನ್ಸ್, ಅಲಂಕರಿಸಲು ಚಾಕೋ ಚಿಪ್ಸ್, ಬೀಟ್ ಮಾಡಿದ ಕ್ರೀಂ, ಚಾಕಲೇಟ್ ಕೇಕ್ ಮೇಲಿನ ಪದರಕ್ಕಾಗಿ.
ವಿಧಾನ : ಚಾಕಲೇಟ್, ಕ್ರೀಂ, ಹಾಲು, ವೆನಿಲಾ ಎಸೆನ್ಸ್ ಬೆರೆಸಿಕೊಂಡು ಇದನ್ನು ಬಿಸಿ ಮಾಡಿ ಸಾಸ್ ಸಿದ್ಧಪಡಿಸಿ. ನಂತರ ಇದನ್ನು 2 ಪುಡಿಂಗ್ ಗ್ಲಾಸಿಗೆ ತುಂಬಿಸಿ. ನಂತರ ಚಾಕಲೇಟ್ ಕೇಕಿನ ಒಂದು ಪದರ ಹರಡಿರಿ. ಇದರ ಮೇಲೆ ಬೀಟ್ ಮಾಡಿದ ಕ್ರೀಂ, ಅದರ ಮೇಲೆ ಚಾಕೋ ಚಿಪ್ಸ್ ನಿಂದ ಅಲಂಕರಿಸಿ, ಸಂಗಾತಿ ಜೊತೆ ಸವಿಯಿರಿ.
ಹಾಟ್ ಚಾಕಲೇಟ್ ಫಡ್ಜ್
ಸಾಮಗ್ರಿ : 1-1 ಕಪ್‌ಹಾಟ್ ಫಡ್ಜ್ ಸಾಸ್, ವೆನಿಲಾ ಐಸ್ ಕ್ರೀಂ, 2 ಚಮಚ ರೋಸ್ಟೆಡ್ ನಟ್ಸ್.
ವಿಧಾನ : 2 ಉದ್ದನೆ ಗ್ಲಾಸುಗಳಿಗೆ ಹಾಟ್ ಫಡ್ಜ್ ಸಾಸ್ ಸುರಿಯಿರಿ. ಇದರ ಮೇಲೆ ವೆನಿಲಾ ಐಸ್ ಕ್ರೀಂ, ಇದರ ಮೇಲೆ ಚಾಕಲೇಟ್ ಐಸ್ ಕ್ರೀಂ ಬರಲಿ. ನಂತರ ಇದರ ಮೇಲೆ ತುಸು ಫಡ್ಜ್ ಸಾಸ್ ಹರಡಿರಿ. ಇದರ ಮೇಲೆ ನಟ್ಸ್ ಉದುರಿಸಿ, ವ್ಯಾಲೆಂಟೈನ್ಸ್ ಪಾರ್ಟಿಯಲ್ಲಿ ಸಂಗಾತಿ ಜೊತೆ ಸವಿಯಿರಿ.