ಎಗ್ ಲೆಸ್ ಕೇಕ್

ಸಾಮಗ್ರಿ : 2 ಕಪ್‌ ಮೈದಾ, ಹಾಲಿನ ಪುಡಿ 1 ಕಪ್‌, ಹಾಲು 1 ಕಪ್‌,  ಬೆಣ್ಣೆ ಅಥವಾ ತುಪ್ಪ ಒಂದೂ ಕಾಲು ಕಪ್‌, ಸಕ್ಕರೆ 1 ಕಪ್‌, ಚಿಟಕಿ ಉಪ್ಪು, ಅರ್ಧ ಚಮಚ ಬೇಕಿಂಗ್‌ ಪೌಡರ್‌, ಅಡುಗೆ ಸೋಡಾ ಕಾಲು ಚಮಚ, ವೆನಿಲ್ ಎಸೆನ್ಸ್ ಅರ್ಧ ಚಮಚ.

ವಿಧಾನ : ಮೈದಾ, ಉಪ್ಪು, ಬೇಕಿಂಗ್‌ ಪೌಡರ್‌, ಅಡುಗೆ ಸೋಡಾ ಎಲ್ಲವನ್ನೂ ಒಟ್ಟಿಗೆ ಜರಡಿಯಾಡಿಕೊಳ್ಳಿ. ಹಾಲನ್ನು ಕುದಿಸಿ ಆರಲು ಬಿಡಿ. ಇದಕ್ಕೆ ಹಾಲಿನ ಪುಡಿ ಹಾಕಿ ಬೆಣ್ಣೆ ಹಾಗೂ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಮೈದಾ ಮಿಶ್ರಣ ಮತ್ತು ವೆನಿಲಾ ಎಸೆನ್ಸ್ ಹಾಕಿ ಚೆನ್ನಾಗಿ ಗೊಟಾಯಿಸಿ. ಈ ಹಿಟ್ಟನ್ನು ಒಂದು ಅಲ್ಯೂಮಿನಿಯಂ ಪಾತ್ರೆಗೆ ಜಿಡ್ಡು ಸವರಿ ಸ್ವಲ್ಪ ಮೈದಾಹಿಟ್ಟನ್ನು ಉದುರಿಸಿಕೊಂಡು ಅದರ ಮೇಲೆ ಈ ಹಿಟ್ಟನ್ನು ಹಾಕಿ, ಆ ಬಟ್ಟಲನ್ನು ಕುಕ್ಕರಿನಲ್ಲಿ ಇಟ್ಟು ಮುಚ್ಚಳ ಮುಚ್ಚಿ. ವಿಷಲ್ ಹಾಕಬೇಡಿ. ಹಾಗೆ ಹಬೆಯಲ್ಲಿ 20 ನಿಮಿಷ ಮೀಡಿಯಂ ಫ್ಲೇಮ್ ನಲ್ಲಿ ಬೇಯಿಸಿ. ನಂತರ ಇನ್ನೂ 10 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ಆರಿದ ಮೇಲೆ ಪ್ಲೇಟ್‌ ಗೆ ಹಾಕಿ ಘಮಘಮಿಸುವ ಎಗ್‌ ಲೆಸ್‌ ಕೇಕ್‌ ರೆಡಿ. ಓವನ್‌ ನಲ್ಲಿ ಸಹ ಮಾಡಬಹುದು.

IMG_20221117_124854

ಪೈನಾಪಲ್ ಕೇಕ್

ಸಾಮಗ್ರಿ : 1 ಕಪ್‌ ಮೈದಾ, 2 ಕಪ್‌ ಪೈನಾಪಲ್ ಹೋಳು, 1 ಕಪ್‌ ಹಾಲು, 1 ಕಪ್‌ ಸಕ್ಕರೆ, 1 ಸ್ಪೂನ್‌ ಬೇಕಿಂಗ್‌ಪೌಡರ್‌, 250 ಎಂ.ಎಲ್. ನೀರು, ಚಿಟಕಿ ಅಡುಗೆ ಸೋಡಾ, ಸ್ವಲ್ಪ ಬಾದಾಮಿ ಚೂರು, 1 ಕಪ್‌ ವೆಜಿಟೆಬಲ್‌ ಎಣ್ಣೆ, 2 ಮೊಟ್ಟೆ, ಚಿಟಕಿ ಉಪ್ಪು, 1 ಕಪ್‌ ಹಾಲಿನ ಪುಡಿ.

ವಿಧಾನ : ಮೈದಾ, ಸೋಡಾ, ಬೇಕಿಂಗ್‌ ಪೌಡರ್‌, ಉಪ್ಪು ಸೇರಿಸಿ ಜರಡಿಯಾಡಿಕೊಳ್ಳಿ. ಮೊಟ್ಟೆಯನ್ನು ಚೆನ್ನಾಗಿ  ಬೀಟ್‌ಮಾಡಿಕೊಳ್ಳಿ. ಅದಕ್ಕೆ ಜರಡಿ ಹಿಡಿದ ಮೈದಾ, ಹಾಲಿನ ಪುಡಿ ಹಾಕಿ ಚೆನ್ನಾಗಿ ಎರಡು ನಿಮಿಷ ಕಲಸಿ. ಆನಂತರ ಹಾಲನ್ನು ಕುದಿಸಿ, ಆರಿಸಿ ಅದಕ್ಕೆ ಬೆಣ್ಣೆ, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಮೈದಾ ಮಿಶ್ರಣ ಹಾಕಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಪೈನಾಪಲ್ ಚೂರುಗಳನ್ನು ಹಾಕಿ ಒಟ್ಟಾಗಿ ಕಲಸಿಕೊಂಡು ಅಲ್ಯೂಮಿನಿಯಂ ಪಾತ್ರೆಗೆ ಜಿಡ್ಡು ಸವರಿ, ಸ್ವಲ್ಪ ಮೈದಾ ಹಿಟ್ಟನ್ನು ಸುತ್ತಲೂ ಉದುರಿಸಿ ಕಲಸಿದ ಮೈದಾ ಹಿಟ್ಟನ್ನು ಹಾಕಿ ಮೇಲೆ ಬಾದಾಮಿ ಚೂರನ್ನು ಲಘುವಾಗಿ ಒತ್ತಿ. ಓವನ್‌ ನಲ್ಲಿ 30 ನಿಮಿಷ ಬೇಕ್‌ ಮಾಡಿ. ಆರಿದ ಮೇಲೆ ಸರ್ವಿಂಗ್‌ ಪ್ಲೇಟ್‌ ನಲ್ಲಿ ಇಡಿ. ರುಚಿಕರವಾದ ಪೈನಾಪಲ್ ಕೇಕ್‌ ರೆಡಿ.

IMG_20221117_124924

 ಆ್ಯಪಲ್ ಕೇಕ್

ಸಾಮಗ್ರಿ : 1 ಕಪ್‌ ಮೈದಾ,  2 ಮೊಟ್ಟೆ, ಅರ್ಧ ಕಪ್‌ ಬೆಣ್ಣೆ, 1 ಚಮಚ ನಿಂಬೆ ಜೂಸ್‌, ಅರ್ಧ ಚಮಚ ಬೇಕಿಂಗ್‌ ಪೌಡರ್‌, 2 ಸೇಬು, 2 ಚಮಚ ವೆನಿಲಾ ಎಸೆನ್ಸ್, ಅರ್ಧ ಕಪ್‌ ಹಾಲು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ