ಪ್ರ : ನಾನು ಪಿಯು ದ್ವಿತೀಯ ತರಗತಿ ವಿದ್ಯಾರ್ಥಿ. ಡಾಕ್ಟರ್ಆಗಬೇಕೆನ್ನುವುದು ನನ್ನ ಕನಸು. 13ನೇ ವರ್ಷದಿಂದಲೇ ನನಗೆ ಹುಡುಗಿಯರ ಹಾಗೆ ಎದೆ ಎದ್ದು ಕಾಣುತ್ತಿದೆ. ಕಾರಣದಿಂದ ನನಗೆ ಮೆಡಿಕಲ್ ಪರೀಕ್ಷೆಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೊ ಎಂಬ ಭಯ ಕಾಡುತ್ತಿದೆ. ಸಮಸ್ಯೆಯಿಂದ ನಾನು ಹೊರಬರುವುದು ಹೇಗೆ ತಿಳಿಸಿ.

ಉ : ಹುಡುಗ ಹುಡುಗಿಯರು ಬಾಲ್ಯದಿಂದ ಹದಿವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಅವರ ದೇಹದಲ್ಲಿ ಪುರುಷ ಹಾಗೂ ಸ್ತ್ರೀ ಹಾರ್ಮೋನುಗಳು ರೂಪುಗೊಳ್ಳುತ್ತವೆ. ಹುಡುಗರಲ್ಲಿ ಪುರುಷ ಹಾರ್ಮೋನುಗಳು ಅಧಿಕಗೊಳ್ಳುತ್ತವೆ. ಆದರೆ ಕೆಲವರಲ್ಲಿ ಇದರ ತದ್ವಿರುದ್ಧ ಪರಿಣಾಮಗಳು ಆಗಬಹುದು. ಅದರ ಪರಿಣಾಮವೆಂಬಂತೆ ಕೆಲವು ಹುಡುಗರಲ್ಲಿ ಹುಡುಗಿಯರ ರೀತಿಯಲ್ಲಿ ಎದೆ ಉಬ್ಬರ ಗೋಚರಿಸುತ್ತದೆ. ಮತ್ತೆ ಕೆಲವು ಹುಡುಗಿಯರಲ್ಲಿ  ಹುಡುಗರ ಹಾಗೆ ಮುಖದಲ್ಲಿ ಕೂದಲು ಬೆಳೆಯುತ್ತದೆ. ಈ ರೀತಿ ಆದಾಗ ಬಹಳ ವಿಚಲಿತರಾಗುವ ಅದತ್ಯವಿಲ್ಲ. ಕೆಲವು ಹುಡುಗರಲ್ಲಿ ಕಾಲಕ್ರಮೇಣ ಉಬ್ಬಿದ ಎದೆ ಸಮತಟ್ಟಾಗುತ್ತದೆ.      ಒಂದು ವೇಳೆ 18-20 ವರ್ಷದ ತನಕ ಎದೆ ಉಬ್ಬರ ಹಾಗೆಯೇ ಉಳಿದುಕೊಂಡರೆ ನೀವು ಯಾರಾದರೂ ಕಾಸ್ಮೆಟಿಕ್‌ ತಜ್ಞರನ್ನು ಭೇಟಿಯಾಗಿ ಅವರ ಸಲಹೆ ಪಡೆದುಕೊಳ್ಳಿ.

ಒಂದು ವೇಳೆ ನಿಮ್ಮ ಎದೆ ಉಬ್ಬರ ಕೊಬ್ಬಿನ ಜಮಾವಣೆಯಿಂದ ರೂಪುಗೊಂಡಿದ್ದರೆ, ಲೈಪೊಸಕ್ಷನ್‌ ಮುಖಾಂತರ ಕೊಬ್ಬನ್ನು ತೆಗೆದು ಹಾಕಬಹುದು. ಎದೆಗಳ ಗ್ರಂಥಿಗಳಲ್ಲಿ ಊತಕಗಳ ಸಂಖ್ಯೆ ಹೆಚ್ಚಿಗೆ ಇದ್ದಲ್ಲಿ, ಚಿಕ್ಕ ಆಪರೇಶನ್‌ ನಿಂದ ಎದೆ ಉಬ್ಬರದ ಗಾತ್ರವನ್ನು ಕಡಿಮೆ ಮಾಡಬಹುದು. ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ದೈಹಿಕ ಪರೀಕ್ಷೆಯ ಬಗ್ಗೆ ನೀವು ಕೇಳಿದ್ದೀರಿ, ಅದರ ಬಗ್ಗೆ ನೀವು ನಿಶಿಂತೆಯಿಂದಿರಿ. `ಗೈನಕೊಮೆಸ್ಟಿಯಾ’ ಎಂಬ ಸಮಸ್ಯೆ ಮೆಡಿಕಲ್ ಪರೀಕ್ಷೆಯ ಸಂದರ್ಭದಲ್ಲಿ ಅದು ನಿಮ್ಮ ಅನುತ್ತೀರ್ಣತೆಗೆ ಕಾರಣವಾಗುವುದಿಲ್ಲ.

 

ಪ್ರ : ನಾನು 32 ವರ್ಷದ ಉದ್ಯೋಗಸ್ಥ ಮಹಿಳೆ. ನನ್ನ ಎಲ್ಲ ಕೆಲಸಗಳು ಕಂಪ್ಯೂಟರ್ನಲ್ಲಿಯೇ ಆಗುತ್ತಿರುತ್ತವೆ. ಹೆಚ್ಚು ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದರಿಂದ ನನಗೆ ಬೆನ್ನು ಮೂಳೆಯಲ್ಲಿ ನೋವಾಗುತ್ತಿರುತ್ತದೆ. ಚಳಿಗಾಲದಲ್ಲಿ ನೋವು ಇನ್ನಷ್ಟು ತೀವ್ರವಾಗಿರುತ್ತದೆ. ಕಾರಣದಿಂದ ನನಗೆ ಕೆಲಸ ಮಾಡಲು ತೊಂದರೆ ಆಗುತ್ತದೆ. ಇದರಿಂದ ಮುಕ್ತಿ ಕಂಡುಕೊಳ್ಳಲು ನನಗೆ ಏನಾದರೂ ಪರಿಹಾರ ಸೂಚಿಸಿ.

ಉ : ಈ ವಯಸ್ಸಿನಲ್ಲಿ ಮೂಳೆಗಳ ಸಮಸ್ಯೆ ಉಂಟಾಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಕಂಪ್ಯೂಟರ್‌ ಮುಂದೆ ಕೆಲಸ ಮಾಡುತ್ತಿರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಚಳಿಗಾಲದಲ್ಲಿ ಬೆನ್ನುಮೂಳೆಯಲ್ಲಿ ಹಿಡಿದುಕೊಂಡಂತಾಗುವ ಸಮಸ್ಯೆ ಹೆಚ್ಚು. ನೀವು ಸತತ ಒಂದೇ ಸ್ಥಿತಿಯಲ್ಲಿ ಕುಳಿತುಕೊಳ್ಳುವುದರಿಂದ ಚಳಿಗಾಲದಲ್ಲಿ ಹಿಡಿದುಕೊಂಡಂತಾಗುವುದರಿಂದ ಡಿಸ್ಕ್ ನ ನರಗಳ ಮೇಲೆ ಒತ್ತಡ ಉಂಟಾಗುತ್ತದೆ. ಆ ಕಾರಣದಿಂದ ನೋವು ತೀವ್ರವಾಗುತ್ತದೆ. ನೋವಿನಿಂದ ರಕ್ಷಿಸಿಕೊಳ್ಳಲು ಕೆಲಸದ ನಡುವೆ ಆಗಾಗ 5-10 ನಿಮಿಷ ಬಾಡಿ ಸ್ಟ್ರೆಚ್ ಮಾಡಿ. ಹಿಂದೆ ಹಾಗೂ ಮುಂದೆ ಬಗ್ಗಿ ಮಾಡಬಹುದಾದಂತಹ ವ್ಯಾಯಾಮಗಳನ್ನು ಮಾಡಿ. ಕುಳಿತುಕೊಳ್ಳುವ ಭಂಗಿಯನ್ನು ಸರಿಯಾಗಿ ಇಟ್ಟುಕೊಳ್ಳಿ. ನೋವಿನಿಂದ ರಕ್ಷಿಸಿಕೊಳ್ಳಲು ಸೂಕ್ತ ಆಹಾರ ಸೇವಿಸಿ. ನೀರಿನ ಸೇವನೆ ಹೆಚ್ಚೆಚ್ಚು ಮಾಡಿ. ಸಮಯ ಸಿಕ್ಕಾಗ ಬೆನ್ನಿಗೆ ಸಾಧಾರಣ ಬೆಚ್ಚಗಿನ ತೈಲದಿಂದ ಮಸಾಜ್‌ ಮಾಡಿ. ನಿಧಾನವಾಗಿ ಮಾಡಿದ ಮಸಾಜ್‌ ನೋವಿನಿಂದ ನಿರಾಳತೆ ದೊರಕಿಸಿಕೊಡುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ