ಗುಂಡ ಏನೋ ಕಾರಣವಾಗಿ ಗರ್ಲ್ ಫ್ರೆಂಡ್‌ ಗುಂಡಿಯಿಂದ ಬೇರಾಗಿದ್ದ. ಅವಳು ಹಾಯಾಗಿ ಬೇರೊಬ್ಬ ವರನನ್ನು ಮದುವೆಯಾದಳು. ಗುಂಡನಿಗೆ ಅವಳ ಗರ್ಲ್ ಫ್ರೆಂಡ್‌ ನಿಂದ ಬಂದ ಕೊನೆಯ ಮೆಸೇಜ್‌ : ಅಂತೂ ನನ್ನ ಮದುವೆಯ ದಿಬ್ಬಣ ಬಂದೇಬಿಟ್ಟಿತು! ಈ ವರನ ಕಡೆಯವರು ಬಹಳ ಧಾರಾಳಿಗಳು. ಪ್ರತಿಯೊಂದು ಶಾಸ್ತ್ರದಲ್ಲೂ ಸಭಿಕರಿಗೆಲ್ಲ ಧಾರಾಳವಾಗಿ 2000/ದ ನೋಟನ್ನೇ ಉಡುಗೊರೆಯಾಗಿ ಹಂಚುತ್ತಿದ್ದಾರೆ. ನೀನು ಇದುವರೆಗೂ ನನಗಾಗಿ ಮಾಡಿದ್ದ ಖರ್ಚನ್ನು ಈ ಮೂಲಕ ಬಂದು ಗಿಟ್ಟಿಸಿಕೋ!

ಮದುವೆಯ ನಂತರ ಪತ್ನಿ ಮೊದಲ ಸಲ ಸೋರೆಕಾಯಿ ಪಲ್ಯ ಮಾಡಿ ಗಂಡನಿಗೆ ಬಡಿಸಿ, ರುಚಿ ಹೇಗಿದೆ ಎಂದು ಕೇಳಿದರೆ, `ಬಿಸಿ ತುಪ್ಪ ಉಗುಳಲಾರದೆ…. ನುಂಗಲಾರದೆ ತತ್ತರಿಸಿದಂತೆ…’ ಎಂದು ಹಿಂದೆ ತಾನು ಎಲ್ಲೋ ಓದಿದ್ದ ಗಾದೆಯನ್ನು ಅವನು ಪ್ರಾಕ್ಟಿಕಲ್ ಆಗಿ ಈಗ ಅರ್ಥ ಮಾಡಿಕೊಳ್ಳಬಲ್ಲ!

ಮದುವೆಯಾದ ಹೊಸತರಲ್ಲಿ `ಅತಿ ಮಧುರ…. ಅನುರಾಗ…’ ಹೇಗಿರುತ್ತೆ ಅಂತೀರಾ? ಇಲ್ಲಿ ನೋಡಿ :

ಹನೀಮೂನಿಗೆ ಹೊರಟಿದ್ದ ನವ ದಂಪತಿ ವಿಹಾರ ಮುಗಿಸಿ ರಾತ್ರಿ ಹೋಟೆಲ್ ‌ಸೇರಿದರು. ಆಕಸ್ಮಿಕವಾಗಿ ತನ್ನ ಪತ್ನಿಯ ಕೈ ಮೇಲಿದ್ದ ರಕ್ತದ ಕಲೆ ಗುರುತಿಸಿದ ನಾಣಿ, ತಕ್ಷಣ ಓಡಿ ಬಂದು ಅವಳ ಕೈ ಹಿಡಿದು, ಆ ರಕ್ತ ಹೀರಿ, ಅಲ್ಲೇ ಇದ್ದ ಹ್ಯಾಂಡಿ ಪ್ಲಾಸ್ಟ್ ಹಚ್ಚಿ ಆರೈಕೆ ಮಾಡಿದ.

ಅದಕ್ಕೆ ಅವನ ಪತ್ನಿ ಮುದ್ದಾಗಿ ಉಲಿದಳು, “ಇದೇನು ಮಾಡಿದಿರಿ ನೀವು…. ನನ್ನ ಕೈ ಮೇಲೆ ಕುಳಿತಿದ್ದ ದೊಡ್ಡ ಸೊಳ್ಳೆಯನ್ನು ಈಗ ತಾನೇ ಹೊಡೆದು ಸಾಯಿಸಿದ್ದೆ!”

ಪ್ರೇಯಸಿ : ಮದುವೆ ನಂತರದ ನಿನ್ನ ಎಲ್ಲಾ ದುಃಖವನ್ನೂ ನನ್ನದೆಂದೇ ಭಾವಿಸಿ, ಅದನ್ನು ಹಂಚಿಕೊಳ್ಳುತ್ತೇನೆ.

ಪ್ರಿಯತಮ : ಅಯ್ಯೋ…. ಆದರೆ ನನಗೆ ಯಾವ ದುಃಖ ಇಲ್ಲವಲ್ಲ?

ಪ್ರೇಯಸಿ : ಅರೆ…. ನಾನು ಹೇಳಿದ್ದು ಮದುವೆ ಆದ ಮೇಲೆ ಶುರುವಾಗುವ ದುಃಖಗಳ ಬಗ್ಗೆ!

ಪತ್ನಿ : ಅದು ಸರಿ, ನಾನು ಹಾಡು ಹೇಳಲು ಶುರು ಮಾಡಿದಾಗೆಲ್ಲ ನೀವೇಕೆ ಹೋಗಿ ಬಾಲ್ಕನಿಯಲ್ಲಿ ನಿಂತುಬಿಡ್ತೀರಿ?

ಪತಿ : ಇದರಿಂದ ನಮ್ಮ ಹೊರೆಯವರಿಗೆ ನಾನು ನಿನ್ನನ್ನು ಹೊಡೆದು ಬಡಿದೂ ಮಾಡುತ್ತಿಲ್ಲ, ಒಂಟಿಯಾಗಿ ಬಾಲ್ಕನಿಯಲ್ಲಿ ನಿಂತಿದ್ದೇನೆ ಅಂತ ಖಾತ್ರಿಯಾಗಲಿ ಅಂತ!

ಗುಂಡ ತನ್ನ ಗೆಳೆಯ ವೆಂಕಿಗೆ ಹಿಂದೆ ಹೇಳಿದ್ದ ಮಾತು ಇಂದು ಬಹಳ ದುಬಾರಿ ಆಯ್ತು. `ನಿನಗೆ ಮುಂದೆ ಯಾವುದೇ ತೊಂದರೆ ಬರಲಿ, ಮರೆಯದೆ ನನ್ನನ್ನು ನೆನಪಿಸಿಕೋ.’

ಅದರ ಫಲವಾಗಿ ಗುಂಡನ ಮನೆಗೆ ಅವನ ಗೆಳೆಯ ವೆಂಕಿ, ಮರು ವಾರ ತನ್ನ ಮದುವೆ ಅಂತ ಆಹ್ವಾನಪತ್ರಿಕೆ ಕಳುಹಿಸುವುದೇ?

ಯಾರೋ ಕರೆಗಂಟೆ ಒತ್ತಿದಾಗ ಶೈಲಾ ಹೋಗಿ ಬಾಗಿಲು ತೆರೆದಳು. ಎದುರಿಗೆ ತನ್ನ ಮಾಜಿ ಬಾಯ್‌ ಫ್ರೆಂಡ್‌ ನಿಂತಿದ್ದ.

ಶೈಲಾ : ಇದೇಕೆ ಈ ಹೊತ್ತಿನಲ್ಲಿ ನನ್ನ ಮನೆ ಹುಡುಕಿಕೊಂಡು ಬಂದೆ? ನನಗೆ ಮದುವೆ ಫಿಕ್ಸ್ ಆಗಿದೆ ಅಂತ ನಿನಗೆ ಮೆಸೇಜ್‌ಕಳುಹಿಸಿದ್ದೆನಲ್ಲ….?

ಮಾಜಿ : ಬಡ್ಕೊಂಡ್ರು…. ಸದಾ ನಿನ್ನ ಫಾಲೋ ಮಾಡೋದೊಂದೇ ನನ್ನ ಕೆಲಸ ಅಂದುಕೊಂಡೆಯಾ? ಮನೆ ಮುಂದೆ ಚಪ್ಪರ, ಶಾಮಿಯಾನಾ ಹಾಕಿಸುವ ಹುಡುಗರ ತಂಡಕ್ಕೆ ನಾನೇ ಲೀಡರ್‌. ಕರಿ ನಿಮ್ಮಪ್ಪನ್ನ…. ಮೊದಲು ಅಡ್ವಾನ್ಸ್ ಕೊಡಲಿ!

ಕನ್ಯಾಪಿತೃ : ಎಲ್ಲಾ ಸರಿ ಕಣಪ್ಪ, ನೀನು ಯಾವ ಕೆಲಸ ಮಾಡಿಕೊಂಡಿದ್ದೀಯಾ?

ನಾಣಿ : ನಾನಾ? ಐ ಆ್ಯಮ್ ಏರ್‌ ಡಿಫ್ಯೂಷನ್‌ ಅಂಡ್‌ ಮಾನಿಟರಿಂಗ್‌ ಟೆಕ್ನಿಶಿಯನ್‌!

ಕನ್ಯಾಪಿತೃ : ಆಹಾ… ಇಂಥ ಅಳಿಯನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೆವು. ಮದುಲಂ ಆಗಿ 1 ಲರ ಕಳೆಯುಲಷ್ಟರಲ್ಲಿ ಮಗಳು ಮುನಿಸಿಕೊಂಡು ಪೆಟ್ಟಿಗೆ ಸಮೇತ ತಲರಿಗೆ ಬಂದು ಇಳಿದಳು.

ಅಳಿಯನ ಕುರಿತು ಮಾವ ಹೋಗಿ ವಿಚಾರಿಸಿದಾಗ, ಅವನು ಕಲಾಸಿಪಾಳ್ಯದ ಮೂಲೆ ಮರದ ಕೆಳಗೆ ಗಾಡಿಗಳಿಗೆ ಟ್ಯೂಬ್‌ಸರಿಪಡಿಸುವ ಪಂಕ್ಚರ್‌ ಕೆಲಸ ಮಾಡುತ್ತಾನೆ ಎಂದು ಖಾತ್ರಿಯಾಯಿತು. ಅದನ್ನು ಸ್ಟೈಲಾಗಿ ಇಂಗ್ಲಿಷ್‌ ನಲ್ಲಿ ಹಾಗೆ ಪ್ರಾಮಾಣಿಕವಾಗಿ ಹೇಳಿದನೇ….. ಎಂದು ಮಾವ 2-3 ಸಲ ಆತ್ಮಹತ್ಯೆಗೆ ಪ್ರಯತ್ನಿಸಿದರಂತೆ!

ಮದುವೆಯ ಮೊದಲ ರಾತ್ರಿಯಂದು ಪತ್ನಿ ತಲೆಯ ಮೇಲೆ ಸೆರಗು ಹೊದ್ದು, ಹಾಲು ಹಿಡಿದು ಬಂದಳು. ವರ ಮಹಾಶಯ, ಅವಳ ಸೆರಗು ಸರಿಪಡಿಸಿ….. ಒಂದು ಕ್ಷಣ ಮಾರ್ಮಿಕವಾಗಿ….. ಅಂತೂ ಸುಧಾರಿಸಿಕೊಂಡು ಎದ್ದು ಕುಳಿತ.

ಪತ್ನಿ : ಏನೂಂದ್ರೆ…. ಯಾವುದಾದರೂ ಸಿನಿಮಾ ನೋಡಿ ಹೆದರಿದ್ರಾ ಏನು?

ಪತಿ : ಬೇಡ ಅಂದ್ರೂ ನನ್ನ ಫ್ರೆಂಡ್ಸ್ ದೆವ್ವದ ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದರು. ಅದೀಗ ಎಷ್ಟು ಸಹಾಯಕರ ಅಂತ ಗೊತ್ತಾಯ್ತು!

ಕಿಟ್ಟಿಯ ಮದುವೆಯಾಗಿ 1 ತಿಂಗಳು ಕಳೆದಿತ್ತು. ಅವನ ಪತ್ನಿ ಒಮ್ಮೆ ಗೊಣಗಿದಳು, “ಇತ್ತೀಚೆಗೆ ನೀವು ನನ್ನ ಸೌಂದರ್ಯದ ಬಗ್ಗೆ ಹೊಗಳುವುದೇ ಇಲ್ಲ. ಮದುವೆಯಾದ ಹೊಸತರಲ್ಲಿ ಎಷ್ಟೊಂದು ವರ್ಣಿಸುತ್ತಿದ್ದಿರಿ….”

ಕಿಟ್ಟಿ ಹೇಳಿದ, “ಡಾರ್ಲಿಂಗ್‌…. ಯಾವುದು ಹೇಗಾದರೂ ಇರಲಿ, ನಿನ್ನ ಕೇಶ ಸೌಂದರ್ಯ ಮಾತ್ರ ಹೊಗಳದೇ ಇರಲಾಗದು. ಹಾಗಾಗಿಯೇ ನಿನ್ನ ಮೇಘದಂಥ ಮುಂಗುರುಳು ಒಮ್ಮೆ ಪಲ್ಯ, ಒಮ್ಮೆ ರೊಟ್ಟಿ, ಒಮ್ಮೊಮ್ಮೆ ಅನ್ನದಲ್ಲೂ ಮಿಂಚುತ್ತಿರುತ್ತದೆ….” ಎನ್ನುವುದೇ….?

ಈ ಸಲದ ಚಳಿಗಾಲದಲ್ಲಿ ಉ. ಭಾರತವಿಡೀ ಅತಿ ಶೀತ, ಥಂಡಿ ಎಲ್ಲರನ್ನೂ ನಡುಗಿಸಿಬಿಟ್ಟಿತ್ತು. ಆಗ ಸರಕಾರದ ಕಡೆಯಿಂದ ಒಂದು ವಿಶೇಷ ಸೂಚನೆ ಪ್ರಕಟವಾಯಿತು :

ನೀರಿನ ಕೊರತೆ ಇದ್ದು, ಥಂಡಿ ಅತಿ ಹೆಚ್ಚಾಗಿರುವುದರಿಂದ, ಯಾರಿಗೆ ಸಾಧ್ಯವೋ ಅವರು ಸ್ನಾನ ಮಾಡಿ. ಅಂಥ ವ್ಯಕ್ತಿಯನ್ನು ಮುಟ್ಟಿಕೊಂಡ ಇತರರನ್ನೂ ಸ್ನಾನ ಮಾಡಿದರೆಂದೇ ಪರಿಗಣಿಸಲಾಗುತ್ತದೆ!

ಇಂಥ ಥಂಡಿಯಲ್ಲಿ ನೀವು ಆಫೀಸಿನಿಂದ ಮನೆಗೆ ಬಂದು, ಹಾಲ್ ‌ನಲ್ಲಿ ಲೈಟ್‌ ಆನ್‌ ಆಗಿಲ್ಲವೆದು ಸ್ವಿಚ್‌ ಒತ್ತಲು ಹೋಗಿ, ಅಕಸ್ಮಾತ್‌ ಲೈಟ್‌ ಬದಲು ಫ್ಯಾನ್‌ ಸ್ವಿಚ್‌ ಒತ್ತಿಬಿಟ್ಟರೆ….? ಮನೆಯವರು ನಿಮ್ಮನ್ನು ಇರಿಯುವ ನೋಟ, ಚೂಪಾದ ಐಸ್‌ ಕೋನ್ಸ್ ಬಂದು ಚುಚ್ಚುವುದಕ್ಕೆ ಸಮನವಾಗಿರುತ್ತದೆ.

ಈ ಸಲದ ಥಂಡಿ ವಾತಾವರಣ ಇನ್ನಷ್ಟು ತೀವ್ರವಾಗಲಿದೆಯಂತೆ. ಹೀಗಾಗಿ ಎಲ್ಲರೂ ತಂತಮ್ಮ ಆರೋಗ್ಯದ ಕಡೆ ತೀವ್ರ ನಿಗಾ ಇಡಬೇಕಾಗಿದೆ. ಶೀತ ಆಗಿ ನೆಗಡಿ ಹೆಚ್ಚಿದರೆ ಕಷ್ಟ. ಏಕೆಂದರೆ ನಿಮ್ಮ ಕರುಣಾಜನಕ ಕಷ್ಟಗಳನ್ನು ಕಂಡು ಯಾರಾದರೂ ಕಣ್ಣೀರು ಒರೆಸಲು ಮುಂದಾಗಬಹುದೇ ವಿನಾ…. ಮೂಗಿನಿಂದ ಸತತ ಸುರಿಯುವ ಸಿಂಬಳವನ್ನಲ್ಲ!

ಮೋನಿ ಟೋನಿಗೆ ಪೋನ್‌ ಮಾಡಿದ್ದ…..

ಮೋನಿ : ನಿಮ್ಮ ಏರಿಯಾದಲ್ಲಿ ಥಂಡಿ ಹೆಚ್ಚಾಗಿದೆಯೇ?

ಟೋನಿ : ಹೌದು.

ಮೋನಿ : ಮೂಗು ಕಟ್ಟಿದೆಯೇ?

ಟೋನಿ : ಹೌದು.

ಮೋನಿ : ಕೆಮ್ಮು ಸಹ ಇದೆಯ?

ಟೋನಿ : ಹೌದು.

ಮೋನಿ : ಜ್ವರ ಕಾಡುತ್ತಿರಬೇಕು…..

ಟೋನಿ : ಹೌದು…. ಹೌದು… ಅಂತ ಎಷ್ಟು ಸಲ ಹೇಳೋದು?

ಮೋನಿ : ಹಾಗಾದರೆ ಫೋನ್‌ ಬದಿಗಿಟ್ಟು, ಮಾತ್ರೆ ನುಂಗಿ, ಬೆಚ್ಚಗೆ ಹೊದ್ದು ಮಲಗಿಬಿಡು!

ಟೀಚರ್‌ : ಕವಿತೆಗೂ ಪ್ರಬಂಧಕ್ಕೂ ಇರುವ ವ್ಯತ್ಯಾಸವೇನು?

ಗುಂಡ : ಟೀಚರ್‌, ನೀವು ಪದ್ಯ ವಿವರಿಸಿದರೆ ಅದರ 1-1 ಪದ ಪ್ರಬಂಧ ಮಂಡಿಸಿದಂತೆ ಅತಿ ಗಂಭೀರವಾಗಿರುತ್ತದೆ. ಅದೇ ನಿಮ್ಮ ಮಗಳು ಬಂದು ಪದ್ಯ ಹೇಳಿದರೆ 1-1 ಶಬ್ದ ಕವಿತೆ ಉಲಿದಂತೆ ಇಂಪಾಗಿರುತ್ತದೆ!

ರೋಗಿ : ಡಾಕ್ಟರೇ…. ಥಂಡಿ ಹೆಚ್ಚಾಗಿದೆ. ಹೀಗಾಗಿ ಬ್ಲೋಯರ್‌ ಆನ್‌ ಮಾಡಿಕೊಂಡೇ ಸರ್ಜರಿ ಮಾಡಿ.

ಡಾಕ್ಟರ್‌ : ಅದು ಏಕೆ?

ರೋಗಿ : ಏಕೆಂದರೆ ಸರ್ಜನ್‌ ಗೂ ವಿಸರ್ಜನೆಗೂ ಬಹಳ ಅಂತರವೇನಿಲ್ಲ. ಥಂಡಿಯಿಂದಾಗಿ ಸರ್ಜರಿ ಮಾಡುವಾಗ ನಿಮ್ಮ ಕೈ ನಡುಗಲಿಲ್ಲ ಅಂದ್ರೆ, ನೀವು ಯಶಸ್ವೀ ಸರ್ಜನ್‌! ಹಾಗಾಗದೆ ಕೈ ನಡುಗಿ ಸರ್ಜರಿ ಎಡಟ್ಟಾದರೆ….. 1-2 ದಿನಗಳಲ್ಲಿ ನನ್ನ ಹೆಣದ ವಿಸರ್ಜನೆ ಆಗಿಹೋಗುತ್ತದೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ