ನೀವು ಕೂಡ ಮೊಬೈಲ್‌, ಲ್ಯಾಪ್ಟಾಪ್‌, ಟ್ಯಾಬ್ಇತ್ಯಾದಿಗಳ ಬಳಕೆಯಲ್ಲಿ ದಿನವಿಡೀ ಕಳೆಯುವಿರಾದರೆ, ಅದು ನಿಮ್ಮ ಗೀಳೇ ಸರಿ. ಇದರಿಂದ ಹೀಗೆ ಹೊರಬನ್ನಿ……!

ಆಧುನಿಕ ಮಾನವರಾದ ನಾವು ಕಾಲಕ್ಕೆ ತಕ್ಕಂತೆ ಸಮಯಬೇಕು ನಿಜ, ಹಾಗೆಂದು ನವ ನಾಗರಿಕರಾಗಿ ನಾವು ಸದಾ ವಾದಕ್ಕೆ ಅಂಟಿದ ಗುಲಾಮರಾಗಬಾರದು. ಅಕಸ್ಮಾತ್‌ ಇವು ಒಮ್ಮೊಮ್ಮೆ ತಾಂತ್ರಿಕ ದೋಷದಿಂದಾಗಿ ಕೈಕೊಟ್ಟರೆ, ನಾವು ಇಡೀ ದಿನ ತಲೆ ಮೇಲೆ ಕೈಹೊತ್ತು ಕೂರಬೇಕಾಗುತ್ತದೆ. ಈ ಗ್ಯಾಜೆಟ್ಸ್ ಇಲ್ಲದೆ ನಿಮಗಾಗಿ ಜೀವನವೇ ಬೇಸರ ಎನಿಸುತ್ತದೆ, ಟೈಂಪಾಸ್‌ ಆಗದೆ ತಲೆಕೂದಲು ಕಿತ್ತುಕೊಳ್ಳುವಂತಾಗುತ್ತದೆ. ಹೀಗಾಗಿ ಇಷ್ಟು ದಿನ ಆದದ್ದು ಆಗಿಹೋಯಿತು, ಆದರೆ ಇಂದಿನಿಂದ ದೃಢ ಮನಸ್ಸು ಮಾಡಿ, ಈ ಗ್ಯಾಜೆಟ್ಸ್ ಗೆ ಎಷ್ಟು ಬೇಕೋ ಅಷ್ಟೇ ಮಾನ್ಯತೆ ಕೊಡಿ. ಎಂದೆಂದೂ ಇವುಗಳಿಗೆ ಗುಲಾಮರಾಗಬೇಡಿ! ಈ ಗ್ಯಾಜೆಟ್ಸ್ ಗೀಳಿನಿಂದ ಹೊರಬರುವುದು ಹೇಗೆ ಎಂದು ವಿವರವಾಗಿ ತಿಳಿಯೋಣವೇ? :

ನೋ ಫೋನ್ಸ್ ಟುಡೇ

ಪ್ರತಿಯೊಂದು ಘಳಿಗೆಯೂ ಸದಾ ಫೋನಿಗೆ ಅಂಟಿ ಕೂರುವುದರಿಂದ ನಮ್ಮ ದೈನಂದಿನ ಚಟುವಟಿಕೆಗಳು ಕೆಟ್ಟು, ಅಭ್ಯಾಸ ದುರಭ್ಯಾಸವಾಗುತ್ತವೆ. ಸ್ವಲ್ಪ ಸಮಯ ಸಿಕ್ಕಿದ ತಕ್ಷಣ ಗೂಗಲ್, ಯೂಟ್ಯೂಬ್ಸ್, ವಾಟ್ಸ್ ಆ್ಯಪ್‌, ಫೇಸ್‌ ಬುಕ್‌, ಟ್ವಿಟರ್‌, ಇನ್ ಸ್ಟಾಗ್ರಾಂ…. ಹೀಗೇ ಸದಾ ಸರ್ದಾ ಅದರಲ್ಲಿ ಮುಳುಗಿ ಹೋಗುವುದು ಖಂಡಿತಾ ಒಳ್ಳೆಯದಲ್ಲ. FB‌ಗೆ ಫೋಟೋ ಅಪ್‌ ಲೋಡು, ಕಂಡವರ ಮೇಸೇಜ್‌ ಗೆ ಲೈಕ್‌ ಕೊಡು, ತಮಗೆಷ್ಟು ಬಂತು ನೋಡು….. ಇದೇ ಆಗಿಹೋಗುತ್ತದೆ. ಇದಕ್ಕಿಂತ ಜೀವನದಲ್ಲಿ ಬೇರಾವುದೇ ಮುಖ್ಯ ಕೆಲಸ ಇಲ್ಲ ಎಂಬಂತಾಗಿ ಹೋಗುತ್ತದೆ.

ಹೀಗಾಗಿ ನೀವು ಮನಸ್ಸಿನಲ್ಲೇ ದೃಢ ಸಂಕಲ್ಪ ಮಾಡಿಕೊಂಡು, ವಾರದಲ್ಲಿ 1 ದಿನ, (ಉದಾ: ಭಾನುವಾರ ಆದರೆ ಆಫೀಸ್‌ ಟೆನ್ಶನ್‌ಇರದು) ಖಂಡಿತಾ ಫೋನ್‌ ಮಾಡುವುದಿಲ್ಲ ಅಥವಾ ಇದರಿಂದ ಸೆಲ್ಛಿ, ಫೋಟೋ ಪೋಸ್ಟಿಂಗ್‌ ಇತ್ಯಾದಿ ಮಾಡುವುದಿಲ್ಲ ಎಂದು ನಿರ್ಧರಿಸಿ. ಯಾರೋ ಆಸ್ಪತ್ರೆಗೆ ಅಡ್ಮಿಟ್‌ ಆದರು ಇತ್ಯಾದಿ ಅತಿ ಪ್ರಮುಖ ಕಲೆ ಮಾತ್ರ ಸ್ವೀಕರಿಸುವಂತೆ, ಕಾಲ್ ‌ಮಾಡುವಂತೆ ಇರಲಿ. ಮೊದಲ 1-2 ತಿಂಗಳು ಇದು ಅತಿ ಕಠಿಣ ಎನಿಸಿದರೂ ಮುಂದೆ ಕ್ರಮೇಣ ಅಭ್ಯಾಸವಾಗುತ್ತಾ, ನೀವು ಗ್ಯಾಜೆಟ್ಸ್ ನಿಂದ ಸಹಜವಾಗಿ ದೂರ ಉಳಿಯಲು ಬಯಸುವಿರಿ.

ದಿನ ಟಿವಿ ಇಲ್ಲ

ಈ ದಿನ ರಿಲ್ಯಾಕ್ಸಿಂಗ್‌ ಡೇ, ಹೇಗೂ ಆಫೀಸಿಗೂ ರಜೆ ಇದೆ, ಹಾಗಾಗಿ ದಿನವಿಡೀ ಟಿವಿ ನೋಡುವತ್ತ ಕುಳಿತಿರೋಣ ಎಂದು ಭಾವಿಸದಿರಿ. ನಿಮ್ಮ ಬ್ರೇಕ್‌ ಫಾಸ್ಟ್, ಲಂಚ್‌, ಡಿನ್ನರ್‌ ಎಲ್ಲ ಟಿವಿ ಮುಂದೆಯೇ ಆಗಲಿ ಎಂಬ ಹಠ ಬೇಡ. ಯಾವಾಗ ಬೆಳಗ್ಗೆ ಇದ್ದದ್ದು ರಾತ್ರಿ ಆಯಿತೋ ಗೊತ್ತಿಲ್ಲ ಎಂಬಂತೆ ಆಗಬಾರದು.

ಇದು ಕೇವಲ ನಿಮ್ಮೊಂದಿಗೆ ಮಾತ್ರವೇ ಹೀಗಾಗುತ್ತದೆ ಎಂದುಕೊಳ್ಳಬೇಡಿ, ಬಹುತೇಕ ಜನರೊಂದಿಗೆ ಹೀಗೇ ಆಗುತ್ತದೆ. ಫ್ರೀ ಟೈಂ ಎಂದರೆ ಟಿವಿ ಮುಂದೆ ಹಾಜರ್‌, ಫುಲ್ ಡೇ ಹಾಲಿಡೇ ಎಂದರೆ, ಇಡೀ ದಿನ ಟಿವಿ ಜೊತೆ ಟೈಂ ಸ್ಪೆಂಡ್‌! ಮನೆಯ ಬೇರೆ ದಸ್ಯರು ಏನೋ ಹೇಳುತ್ತಿರಲಿ, ಕೆಲವರಂತೂ ಟಿವಿ ಬಿಟ್ಟು ಕದಲುವುದೇ ಇಲ್ಲ.

ನೀವೂ ಇದೇ ಪಟ್ಟಿಗೆ ಸೇರುವವರಾದರೆ, ವಾರಕ್ಕೆ ಒಮ್ಮೆ 15 ದಿನಗಳಿಗೊಮ್ಮೆ ಒಮ್ಮೆಯೂ ಟಿವಿ ಮುಂದೆ ಕೂರುವುದಿಲ್ಲ ಎಂದು ಶಪತ ಮಾಡಿ. ಕ್ರಮೇಣ ಟಿವಿ ಕಾಯಿಲೆ ಬಿಟ್ಟು ಹೋಗುತ್ತದೆ.

ಇಂದು ಗಾಡಿಗೂ ರಜಾ

ಹತ್ತಿರದ ಮಾರುಕಟ್ಟೆಗೆ ಹೋಗುವುದಿರಲಿ ಅಥವಾ 2-3 ಬೀದಿಗಳ ನಂತರದ ಫ್ರೆಂಡ್ಸ್ ನ್ನು ಭೇಟಿ ಆಗುವುದಿರಲಿ, ಪ್ರತಿಯೊಂದಕ್ಕೂ ನಾವು ಸ್ಕೂಟರ್‌, ಕಾರು ಇಲ್ಲದೆ ಹೊರಗೆ ಹೋಗುವುದೇ ಇಲ್ಲ. ಇದರಿಂದಾಗಿ ನಮ್ಮ ನಡಿಗೆಯ ಅಭ್ಯಾಸ ಹಾಳಾಗಿ ಹೋಗುತ್ತಿದೆ. ಜೊತೆಗೆ ನಮ್ಮ ದೈನಂದಿನ ಖರ್ಚು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನಿಮ್ಮನ್ನು ಸದಾ ಗಾಡಿಯ ಜೊತೆಯಲ್ಲೇ ಗುರುತಿಸಿಕೊಳ್ಳದೆ, ಹಾಗೇ ನಡೆದುಕೊಂಡು ಹೋಗುವ ಮನಸ್ಸು ಮಾಡಿ. ನಿಮ್ಮ ದೈನಂದಿನ ಖರ್ಚನ್ನು ಬೇಕೆಂದೇ ಹಿಗ್ಗಿಸದೆ, ಇವತ್ತು ಏನೂ ಖರ್ಚು ಬೇಡ ಎಂದು ಸಂಕಲ್ಪ ತೊಡಬೇಕು. ಪೂರಕವಾಗಿ ಗಾಡಿಯನ್ನು ಹೊರಗೆ ಕೊಂಡೊಯ್ಯಲೇಬಾರದು. ನಿಮ್ಮ ತರಹವೇ ವೈಯಕ್ತಿಕ ಕೆಲಸಗಳ ಕಡೆ ಗಮನಕೊಡಿ. ಇದರಿಂದ ನಿಮ್ಮ ಗಾಡಿಯ ಮೇಲಿನ ಅವಲಂಬನೆ ತಪ್ಪುತ್ತದೆ, ಒಂದಿಷ್ಟು ನಡಿಗೆಯ ಅಭ್ಯಾಸ ಮೈಗೂಡುತ್ತದೆ.

ನೋ ಆನ್ಲೈನ್ಶಾಪಿಂಗ್ಟುಡೇ

ಇತ್ತೀಚೆಗಂತೂ ದೈನಂದಿನ ಅಗತ್ಯದ ಪ್ರತಿ ಸಾಮಗ್ರಿಯನ್ನೂ ಆನ್‌ ಲೈನ್‌ ಮೂಲಕ ತರಿಸುವುದೇ ಆಗಿಹೋಗಿದೆ. ಮನೆಯಲ್ಲಿ ಯಾವುದೇ ಸಣ್ಣಪುಟ್ಟ ಸಾಮಗ್ರಿ ಮುಗಿದಿರಲಿ, ತಕ್ಷಣ ಆನ್‌ ಲೈನ್‌ ಆರ್ಡರ್‌ ನೀಡಿ ತರಿಸಿಯೇ ಬಿಡುತ್ತೇವೆ. ಇದರಿಂದಾಗಿ ಕಿರಾಣಿ (ಗ್ರಾಸರಿ) ಸಾಮಗ್ರಿಗಳ ಮೇಲೆ ನಮ್ಮ ಕಂಟ್ರೋಲ್ ತಪ್ಪುತ್ತದೆ, ಜೊತೆಗೆ ನಮ್ಮ ದೈನಂದಿನ ಅಭ್ಯಾಸಗಳೂ ಕೆಡವ ತೊಡಗುತ್ತವೆ. ಎಲ್ಲವನ್ನೂ ಆನ್‌ ಲೈನ್‌ ನಲ್ಲೇ ತರಿಸುವುದರಿಂದ, ಅಂಗಡಿಯವರ ಜೊತೆ ನಮ್ಮ ಚೌಕಾಸಿಯ ಬಾಬತ್ತೇ ಮಾಯವಾಗಿದೆ? ಸಂಜೆ ಯಾರಾದರೂ ಅತಿಥಿ ಬರುತ್ತಾರೆ, ಕ್ರಿಕೆಟ್‌ ಮ್ಯಾಚ್‌ ಕಾರ್ಯಕ್ರಮ ಎಂದ ತಕ್ಷಣ ಎಲ್ಲಾ ಆಹಾರ ಆನ್‌ ಲೈನೇ! ಈ ಕಾರಣದಿಂದಾಗಿ ನಾವು ದಿನೇದಿನೇ ಸೋಮಾರಿಗಳಾಗುತ್ತಿದ್ದೇವೆ. ಅಂದುಕೊಂಡದ್ದಕ್ಕಿಂತ ಖರ್ಚು ಹೆಚ್ಚುತ್ತಿದೆ.

ಹೀಗಾಗಿ ಇಂಥ ಗೀಳಿನಿಂದ ದೂರಾಗಲು, ಕನಿಷ್ಠ ವಾರಕ್ಕೆ 1-2 ದಿನಾದರೂ ಆನ್‌ ಲೈನ್‌ ಶಾಪಿಂಗ್‌ ಮಾಡುವುದೇ ಬೇಡ ಎಂದು ದೃಢ ಸಂಕಲ್ಪ ಕೈಗೊಳ್ಳಿ. ಆ ದಿನವೇ ಏನೋ ತುರ್ತಾಗಿ ಕೊಳ್ಳಬೇಕಿದ್ದರೆ, ಹತ್ತಿರದ ಅಂಗಡಿಗೆ ಹೋಗಿ, ಚೌಕಾಸಿ ವ್ಯಾಪಾರ ಮಾಡಿ ತನ್ನಿ. ಇದರಿಂದಾಗಿ ನಿಮ್ಮ ಬಜೆಟ್‌ ಎಷ್ಟೋ ಕಂಟ್ರೋಲ್ ಆಗುತ್ತದೆ, ಜೊತೆಗೆ ಆ ದಿನ ನೀವು ತೀರಾ ಅತ್ಯಗತ್ಯ ಸಾಮಗ್ರಿ ಮಾತ್ರ ಕೊಂಡುಕೊಳ್ಳುವಿರಿ. ಇದು ಬಜೆಟ್‌ ಜೊತೆಗೆ ನಿಮ್ಮ ಆನ್‌ ಲೈನ್‌ ಗೀಳನ್ನೂ ತಗ್ಗಿಸುತ್ತದೆ.

ಅಂಬುಜಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ