ಮಳೆ, ಚಳಿಗಾಲದಲ್ಲಿ ಕೈಕಾಲುಗಳ ಚರ್ಮದತ್ತ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ. ಹೀಗಾಗಿ ಸಂದರ್ಭಕ್ಕಾಗಿಯೇ ಇರುವ ನೈಸರ್ಗಿಕ ಮಾಸ್ಕ್ ಗಳನ್ನು ಟ್ರೈ ಮಾಡಿ ನೋಡಿ……!

ಜನ ಕೇವಲ ನಿಮ್ಮ ಮುಖ ಮಾತ್ರ ಗಮನಿಸದೆ, ನಿಮ್ಮ ಕೈಕಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿಯೂ ನಿಮ್ಮ ವಯಸ್ಸನ್ನು ಅಂದಾಜಿಸಬಲ್ಲರು. ಕೈಗಳಲ್ಲಿನ ಸುಕ್ಕು, ಹಿಮ್ಮಡಿಯ ಒಡೆತ ನೋಡಲು ಹಿಂಸೆ ಎನಿಸುತ್ತದೆ. ಇದರಿಂದ ಅವರು ನಿಮ್ಮನ್ನು ಇರುವ ವಯಸ್ಸಿಗಿಂತ ಹಿರಿಯರೆಂದೇ ಭಾವಿಸುತ್ತಾರೆ.

ಹೀಗಾದಾಗ, ಹೇಗೂ ನಾನು 1-2 ತಿಂಗಳಲ್ಲಿ ಮೆನಿಕ್ಯೂರ್‌, ಪೆಡಿಕ್ಯೂರ್‌ ಮಾಡಿಸುವೆ, ಇನ್ನು ಚಿಂತೆ ಏಕೆ ಅಂದುಕೊಳ್ಳಬೇಡಿ. ಈ ಮಾಸ್ಕ್ ಗಳನ್ನು ಬಳಸುವ ಪ್ರಕ್ರಿಯೆ ನಿಮ್ಮ ಕೈಕಾಲುಗಳನ್ನು ಎಕ್ಸ್ ಫಾಲಿಯೇಟ್‌ ಮಾಡುವುದರ ಜೊತೆಗೆ ಡೀಪ್‌ ಹೈಡ್ರೇಟ್‌ ಸಹ ಮಾಡುತ್ತದೆ. ಕೆಲವೇ ದಿನಗಳಲ್ಲಿ ಈ ಜೀವಕೋಶಗಳಲ್ಲಿ ಮತ್ತೆ ಹೊಸ ಪ್ರಾಣವಾಯು ತುಂಬಿಕೊಂಡು ಸಶಕ್ತವಾಗಿ ದುಡಿಯಲಾರಂಭಿಸುತ್ತವೆ. ಈ ಚಕ್ರ ನಿರಂತರ ನಡೆಯುತ್ತದೆ. ಇದರಿಂದ ಚರ್ಮ ಎಷ್ಟೋ ಸಾಫ್ಟ್, ಸ್ಮೂತ್‌ ಮಾತ್ರವಲ್ಲದೆ ವೆಲ್ ಗ್ರೂಮ್ಡ್ ಆಗಿರುತ್ತದೆ. ಇದನ್ನೇ ಎಲ್ಲಾ ಹೆಂಗಸರೂ ಬಯಸುತ್ತಾರೆ. ಇದಕ್ಕಾಗಿ ಯಾವ ರೀತಿಯ ಮಾಸ್ಕ್ ಹಾಕಿಕೊಂಡರೆ ಚರ್ಮಕ್ಕೆ  ಲಾಭಕರ ಎಂದು ತಿಳಿಯೋಣವೇ? :

ಲೀಡರ್ಸ್ಫುಟ್ಪೀಲಿಂಗ್ಮಾಸ್ಕ್ : ನೀವು ಮಳೆ, ಚಳಿಗಾಲದಲ್ಲಿ ಕಾಲಿಗೆ ಸಾಕ್ಸ್ ಧರಿಸಿ ಅಥವಾ ಹೊರಗೆ ಓಡಾಡುವಾಗ ಚಪ್ಪಲಿ ಧರಿಸಿದರೆ, ಅತಿಯಾದ ಥಂಡಿ ಹವೆ ಅಥವಾ ತುಂತುರು ಹನಿ ನಿಮ್ಮ ಪಾದಗಳನ್ನು ಅತಿ ಶುಷ್ಕಗೊಳಿಸಿ ಬಿಡುತ್ತದೆ. ಬದಲಾದ ಋತು ನಿಮ್ಮ ಕೈಕಾಲಿನ ಸೌಂದರ್ಯಕ್ಕೆ ಖಂಡಿತಾ ಹಾನಿ ಮಾಡುತ್ತದೆ. ಈ ಸಂದರ್ಭದಲ್ಲಿ ಫುಟ್‌ ಫೀಲಿಂಗ್‌ ಮಾಸ್ಕ್, ನಿಮ್ಮ ಕಾಲುಗಳ ಚರ್ಮವನ್ನು ಸೂಪರ್‌ ಸಾಫ್ಟ್ ಮಾಡುತ್ತದೆ.

ಅಸಲಿಗೆ ಇದರಲ್ಲಿ ಲ್ಯಾಕ್ಟಿಕ್‌ಗ್ಲೈಕಾಲಿಕ್‌ ಆ್ಯಸಿಡ್‌ ಇದ್ದು, ಇದು ಡೆಡ್‌ ಸ್ಕಿನ್‌ತೊಲಗಿಸಿ, ಪಾದ, ಹಿಮ್ಮಡಿಗಳನ್ನು 100% ಕ್ಲೆನ್ಸ್ಡ್ ಕ್ಲಿಯರ್‌ ಮಾಡಿ, ಡ್ರೈನೆಸ್‌ ನಿವಾರಿಸುತ್ತದೆ.

ಲೀಡರ್ಸ್ಹ್ಯಾಂಡ್ಮಾಯಿಶ್ಚರೈಸರಿಂಗ್ಮಾಸ್ಕ್ : ಕೋಮಲ ಕರಗಳು ಯಾರಿಗೆ ಬೇಡ? ಆದರೆ ಎಷ್ಟೋ ಸಲ ನಿರ್ಲಕ್ಷ್ಯದಿಂದಾಗಿ, ಋತು ಬದಲಾವಣೆ ಕಾರಣ, ಕೈಕಾಲು ಬಲು ರಫ್‌ ಆಗುತ್ತದೆ. ಎಷ್ಟೋ ಸಲ ಚರ್ಮದಲ್ಲಿ ಹೊಪ್ಪಳೆ ಎದ್ದು, ಉದುರಲಾರಂಭಿಸುತ್ತದೆ. ಇದನ್ನು ಸಕಾಲಕ್ಕೆ ನಿವಾರಿಸಿಕೊಳ್ಳದಿದ್ದರೆ, ಕೈಕಾಲು ಬಲು ಕುರೂಪಿಯಾಗಿ ಕಾಣುತ್ತವೆ. ಹೊಪ್ಪಳೆ ಏಳುವ ಕಾರಣ ಉರಿ, ನೋವು, ರಕ್ತ ಒಸರುವಿಕೆಯೂ ಕಾಡುತ್ತದೆ.

ಈ ಸಂದರ್ಭಕ್ಕೆ ಬಳಸಬೇಕಾದುದೇ ಹ್ಯಾಂಡ್‌ ಮಾಯಿಶ್ಚರೈಸಿಂಗ್‌ ಮಾಸ್ಕ್. ಇದು ಚರ್ಮದ ಆಳಕ್ಕಿಳಿದು ಉತ್ತಮ ಪರಿಣಾಮ ಬೀರುತ್ತದೆ. ಇದರಲ್ಲಿ ಶಿಯಾ ಬಟರ್‌, ಕೋಕೋ ಬಟರ್‌, ಆರ್ಗನ್‌ ಆಯಿಲ್‌, ಮ್ಯಾಂಗೊ ಸೀಡ್‌ ಎಕ್ಸ್ ಟ್ರಾಕ್ಟ್ ನಂಥ ಘಟಕಗಳಿದ್ದು, ಕೈ ಪಾದಗಳ ಭಾಗಕ್ಕೆ ಉತ್ತಮ ಪೋಷಣೆ ಒದಗಿಸುತ್ತವೆ.

ಇನಿಸ್ಫ್ರೀ ಸ್ಪೆಷಲ್ ಕೇರ್ಹ್ಯಾಂಡ್ಫುಟ್ಮಾಸ್ಕ್ : ಸ್ಪೆಷಲ್ ಕೇರ್‌ ಹ್ಯಾಂಡ್‌ ಮಾಸ್ಕ್ ನಿಮ್ಮ ಕೈ ಕಾಲುಗಳ ಚರ್ಮಕ್ಕೆ ಮಾಯಿಶ್ಚರೈಸ್‌ನರಿಶ್‌ ಮಾಡಿ, ಅದನ್ನು ಹೆಲ್ದಿಗೊಳಿಸುತ್ತದೆ. ಕೇವಲ ಕೈ ಕಾಲಿಗೆ ಯಾವುದೋ ಕ್ರೀಂ ಬಳಿದುಕೊಂಡ ಮಾತ್ರಕ್ಕೆ, ಕೆಲಸವಾಗದು. ಉಗುರಿಗೆ ಬಣ್ಣ ಬಳಿದ ಮಾತ್ರಕ್ಕೆ ಕೈ ಅಂದವಾಗದು. ಇದಕ್ಕಾಗಿ ಹ್ಯಾಂಡ್‌ ಮಾಸ್ಕ್ ನ ಅಗತ್ಯವಿದೆ. ಇದಕ್ಕಾಗಿ ಹರ್ಬಲ್ ಗ್ರೀನ್‌ ಕಾಂಪ್ಲೆಕ್ಸ್ ಎಕ್ಸ್ ಟ್ರಾಕ್ಟ್ ಜೊತೆ 7 ನ್ಯಾಚುರಲ್ ಹರ್ಬ್‌ ಎಕ್ಸ್ ಟ್ರಾಕ್ಟ್ ಬಳಸಿದರೆ, ಅದು ಕೈಕಾಲುಗಳ ಚರ್ಮದ ಎಲಾಸ್ಟಿಸಿಟಿ ಹೆಚ್ಚಿಸಿ, ಅದನ್ನು ಸಾಫ್ಟ್, ಸ್ಮೂತ್‌ಬ್ಯೂಟಿಫುಲ್ ಮಾಡುತ್ತದೆ.

ಟೋನಿ ಮೋಲಿ ಫುಟ್ಮಾಸ್ಕ್ : ನೀವು ಪಾರ್ಟಿಗಾಗಿ ಬ್ಯೂಟಿಫುಲ್ ಡ್ರೆಸ್‌ಸ್ಯಾಂಡಲ್ಸ್ ಧರಿಸಿದ್ದಾಯ್ತು, ಇದು ನಿಮಗೆ ಬಲು ಪ್ರಿಟಿಯೂ ಹೌದು, ಆದರೆ ನಿಮ್ಮ ಪಾದ, ಹಿಮ್ಮಡಿಗಳು ಒಂದಿಷ್ಟೂ ಚೆಂದವಿಲ್ಲವಾದರೆ, ಯಾವ ಮಹಾನ್‌ ಸ್ಯಾಂಡಲ್ಸ್ ಕೂಡ ನಿಮ್ಮ  ಪಾದಕ್ಕೆ ಶೋಭಿಸುವುದಿಲ್ಲ.

ಈ ಸಂದರ್ಭದಲ್ಲಿ ಟೋನಿ ಮೋಲಿ ಶೈನಿ ಪುಟ್‌ ಮಾಸ್ಕ್, ಸೂಪರ್‌ ಸ್ಮೂತ್‌ ಆಗಿಸುವುದರ ಜೊತೆ, ಅದನ್ನು ಪ್ರಿಟಿಗೊಳಿಸುತ್ತದೆ. ಇದರಲ್ಲಿ ಸ್ಯಾಲಿಸಿಲಿಕ್‌ ಆ್ಯಸಿಡ್‌, ಗ್ಲೈಕಾಲಿಕ್‌ ಆ್ಯಸಿಡ್‌, ಲ್ಯಾವೆಂಡರ್‌, ಆರ್ಗನ್‌ ಆಯಿಲ್‌, ಪೆಪರ್‌ ಮಿಂಟ್‌ ನಂಥ ಘಟಕಗಳಿದ್ದು, ಹಿಮ್ಮಡಿಗಳ ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡಿ, ಅದನ್ನು ಸ್ಮೂತ್‌ ಗೊಳಿಸುತ್ತದೆ.

ಅವಿನೋ ರಿಪೇರಿಂಗ್ಹ್ಯಾಂಡ್ಮಾಸ್ಕ್ : ನೀವು ಸಹ ನಿಮ್ಮ ಕೈಕಾಲು ಮೃದುವಾಗಿ ಇರಬೇಕೆಂದು ಬಯಸಿದರೆ, ಅಗತ್ಯವಾಗಿ ರಿಪೇರಿಂಗ್‌ ಹ್ಯಾಂಡ್‌ ಮಾಸ್ಕ್ ಬಳಸಿಕೊಳ್ಳಿ.

ಇದು ಇತ್ತೀಚೆಗೆ ಹೆಚ್ಚು ಬೇಡಿಕೆಯಲ್ಲಿದೆ. ಇದರ ರಿಸಲ್ಟ್ ಸಹ ಅತ್ಯುತ್ತಮ. ಇದರಲ್ಲಿ ಶಿಯಾ ಬಟರ್‌ ಹಾಗೂ ಪ್ರಿಬಯೋಟಿಕ್‌ ಓಟ್ಸ್ ನ ಉತ್ತಮಿಕೆಯ ಅಂಶಗಳು ಧಾರಾಳವಾಗಿವೆ. ಇದು ಡ್ಯಾಮೇಜ್ಡ್ ಸ್ಕಿನ್‌ ನ್ನು ರಿಪೇರಿ ಮಾಡಿ ಹದಗೊಳಿಸುತ್ತದೆ, ಋತು ಬದಲಾವಣೆಯ ದುಷ್ಪರಿಣಾಮಗಳನ್ನೂ ತಪ್ಪಿಸುತ್ತದೆ.

ಶಿಯಾ ಬಟರ್

ಚರ್ಮದ ಕಠೋರತೆ ತೊಲಗಿಸಿ ಮೃದು ಮಲ್ಲಿಗೆಯಾಗಿಸುತ್ತದೆ. ಜೊತೆಗೆ ಇದು ಪ್ಯಾರಾಬೀನ್‌ಫ್ರಾಗ್ರೆನ್ಸೆ ಫ್ರೀ ಆಗಿದ್ದು, ಈಝಿ ಟು ಯೂಸ್‌ ಕೂಡ!

ಫೇಸ್ಶಾಪ್ ಫುಟ್ಪೀಲಿಂಗ್ಮಾಸ್ಕ್ : ಇದು ಪಾದಗಳಿಗೆ ನ್ಯಾಚುರಲ್ ಡೀಟಾಕ್ಸ್ ನ ಕೆಲಸ ಮಾಡುತ್ತದೆ. ಮಗುವಿನ ಕೋಮಲ ಚರ್ಮದಂತೆಯೇ ನಿಮ್ಮ ಪಾದ, ಹಿಮ್ಮಡಿಗಳನ್ನು ಇದು ಮೃದುವಾಗಿಸಬಲ್ಲದು. ಇದರಲ್ಲಿ ಸಸ್ಯಮೂಲ ತಿರುಳು, ಗಿಡಮೂಲಿಕೆಗಳ ಉತ್ತಮಿಕೆಯ ಅಂಶಗಳಿದ್ದು, ಡೆಡ್‌ ಸ್ಕಿನ್‌ ತೊಲಗಿಸುವಲ್ಲಿ ಪೂರಕ. ಇದರಿಂದ ಚರ್ಮ ಪುನರುಜ್ಜೀವನ ಗೊಳ್ಳುತ್ತದೆ!

ಬಿ. ಪಾರ್ವತಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ