ನಿಮ್ಮ ಸಂಗಾತಿ ಮೊಬೈಲ್ ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದರೆ, ಕುಟುಂಬದಲ್ಲಿ ಅವನ ಹಸ್ತಕ್ಷೇಪ ಕಡಿಮೆಯಾಗಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತ ಆಗಬಹುದು…….!
ನಿಮ್ಮ ಸಂಗಾತಿ ನಿರಂತರ ಫೋನ್ ನಲ್ಲಿಯೇ ಇರುತ್ತಿದ್ದರೆ, ಒಮ್ಮೆ ಒಂದು ಕೋಣೆಯಲ್ಲಿ, ಇನ್ನೊಮ್ಮೆ ಮತ್ತೊಂದು ಕೋಣೆಯಲ್ಲಿ ಹೋಗಿ ಚಾಟಿಂಗ್ ಮಾಡುತ್ತಿದ್ದರೆ, ನಿಮಗೆ ಅವನ ಬಗ್ಗೆ ಎಷ್ಟೇ ವಿಶ್ವಾಸವಿದ್ದರೂ, ಅವನ ಕೃತ್ಯಗಳ ಬಗ್ಗೆ ನಿಮಗೆ ಆಕ್ಷೇಪವಿದ್ದರೆ, ನೀವು ಅಲರ್ಟ್ ಆಗಲೇಬೇಕು. ಏಕೆಂದರೆ ಇವುಗಳಲ್ಲಿ ನೀವು ಕೆಲವು ಸಂಗತಿಗಳ ಬಗ್ಗೆ ಗಮನಕೊಡಬೇಕು.
ಅವನು ತನ್ನ ಫೋನ್ ನಿಂದ ಕಾಲ್ ಮತ್ತು ಮೆಸೇಜ್ ಗಳನ್ನು ಡಿಲೀಟ್ ಮಾಡುತ್ತಿಲ್ಲ ತಾನೇ? ಅವನ ಫೋನ್ ಹೊಸದರಂತೆ ಇಲ್ಲ ತಾನೇ? ಅದರಲ್ಲಿ ಯಾವುದೇ ಮೆಸೇಜ್ ಡಿಲೀಟ್ಸ್, ಕಾಲ್ಸ್ ಡಿಲೀಟ್ ಇಲ್ಲ ಅಂದರೆ ಅ ಡಿಲೀಟ್ ಮಾಡಲ್ಪಟ್ಟಿವೆ ಇದು ಮೋಸ ಮಾಡುವ ಒಂದು ಪ್ರಬಲ ಸಂಕೇತ.
ಸಾಮಾನ್ಯವಾಗಿ ಚೀಟಿಂಗ್ ಮಾಡುವ ಪುರುಷರು ತಮ್ಮ ಅಫೇರ್ಸ್ ನ ಹೆಸರು ಅಥವಾ ನಂಬರ್ ನ್ನು ವಿಭಿನ್ನ ರೀತಿಯಲ್ಲಿ ಇಡುತ್ತಾರೆ.
ನಿಮ್ಮ ಸಂಗಾತಿ ಫೋನ್ ನಲ್ಲಿ ಮಾತನಾಡುವಾಗ ಅಥವಾ ಚಾಟಿಂಗ್ ಮಾಡುವಾಗ ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ನೋಡುತ್ತಿದ್ದಾನೆಯೇ? ನೀವು ಅವನ ಸಂಗಾತಿ. ಕುಟುಂಬ ಅಥವಾ ಕೆಲಸ ಯಾವುದೇ ತೆರನಾದ ವಿಷಯವನ್ನು ನಿಮ್ಮಿಂದ ಬಚ್ಚಿಡುವ ಅಗತ್ಯ ಉಂಟಾಗಬಾರದು.
ನಿಮ್ಮಿಂದ ಬಚ್ಚಿಡುವ ಒಂದು ಕಾರಣ ಕೂಡ ಸಂಗಾತಿ ನಿಮಗಾಗಿ ಒಂದು ಅಚ್ಚರಿದಾಯಕ ಯೋಜನೆ ರೂಪಿಸುತ್ತಿರಬಹುದು. ಆ ಬಗ್ಗೆ ಸಂದೇಹಪಡುವ ಮೊದಲು ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.
ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಯಾವುದೊ ಅಫೇರ್ ನಲ್ಲಿ ಆಸಕ್ತಿಯಿರುವ ವ್ಯಕ್ತಿಗೆ ಮನೆಯಿಂದ ಹೊರಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಚಾಟಿಂಗ್, ಆನ್ ಲೈನ್ ಡೇಟಿಂಗ್ ಲಿಂಕ್ಸ್, ಸೀಕ್ರೆಟ್ ಅಡ್ರೆಸೆಸ್ ಇವು ಎಮೋಷನ್ ಅಫೇರ್ಸ್ ಗೆ ಒತ್ತು ಕೊಟ್ಟಿವೆ. ಸಂಗಾತಿ ಹೆಚ್ಚು ಹೊತ್ತು ಆನ್ ಲೈನ್ ನಲ್ಲಿ ಇರುತ್ತಾನೆಂದರೆ ನೀವು ಒಂದಿಷ್ಟು ಅಲರ್ಟ್ ಆಗುವುದು ಸೂಕ್ತ.
ನಿಮ್ಮ ಸಂಗಾತಿ ಆಫೀಸಿನಿಂದ ಬಂದ ಬಳಿಕ ನಿಮ್ಮ ಜೊತೆ ಒಂದು ಕಪ್ ಚಹಾ ಕುಡಿಯಲು ಕೂಡ ಸಮಯ ಮೀಸಲಿಡುತ್ತಿಲ್ಲ ಹಾಗೂ ಚಾಟಿಂಗ್ ನಲ್ಲಿ ಮಗ್ನನಾಗುತ್ತಾನೆಂದರೆ ನೀವು ಆ ಬಗ್ಗೆ ಅವಶ್ಯವಾಗಿ ಮಾತನಾಡಿ.
ಸರ್ ಪ್ರೈಸಿಂಗ್ ಸೀಕ್ರೆಸಿ ಒಂದು ಚಿಂತೆಯ ವಿಷಯವಾಗಬಹುದು. ಅದಕ್ಕೂ ಮುಂಚೆ ನಿಮ್ಮಿಬ್ಬರ ಸಂಬಂಧ ಮುಕ್ತ ಹಾಗೂ ಪ್ರಾಮಾಣಿಕತೆಯಿಂದ ಕೂಡಿದ್ದಾಗಿರಬಹುದು.
ನಿಮ್ಮ ಸಂಗಾತಿ ಫೋನ್ ರಿಂಗ್ ಆಗುತ್ತಲೇ ಅಥವಾ ಮೆಸೇಜ್ ಬರುತ್ತಿದ್ದಂತೆಯೇ ಅಲರ್ಟ್ ಆದರೆ ಅಥವಾ ಬೇರೆ ರೂಮಿಗೆ ಹೋದರೆ, ನೀವಿಲ್ಲದಿದ್ದಾಗ ಫೋನ್ ಪರಿಶೀಲನೆ ಮಾಡುತ್ತಿದ್ದರೆ ಏನೊ ನಡೆಯಬಾರದ್ದು ನಡೆಯುತ್ತಿದೆ ಎಂದರ್ಥ.
ಅವನ ಫೋನ್ ನಿಮ್ಮ ಕೈಯಲ್ಲಿದ್ದಾಗ ಅವನಿಗೆ ಆತಂಕ, ಹೆದರಿಕೆ ಉಂಟು ಮಾಡುತ್ತಿದ್ದರೆ, ಅದು ಏನೊ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಯಾರ ಮುಂದೆಯೂ ಏನನ್ನು ಬಚ್ಚಿಡಬೇಕಾದ ಅಗತ್ಯವಿಲ್ಲದಿದ್ದಾಗ ಅವನು ನರ್ವಸ್ ಆಗುವುದಿಲ್ಲ.
ನೀವು ಸ್ವಭಾವದಿಂದ ಅಸೂಯೆಯ ಪ್ರವೃತ್ತಿಯವರಾಗಿರದಿದ್ದರೆ, ಆತನ ಕೋಣೆಗೆ ಹೋಗಿ ಚಾಟಿಂಗ್ ಮಾಡುವುದು ಆತಂಕಕ್ಕೆ ಎಡೆ ಮಾಡುತ್ತಿದ್ದರೆ, ಆತನೊಂದಿಗೆ ಮುಕ್ತವಾಗಿ ಚರ್ಚಿಸಿ. ಎಲ್ಲರಿಗೂ ಪ್ರೈವೆಸಿಯ ಹಕ್ಕು ಇದೆ. ಆದರೆ ಏನನ್ನಾದರೂ ಬಚ್ಚಿಡುವುದು ಕಂಡುಬಂದರೆ ನೀವು ಅವಶ್ಯವಾಗಿ ಪ್ರಶ್ನಿಸಿ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ತಮ್ಮ ಮೊಬೈಲ್ ಗಳಲ್ಲಿ ಬೇರೇ ಬೇರೆ ತೆರನಾದ ಪಾಸ್ ವರ್ಡ್ ಹಾಕಿ ಪ್ರೊಟೆಕ್ಟ್ ಮಾಡುತ್ತಾರೆ, ತಮ್ಮ ಫೋನ್ ನಲ್ಲಿ, ಆನ್ ಲೈನ್ ನೆಟ್ ವರ್ಕ್ ನಲ್ಲಿ, ಇಮೇಲ್ಸ್ ಗೆ ಪಾಸ್ ವರ್ಡ್ ಇಡುವುದು ಸಹಜ. ಒಬ್ಬರಿಗೊಬ್ಬರು ಪಾಸ್ ವರ್ಡ್ ಹೇಳದಿರುವುದು ಕೂಡ ಸರಿ. ಒಂದು ವೇಳೆ ಆತನಿಗೆ ನಿಮ್ಮ ಪಾಸ್ ವರ್ಡ್ ಮತ್ತು ಅವನ ಪಾಸ್ ವರ್ಡ್ ನಿಮಗೆ ಗೊತ್ತಿರಬಹುದು. ಒಂದುವೇಳೆ ಅವನ ಪಾಸ್ ವರ್ಡ್ ಗಳನ್ನು ಬದಲಿಸಿಬಿಟ್ಟರೆ ಮತ್ತು ಅದನ್ನು ನಿಮಗೆ ತಿಳಿಸಲು ಇಷ್ಟಪಡದಿದ್ದರೆ ಅದು ಮೋಸ ಮಾಡುವ ಒಂದು ಸಂಕೇತ ಆಗಿರಬಹುದು.
ಗಂಡ ತನ್ನ ಫೋನ್ ನ್ನು ತನ್ನ ಜೊತೆಗೆ ಇಟ್ಟುಕೊಳ್ಳುತ್ತಿದ್ದರೆ, ಬಾಥ್ ರೂಮ್ ಗೆ ಹೋಗುವಾಗಲೂ ಕೂಡ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರೆ ನೀವು ಎಚ್ಚರಗೊಳ್ಳಬೇಕಾದ ಅಗತ್ಯವಿದೆ.
ಮೊಬೈಲ್ ನ ಚಟುವಟಿಕೆಗಳ ಬಗ್ಗೆ ಗಮನ ಕೊಡುವುದು ಹೆಚ್ಚು ಸುಲಭ. ಫೋನ್ ಅವನ ಬಳಿ ಇದ್ದಾಗ ಅವನ ಸ್ವಭಾವ ಬದಲಾಗುತ್ತಿದ್ದರೆ, ನೀವು ಮಲಗಿಕೊಂಡ ಬಳಿಕ ಅವನು ಮೆಸೇಜ್ ಅಥವಾ ಚಾಟಿಂಗ್ ನಲ್ಲಿ ವ್ಯಸ್ತವಾಗಿರಬಹುದು. ಪ್ರತಿಯೊಂದು ಅಫೇರ್ ಗಳು ದೈಹಿಕವಾಗಿ ಇರುವುದಿಲ್ಲ. ಒಮ್ಮೊಮ್ಮೆ ಆನ್ ಲೈನ್ ಮಾತುಕತೆ ಅಥವಾ ಫೋನ್ ನ ಚಟುವಟಿಕೆಗಳು ಎಮೋಶನಲ್ ಚೀಟಿಂಗ್ ಆಗಿರಬಹುದು.
ನ್ಯೂಯಾರ್ಕ್ ನ ಕ್ಲಿನಿಕ್ ಮನೋವಿಜ್ಞಾನಿ ಜೈಸನ್ ವೀಲರ್ ಹೀಗೆ ಹೇಳುತ್ತಾರೆ, “ಬೇರೆ ಅಡಿಕ್ಷನ್ ಗಳ ಹಾಗೆ ಫೋನ್ ನ ಹೆಚ್ಚು ಬಳಕೆಯಾಗುತ್ತಿದ್ದರೆ ಅದಕ್ಕೆ ಯಾರನ್ನೂ ಹೊಣೆಯಾಗಿಸಬೇಡಿ. ಫೋನ್ ನ ಹೆಚ್ಚುವರಿ ಬಳಕೆ ನಿಮ್ಮ ಸಂಬಂಧವನ್ನು ರಕ್ಷಿಸಲು ಕೂಡ ಆಗಿರಬಹುದು. ಈ ರೀತಿಯ ವರ್ತನೆ ದೊಡ್ಡ ಸಮಸ್ಯೆಯೊಂದರಿಂದ ರಕ್ಷಿಸಲು ನೆರವಾಗಬಹುದು. ಅದೊಂದು ಕೆಟ್ಟ ಚಟ. ಅದರಿಂದ ಬಿಡಿಸಿಕೊಳ್ಳಲು ಬೇರೆ ಉಪಾಯ ಅನುಸರಿಸಬಹುದು. ನಿಮ್ಮ ಸಂಗಾತಿಗೆ ಅದನ್ನು ಹೇಗೆ ಹೇಳಬೇಕೆಂದರೆ ಅದು ಅವನಿಗೆ ಅವಮಾನ ಅನ್ನಿಸಬಾರದು. ನನಗೆ ಅದರಿಂದ ಬಹಳ ಕೆಡುಕೆನಿಸುತ್ತದೆ, ನೀವು ನನ್ನ ಬಗ್ಗೆ ಗಮನವನ್ನೇ ಕೊಡುತ್ತಿಲ್ಲ, ನಿಮ್ಮೆಲ್ಲ ಗಮನ ಸದಾ ಫೋನ್ ನಲ್ಲಿಯೇ ಇರುತ್ತದೆ ಎಂದೆಲ್ಲ ಹೇಳಬೇಡಿ. ನೀವು ಆತನ ವಿರುದ್ಧ ಆರೋಪ ಮಾಡದ ಭಾವನೆಗಳನ್ನು ಶೇರ್ ಮಾಡುವ ನಿಮ್ಮ ಈ ಉಪಾಯ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು.
ನಾವಿಂದು ಎಂತಹ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆಂದರೆ, ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ನಮ್ಮ ಕೆಲಸ ಸಂಗತಿಗಳು, ಪಾಸ್ ವರ್ಡ್ಸ್ ಹಾಗೂ ಮತ್ತೆ ಕೆಲವು ಸಂಗತಿಗಳು ಅದರಲ್ಲಿ ಸೇರಿಕೊಂಡಿವೆ. ಈ ಮಾಹಿತಿ ಪೂರ್ಣ ಸಾಧನವನ್ನು ನಾವು ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗಬಹುದು. ನಿಮ್ಮ ಸಂಗಾತಿಗೆ ಫೋನ್ ಫ್ರೀ ಆಗಲು ನೆರವು ನೀಡಿ.
ಶಿಷ್ಟಾಚಾರ ತಜ್ಞ ಡೆನ್ನಾ ಹೋಮ್ ರವರ ಪ್ರಕಾರ, ಒಂದು ಅಡಿಕ್ಟ್ ನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ನಮ್ಮ ಜೀವನವನ್ನು ಲೈಫೈನ ಹೊರತಾಗಿಯೂ ಜೀವಿಸಬಹುದು. ಸಂಗಾತಿಗೆ ರಾತ್ರಿ ಹೊತ್ತು ಫೋನ್ ನಿಂದ ದೂರ ಇರಲು ಹೇಳಿ. ಯಾವ ಸಮಯದಲ್ಲಿ ಯಾವ ಸಮಯದ ತನಕ ನೀವಿಬ್ಬರೂ ಫೋನ್ ನಿಂದ ದೂರ ಇರಬೇಕು ಎನ್ನುವುದನ್ನು ನಿಮಗೆ ನೀವೇ ನಿರ್ಧರಿಸಿ. ಅದಕ್ಕಾಗಿ ಕೆಲವು ನಿಮಯಗಳನ್ನು ಹಾಕಿಕೊಳ್ಳಿ. ಹೋಮ್ಸ್ ಪ್ರಕಾರ, ಬೆಡ್ ರೂಮ್ ನಲ್ಲಿ ಫೋನ್ ಇರುವುದು ರಿಲೇಶನ್ ಶಿಪ್ ಕಿಲ್ಲರ್ ನ ಕೆಲಸ ಮಾಡುತ್ತದೆ. ನಾವು ತಕ್ಷಣವೇ ಪರಿಣಾಮದ ಅಪೇಕ್ಷೆಯನ್ನು ಇಟ್ಟುಕೊಳ್ಳಬಾರದು. ಸಂಗಾತಿಯ ಈ ಅಭ್ಯಾಸವನ್ನು ಕ್ರಮೇಣವಾಗಿ ಬಿಡಿಸಲು ನೀವು ನೆರವಾಗಿ. ನೀವು ಹೇಳಿದ ಬಳಿಕ ಪ್ರತಿಸಲ ಜಗಳಗಳು ಆಗುತ್ತಿದ್ದರೆ ಪ್ರಕರಣ ಗಂಭೀರವಾಗಿದೆ ಎಂದರ್ಥ. ಯಶಸ್ವಿ ಸಂಬಂಧಕ್ಕಾಗಿ ಐ ಕಾಂಟ್ಯಾಕ್ಟ್, ಮಾತುಕತೆ ಮತ್ತು ತಿಳಿವಳಿಕೆ ಅತ್ಯವಶ್ಯ. ನಿಮ್ಮ ಸಂಗಾತಿ ಈ ಯಾವುದಕ್ಕೂ ಪ್ರಯತ್ನ ಮಾಡದಿದ್ದರೆ ಅದನ್ನು ಚಿಂತೆಯ ವಿಷಯವೆಂದು ಭಾವಿಸಿ.
– ಪೂರ್ಣಿಮಾ