ಉನ್ನತ ಸೌಂದರ್ಯಕ್ಕಾಗಿ ತುಟಿಗೆ ಲಿಪ್ಸ್ಟಿಕ್ಹಚ್ಚುವುದರಲ್ಲಿ ತನ್ನದೇ ಆದ ಮಹತ್ವವಿದೆ. ಇದರ ಕುರಿತಾಗಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಂಡುಬಂದಿರುವ ಸುಧಾರಣೆಗಳೇನು…..?

ತುಟಿಗಳ ರಂಗು ಹೆಚ್ಚಿಸುವಲ್ಲಿ, ಅದಕ್ಕೊಂದು ಹೊಸ ಕಳೆ ಕೊಡುವಲ್ಲಿ ಲಿಪ್‌ ಸ್ಟಿಕ್‌ ಗೆ ಮಹತ್ವದ ಸ್ಥಾನವಿದೆ. ಆಧುನಿಕ ಹೆಂಗಸರ ಹ್ಯಾಂಡ್‌ ಬ್ಯಾಗಿನಲ್ಲಿ ಬೇರಾ ಕಾಸ್ಮೆಟಿಕ್ಸ್ ಇದೆಯೋ ಇಲ್ಲವೋ, ಲಿಪ್‌ ಸ್ಟಿಕ್‌ ಅತ್ಯಗತ್ಯವಾಗಿ ಇದ್ದೇ ಇರುತ್ತದೆ. ಲಿಪ್‌ ಸ್ಟಿಕ್ ಬಣ್ಣದಿಂದ ಹಿಡಿದು ಅದರ ವೆರೈಟಿಗಳವರೆಗೆ ಆಧುನಿಕ ತರುಣಿಯರು ಯಾವುದೇ ಕಾಂಪ್ರಮೈಸ್‌ ಗೂ ಸಿದ್ಧರಿರುವುದಿಲ್ಲ.

ಇಂದು ಮಾರುಕಟ್ಟೆಯಲ್ಲಿ ಎಣಿಸಲಾರದಷ್ಟು ಬಗೆಯ, ಬಣ್ಣಗಳ ಲಿಪ್‌ ಸ್ಟಿಕ್‌ ಬ್ರಾಂಡ್ಸ್ ಬಂದಿವೆ. ಹೀಗಾಗಿ ಇವುಗಳಲ್ಲಿ ಆರಿಸಿಕೊಳ್ಳುವುದು ತುಸು ಕಷ್ಟವೇ ಸರಿ. ಹೀಗಾಗಿ ಲಿಪ್‌ ಸ್ಟಿಕ್‌ ಕುರಿತ ಎಲ್ಲಾ ಮಾಹಿತಿ ತಿಳಿದಿರುವುದು ಅಗತ್ಯ.

ಮ್ಯಾಟ್ಲಿಪ್ಸ್ಟಿಕ್‌ : ತುಟಿಗಳಿಗೆ ಡ್ರೈ ಲುಕ್ಸ್ ಜೊತೆ ಲಾಂಗ್‌ ಸ್ಟೇಗಾಗಿ ಮ್ಯಾಟ್‌ ಲಿಪ್‌ ಸ್ಟಿಕ್‌ ಉತ್ತಮ ಎನಿಸುತ್ತದೆ. ಆದರೆ ತುಟಿಗಳು ಒಡೆದಿರುವಾಗ ಇದನ್ನು ಬಳಸಬೇಡಿ. ಇದನ್ನು ಬಳಸುವುದರ ದೊಡ್ಡ ಲಾಭ ಎಂದರೆ, ಇದರ ಸುದೀರ್ಘ ಬಾಳಿಕೆ.  ಹೀಗಾಗಿ ದಿನವಿಡೀ ಹೊರಗಿನ ಓಡಾಟ ಇರುವಾಗ ಇದನ್ನು ಬಳಸಿರಿ.

ಕ್ರೀಂ ಲಿಪ್ಸ್ಟಿಕ್‌ : ಇದರ ಲುಕ್‌ ಸಹ ಮ್ಯಾಟ್‌ ನಂತೆಯೇ ಇರುತ್ತದೆ. ಇದನ್ನು ಹಚ್ಚಿಕೊಂಡ ನಂತರ ತುಟಿ ಡ್ರೈ ಎನಿಸುವುದಿಲ್ಲ. ಮ್ಯಾಟ್‌ ಗಿಂತ ಇದರಲ್ಲಿ ಹೆಚ್ಚಿನ ಅಂಶ ಮಾಯಿಶ್ಚರೈಸರ್‌ ಇರುವುದೇ ಇದರ ರಹಸ್ಯ. ಇದು ಹರಡಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಯಾವ ಸಮಾರಂಭದಲ್ಲಿ ಊಟ ತಿಂಡಿ ರಗಳೆ ಅತಿ ಕನಿಷ್ಠವೋ ಅಂಥ ಕಡೆ ಇದನ್ನು ಬಳಸಿರಿ. ಬಳಸುವ ಮೊದಲು ಇದಕ್ಕಾಗಿ ಅಗತ್ಯವಾಗಿ ಔಟ್‌ ಲೈನ್‌ ಮಾಡಿಕೊಳ್ಳಿ.

ಲಿಪ್ಗ್ಲಾಸ್‌ : ತುಟಿಗಳಿಗೆ ಹೆಚ್ಚು ಶೈನ್‌ ಹಾಗೂ ಹೊಳಪು ನೀಡಲು, ಲಿಪ್‌ ಗ್ಲಾಸ್‌ ಬಳಸಲಾಗುತ್ತದೆ. ಲಿಪ್‌ ಸ್ಟಿಕ್‌ ತೀಡಿದ ನಂತರ ಇದನ್ನು ಬಳಸುವುದರಿಂದ, ಅದರ ಕಲರ್‌ ಹೆಚ್ಚಿನ ಹೊಳಪು ಪಡೆಯುತ್ತದೆ.

ಲಿಪ್ಟಿಂಟ್‌ : ಲಿಪ್‌ ಸ್ಟಿಕ್‌ ತೀಡುವ ಮೂಡಿಲ್ಲ ಆದರೆ ಲಿಪ್‌ ಸ್ಟಿಕ್‌ ಹಚ್ಚಿದಂತೆಯೇ ಲುಕ್‌ ಇರಬೇಕು ಎನಿಸಿದರೆ, ಲಿಪ್‌ ಟಿಂಟ್ ಉತ್ತಮ ಆಯ್ಕೆ. ಇದು ಇತ್ತೀಚೆಗೆ ಬಹಳ ಟ್ರೆಂಡಿ ಎನಿಸಿದೆ, ನಿಮ್ಮ ತುಟಿಗಳಿಗೆ ನ್ಯಾಚುರಲ್ ಲುಕ್‌ ನೀಡುತ್ತದೆ.

ಲಿಕ್ವಿಡ್ಲಿಪ್ಸ್ಟಿಕ್‌ : ಇದೂ ಸಹ ದೀರ್ಘ ಬಾಳಿಕೆ ಬರುತ್ತದೆ. ಇದರಿಂದಲೂ ತುಟಿಗೆ ಮ್ಯಾಟ್‌ ಫಿನಿಶ್‌ ನೀಡಬಹುದು. ದಿನವಿಡೀ ಇದು ಲಾಂಗ್‌ ಸ್ಟೇಗೆ ಪೂರಕ.

ಶೀರ್ಲಿಪ್ಸ್ಟಿಕ್‌ : ನ್ಯಾಚುರಲ್ ಲುಕ್‌ ಪಡೆಯಲು ಬಯಸಿದರೆ ಇದು ಬೆಟರ್‌ ಆಯ್ಕೆ. ಇಂಥ ಲಿಪ್‌ ಸ್ಟಿಕ್‌ ತೀಡುವ ಮೊದಲು, ತುಟಿಗಳಿಗೆ ಕನ್ಸೀಲರ್‌ ಬೇಸ್‌ ಹಚ್ಚುವುದು ಲೇಸು. ಆಗ ಮಾತ್ರ ಈ ಶೀರ್‌ ಲಿಪ್‌ ಸ್ಟಿಕ್‌ ಸೂಕ್ತವಾಗಿ ಸೂಟ್‌ ಆಗುತ್ತದೆ.

ಲಿಪ್ಕ್ರೆಯಾನ್‌ : ಕ್ರೆಯಾನ್‌ ಲಿಪ್‌ ಸ್ಟಿಕ್‌ ಸೈಜ್‌ ತುಸು ದೊಡ್ಡದಾಗಿರುತ್ತದೆ. ಬಾಮ್ ತರಹ ಇದನ್ನು ತುಟಿಗಳಿಗೆ ತೀಡಿಕೊಳ್ಳಬಹುದು. ಒಡೆದ ತುಟಿಗಳಿಗೆ ಇದು ವರದಾನ.

ಟಿಂಟೆಡ್ಲಿಪ್ಬಾಮ್ : ಟಿಂಟ್‌ ಲಿಪ್‌ ಸ್ಟಿಕ್‌ ತರಹ ಟಿಂಟೆಡ್‌ ಲಿಪ್‌ ಬಾಮ್ ಹೆಚ್ಚು ಚಾಲ್ತಿಯಲ್ಲಿದೆ. ಇದರಿಂದ ತುಟಿ ಕಂಫರ್ಟ್ ಹೊಂದುತ್ತದೆ. ಇದನ್ನು ಆಫೀಸ್‌, ಕಾಲೇಜ್‌ ಎಲ್ಲಾ ಕಡೆ ಬಳಸಬಹುದು.

ಲಿಪ್ಸ್ಟಿಕ್ನ್ನು ಲಾಂಗ್ಲಾಸ್ಟಿಂಗ್ಮಾಡುವುದು ಹೇಗೆ? : ಬೆಳಗ್ಗೆ ಹೊರಟು ದಿನವಿಡೀ ಹೊರಗೇ ಇರಬೇಕಾದಾಗ ಮ್ಯಾಟ್‌ ಲಿಪ್‌ ಸ್ಟಿಕ್‌ ಬಳಸಿರಿ. ಇದು ಲಾಂಗ್‌ ಸ್ಟೇ ನೀಡುವುದಲ್ಲದೆ, ಬೇಗ ಕೆಡುವುದೂ ಇಲ್ಲ. ಕ್ರೀಂ ಲಿಪ್‌ ಸ್ಟಿಕ್‌ ತೀಡಿದ ನಂತರ, ಟ್ರಾನ್ಸ್ ಲೂಸೆಂಟ್‌ ಪೌಡರ್‌ ಖಂಡಿತಾ ಬಳಸಿಕೊಳ್ಳಿ. ಇದರಿಂದ ಲಿಪ್‌ ಸ್ಟಿಕ್‌ ಬೇಗ ಸೆಟ್‌ ಆಗಿ, ಲಾಂಗ್‌ ಸ್ಟೇ ಬರುತ್ತದೆ. ಲಿಪ್‌ ಸ್ಟಿಕ್‌ ತೀಡಿ ಯಾವುದಾದರೂ ಪಾರ್ಟಿಗೆ ಹೊರಟಿದ್ದರೆ, ಆಯ್ಲಿ ಫುಡ್‌ ಸೇವಿಸಬೇಡಿ. ಇಲ್ಲದಿದ್ದರೆ ಲಿಪ್‌ ಸ್ಟಿಕ್‌ ಲಾಂಗ್‌ ಸ್ಟೇ ಬಾರದು.

ಲಿಪ್‌ ಸ್ಟಿಕ್‌ ತೀಡುವಾಗ ವಹಿಸಬೇಕಾದ ಎಚ್ಚರವೆದರೆ, ಅದು ಎಂದಿಗೂ ಹಲ್ಲಿಗೆ ತಾಕಬಾರದು. ಹಾಗಾದಾಗ ಎಲ್ಲರ ಮುಂದೆ ಎಡವಟ್ಟಾದೀತು. ಲಿಪ್‌ ಸ್ಟಿಕ್‌ ಹಚ್ಚಿಕೊಂಡ ನಂತರ ಟಿಶ್ಯು ಪೇಪರ್‌ ನಿಂದ ತುಟಿಗಳನ್ನು ಒಮ್ಮೆ ಲೇಸಾಗಿ ಒತ್ತಿಕೊಳ್ಳುವುದು ಮೇಲು. ಲಿಪ್‌ ಸ್ಟಿಕ್‌ ತೀಡಿಕೊಳ್ಳುವ ಎಷ್ಟೋ ಹೆಂಗಸರಿಗೆ, ಅದರಿಂದ ತುಟಿ ತುಸು ಕಪ್ಪಾಗುತ್ತದೆ ಎಂಬ ದೂರಿದೆ. ಇದರಿಂದ ಪಾರಾಗಲು, ಲಿಪ್‌ ಸ್ಟಿಕ್‌ ತೀಡುವ ಮೊದಲು, ಲಿಪ್‌ ಕನ್ಸೀಲರ್‌ ಹಚ್ಚಬೇಕು. ಇದರಿಂದ ಕಲರ್‌ ಕಾಂತಿ ಹೆಚ್ಚುತ್ತದೆ. ಲಿಪ್‌ ಸ್ಟಿಕ್ ಜೊತೆ ಲಿಪ್‌ ಲೈನರ್‌ ಸಹ ಬಳಸುತ್ತೀರಾದರೆ, ಇದರಿಂದ ಲಿಪ್‌ ಸ್ಟಿಕ್‌ ಲಾಂಗ್‌ ಸ್ಟೇ ಆಗುತ್ತದೆ. ಇದರಿಂದಾಗಿ ನಿಮ್ಮ ತುಟಿಗಳಿಗೆ ನೀವು ಬೇಕಾದ ಆಕಾರ ತಿದ್ದಿ ತೀಡಬಹುದು.

ಲಿಪ್ಸ್ಟಿಕ್ಗೆ ಸಂಬಂಧಿಸಿದ ಬೇಸಿಕ್ಹ್ಯಾಕ್ಸ್ : ಲಿಪ್‌ ಸ್ಟಿಕ್‌ ಎಂದಿಗೂ ಹಲ್ಲಿಗೆ ತಗುಲಬಾರದು. ಲಿಪ್‌ ಸ್ಟಿಕ್‌ ಹರಡಿಕೊಂಡಿದ್ದೇ ಆದರೆ, ಅದನ್ನು ಕನ್ಸೀರಲರ್‌ ನಿಂದ ಮರೆ ಮಾಡಿ. ಲಿಪ್‌ ಸ್ಟಿಕ್‌ ಅತಿ ಡಾರ್ಕ್‌ಆಯ್ತು ಎನಿಸಿದರೆ, ಕನ್ಸೀಲರ್‌ ನಿಂದ ಅದರ ಶೇಡ್ ತಗ್ಗಿಸಬಹುದು. ತುಟಿಗಳನ್ನು ಹೆಚ್ಚು ಪಾಪ್‌ ಅಪ್‌ ಮಾಡಲು, ಲಿಪ್‌ ಲೈನ್‌ ಮೇಲೆ ಕನ್ಸೀಲರ್‌ ಅಪ್ಲೈ ಮಾಡಿ. ಲಿಪ್‌ ಸ್ಟಿಕ್‌ ಶೇಡ್ ನಂಥ ಯಾವುದೇ ಐ ಶ್ಯಾಡೋ ಮುರಿದಿದ್ದರೆ, ಅದನ್ನು ಟಿಂಟ್‌ ಜೊತೆ ಬೆರೆಸಿ, ಲಿಪ್‌ ಸ್ಟಿಕ್‌ ತರಹವೇ ಬಳಸಿಕೊಳ್ಳಿ.

ಎಂಥ ಸ್ಕಿನ್ಟೋನ್ಗೆ ಯಾವ ಬಗೆಯ ಲಿಪ್ಸ್ಟಿಕ್‌ : ಸ್ಕಿನ್‌ ಟೋನ್‌ ಅನುಸರಿಸಿ ಸದಾ ಲಿಪ್‌ ಸ್ಟಿಕ್‌ ನ ಬಣ್ಣ ಆರಿಸಬೇಕು. ಬಹಳಷ್ಟು ಹೆಂಗಸರಿಗೆ ತಮ್ಮ ಸ್ಕಿನ್‌ ಟೋನಿಗೆ ತಾವು ಬಳಸುತ್ತಿರುವ ಲಿಪ್‌ ಸ್ಟಿಕ್‌ ಸರಿಹೊಂದುತ್ತದೆಯೇ ಇಲ್ಲವೇ ಎಂಬುದೇ ತಿಳಿದಿರುವುದಿಲ್ಲ. ಮಾಹಿತಿ ಇಲ್ಲದೆ ಹೀಗೆ ಮಾಡಿದರೆ, ಲುಕ್ಸ್ ಹಾಳಾಗುತ್ತದೆ. ಹೀಗಾಗಿ ಅದನ್ನು ಸರಿಯಾಗಿ ಹೀಗೆ ಆರಿಸಬೇಕು.

ಗೌರವರ್ಣದವರಿಗೆ ಸದಾ ಬ್ರೈಟ್‌ ಶೇಡ್ಸ್ ಲಿಪ್‌ ಸ್ಟಿಕ್‌ ಹೊಂದುತ್ತದೆ. ಲೈಟ್‌ ಪಿಂಕ್‌, ನ್ಯೂಡ್‌ ಪಿಂಕ್‌, ರೆಡ್‌ ಇತ್ಯಾದಿ. ಸ್ಕಿನ್ ಟೋನ್‌ ಮೀಡಿಯಂ (ಗೋಧಿ ಬಣ್ಣ) ಆಗಿದ್ದರೆ, ಅಂಥವರು ಚೆರ್ರಿ, ಮೀಡಿಯಂ ಬ್ರೌನ್‌, ಮೆರೂನ್‌ ಬಣ್ಣ ಬಳಸಬಹುದು. ಇಂಥ ಶೇಡ್ಸ್ ಇವರಿಗೆ ಚೆನ್ನಾಗಿ ಒಪ್ಪುತ್ತದೆ, ಲುಕ್ಸ್ ಕಾಂಪ್ಲಿಮೆಂಟ್‌ ಆಗುತ್ತದೆ. ಅಗತ್ಯವೆನಿಸಿದರೆ ನ್ಯೂಡ್‌ ಶೇಡ್‌ ಸಹ ಟ್ರೈ ಮಾಡಬಹುದು. ಸ್ಕಿನ್‌ ಟೋನ್‌ ಡಾರ್ಕ್‌ ಆಗಿದ್ದರೆ, ಆಗ ಅಂಥವರು ಡಾರ್ಕ್‌ ರೆಡ್‌, ಡಾರ್ಕ್‌ ಪಿಂಕ್‌, ಡಾರ್ಕ್‌ ಬ್ರೌನ್‌ ಇತ್ಯಾದಿ ಡಾರ್ಕ್‌ ಶೇಡ್ಸ್ ಬಳಸಿಕೊಳ್ಳಿ.

ಲಿಪ್ಸ್ಟಿಕ್ಕೊಳ್ಳುವಾಗ ವಹಿಸಬೇಕಾದ ಎಚ್ಚರಿಕೆಗಳು : ಎಲ್ಲಾ ಹೆಂಗಸರೂ ಈ ಕುರಿತಾದ ಎಚ್ಚರಿಕೆ ವಹಿಸುವುದು ಬಲು ಮುಖ್ಯ. ಅಗತ್ಯ ಮಾಹಿತಿ ಇಲ್ಲದೆ, ಅಗ್ಗದ ಆಸೆಗೆ ಬಿದ್ದು ಅಂಥವನ್ನು ಕೊಂಡರೆ ನಷ್ಟ ತಪ್ಪದು.

ಯಾವ ಬ್ರಾಂಡೇ ಇರಲಿ, ಆ ಲಿಪ್‌ ಸ್ಟಿಕ್‌ ಲಾಂಗ್‌ ಲಾಸ್ಟಿಂಗ್‌ ಬರುತ್ತೆ ತಾನೇ ಎಂದು ವಿಚಾರಿಸಿ. ಲಿಪ್‌ ಸ್ಟಿಕ್‌ ಕಲರ್‌ ನ್ನು ನಿಮ್ಮ ಸ್ಕಿನ್‌ ಟೋನಿಗೆ ತಕ್ಕಂತೆಯೇ ಆರಿಸಿ. ನಿಮ್ಮದು (ಆಯ್ಲಿ, ಡ್ರೈ, ನಾರ್ಮಲ್) ಎಂಥ ಚರ್ಮ ಎಂದು ಗನಿಸಿಕೊಂಡೇ ಲಿಪ್‌ ಸ್ಟಿಕ್ ಆರಿಸಬೇಕು.

ನಿಮ್ಮ ತುಟಿ ಡ್ರೈ ಆಗಿದ್ದರೆ ಕ್ರೀಂ ಲಿಪ್‌ ಸ್ಟಿಕ್‌ ಕೊಳ್ಳಿರಿ. ತುಟಿ ಆಯ್ಲಿ ಆಗಿದ್ದರೆ ಮ್ಯಾಟ್‌ ಲಿಪ್‌ ಸ್ಟಿಕ್‌ ಕೊಳ್ಳಿರಿ. ನಾರ್ಮಲ್ ತುಟಿಗಳಿಗೆ ಯಾವುದಾದರೂ ಆದೀತು.

ನೀವು ಡೀಪ್‌ಶೇಡ್‌ ಲಿಪ್‌ ಸ್ಟಿಕ್‌ ಕೊಂಡರೆ, ಇದರಿಂದ ನಿಮ್ಮ ತುಟಿ ಸಣ್ಣದಾಗಿ ಕಾಣಿಸುತ್ತವೆ. ಡಾರ್ಕ್‌ ಶೇಪ್‌ ಬಳಸಿದರೆ, ಇದರಿಂದ ತುಟಿ ದೊಡ್ಡದಾಗಿ ಕಾಣಿಸುತ್ತದೆ. ಒಮ್ಮೆ ಅಗತ್ಯ ಟ್ರೈ ಮಾಡಿ, ನಂತರ ಅದನ್ನು ಖರೀದಿಸಿ.

ಎಂಥ ಲಿಪ್ಸ್ಟಿಕ್ಖರೀದಿಸಬೇಕು? : ಬಹಳಷ್ಟು ಹೆಂಗಸರಿಗೆ ಗೊತ್ತಿರುವುದು ಒಂದೇ, ತಮ್ಮ ಬಜೆಟ್‌ ಗೆ ತಕ್ಕಂತೆ ಅಗ್ಗದ ಲಿಪ್ ಸ್ಟಿಕ್‌ ಖರೀದಿಸಬೇಕು ಎಂಬುದು. ಹಾಗೆಯೇ ಸದಾ ದುಬಾರಿ, ಬ್ರಾಂಡೆಡ್‌ ಮಾತ್ರ ಕೊಳ್ಳಬೇಕು ಎನ್ನುವವರಿಗೂ ಕೊರತೆ ಇಲ್ಲ. ಹೀಗೆ ನೋಡಿದರೆ ಲಿಪ್‌ ಸ್ಟಿಕ್‌ ಯಾ ಬಗೆಯದೇ ಇರಲಿ, ಅದನ್ನು ಸೂಕ್ತವಾಗಿ ಬಳಸುವ ಟೆಕ್ನಿಕ್‌ ವಿಧಾನ ಗೊತ್ತಿರಬೇಕು. ದುಬಾರಿ ಲಿಪ್‌ ಸ್ಟಿಕ್‌ ಎಂದರೆ ಭಾರದಲ್ಲಿ ಬ್ರಾಂಡ್‌ ಟಾಮ್ ಫ್ಲೇವರ್ಡ್‌, ಮ್ಯಾಕ್‌, ಬಾಬಿ ಬ್ರೌನ್‌, ಫ್ಯಾಂಟಿ ಬ್ಯೂಟಿ, ಹುಡಾ ಬ್ಯೂಟಿ, ಕೇಟ್‌ ಲೆನ್‌ ಡೀ, ಗುಚೀ, ಶಿಲ್ಯಾಂಟ್‌ ಟಿಲ್ ‌ಬರೀ, ಪ್ಯಾಟ್‌ ಮ್ಯಾಕ್‌ ಗ್ರಾಥ್‌, ಡೈರ್‌, ನತಾಶಾ ಮೂಕ್‌…. ಇತ್ಯಾದಿ. ಇದರ ಗುಣಮಟ್ಟ ಉತ್ಕೃಷ್ಟವಾಗಿದ್ದು ಬೆಲೆ 2-3 ಸಾವಿರದಿಂದ ಶುರುವಾಗಿ 8-10 ಸಾವಿರದವರೆಗೂ ಇದೆ. ಕೆಲವಂತೂ ಪಾಕೆಟ್‌ ಫ್ರೆಂಡ್ಲಿ ಬ್ರಾಂಡ್ಸ್ ಆಗಿದ್ದು, 1-2 ಸಾವಿರಗಳಲ್ಲಿ ಲಭ್ಯ ಹಾಗೂ ಮಹಿಳೆಯರ ಮಧ್ಯೆ ಅಷ್ಟೇ ಜನಪ್ರಿಯತೆ ಗಳಿಸಿವೆ! ಲೋರಿಯಲ್, ಮೆಬೆಲಿನ್‌, ಫೀಸಸ್ ಕೆನಡಾ, ಲ್ಯಾಕ್ಮೆ, ಶುಗರ್‌ ಕಾಸ್ಮಿಟಿಕ್‌, ಇನ್‌ ಸೈನಟ್‌, ಪ್ಲಮ್, ಎಲಿ18 ಇತ್ಯಾದಿ.

ಜಿ. ಪಂಕಜಾ 

ಭಾರತೀಯ ಜನಪ್ರಿಯ ಲಿಪ್ಸ್ಟಿಕ್ಸ್

ಲ್ಯಾಕ್ಮೆ ಎನ್‌ ರಿಚ್‌ ಮ್ಯಾಟ್‌ ಲಿಪ್‌ ಸ್ಟಿಕ್‌

ಮೆಬೆಲಿನ್‌ ನ್ಯೂಯಾರ್ಕ್‌ ಲಿಪ್‌ ಗ್ರೇಡೇಶನ್‌

ಕಲರ್‌ ಬಾರ್‌ ವೆಲ್ವೆಟ್‌ ಮ್ಯಾಟ್‌

ಲೋರಿಯಲ್ ಪ್ಯಾರಿಸ್‌ ಕಲರ್‌ ರಿಚ್‌ ಮಾಯಿಸ್ಟ್ ಮ್ಯಾಟ್‌ ಲಿಪ್‌ ಸ್ಟಿಕ್‌

ಮೆಬೆಲಿನ್‌ ನ್ಯೂಯಾರ್ಕ್‌ ಕಲರ್‌ ಸೆನ್ಸೇಶನ್‌ ಲೋಡೆಡ್‌ ಬೋಲ್ಡ್ ಲಿಪ್‌ ಸ್ಟಿಕ್‌

ಶುಗರ್‌ ಕಾಸ್ಮೆಟಿಕ್ಸ್ ನಥಿಂಗ್‌ ಎಲ್ಸ್ ಮ್ಯಾಟರ್‌ ಲಾಂಗ್‌ ವೇರ್‌ ಲಿಪ್‌ ಸ್ಟಿಕ್‌

ಎಲೀ18 ಕಲರ್‌ ಪಾಪ್ಸ್ ಸಿಲ್ಕ್ ಲಿಪ್‌ ಸ್ಟಿಕ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ