ಪ್ರೀತಿ ಪ್ರೇಮದ ಮುಂದೆ ಈ ಪ್ರಪಂಚದ ಹಣಕಾಸು, ಐಷಾರಾಮಗಳೆಲ್ಲ ತೃಣಸಮಾನ ಎಂದು ಎಲ್ಲರೂ ಭಾಷಣ ಕೊಚ್ಚುತ್ತಾರಷ್ಟೆ, ಆದರೆ ವಾಸ್ತವತೆಯಲ್ಲೂ ಇದು ಹಾಗೆ ಇದೆಯೇ…..?
ಪ್ರೇಮ ಎಂಬುದು ಅಮೋಘ, ಅದ್ಭುತ, ಅಮೂಲ್ಯ ಇತ್ಯಾದಿ ಅನೇಕ ವರ್ಣಮಯ ಮಾತುಗಳಿಂದ ಹೊಗಳಲ್ಪಟ್ಟಿದೆ. ಯುಗ ಯುಗಗಳಿಂದ ಹೆಣ್ಣು ತನಗೆ ಒಲಿದ ಗಂಡು ಅಷ್ಟು ಮಾತ್ರ ಪ್ರೀತಿ ಪ್ರೇಮ ತೋರಲಾರನೇ ಎಂದು ಕಾಯುತ್ತಲೇ ಇದ್ದಾಳೆ. ನಂಬಿಸಿ ಕೈ ಕೊಟ್ಟ ಹೆಣ್ಣಿಗಾಗಿ ಗಂಡೂ ಸಹ ಇನ್ನೂ ಹಂಬಲಿಸುತ್ತಾ ದೇವದಾಸನಾಗಿ ಗುಂಡಿಗೆ ಶರಣನಾಗಿದ್ದಾನೆ. ಹೆಣ್ಣುಗಂಡು ಒಲಿದು ಒಂದಾಗಲು, ಸಂಸಾರ ಎಂಬ ಚೌಕಟ್ಟನ್ನು ನಮ್ಮ ಸಮಾಜ ರೂಪಿಸಿದೆ. ಆದರೆ ಮದುವೆಯಾಗಿ 1-2 ವರ್ಷ ಕಳೆಯುವಷ್ಟರಲ್ಲಿ ಇವರಿಬ್ಬರ ಮಧ್ಯೆ ಆ ಗಾಢ ಪ್ರೀತಿ ಪ್ರೇಮ ಉಳಿಯುತ್ತದೆಯೇ? ಹಣಕಾಸಿಗಾಗಿ ದಿನನಿತ್ಯ ಜಗಳ ನಡೆಯುತ್ತಿಲ್ಲವೇ? ಹಾಗಾದರೆ ಪ್ರೇಮಕ್ಕೂ ಹಣಕ್ಕೂ ಹೋಲಿಸಿದಾಗ ಯಾವುದು ಹೆಚ್ಚು? ಗೆಲ್ಲುವುದು ಯಾವುದು?
ಪ್ರೇಮಿಸಿದರಿಗಾಗಿ ಖರ್ಚು ಮಾಡುವುದು (ಪತ್ನಿಯಾದರೆ ಕಟ್ಟಿಕೊಂಡ ಕರ್ಮ, ಪ್ರೇಯಸಿಯಾದರೆ ಖಯಾಲಿ! ಗಂಡ/ಪ್ರಿಯಕರನಿಗೂ ಇದೇ ಪಾಡು!) ತಪ್ಪೇನಲ್ಲ, ಇದು ನಾರ್ಮಲ್ ವಿಷಯ. ಇಂಥ ಸಂಗಾತಿಗಾಗಿ ತನುಮನ ಅರ್ಪಿಸಿ, ದೋಸ್ತಿ, ಸಾಂಗತ್ಯ ನಿಭಾಯಿಸಬೇಕಾಗುತ್ತದೆ.
ಈಗಂತೂ ಎಲ್ಲರೂ ಭ್ರಾತೃತ್ವದ ಬಾಂಧವ್ಯ ನಿಭಾಯಿಸುವುದು ಅಷ್ಟರಲ್ಲೇ ಇದೆ. ತಾಯಿ ತಂದೆಯರಿಂದ ದೂರ ಇರುವವರೇ ಹೆಚ್ಚು ಹಾಗಿರುವಾಗ ನಮ್ಮವರು ಅಂತ ಜೊತೆಗಿರುವವರು ಪ್ರಿಯ/ಪ್ರೇಯಸಿ ಮಾತ್ರ. (ಇದು ಪತಿ/ಪತ್ನಿಯೂ ಆಗಿರಬಹುದು!). ಈ ಸಂಬಂಧ 6 ತಿಂಗಳು, 6 ವರ್ಷಗಳದ್ದೇ ಆಗಿರಬಹುದು, ಲವ್ ಅಫೇರ್ ಮುಂದೆ ಮದುವೆಗೆ ದಾರಿ ಆಗಿರಬಹುದು. ಮದುವೆ ಆಗಲಿ ಬಿಡಲಿ, ಪರಸ್ಪರ ಹೊಣೆಗಾರಿಕೆ (ಆರ್ಥಿಕ/ಸಾಮಾಜಿಕ) ಅಂತೂ ಇದ್ದೇ ಇರುತ್ತದೆ. ಪ್ರೇಮಿಗಾಗಿ ಮಾಡಿದ ಖರ್ಚು ಇಲ್ಲಿ ಬಲು ಮಹತ್ತರವಾದುದು.
ರೋಹಿಣಿ ಧಾರಾಳವಾಗಿ ಕಾಸ್ಮೆಟಿಕ್ಸ್ ಗಾಗಿ ಖರ್ಚು ಮಾಡಿ, ಅಂಗಡಿಯವನಿಂದ ಬಿಲ್ ಕೇಳಿದಳು. ಅದು 2 ಸಾವಿರ ದಾಟಿತ್ತು. ತಕ್ಷಣ ಅವಳು ಬಾಯ್ ಫ್ರೆಂಡ್ ಮೋಹನ್ ಕಡೆ ನೋಡಿದಳು. ಇವಳಿಗಾಗಿ ಅಂಗಡಿ ಹೊರಗೆ ಕಾದಿದ್ದ ಮೋಹನ್, ಅಷ್ಟರಲ್ಲಿ ಅಲ್ಲಿಂದ ಹೊರಡುವ ಸೂಚನೆ ನೀಡಿದ. ಆದರೂ ರೋಹಿಣಿ ತನ್ನ ಪರ್ಸ್ ಬಿಚ್ಚಲಿಲ್ಲ. ಮೋಹನ್ ಹೊರಟೇಬಿಟ್ಟನಲ್ಲ ಎಂದು ಅವಳ ಮೂಡ್ ಕೆಟ್ಟುಹೋಯಿತು.
ಆದರೂ ಅವಳು ಹೊರಬಂದು “ಮೋನಿ, ಈ ಬಿಲ್ ತಗೋ!” ಎಂದಳು. ವಿಧಿಯಿಲ್ಲದೆ ಅವನು ಒಳಬಂದು, “ಓ ನನಗೆ ಕೊಡಲು ಬಂದ್ಯಾ….? ಸರಿ ಪೇ ಮಾಡ್ತೀನಿ ಬಿಡು,” ಎನ್ನುತ್ತಾ ಅವನೇ ಪೇ ಮಾಡಿದ. ಅಂತೂ ಇಬ್ಬರೂ ಅಲ್ಲಿಂದ ಹೊರಗೆ ಹೊರಟಾಗ ಇಬ್ಬರ ಮೂಡ್ ಆಫ್ ಆಗಿತ್ತು. ಕಾಸ್ಮೆಟಿಕ್ಸ್ ನಿನಗೆ, ಅದರ ಬಿಲ್ ಕಟ್ಟೋದು ನಾನಾ ಎಂಬ ಆಕ್ಷೇಪಣೆ ಅವನ ಕಣ್ಣಲ್ಲಿ ಸ್ಪಷ್ಟ ಕಾಣುತ್ತಿತ್ತು.
ಕೇವಲ ಯೂಸ್& ಥ್ರೋ ಆಗಬಾರದು
ಈ ಮೋನಿ ತನಗೆ ಕೇಳಿಸುವಂತೆ ಹಾಗೆ ಗೊಣಗಿದ್ದು ಯಾಕೆ ಅಂತ ರೋಹಿಣಿಗೆ ಕುಟುಕಿತು. ತಾನು ಸಾಮಗ್ರಿ ಕೊಂಡ ನಂತರ, ಜೊತೆಗೆ ಬಾಯ್ ಫ್ರೆಂಡ್ ಇದ್ದಾನೆಂದ ಮೇಲೆ, ಅವನು ತಾನೇ ಅದನ್ನು ಪೇ ಮಾಡಬೇಕು? ಅತ್ತ ಮೋಹನ್ ತನ್ನದೇ ಯೋಚನೆಯಲ್ಲಿ ಮುಳುಗಿದ್ದ. ಕಾಸ್ಮೆಟಿಕ್ಸ್ ಎಂಬುದು ಅವಳ ಪರ್ಸನ್ ವಸ್ತು. ಅದಕ್ಕಾಗಿ ತನ್ನದೇ ಹಣ ಕೊಡಬೇಕಲ್ಲವೇ? ಇದನ್ನೆಲ್ಲ ಭರಿಸಲು ತಾನೇನು ಅವಳ ಗಂಡನೇ, ಪ್ರೇಮಿ ತಾನೇ? ಇಂಥ ಭಾರಿ ಖರ್ಚನ್ನು ತನಗೇಕೆ ವಹಿಸಬೇಕು? ಮಧ್ಯಮ ವರ್ಗದ ಪ್ರೇಮಿಗಳಿಗೆ ಈ ಪಾಡು ಎಂದೂ ಮುಗಿಯದು.
ಈ ಶಾಪಿಂಗ್ ನಂತರ ಇಬ್ಬರೂ ಊಟಕ್ಕೆ ಹೋಟೆಲ್ ಗೆ ಹೊರಡುವುದೆಂದು ಬೆಳಗ್ಗೆಯೇ ತೀರ್ಮಾನ ಆಗಿತ್ತು. ಇಂಥ ಭಾರಿ ಬಿಲ್ ತೆತ್ತ ಮೇಲೆ ಮತ್ತೆ ತಾನು ಬಕ್ರಾ ಆಗಬಾರದು ಎಂದು, ಮೋಹನ್ ತನಗೆ ಅರ್ಜೆಂಟ್ ಕೆಲಸ ಇರುವುದಾಗಿ, ಅವಳನ್ನು ಅವಳ ಮನೆಯ ತಿರುವಿನ ಬಳಿ ಬಿಟ್ಟು ಅವನು ಹಾಗೇ ಹೊರಟುಹೋದ.
ಅಂದಿನಿಂದ ಇಬ್ಬರ ನಡುವೆ ಒಂದು ವಿಚಿತ್ರ ಟೆನ್ಶನ್ ಆರಂಭವಾಯಿತು. ತನ್ನ ಡಿಮ್ಯಾಂಡ್ ಪೂರೈಸಲಿ ಎಂದೇ ರೋಹಿಣಿ ಶಾಪಿಂಗ್ ಗಾಗಿ ಹೊರಡಿಸುತ್ತಾಳಾ ಎಂದು ಅವನು ಹೊರಡುವ ಮೊದಲು 2-2 ಸಲ ಯೋಚಿಸಲಾರಂಭಿಸಿದ. ಅವಳಿಗೆ ತನ್ನಲ್ಲಿ ಪ್ರೀತಿ ಪ್ರೇಮ ಏನೂ ಇಲ್ಲ, ತನ್ನನ್ನು ಬೇಕಾದಂತೆ ಹೀಗೆಲ್ಲ ಬಳಸಿಕೊಂಡು, ಜೂಸ್ ಹೀರಿದ ನಂತರ ಸ್ಟ್ರಾ ಬಿಸಾಡುವ ಹಾಗೆ, ಯೂಸ್ & ಥ್ರೋ ಮಾಡುತ್ತಿಲ್ಲ ತಾನೇ ಎಂದು ತರ್ಕಿಸಲು ಆರಂಭಿಸಿದ. ಆಫ್ಟ್ರಾಲ್ 2 ಸಾವಿರ ಖರ್ಚು ಮಾಡಲು ಇಷ್ಟೆಲ್ಲ ಯೋಚಿಸುವ ಈ ಜಿಪುಣ, ಮುಂದೆ ಮದುವೆ ಆದರೆ ತನ್ನನ್ನು ಚೆನ್ನಾಗಿ ನೋಡಿಕೊಂಡಾನೆಯೇ ಎಂದು ಅವಳು ಚಿಂತಿಸಲಾರಂಭಿಸಿದಳು. ತನ್ನಲ್ಲಿ ಅವನಿಗೆ ನಿಜವಾದ ಪ್ರೀತಿ ಪ್ರೇಮ ಇರುವುದೇ ಆದಲ್ಲಿ, ತಾನು ಮಾಡಿದ ಖರ್ಚಿಗೆಲ್ಲ ಹಣ ಕೊಡಬೇಕು ತಾನೇ? ಕಾಸ್ಮೆಟಿಕ್ಸ್ ಗೆ ಖರ್ಚಾದದ್ದನ್ನೇ ನೆಪ ಮಾಡಿ, ಊಟ ಕೊಡಿಸದ ಅವನನ್ನು ಕ್ಷಮಿಸದಾದಳು.
ಹೀಗೆ ಮಧ್ಯಮ ವರ್ಗದ ಪ್ರೇಮಿಗಳು ಪರಸ್ಪರ ತಮಗಾಗಿ ಖರ್ಚು ಮಾಡುವುದಿಲ್ಲ ಎಂಬ ಕಾರಣಕ್ಕೆ ಸಿಡಿಮಿಡಿಗುಟ್ಟುವುದು ಮಾಮೂಲಿ. ಕೆಲವೊಮ್ಮೆ ಈ ಕೋಪ ಜಗಳಕ್ಕೆ ತಿರುಗಿ, ಮುಂದೆ ಇವರ ಪ್ರೇಮಕ್ಕೇ ಹುಳಿ ಹಿಂಡಿದರೂ ಆಶ್ಚರ್ಯವಿಲ್ಲ.
ಇಂದಿನ ಆಧುನಿಕ ಗರ್ಲ್ ಫ್ರೆಂಡ್ಸ್ ಗೆ ತನ್ನ ಬಾಯ್ ಫ್ರೆಂಡ್ ಇದ್ದಂತೆ ಎಂದರೆ ಉತ್ಪ್ರೇಕ್ಷೆಯಲ್ಲ. ಅವನೊಂದಿಗೆ ಬೈಕ್ ಏರಿ ಮೈಗೆ ಮೈ ಒತ್ತರಿಸಿ ಕುಳಿತರಾಯಿತು, ಶಾಪಿಂಗ್ ನೆಪದಲ್ಲಿ ಅವಳು ಕೇಳಿದ್ದೆಲ್ಲ ಕೊಡಿಸಬೇಕು, ಹೇಳಿದ ಹೋಟೆಲ್ ನಲ್ಲೇ ಲಂಚ್/ಡಿನ್ನರ್ ಆಗಬೇಕು. ಆ ಬಾಯ್ ಫ್ರೆಂಡ್ ನಿರುದ್ಯೋಗಿಯಾಗಿದ್ದರೆ ಅವನಿಗೆ ದೇವರೇ ಗತಿ! ಬಹುತೇಕ 90% ಪ್ರಕರಣಗಳಲ್ಲಿ ಬಾಯ್ ಫ್ರೆಂಡ್ ಖರ್ಚು ಮಾಡುತ್ತಾನೆಯೇ ಹೊರತು ಗರ್ಲ್ ಫ್ರೆಂಡ್ ಅಲ್ಲ. ಜಾಣ ಮರೆವಿನಿಂದಾಗಿ ಅವಳು ಪರ್ಸ್ ಮರೆತು ಬಂದಿರುತ್ತಾಳೆ. ಬಾಯ್ ಫ್ರೆಂಡ್ ಜೊತೆಗಿರುವಾಗ ತಾನು ಪರ್ಸ್ ಹೊರಬೇಕಾದ ಕರ್ಮವೇಕೆ ಎಂಬುದು ಅವಳ ತರ್ಕ.
ಬಡಪಾಯಿ ಪ್ರೇಮಿ ಪಾರ್ಕ್ ಬಳಿ ಕಾಯುತ್ತಿದ್ದರೆ, ಇವಳು ಸ್ಟೈಲಾಗಿ ಆಟೋದಿಂದ ಇಳಿದು, “ಆಟೋದವನಿಗೆ ಎಷ್ಟು ಕೊಡಬೇಕೋ ವಿಚಾರಿಸು ಡಾರ್ಲಿಂಗ್,” ಎಂದರೆ, ಮತ್ತಷ್ಟು ಜಾಣೆಯರು, “ನೀನಿರುವ ಕಡೆಗೆ ಊಬರ್, ಓಲಾ ಬುಕ್ ಮಾಡಿಬಿಡು. ಬೇಬಿ…. ಅಲ್ಲೇ ಬಂದು ಡೈರೆಕ್ಟಾಗಿ ಇಳಿಯುತ್ತೇನೆ!” ಎಂದು ವೈಯಾರವಾಗಿ ಪಲಕುತ್ತಾರೆ.
ಇಬ್ಬರು ಗೆಳತಿಯರು ಮಾತನಾಡುವಾಗಲೂ ತಮ್ಮ ಪ್ರೇಮಿ ಕುರಿತು ಅಧಿಕಾರ ಚಲಾಯಿಸುತ್ತಾರೆ.
“ಯಾಕೆ ರಂಜು…. ಹೇರ್ ಕಟ್, ಪೆಡಿಕ್ಯೂರ್, ಮೆನಿಕ್ಯೂರ್ ಏನೂ ಮಾಡಿಸಿಲ್ಲ?”
“ಹೋಗೇ ದೀಪಾ, ಅದಕ್ಕೆಲ್ಲ ನನ್ನ ಬಳಿ ಹಣ ಎಲ್ಲಿದೆ? ಡೇಟ್ ನೋಡು 26!”
“ನಿನ್ನ ಬಾಯ್ ಫ್ರೆಂಡ್ ರಾಹುಲ್ ಇರೋದ್ಯಾಕೆ?” ಇಂದಿನ ವಸ್ತುಸ್ಥಿತಿ ಯಾವ ಪ್ರೇಮಿ ತನ್ನ ಪ್ರೇಯಸಿಗಾಗಿ ಧಾರಾಳ ಹಣ ಖರ್ಚು ಮಾಡಲಾರನೋ ಅವನು ದಂಡಪಿಂಡವೇ ಸರಿ!
“ಛೇ….ಛೇ! ಆ ಕಾಸಿಲ್ಲದವನ ಜೊತೆ ಇನ್ನೂ ಯಾಕೆ ಬ್ರೇಕ್ ಮಾಡಿಕೊಳ್ಳಲಿಲ್ಲ?”
“ಇಂದು ಹಣ ಬಿಚ್ಚಲಾರದವನು ನಾಳೆ ಕಟ್ಟಿಕೊಂಡ ಮೇಲೆ ಏನೇ ಸಂಭಾಳಿಸುತ್ತಾನೆ?”
ಮತ್ತೆ ಕೆಲವು ಮಜನೂಗಳು ತಾನು ಗರ್ಲ್ ಫ್ರೆಂಡಿಗಾಗಿ ಖರ್ಚು ಮಾಡಿದ್ದನ್ನು ದೊಡ್ಡದಾಗಿ ಕೊಚ್ಚಿಕೊಳ್ಳುವುದೇ ದೊಡ್ಡ ಪ್ರತಿಷ್ಠೆ ಎಂದು ಭಾವಿಸುತ್ತಾರೆ. ಕೆಲವರಂತೂ, ತಾನು ಇಷ್ಟೆಲ್ಲ ಖರ್ಚು ಮಾಡುತ್ತಿರುವುದರಿಂದಲೇ ಅವಳು ತನ್ನನ್ನು ಪ್ರೇಮಿಸುತ್ತಿದ್ದಾಳೋ ಅಥವಾ ತನ್ನನ್ನು ಪ್ರೇಮಿಸುತ್ತಿರುವುದರಿಂದ ತನ್ನೊಂದಿಗೆ ಸುತ್ತಾಡುತ್ತಿದ್ದಾಳೋ ತಿಳಿಯದೆ ಕಸಿವಿಸಿಗೆ ಒಳಗಾಗುತ್ತಾರೆ. ಅವಳನ್ನು ಪರೀಕ್ಷಿಸಲೇಬೇಕೆಂದು ಅವನು ಕೈಹಿಡಿತ ಮಾಡಿದರೆ, ಇವನಿಗೆ ತನ್ನಲ್ಲಿ ಆಸಕ್ತಿ ಕಡಿಮೆ ಆಗಿದೆ ಅಥವಾ ತನ್ನೊಂದಿಗೆ ಬ್ರೇಕ್ ಅಪ್ ಗೆ ಸಿದ್ಧನಾಗಿದ್ದಾನೆ ಎಂದೇ ಭಾವಿಸುತ್ತಾಳೆ.
ಎಲ್ಲಿ ಇಂಥ ಪ್ರೇಮಿಗಳು ಈ ಖರ್ಚಿನ ಬಾಬತ್ತಿನ ಕುರಿತು ಓಪನ್ ಆಗಿ ಡಿಸ್ಕಸ್ ಮಾಡುತ್ತಾರೋ, ಆಗ ಪ್ರೇಮ ಪ್ರೀತಿ ತಾನಾಗಿ ಬಿಟ್ಟುಹೋಗುತ್ತದೆ. ಕಳೆದ 2 ವರ್ಷಗಳಲ್ಲಿ ನಾನು ನಿನಗಾಗಿ ಇಷ್ಟೆಲ್ಲ ಖರ್ಚು ಮಾಡಿದ್ದೇನೆ, ಹಾಗೆ ಮಾಡದೇ ಇದ್ದರೆ ನಾನು ಕರೆದ ಕಡೆ ನೀನು ಬರ್ತಿದ್ದೆಯಾ? ಎಂದು ಅವನು ಅವಳನ್ನು ಕೇಳುವ ಹಾಗೇ ಇಲ್ಲ.
ಆಗ ಅವಳು ಸಿಡಿದು ಬೀಳುವುದರಲ್ಲಿ ಸಂದೇಹವಿಲ್ಲ. ಅಂದ್ರೆ…. ನಾನು ಸ್ವಾರ್ಥಿ, ನಿನ್ನ ಹಣಕ್ಕಾಗಿ ಮಾತ್ರ ಬರ್ತಿದ್ದೀನಾ? ಎಂದು ಜಗಳವಾಡಬಹುದು. ನಾನು ಕೇಳಿದ ಎಷ್ಟೋ ಗಿಫ್ಟ್ ನೀನು ಕೊಡಿಸಲೇ ಇಲ್ಲ, ಹಾಗಿರುವಾಗ ಪ್ರತಿ ಸಲ ನಾನು ನಿನ್ನೊಂದಿಗೆ ಹೇಗೆ ಸುತ್ತಾಟಕ್ಕೆ ಬರಲಿ ಎಂದು ಅವಳು ಕೇಳಲಾದೀತೇ? ಒಟ್ಟಾರೆ ಎರಡೂ ಪಕ್ಷಗಳಲ್ಲಿ ಹಣದ್ದೇ ಪೀಕಲಾಟ. ಆ ಮಾತು ಹೊರಬಂದ ತಕ್ಷಣ ಅಲ್ಲಿಗೇ ಲವ್ ಗಿವ್ ಕಟ್!
ಸರಿ ತಪ್ಪುಗಳ ತುಲನೆ
ಇಂದಿನ ಆಧುನಿಕ ತರುಣರು ತಾವು ಗಳಿಸಿದ್ದನ್ನೆಲ್ಲ ಹೆಚ್ಚಾಗಿ ತಮ್ಮ ಅಲಂಕಾರ, ದುಬಾರಿ ಡ್ರೆಸ್, ಹೈಫೈ ಲೈಫ್ ಸ್ಟೈಲ್, ಗಾಡಿ….. ಇತ್ಯಾದಿಗಳಿಗೆ ಖರ್ಚು ಮಾಡಿ, ಹುಡುಗಿಯರನ್ನು ಇಂಪ್ರೆಸ್ ಮಾಡಲು ಯತ್ನಿಸುತ್ತಾರೆ. ಹೀಗೆ ಬೇಕೆಂದೇ ತಮ್ಮ ಬಳಿ ಹಣ ಇದೆ ಎಂದು ಪ್ರದರ್ಶಿಸಿಕೊಂಡು ಹುಡುಗಿಯರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಮುಂದೆ ಬರಿಗೈ ಆದಾಗ, ಇಂಥವರು ವಾಸ್ತವತೆ ಎದುರಿಸಲು ಹೆದರುತ್ತಾರೆ.
ಇದೇ ತರಹ ಹುಡುಗಿಯರು ಸದಾ ಹೊರಗಿನ ಸುತ್ತಾಟ, ಹೈಫೈ ಲೈಫ್ ಗಾಗಿ ಶ್ರೀಮಂತ ಬಾಯ್ ಫ್ರೆಂಡ್ ನ್ನೇ ಆರಿಸಿಕೊಳ್ಳುತ್ತಾರೆ. ಹಣದ ಬೆಲೆ ಇವರಿಗೆ ಚೆನ್ನಾಗಿ ಗೊತ್ತು. ಎದುರಿಗೆ ಬಾವಿ ಇರುವಾಗ, ಅದರಿಂದ ನೀರು ಎಳೆದುಕೊಳ್ಳುವುದು ಬಿಟ್ಟು, ಕಷ್ಟಪಟ್ಟು ಬಾವಿ ತೋಡುವ ಕರ್ಮವೇಕೆ ಎಂಬುದು ಇವರ ವಾದ.
ಆಧುನಿಕ ತರುಣಿಯರ ವಿಚಾರಧಾರೆ ಇನ್ನೂ 2 ಹೆಜ್ಜೆ ಮುಂದು. ಜೊತೆ ಜೊತೆಯಲ್ಲಿ ವಿಹರಿಸುವಾಗ, ಟೂರ್ ನೆಪದಲ್ಲಿ ಒಟ್ಟಿಗೇ ಮಲಗಿರುವಾಗ, ಪತಿಯ ತರಹ ಪ್ರೇಮಿ ಎಲ್ಲದ್ದಕ್ಕೂ ಖರ್ಚು ಮಾಡಿದರೆ ತಪ್ಪೇನು? ಎರಡೂ ಪಕ್ಷಗಳ ವಾದವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇಬ್ಬರ ಮಾತಲ್ಲೂ ಹುರುಳಿದೆ, ಆದರೆ ತಪ್ಪೂ ಇದೆ. ಏಕೆಂದರೆ ಈ ಎಲ್ಲದರ ದೃಷ್ಟಿಕೋನದಲ್ಲಿ ಪ್ರೇಮ ಕಡಿಮೆ, ವ್ಯವಹಾರ ಜಾಸ್ತಿ ಎಂದಾಗುತ್ತದೆ.
ಇಬ್ಬರಲ್ಲೂ ಪರಸ್ಪರರ ಕುರಿತು ಹೃದಯಪೂರ್ವಕ ಒಲವಿದ್ದರೆ, ಒಬ್ಬರೇ ಖರ್ಚು ನಿರ್ವಹಿಸಲಿ ಎಂದು ಬಯಸುವುದು ತಪ್ಪು. 50-50 ಸರಿ ಅಥವಾ ಅತ್ಯಧಿಕ ಖರ್ಚು ಬೇಡವೇ ಬೇಡ, 200-500 ಓಕೆ. ಹಣ ಎಂಬುದು ಒಡಹುಟ್ಟಿದವರನ್ನೂ ಬೇರೆ ಮಾಡಿಬಿಡುತ್ತದೆ. ಹಾಗಿರುವಾಗ ಇದು ರಕ್ತ ಸಂಬಂಧವಲ್ಲ, ಮನಸ್ಸಿಗೆ ಸಂಬಂಧಿಸಿದ್ದು. ಪ್ರೇಮಿ ಎಲ್ಲದಕ್ಕೂ ಖರ್ಚು ಮಾಡುತ್ತಿರಲಿ ಎಂದು ಪ್ರೇಯಸಿ ಬಯಸುತ್ತಿದ್ದರೆ, ತಕ್ಷಣ ಮದುವೆ ಆಗಿಬಿಡುವುದೇ ಸರಿ. ಆಗ ಇಲ್ಲ ಎನ್ನಲು ಅವನಿಗೂ ಅವಕಾಶ ಸಿಗುತ್ತದೆ.
ಪ್ರೀತಿ…ಪ್ರೇಮ…. ಹಣ!
ಫ್ರೆಂಡ್ ಪ್ರೇಮಿಯೂ ಆಗಿದ್ದರೆ, ಪ್ರೇಯಸಿ ಆಗ ತನ್ನ ವೈಯಕ್ತಿಕ ಖರ್ಚನ್ನು ತಾನೇ ಭರಿಸಬೇಕು. ಅದು ಡ್ರೆಸ್, ಕಾಸ್ಮೆಟಿಕ್ಸ್, ಸ್ಯಾಂಡಲ್ಸ್, ಆಟೋಟ್ಯಾಕ್ಸಿ ಇತ್ಯಾದಿ ಏನೇ ಇರಬಹುದು. ಪ್ರೇಮಿ ತಾನಾಗಿ ಖುಷಿಯಿಂದ ಗಿಫ್ಟ್ ನೀಡಿದ್ದರೆ ಅದು ಬೇರೆ ಮಾತು, ಇವಳು ತಾನಾಗಿ ಒತ್ತಾಯಿಸಿ ಕೇಳಬಾರದಷ್ಟೆ. ಅವಳ ಪ್ರತಿಯೊಂದು ಖರ್ಚನ್ನು ಪ್ರೇಮಿ ಭರಿಸಬೇಕೆಂದಿಲ್ಲ.
ಬಾಯ್ ಫ್ರೆಂಡ್ ಗೂ ಈ ಮಾತು ಅನ್ವಯಿಸುತ್ತದೆ, ಯಾವಾಗಲೋ ಒಮ್ಮೊಮ್ಮೆ ಪ್ರೇಯಸಿಯ ವೈಯಕ್ತಿಕ ಖರ್ಚನ್ನು ತಾನೇ ಭರಿಸುವುದು ಅವನ ಪ್ರೇಮದ ಪ್ರತೀಕ ಎನಿಸುತ್ತದೆ. ಇಬ್ಬರೂ ಹೊರಗಿನ ಓಡಾಟಕ್ಕೆ ಹೊರಟರೆ, ಆಗ ಅಂದಿನ ಪೂರ್ತಿ ಖರ್ಚನ್ನು ಪ್ರೇಮಿ ತಾನೇ ನಿಭಾಯಿಸಬೇಕು. ಆದರೆ ಪ್ರೇಯಸಿ ಸಂಪಾದಿಸುತ್ತಿದ್ದರೆ, ತಾನೂ ನಡುನಡುವೆ ಇಂಥ ಖರ್ಚು ವಹಿಸುವುದು ಲೇಸು. ಹೀಗೆ ಮಾಡುವುದು ಅವಳ ಪ್ರೇಮ ಪ್ರದರ್ಶನದ ಸಂಕೇತ ಎನಿಸುತ್ತದೆ.
ನಾನು ಇಷ್ಟೆಲ್ಲ ಖರ್ಚು ಮಾಡುತ್ತಾ ಇರುವುದರಿಂದಲೇ ಈ ಪ್ರೇಮದ ವ್ಯವಹಾರ ಜೀವಂತವಾಗಿದೆ ಎಂದು ಇಬ್ಬರಿಗೂ ಅನಿಸಬಾರದು, ಆಗ ಪ್ರೇಮಧಾರೆ ತಂತಾನೇ ಬತ್ತಿಹೋದೀತು! ನಿಮ್ಮ ತನುಮನಗಳಲ್ಲಿ ಪ್ರೇಯಸಿಯೇ ತುಂಬಿ ಹೋಗಿರುವಾಗ, ನೀವು ಅವಳಿಗಾಗಿ ಒಂದಿಷ್ಟು ಖರ್ಚು ಮಾಡುವುದರಲ್ಲಿ ಏನೇನೂ ತಪ್ಪಿಲ್ಲ. ಆದರೆ ಇದನ್ನೇ ನೆಪ ಮಾಡಿಕೊಂಡು ಗರ್ಲ್ ಫ್ರೆಂಡ್ ಸದಾ ಬಾಯ್ ಫ್ರೆಂಡ್ ನ್ನು ಎಂಬಂತೆ ಬಳಸಿಕೊಂಡರೆ, ಆಗ ಪ್ರೇಮ ಪಾತಾಳಕ್ಕೆ ಇಳಿದೀತು. ಯಾವ ವ್ಯಕ್ತಿಯ ಮೇಲೇ ಆಗಲಿ, ಅನಗತ್ಯ ಭಾರ ಹೇರಿದಾಗ, ಅವರಿಗೆ ಉಸಿರುಗಟ್ಟಿದಂತಾಗುತ್ತದೆ. ಇದು ಎಂದೂ ನಿಮ್ಮ ಪ್ರೇಮಿಯ ಸ್ಥಿತಿ ಆಗಬಾರದು. ಇಂಥ ಕೆಲವು ಅಂಶಗಳನ್ನು ಇಬ್ಬರೂ ನೆನಪಿಟ್ಟುಕೊಂಡು ನಡೆದರೆ, ಪ್ರೇಮ ಮದುವೆಯಲ್ಲಿ ಸುಖಾಂತ್ಯವಾದೀತು. ಇಲ್ಲದಿದ್ದರೆ ಕೋಪಕ್ಕೆ ಪ್ರೇಮ ತುಂಡಾದೀತು. ಹ್ಯಾಪಿ ವ್ಯಾಲೆಂಟೈನ್ಸ್ ಡೇ!
– ಸ್ಮಿತಾ ಸುಶಾಂತ್