ಈ ಉರಿ ಬೇಸಿಗೆಯಲ್ಲಿ ಎಲ್ಲಕ್ಕಿಂತ ಬ್ಯೂಟಿಫುಲ್ ವಿಭಿನ್ನ ಲುಕ್ಸ್ ಪಡೆಯ ಬಯಸುತ್ತೀರಾ? ಹಾಗಾದರೆ ಈ ಸಲಹೆಗಳನ್ನು ಅಗತ್ಯ ಅನುಸರಿಸಿ…..!
ಬೇಸಿಗೆಯ ಕಾಲದಲ್ಲಿ ಎಷ್ಟೋ ವಿಷಯಗಳಲ್ಲಿ ಬದಲಾವಣೆ ಅನಿವಾರ್ಯ. ಊಟ ತಿಂಡಿ, ಡ್ರೆಸ್, ಹೇರ್ ಸ್ಟೈಲ್ ಗಳಿಂದ ಹಿಡಿದು ಮೇಕಪ್ ಸಹ ಬಹಳ ಬದಲಾಗುತ್ತದೆ. ಬೇಸಿಗೆಯಲ್ಲಿ ಸನ್ ಟ್ಯಾನ್, ಬೆವರು, ಚರ್ಮ ಅಂಟಂಟಾಗಿ ಮೆತ್ತಿಕೊಳ್ಳುವುದು ಇತ್ಯಾದಿ ಅನೇಕ ಸಮಸ್ಯೆಗಳು ಹಿಂಸೆ ಎನಿಸುತ್ತವೆ. ಈ ಕಾರಣದಿಂದಲೇ ಬೇಸಿಗೆ ಮೇಕಪ್ ಎಂಬುದು ಯಾವುದೇ ಸವಾಲಿಗೂ ಕಡಿಮೆ ಇಲ್ಲ ಎನಿಸುತ್ತದೆ. ಯಾವುದೇ ಪಾರ್ಟಿ, ಬಿಸ್ ನೆಸ್ ಮೀಟ್ ಇದ್ದು, ಪ್ರೆಸೆಂಟೆಬಲ್ ಆಗಿ ಹೋಗಬಯಸಿದರೆ ಏನೇನೋ ಬಾಧೆ ತಪ್ಪಿದ್ದಲ್ಲ. ಬೆವರು ಒದ್ದೆಮುದ್ದೆ ಆಗುವುದರಿಂದ, ಬೇಸಿಗೆಯಲ್ಲಿ ಬಹಳ ಹೊತ್ತು ಮೇಕಪ್ ಉಳಿಸಿಕೊಳ್ಳುವುದು ಬಲು ಕಷ್ಟಕರವೇ ಸರಿ. ಹೀಗಾಗಿ ಬೇಸಿಗೆಯಲ್ಲಿ ಬಲು ಎಚ್ಚರಿಕೆಯಿಂದ ಕಾಸ್ಮಿಟಿಕ್ಸ್ ಆರಿಸಬೇಕು.
ಕ್ಲೆನ್ಸಿಂಗ್ ಗಾಗಿ ಆಯಿಲ್ ಫ್ರೀ ಫೇಸ್ ವಾಶ್
ಬೇಸಿಗೆಯಲ್ಲಿ ಬೆವರಿನ ಸಮಸ್ಯೆ ಎಲ್ಲಕ್ಕಿಂತ ಹಿರಿದು. ಇದರಿಂದಾಗಿ ಮೇಕಪ್ ಕೆಡುತ್ತದೆ. ಈ ತೊಂದರೆ ತಪ್ಪಿಸಲು ಆಯಿಲ್ ಫ್ರೀ ಫೇಸ್ ವಾಶ್ ಬಲು ಸಹಕಾರಿ. ಹೀಗಾಗಿ ನೀವು ವಾರಕ್ಕೆ 1-2 ಸಲ ಬೆವರು ಯಾ ಚರ್ಮದಿಂದ ಜಿಡ್ಡು ಹೋಗಲಾಡಿಸಲು, ಮುಲ್ತಾನಿ ಮಿಟ್ಟಿ, ಕಡಲೆಹಿಟ್ಟು, ನಿಂಬೆ, ಬೇವು, ಅರಿಶಿನ, ಚಂದನ, ಮಸೂರ್ ಬೇಳೆ ಇತ್ಯಾದಿ ಬಳಸಿಕೊಳ್ಳಿ.
ಟೋನಿಂಗ್ ಗಾಗಿ ಗುಲಾಬಿ ಜಲ
ಟೋನರ್ ಚರ್ಮದ ಕೊಳಕು ನಿವಾರಿಸಿ, ಸ್ಕಿನ್ ಪೋರ್ಸ್ ನಲ್ಲಿ ಬಿಗಿತ ತರುವ ಕೆಲಸ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಟೋನರ್ ಆಗಿ ಗುಲಾಬಿಜಲ ಬಳಸಿಕೊಳ್ಳಿ. ಇದು ಚರ್ಮದ ಅತ್ಯಧಿಕ ತೈಲಾಂಶವನ್ನು ಫಾಸ್ಟ್ಲಿನಿಯಂತ್ರಿಸುತ್ತದೆ, ಚರ್ಮವನ್ನು ಮಾಯಿಶ್ಚರೈಸ್ ಗೊಳಿಸುತ್ತದೆ. ಬೆವರಿನ ಸಮಸ್ಯೆ, ಚರ್ಮದ ಡ್ರೈನೆಸ್ ಎರಡಕ್ಕೂ ಇದು ಸಹಕಾರಿ.
30SPF ಸನ್ ಸ್ಕ್ರೀನ್ ಸೂರ್ಯನ ಹಾನಿಕಾರಕ UV ಕಿರಣಗಳು ನಮ್ಮ ಚರ್ಮಕ್ಕೆ ಫೈನ್ ಲೈನ್ಸ್, ಅಕಾಲದ ಸುಕ್ಕುಗಳು, ಕಲೆ ಪ್ಯಾಚುಗಳು, ಸನ್ ಟ್ಯಾನ್, ಸನ್ ಬರ್ನ್ ಗಳಿಗೆ ಕಾರಣವಾಗುತ್ತವೆ. ಹೀಗಾಗಿ ಬೇಸಿಗೆಯಲ್ಲಿ ನೀವು ಅನಿವಾರ್ಯವಾಗಿ ಹೊರಗೆ ಹೋಗಬೇಕಿದ್ದರೆ, ಮನೆಯಿಂದ ಹೊರಡುವ 15 ನಿಮಿಷ ಮೊದಲೇ 30 SPFಯುಕ್ತ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ. ಇದನ್ನು ಆರಿಸಿಕೊಳ್ಳುವಾಗ, ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ, ಜೆಲ್ ಬೇಸ್ಡ್ ಯಾ ಆ್ಯಕ್ವಾ ಬೇಸ್ಡ್ ಲೋಶನ್ ಕೊಳ್ಳಲು ಮರೆಯದಿರಿ.
ವಾಟರ್ ಪ್ರೂಫ್ ಪ್ರೈಮರ್
ಮುಖದ ಮೇಲೆ ಮೇಕಪ್ ಪ್ರಾಡಕ್ಟ್ ಬಳಸುವ ಸಮಯದಲ್ಲಿ, ಎಲ್ಲಕ್ಕಿಂತ ಮೊದಲು ಪ್ರೈಮರ್ ನ್ನು ಬಳಸಿಕೊಳ್ಳಬೇಕು. ಇದನ್ನು ಚರ್ಮಕ್ಕೆ ತಕ್ಕಂತೆ ಕ್ರೀಂ, ಜೆಲ್ ಯಾ ಸ್ಪ್ರೇ ಆಗಿ ಆರಿಸಿ ಬಳಸಿರಿ. ಯಾವುದೇ ಮೇಕಪ್ ಗೆ ಪ್ರೈಮರ್ ಬೇಸ್ ಆಗಿ ಕೆಲಸ ಮಾಡುತ್ತದೆ. ಇದು ಸ್ಮೂತ್‌ಫ್ಲಾಲೆಸ್ ಮೇಕಪ್ ಲುಕ್ಸ್ ಪಡೆಯಲು ಸಹಕಾರಿ. ಜೊತೆಗೆ ಇದು ಲಾಂಗ ಲಾಸ್ಟಿಂಗ್ ಮೇಕಪ್ ಗಾಗಿ ಬೇಕೇ ಬೇಕು. ಮಾಯಿಶ್ಚರೈಸರ್ ಹಚ್ಚಿಕೊಂಡ 5 ನಿಮಿಷಗಳ ನಂತರ ಇದನ್ನು ಸವರಬೇಕು. 5 ನಿಮಿಷಗಳ ನಂತರ ಮೇಕಪ್ ಶುರು ಮಾಡಿ. ಬೇಸಿಗೆಯಲ್ಲಿ ವಾಟರ್ ಪ್ರೂಫ್ ಮೇಕಪ್ ಅತ್ಯಗತ್ಯ ಹೌದು.
ಲೈಟ್ ಮಾಯಿಶ್ಚರೈಸರ್ ಬಳಕೆ
ಎಷ್ಟೋ ಹೆಂಗಸರು ಬೇಸಿಗೆಯಲ್ಲಿ ಮಾಯಿಶ್ಚರೈಸರ್ ಬಳಸಲು ಹಿಂಜರಿಯುತ್ತಾರೆ. ಏಕೆಂದರೆ ಇದರಿಂದಲೇ ಚರ್ಮ ಅಂಟಂಟಾಗುತ್ತದೆ ಎಂದು ಭಾವಿಸುತ್ತಾರೆ. ಹೀಗಾಗಿ ಅದನ್ನು ಚಳಿಗಾಲದಲ್ಲಿ ಮಾತ್ರ ಬಳಸಿದರೆ ಸಾಕು ಎಂದು ಭಾವಿಸುತ್ತಾರೆ. ಹಾಗೇನೂ ಇಲ್ಲ. ಬೇಸಿಗೆಯಲ್ಲೂ ಚರ್ಮಕ್ಕೆ ಆರ್ದ್ರತೆಯ ಅಗತ್ಯವಿದೆ. ಹೀಗಾಗಿ ಇದನ್ನು ಬಳಸುವುದು ಲೇಸು. ಇದನ್ನು ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಮಾತ್ರ ಬಳಸಬೇಕು.
ಪೌಡರ್ ಫೌಂಡೇಶನ್
ಬೇಸಿಗೆಯಲ್ಲಿ ಮೇಕಪ್ ಮಾಡುವಾಗ, ಪೌಡರ್ ಫೌಂಡೇಶನ್ ಬಳಸುವುದೇ ಲೇಸು. ಅಸಲಿಗೆ ಇದು ನಿಮ್ಮ ಚರ್ಮದ ಹೆಚ್ಚುವರಿ ಜಿಡ್ಡಿನಂಶ ಹೀರಿಕೊಳ್ಳಲು ಸಹಕಾರಿ. ಇದು ಸ್ಕಿನ್ ಪೋರ್ಸ್ ಗೆ ಅಂಟಿಕೊಂಡು, ನಿಮ್ಮ ಮೇಕಪ್ ದೀರ್ಘಾವಧಿ ಉಳಿಯುವಂತೆ ಕಾಪಾಡುತ್ತದೆ. ಬೇಸಿಗೆಯಲ್ಲಿ ಲಿಕ್ವಿಡ್ ಯಾ ಕ್ರೀಂ ಬೇಸ್ಡ್ ಫೌಂಡೇಶನ್ ಬಳಸದಿರಿ. ಹಾಗೆಯೇ ಶಿಮರ್ ಯಾ ಶೈನಿ ಫೌಂಡೇಶನ್ ಸಹ ಬೇಡ.
ಬೇಸಿಗೆಯಲ್ಲಿ ಹೆವಿ ಫೌಂಡೇಶನ್ ಬೇಡ. ಇದು ಹೆವಿ ಆದರೆ ಮುಖದಲ್ಲಿ ಬೆವರು ಹೆಚ್ಚಾಗ್ತುತದೆ, ಪೋರ್ಸ್ ಕ್ಲೋಸ್ ಆಗಿ, ಸ್ಕಿನ್ ಪ್ಯಾಚಿ ಆಗಿ ಕಾಣಿಸುತ್ತದೆ. ಜೊತೆಗೆ ಆ್ಯಕ್ನೆ, ಪಿಂಪಲ್ಸ್ ಬಾಧೆಯೂ ಇರುತ್ತದೆ. ಬೇಸಿಗೆಯಲ್ಲಿ ನಿಮಗೆ ಫೌಂಡೇಶನ್ ಬೇಡ ಎನಿಸಿದರೆ, ಇದರ ಬದಲಿ ಆ್ಯಲೋವೇರಾ ಜೆಲ್, ಗುಲಾಬಿಜಲ, ಉತ್ತಮ ಗುಣಮಟ್ಟದ BB ಕ್ರೀಂ, BC ಕ್ರೀಂ ಇತ್ಯಾದಿ ಬಳಸಿಕೊಳ್ಳಬಹುದು. ಇದ್ಯಾವುದೂ ಬೇಡ ಎನಿಸಿದರೆ ಚರ್ಮಕ್ಕೆ ಪ್ರೈಮರ್ ಹಚ್ಚಿ ಹಾಗೇ ಬಿಟ್ಟುಬಿಡಿ. ಲೂಸ್ ಪೌಡರ್ ಬೇಸಿಗೆಯಲ್ಲಿ ನಾರ್ಮಲ್ ಸ್ಕಿನ್ ಇರುವವರಿಗೂ ಅದು ಆಯ್ಲಿ ಸ್ಕಿನ್ ಆಗಿಹೋಗುತ್ತದೆ. ಹೀಗಾದಾಗ ಮೇಕಪ್ ಉಳಿಸಿಕೊಂಡು, ಫ್ರೆಶ್ ಆಗಿರುವಂತೆ ತೋರಿಸಿಕೊಳ್ಳುವುದು ಕಷ್ಟ ಸಾಧ್ಯವೇ ಸರಿ. ಈ ಸಮಸ್ಯೆಯ ನಿವಾರಣೆಗೆ ಲೂಸ್ ಸೆಟ್ಟಿಂಗ್ ಪೌಡರ್ ಒಂದೇ ನಿವಾರಣೆ. ಮೇಕಪ್ ಬೇಸ್ ಆದ ನಂತರ, ಲೂಸ್ ಪೌಡರ್ ನಿಂದ ಮುಖವನ್ನು ಲೈಟ್ ಆಗಿ ಬ್ರಶ್ ಮಾಡುವುದರಿಂದ, ಲಾಂಗ್ ಲಾಸ್ಟಿಂಗ್‌ಮ್ಯಾಟ್ ಮೇಕಪ್ ಸಿಗಲು ನೆರವಾಗುತ್ತದೆ.
ಆಯಿಲ್ ಬ್ಲಾಟಿಂಗ್ ಶೀಟ್ಸ್
ಬೆವರಿನಿಂದಾಗಿ ಮೈಯೆಲ್ಲ ಅಂಟಂಟಾಗುವುದರಿಂದ ಹೆಂಗಸರು ಬೇಸಿಗೆಯಲ್ಲಿ ಸಿಡುಕುವುದು ಹೆಚ್ಚು. ಹೀಗಾಗಿ ಮೇಕಪ್ ನ್ನು ಆಯ್ಲಿ ಆಗುವುದರಿಂದ ಕಾಪಾಡಬೇಕೇ? ಬ್ಲಾಟಿಂಗ್ ಶೀಟ್ಸ್ ಉಪಯೋಗಿಸಿಕೊಳ್ಳಿ. ಇದು ಟಿಶ್ಯು ಪೇಪರ್ ತರಹ ಇದ್ದು, ತ್ವಚೆಯ ಎಕ್ಸ್ ಟ್ರಾ ಜಿಡ್ಡನ್ನು ಹೀರಿಕೊಳ್ಳಬಲ್ಲದು. ಇದರಿಂದ ಚರ್ಮದ ಬೆವರು, ಜಿಡ್ಡನ್ನು ತೊಲಗಿಸಬಹುದು. ಇದನ್ನು ಸದಾ ನಿಮ್ಮ ಹ್ಯಾಂಡ್ ಬ್ಯಾಗಿನಲ್ಲಿರಿಸಿ ಹೊರಗೆ ಓಡಾಡಿ. ಯಾವಾಗ ಮುಖದಲ್ಲಿ ಬೆವರು, ಜಿಡ್ಡು ಜಿನುಗುತ್ತಿದೆ ಎನಿಸುತ್ತದೋ, ಆಗ ಇದನ್ನು ಬಳಸಿಕೊಂಡು, ಮುಖ ನೀಟ್ ಮಾಡಿಕೊಳ್ಳಬಹುದು. ಇದರಿಂದ ಮೇಕಪ್ ದೀರ್ಘಾವಧಿವರೆಗೂ ಉಳಿಯುತ್ತದೆ.
ಫಿನಿಶಿಂಗ್ ಸ್ಪ್ರೇ
ಇದು ಮೇಕಪ್ ನ ಲಾಸ್ಟ್ ಟಚ್. ಸೆಟ್ಟಿಂಗ್ ಸ್ಪ್ರೇ ಎಂದೂ ಕರೆಯಲ್ಪಡುವ ಇದು, ಮೇಕಪ್ ನ್ನು ಕೊನೆಯಲ್ಲಿ ನೀಟಾಗಿ ಸೆಟ್ ಮಾಡುತ್ತದೆ. ಹೀಗಾಗಿ ಅದು ದೀರ್ಘಾವಧಿ ಉಳಿಯುತ್ತದೆ. ಮೇಕಪ್ ಪೂರ್ತಿ ಆದಾಗ, ಈ ಸ್ಪ್ರೇಯಿಂದ ಫೈನ್ ಟಚ್ ಅಪ್ ನೀಡಿ, ಸೆಟ್ ಮಾಡಿ.
ಬೇಸಿಗೆಯಲ್ಲಿ ಐ ಮೇಕಪ್
ಸಮ್ಮರ್ ನಲ್ಲಿ ಹೆವಿ ಐ ಮೇಕಪ್ ಬೇಡ, ತೀರಾ ಅಗತ್ಯ ಎನಿಸಿದಾಗ ಮಾತ್ರ ಮಾಡಬೇಕು. ಸಾಧ್ಯವಾದಷ್ಟೂ ವಾಟರ್ ಪ್ರೂಫ್ ಸ್ಮಜ್ ಪ್ರೂಫ್ ಪ್ರಾಡಕ್ಟ್ಸನ್ನೇ ಬಳಸಿಕೊಳ್ಳಿ. ಬೇಸಿಗೆಯಲ್ಲಿ ಐ ಮೇಕಪ್ ಗಾಗಿ ಕೇವಲ ಕಾಡಿಗೆ, ಮಸ್ಕರಾ, ಲೈನರ್ ಹಚ್ಚಿಕೊಳ್ಳುವುದೇ ಸಾಕು. ಈ ಮೂವರನ್ನೂ ಒಟ್ಟೊಟ್ಟಿಗೆ ಹಚ್ಚಿಕೊಳ್ಳುವ ಬದಲು, ಯಾವುದಾದರೂ ಒಂದನ್ನೇ ಬಳಸುವುದು ಲೇಸು.
ಐ ಮೇಕಪ್ ಗಾಗಿ, ಐ ಶ್ಯಾಡೋಗೋಸ್ಕರ ಲೈಟ್‌ನ್ಯೂಟ್ರಲ್ ಶೇಡ್ಸ್ ನ್ನಷ್ಟೇ ಬಳಸಿರಿ.
ಬೇಸಿಗೆಯಲ್ಲಿ ಬ್ಲ್ಯಾಕ್ ಬದಲು ಸಾಫ್ಟ್ ಬ್ರೌನ್ ಮಸ್ಕರಾ ಬಳಸಿರಿ. ಟ್ರಾನ್ಸ್ ಪರೆಂಟ್ ಮಸ್ಕರಾ ಇದಕ್ಕಿಂತ ಬೆಟರ್ ಆಯ್ಕೆ.
ಕಾಡಿಗೆ ತೀಡುವ ಮೊದಲು, ಕಂಗಳ ಕೆಳಗಿನ ಭಾಗವನ್ನು ಕಾಂಪ್ಯಾಕ್ಟ್ ಪೌಡರ್ ನಿಂದ ನೀಟಾಗಿ ಸೆಟ್ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಶಿಮರ್ ಬಳಸದಿರುವುದೇ ಒಳ್ಳೆಯದು.
ಕಂಗಳ ಬಳಿ ಹೆಚ್ಚು ಪೌಡರ್ ಬೇಡ. ಕಂಗಳ ವಾಟರ್ ಲೈನ್ ಏರಿಯಾದಲ್ಲಿ ಲಿಕ್ವಿಡ್ ಐ ಲೈನರ್‌ಬಳಸಬೇಡಿ.
ಈವ್ನಿಂಗ್ ಪಾರ್ಟಿಗೆ ಹೊರಟಿದ್ದೀರಾ? ಐ ಮೇಕಪ್ ಗಾಗಿ ವಾರ್ಮ್ ಚಾಕಲೇಟ್, ಸ್ಲೇಟಿ ಗ್ರೇ, ನೇವಿ ಬ್ಲೂ ಶೇಡ್ಸ್ ನ್ನು ಆರಿಸಿ. ಇದರಿಂದ ನಿಮಗೆ ಕೂಲ್ ಲುಕ್ಸ್ ಸಿಗುತ್ತದೆ.
ತುಟಿಗಳ ಮೇಕಪ್
ಬೇಸಿಗೆಯಲ್ಲಿ ಹೆವಿ ಲಿಪ್ ಮೇಕಪ್ ಬೇಡ. ಡೇಲಿ ಮೇಕಪ್ ಗಾಗಿ, ಕೇವಲ ಲಿಪ್ ಗ್ಲಾಸ್ ಸಾಕು. ಬೇಸಿಗೆಯಲ್ಲಿ ಮ್ಯಾಟ್ ಬದಲಿಗೆ ಕ್ರೀಮೀ ಲಿಪ್ ಸ್ಟಿಕ್ ಬಹಳ ಹೊತ್ತು ಉಳಿಯುತ್ತದೆ. ಯಾವುದೇ ಲಿಪ್ ಸ್ಟಿಕ್ ಬಳಕೆಗೆ ಮೊದಲು, ನಿಮ್ಮ ತುಟಿಗಳಿಗೆ ಲಿಪ್ ಬಾಮ್ ಹಚ್ಚಿರಿ. ಲೈಟ್ ಶೇಡ್ ಲಿಪ್ ಸ್ಟಿಕ್ ನ್ನು ಹೆಚ್ಚಾಗಿ ಬಳಸಿರಿ. ಲಿಪ್ ಲೈನರ್ ಬಳಸಲು ಮರೆಯದಿರಿ. ಪಿಂಕ್, ಪೀಚ್, ಮ್ಯಾಟ್ ಮುಂತಾದ ಲೈಟ್ ಶೇಡೆಡ್ ಲಿಪ್ ಸ್ಟಿಕ್ಸ್ ನಿಮಗೆ ಹೆಚ್ಚು ಯಂಗ್‌ಫ್ರೆಶ್ ಲುಕ್ಸ್ ಒದಗಿಸುತ್ತಿ.
ಮೇಕಪ್ ದೀರ್ಘಾವಧಿ ಉಳಿಯಬೇಕೇ?
ಇದಕ್ಕಾಗಿ ಮುಖ್ಯವಾಗಿ ವಾಟರ್ ಪ್ರೂಫ್, ಸ್ಮಜ್ ಪ್ರೂಫ್ ಮೇಕಪ್ ಪ್ರಾಡಕ್ಟ್ಸನ್ನೇ ಬಳಸಿಕೊಳ್ಳಿ. ಇದರಿಂದ ನಿಮ್ಮ ಮೇಕಪ್ ಬೇಗ ಕೆಡುವುದಿಲ್ಲ. ಬ್ರೈಟ್ ಬದಲಾಗಿ ಲೈಟ್ ಮೇಕಪ್ ಗೆ ಆದ್ಯತೆ ಕೊಡಿ. ಅದು ತುಸು ಅಲ್ಲಲ್ಲಿ ಹರಡಿದರೂ ಖಂಡಿತಾ ಕೆಟ್ಟದಾಗಿ ಕಾಣುವುದಿಲ್ಲ. ಚರ್ಮವನ್ನು ಸದಾ ತಾಜಾ, ಹೈಡ್ರೇಟೆಡ್ ಆಗಿರಿಸಿಕೊಳ್ಳಲು ಫೇಸ್ ಮಿಸ್ಟ್ ಸ್ಪ್ರೇ ಬಳಸಿರಿ. ನೀವು ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡಿದರೆ, ನಡುನಡುವೆ ಫೇಸ್ ಮಿಸ್ಟ್ ಸ್ಪ್ರೇ ಬಳಸಿ, ಫ್ರೆಶ್ ನೆಸ್ ತಂದುಕೊಳ್ಳಿ. ನಿಮ್ಮ ಬ್ಯಾಗ್ ನಲ್ಲಿ ಬ್ಲಾಟಿಂಗ್ ಶೀಟ್ಸ್ ಸದಾ ಇರಲಿ. ಇದು ಬೆವರನ್ನು ಕಂಟ್ರೋಲ್ ಮಾಡುತ್ತದೆ.
– ಪ್ರತಿನಿಧಿ.





