ಮೈಸೂರು ಅರಮನೆ ಮುಂಭಾಗವೇ ಹಿಲೀಯಂ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಅನುಮಾನ ಶುರುವಾಗಿದೆ. ಏಕಾಏಕಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಹಲವು ಆಯಾಮಗಳಿಂದ ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಅದು ಹೀಲಿಯಂ ಗ್ಯಾಸ್​ ಸಿಲಿಂಡರ್​ ಅಂತಿದ್ರೂ ಕೂಡ ಅದರ ಹಿಂದಿರೋ ನಿಗೂಢತೆಯನ್ನ ಬೆನ್ನಟ್ಟಿದ್ದಾರೆ.

ಅರಮನೆಯ ಗೈಡ್​ ಕೊಟ್ರೇಶ್ ಹೇಳಿಕೆ ಕೊಟ್ಟಿರುವ ಪ್ರಕಾರ ಆ ಸ್ಥಳದಲ್ಲಿ ಯಾರೂ ಕೂಡ ಬಲೂನು ಮಾರಾಟ ಮಾಡುತ್ತಿರಲಿಲ್ವಂತೆ. ನಿನ್ನೆಯೂ ಕೂಡ ಮೃತ ಸಲೀಂ ಅಲ್ಲಿ ನಿಂತಿರಲಿಲ್ವಂತೆ. ಏಕಾಏಕಿ ಅರಮನೆ ಮುಂಭಾಗಕ್ಕೆ ಸಲೀಂ ಬಂದ ಕೆಲ ಕ್ಷಣಗಳಲ್ಲೇ ಗ್ಯಾಸ್ ಸ್ಪೋಟಗೊಂಡಿದೆ. ಹಾಗಾದ್ರೆ, ಸ್ಪೋಟ ಆಕಸ್ಮಿಕನಾ ಅಥವಾ ಉದ್ದೇಶ ಪೂರ್ವಕನಾ..? ಅನ್ನೋ ಆಯಾಮದಲ್ಲೂ ಪೊಲೀಸರು ತನಿಖೆ ಶುರುಮಾಡಿದ್ದಾರೆ.

ಅರಮನೆ ಸುತ್ತಮುತ್ತ ಯಾವತ್ತೂ ಕಾಣಿಸದವನು ನಿನ್ನೆ ಹೇಗೆ ಏಕಾಏಕಿ ಬಂದ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಈ ಹತ್ತುಹಲವು ಪ್ರಶ್ನೆಗಳ ಮೇಲೆ ಹಲವು ಅನುಮಾನ ಹುಟ್ಟಿಕೊಂಡಿವೆ. ಹೀಗಾಗಿ ಸಲೀಂ ಹಿನ್ನೆಲೆ ಕುರಿತು ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು ತನಿಖೆ ತೀವ್ರಗೊಳಿಸಿದ್ದಾರೆ.

ಸದ್ಯಕ್ಕೆ ಒಂದು ವಾರದ ಹಿಂದಷ್ಟೇ ಸಲೀಂ ಮೈಸೂರಿಗೆ ಬಂದಿದ್ದ ಅಂತಾ ಹೇಳಲಾಗ್ತಿದ್ದು, ಬಂದಿದ್ದು ಯಾವತ್ತು..? ಮತ್ತು ಎಲ್ಲಿ ಮನೆ ಮಾಡಿಕೊಂಡಿದ್ದ..? ಆತನ ಜೊತೆ ಮತ್ಯಾರೆಲ್ಲಾ ಬಂದಿದ್ದರು..? ನಿರಂತರವಾಗಿ ಬಲೂನು ಮಾರೋ ಕಸುಬನ್ನೇ ಮಾಡ್ತಿದ್ದನಾ..? ಮೈಸೂರಿಗೆ ಬಂದು ಕೇವಲ ಒಂದು ವಾರ ಆಗಿತ್ತಾ ಅಥವಾ ವರ್ಷದ ಹಿಂದೆನೇ ಬಂದು ನೆಲೆಸಿದ್ದನಾ..? ಇವೆಲ್ಲಾ ಪ್ರಶ್ನೆಗಳ ಮೇಲೆ ಅನುಮಾನಗಳ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ