ಈ ಹಬ್ಬದಲ್ಲಿ ನೀವು ಸ್ನೇಹಿತರು, ಸಂಗಾತಿ ಅಥವಾ ಸಂಬಂಧಿಕರಿಗೆ ಉಡುಗೊರೆಗಳನ್ನು ನೀಡಲು ಬಯಸಿದರೆ, ಇವು ಅತ್ಯುತ್ತಮ ಆಯ್ಕೆಗಳಾಗಿವೆ……
ಯಾರಿಗಾದರೂ ಉಡುಗೊರೆಯನ್ನು ನೀಡುವುದರಿಂದ ನಿಮ್ಮ ಮತ್ತು ಅವರ ನಡುವೆ ಉತ್ತಮವಾದ ಬಾಂಧ್ಯವವನ್ನು ಸೃಷ್ಟಿಸುತ್ತದೆ. ಇದು ಕೊಡುವವರ ಮತ್ತು ತೆಗೆದುಕೊಳ್ಳುವವರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹೊಸ ಸಂಬಂಧದ ಆರಂಭ ಅಥವಾ ಹಳೆಯ ಸಂಬಂಧವನ್ನು ಬಲಿಷ್ಠಗೊಳಿಸಲು ಉಡುಗೊರೆ ಸಾಮಾನ್ಯವಾಗಿ ಪ್ರೀತಿ, ಕೃತಜ್ಞತೆ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ.
ನಾವು ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತೇವೆ. ಏಕೆಂದರೆ, ಇತರ ವ್ಯಕ್ತಿಯ ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಕೆಲವು ವಿಶೇಷ ಉಡುಗೊರೆಗಳ ಬಗ್ಗೆ ನೀವು ಯೋಚಿಸಬಹುದು.
ಮದುವೆ ನಿಶ್ಚಯವಾಗಿದ್ದರೆ, ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ಉಡುಗೊರೆಯನ್ನು ಹೇಗೆ ಆರಿಸುವುದು ಎಂಬ ಪ್ರಶ್ನೆ ಪುರುಷರ ಮನಸ್ಸಿನಲ್ಲಿ ಹೆಚ್ಚಾಗಿ ಉದ್ಭವಿಸುತ್ತದೆ. ಅಂದರೆ, ಹುಡುಗಿಯರು ಏನು ಇಷ್ಟಪಡುತ್ತಾರೆ? ಎಂಬುದರ ಕುರಿತು ಯೋಚಿಸುವುದು ಬಹಳ ಮುಖ್ಯ.
ಹಬ್ಬ ಹರಿದಿನಗಳಂದು ನಿಮ್ಮ ಭಾವಿ ಜೀವನ ಸಂಗಾತಿ, ಗೆಳತಿ, ದೂರದಲ್ಲಿ ನೆಲೆಸಿರುವ ಅಕ್ಕ ತಂಗಿಯರಿಗೆ ಯಾವ ರೀತಿಯ ಉಡುಗೊರೆಗಳನ್ನು ನೀಡಬಹುದು ಎಂಬುದರ ಕುರಿತು ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ :

ಪರ್ಸ್ : ಹುಡುಗಿಯರು ವಿವಿಧ ರೀತಿಯ ಪರ್ಸ್ ಅಥವಾ ಬ್ಯಾಗ್ ಗಳನ್ನು ಬಹಳ ಇಷ್ಟಪಡುತ್ತಾರೆ. ಹೀಗಿರುವಾಗ, ಅವರಿಗೆ ಸುಂದರವಾದ ಬ್ಯಾಗ್ ಅಥವಾ ಪರ್ಸ್ ನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಸ್ಟೈಲಿಶ್ ಬ್ಯಾಗ್ ಗಳು ಮಾರುಕಟ್ಟೆಯಲ್ಲಿ ಮತ್ತು ಆನ್ ಲೈನ್ ನಲ್ಲಿ ಲಭ್ಯವಿರುತ್ತವೆ. ಟ್ರೆಂಡಿ ಮತ್ತು ಫ್ಯಾಷನೆಬಲ್ ಆಗಿ ಕಾಣುವ ಜೊತೆಗೆ ಉಪಯುಕ್ತವಾದ ಪರ್ಸ್ ಆಯ್ಕೆ ಮಾಡಿ.
ರೂಮ್ ಡಿಫ್ಯೂಸರ್ : ದಿನವಿಡೀ ಕೆಲಸ ಮುಗಿಸಿ, ನಿಮ್ಮ ಕೋಣೆಗೆ ಪ್ರವೇಶಿಸಿದಾಗ, ಆಹ್ಲಾದಕರವಾದ ಪರಿಮಳ ನಿಮ್ಮ ಮೂಗಿಗೆ ಬಡಿದರೆ, ಎಂತಹವರಿಗೂ ದಣಿವು ದೂರವೆನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಈ ಭಾವನೆಯನ್ನು ಪಡೆಯಲು, ನಿಮ್ಮ ಸಂಗಾತಿಗೆ ನೀವು ಡಿಫ್ಯೂಸರ್ ನ್ನು ಉಡುಗೊರೆಯಾಗಿ ನೀಡಬಹುದು. ಆಕೆಗೆ ಇಷ್ಟವಾಗುವ ಸುಗಂಧದ ಎಸೆನ್ಶಿಯ್ ಆಯಿಲ್ ಅಥವಾ ಡಿಫ್ಯೂಸರ್ ಸಂಯೋಜನೆ ಒಂದು ಉತ್ತಮ ಉಡುಗೊರೆ ಆಗಬಹುದು. ಇದು ಆ್ಯರೋಮಾ ಥೆರಪಿಯಂಥ ಕೆಲಸ ಮಾಡುವ ಜೊತೆಗೆ, ಆಯಾಸದ ಮನಸ್ಥಿತಿಯನ್ನು ದೂರ ಮಾಡುತ್ತದೆ.
ಕಸ್ಟಮೈಸ್ಡ್ ಉಂಗುರ : ನಿಮ್ಮ ಗರ್ಲ್ ಫ್ರೆಂಡ್ ಗೆ ಏನು ಉಡುಗೊರೆ ಕೊಡಬಹುದು ಎಂದು ಯೋಚಿಸುವುದಾದರೆ, ಕಸ್ಟಮೈಸ್ಡ್ ರಿಂಗ್ ಒಂದು ಉತ್ತಮ ಆಯ್ಕೆ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ಮಾರ್ಗವಾಗಿದೆ. ರಿಂಗ್ ಮೇಲೆ ನಿಮ್ಮ ಸಂಗಾತಿಯ ಹೆಸರಿನ ಜೊತೆಗೆ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಬರೆಯುವ ಮೂಲಕ ನಿಮ್ಮ ಸಂಗಾತಿಯನ್ನು ಅಚ್ಚರಿಗೊಳಿಸಬಹುದು. ಇದನ್ನು ನಿಮ್ಮ ಗೆಳತಿಗೆ ನೀಡುವ ಮೂಲಕ, ಆಕೆಯ ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಬಹುದು.

ಆಭರಣಗಳ ಪೆಟ್ಟಿಗೆ : ಅನೇಕ ಹುಡುಗಿಯರು ಆಭರಣಗಳನ್ನು ಇಷ್ಟಪಡುತ್ತಾರೆ. ಎಲ್ಲಾ ಹುಡುಗಿಯರ ಬಳಿ ಅನೇಕ ಆಭರಣಗಳು ಇರುತ್ತವೆ. ಹೀಗಿರುವಾಗ, ನಿಮ್ಮ ಸಂಗಾತಿ ಹಲವಾರು ವಿನ್ಯಾಸದ ಆಭರಣಗಳನ್ನು ಇಟ್ಟುಕೊಂಡಿದ್ದರೆ, ಅನ್ನುವ ವ್ಯವಸ್ಥಿತವಾಗಿ ಇರಿಸಲು ಆಭರಣದ ಪೆಟ್ಟಿಗೆ ಉತ್ತಮ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮತ್ತು ಆನ್ ಲೈನ್ ನಲ್ಲಿ ಅನೇಕ ರೀತಿಯ ವಿನ್ಯಾಸದ ಆಭರಣಗಳ ಪೆಟ್ಟಿಗೆಗಳು ಲಭ್ಯವಿವೆ.
ಫ್ಯಾಷನೆಬಲ್ ಆಭರಣಗಳು : ಕೆಲವು ಹುಡುಗಿಯರಿಗೆ ಫ್ಯಾಷನೆಬಲ್ ಜ್ಯೂವೆಲರಿ ಸದಾ ಅಚ್ಚುಮೆಚ್ಚು. ಅಂತಹವರು ಅನೇಕ ಬಗೆಯ, ನಾನಾ ವಿನ್ಯಾಸದ ಆಭರಗಣಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ನಿಮ್ಮ ಗೆಳತಿ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ, ನೀವು ಅವಳಿಗೆ ಫ್ಯಾಷನೆಬಲ್ ಆಭರಣಗಳು, ಚೇನ್, ಬ್ರೇಸ್ ಲೆಟ್, ಉಂಗುರ ಅಥವಾ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಬಹುದು. ಇವನ್ನು ನೋಡಿ ಅವಳು ನಿಮ್ಮನ್ನು ಇನ್ನಷ್ಟು ಪ್ರೀತಿಸಲು ಪ್ರಾರಂಭಿಸುತ್ತಾಳೆ.
ಪರ್ಸನಲೈಜ್ಡ್ ಫೋಟೋ ಫ್ರೇಮ್ : ಈ ದಿನಗಳಲ್ಲಿ ಇದು ತುಂಬಾ ಟ್ರೆಂಡ್ ಆಗಿದೆ. ಇದರಲ್ಲಿ ನೀವು ನಿಮ್ಮ ಸಂಗಾತಿಯ ಉತ್ತಮ ಚಿತ್ರವನ್ನು ಹಾಕಬಹುದು. ಅತ್ಯಂತ ಮುಖ್ಯವಾದ ವಿಷಯ ಏನೆಂದರೆ, ನೀವು ಎಲ್ಲಿ ವಾಸಿಸುತ್ತೀರೋ ಅಲ್ಲಿ ನೀವು ಅದನ್ನು ಆನ್ ಲೈನ್ ನಲ್ಲಿ ಕಸ್ಟಮೈಸ್ ಮಾಡಬಹುದು. ಅದನ್ನು ಬಹಳ ಸರಳವಾಗಿ ಮತ್ತು ಕಸ್ಟಮೈಸ್ ಮಾಡಿದ ನಂತರ ಅದು ನಿಮ್ಮ ಗೆಳತಿಯನ್ನು ತಲುಪುತ್ತದೆ. ಆಕೆಗೆ ಪರ್ಸನಲೈಜ್ಡ್ ಫೋಟೋ ಫ್ರೇಮ್ ನೀಡುವ ಮೂಲಕ ಆಕೆಯನ್ನು ನಿಮಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಬಹುದು.
3D ಲ್ಯಾಂಪ್ : ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಲು 3D ಲ್ಯಾಂಪ್ ಉತ್ತಮ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಹಲವು ವಿನ್ಯಾಸದ ಲ್ಯಾಂಪ್ ಗಳು ಲಭ್ಯವಾಗುತ್ತವೆ. ಈ ಲ್ಯಾಂಪ್ ಮೂಲಕ ನೀವು ದೂರವಿದ್ದಾಗಲೂ, ಅವರನ್ನು ಸಮೀಪವಿರುವಂತೆ ನೋಡಬಹುದು. ನಿಮಗೆ ಇದು ರೊಮ್ಯಾಂಟಿಕ್ ಭಾವನೆ ಮೂಡಿಸುತ್ತದೆ. ರಾತ್ರಿ ಸಮಯದಲ್ಲಿ ಎಲ್ಲಾ ಲೈಟ್ ಗಳನ್ನು ಆಫ್ ಮಾಡಿದ ನಂತರ ಅದರ ಬೆಳಕು ನಿಮ್ಮ ಸಂಬಂಧದಂತೆಯೇ ಹೊಳೆಯುತ್ತದೆ. ಇದು ನಿಜವಾಗಿಯೂ ನಿಮ್ಮ ಗೆಳತಿಗೆ ಸುಂದರವಾದ ಉಡುಗೊರೆಯಾಗುತ್ತದೆ.

ಸೆಲ್ಫ್ ಕೇರ್ ಗ್ರೂಮಿಂಗ್ ಕಿಟ್ : ನೀವು ಯಾರನ್ನಾದರೂ ಪ್ರೀತಿಸಿದ್ದೇ ಆದರೆ, ಅವರ ಬಗ್ಗೆ ಕಾಳಜಿ ವಹಿಸುವುದು ಕೂಡ ನಿಮ್ಮ ಜವಾಬ್ದಾರಿ ಆಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವಳ ಆರೋಗ್ಯದ ಜೊತೆಗೆ, ಅವಳ ಚರ್ಮದ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಹುಡುಗಿಯರ ವಿಷಯಕ್ಕೆ ಬಂದಾಗ, ನೀವು ಅವಳಿಗೆ ಸ್ವಯಂ ಆರೈಕೆಯ ಕಿಟ್ ನೀಡಬಹುದು. ಇದರಲ್ಲಿ ಅವನ/ಅವಳ ತ್ವಚೆಗೆ ಅನುಗುಣವಾಗಿ ಮಾಯಿಶ್ಚರೈಸರ್, ಟೋನರ್, ಫೇಸ್ ವಾಶ್, ಕ್ಲೆನ್ಸರ್ ಮತ್ತು ಇತರ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ನೀವು ಕಾಂಬೊ ಕಸ್ಟಮೈಸ್ ಮಾಡಿದ ಉಡುಗೊರೆಯ ಪ್ಯಾಕ್ ನೀಡಬಹುದು.
ಟೆಡ್ಡಿ ಬೇರ್ : ಹುಡುಗಿಯರು ಸಾಮಾನ್ಯವಾಗಿ ಮೃದು ಸ್ವಭಾವ ಹೊಂದಿರುತ್ತಾರೆ. ಆದ್ದರಿಂದ ಅವರು ಮೃದುವಾದ ಆಟಿಕೆಗಳನ್ನು ಬಹಳ ಇಷ್ಟಪಡುತ್ತಾರೆ. ಟೆಡ್ಡಿ ಬೇರ್ ತುಂಬಾ ಸಾಮಾನ್ಯ ಉಡುಗೊರೆಯಾಗಿದ್ದರೂ, ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ ಎಂಬುದು ನಿಜ. ನಿಮ್ಮ ಗೆಳತಿಗೆ ನೀವು ಮಗುವಿನ ಆಟದ ಟೆಡ್ಡಿ ಬೇರ್ ನ್ನು ಉಡುಗೊರೆಯಾಗಿ ನೀಡಿದರೆ, ಅವಳು ತುಂಬಾ ಸಂತೋಷಪಡುತ್ತಾಳೆ.
ಉಡುಗೆ : ಶೂ ಮತ್ತು ಬ್ಯಾಗ್ ಗಳಂತೆ ಹುಡುಗಿಯರು ಬಟ್ಟೆಗಳನ್ನು ಬಹಳ ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಗೆಳತಿಗೆ ವಿಶೇಷ ಭಾವನೆ ಮೂಡಿಸಲು ನೀವು ಬಯಸಿದರೆ, ನೀವು ಅವಳಿಗೆ ಸುಂದರವಾದ ಉಡುಪನ್ನು ಉಡುಗೊರೆಯಾಗಿ ನೀಡಬಹುದು. ಅವಳಿಗೆ ಕ್ಯಾಶುಯೆಲ್ ಡ್ರೆಸ್, ಟಾಪ್, ಟೀಶರ್ಟ್, ಜೀನ್ಸ್, ಪೈಜಾಮಾ, ಶ್ರಗ್ ನ್ನು ಸಹ ಉಡುಗೊರೆಯಾಗಿ ನೀಡಬಹುದು. ನೀವು ಕೊಟ್ಟ ಡ್ರೆಸ್ ಧರಿಸಿದಾಗಲೆಲ್ಲಾ ಆಕೆಗೆ ನಿಮ್ಮ ನೆನಪಾಗುತ್ತದೆ.
ಪುಸ್ತಕಗಳು : ನಿಮ್ಮ ಗೆಳತಿಗೆ ಓದುವುದರಲ್ಲಿ ಆಸಕ್ತಿ ಇದ್ದರೆ, ನೀವು ಅವಳ ನೆಚ್ಚಿನ ಪುಸ್ತಕಗಳು ಅಥವಾ ಮ್ಯಾಗಝೀನ್ ಗಳನ್ನು ಉಡುಗೊರೆಯಾಗಿ ನೀಡಲು ಯೋಚಿಸಬಹುದು. ಈ ಮ್ಯಾಗಝೀನ್ ಗಳು ಮಹಿಳೆಯರು ಮತ್ತು ಹುಡುಗಿಯರಿಗೆ ಉಪಯುಕ್ತವಾದ ಅನೇಕ ವಿಷಯಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳನ್ನು ವರ್ಷಾನುಗಟ್ಟಲೆ ಸಂಗ್ರಹಿಸಿ ಇಟ್ಟುಕೊಳ್ಳಬಹುದು.

ಗಡಿಯಾರ : ಗಡಿಯಾರ ಎಂದರೆ ಕೇವಲ ಸಮಯ ನೋಡಲು ಎನ್ನುವ ಕಾಲವೊಂದಿತ್ತು. ಸಮಯ ನೋಡಲೆಂದೇ ವಾಚ್ ಕಟ್ಟಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಅದೊಂದು ಸ್ಟೈಲಿಶ್ ಸ್ಟೇಟ್ ಮೆಂಟ್ ಆಗಿಬಿಟ್ಟಿದೆ. ನಿಮ್ಮ ಗೆಳತಿ ಸಹ ವಾಚ್ ಧರಿಸಲು ಇಷ್ಟಪಡುತ್ತಿದ್ದರೆ, ಇದು ಅವಳಿಗೆ ಉತ್ತಮ ಉಡುಗೊರೆಯ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ರೇಸ್ ಲೆಟ್ ವಿನ್ಯಾಸಗಳು, ಬಳೆಗಳು ಸೇರಿದಂತೆ ಹಲವಾರು ರೀತಿಯ ವಿನ್ಯಾಸದ ವಾಚ್ ಗಳು ಇವೆ. ವಿನ್ಯಾಸದ ಜೊತೆಗೆ ಉಡುಗೆಗೆ ಹೊಂದಿಕೆಯಾಗುವ ಬೆಲ್ಟ್ ಗಳನ್ನು ಹೊಂದಿರುವ ವಾಚ್ ಗಳು ಮಾರುಕಟ್ಟೆಯಲ್ಲಿ ಮತ್ತು ಆನ್ ಲೈನ್ ನಲ್ಲಿ ಲಭ್ಯವಿವೆ. ಇದರ ಒಂದು ಪ್ರಯೋಜನ ಎಂದರೆ, ಅವಳು ನಿಮ್ಮ ಉಡುಗೊರೆಯನ್ನು ಪ್ರತಿದಿನ ಬಳಸುತ್ತಾಳೆ. ಅದನ್ನು ಧರಿಸಿದಾಗೆಲ್ಲಾ ನಿಮ್ಮನ್ನು ನೆನಪಿಸಿಕೊಳ್ಳುತ್ತಾಳೆ.
ಮೇಕಪ್ ಟ್ರಾವೆಲ್ ಬ್ಯಾಗ್ : ಆಭರಣಗಳನ್ನು ಇಷ್ಟಪಟ್ಟಂತೆ ಹುಡುಗಿಯರು ಮೇಕಪ್ ಇಷ್ಟಪಡುತ್ತಾರೆ. ಪ್ರತಿ ಹುಡುಗಿಯೂ ಕೆಲವು ಮೇಕಪ್ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಂಡಿರುತ್ತಾಳೆ. ಈ ಕಾರಣಕ್ಕಾಗಿ ಅವಳು ಎಲ್ಲಿಗೆ ಹೋದರೂ, ಖಂಡಿತವಾಗಿಯೂ ತನ್ನ ಮೇಕಪ್ ಪೌಚ್ ನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಗೆಳತಿಗೆ ನೀವು ಮೇಕಪ್ ಟ್ರಾವೆಲ್ ಬ್ಯಾಗ್ ನ್ನು ಉಡುಗೊರೆಯಾಗಿ ನೀಡಿದರೆ, ಅವಳು ಅದನ್ನು ನೋಡಿ ತುಂಬಾ ಸಂತೋಷಪಡುತ್ತಾಳೆ. ಇತ್ತೀಚಿನ ದಿನಗಳ ಮೇಕಪ್ ಪೌಚ್ ಗಳು ಅನೇಕ ಅಳತೆ ಮತ್ತು ವಿನ್ಯಾಸಗಳಲ್ಲಿ ಲಭ್ಯವಿವೆ. ಪ್ರಯಾಣದ ಸಮಯದಲ್ಲಿ ಇದನ್ನು ಸುಲಭವಾಗಿ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬಹುದು. ನೀವು ಅದನ್ನು ಯಾವುದೇ ಆನ್ ಲೈನ್‌ಸೈಟ್ ಅಥವಾ ಮಾರುಕಟ್ಟೆಯಿಂದಲೂ ಸುಲಭವಾಗಿ ಖರೀದಿಸಬಹುದು.
ಪರ್ಫ್ಯೂಮ್ : ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ ಗಿಫ್ಟ್ ನೀಡುವುದು ಉತ್ತಮ ಆಯ್ಕೆಯಾಗಿದೆ. ನಿಮ್ಮ ಗೆಳತಿ ಇಷ್ಟಪಡುವಂಥ ಪರ್ಫ್ಯೂಮ್ ನ್ನು ಉಡುಗೊರೆಯಾಗಿ ನೀಡಬಹುದು. ಅವಳಿಗೆ ಈ ಉಡುಗೊರೆ ನೀಡುವಾಗ ಸುಗಂಧ ದ್ರವ್ಯದ ಸೌಮ್ಯವಾದ ಪರಿಮಳದಿಂದ ನೀವು ಅವಳನ್ನು ಗುರುತಿಸಬಹುದು ಎಂದೂ ಹೇಳಬಹುದು. ಅದೇ ಸಮಯದಲ್ಲಿ ಅವಳೂ ಸಹ ಪರ್ಫ್ಯೂಮ್ ಹಚ್ಚಿಕೊಳ್ಳುವಾಗೆಲ್ಲ ನಿಮ್ಮನ್ನು ನೆನಪಿಸಿಕೊಳ್ಳುತ್ತಾಳೆ.
ಬ್ಯಾಂಗಲ್ ಬಾಕ್ಸ್ : ಹುಡುಗಿಯರು ಮೇಕಪ್ ಬಾಕ್ಸ್ ಅಥವಾ ಆಭರಣದ ಬಾಕ್ಸ್ ಗಳನ್ನು ಇಷ್ಟಪಡುತ್ತಾರೆ. ಇದನ್ನು ಹೊರತುಪಡಿಸಿ, ನೀವು ಅವರಿಗೆ ಬ್ಯಾಂಗಲ್ ಬಾಕ್ಸ್ ನ್ನು ಉಡುಗೊರೆಯಾಗಿ ನೀಡಿದರೆ, ಅದು ಉತ್ತಮ ಆಯ್ಕೆಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಡಿಸೈನರ್ ಬ್ಯಾಂಗಲ್ ಬಾಕ್ಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರಯಾಣ ಮಾಡುವಾಗಲೂ ಸುಲಭವಾಗಿ ಬ್ಯಾಗ್ ನಲ್ಲಿ ಇದನ್ನು ಇಟ್ಟುಕೊಂಡು ಪ್ರಯಾಣಿಸಬಹುದು.
ಮೊಬೈಲ್ : ಇದು ಮೊಬೈಲ್ ಯುಗ ಮತ್ತು ಇದು ಪ್ರೀತಿಯ ಸಂಗಾತಿಯ ನಡುವಿನ ಅಂತರವನ್ನು ಕಡಿಮೆ ಮಾಡುವ ಸಾಧನವಾಗಿದೆ. ನಿಮ್ಮ ಸಂಗಾತಿ ಜೊತೆ ಫೋನ್ ನಲ್ಲಿ ಮಾತನಾಡದಿದ್ದರೆ, ನಿಮ್ಮ ದಿನ ಪೂರ್ಣಗೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಬಜೆಟ್ ಸ್ವಲ್ಪ ಹೆಚ್ಚಿದ್ದರೆ ಮೊಬೈಲ್ ನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ.
ಗಾಗಲ್ಸ್ : ಹುಡುಗ ಮತ್ತು ಹುಡುಗಿ ಯಾರೇ ಆಗಿರಲಿ ಅವರಿಗೆ ಗಾಗಲ್ಸ್ ಇಷ್ಟವಾಗುತ್ತದೆ. ಹುಡುಗಿಯರು ಬಗೆ ಬಗೆಯ ಗಾಗಲ್ಸ್ ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಹೀಗಿರುವಾಗ, ನೀವು ನಿಮ್ಮ ಗೆಳತಿಗೆ ಗಾಗಲ್ಸ್ ನ್ನು ಉಡುಗೊರೆಯಾಗಿ ನೀಡಬಹುದು. ಮಿತವ್ಯಯದ ಜೊತೆಗೆ ವಿಶೇಷ ಆಗಿರುತ್ತದೆ. ನಿಮ್ಮ ಗೆಳತಿಗೆ ಉತ್ತಮವಾದ ಸನ್ ಗ್ಲಾಸ್ ನ್ನು ಸಹ ಉಡುಗೊರೆಯಾಗಿ ನೀಡಬಹುದು.
ದುಪಟ್ಟಾ : ಭಾರತೀಯ ಸಂಪ್ರದಾಯವನ್ನು ಪ್ರತಿಬಿಂಬಿಸುವ ಜೊತೆಗೆ ದುಪಟ್ಟಾ ಸ್ಟೈಲೀಶ್ ಸ್ಟೇಟ್ ಮೆಂಟ್ ಕೂಡಾ ಆಗಿದೆ. ಹೀಗಿರುವಾಗ, ನಿಮ್ಮ ಗೆಳತಿಗೆ ಉಡುಗೊರೆಯಾಗಿ ಸಾಫ್ಟ್ ಆಗಿರುವ ಉತ್ತಮ ದುಪಟ್ಟಾ ನೀಡಬಹುದು. ಇತ್ತೀಚಿನ ದಿನಗಳಲ್ಲಿ ನೀವು ಎಲ್ಲಾ ಬಟ್ಟೆಗಳಿಗೆ ಸರಿಹೊಂದುವಂತಹ ಅನೇಕ ದುಪಟ್ಟಾಗಳನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ ಬಹು ಬಣ್ಣದ, ಬಾಂಧಿನಿ ದುಪಟ್ಟಾಗಳು ಸುಂದರವಾಗಿ ಕಾಣುತ್ತವೆ ಮತ್ತು ಎಲ್ಲಾ ಡ್ರೆಸ್ ಗಳಿಗೂ ಸರಿಹೊಂದುವಂತೆ ಇರುತ್ತವೆ.
ಗಿಟಾರ್ : ಕೆಲವು ಹುಡುಗಿಯರು ಸಂಗೀತ ವಾದ್ಯಗಳನ್ನು ಇಷ್ಟಪಡುತ್ತಾರೆ. ಅದರಲ್ಲಿ ಗಿಟಾರ್ ವಿಶೇಷವಾಗಿದೆ. ನಿಮ್ಮ ಗೆಳತಿ ಕೂಡಾ ಗಿಟಾರ್ ನ್ನು ಇಷ್ಟಪಡುತ್ತಿದ್ದರೆ ಅಥವಾ ಅವಳು ಬಹಳ ಸಮಯದಿಂದ ಗಿಟಾರ್ ನುಡಿಸುತ್ತಿದ್ದರೆ ಅಥವಾ ಅವಳು ಗಿಟಾರ್ ಕಲಿಯಲು ಯೋಚಿಸುತ್ತಿದ್ದರೆ, ನೀವು ಅಳಿಗೆ ಇದನ್ನು ಉಡುಗೊರೆಯಾಗಿ ನೀಡಬಹುದು. ನೀವು ಬಯಸಿದರೆ, ನಿಮ್ಮ ಗೆಳತಿಯ ಆಯ್ಕೆಯ ಪ್ರಕಾರ ಇತರ ಸಂಗೀತದ ಉಪಕರಣಗಳನ್ನು ಸಹ ಉಡುಗೊರೆಯಾಗಿ ನೀಡಬಹುದು.
ಮೇಕಪ್ ಕಿಟ್ : ಪ್ರತಿ ಹುಡುಗಿಯೂ ಸ್ವಲ್ಪವಾದರೂ ಮೇಕಪ್ ಮಾಡಿಕೊಳ್ಳಲು ಇಷ್ಟಪಡುತ್ತಾಳೆ. ಹೀಗಿರುವಾಗ, ನೀವು ಗೆಳತಿಯನ್ನು ಸಂತೋಷಪಡಿಸಲು ಬಯಸಿದರೆ, ಮೇಕಪ್ ಕಿಟ್ ನ್ನು ಉಡುಗೊರೆಯಾಗಿ ನೀಡಬಹುದು. ನಿಮ್ಮ ಗೆಳತಿ ಲೈಟ್ ಮೇಕಪ್ ಇಷ್ಟಪಟ್ಟರೆ, ನೀವು ಅವಳ ನೆಚ್ಚಿನ ಲಿಪ್ ಸ್ಟಿಕ್, ನೇಲ್ ಪಾಲಿಶ್, ಕಾಜಲ್ ನ್ನು ಕೂಡ ಸೇರಿಸಬಹುದು. ಇದು ಅವರಿಗೆ ತುಂಬಾ ಉಪಯುಕ್ತ ಉಡುಗೊರೆ.
ಕಸ್ಟಮೈಸ್ಡ್ ನೆಕ್ಲೇಸ್ : ಇದು ನಿಜವಾಗಿಯೂ ಸುಂದರ ಉಡುಗೊರೆ. ಈ ವಿಶಿಷ್ಟ ನೆಕ್ ಲೇಸ್ ನಿಮ್ಮ ಗೆಳತಿಗೆ ವಿಶೇಷ ಭಾವನೆಗಳನ್ನು ನೀಡುವುದಲ್ಲದೆ, ಅವಳು ಅದನ್ನು ಧರಿಸಿದಾಗೆಲ್ಲಾ ನಿಮ್ಮನ್ನು ನೆನಪಿಸಿಕೊಳ್ಳುತ್ತಾಳೆ. ಅವಳ ಹೆಸರು ಅಥವಾ ನಿಮ್ಮ ಹೆಸರಿನ ಮೊದಲ ಅಕ್ಷರದೊಂದಿಗೆ ಹಾರವನ್ನು ಮಾಡಿಸುವ ಮೂಲಕ ನೀವು ಅವಳಿಗೆ ಈ ವಿಶೇಷ ಉಡುಗೊರೆಯನ್ನು ನೀಡಬಹುದು.
ಫಿಟ್ನೆಸ್ ಬ್ಯಾಂಡ್ ಅಥವಾ ಸ್ಮಾರ್ಟ್ ವಾಚ್ : ಇಂದಿನ ಬಿಡುವಿಲ್ಲದ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಹೆಣ್ಣುಮಕ್ಕಳು ಕೂಡ ಇದಕ್ಕೆ ಹೊರತಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿ ಕೂಡ ಫ್ರೀಕ್ ಆಗಿದ್ದರೆ, ನೀವು ಅವರಿಗೆ ಫಿಟ್ನೆಸ್ ಬ್ಯಾಂಡ್ ಅಥವಾ ಸ್ಮಾರ್ಟ್ ವಾಚ್ ನ್ನು ಉಡುಗೆರೆಯಾಗಿ ನೀಡಬಹುದು. ಇಂತಹ ಪರಿಸ್ಥಿತಿಯಲ್ಲಿ ಫಿಟ್ನೆಸ್ ಬ್ಯಾಂಡ್ ಅಥವಾ ಸ್ಮಾರ್ಟ್ ವಾಚ್ ನಲ್ಲಿ ಸಮಯ ನೋಡುವುದರ ಜೊತೆಗೆ ಹೃದಯಬಡಿತ, ಆಮ್ಲಜನಕ, ಎಷ್ಟು ನಡೆದಿದ್ದೇವೆ ಎಂದೂ ಕೂಡ ನೋಡಿಕೊಳ್ಳಬಹುದು. ಇದಲ್ಲದೇ ಮೊಬೈಲ್ ಗೆ ಇದನ್ನು ಸಂಪರ್ಕಿಸುವ ಮೂಲಕ ವಾಚ್ ನಲ್ಲೇ ಕರೆ ಮಾಡುವುದು, ಸಂದೇಶಗಳನ್ನು ರವಾನಿಸುವ ಸೌಲಭ್ಯ ಇರುತ್ತದೆ. ಹಾಗಾಗಿ ನಿಮ್ಮ ಗೆಳತಿಗೆ ಫಿಟ್ನೆಸ್ ಬ್ಯಾಂಡ್ ಒಂದು ಒಳ್ಳೆಯ ಉಡುಗೊರೆ.
ಗೃಹಾಲಂಕಾರ : ಹುಡುಗಿಯರು ಮನೆಯನ್ನು ಅಲಂಕರಿಸಲು ಬಹಳ ಇಷ್ಟಪಡುತ್ತಾರೆ. ಅವಳು ಪ್ರತಿದಿನ ಮನೆ ಅಥವಾ ಮೇಜಿನ ಅಲಂಕಾರಕ್ಕಾಗಿ ವಸ್ತುಗಳನ್ನು ಖರೀದಿಸುತ್ತಲೇ ಇರುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಗೆಳತಿ ಕೂಡ ಗೃಹಾಲಂಕಾರದಲ್ಲಿ ಆಸಕ್ತಿ ಹೊಂದಿದ್ದರೆ, ಆಗ ನೀವು ಅವಳಿಗೆ ಮನೆ ಅಲಂಕಾರಿಕ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಸುಂದರ ಕ್ಯಾಂಡಲ್ ಸ್ಟಾಂಡ್, ಫೋಟೋ ಫ್ರೇಮ್, ಡೆಸ್ಕ್ ಆರ್ಗನೈಸರ್, ಕುಶನ್, ಲೈಟ್ ಗಳನ್ನು ನಿಮ್ಮ ಗೆಳತಿಗೆ ಉಡುಗೊರೆ ನೀಡಿ.
ಚಾಕಲೇಟ್ಸ್ : ನಿಮ್ಮ ಸಂಬಂಧದ ಮಾರ್ಧರ್ಯವನ್ನು ಕಾಪಾಡಿಕೊಳ್ಳಲು, ನೀವು ನಿಮ್ಮ ಗೆಳತಿಗೆ ಅವರ ಆಯ್ಕೆಯ ಚಾಕಲೇಟ್ಸ್ ನ್ನು ಉಡುಗೊರೆಯಾಗಿ ನೀಡಬಹುದು. ನೀವು ಬಯಸಿದರೆ, ನೀವು ಈ ಉಡುಗೊರೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು ಮತ್ತು ಅದನ್ನು ಚಾಕಲೇಟ್ ಜೊತೆಗೆ ಉಡುಗೊರೆಯಾಗಿ ನೀಡಬಹುದು. ಇದನ್ನು ವಿಶೇಷವಾಗಿಸಲು, ನೀವೇ ಕೈಯಿಂದ ಮಾಡಿದ ಕಾರ್ಡ್ ನ್ನು ಉಡುಗೊರೆ ಆಗಿ ನೀಡಬಹುದು.
– ಗೌರಿ ಪಂಕಜಾ
ಪತಿ/ಭಾವೀ ಸಂಗಾತಿ ಸೂಕ್ತ ಉಡುಗೊರೆ ಹುಡುಗರಿಗೆ ಗ್ಯಾಜೆಟ್ಸ್ ಗಳೆಂದರೆ ತುಂಬಾ ಇಷ್ಟ. ಈ ದೀಪಾವಳಿಯಲ್ಲಿ ನೀವು ಅವರಿಗೆ ಮೊಬೈಲ್ ಹ್ಯಾಂಡ್ ಸೆಟ್, ಕಂಪ್ಯೂಟರ್ ಸಾಫ್ಟ್ ವೇರ್, ಜಿಪಿಎಸ್ ಸಿಸ್ಟಮ್, ಎಂಪಿ3 ಪ್ಲೇಯರ್, ಹೆಡ್ ಫೋನ್ ಗಳನ್ನು ನೀಡಿ ಅವರನ್ನು ಸಂತೋಷಪಡಿಸಬಹುದು. ಅವರು ಅಡುಗೆಮನೆಯಲ್ಲಿ ಸ್ವಲ್ಪ ಆಸಕ್ತಿ ಹೊಂದಿದ್ದರೆ, ನೀವು ಅವರಿಗೆ ಕೆಲವು ಆಧುನಿಕ ಉಪಕರಣಗಳನ್ನು ನೀಡಬಹುದು.
ಫೋಟೋಗ್ರಫಿಯನ್ನು ಅವರು ಇಷ್ಟಪಡುವುದಾದರೆ, ಅವರಿಗೆ ನೀವು ಕ್ಯಾಮೆರಾವನ್ನು ಉಡುಗೊರೆ ಆಗಿ ನೀಡಬಹುದು. ಹೆಚ್ಚಿನ ಪುರುಷರು ಕೈಗಡಿಯಾರಗಳನ್ನು ತುಂಬಾ ಇಷ್ಟಪಡುತ್ತಾರೆ. ಇವುಗಳಲ್ಲಿ ವಿವಿಧ ವಿನ್ಯಾಸಗಳು ಲಭ್ಯವಿರುತ್ತವೆ. ನಿಮ್ಮ ಬಜೆಟ್ ಮತ್ತು ಆಯ್ಕೆಯ ಪ್ರಕಾರ, ಸಂಗಾತಿಗೆ ಬೇಕಾದ ವಾಚ್ ನ್ನು ಖರೀದಿಸಬಹುದು.
ನಿಮ್ಮ ಸಂಗಾತಿಗೆ ನೀವು ಉತ್ತಮ ಬ್ರಾಂಡ್ ಗಳ ಟೀಶರ್ಟ್ಸ್ ಮತ್ತು ಗಾಗಲ್ಸ್ ನ್ನು ಉಡುಗೊರೆಯಾಗಿ ನೀಡಬಹುದು. ಉತ್ತಮ ಪೇಂಟಿಂಗ್, ಪೆನ್ ಸೆಟ್ ಅಥವಾ ನಿಮ್ಮ ಕೈಯಿಂದ ಮಾಡಿದ ಸಿಹಿ ತಿಂಡಿ, ಪರ್ಫ್ಯೂಮ್ ನೀಡಬಹುದು. ನಿಮ್ಮ ಸಂಗಾತಿ ನಗದು, ಕಾರ್ಡ್ಸ್ ಐಡಿ ಕಾರ್ಡ್ಸ್ ಇತ್ಯಾದಿಗಳನ್ನು ನಿರ್ವಹಿಸುವಲ್ಲಿ ಸಮಸ್ಯೆ ಇದ್ದರೆ ಅವರಿಗೆ ವಾಲೆಟ್ ನ್ನು ಉಡುಗೊರೆ ಆಗಿ ನೀಡಬಹುದು. ಇದು ಹಲವು ಬಣ್ಣ ಮತ್ತು ವಿನ್ಯಾಸಗಳಲ್ಲಿ ಲಭ್ಯವಿದ್ದು ನಿಮ್ಮ ಇಚ್ಛೆಯ ಪ್ರಕಾರ ಆಯ್ಕೆ ಮಾಡಬಹುದು.
ಗ್ರೂಮಿಂಗ್ ಕಿಟ್ ನ್ನು ಹುಡುಗರಿಗೆ ಉಡುಗೊರೆ ಆಗಿ ತೆಗೆದುಕೊಳ್ಳಬಹುದು. ಈ ಕಿಟ್ ನಲ್ಲಿ ಶೇವಿಂಗ್ ಸಲಕರಣೆ ಜೊತೆಗೆ ಮಾಯಿಶ್ಚರೈಸರ್ ನ್ನು ಸಹ ಒದಗಿಸಲಾಗಿಸುತ್ತದೆ. ಇದು ಒಣ ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ.
ಗೆಳೆಯನಿಗೆ ಹುಟ್ಟುಹಬ್ಬದ ಉಡುಗೊರೆ ಆಗಿ ಸನ್ ಗ್ಲಾಸ್ ತೆಗೆದುಕೊಳ್ಳಬಹುದು. ಇದು ನಿಮ್ಮ ಸಂಗಾತಿ ಪ್ರಯಾಣಿಸುವಾಗ ಬಳಸಬಹುದಾದ ತಂಪಾದ ಉಡುಗೊರೆ ಆಗಿದೆ. ನಿಮ್ಮ ಬಜೆಟ್ ಗೆ ಅನುಗುಣವಾಗಿ ವಿವಿಧ ವಿನ್ಯಾಸಗಳು ಹಾಗೂ ಬಣ್ಣಗಳಲ್ಲಿ ಅವುಗಳನ್ನು ಖರೀದಿಸಬಹುದು.
ನಿಮ್ಮ ಗೆಳೆಯನಿಗೆ ಜಂಟಲ್ ಮ್ಯಾನ್ ಲುಕ್ ನೀಡಲು, ಸುಂದರವಾದ ಟೈನ್ನು ಉಡುಗೊರೆ ಆಗಿ ನೀಡಬಹುದು. ಈ ಕಾಂಬೋದಲ್ಲಿ ನೀವು ಟೈ ಜೊತೆಗೆ ಕಫ್ ಲಿಂಕ್ ಗಳನ್ನು ಸಹ ಪಡೆಯುತ್ತೀರಿ. ಅದು ಸಂಗಾತಿಗೆ ಒಳ್ಳೆಯ ಲುಕ್ ಕೊಡುತ್ತದೆ. ಇದು ಹುಡುಗರಿಗೆ ಉಡುಗೊರೆ ಆಗಿ ಅಗ್ಗದ ಮತ್ತು ಸುಂದರವಾದ ಆಯ್ಕೆಯಾಗಿದೆ.





