ರಾಘವೇಂದ್ರ ಅಡಿಗ ಎಚ್ಚೆನ್.

’ಮತ್ತೆ ಮಳೆ ಹೊಯ್ಯುತ್ತಿದೆ’* ಸಿನಿಮಾದ ಎರಡು ಹಾಡುಗಳ ಬಿಡುಗಡೆ ಸಮಾರಂಭವು ಉತ್ಸವ್ ಲೆಗಸಿದಲ್ಲಿ ಅದ್ದೂರಿಯಾಗಿ ನಡೆಯಿತು. ’ಎಲ್ಲ ನೆನಪಾಗುತಿದೆ’ ಎಂಬ ಅಡಿಬರಹವಿದೆ. ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿರುವ ಗಂಗಾಧರ್ ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ಪತ್ನಿ *ಸುಮ ಹೆಸರಿನಲ್ಲಿ ಬಂಡವಾಳ* ಹೂಡುತ್ತಿದ್ದಾರೆ. ಶೃತಿ ಅನಿಲ್‌ಕುಮಾರ್ ಸಹ ನಿರ್ಮಾಪಕರು ಹಾಗೂ ಪ್ರಾಧ್ಯಾಪಕರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ *ಪರಮ್‌ಗುಬ್ಬಿ ನಿರ್ದೇಶನ* ಮಾಡಿದ್ದಾರೆ. ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಕಬ್ಬಡಿ ನರೇಂದ್ರಬಾಬು, ಸಂಗೀತ ಅತಿಶಯಜೈನ್ ಅವರದಾಗಿದೆ.

rains

ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಹಿರಿಯ ನಿರ್ದೇಶಕ ನಾಗಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಗಣ್ಣ ಪ್ರಸ್ತುತ ಚಿತ್ರರಂಗವು ಎದುರಿಸುತ್ತಿರುವ ಸಮಸ್ಯೆಗಳು, ಅದಕ್ಕೆ ಪರಿಹಾರದ ಬಗ್ಗೆ ಬೆಳಕು ಚೆಲ್ಲಿದರು. ನಂತರ ಇದೇ ಬ್ಯಾನರ್‌ನಿಂದ ನಿರ್ಮಾಣವಾಗುತ್ತಿರುವ, ಕಬ್ಬಡ್ಡಿ ನರೇಂದ್ರಬಾಬು ನಿರ್ದೇಶನದ ’ಭೀಮ ತೀರದ ಹಂತಕರು’ ಸಿನಿಮಾದ ಪೋಸ್ಟರ್‌ನ್ನು ಶಾಸಕರು ಲೋಕಾರ್ಪಣೆ ಮಾಡಿದರು.

rains 1

ನಿರ್ಮಾಪಕರ ಮಗ ಜಿ.ಲಿಖಿತ್ ಮತ್ತು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ರಂಗಭೂಮಿಯ ಜಯವರ್ಧನ್ ನಾಯಕರುಗಳು. ನಾಯಕಿಯರುಗಳಾಗಿ ಸುಲಕ್ಷಖೈರ, ಭೂಮಿಕಗೌಡ. ಇವರೊಂದಿಗೆ ಚಂದ್ರಶೇಖರ ರೆಡ್ಡಿ.ಎ.ಎಂ, ಪ್ರಕಾಶ್‌ಮೂರ್ತಿ, ಕುಮಾರಿ ಸ್ವರ್ಣ, ಶೃತಿ, ದಿನಮಣಿ, ಕಾವ್ಯ ಕುಮಾರಿ ಮುಂತಾದವರು ಅಭಿನಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಸಾಹಿತಿ ಕೆ.ಸದಾಶಿವ ವಿರಚಿತ ಸಣ್ಣಕತೆಗಳಲ್ಲಿ ಒಂದಾದ ’ಮತ್ತೆ ಮಳೆ ಹೂಯ್ಯುತಿದೆ’ ಕೃತಿಯನ್ನು ಬಳಸಲಾಗಿದೆ. ಅವರಿಗೆ ನೀಡ ಬಹುದಾದ ಸಂಭಾವನೆ ಮೊತ್ತವನ್ನು ಸಾಹಿತ್ಯ ಪರಿಷತ್‌ನಲ್ಲಿ ದತ್ತಿಯಾಗಿ ನೀಡಿ, ಪ್ರತಿ ವರ್ಷ ಸದಾಶಿವ ಹೆಸರಿನಲ್ಲಿ ಯುವ ಬರಹಗಾರರಿಗೆ ಪ್ರಶಸ್ತಿ ನೀಡುವ ಯೋಜನೆ ಬಗ್ಗೆ ನಿರ್ಮಾಪಕರಿಗೆ ತಿಳಿಸಿದಾಗ ಖುಷಿಯಿಂದ ಒಪ್ಪಿಕೊಂಡರು. ಕಬಡ್ಡಿ ನರೇಂದ್ರಬಾಬು ಸಿನಿಮಾ ಆಗಲು ಮುಖ್ಯ ಕಾರಣರಾಗಿರುತ್ತಾರೆ.

rains 2

ಚಿತ್ರವು 80ರ  ದಶಕ ಹಾಗೂ 2000ನೇ ಇಸವಿಯಲ್ಲಿ ನಡೆಯುವ ಎರಡು ಕಾಲಘಟ್ಟದ ಅಂಶಗಳನ್ನು ಹೊಂದಿದೆ. ಮೊದಲನೇ ಜೋಡಿಯ ಪ್ರೇಮ ಕತೆ ವಿಪಲವಾಗುತ್ತದೆ. ಎರಡನೇ ಜೋಡಿಯ ಲವ್ ಸ್ಟೋರಿ ಯಶಸ್ಸು ಕಾಣುತ್ತದೆ. ಇವೆರೆಡರ ನಡುವೆ ಸನ್ನಿವೇಶಗಳು ಮನಸ್ಸನ್ನು ಕದಡುತ್ತದೆ. ಸಿನಿಮಾದಲ್ಲಿ ಮಳೆಯು ಮಹತ್ವದ ಪಾತ್ರವನ್ನು ವಹಿಸಿದೆ. ಜತೆಗೆ ಅರ್ಥಪೂರ್ಣ ಸಂದೇಶಗಳು ಅಲ್ಲಲ್ಲಿ ಬರುತ್ತದೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಪರಮ್‌ಗುಬ್ಬಿ ಮಾಹಿತಿ ನೀಡಿದರು.

ಛಾಯಾಗ್ರಹಣ ಶಾಂತಾರಾವ್ ಇಪಿಲಿ, ಸಂಕಲನ ಧನುಷ್ ವೀರ್, ಕಲೆ ಬಾಬು ಖಾನ್, ನೃತ್ಯ ನಂದ ಅವರದಾಗಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ