ಮ್ಯಾಂಗೋ ಲಸ್ಸಿ
ಬೇಕಾಗುವ ಸಾಮಗ್ರಿ
ಮಾವಿನ ಹಣ್ಣಿನ ತಿರುಳು ೧ ಕಪ್ ( ಮಾವಿನ ಹಣ್ಣನ್ನು ೧/೨ ಗಂಟೆ ಐಸ್ ನೀರಿನಲ್ಲಿ ನೆನೆಸಿ, ತಿರುಳು ತೆಗೆದಿಟ್ಟುಕೊಳ್ಳಿ) , ಗಟ್ಟಿ ತಾಜಾ ಮೊಸರು ೧ ಕಪ್, ಫ್ರೆಶ್ ಕ್ರೀಮ್ ೨ ಚಮಚ, ಸಕ್ಕರೆ ೪ ಚಮಚ (ಹಣ್ಣಿನ ಸಿಹಿ ಹೆಚ್ಚಿದಲ್ಲಿ ಸಕ್ಕರೆ ಕಡಿಮೆ ಬಳಸಬಹುದು ), ೧/೨ಗಂಟೆ ನೀರಿನಲ್ಲಿ ನೆನೆಸಿದ ಗೋಡಂಬಿ ೪, ಏಲಕ್ಕಿ ಪುಡಿ ೧/೨ ಚಮಚ.
ಮಾಡುವ ವಿಧಾನ
ಜ್ಯೂಸರ್ ಗೆ ಮಾವಿನ ತಿರುಳು, ಗೋಡಂಬಿ , ಮೊಸರು, ಫ್ರೆಶ್ ಕ್ರೀಮ್, ಸಕ್ಕರೆ, ಏಲಕ್ಕಿ ಪುಡಿ ಹಾಕಿ ಅರೆದರೆ ರುಚಿಯಾದ ಮ್ಯಾಂಗೋ ಲಸ್ಸಿ ರೆಡಿ.
– ಕಾವ್ಯ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





