ತಾಟಿನಿಂಗು (Ice apple) ವೆಜ್ ಸಲಾಡ್
ಬೇಕಾದ ಸಾಮಗ್ರಿ
ತಾಟಿನಿಂಗು ೨ ತೊಳೆ, ಕ್ಯಾರಟ್ ತುರಿ ೧/೨ ಕಪ್, ಸೌತೆಕಾಯಿ ತುರಿ ೧/೨ ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ,
ಚಾಟ್ ಮಸಾಲಾ ೧/೪ ಚಮಚ, ನಿಂಬೆ ರಸ ೧/೨ ಚಮಚ.
ಮಾಡುವ ವಿಧಾನ
ತಾಟಿನಿಂಗನ್ನು ಸಣ್ಣದಾಗಿ ಹೆಚ್ಚಿರಿ, ಇದಕ್ಕೆ ಕ್ಯಾರೆಟ್ ತುರಿ , ಸೌತೆಕಾಯಿ ತುರಿ, ಚಾಟ್ ಮಸಾಲಾ, ನಿಂಬೆ ರಸ ಸೇರಿಸಿ ಕಲಸಿ, ಸರ್ವ್ ಮಾಡುವ ಮುನ್ನ ಫ್ರೆಶ್ ಸಲಾಡ್ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಸವಿಯಿರಿ .
–ಕಾವ್ಯ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





