ಜೆಲ್ಲಿ ಫ್ರೂಟ್ಸ್ ಸಲಾಡ್
ಬೇಕಾದ ಸಾಮಾನುಗಳು
ಹೆಚ್ಚಿದ ಲಿಚ್ಚಿ ೧/೨ ಕಪ್ , ತಾಟಿನಿಂಗು ೧/೨ ಕಪ್ , ಎಳನೀರು (ಒಳಗಿನ ತೆಳು ತಿರುಳು ) ಪೇಪರ್ ಗಂಜಿ ೧/೨ ಕಪ್ , ಒಣ ದ್ರಾಕ್ಷಿ ೫-೬ , ಸಣ್ಣಗೆ ಹೆಚ್ಚಿದ ಗೋಡಂಬಿ ೪-೬, ಪಿಸ್ತಾ ೪-೫, ಮಿಲ್ಕ್ ಪೌಡರ್ ೨ ಚಮಚ, ಏಲಕ್ಕಿ ಪುಡಿ ಒಂದು ಚಿಟಕಿ.
ಮಾಡುವ ವಿಧಾನ
ಮಿಕ್ಸಿಂಗ್ ಬೌಲ್ ನಲ್ಲಿ ಸಣ್ಣದಾಗಿ ಹೆಚ್ಚಿದ ಲಿಚ್ಚಿ , ತಾಟಿನಿಂಗು , ಎಳನೀರು ತಿರುಳನ್ನು ಮಿಶ್ರಣ ಮಾಡಿ . ಇದಕ್ಕೆ ಮಿಲ್ಕ್ ಪೌಡರ್, ಏಲಕ್ಕಿ ಪುಡಿ ಸೇರಿಸಿ ಕಲಸಿ. ಜೆಲ್ಲಿ ಸಲಾಡ್ ಸರ್ವಿಂಗ್ ಬೌಲ್ ಗೆ ಹಾಕಿ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ ಸವಿಯಿರಿ.
– ಕಾವ್ಯಾ ಭಾರಧ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





