ಸಿಹಿ ಗೆಣಸು  ಕಟ್ಲೆಟ್ 

ಬೇಕಾಗುವ ಸಾಮಗ್ರಿ 

ಬೇಯಿಸಿದ ಸಿಹಿ ಗೆಣಸು (೨೦೦ ಗ್ರಾಂ)  ೧, ಬೇಯಿಸಿದ  ಹಸಿ ಕಡಲೆಕಾಯಿಬೀಜ ೧೦, ಗರಂ ಮಸಾಲಾ ೧ ಚಮಚ, ರುಚಿಗೆ ಉಪ್ಪು, ರಸ್ಕ್ ಪೌಡರ್ ಸ್ವಲ್ಪ.

ಮಾಡುವ ವಿಧಾನ

ಸಿಹಿ ಗೆಣಸನ್ನು ಸಿಪ್ಪೆ ಬಿಡಿಸಿ  ಮ್ಯಾಶ್  ಮಾಡಿಕೊಂಡು ಕಡಲೆಕಾಯಿಬೀಜ, ಗರಂ ಮಸಾಲಾ, ಉಪ್ಪು ಸೇರಿಸಿ ಕಲೆಸಿಕೊಳ್ಳಿ.

ನಂತರ ಕೈಗೆ ಎಣ್ಣೆ ಸವರಿ ಸಣ್ಣ ವಡೆ ಆಕಾರಕ್ಕೆ ತಟ್ಟಿ ರಸ್ಕ್ ಪೌಡರ್ನಲ್ಲಿ ಎರಡು ಕಡೆ ಅದ್ದಿ, ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಶಾಲ್ಲೋ ಫ್ರೈ ಮಾಡಿ.

Kavyaa Bharadwaj (9)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ