ಮೊಸರವಲಕ್ಕಿ
ಬೇಕಾಗುವ ಸಾಮಗ್ರಿ
ಮೀಡಿಯಂ ಅವಲಕ್ಕಿ ೧ ಕಪ್, ಮೊಸರು ೧ ಕಪ್, ಕಾಯಿಸಿ ಆರಿಸಿದ ಹಾಲು ೧/೪ ಕಪ್, ಸಕ್ಕರೆ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ತುರಿದ ಶುಂಠಿ ೧/೨ ಚಮಚ, ಇಂಗು ಚಿಟಿಕೆ, ಸಾಸಿವೆ ೧/೨ ಚಮಚ, ಕರಿಬೇವು ಸ್ವಲ್ಪ, ಹುರಿದ ಗೋಡಂಬಿ – ದ್ರಾಕ್ಷಿ ೬-೮ .
ಮಾಡುವ ವಿಧಾನ
ಒಂದು ಬೌಲ್ ನಲ್ಲಿ ಅವಲಕ್ಕಿಯನ್ನು ೨ ನಿಮಿಷ ನೀರಿನಲ್ಲಿ ನೆನೆಸಿ, ಬಸಿದಿಟ್ಟುಕೊಳ್ಳಿ. ಅದಕ್ಕೆ ಮೊಸರು, ಹಾಲು , ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಡಿ. ನಂತರ ಒಂದು ಸಣ್ಣ ಬಾಂಡಲೆಯಲ್ಲಿ ಒಗ್ಗರಣೆಗೆ ೨ ಚಮಚ ಎಣ್ಣೆ , ಸಾಸಿವೆ ಸಿಡಿಸಿ ಉರಿ ಆರಿಸಿ. ಅದಕ್ಕೆ ತುರಿದ ಶುಂಠಿ, ಇಂಗು , ಕರಿಬೇವು, ಹಾಕಿ ಬಾಡಿಸಿ, ದ್ರಾಕ್ಷಿ ಗೋಡಂಬಿಯೊಂದಿಗೆ ಅವಲಕ್ಕಿ ಮಿಶ್ರಣದ ಜೊತೆ ಚೆನ್ನಾಗಿ ಬೆರೆಸಿಡಿ. ಮಿಶ್ರಣ ಗಟ್ಟಿ ಅನ್ನಿಸಿದರೆ ಅರ್ಧ ಸೌಟು ಮೊಸರು ಸೇರಿಸಿ ಕಲೆಸಿ.
– ಕಾವ್ಯಾ ಭಾರದ್ವಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





