ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ನಿಮ್ಮ ಹಳೆಯ ಸ್ನೇಹಿತರು, ಸಂಬಂಧಿಕರು ಮತ್ತು ಸಮಾಜದಲ್ಲಿ ನಡೆಯುವ ಘಟನೆಗಳ ಮಾಹಿತಿಯನ್ನು ನೀಡುತ್ತಿರುತ್ತವೆ. ಇಂತಹ ಜಾಲತಾಣದಲ್ಲಿ ನೀವು ಫೇಕ್‌ ಅಕೌಂಟ್ ಒಂದನ್ನು ಓಪನ್‌ ಮಾಡಿ ಸಾಕಷ್ಟು ಮಜ ಪಡೆಯಬಹುದು.

ಈ ಮಜವನ್ನು ಕೇವಲ ಯುವ ಪೀಳಿಗೆಯವರಷ್ಟೇ ಪಡೆಯಬೇಕು, ನಾವಲ್ಲ ಎಂದು ನೀವು ಯೋಚಿಸಬಾರದು. ನೀವು ವಿವಾಹಿತರಾಗಿದ್ದು, ಸಾಕಷ್ಟು ವಯಸ್ಸಾಗಿದ್ದರೂ ಕೂಡ, ಸಾಕಷ್ಟು ಮಜ ಪಡೆಯಬಹುದು. ಅಂದರೆ ಪ್ರತಿಯೊಂದು ವಯಸ್ಸಿನವರು ಇದನ್ನು ಎಂಜಾಯ್‌ ಮಾಡಬಹುದು.

ಈಚೆಗಷ್ಟೆ 75 ವಯಸ್ಸಿನ ವೃದ್ಧರೊಬ್ಬರು ತಮ್ಮ ವಯಸ್ಸನ್ನು ಮರೆಮಾಚಿ 25 ವರ್ಷದ ಯುವಕನ ಜೊತೆ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್‌ ಮಾಡಿದರು. ಅವರು ಹೀಗೆ ಮಾಡಲು ಪ್ರಮುಖ ಕಾರಣ ತಮ್ಮ ಏಕಾಂಗಿತನ ಹೋಗಲಾಡಿಸುವುದಾಗಿತ್ತು.

ಫೇಸ್‌ಬುಕ್‌ ಚ್ಯಾಟ್‌ನಲ್ಲಿ ಇಬ್ಬರೂ ಗಂಟೆಗಟ್ಟಲೆ ಮೈಮರೆಯುತ್ತಿದ್ದರು. ಆ ಯುವಕ ಭೇಟಿ ಆಗಲು ಒತ್ತಾಯಿಸತೊಡಗುತ್ತಿದ್ದಂತೆ ವೃದ್ಧೆ ತನ್ನ ಅಕೌಂಟ್‌ ಡೀ ಆ್ಯಕ್ಟಿವೇಟ್‌ ಮಾಡಿದರು. ಇದಕ್ಕೂ ಮುಂಚೆ ಆ ಅಜ್ಜಿ ಚಾಟ್‌ನ ಮಜವನ್ನು ಸಾಕಷ್ಟು ಅನುಭವಿಸಿದ್ದರು.

ಇಂದಿನ ಧಾವಂತದ ಜೀವನದಲ್ಲಿ ಯಾರಿಗೇ ಆಗಲಿ ಭೇಟಿಯಾಗುವಷ್ಟು ಸಮಯಾವಕಾಶ ಇಲ್ಲ. ತಮ್ಮ ಸ್ನೇಹಿತರಲ್ಲಿ ಯಾರಿಗಾದರೂ ಏನಾದರೂ ಸಮಸ್ಯೆಯಿದ್ದರೆ, ಅವರಿಗೆ ವಾಟ್ಸ್ಆ್ಯಪ್‌, ಫೇಸ್‌ಬುಕ್‌ ಮೂಲಕವೇ ಸಲಹೆ ನೀಡಲಾಗುತ್ತದೆ.

ಇಂದಿನ ಇ-ಯುಗದಲ್ಲಿ ಫೇಕ್‌ ಐಡಿಯಿಂದ ಎಷ್ಟೊಂದು ಮಜ ಪಡೆಯಬಹುದಲ್ವ?

ಏನಿದು `ಇ-ಸ್ನೇಹ’?

ಇಬ್ಬರು ವ್ಯಕ್ತಿಗಳ ನಡುವೆ ಇ-ಮಾಧ್ಯಮ ಅಂದರೆ ಇಮೇಲ್‌, ಫೇಸ್‌ಬುಕ್‌ ಮುಖಾಂತರ ಸ್ನೇಹ ಏರ್ಪಟ್ಟಲ್ಲಿ ಅದನ್ನು `ಇ-ಸ್ನೇಹ’ ಎನ್ನುತ್ತಾರೆ. ಇದರಲ್ಲಿ `ಇ-ಮಾಧ್ಯಮ’ದ ಮುಖಾಂತರವೇ ಪರಸ್ಪರರನ್ನು ಕಾಣುತ್ತಾರೆ ಅಥವಾ ಶಬ್ದಗಳ ಮುಖಾಂತರವೇ ಸ್ನೇಹ ಗಟ್ಟಿಗೊಳಿಸುತ್ತಾರೆ. ಎಷ್ಟೋ ಸಲ ಈ ಸ್ನೇಹ ಸಂಗಾತಿತನಕದ ರೂಪ ಪಡೆದುಕೊಳ್ಳುತ್ತದೆ.

ನಕಲಿ `ಇ-ಸ್ನೇಹ’ ಹೇಗೆ?

ನಕಲಿ `ಇ-ಸ್ನೇಹ’ ಮಾಡುವುದು ತುಂಬಾ ಸುಲಭ. ಇದರಲ್ಲಿ ನಿಮ್ಮ ಹೆಸರು ಹಾಗೂ ಗುರುತನ್ನು ಗೌಪ್ಯವಾಗಿಡಬೇಕಾಗುತ್ತದೆ. ಫೇಸ್‌ಬುಕ್‌ನಲ್ಲಿ ಹೊಸ ಅಕೌಂಟ್‌ ಮಾಡಲು ಇಮೇಲ್ ಐಡಿ, ಹುಟ್ಟಿದ ವರ್ಷ, ಲಿಂಗ ಮುಂತಾದಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. `ಫೇಕ್‌ ಇ-ಸ್ನೇಹ’ಕ್ಕಾಗಿ ತಪ್ಪು ಮಾಹಿತಿ ಕೊಡಿ. ಇಲ್ಲದಿದ್ದರೆ ನಿಮ್ಮ ಒಂದು ತಪ್ಪು ನಿಮಗೆ ದುಬಾರಿಯಾಗಿ ಪರಿಣಮಿಸಬಹುದು.

ಫೇಕ್‌ ಇ-ಸ್ನೇಹದ ಲಾಭಗಳು

ಟೈಮ್ ಪಾಸ್ : ನೀವು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದಾಗ ಏಕಾಂಗಿತನದ ಅನುಭವ ಮಾಡಿಕೊಳ್ಳುತ್ತಿದ್ದರೆ, ಇಂತಹ ಸಂದರ್ಭದಲ್ಲಿ ನಿಮಗೆ ಇ-ಸ್ನೇಹ ಸಾಕಷ್ಟು ಉಪಯೋಗಕ್ಕೆ ಬರಬಹುದು. ತಕ್ಷಣವೇ ನಿಮ್ಮ ಲ್ಯಾಪ್‌ಟಾಪ್‌ ಆನ್‌ ಮಾಡಿ ನಿಮ್ಮ ಇ-ಸ್ನೇಹಿತನ ಜೊತೆ ಸಂಪರ್ಕ ಬೆಳೆಸಿಕೊಳ್ಳಿ.

ನಿಮ್ಮ ಈ ಪ್ರಶ್ನೆಗಳಿಂದ ಅವನೂ ಕೂಡ ನಿಮಗೆ ಪ್ರಶ್ನೆ ಮಾಡಬಹುದು. ನಿಮ್ಮ ಬಗ್ಗೆ ತಿಳಿದುಕೊಳ್ಳಲು ಅವನ ಕುತೂಹಲ ಹೆಚ್ಚಬಹುದು. ನಿಮ್ಮಿಬ್ಬರ ನಡುವಿನ ಮಾತುಕತೆ ಹೆಚ್ಚು ದಿನ ಮುಂದುವರಿಯಬಹುದು. ಆದರೆ ನಿಮ್ಮ ನಿಜವಾದ ಗುರುತು ಯಾವುದೇ ಕಾರಣಕ್ಕೂ ಹೇಳಲು ಹೋಗಬೇಡಿ. ಇಲ್ಲದಿದ್ದರೆ ನಿಮ್ಮ ಇಡೀ ಆಟವೇ ಕೆಟ್ಟುಹೋಗುತ್ತದೆ.

ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ 

ಇ-ಸ್ನೇಹದ  ಅರ್ಥ ನಿಮ್ಮ ಸ್ನೇಹದ ಬಗ್ಗೆಯೇ ಮಾತಾಡಬೇಕು ಎಂದಲ್ಲ. ಏಕೆಂದರೆ ಇದರಿಂದ ನಿಮಗೆ ಕೆಲವು ದಿನಗಳ ಬಳಿಕ ಬೋರ್‌ ಅನಿಸಲಾರಂಭಿಸುತ್ತದೆ. ದಿನ ಒಂದೇ ರೀತಿಯ ಮಾತುಗಳು ನಿಮ್ಮ ಉತ್ಸಾಹವನ್ನು ಕಡಿಮೆಗೊಳಿಸುತ್ತವೆ. ಇದರ ಬದಲು ಪ್ರಚಲಿತ ವಿದ್ಯಮಾನ ಹಾಗೂ ಬೇರೆ ಕೆಲವು ಆಸಕ್ತಿದಾಯಕ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಿ. ಇದರಿಂದ ನಿಮಗೆ ಹೊಸ ವಿಚಾರಗಳ ಬಗ್ಗೆ ಮಾಹಿತಿ ದೊರೆಯುತ್ತದೆ.

ಇದರ ಮತ್ತೊಂದು ಲಾಭವೆಂದರೆ, ಆ ಕಡೆಯ ವ್ಯಕ್ತಿಯ ಜನರಲ್ ನಾಲೆಜ್‌ ಬಗೆಗೂ ನಿಮಗೆ ಗೊತ್ತಾಗುತ್ತದೆ. ಒಂದು ವೇಳೆ ಆ ವ್ಯಕ್ತಿ ಇದರಲ್ಲಿ ದುರ್ಬಲ ಎಂದೆನಿಸಿದರೆ, ನೀವು ಈ ವಿಷಯದ ಬಗ್ಗೆ ಆತನ ಕಾಲೆಳೆಯುವ ಪ್ರಯತ್ನ ಮಾಡಬಹುದು. ಒಂದು ವೇಳೆ ಆತ ಇದರಲ್ಲಿ ನಿಪುಣ ಎಂದು ಗೊತ್ತಾದರೆ ಅವನ ಜ್ಞಾನದ ಲಾಭ ನಿಮಗೆ ಉಪಯೋಗಕರವಾಗಿ ಪರಿಣಮಿಸಬಹುದು.

ಉತ್ಸಾಹ ನಿರಂತರ

ಹಾಗೆಯೇ ಮುಂದುವರಿಸಿಕೊಂಡು ಹೋಗಲು ಇ-ಸ್ನೇಹ ಸಾಕಷ್ಟು ನೆರವಾಗುತ್ತದೆ. ಇದರಲ್ಲಿ ನಾವು ಸಂದೇಶ ಅಥವಾ ಫೋಟೋಗಳ ಮೂಲಕ ಮಾತ್ರ ಫೀಲ್‌ ಮಾಡಿಕೊಳ್ಳಬಹುದು. ಇಂತಹ ಸ್ಥಿತಿಯಲ್ಲಿ ಆ ವ್ಯಕ್ತಿಯಿಂದ ಆಗಾಗ ಸಂದೇಶಗಳು ಬರುತ್ತವೆ. ಇದರಲ್ಲಿ ನಮಗೆ ಕೆಲಸ ಮಾಡಲು ಹೊಸ ಪ್ರೇರಣೆ ದೊರೆಯುತ್ತದೆ.

ಉದಾಹರಣೆಗಾಗಿ ನೀವು ವಿವಾಹಿತರಾಗಿದ್ದು, ನಿಮ್ಮ ಇ-ಸ್ನೇಹಿತನಿಗೆ ನೀವು ಕೇವಲ 22 ವಯಸ್ಸಿನವರೆಂದು ಹೇಳಿದ್ದರೆ, ನಿಮ್ಮಿಬ್ಬರ ನಡುವೆ ಯೌವನಕ್ಕೆ ಸಂಬಂಧಪಟ್ಟ ಮಾತುಕತೆಗಳು ನಡೆದೇ ಇರುತ್ತವೆ. ಈ ಮಾತುಕತೆಗಳು ನಿಮ್ಮ ಹಳೆಯ ದಿನಗಳ ನೆನಪುಗಳನ್ನು ತಾಜಾಗೊಳಿಸುತ್ತವೆ.  ಇದರಿಂದ ಜೀವನದ ಬಗೆಗಿನ ನಿಮ್ಮ ಉತ್ಸಾಹ ವರ್ಧಿಸುತ್ತದೆ.

ಒಂದು ವಿಷಯವಂತೂ ಸತ್ಯ, ಮದುವೆಯಾದ ನಂತರ ಮನಸ್ಸಿನಲ್ಲಿ ಹಲವು ವಿಚಾರಗಳು ಬರುತ್ತವೆ. ಆದರೆ ಮದುವೆಯ ರೋಮಾಂಚನ ದಿನಗಳು ಕಳೆಯುತ್ತಾ ಹೋದಂತೆ ಗಂಡಹೆಂಡತಿ ಪರಸ್ಪರರಿಗೆ ಸಮಯ ಕೊಡುವುದು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಅಪೂರ್ಣತೆ ಬರಲಾರಂಭಿಸುತ್ತದೆ. ನೀವು ಇಷ್ಟಪಟ್ಟರೆ, ನಿಮಗೆ ಮೊದಲಿನ ಉತ್ಸಾಹ ಮತ್ತೆ ಮರುಕಳಿಸಬೇಕೆಂದರೆ ಇ-ಸ್ನೇಹ ನಿಮಗೆ ನೆರವಾಗುತ್ತದೆ.

ಶಬ್ದಗಳ ಮುಖಾಂತರ ಸುಖ

ನೀವು ರಿಲೇಶನ್‌ಶಿಪ್‌ನಲ್ಲಿದ್ದು ದೈಹಿಕ ಸುಖದಿಂದ ವಂಚಿತರಾಗಿದ್ದರೆ, ಇ-ಸ್ನೇಹಿತನ ಮುಖಾಂತರ ನೀವು ಶಬ್ದಗಳಲ್ಲಿಯೇ ದೈಹಿಕ ಸುಖದ ಮಜ ಕೂಡ ಪಡೆದುಕೊಳ್ಳಬಹುದು.

ಹೆಸರು ಗುರುತು ಗೌಪ್ಯತೆ ಅವಶ್ಯಕ

ನಿಮ್ಮ ಜೀವನದಲ್ಲಿ ಬಾಯ್‌ಫ್ರೆಂಡ್‌ ಅಥವಾ ಗಂಡ ಇದ್ದಾಗ್ಯೂ ಎಫ್‌ಬಿನಲ್ಲಿ ಇ-ಸ್ನೇಹಿತನನ್ನು ಹೊಂದುವುದರ ಮೂಲಕ ನೀವು ಟೈಮ್ಪಾಸ್‌ ಮಾಡಿಕೊಳ್ಳಬಹುದು ಹಾಗೂ ಆಗಾಗ ಸೂಕ್ತ ಸಲಹೆ ಸೂಚನೆಗಳನ್ನು ಕೂಡ ಪಡೆದುಕೊಳ್ಳಬಹುದು. ಆದರೆ ನೀವು ನಿಮ್ಮ ಗುರುತು ಪರಿಚಯವನ್ನು ಗೌಪ್ಯವಾಗಿಡುವುದು ತುಂಬಾ ಅತ್ಯವಶ್ಯಕ. ಆ ವ್ಯಕ್ತಿಯ ಜೊತೆ ನೀವು ನಿಮ್ಮ ಸಮಸ್ಯೆಗಳನ್ನು ಶೇರ್‌ ಮಾಡಿಕೊಳ್ಳಬಹುದು.

ನೀವು ಹೀಗೇಕೆ ಕೇಳುತ್ತಿದ್ದೀರಿ ಎಂದು ಆ ವ್ಯಕ್ತಿ ಏನಾದರೂ ಕೇಳಿದರೆ, ನೀವು ಆಗ ಏನಾದರೂ ನೆಪ ಹೇಳಿ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡುವಂತೆ ನೋಡಿಕೊಳ್ಳಬಹುದು. ಅದಕ್ಕೇನು ಪರಿಹಾರ ಎನ್ನುವುದು ನಿಮಗೆ ಆಗಲೇ ಸಿಕ್ಕಿಬಿಟ್ಟಿರುತ್ತದೆ.

ಒಂದುವೇಳೆ ನೀವು ನಿಮ್ಮ ಹೆಸರು ಹಾಗೂ ಪರಿಚಯ ಕೊಟ್ಟುಬಿಟ್ಟಿದ್ದರೆ, ನಿಮ್ಮ ಸ್ನೇಹ ಹೆಚ್ಚು ದಿನ ನಡೆಯದೇ ಇದ್ದರೆ, ನೀವು ಅವನೊಂದಿಗೆ ಫೇಕ್‌ ಮಾಡಿದ ಕೆಲವು ಪರ್ಸನ್‌ ಸಂಗತಿಗಳು ನಿಮ್ಮ  ಕುಟುಂಬದವರ ಮುಂದೆ ಹೊರಬರಬಹುದು. ಅದೇ ಮುಂದೆ ನಿಮಗೆ ಬಹುದೊಡ್ಡ ಸಂಕಟಕರವಾಗಿ ಪರಿಣಮಿಸಬಹುದು. ಹೀಗಾಗಿ ನಿಮ್ಮ ವಾಸ್ತವ ಗುರುತನ್ನು ಹೊರಗೆಡವದೇ ಸ್ನೇಹ ಕಾಪಾಡಿಕೊಳ್ಳಬಹುದು.

ಬಾಯ್‌ಫ್ರೆಂಡ್‌/ಪತಿಗೆ ಪಾಠ ಕಲಿಸಲು

ನಿಮ್ಮ ಬಾಯ್‌ಫ್ರೆಂಡ್‌ ಅಥವಾ ಪತಿ ಸ್ವಚ್ಛಂದ ಪ್ರೃತ್ತಿಯವರಾಗಿದ್ದರೆ, ಅವರು ನಿಮಗೆ ಮೋಸ ಮಾಡಿದ್ದಲ್ಲಿ, ಅವರಿಗೆ ಪಾಠ ಕಲಿಸಲು ಫೇಸ್‌ಬುಕ್‌ನಲ್ಲಿ ಫೇಕ್‌ ಐಡಿ ಮುಖಾಂತರ ಸರಿಯಾಗಿ ಪಾಠ ಕಲಿಸಬಹುದು. ನೀವು ಆ ಬಾಯ್‌ಫ್ರೆಂಡ್‌ಗಾಗಿ ಫ್ರೆಂಡ್‌ ರಿಕ್ವೆಸ್ಟ್ ಕಳಿಸಿ. ಹುಡುಗಿಯ ರಿಕ್ವೆಸ್ಟ್ ಕಾಣಿಸುತ್ತಿದ್ದಂತೆಯೇ ಅವನು ಬಹುಬೇಗ ಅದನ್ನು ಸ್ವೀಕಾರ ಮಾಡುತ್ತಾನೆ. ಆ ಬಳಿಕ ಅವನ ಮತ್ತು ನಿಮ್ಮ ನಡುವೆ ಮಾತುಗಳ ವಿನಿಮಯ ತೀರಾ ಗಾಢ ಎನ್ನುವ ತನಕ ತಲುಪಲಿ. ಒಂದು ದಿನ ಅವನನ್ನು ಭೇಟಿ ಮಾಡುವ ಉದ್ದೇಶದಿಂದ ಪಾರ್ಕ್‌ ಅಥವಾ ಹೋಟೆಲ್‌ಗೆ ಬರಲು ಹೇಳಿ. ಅವನಂತೂ ಖಂಡಿತ ಬಂದೇಬರುತ್ತಾನೆ. ಆದರೆ ಆ ಸ್ಥಳಕ್ಕೆ ನೀವು ಹೋಗದೆ, ಯಾರಾದರೂ ದಪ್ಪನೆಯ ಹುಡುಗಿಯನ್ನು ಕಳಿಸಿಕೊಡಿ. ಆ ಹುಡುಗಿಯನ್ನು ನೋಡಿದಾಗ ಅವನಿಗೆ ಪ್ರಜ್ಞೆತಪ್ಪಿದಂತಾಗುತ್ತದೆ ಹಾಗೂ ತನ್ನ ಮೇಲೆಯೇ ಕೋಪ ಬರುತ್ತದೆ. ಈ ಸಂದರ್ಭದಲ್ಲಿ ಅವನು ಆ ಹುಡುಗಿಗೆ ನಾಲ್ಕಾರು ಆಕ್ರೋಶದ ಮಾತುಗಳನ್ನು ಹೇಳಿಯೂ ಬಿಡಬಹುದು. ಅದರಿಂದ ನಿಮಗೆ ಬಹಳ ಸಮಾಧಾನ ಆಗುತ್ತದೆ.

ಬಾಲ್ಯದ ಫೋಟೋ ಹಾಕಿ….

ಒಂದು ವೇಳೆ ನಿಮ್ಮ ಸ್ನೇಹಿತ ನಿಮಗೆ ಪ್ರೊಫೈಲ್ ಫೋಟೋ ಹಾಕಲು ಹೇಳಿದರೆ ಅದನ್ನು ಆದಷ್ಟು ತಡೆಯಿರಿ. ಒಂದು ವೇಳೆ ಅವನು ಹಾಕಲೇಬೇಕು ಎಂದು ಒತ್ತಾಯಿಸಿದರೆ ನೀವು ನಿಮ್ಮ ಬಾಲ್ಯದ ಫೋಟೋ ಹಾಕಿ. ಇದರಿಂದ ನಿಮ್ಮ ಒರಿಜಿನಲ್ ಗುರುತು ಆ ವ್ಯಕ್ತಿಗೆ ಸಿಗಲು ಸಾಧ್ಯವಿಲ್ಲ. ಒಂದುವೇಳೆ ಅವನು ಒರಿಜಿನಲ್ ಫೋಟೊ ಹಾಕಲೇಬೇಕೆಂದು ಹಠ ಹಿಡಿದರೆ, ನೀವು ಅವನನ್ನು ಬ್ಲಾಕ್‌ ಮಾಡಿ.

ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ಅದೇನೆಂದರೆ ಇ-ಪಾರ್ಟನರ್‌ ಜೊತೆಗೆ ಭಾವನಾತ್ಮಕ ನಿಕಟತೆ ಇಟ್ಟುಕೊಳ್ಳಬೇಡಿ. ಅವನು ಆ ರೀತಿ ಇಟ್ಟುಕೊಂಡರೂ ನೀವು ಹಾಗೆ ಮಾಡಲು ಹೋಗಬೇಡಿ. ಏಕೆಂದರೆ ಈ ಸ್ನೇಹ ಸ್ವಲ್ಪ ದಿನಗಳ ಮಟ್ಟಿಗೆ ಮಾತ್ರ ಏರ್ಪಟ್ಟಿರುತ್ತದೆ. ಅತಿಯಾದ ಭಾವನಾತ್ಮಕ ನಿಕಟತೆ ನಿಮ್ಮನ್ನು ಕುಟುಂಬದವರಿಂದ ದೂರ ಇಡುತ್ತದೆ.

– ಪಿ. ಪ್ರಭಾವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ